ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/10/2020

By blogger on ಶನಿವಾರ, ಅಕ್ಟೋಬರ್ 17, 2020

 


                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/10/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ ಆರ್.ನಂ.14/2020 ಕಲಂ 174 ಸಿ.ಆರ್.ಪಿ.ಸಿ: ಇಂದು ದಿನಾಂಕ; 12/10/2020 ರಂದು 12-00 ಪಿಎಮ್ ಕ್ಕೆ ಶ್ರೀ ದೇವಿಂದ್ರಪ್ಪ ತಂದೆ ಈಶ್ವರಪ್ಪ ಹಳಿಗೇರಿ ವ;62 ಜಾ; ಲಿಂಗಾಯತ ಉ; ನಿವೃತ್ತ ಕೆ.ಎಸ್.ಆರ್.ಟಿ.ಸಿ ಚಾಲಕ ಸಾ; ಚಿರಂಜೀವಿ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ, ನಮಗೆ 2 ಜನ ಗಂಡು ಮಕ್ಕಳು ಹಾಗೂ 2 ಜನ ಹೆಣ್ಣು ಮಕ್ಕಳಿರುತ್ತಾರೆ. ನನ್ನ ಮಗ ಬನಶಂಕರ ತಂದೆ ದೇವಿಂದ್ರಪ್ಪ ಹಳಿಗೇರಿ ವ; 30 ಜಾ; ಲಿಂಗಾಯತ ಉ; ಖಾಸಗಿ ಕೆಲಸ ಸಾ; ಚಿರಂಜೀವಿ ನಗರ ಯಾದಗಿರಿ ಈತನು ಯಾದಗಿರಿಯ ಆರ್.ಟಿ.ಓ ಕಛೇರಿಯಲ್ಲಿ ಖಾಸಗಿ ದಲ್ಲಾಳಿಯಾಗಿ ಖಾಸಗಿ ವಾಹನಗಳಿಗೇ ಸಂಭಂದಪಟ್ಟಂತೆ ಕಾಗದ ಪತ್ರಗಳನ್ನು ತಯ್ಯಾರಿಸಿ ಕೊಡುತ್ತಿದ್ದನು. ನನ್ನ ಮಗನು ಬೆಳೆಗ್ಗೆ 10-30 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗಿ ರಾತ್ರಿ 8-00 ಗಂಟೆ ಸುಮಾರಿಗೆ ಮನೆಗೆ ಬರುತ್ತಿದ್ದನು. ಆಗಾಗ ಮಧ್ಯಪಾನ ಮಾಡುತ್ತಿದ್ದನು. ಮಧ್ಯಪಾನ ಮಾಡುವುದು ನಮಗೆ ಗೊತ್ತಿರುವುದಿಲ್ಲ. ನನ್ನ ಮಗನ ಹೊರಗಿನ ಚಟುವಟಿಕೆಗಳ ಬಗ್ಗೆ ಗೊತ್ತಿರುವುದಿಲ್ಲ. ಮತ್ತು ಮನೆಯಲ್ಲಿ ನಮಗೆಲ್ಲರಿಗೇ ಒಳ್ಳೆಯ ಮಗನಾಗಿದ್ದನು. ಮನೆಯಲ್ಲಿ ರಾತ್ರಿ ಯಾವಾಗಲೂ ಮನೆಯ ಮೇಲಿನ ಮಹಡಿಯಲ್ಲಿ ಒಂದು ರೂಮ ಇದ್ದು ಅಲ್ಲಿಯೇ ಮಲಗುತ್ತಿದ್ದನು. ನನ್ನ ಮಗ ಬನಶಂಕರ ಈತನಿಗೆ ಮದುವೆ ಆಗಿರುವುದಿಲ್ಲ. ಇಂದು ದಿನಾಂಕ;12/10/2020 ರಂದು 8-00 ಎಎಮ್ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಗಂಗಮ್ಮ ಇಬ್ಬರೂ ಕೂಡಿ ಕಾಳಬೆಳಗುಂದಿ ಗ್ರಾಮಕ್ಕೆ ನಮ್ಮ ಮನೆಯ ದೇವರ ದರ್ಶನ ಕುರಿತು ಹೋಗಿದ್ದೆವು. ನಂತರ 10-30 ಎಎಮ್ ಸುಮಾರಿಗೆ ನನ್ನ ಮಗಳಾದ ರೇಖಾ ಇವಳು ನಮಗೆ ಫೋನ ಮಾಡಿ ತಿಳಿಸಿದ್ದೆನೆಂದರೆ, ಅಣ್ಣ ಬನಶಂಕರ ಈತನು ತಾನು ಮಲಗುವ ರೂಮದಲ್ಲಿ ಕಬ್ಬಿಣದ ಪೈಪಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದಾಗ ನಾವು ಕೂಡಲೇ ಕಾಳಬೆಳಗುಂದಿ ಗ್ರಾಮದಿಂದ ಯಾದಗಿರಿಯ ನಮ್ಮ ಮನೆಗೆ ಬಂದು ರೂಮದಲ್ಲಿ ನೋಡಲಾಗಿ ನನ್ನ ಮಗ ಬನಶಂಕರ ಈತನು ನೇಣು ಹಾಕಿಕೊಂಡು ಮೃತಪಟ್ಟಿದ್ದನು. ಕೆಳಗೆ ನೆಲದ ಮೇಲೆ ಇಲಿ ಪಾಷಾಣ(ಪೌಡರ) ಇದ್ದು ಒಂದು ಗ್ಲಾಸಿನಲ್ಲಿ ಮಧ್ಯಪಾನ ಹಾಕಿದ್ದು ಅದರಲ್ಲಿ ಇಲಿ ಪಾಷಾಣ ಮಿಶ್ರಣ ಮಾಡಿದ್ದು ಸೇವನೆ ಮಾಡಿ ತ್ರಾಸ ತಾಳಲಾರದೇ ಯಾವುದೋ ಒಂದು ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ಯಾರಿಗೂ ಹೇಳಲಾರದೇ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕುತ್ತಿಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಮಗನ ಸಾವಿನಲ್ಲಿ ಯಾರ ಮೇಲೆಯೂ ಸಂಶಯ ಇರುವುದಿಲ್ಲ. ಸದರಿ ಘಟನೆಯು ನಿನ್ನೆ ದಿನಾಂಕ;11/10/2020 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ;12/10/2020 ರ ಬೆಳೆಗ್ಗೆ 9-00 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿದ್ದು ಮುಂದಿನ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್ ನಂ.14/2020 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 148/2020 ಕಲಂ 317 ಐಪಿಸಿ : ಇಂದು ದಿನಾಂಕ 12-10-2020 ರಂದು 12-15 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ನಾಗಮ್ಮ ಗಂಡ ಶರಣಯ್ಯ ಸ್ವಾಮಿ ಹಿರೇಮಠ ವಯಾಃ44 ವರ್ಷ ಜಾಃ ಜಂಗಮ ಉಃ ಬಾಲಕಿಯರ ಬಾಲ ಮಂದಿರ ಪ್ರಭಾರಿ ಅಧೀಕ್ಷಕರು ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಸುಮಾರು 7 ವರ್ಷಗಳಿಂದ ಬಾಲಕಿಯರ ಬಾಲ ಮಂದಿರ ಯಾದಗಿರದಲ್ಲಿ ಪ್ರಭಾರಿ ಅಧೀಕ್ಷಕರು ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೆನೆ,   ಹೀಗಿರುವಾಗ ಇಂದು ದಿನಾಂಕ 12-10-2020 ರಂದು ಬೆಳಗ್ಗೆ 10 ಗಂಟೆಗೆ ನಾನು ನಮ್ಮ ಆಫೀಸಿನಲ್ಲಿರುವಾಗ ಇರುವಾಗ ಯಾದಗಿರಿಯ ಮಕ್ಕಳ ಸಹಾಯವಾಣಿಯ ನಂಬರ 1098 ಸಿಬ್ಬಂಧಿಯರಾದ ಶ್ರೀಮತಿ ರೇಣುಕಾ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯವರಾದ ಶ್ರೀ ದಶರಥ ಹಾಗೂ ಶಿಶು ಅಭಿವೃಧಿ ಯೋಜನಾ ಇಲಾಖೆ  ಅಧಿಕಾರಿಗಳಾದ ಶ್ರೀಮತಿ ರಾಧಾ ಮಣ್ಣೂರ ಯಾದಗಿರಿವರು ಪೋನ ಮಾಡಿ ತಿಳಿಸಿದ್ದೆನೆಂದರೆ ಅಬ್ಬೆತುಮಕುರ ಗ್ರಾಮದ ಸಮೀಪ ಬಿ.ಎಡ್ ಕಾಲೇಜ ಸಮೀಪ ವಿಶ್ವರಾಧ್ಯ ಮಹಾರಾಜರ ಗುದ್ದುಗೆ ಕಟ್ಟೆಯ ಮೇಲೆ ಒಂದು ದಿವಸದ ಗಂಡು ಮಗುವನ್ನು ಯಾರೋ ಒಬ್ಬ ಅಪರಿಚಿತ ಮಹಿಳೆ ಹಡೆದು ಜೀವಂತ ಮಗುವನ್ನು ಬಿಟ್ಟು ಹೋಗಿರುತ್ತಾಳೆ ಅಂತಾ ತಿಳಿಸಿದಾಗ ನಾನು ಕೂಡಲೇ ಮೇಲ್ಕಂಡ ಎಲ್ಲಾ ಅಧಿಕಾರಿಗಳ ಸಮೇತ ಸ್ಥಳಕ್ಕೆ ಬೆಳಗ್ಗೆ 10-30 ಗಂಟೆಗೆ ಹೋಗಿ ನೋಡಲಾಗಿ ಅಬ್ಬೆತುಮಕೂರ ಗ್ರಾಮದ ಸಮೀಪ ವಿಶ್ವರಾಧ್ಯ ಮಹಾರಾಜರ ಗುದ್ದುಗೆ ಕಟ್ಟೆಯ ಮೇಲೆ ಒಂದು ದಿನದ ಜೀವಂತ ಗಂಡು ಮಗು ಇದ್ದು ಅದು ಅಳುತ್ತಾ ಒದ್ದಾಡುತ್ತಿತ್ತು, ಆಗ ನಾವು ಆ ಮಗುವಿನ ರಕ್ಷಣೆಗಾಗಿ ಮತ್ತು ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಕೂಡಲೇ ಆ ಮಗುವನ್ನು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೆವೆ, ಯಾರೋ ಒಬ್ಬ ಅಪರಿಚಿತ ಮಹಿಳೆಯು ತನ್ನ ಗರ್ಭವನ್ನು ಮರೆಮಾಚುವ ಸಂಬಂಧ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟು  ಆ ಮಗುವನ್ನು ಅಬ್ಬೆತುಮಕೂರ ಗ್ರಾಮದ ವಿಶ್ವರಾಧ್ಯ ಮಹಾರಾಜರ ಗುದ್ದುಗೆ ಕಟ್ಟೆಯ ಮೇಲೆ ಆ ಮಗುವಿನ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಬಿಟ್ಟು ಹೋಗಿರುತ್ತಾಳೆ, ಈ ವಿಷಯದ ಬಗ್ಗೆ ನಾವು ನಮ್ಮ ಮೇಲಾಧಿಕಾರಿಗಳ ಜೋತೆಗೆ ಚಚರ್ಿಸಿ ಇಂದು ದಿನಾಂಕ 12-10-2020 ರಂದು ಮಧ್ಯಾಹ್ನ 12-15 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಕೊಟ್ಟಿರುತ್ತೆನೆ,  ಅಪರಿಚಿತ ಮಹಿಳೆ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:148/2020 ಕಲಂ 317 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 133/2020 ಕಲಂ. 457,380  ಐಪಿಸಿ   : ದಿನಾಂಕ: 12-10-2020  ರಂದು ಮದ್ಯಾಹ್ನ 02-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನಈಡಿದ ಸಾರಂಶವೆನೆಂದರೆ ನಾನು ಸುಮಾರು ಒಂದುವರೆ ವರ್ಷದಿಂದ ಸೈದಾಪೂರ ಇಂಡಿಯನ್ ಗ್ಯಾಸ್ ಆಫೀಸನಲ್ಲಿ ಕೆಲಸ ಮಾಡುತಿದ್ದರಿಂದ ನಾನು ದಿನಾಲೂ ಊರಿಗೆ ಹೋಗಿ ಬರುವದು ತೊಂದರೆ ಆಗುತಿದ್ದರಿಂದ ನಾನು ಸೈದಾಪೂರದಲ್ಲಿ ಮಲ್ಲಯ್ಯ ತಂದೆ ಬಸಪ್ಪ ಇವರ ಮನೆ ನಂ. 8-78 ನೇದ್ದರಲ್ಲಿ ಬಾಡಿಗೆ ತೆಗೆದುಕೊಂಡು ನಾನು ನನ್ನ ಹೆಂಡತಿ ಇದ್ದೆವು. ನಾವು ಆಗಾಗ ನಮ್ಮೂರಿಗೆ ಹೋಗಿ ಬರುತಿದ್ದೆವು. ದಿನಾಂಕ: 11-10-2020 ರಂದು ಭಾನವಾರ ಇರುವದರಿಂದ ನಾನು ನನ್ನ ಹೆಂಡತಿ ಸಾಯಂಕಾಲ 04-00 ಗಂಟೆ ಸುಮಾರಿಗೆ  ನಮ್ಮ ಬಾಡಿಗೆ ಮನೆಯನ್ನು ಕೀಲಿ ಹಾಕಿಕೊಂಡು ನಾನು ನನ್ನ ಹೆಂಡತಿ ನನ್ನ ಹೆಂಡತಿಯ ತವರು ಊರಾದ ಗ್ರಾಮ ಸೈದಾಪೂರಕ್ಕೆ ಹೋಗಿ ಅಲ್ಲಿ ನನ್ನ ಹೆಂಡತಿಯನ್ನು  ಬಿಟ್ಟು ನಾನು ನಮ್ಮೂರಾದ ಆನಂಪಲ್ಲಿ ಗ್ರಾಮಕ್ಕೆ ಹೋಗಿರುತ್ತೇನೆ. ನಾನು ಇಂದು ದಿನಾಂಕ: 12-10-2020 ರಂದು ಬೆಳಿಗ್ಗೆ 06-30 ಗಂಟೆಗೆ ನಾನು ಮನೆಯಲ್ಲಿರುವಾಗ ನನ್ನ ಹೆಂಡತಿ ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ನಾವು ಸೈದಾಪೂರದಲ್ಲಿ ಇರುವ ಬಾಡಿಗೆ ಮನೆ ಕಳ್ಳತನವಾಗಿದೆ ಅಂತಾ ನಮ್ಮ ಮನೆಯ ಮಾಲಿಕರಾದ ರೇಣುಕಾ ಈಕೆಯು ನನಗೆ ಪೊನ್ ಮಾಡಿ ತಿಳಿಸಿದ್ದಾಳೆ ನೀನು ಬೇಗ ಬಾ ನಾವು ಹೋಗುತ್ತೇವೆ ಅಂತಾ ಹೇಳಿದಳು. ಆಗ ನಾನು ಮೋಟರ ಸೈಕಲ್ ಮೇಲೆ ಸೈದಾಪೂರಕ್ಕೆ ನಾವು ಇರುವ ಮನೆಗೆ ಬಂದೆನು ನಾನು ಬರುವಷ್ಟರಲ್ಲಿ ನನ್ನ ಹೆಂಡತಿ ಮತ್ತು ನನ್ನ ಅತ್ತೆ ಅಲ್ಲಿಗೆ ಬಂದಿದ್ದರು ಆಗ ನಾವು ನಮ್ಮ ಮನೆಯನ್ನು ನೋಡಲಾಗಿ ನಮ್ಮ ಮನೆಯ ಬಾಗಿಲು ಕೊಂಡಿ ಕಿತ್ತಿತ್ತು, ನಾವು ಮನೆಯ ಒಳಗಡೆ ಹೋಗಿ ನೋಡಲಾಗಿ ಸೀರೆ ಮತ್ತು ಬಟ್ಟೆಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಮತ್ತು ಮನೆ ಹಸಿಯಾಗಿತ್ತು. ಮನೆಯಲ್ಲಿರುವ ವಾಲರೋಬ್ ನೋಡಲಾಗಿ ಅದರಲ್ಲಿ ಇರುವ ಸೀರೆಗಳು ಇರಲಿಲ್ಲ ಕೆಳಗೆ ಬಿದ್ದಿದ್ದವು. ನಾವು ಊರಿಗೆ ಹೋಗುವ ಕಾಲಕ್ಕೆ ವಾಲರೋಬ್ ನಲ್ಲಿ ಒಂದು ಸೀರೆಯಲ್ಲಿ ಇಟ್ಟಿರುವ 1) 3 ತೋಲೆಯ ಬಂಗಾರದ ತಾಳಿ ಸರಾ ಅದರ ಅ|| ಕಿ|| 150000=00, 2) 2 ತೋಲೆಯ ಬಂಗಾರದ ಅವಲಕ್ಕಿ ಸರಾ ಅ|| ಕಿ|| 100000=00, 3) ಒಂದೊಂದು ತೋಲೆಯ 2 ಬಂಗಾರದ ಸರಾಗಳು ಅ|| ಕಿ|| 100000=00 4) ಅರ್ಧ ತೋಲೆ, ಅರ್ಧ ತೋಲೆಯ 2 ಬಂಗಾರ ಉಂಗುರಗಳು ಅ|| ಕಿ|| 50000=00 ಬೆಲೆಯುಳ್ಳ ಬಂಗಾರದ ವಸ್ತುಗಳು ಇರಲಿಲ್ಲ. ನಮ್ಮ ಮನೆಯಲ್ಲಿ ಒಟ್ಟು 400000=00 ರೂಪಾಯಿ ಬಂಗಾರದ ವಸ್ತುಗಳು ಕಳ್ಳತನವಾಗಿದ್ದು. ಮತ್ತು ನಮ್ಮ ಮನೆಯ ಪಕ್ಕದ ಮನೆಯಲ್ಲಿರುವ ಅಬ್ದುಲ್ ರೇಹಮಾನ ತಂದೆ ಶಬ್ಬೀರ ಈತನ ಮನೆಯಲ್ಲಿ ಕೀಲಿ ತೆಗೆದು ರೂಪಾಯಿ 70000=00 ರೂಪಾಯಿಗಳು ಯಾರೋ ಕಳ್ಳರು ಒಟ್ಟು 4,70,000=00 ರೂಪಾಯಿ ಬೆಲೆಯ ಬಂಗಾರ ಮತ್ತು ಹಣವನ್ನು ದಿನಾಂಕ: 11-10-2020 ರಂದು ರಾತ್ರಿ 10 ಗಂಟೆಯಿಂದ ದಿನಾಂಕ: 12-10-2020 ರಂದು ಬೆಳಿಗ್ಗೆ 05-00 ಗಂಟೆ ಅವಧಿಯಲ್ಲಿ ನಾವು ಮನೆಯಲ್ಲಿ ಇರಲಾರದ್ದನ್ನು ನೋಡಿ  ಮನೆಯಲ್ಲಿರುವ ಬಂಗಾರದ ಸಾಮಾನುಗಳನ್ನು ಮತ್ತು ನಮ್ಮ ಮನೆಯ ಪಕ್ಕದ ಮನೆಯಲ್ಲಿರುವ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 115/2020 143, 147, 148, 323, 324, 354, 447, 427, 307, 504, 506 ಸಂಗಡ 149 ಐಪಿಸಿ  : ಇಂದು ದಿನಾಂಕ: 12/10/2020 ರಂದು 9-30 ಪಿಎಮ್ ಕ್ಕೆ ಅಜರ್ಿದಾರನಾದ ಮಲ್ಲಮ್ಮ ಗಂಡ ಭೀಮಣ್ಣ ನಾಗನಟಗಿ ಸಾ|| ಹೊಸಕೇರಾ ತಾ|| ಶಹಾಪೂರ  ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ಹೊಸಕೇರಾ ಸೀಮಾಂತರದಲ್ಲಿ ಹೊಲ ಸವರ್ೆ ನಂ: 183 ವಿಸ್ತೀರ್ಣ 3 ಎಕರೆ ಜಮೀನು ಹೊಲದಲ್ಲಿ ಹತ್ತಿ ಬೆಳೆ ಹಾಕಿರುತ್ತೇವೆ.  ನಮ್ಮ ಹೊಲದ ಬಾಜು ಹೊಸಕೇರಾ ಬಾಂಗ್ಲಾ ತಾಂಡಾದ ಟೋಪುನಾಯಕ ತಂದೆ ಕಸನುನಾಯಕ ಜಾಧವ ಇವರ ಹೊಲ ಸವರ್ೆ ನಂ: 223/3 ನೇದ್ದು ಇರುತ್ತದೆ.  ನಾವು ನಮ್ಮ ಹೊಲದಲ್ಲಿ ಈಗ ಸುಮಾರು 20 ವರ್ಷಗಳಿಂದ ನಾವು ಬೆಳೆ ಬೆಳೆಯುತ್ತಿದ್ದೇವು.  ನಮ್ಮ ಬಾಜು ಹೊಲದವನಾದ ಟೋಪುನಾಯಕ ತಂದೆ ಕಸನುನಾಯಕ ಜಾಧವ ಈತನು ನಮ್ಮ ಹೊಲವನ್ನು ಒತ್ತುವರಿ ಮಾಡಿರಿ ನನ್ನ ಹೊಲ ನನಗೆ ಬಿಟ್ಟುಕೊಡರಿ ಅಂತಾ ಆಗಾಗ ನಮ್ಮೊಂದಿಗೆ ತಕರಾರು ಮಾಡುತ್ತಿದ್ದು, ಅದಕ್ಕೆ ನಾವು ನಮ್ಮೊಂದಿಗೆ ಯಾಕೆ ತಕರಾರು ಮಾಡುತ್ತೀ ನೀನು ಹೊಲವನ್ನು ಸವರ್ೆ ಮಾಡಿಸು ಹೊಲ ಸವರ್ೆ ಮಾಡಿದಾಗ ನಿನ್ನ ಹೊಲ ಎಲ್ಲಿಗೆ ಬರುತ್ತದೋ ಅಲ್ಲಿಯವರೆಗೆ ಬಿಡುತ್ತೇವೆ ಅಂತಾ ಅಂದಿದ್ದು, ಹೊಲವನ್ನು ಸವರ್ೆ ಮಾಡಿಸದೇ ಈ ವಿಷಯವಾಗಿ ನಮ್ಮೊಂದಿಗೆ ತಕರಾರು ಮಾಡುತ್ತಿದ್ದನು.            ಹೀಗಿದ್ದು, ಇಂದು ದಿನಾಂಕ: 12/10/2020 ರಂದು 12-00  ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡನ ತಂಗಿಯಾದ ಮಲ್ಲಮ್ಮ ಗಂಡ ಭೀಮಣ್ಣ ಹುಲಕಲ್ ಕೂಡಿ ಹೊಸಕೇರಾ ಸೀಮಾಂತರದಲ್ಲಿರುವ ನಮ್ಮ ಹೊಲ ಸವರ್ೆ ನಂ: 183 ನೇದ್ದರಲ್ಲಿ ಹತ್ತಿ ಬೆಳೆಯಲ್ಲಿಯ ಸದಿ ತೆಗೆಯಲು ಹೋಗಿ ನಮ್ಮ ಹೊಲದಲ್ಲಿ ಸದಿ ತೆಗೆಯುತ್ತಿರುವಾಗ ಅಂದಾಜು ಮದ್ಯಾಹ್ನ 2-00 ಗಂಟೆ ಸುಮಾರಿಗೆ,  ನಮ್ಮ ಬಾಜು ಹೊಲದವನಾದ 1) ಟೋಪುನಾಯಕ ತಂದೆ ಕಸನುನಾಯಕ ಜಾಧವ  ಮತ್ತು ಆತನ ಮಕ್ಕಳಾದ 2) ರೆಡ್ಡಿ ತಂದೆ ಟೋಪುನಾಯಕ ಜಾದವ 3) ಮಾರುತಿ ತಂದೆ ಟೋಪುನಾಯಕ ಜಾಧವ 4) ದೇವರಾಜ ತಂದೆ ಟೋಪುನಾಯಕ ಜಾಧವ ಹಾಗೂ ಟ್ರ್ಯಾಕ್ಟರ್ ದಲ್ಲಿ ಕಿರದಳ್ಳಿ ತಾಂಡಾದ ಸಂಬಂಧಿಕರನ್ನು ಕರೆದುಕೊಂಡು ಬಂದು ಟ್ರ್ಯಾಕ್ಟರ್ ನ್ನು ನಮ್ಮ ಹೊಲ ಸವರ್ೆ ನಂ: 183 ನೇದ್ದರ ಹತ್ತಿ ಹೊಲದೊಳಗೆ ತೆಗೆದುಕೊಂಡು ಬಂದು ಹೊಲದಲ್ಲಿಯ ಹತ್ತಿ ಬೆಳೆಯನ್ನು ಹಾಳು ಮಾಡುತ್ತಿದ್ದು,   ಆಗ ನಾನು ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ಹೊಲದಲ್ಲಿಯ ಹತ್ತಿ ಬೆಳೆಯನ್ನು ಯಾಕೆ ಹಾಳು ಮಾಡುತ್ತಿದ್ದಿರಿ ಅಂತಾ ಅಂದಿದ್ದಕ್ಕೆ, ಟೋಪುನಾಯಕ ಹಾಗೂ ಆತನ ಮಕ್ಕಳಾದ ರೆಡ್ಡಿ, ಮಾರುತಿ, ದೇವರಾಜ ಹಾಗೂ ಇತರರು ಟ್ರ್ಯಾಕ್ಟರದಿಂದ ಕೆಳಗೆ ಬರುವಾಗ ಕೈಯಲ್ಲಿ ಚಾಕು, ಬಡಿಗೆ, ಕಲ್ಲು, ಕಾರಪುಡಿಗಳನ್ನು ತೆಗೆದುಕೊಂಡು ಬಂದಿದ್ದು ಅವರಲ್ಲಿ ಟೋಪುನಾಯಕ ಈತನು ' ನಿನ್ನ ಗಂಡ ನಮ್ಮ ಹೊಲವನ್ನು ಒತ್ತುವರಿ ಮಾಡ್ಯಾನ ನಮ್ಮ ಹೊಲ ಕೋಡು ಅಂದರೆ ಸವರ್ೆ ಮಾಡಿಸು ತೋಗೊ ಅಂತಾ ಹೇಳ್ತಾನ ಬೋಸಡಿ ಮಗ ನಿನ್ನ ಗಂಡನಿಗೆ ಸೊಕ್ಕು ಬಹಳ ಆಗ್ಯಾದ ಎಲ್ಲ್ಯಾನ ಆವ ಇವತ್ತು ಖಲಾಸ ಮಾಡುತ್ತೇವೆ'  ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಮಾಡುವ ಉದ್ದೇಶದಿಂದ ಬಂದು ಚಾಕುವಿನಿಂದ ನನಗೆ ಚುಚ್ಚಲು ಬಂದಾಗ ನಾನು ತಪ್ಪಿಸಿಕೊಂಡಿದ್ದು, ರೆಡ್ಡಿ ಈತನು ಕೈ ಹಿಡಿದು ಎಳೆದಾಡಿ ಹೊಟ್ಟೆಗೆ ಜೋರಾಗಿ ಹೊಡೆದಿದ್ದರಿಂದ ಒಳಪೆಟ್ಟಾಗಿರುತ್ತದೆ. ಮಾರುತಿ ಈತನು ಕಲ್ಲಿನಿಂದ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದನು. ದೇವರಾಜ ಈತನು ಕಾಲಿನಿಂದ ಒದ್ದನು. ಟೋಪುನಾಯಕ ನ ಜೋತೆಗೆ ಬಂದಿದ್ದ ಇತರರು ಇವರಿಗೆ ಇವತ್ತ ಖಲಾಸ್ ಮಾಡಿ ಬಿಡಮ್ ಅಂತಾ ಜೀವದ ಬೇದರಿಕೆ ಹಾಕಿದರು.  ಆಗ ನನ್ನ ಜೋತೆಗೆ ಬಂದಿದ್ದ ನನ್ನ ಗಂಡನ ತಂಗಿ ಮಲ್ಲಮ್ಮ ಗಂಡ ಭೀಮಣ್ಣ ಹುಲಕಲ್ ಹಾಗೂ ಬಾಜು ಹೊಲದವರಾದ ನಮ್ಮೂರ ಸುರೇಶ ತಂದೆ ಮರೆಪ್ಪ ಪಟೇಲ್, ಹಣಮಂತ ತಂದೆ ಮಲ್ಲಪ್ಪ ಚಂದ್ರಕಲ್ ಇವರು ಜಗಳ ಬಿಡಿಸಿರುತ್ತಾರೆ. ಕಾರಣ ನಮಗೆ ಹೊಲದ ವಿಷಯವಾಗಿ ಕೊಲೆ ಮಾಡುವ ಉದ್ದೇಶದಿಂದ ನಮ್ಮೊಂದಿಗೆ ಜಗಳ ತೆಗೆದು, ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ, ಹತ್ತಿ ಬೆಳೆ ಹಾನಿ ಮಾಡಿ,  ಕೈಹಿಡಿದು ಎಳೆದಾಡಿ, ಕೈಯಿಂದ, ಬಡಿಗೆಯಿಂದ, ಕಲ್ಲಿನಿಂದ  ಹೊಡೆದು ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಿ, ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 115/2020 ಕಲಂ, 143, 147, 148, 323, 324, 354, 447, 427, 307, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!