ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/10/2020
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 82/2020 ಕಲಂ: 78(3) ಕೆ.ಪಿ ಆಕ್ಟ್ : ದಿನಾಂಕ:16/10/2020 ರಂದು 1:20 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ ದಿನಾಂಕ:16.10.2020 ರಂದು 11:00 ಎ.ಎಮ್.ಕ್ಕೆ ತಾವು ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಗುಪ್ತ ಮಾಹಿತಿ ಸಿಬ್ಬಂದಿಯಾದ ಯಲ್ಲಪ್ಪ ಹೆಚ್.ಸಿ-117 ರವರು ತಿಳಿಸಿದ್ದುಎನೇಂದರೆ ಬೈಲಕುಂಟಿ ಗ್ರಾಮದಲ್ಲಿನ ಶ್ರೀ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1ರೂಪಾಯಿ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡ್ಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:82/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 4:45 ಪಿ.ಎಮ್ಕ್ಕೆ ಮರಳಿ ಠಾಣೆಗೆ ಬಂದು ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 1350/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 1) ಭೀಮಣ್ಣ ತಂದೆ ಗದ್ದೆಪ್ಪ ಅಮ್ಮಾಪೂರ ವ||36ವರ್ಷ ಜಾ||ಹಿಂದೂ ಬೇಡರ ಉ||ಒಕ್ಕಲುತನ ಸಾ||ಬೈಲಕುಂಟಿ ತಾ|| ಹುಣಸಗಿ
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 98/2020 78 (3) ಕೆ.ಪಿ ಯಾಕ್ಟ : ದಿನಾಂಕ:16/10/2020 ರಂದು 14.40 ಪಿ.ಎಮ್ ಕ್ಕೆ, ಶ್ರೀ. ಬಾಪುಗೌಡ ಪಾಟೀಲ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಅರಕೇರಾ(ಜೆ) ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಮಟಕಾ ಬರೆದುಕೊಳ್ಳುವನ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:98/2020 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.