ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/10/2020

By blogger on ಶನಿವಾರ, ಅಕ್ಟೋಬರ್ 17, 2020                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/10/2020 

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 122/2020 ಕಲಂ: 143,504,341,342,355,506 ಸಂ 149 ಐಪಿಸಿ : ಇಂದು ದಿನಾಂಕ:13/10/2020 ರಂದು 5-30 ಪಿಎಮ್ ಕ್ಕೆ ಶ್ರೀ ದೊಡ್ಡಪ್ಪ ತಂದೆ ನಾಗರೆಡ್ಡಿ ಮಾಲಿಪಾಟಿಲ ಸಾ:ಆನೂರ (ಬಿ) ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ನನ್ನ ಗ್ರಾಮದಿಂದ ವಡಗೇರಾ ತಾಲೂಕ್ಕಾಕ್ಕೆ ನನ್ನ ಆತ್ಮಿಯ ಗೆಳೆಯರಾದ ಮಲ್ಲಣ್ಣಗೌಡ ವಡಗೇರಾ ಇವರ ನಿವಾಸದಲ್ಲಿದ್ದಾಗ ಬನ್ನಪ್ಪ ಎಂಬ ಹುಡುಗ ಮತ್ತು ಅವರ ಆತ್ಮಿಯ ಗೆಳೆಯ ಅಥವಾ ನೆಂಟ ಇಬ್ಬರು ಕೂಡಿಕೊಂಡು ನನಗೆ ದೌರ್ಜನ್ಯದಿಂದ ನಿನ್ನ ಮಗನಿಗೆ ಕರಿಸಬೇಕು ಎಂದು ನನಗೆ ಹೇಳಿದಾಗ ಆಗ ಹುಡುಗರಿಗೆ ನಾನು ತಿಳಿಸಿ ಹೇಳಿದೆ ಆದರೆ ಇಲ್ಲ ಈಗ ನೀವು ಕರಿಸಲೇಬೇಕು ಎಂದಾಗ ನಾನು ಅವರಿಗೆ ತಿಳಿಸಿ ಹೇಳಿ ಎರಡು ಗಂಟೆಯವರಿಗೂ ಬರುತ್ತಾನೆ ಎಂದು ಹೇಳಿರುತ್ತಾನೆ. ತಾವು ತಡೆದುಕೊಳ್ಳಬೇಕು ಎಂದು ಮಲ್ಲಣ್ಣಗೌಡರ ಮನೆಯಿಂದ ಹೊರಗಡೆ ಬಂದು ನನ್ನ ಕಾರನ್ನು ತೆಗೆದುಕೊಂಡು ವಡಗೇರಾ ರಸ್ತೆಯ ಮುಖಾಂತರ ಹೋಗಿ ಶಹಾಪೂರ ತಾಲುಕಕ್ಕೆ ಹೋಗಲಿಕ್ಕೆ ಪಂಪಣ್ಣ ಎಂಬಾತನ ಹುಡುಗ ಪಂಪಣ್ಣ ತಂದೆಯಾದ ಮಲ್ಲಿಕಾಜರ್ುನ ನನಗೆ ಚಪ್ಪಲಿಯಿಂದ ಹೊಡೆದು ಅಂಗಿಯನ್ನು ಜಗ್ಗ್ಯಾಡಿ ಮೊಬೈಲಗಳನ್ನು ಕಸಿದುಕೊಂಡಿರುತ್ತಾನೆ. ಮಲ್ಲಿಕಾಜರ್ುನ ಅಂಗಡಿ ಹಾಗೂ ಶರಣಗೌಡ ಹೀಗೆ ಸುಮಾರು ಹುಡುಗರು ಕೂಡಿಕೊಂಡು ನನ್ನ ಕಾರಿಗೆ ಫಾಲೊಪ ಮಾಡಿದರು. ಆದರೆ ಸಿಗಲಾರದ ಕಾರಣ ಖಾನಾಪೂರ ರಸ್ತೆಯಿಂದ ನನ್ನ ಎದುರಿಗೆ ಬಂದು ನನ್ನ ಕಾರನ್ನು ತಡೆದರು. ನನಗೆ ತಡೆದಿರುವ ಕಾರಿನ ನಂಬರ ಕೆಎ 36 ಎನ್ 9128 ಇದ್ದು, ಅಪರಿಚಿತರಾಗಿದ್ದು, ನಡು ರಸ್ತೆಯಲ್ಲಿ ತಡೆದು ಕಾರು ಕೀಯನ್ನು ತೆಗೆದು ಹಿಂದೆ ನನಗೆ ಫಾಲೊಪ ಮಾಡಿ ಬರುವ ಹುಡುಗರಿಗೆ ಕಾಲ್ ಮಾಡಿ ಸುಮಾರು 15-20 ಜನ ಕೂಡಿಕೊಂಡು ಕಾರು ಕೀ ಮತ್ತು ನನ್ನ ಮೊಬೈಲಗಳನ್ನು ಕಸಿದುಕೊಂಡು ರಿಟನ ತಿರುಗಿಸಿಕೊಂಡು ಕುರುಕುಂದಾ ಗ್ರಾಮಕ್ಕೆ ಕರೆದುಕೊಂಡು ಹಿಟ್ಟಿನ ಗಿರಣಿ ಮತ್ತು ಕಿರಾಣಿ ಅಂಗಡಿ ಹತ್ತಿರ ನನಗೆ ನನ್ನ ಆತ್ಮಿಯ ಗೆಳೆಯರಾದ ಮಲ್ಲಣ್ಣಗೌಡ ವಡಗೆರಾ ಇಬ್ಬರಿಗೂ 11 ಗಂಟೆಯಿಂದ 5 ಗಂಟೆಯ ವರೆಗೆ ಆಗ 100 ನಂಬರ್ ಪೊಲೀಸ್ ಕಂಪ್ಲೇಟ್ ಮಾಡಿದ ನಂತರ ವಡಗೇರಾ ಪೊಲೀಸ್ ಠಾಣೆಯಿಂದ ಇಬ್ಬರೂ ಪೊಲೀಸ್ ಅಧಿಕಾರಿಗಳು ಬಂದು ದೊಡ್ಡಪ್ಪಗೌಡ ಯಾರು ಎಂದು ಕೇಳಿದಾಗ ನಾನೆ ಎಂದು ಹೇಳಿದೆ. ಯಾರು ನಿಮ್ಮನ್ನು ಕೂಡಿಸಿದವರು ಎಂದು ಕೇಳಿದಾಗ ನಾನು ಆಗ ಸುಮಾರು ಜನರ ಹೆಸರುಗಳು ಅಪರಿಚಿತರು ಆಗಿದ್ದು, ಅವರು ಇಲ್ಲೆ ಇದ್ದಾರೆ ಎಂದು ವಿಚಾರಣೆ ಮಾಡಿ ಎಂದು ವಿಚಾರಣೆ ಮಾಡಿ ಎಂದು ಹೇಳಿದೆ. ಆದರೆ ನಾನು ಒಂಟಿಯಾಗಿ ತಿರುಗಾಡುವುದರಿಂದ ನನಗೆ ಜೀವದ ಭಯ ಇದೆ ಮತ್ತು ನನ್ನ ಮಗನಾದ ಪರ್ವತರೆಡ್ಡಿ ತಂದೆ ದೊಡ್ಡಪ್ಪಗೌಡ ಮಾಲಿಪಾಟಿಲ್ ಇವನಿಗೂ ಕೂಡಾ ಜೀವದ ಭಯ ಇರುವುದರಿಂದ ಪೊಲೀಸರ ರಕ್ಷಣೆಯನ್ನು ಕೊಡಬೇಕೆಂದು ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ 122/2020 ಕಲಂ:143,504,341,342,355,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 11/2020 174 ಸಿ.ಆರ್.ಪಿ.ಸಿ : ದಿ:13/10/2020 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ. ನಾಗಪ್ಪ ತಂದೆ ಸಿದ್ದಪ್ಪ ಮಾದರ ವಯಾ-50 ವರ್ಷ ಜಾ:ಮಾದರ ಉ:ಒಕ್ಕಲುತನ ಸಾ:ಯಡಹಳ್ಳಿ ತಾ:ಹುಣಸಗಿ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ,  ನನ್ನ ಮಗ ಸಿದ್ದಪ್ಪನು ಸುಮಾರು 20 ಎಕರೆ ಹೊಲವನ್ನು ಲೀಜಿಗೆ ಮಾಡಿದ್ದು, ಅಲ್ಲದೆ ನಮ್ಮ 3 ಎಕರೆ & ನಮ್ಮ ಅಣ್ಣತಮ್ಮಕಿಯ 5 ಎಕರೆ ಹೊಲವನ್ನು ಸಹ ಅವನೆ ಮಾಡಿದ್ದು, ಲೀಜಿಗೆ ಮಾಡಿದ 10 ಎಕರೆ ಹೊಲದಲ್ಲಿ ಹತ್ತಿ & ಮೆಣಿಸಿನ ಗಿಡದ ಬೆಳೆ ಹಾಕಿದ್ದು, ಮಳೆ ಬಹಳ ಬಂದಿದ್ದರಿಂದ ಸದರಿ ಬೆಳೆ ನಾಶವಾಗಿದ್ದು, ಲಾಗೋಡಿಗೆ ಅಂತಾ ಸಾಲ ಮಾಡಿ ಹಣ ತಂದಿದ್ದು, ಸದರಿ ಹಣವನ್ನು ಹೇಗೆ ತೀರಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ: 08/10/2020 ರಂದು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಮನೆಯಲ್ಲಿ ನೇಣುಹಾಕಿಕೊಂಡಿದ್ದು, ಅದೆ ಓಣಿಯ ಜನರ ನೋಡಿ ಸಿದ್ದಪ್ಪನಿಗೆ ಕೇಳಗೆ ಇಳಿಸಿದ್ದು, ಬೇವುಸಾಗಿದ್ದರಿಂದ ಇಲಾಜು ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಇಲಾಜು ಹೊಂದುತ್ತ ಗುಣಮುಖವಾಗದೆ ಇಂದು ದಿನಾಂಕ:13/10/2020 ರಂದು ಬೆಳಿಗಿನ ಜಾವ 04.00 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಇತ್ಯಾದಿ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಪಿ.ಎ.ಆರ್ 16/2020 ಕಲಂ:107 ಸಿಆರ್,ಪಿ,ಸಿ : ನಾನು ಶ್ರೀ ಹಣಮಂತ ಪಿಎಸ್ಐ ಗುರುಮಠಕಲ ಪೊಲೀಸ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೇನಂದರೆ ಇಂದು ದಿನಾಂಕ: 13.10.2020 ರಂದು ಸಾಯಂಕಾಲ 04.30 ಗಂಟೆ  ಸುಮಾರಿಗೆ ಹಳ್ಳಿ ಬೇಟಿ ಮತ್ತು ಪೆಟ್ರೋಲಿಂಗ್ ಕುರಿತು ಠಾಣೆಯಿಂದ ಹೊರಟು ಕಂದಕೂರ ಗ್ರಾಮಕ್ಕೆ ಬೇಟಿ  ನೀಡಿದ ನಂತರ ಸಮಯ 05.20 ಪಿಎಮ್ ಸುಮಾರಿಗೆ ಎಲ್ಲೇರಿ ಗ್ರಾಮಕ್ಕೆ ಹೋಗಿ ಅಲ್ಲಿ ಪೊಲೀಸ ಬಾತ್ಮಿದಾರರಿಗೆ ವಿಚಾರಿಸಿದಾಗ ತಿಳಿದು ಬಂದಿರುವುದೇನೆಂದರೆ, ಎಲ್ಲೇರಿ ಗ್ರಾಮದ ಜಮೀನು ವಿಷಯಕ್ಕೆ ಸಂಬಂದಿಸಿದಂತೆ ಎಲ್ಲೇರಿ ಸಿಮಾಂತರ ಸವರ್ೇ ನಂ 493 2 ಎಕರೆ ಜಮೀನು ವಿಷಯದಲ್ಲಿ ಸುಮಾರು ದಿನಗಳಿಂದ ತಟ್ಟೆ ತಕರಾರುಗಳಿದ್ದು 1ನೇ ಪಾಟರ್ಿ ಹಾಗೂ 2 ನೇ ಪಾಟರ್ಿಯವರಾದ ಇವರ ನಡುವೆ ಆಂತರಿಕ ವೈಮನ್ಸಿನಿಂದ ಕೂಡಿದ್ದು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಈ ಎರಡು ಪಾಟರ್ಿಯ  ಜನರ ನಡುವೆ  ಕಲಹ ಉಂಟಾಗಿ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟಾಗುವ ಸಾದ್ಯತೆಗಳು ಇರುತ್ತವೆ, ಅಲ್ಲದೆ ಇದರಿಂದ ಎಲ್ಲೇರಿ ಗ್ರಾಮದಲ್ಲಿ  ಸಾರ್ವಜನಿಕ ಶಾಂತತೆಗೆ ಭಂಗವನುಂಟುಮಾಡುವ ಸಾದ್ಯತೆ ಇದೆ, ಅಂತ ಪೊಲೀಸ  ಬಾತ್ಮಿದಾರರಿಂದ ಹಾಗೂ ಸಾರ್ವಜನಿಕರಿಂದ ವಿಚಾರಣೆ ಕಾಲಕ್ಕೆ ತಿಳಿದು ಬಂದಿದ್ದರಿಂದ ಸದರಿ ಎರಡೂ ಪಾಟರ್ಿಯ ಜನರ ಮೇಲೆ ಮುಂಜಾಗೃತ ಕ್ರಮವಾಗಿ ಕೋರಿ ಗುರುಮಠಕಲ ಪೊಲೀಸ ಠಾಣೆ ಪಿ.ಎ.ಆರ್ ನಂ 16/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 257/2020.ಕಲಂ 341 323 324 504 506 ಐ.ಪಿ.ಸಿ. : ದಿನಾಂಕ 13/10/2020 ರಂದು 19-00 ಗಂಟೆಗೆ ಪಿಯರ್ಾದಿ ಶ್ರೀ ಅಜೀಜಾಬೇಗಂ ಗಂಡ ಸೈಯದ ಇಮಾಮಶಾ ಮಕಂದಾರ ವ|| 55 ಜಾ|| ಮುಸ್ಲಿಂ ಉ|| ಮನೆಕೆಲಸ ಸಾ|| ಸಗರ(ಬಿ) ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನನಗೆ ಇಬ್ಬರು ಗಂಡು ಮಕ್ಕಳು ಮತ್ತು ನಾಲ್ಕು ಜನರು ಹೆಣ್ಣು ಮಕ್ಕಳಿದ್ದು, ನನ್ನ ಗಂಡನಾದ ಸೈಯದ ಇಮಾಮಶಾ ರವರು ಶಿಕ್ಷಕರಾಗಿ ಕೆಲಸ ಮಾಡುತ್ತಿರುವಾಗ ಸೇವಾ ಅವಧಿಯಲ್ಲಿ ಮೃತಪಟ್ಟಿದ್ದು ಅವರ ತರುವಾಯ ನಾವೆಲ್ಲರೂ ಮನೆಯಲ್ಲಿ ಮಾತನಾಡಿಕೊಂಡು ಮನೆಯ ಆಗು ಹೋಗುಗಳನ್ನು ನೋಡಿಕೊಂಡು ಹೋಗುವ ಜವಾಬ್ದಾರಿಯಿಂದ ಹಿರಿಯ ಮಗನಾದ ಸೈಯದ ಸದ್ದಾಂ ಹುಸೇನನಿಗೆ ಅನುಕಂಪದ ಆಧಾರದ ಮೇರೆಗೆ ಆಹಾರ ಇಲಾಖೆಯಲ್ಲಿ ದ್ವಿತೀಯ ದಜರ್ೆ ಸಹಾಯಕನಾಗಿ ನೌಕರಿ ಪಡೆದಿದ್ದನು. ಆದರೆ ಸದ್ದಾಂ ಹುಸೇನನು ಮೊದಲು ನಮ್ಮೊಂದಿಗೆ ಚನ್ನಾಗಿದ್ದನು ಆದರೆ ಅವನಿಗೆ ಖಯರುನ್ನಿಸಾ ಇವಳ ಜೊತೆ ಮದುವೆ ನಿಶ್ಚಯವಾದ ನಂತರ ಅವನು ನಮಗೆ ನಿರ್ಲಕ್ಷ್ಯ ಮಾಡುತ್ತಾ ಅವನ ಬೀಗರೊಂದಿಗೆ ಸೇರಿ ನಮಗೆ ತೊಂದರೆ ಕೊಡುತ್ತಾ ಬಂದಿರುತ್ತಾನೆ. ಇದರ ಬಗ್ಗೆ ನಾವು ಸದ್ದಾಂ ಹುಸೇನನ ವಿರುದ್ದ ಎಸಿ ಸಾಹೇಬರು ಯಾದಗಿರಿ ರವರಲ್ಲಿ ದೂರು ಕೊಡಬೇಕೆಂದು ವಿಚಾರ ಮಾಡಿದ್ದೆವು. ಈ ವಿಚಾರ ಅವನಿಗೆ ಮತ್ತು ಅವನ ಬೀಗರಿಗೆ ಗೊತ್ತಾಗಿ ಆಗಾಗ ನಮ್ಮೊಂದಿಗೆ ಗಲಾಟೆ ಮಾಡುತ್ತಾ ಬಂದಿದ್ದು ನಾನು ಹೋಗಲಿ ಅಂತ ಸುಮ್ಮನಾಗಿರುತ್ತೇನೆ. ಹೀಗಿದ್ದು ದಿನಾಂಕ 09/10/2020 ರಂದು ಮದ್ಯಾಹ್ನ 2.50 ಗಂಟೆಯ ಸುಮಾರಿಗೆ ಶಹಾಪೂರ ದಿಂದ ನಮ್ಮೂರಿಗೆ ಹೋಗಲು ನಾನು ಮತ್ತು ನನ್ನ ಮಗನಾದ ಇಫರ್ಾನ್ ಇಬ್ಬರೂ ಕೂಡಿ ನಮ್ಮ ಸೈಕಲ್ ಮೋಟಾರನಲ್ಲಿ ಹೋಗುತ್ತಿರುವಾಗ ಶಹಾಪೂರದ ಕನಕ ವ್ಹೇ-ಬ್ರಿಜ್ ಹತ್ತಿರ ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ ಅಲ್ಲಿ ನಿಂತಿದ್ದ ನನ್ನ ಮಗನಾದ ಸೈಯದ ಸದ್ದಾಂ ಹುಸೇನ ಮತ್ತು ಅವನ ಜೊತೆ ಮದುವೆಗೆ ನಿಶ್ಚಯವಾದ ಕೈರುನುಶಾ ತಂದೆ ಅಲ್ಲಾಭಕ್ಷ ಮಕಂದಾರ, ಕೈರುನಶಾಳ ತಮ್ಮನಾದ ದಾವೂದ ತಂದೆ ಅಲ್ಲಾಭಕ್ಷ ಮಕಂದಾರ, ಮತ್ತು ಅವಳ ತಂದೆಯಾದ ಅಲ್ಲಾಭಕ್ಷ ತಂದೆ ನಬಿಶಾ ಮಕಾಂದಾರ ಇವರೆಲ್ಲರೂ ಕೂಡಿ ಬಂದವರೇ ನಮ್ಮನ್ನು ರಸ್ತೆಯಲ್ಲಿ ಅಡ್ಡಗಟ್ಟಿ ತಡೆದು ನಿಲ್ಲಿಸಿ ನಿನ್ನ ಮಗನಾದ ಸದ್ದಾಂನ ಮೇಲೆ ನೀನು ಯಾಕೆ ಕೇಸು ಹಾಕುತ್ತಿದ್ದಿಯಾ ಎಂದು ಜಗಳ ತೆಗೆದು ಅವಾಚ್ಯವಾಗಿ ಬೈಯುತ್ತಾ ಸದ್ದಾಂ ಹುಸೇನನು ನನಗೆ ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು, ಆಗ ದಾವುದ ಈತನು ತನ್ನ ಕೈಯಿಂದ ನನಗೆ ಕುತ್ತಿಗೆಗೆ ಮತ್ತು ಬೆನ್ನಿಗೆ ಹೊಡೆದನು, ಅಲ್ಲಾಭಕ್ಷ ಈತನು ತನ್ನ ಕಾಲಿನಿಂದ ನನ್ನ ಎಡಗಾಲು ಮೊಳಕಾಲಿಗೆ ಒದ್ದು ನೋವುಂಟು ಮಾಡಿದನು, ಕೈರುನಿಸಾ ಈಕೆಯು ನನಗೆ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ತಲೆಗೆ ಹೊಡೆದಳು. ಆಗ ಅಲ್ಲಿಯೇ ಇದ್ದ ನನ್ನ ಮಗ ಇಫರ್ಾನ್ನು ಜಗಳ ಬಿಡಿಸಲು ಪ್ರಯತ್ನಿಸಿದರೂ ಅವರು ಕೇಳಲಿಲ್ಲ. ಅಷ್ಟರಲ್ಲಿ ದಾರಿಯ ಮೇಲೆ ಹೋಗುತ್ತಿದ್ದ ನಮ್ಮ ಸಂಬಂಧಿಕರಾದ ಫಕ್ರುದ್ದಿನ್ ತಂದೆ ಮೌಲಾಸಾಬ, ಬಿಬಿಜಾನ್ ಗಂಡ ಮೌಲಾಸಾಬ ಮಕಂದಾರ ಇವರು ಸದರಿ ಜಗಳ ನೋಡಿ ಬಿಡಿಸಿಕೊಂಡರು. ಆಗ ಅಲ್ಲಾಭಕ್ಷ, ಸದ್ದಾಂ ಹುಸೇನ, ಕೈರುನ್ನಿಸಾ, ಮತ್ತು ದಾವೂದ ರವರುಗಳು ನನಗೆ ಹೊಡೆಯುವುದು ಬಿಟ್ಟು ನನಗೆ ಮತ್ತು ನನ್ನ ಮಗನಾದ ಇಫರ್ಾನನಿಗೆ ಎಲೇ ಸೂಳೆ ಮಕ್ಕಳಾ ನಿಮಗೆ ಸೊಕ್ಕು ಜಾಸ್ತಿ ಬಂದಿದೆ ಇವತ್ತು ಉಳಿದುಕೊಂಡಿದ್ದೀರಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಜೀವಸಹಿತ ಬಿಡುವದಿಲ್ಲಾ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಂತರ ಆ ದಿನ ನನ್ನ ಮಗನಾದ ಇಫರ್ಾನನೊಂದಿಗೆ ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಇರುತ್ತದೆ. ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ದಿನಾಂಕ 13/10/2020 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 257/2020 ಕಲಂ 341. 323. 504. 506. ಸಂ 34 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!