ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/10/2020

By blogger on ಶುಕ್ರವಾರ, ಅಕ್ಟೋಬರ್ 23, 2020

 


                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/10/2020 

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 120/2020 ಕಲಂ.143,147,148,341,323,324, 326, 307, 504,506, 114 ಸಂ 149 ಐಪಿಸಿ : ಫಿಯರ್ಾದಿ ಮತ್ತು ಆರೋಪಿತರ ನಡುವೆ ಕಳೆದ 3-4 ತಿಂಗಳ ಹಿಂದೆ ಮನೆ ಮುಂದಿನ ಸಿಸಿ ರೋಡಿನ ಮೇಲೆ ಮಣ್ಣು ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಜಗಳಗಳಾಗಿದ್ದರಿಂದ ಆರೋಪಿತರ ಮೇಮೀ ಮೊದಲು ಪ್ರಕರಣ ದಾಖಲಾಗಿದ್ದು ಆವಾಗಿನಿಂದ ಆರೋಪಿತರು ಫಿಯರ್ಾದಿದಾರರ ಪೈಕಿ ಯಾರಿಗಾದರೊಬ್ಬರಿಗೆ ಕೊಲೆ ಮಾಡಬೇಕು ಅಂತ ಅಂದಾಡುತ್ತಿದ್ದರು. ಹೀಗಿದ್ದು ಇಂದು ದಿನಾಂಕ 19/10/2020 ರಂದು ಫಿಯರ್ಾದಿಯ ಚಿಕ್ಕಪ್ಪ ಶಾಂತವೀರ ಇವರು ಕಲಬುರಗಿಯಿಂದ ಬಂದು ತಮ್ಮ ಮನೆಗೆ ಬರುತ್ತಿದ್ದಾಗ , ಆರೋಪಿ ಮಹಾಂತೇಶ ತಂದೆ ಶರಣಪ್ಪ ವಾಳದ ಇತನು ತನ್ನ ಕೈಯಲ್ಲಿ ಒಂದು ಬಡಿಗೆಯನ್ನು ಹಿಡಿದುಕೊಂಡು ಶಾಂತವೀರ ಇವರಿಗೆ ತಡೆದು ನಿಲ್ಲಿಸಿ ನಂತರ ತಮ್ಮ ಅಣ್ಣತಮ್ಮಕೀಯವರಿಗೆ ಬರ್ರಲೇ ಇವತ್ತ ಶಾಂತವೀರ ಸಿಕ್ಕಾನ ಹೊಡೆದು ಖಲಾಸ ಮಾಡೋಣ ಅಂತ ಜೋರಾಗಿ ಕೂಗಿದಾಗ ಉಳಿದ ಎಲ್ಲ ಆರಪಿತರು ಕೊಲೆ ಮಾಡುವ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ಒಮ್ಮೇಲೆ ಈ ಸೂಳಿ ಮಗನದು ಸೊಕ್ಕು ಬಹಳ ಆಗಿದೆ ಇವತ್ತು ಮುಗಿಸಿಬಿಡೋಣ ಅಂತ ಬಡಿಗೆಯಿಂದ ಜೋರಾಗಿ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ & ಕಲ್ಲಿನಿಂದ ಬಲಗಣ್ಣಿನ ಹತ್ತಿರ ರಕ್ತಗಾಯ ಕಲ್ಲಿನಿಂದ ಬಲಗೈ ಬೆರಳಿಗೆ ರಕ್ತಗಾಯ ಮಾಡಿದ್ದು ಅಲ್ಲದೆ ಮಡಿವಾಳಪ್ಪ ತಂದೆ ಶರಣಪ್ಪ ವಾಳೆದ ಇತನು ಫಿಯರ್ಾದಿಗೆ ಬಡಿಗೆಯಿಂದ ಬಲಗೈ ಮೊಳಕೈ ಕೆಳಗೆ ಹಾಗೂ ಎಡಗೈ ಹಸ್ತಕ್ಕೆ ಹೊಡೆದು ಒಳಪೆಟ್ಟು & ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಮರೆಪ್ಪ ತಂದೆ ಶಂಕ್ರಪ್ಪ ಶೆಟ್ಟಿ ಇತನಿಗೆ ಎಡಗಾಲ ಮೊಣಕಾಲ ಕೆಳಗೆ, ತಲೆಗೆ ಮತ್ತು ರೆಟ್ಟೆಗೆ, ಎಡಗೈ ಮುಂಗೈ ಹತ್ತಿರ ರಕ್ತಗಾಯ ಮಾಡಿದ್ದು ಬಸ್ಸಪ್ಪ ತಂದೆ ಶಂಕ್ರೆಪ್ಪ ಶೆಟ್ಟಿ ಇತನಿಗೆ ತಲೆಗೆ ರಕ್ತಗಾಯ, ಬಲಮುಡ್ಡಿಗೆ ಒಳಪೆಟ್ಟು ಮಾಡಿದ್ದು ಇರುತ್ತದೆ. ಉಳಿದವರೆಲ್ಲರೂ ಈ ಸೂಳೆ ಮಕ್ಕಳಿಗೆ ಬಿಡಬ್ಯಾಡರಲೇ ಇವತ್ತೆ ಟೈಮ ಚೋಲಾ ಆದ ಹೊಡೆ ಬಡೆ ಮಾಡುತ್ತಿದ್ದಾಗ ಸಾಕ್ಷಿದಾರರು ಬಿಡಿಕೊಂಡಿದ್ದು ನಂತರ ಆರೋಪಿತರು ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 121/2020 ಕಲಂ 143,147,148,323,324, 326,307, 504, 506, 114 ಸಂ 149 ಐಪಿಸಿ : ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಫಿಯರ್ಾದಿ ಮನೆಯ ಮುಂದೆ ಅಂಗಳದಲ್ಲಿ ಒಂದು ಟ್ರಾಕ್ಟರ ಮಣ್ಣನ್ನು ತಂದು ಹಾಕಿದ್ದಕ್ಕೆ ಆರೋಪಿ ಶಾಂತವೀರ ತಂದೆ ಶಂಕ್ರಪ್ಪ ಶೆಟ್ಟಿ ಹಾಗೂ ಅವರ ಅಣ್ಣತಮ್ಮಕೀಯವರು ತರಕಾರು ಮಾಡಿ ಯಾಕೆ ಸಿ.ಸಿ ರೋಡಿನ ಮೇಲೆ ಮಣ್ಣು ಹಾಕಿರಿ ಅಂತ ಜಗಳ ಮಾಡಿ ಹೊಡೆಬಡೆ ಮಾಡಿದ್ದರಿಂದ ಈ ಮೊದಲು ಅವರ ಮೇಲೆ ಕೇಸ ಮಾಡಿಸಿದ್ದು ಇರುತ್ತದೆ. ಇದಾದ ನಂತರ ಆರೋಪಿತರು ಕೇಸು ಮಾಡಿಸಿದ್ದರ ಸಿಟ್ಟಿನಿಂದ ಫಿಯರ್ಾದಿದಾರರ ಮೇಲೆ ವೈಮನಷ್ಯು ಮಾಡಿಕೊಂಡು ಇವರ ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಖಲಾಸ್ ಮಾಡಿದರೆ ನಮ್ಮ ತಂಟೆಗೆ ಬರುವುದಿಲ್ಲಾ ಈ ಬೋಸಡಿ ಮಕ್ಕಳು ಒದರಾಡುತ್ತಿದ್ದರು. ಹೀಗಿದ್ದು ಇಂದು ದಿನಾಂಕ 19-10-2020 ರಂದು 9 ಎ.ಎಂಕ್ಕೆ ಫಿಯರ್ಾದಿಯು ತಮ್ಮ ಓಣಿಯಲ್ಲಿ ಸಿ.ಸಿ ರೋಡಿನ ಮೇಲೆ ನಿಂತಿದ್ದಾಗ ಶಾಂತವೀರ ಶೆಟ್ಟಿ ಈತನು ಏ ಮಾನ್ಯಾ ಮಗನೇ ನಾನು ಬರೋದು ಕಾಣೋದಿಲ್ಲೇನು ನಡು ರೋಡಿನ ಮೇಲೆ ನಿಂತಿದಿ ಅಂತ ಏರುದ್ವನಿಯಲ್ಲಿ ಒದರಾಡಿ  ತನ್ನ ಅಣ್ಣ ತಮ್ಮಂದಿರರಿಗೆ ಕೂಗಿ ಕರೆದು ಬರ್ರಲೇ ಇವತ್ತ ಮಾನ್ಯಾ ಸಿಕ್ಕಾನ ಹೊಡೆದು ಖಲಾಸ ಮಾಡೋಣ ಅಂತ ಜೋರಾಗಿ ಕೂಗಿದಾಗ ಅಲ್ಲಿಗೆ ಉಳಿದ ಆರೋಪಿತರು ಕೊಲೆಮಾಡುವ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ಒಮ್ಮೇಲೆ ಈ ಸೂಳಿ ಮಗನದು ಸೊಕ್ಕು ಬಹಳ ಆಗಿದೆ ಇವತ್ತು ಮುಗಿಸಿಬಿಡೋಣ ನಮ್ಮ ಮೇಲೆ ಕೇಸ ಮಾಡಸ್ತಾನ ಅಂತ ಒದರಾಡಿ ಆಗ ಶಾಂತವೀರ ಇತನು ನನಗೆ ಒಂದು ಬಡಿಗೆಯಿಂದ ಎಡಗೈ ಮುಂಗೈ ಕೆಳಗೆ ಮತ್ತು ಎಡತೊಡೆಗೆ ಹೊಡೆದು ಒಳಪೆಟ್ಟು ಮಾಡಿ ತಲೆಗೆ ಹೊಡೆದು ರಕ್ತಗಾಯ, ಮಹಾಂತೇಶ ತಂದೆ ಶರಣಪ್ಪ ವಾಳೇದ ಇತನಿಗೆ ಬಲಗೈ ಮೊಣಕೈ ಹತ್ತಿರ ಹೊಡೆದು ಭಾರಿ ಒಳಪೆಟ್ಟು ಧರ್ಮಣ್ಣ ತಂದೆ ಶರಣಪ್ಪ ವಾಳೆದ ಇತನಿಗೆ ಎಡಗಾಲ ಮೊಣಕಾಲ ಹಿಂದೆ ರಕ್ತಗಾಯ ಮಾನಪ್ಪ ತಂದೆ ಶರಣಪ್ಪ ವಾಳೆದ ಇತನಿಗೆ ತಲೆಗೆ ಮತ್ತು ಹಣೆಗೆ, ಕಣ್ಣಿನ ಕೆಳಗೆ ಹೊಡೆದು ರಕ್ತಗಾಯ ಹಾಗು ಮಾನಪ್ಪ ಇತನಿಗೆ ಬಲಟೋಂಕದ ಹತ್ತಿರ ಒಳಪೆಟ್ಟು ಮಾಡಿದ್ದು ನಂತರ ಎಲ್ಲರೂ ಸೇರಿ ಈ ಸೂಳೆ ಮಕ್ಕಳಿಗೆ ಬಿಡಬ್ಯಾಡರಲೇ ಇವತ್ತೆ ಟೈಮ ಚೋಲಾ ಆದ ಹೊಡೆದು ಖಲಾಸ ಮಾಡರಲೇ ಅಂತ ಅಂದು ಹೊಡೆ ಬಡೆ ಮಾಡುತ್ತಿದ್ದಾಗ ಸಾಕ್ಷಿದಾರರು ಬಿಡಿಕೊಂಡಿದ್ದು ನಂತರ ಆರೋಪಿತರು ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ.

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 99/2020 ಕಲಂ 3, 4, 5, 7 ಮತ್ತು 9 ಐ.ಟಿ.ಪಿ ಯಾಕ್ಟ 1956 ಹಾಗೂ ಕಲಂ 370 ಐಪಿಸಿ : ಇಂದು ದಿನಾಂಕ:18/10/2020 ರಂದು ರಾತ್ರಿ 22.30 ಪಿ.ಎಮ್.ಕ್ಕೆ ಮಾನ್ಯ ಪಿ.ಐ ಸಾಹೇಬರು ಶೊರಾಪೂರ ರವರು ಠಾಣೆಗೆ ಬಂದು ಒಂದು  ವರದಿಯೊಂದಿಗೆ ಜಪ್ತಿ ಪಂಚನಾಮೆ, ಮುದ್ದೇ ಮಾಲು ಮತ್ತು ಒಬ್ಬ ಆರೋಪಿತನನ್ನು ತಂದು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ್ದೇನಂದರೆ ಇಂದು ದಿನಾಂಕ:18/10/2020 ರಂದು 21.00 ಪಿ.ಎಮ್.ಕ್ಕೆ ಹುಣಸಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಬಳಿ ಕಾಂಪ್ಲೆಕ್ಸ್ದ ಬಿಲ್ಡಿಂಗನ ಮೊದಲನೇ ಮಹಡಿಯ ನೀಲಕಂಠೇಶ್ವರ ಲಾಡ್ಜ್ದಲ್ಲಿ  ಆರೋಪಿ ಬುಡ್ಡೆಶಾ ಈತನು ಒಬ್ಬ ಮಹಿಳೆಯನ್ನು ಮಾನವ ಕಳ್ಳಸಾಗಾಣಿಕೆ ಮಾಡಿ ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಅವರು ಬಳಸಿದ 2 ಕಾಂಡೋಮ ಮತ್ತು 600/- ರೂ. ನಗದು ಹಣ ಮತ್ತು ಒಂದು ಮೊಬೈಲ್ ಅ.ಕಿ.2000/-ರೂ. ಗಳನ್ನು ತಂದು ಒಪ್ಪಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಅದರ ಸಾರಾಶಧ ಮೇಲಿಂದ ಠಾಣೇ ಗುನ್ನೆ ನಂ.99/2020 ಕಲಂ. 3, 4, 5, 7 ಮತ್ತು 9 ಐ.ಟಿ.ಪಿ ಯಾಕ್ಟ 1956 ಹಾಗೂ ಕಲಂ 370 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.  

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 146/2020 ಕಲಂ 279, 337, 338 ಐಪಿಸಿ ಮತ್ತು ಕಲಂ: 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ 19.10.2020 ರಂದು ಬೆಳಿಗ್ಗೆ 9:50 ಗಂಟೆಯ ಸುಮಾರಿಗೆ ಗಾಯಾಳು ಫಿರ್ಯಾದಿದಾರನಾದ ದೊಡ್ಡಮುನಿಯಪ್ಪ ಜಗಲಿಮನಿ ಈತನು ಬೀಟ್ ಕರ್ತವ್ಯ ಕುರಿತು ಗುರುಮಠಕಲ್ ದಿಂದ ನಜರಾಪೂರ ಮಾರ್ಗವಾಗಿ ಮಿನಾಸಪೂರ ಗ್ರಾಮದ ಕಡೆಗೆ ತನ್ನ ಮೋಟಾರು ಸೈಕಲ್ ನಂಬರ ಕೆಎ-33-ವೈ-1062 ನೇದ್ದರ ಮೇಲೆ ಹೋಗುತ್ತಿದ್ದಾ ಆತನ ಎದುರಿಗೆ ಮಾರುತಿ ಕಾರ್ ನಂಬರ ಎಪಿ-09-ಎ.ವೈ-8789 ನೇದ್ದರ ಚಾಲಕನಾದ ಆರೋಪಿ ಸಿದ್ದಪ್ಪ ಲಿಂಗಶೆಟ್ಟಿ ಈತನು ಮಿನಾಸಪೂರ ಗ್ರಾಮದ ಕಡೆಯಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ಮೇಲೆ ಹೋಗುತ್ತಿದ್ದ ಫಿರ್ಯಾದಿಗೆ ಡಿಕ್ಕಿಪಡಿಸಿ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗೊಳಿಸಿದ್ದು ಆ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 146/2020 ಕಲಂ 279, 337, 338 ಐಪಿಸಿ ಮತ್ತು ಕಲಂ: 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!