ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/10/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ ಆರ್.ನಂ.15/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ.17/10/2020 ರಂದು 10-00 ಎಎಂಕ್ಕೆ ಶ್ರೀ ಮಲ್ಲಿಕಾಜರ್ುನ ತಂದೆ ಬಸಲಿಂಗಪ್ಪ ಈಟೇ ವಃ35 ಜಾಃ ಹೊಲೆಯ ಉಃ ಅಟೋ ಚಾಲಕ ಸಾಃ ಅಂಭೇಡ್ಕರ ನಗರ ಯಾದಗಿರಿ ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ನೀಡಿದ್ದು ಸಾರಾಂಶವನೆಂದರೆ, ನಿನ್ನೆ ದಿನಾಂಕ.16/10/2020 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಾನು ಯಾದಗಿರಿ ನಗರದ ಹೊಸ ಬಸ ನಿಲ್ದಾಣದ ಆಟೋ ಸ್ಟ್ಯಾಂಡದಲ್ಲಿ ನಿಂತಿರುವಾಗ ಹೊಸ ಬಸ ನಿಲ್ದಾಣದ ಒಳಗಡೆ ಯಾರೋ ಒಬ್ಬ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿ ಅಲ್ಲಿಗೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಅಂದಾಜ ವಯಸ್ಸು 35-40 ಇರಬಹುದು ಸದರಿಯವನು ಮಲಗಿದ್ದಲ್ಲಿಯೇ ಮೃತಪಟ್ಟಿದ್ದು ನಾನು ಮತ್ತು ಈತರರು ನೋಡಲಾಗಿ ಮೃತನ ಗುರುತು ಸಿಕ್ಕಿರುವುದಿಲ್ಲ. ಮೃತ ಅಪರಿಚಿತ ಮನುಷ್ಯನಿದ್ದು ಸದರಿಯವನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಸಾದಾ ಕಪ್ಪುಬಣ್ಣ, ತೆಳುವಾದ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು, ಕಪ್ಪು ದಾಡಿ, ಕಪ್ಪುಮಿಸೆ ಇದ್ದು ಮೈಮೇಲೆ ಪ್ಯಾಂಟ ಶರ್ಟ ಧರಿಸಿದ್ದು ಸದರಿಯವನು ನಿನ್ನೆ ದಿನಾಂಕ. 16/10/2020 ರಂದು ಸಾಯಂಕಾಲ 5-00 ಪಿಎಮ್ ದಿಂದ 6-00 ಪಿಎಮ್ ದ ಮಧ್ಯದ ಅವಧಿಯಲ್ಲಿ ಮೃತಪಟ್ಟಿರಬಹುದು ಅಂತಾ ತಿಳಿದು ಬಂದಿದ್ದು ಮೃತನು ಭಿಕ್ಷುಕನಂತೆ ಕಂಡು ಬರುತ್ತಿದ್ದು, ಅನಾರೋಗ್ಯದಿಂದ, ನಿಶಕ್ತನಾಗಿ ಯಾವುದೋ ಕಾಯಿಲೆಯಿಂದ ಹೊಟ್ಟೆಗೆ ಆಹಾರವಿಲ್ಲದೆ ಮೃತಪಟ್ಟಂತೆ ಕಂಡು ಬರುತ್ತದೆ. ಮೃತನ ವಾರಸುದಾರರು ಯಾರು ಇಲ್ಲದ ಕಾರಣ ವಾರಸುದಾರರ ಪತ್ತೆಗಾಗಿ ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರಿಯಲ್ಲಿ ಇರಿಸೋಣ ಅಂತಾ ಶವವನ್ನು ಸಕರ್ಾರಿ ಆಸ್ಪತ್ರೆಯ ಶವಗಾರ ಕೋಣೆಗೆ ಪೊಲೀಸರ ಸಹಾಯದಿಂದ ಸಾಗಿಸಿದೆವು. ಮೃತ ಅಪರಿಚಿತ ವ್ಯಕ್ತಿಯಾಗಿದ್ದು ಅನಾರೋಗ್ಯದಿಂದ, ನಿಶಕ್ತನಾಗಿ ಹೊಟ್ಟೆಗೆ ಆಹಾರವಿಲ್ಲದೆ ಯಾವುದೋ ಕಾಯಿಲೆಯಿಂದ ಮೃತಪಟ್ಟಂತೆ ಕಂಡು ಬರುತ್ತದೆ. ಇಲ್ಲಿಯವರೆಗೆ ಸದರಿಯವನ ವಾರಸುದಾರರು ಯಾರು ಅಂತಾ ಗೊತ್ತಾಗಿರುವುದಿಲ್ಲಾ. ಮತ್ತು ಯಾರು ವಾರಸುದಾರರು ಇಲ್ಲಿಯವರೆಗೆ ಬಂದಿರುವುದಿಲ್ಲ. ಕಾರಣ ಸದರಿಯವನಿಗೆ ಯಾರು ವಾರಸುದಾರರು ಇಲ್ಲದ ಕಾರಣ ಇಂದು ದಿನಾಂಕ; 17/10/2020 ರಂದು 10-00 ಎಎಮ್ ಕ್ಕೆ ನಾನು ಠಾಣೆಗೆ ಬಂದು ಈ ದೂರು ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ.15/2020 ಕಲಂ.174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 260/2020. ಕಲಂ 78 (3) ಕೆ.ಪಿ.ಆಕ್ಟ : ಆರೋಪಿತರು ದಿನಾಂಕ: 17-10-2020 ರಂದು 4:40 ಪಿ.ಎಮ್.ಕ್ಕೆ ಶಹಾಪುರ ಹಳಿಸಗರ ಏರಿಯಾದ ಗ್ರಾಮದೇವತೆಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 1220/- ರೂ. ನಗದು ಹಣ , ಎರಡು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 260/2020 ಕಲಂ.78 (3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 221/2020 ಕಲಂ. 323,324,354,504,506 ಸಂ.34 ಐಪಿಸಿ : ಇಂದು ದಿನಾಂಕ:17-10-2020 ರಂದು 3 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ ಡಿ ಕರ್ತವ್ಯದಲ್ಲಿರುವಾಗ ಶ್ರೀಮತಿ ಸುಜಾತಾ ಗಂಡ ಮಾನಪ್ಪ ಅಂಬಿಗರ ಸಾ:ಹಾವಿನಾಳ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆದಿನಾಂಕ:13-10-2020 ರಂದು ಸಾಯಂಕಾಲ 03:30 ಗಂಟೆ ಸುಮಾರಿಗೆ ನಾನು ನನ್ನ ಮಾವನಾದ ಕರೆಪ್ಪ ತಂದೆ ಬೀಮಣ್ಣ ಅಂಬಿಗರ ಹಾಗೂ ಅತ್ತೆಯಾದ ಸಾಬಮ್ಮ ಗಂಡ ಕರೆಪ್ಪ ಅಂಬಿಗೇರ ಮೂವರು ಮನೆಯಲ್ಲಿರುವಾಗ ನಮ್ಮ ಹಾವಿನಾಳ ಗ್ರಾಮದ 1) ತಿರುಪತಿ ತಂದೆ ಬೀಮರಾಯ ಭಟ್ಟರು 2) ಅಮೃತಲಾಲ ತಂದೆ ಬೀಮರಾಯ ಭಟ್ಟರು 3) ಬಸ್ಸಮ್ಮ ಗಂಡ ಬೀಮರಾಯ ಭಟ್ಟರು 4) ಮಂಜುನಾಥ ತಂದೆ ಬೀಮರಾಯ ಭಟ್ಟರು ಎಲ್ಲರೂ ಜಾತಿ||ಹಿಂದು ಬಟ್ಟಡ್(ಪರಿಶಿಷ್ಟ ಜಾತಿ) ಇವರೆಲ್ಲರೂ ಗುಂಪು ಕೂಡಿಕೊಂಡು ನಮ್ಮ ಮನೆಯ ಮುಂದೆ ಅಂಗಳದಲ್ಲಿ ನಿಂತು ಕೊಂಡವರೆ ಎಲೇ ಕಬ್ಬಲಿಗ ಮಾನ್ಯಾ ಸುಳೇ ಮಗನೆ ಎಲ್ಲಿದಿ ಮನೆಯ ಹೊರಗಡೆ ಬಾ ನಮ್ಮೂರಲ್ಲಿ ನಿಂದು ಬಹಳ ಆಗಿದೆ ಯಾವುದೆ ಕೆಲಸ ಮಾಡಿದರೂ ನಮಗೆ ಹೇಳದೆ ಕೇಳದೆ ಮಾಡುತ್ತಿ, ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಾನು ಮನೆಯ ಹೊರಗಡೆ ಬಂದು ನನ್ನ ಗಂಡ ಮನೆಯಲ್ಲಿ ಇಲ್ಲ ಯಾಕೇ ಬೈಯುತ್ತಿರಿ ಅಂತಾ ಕೇಳಿದಕ್ಕೆ ಅವರಲ್ಲಿಯ ತಿರುಪತಿ ಈತನು ಏಲೇ ರಂಡಿ ಮಾನ್ಯಾ ಇಲ್ಲದಿದ್ದರೆನಾಯಿತು ನೀನು ಇದ್ದಿಯಲ್ಲಾ ಅವನ ಹೆಂಡತಿ ಅಂತಾ ಅಂದವನೆ ಸುಮ್ಮನೆ ನಿಂತಿದ್ದ ನನ್ನ ಮೈಮೆಲಿನ ಸೀರೆ ಸೆರಗು ಹಿಡಿದು ಎಳೆದು ಜಗ್ಗಾಡಿ ಅವಮಾನ ಮಾಡಿದವನೆ ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಜಾಡಿಸಿ ಹೊಟ್ಟೆಗೆ ಒದ್ದಾಗ ನಾನು ಸತ್ತೆನೆಪ್ಪೋ ಅಂತಾ ಕೇಳಗೆ ಬಿದ್ದಾಗ ಅಮೃತಲಾಲ ಈತನು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ನನ್ನ ಬೆನ್ನಿಗೆ ಕಾಲಿಗೆ ಹೊಡೆದನು. ಬಸಮ್ಮ, ಮಂಜುನಾಥ ಇಬ್ಬರು ಕೆಳಗೆ ಬಿದ್ದ ನನಗೆ ಕಾಲಿನಿಂದ ಒದ್ದು ಎಲ್ಲರೂ ಏ ರಂಡಿ ಹೇಳು ನಿನ್ನ ಗಂಡನಿಗೆ ಇನ್ನೊಮ್ಮೆ ಊರಲ್ಲಿಯ ಯಾವ ಕೆಲಸ ಮಾಡಿದರು ನಮಗೆ ಹೇಳಬೇಕು ಇಲ್ಲ ಅಂದರ ಅವನಿಗೆ ಜೀವ ಹೊಡೆಯುದಲ್ಲದೆ ನಿಮ್ಮೆಲ್ಲ ಕುಟುಂಬದವರ ಮೇಲೆ ಅಟ್ರಾಸಿಟಿ ಕೇಸ ಮಾಡಿ ಜೇಲಿಗೆ ಹಾಕಿಸುತ್ತೆವೆ ಅಂತಾ ಬೈಯುತ್ತಾ ಹೊಡೆ ಬಡೆ ಮಾಡುತ್ತಿರುವಾಗ ಅಲ್ಲೆ ಇದ್ದ ನನ್ನ ಮಾವನಾದ ಕರೆಪ್ಪ ಹಾಗೂ ಅತ್ತೆಯಾದ ಸಾಬಮ್ಮ, ಮೈದುರರಾದ ಮಲ್ಲಿಕಾಜರ್ುನ ತಂದೆ ಕರೆಪ್ಪ, ದೇವಿಂದ್ರಪ್ಪ ತಂದೆ ಕರೆಪ್ಪ ಮತ್ತು ಗ್ರಾಮದ ಪರಶುರಾಮ ತಂದೆ ಯಲ್ಲಪ್ಪ ಮಾದಿಗ, ಇವರೆಲ್ಲರೂ ಬಂದು ಜಗಳವನ್ನು ನೋಡಿ ಬಿಡಿಸಿದ್ದು ಇರುತ್ತದೆ, ನಂತರ ಸಾಯಂಕಾಲ ನನ್ನ ಗಂಡ ಮನೆಗೆ ಬಂದಾಗ ಅವನಿಗೆ ವಿಷಯ ತಿಳಿಸಿದಾಗ ಅವನು ಅಂಜಿ ಗಾಬರಿಗೊಂಡು ಏನು ತೋಚದೆ ಮನೆಯಲ್ಲಿಯೇ ಇದ್ದೆವು. ಇಂದು ನನ್ನ ಹೊಟ್ಟೆ ನೋವು ಆಗುತ್ತಿದೆ ಅಂತಾ ನನ್ನ ಮಾವ ಗಂಡನಿಗೆ ವಿಷಯ ತಿಳಿಸಿದಾಗ ಠಾಣೆಗೆ ಹೋಗಿ ದೂರು ನೀಡು ಆಸ್ಪತ್ರೆಗೆ ತೋರಿಸೊಣ ಅಂತಾ ಕರೆದುಕೊಂಡು ಬಂದು ದೂರು ಅಜರ್ಿ ನಿಡಿದ್ದು, ನನಗೆ ಹೊಡೆ ಬಡೆ ಮಾಡಿದ ನಾಲ್ವರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳಿಸಿಕೊಟ್ಟ ನಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಲು ವಿನಂತಿ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ