ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/10/2020
ಯಾದಗಿರ ಗ್ರಾಮಿಣ ಪೊಲೀಸ ಠಾಣೆ ಗುನ್ನೆ ನಂ:- 149/2020 ಕಲಂ 20(ಬಿ) ಎನ್.ಡಿ.ಪಿ.ಎಸ್ ಕಾಯ್ದೆ 1985: ದಿನಾಂಕ 18/10/2020 ರಂದು ಮಧ್ಯಾಹ್ನ 2-00 ಗಂಟೆಗೆ ಆರೋಪಿತರು ಗಾಜರಕೋಟ ಕಡೆಯಿಂದ ಆಶನಾಳ ಕಡೆಗೆ ಒಣಗಿದ ಗಾಂಜಾವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಆಶನಾಳ ಮತ್ತು ಇತರೇ ಕಡೆಗಳಲ್ಲಿ ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಬರುವಾಗ ಸಾಯಂಕಾಲ 4-00 ಪಿ.ಎಂ. ಕ್ಕೆ ಮುಂಡರಗಿ ಬೇಳಗೇರಾ ರೋಡಿನ ಕ್ರಾಸ್ ಬಳಿ ದಾಳಿ ಮಾಡಿ ಆರೋಪಿತರಿಂದ 7.38 ಕೆ.ಜಿ. ಒಣಗಿದ ಗಾಂಜಾ ಕಿಮ್ಮತ್ತು 29,530/ರೂ ನೆದ್ದನ್ನು ಮತ್ತು ಗಾಂಜಾ ಮಾರಾಟ ಮಾಡಿದ 1000/ರೂ ನಗದು ಹಣವನ್ನು ಜಪ್ತಿ ಮಾಡಿಕೊಂಡು ಆರೋಪಿತರ ಮೇಲೆ ಕ್ರಮ ಕೈಕೊಳ್ಳಲಾಗಿದೆ.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 116/2020 323, 324. 354, 504, 506 ಸಂಗಡ 34 ಐಪಿಸಿ: ಇಂದು ದಿನಾಂಕ: 18/10/2020 ರಂದು 2-15 ಪಿಎಮ್ ಕ್ಕೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಪೋನ್ ಮುಖಾಂತರ ಎಮ್.ಎಲ್.ಸಿ ವಸೂಲಾದ ಮೇರೆಗೆ ಎಮ್.ಎಲ್.ಸಿ ಪಡೆದುಕೊಂಡು ಬರಲು ಠಾಣೆಯ ವಿಠೋಬ ಹೆಚ್.ಸಿ-91 ರವರಿಗೆ ನೇಮಿಸಿ ಕಳುಹಿಸಿದ್ದು, ಸದರಿ ಹೆಚ್.ಸಿ-91 ರವರು ಶಹಾಪೂರ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಎಮ್.ಎಲ್.ಸಿ ಪಡೆದುಕೊಂಡು ಉಪಚಾರ ಪಡೆಯುತ್ತಿದ್ದ ಗಾಯಾಳುದಾರಳಾದ ಶ್ರೀಮತಿ, ಸಿದ್ದಮ್ಮ ಗಂಡ ಮಲ್ಲಿಕಾಜರ್ುನ ಲಾಡ್ಲಾಪೂರ ಸಾ|| ಚೆನ್ನೂರ (ಕೆ) ಇವರ ಹೇಳಿಕೆ ಪಡೆದುಕೊಂಡು ಬಂದು ಮರಳಿ 6-00 ಪಿಎಮ್ ಕ್ಕೆ ಠಾಣೆಗೆ ಹೇಳಿಕೆ ಹಾಜರ್ ಪಡಿಸಿದ್ದು, ಸದರಿ ಹೇಳಿಕೆ ಸಾರಾಂಶವೆನೆಂದರೆ, ಇಂದು ದಿನಾಂಕ: 18/10/2020 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ತಂಗಿಯ ಮಗಳಾದ ಪವಿತ್ರಳ ಗಂಡನಾದ ಸೋಮಶೇಖರ ತಂದೆ ಶರಣಪ್ಪ ಕರಡಕಲ್, ಮತ್ತು ತಂಗಿಯ ಮಗಳಾದ ಪವಿತ್ರ ಗಂಡ ಸೋಮಶೇಖರ ಕರಡಕಲ್ ಸಾ|| ಚೆನ್ನೂರ (ಕೆ) ಇವರು ಕೂಡಿ ನಮ್ಮ ಮನೆಯ ಮುಂದೆ ಬಂದು ಸೋಮಶೇಖರ ಈತನು ' ಲೇ ರಂಡಿ ಬೋಸಡಿ ನನ್ನ ಹೆಂಡತಿ ತಾಳಿ ಎಲ್ಲ್ಯಾದ ಕೋಡು ' ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಮನೆಯಿಂದ ಹೊರಗಡೆ ಮನೆಯ ಮುಂದೆ ಬಂದು ನಾನು ತಾಳಿ ನನ್ನ ಬಳಿ ಇಲ್ಲಾ ನಿನ್ನ ಹೆಂಡತಿಯ ತಾಯಿಯ ಹತ್ತಿರ ಇದೆ ಸುಮ್ಮನೇ ನನಗೆ ಹೊಲಸು ಬೈಯುತ್ತಿ ಅಂದಾಗ ' ಏ ಬೋಸಡಿ ನೀನು ಸುಳ್ಳು ಹೇಳುತ್ತಿ ಅಂತಾ ಸೀರೆ ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದು, ಅಲ್ಲೆ ಬಿದ್ದ ಕಟ್ಟಿಗೆಯಿಂದ ತಲೆಗೆ, ಮತ್ತು ಬಲಗೈ ಹತ್ತಿರ, ಬೆನ್ನಿಗೆ, ಎದೆಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ಅಷ್ಟರಲ್ಲಿ ಬಾಜು ಮನೆಯವನಾದ ಭೀಮಣ್ಣ ತಂದೆ ಬಸಣ್ಣ ಎದುರುಮನೆ ಮತ್ತು ವನದುಗರ್ಾ ಗ್ರಾಮದ ಹಂಪಣ್ಣ ತಂದೆ ದೇವಿಂದ್ರಪ್ಪ ಕಪಾಟದಾರ ಇವರು ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ನನ್ನ ಅಳಿಯ ಸೋಮಶೇಖರ ಮತ್ತು ನನ್ನ ತಂಗಿಯ ಮಗಳು ಪವಿತ್ರ ಇವರು ಹೊಡೆದು ಹೋಗುವಾಗ ಇವತ್ತ ಉಳಿದೀ ನೀನು ಇನ್ನೊಮ್ಮ ಸಿಗು ನಿನಗೆ ಜೀವದಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿ ಹೋದರು. ನಂತರ ನನ್ನ ಮಗನಾದ ಮಹೇಶ ಈತನು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿರುತ್ತಾನೆ. ಕಾರಣ ವಿನಾಕಾರಣ ತಾಳಿ ಕೋಡು ಅಂತಾ ಜಗಳ ಮಾಡಿ, ಸೀರೆ ಹಿಡಿದು ಎಳೆದಾಡಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಬಡಿಗೆಯಿಂದ ಹೊಡೆದು ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಬರೆಯಿಸಿದ ಹೇಳಿಕೆ ನಿಜವಿದೆ. ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 116/2020 ಕಲಂ, 323, 324, 354, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 161/2020 ಕಲಂ: 87 ಕೆಪಿ ಯಾಕ್ಟ : ಇಂದು ದಿ : 18/10/2020 ರಂದು 04:30 ಪಿಎಮ್ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ನಾನು ಇಂದು ದಿನಾಂಕ:18.10.2020 ರಂದು 03:15 ಪಿ.ಎಂ ಕ್ಕೆ ಪೆಟ್ರೋಲಿಂಗ ಕುರಿತು ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಾ ಗ್ರಾಮದ ಕಡೆಗೆ ಹೋದಾಗ ಭಾತ್ಮೀದಾರರಿಂದ ತಿಳಿದು ಬಂದಿದ್ದೇನೆಂದರೆ, ಮಲ್ಲಾ(ಬಿ) ಗ್ರಾಮದ ಕೃಷ್ಣಾ ಪ್ರಗತಿ ಬ್ಯಾಂಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದಿದ್ದರಿಂದ ಸದರಿ ವಿಷಯವನ್ನು ಖಚಿತಪಡಿಸಿಕೊಂಡು ನಂತರ ಕೆಂಭಾವಿ ಪೊಲೀಸ್ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತ ಜ್ಞಾಪನ ಪತ್ರ ನೀಡಿದ್ದು, ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 161/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ದಾಳಿ ಮಾಡಿ ಒಟ್ಟು 06 ಜನ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು 40,420/- ರೂ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಮತ್ತು 1 ಬಿಳಿ ಬಣ್ಣದ ಬರಕಾವನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 99/2020 ಕಲಂ 3, 4, 5, 7 ಮತ್ತು 9 ಐ.ಟಿ.ಪಿ ಯಾಕ್ಟ 1956 ಹಾಗೂ ಕಲಂ 370 ಐಪಿಸಿ : ಇಂದು ದಿನಾಂಕ:18/10/2020 ರಂದು ರಾತ್ರಿ 22.30 ಪಿ.ಎಮ್.ಕ್ಕೆ ಮಾನ್ಯ ಪಿ.ಐ ಸಾಹೇಬರು ಶೊರಾಪೂರ ರವರು ಠಾಣೆಗೆ ಬಂದು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ, ಮುದ್ದೇ ಮಾಲು ಮತ್ತು ಒಬ್ಬ ಆರೋಪಿತನನ್ನು ತಂದು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ್ದೇನಂದರೆ ಇಂದು ದಿನಾಂಕ:18/10/2020 ರಂದು 21.00 ಪಿ.ಎಮ್.ಕ್ಕೆ ಹುಣಸಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಬಳಿ ಕಾಂಪ್ಲೆಕ್ಸ್ದ ಬಿಲ್ಡಿಂಗನ ಮೊದಲನೇ ಮಹಡಿಯ ನೀಲಕಂಠೇಶ್ವರ ಲಾಡ್ಜ್ದಲ್ಲಿ ಆರೋಪಿ ಬುಡ್ಡೆಶಾ ಈತನು ಒಬ್ಬ ಮಹಿಳೆಯನ್ನು ಮಾನವ ಕಳ್ಳಸಾಗಾಣಿಕೆ ಮಾಡಿ ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಅವರು ಬಳಸಿದ 2 ಕಾಂಡೋಮ ಮತ್ತು 600/- ರೂ. ನಗದು ಹಣ ಮತ್ತು ಒಂದು ಮೊಬೈಲ್ ಅ.ಕಿ.2000/-ರೂ. ಗಳನ್ನು ತಂದು ಒಪ್ಪಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಅದರ ಸಾರಾಶಧ ಮೇಲಿಂದ ಠಾಣೇ ಗುನ್ನೆ ನಂ.99/2020 ಕಲಂ. 3, 4, 5, 7 ಮತ್ತು 9 ಐ.ಟಿ.ಪಿ ಯಾಕ್ಟ 1956 ಹಾಗೂ ಕಲಂ 370 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.