ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/10/2020

By blogger on ಶನಿವಾರ, ಅಕ್ಟೋಬರ್ 17, 2020



                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/10/2020 

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 144/2020 ಕಲಂ 324, 504  ಐಪಿಸಿ. : ಇಂದು ದಿನಾಂಕ 11.10.2020 ರಂದು ಮಧ್ಯಾಹ್ನ 2:00 ಗಂಟೆಗೆ ಫಿರ್ಯಾದಿಯು ನಾನು ಲೀಜಿಗೆ ಹಾಕಿಕೊಂಡಿದ್ದ ನಜರಾಪೂರ ಸಿಮಾಂತರದ ಹೊಲಕ್ಕೆ ಹೊಗುತ್ತಿದ್ದಾಗ ಆ ಹೊಲಕ್ಕೆ ಹೋಗುತ್ತಿದ್ದ ಕಾಲುವೆಗೆ ಆರೋಪೀತನು ಕೆರೆಯ ನೀರಿಗೆ ಕೊಡಮಿಯನ್ನು ಕಟ್ಟಿ ಮೀನು ಹಿಡಿಯುತ್ತಿದ್ದುದನ್ನು ನೋಡಿದ ಫಿರ್ಯಾದಿಯು ಅದನ್ನು ತೆಗೆದಿದಕ್ಕೆ ಆರೋಪಿತು ಲೇ ಸೂಳೆ ಮಗನೆ ಅದನ್ನು ಯಾಕ ತೆಗಿತಿ ಅಂತಾ ಹೊಲಸು ಮಾತಿನಲ್ಲಿ ಬೈದನು. ಆಗ ಫಿರ್ಯಾದಿಯು ನೀನು ಕೊಡಮಿಯನ್ನು ಕಟ್ಟಿದರೆ ನಾವು ಲೀಜಿಗೆ ಹಾಕಿಕೊಂಡ ಕೌವಳಿ ಗದ್ದೆಗೆ (ಭತ್ತದ ಹೊಲಕ್ಕೆ) ನೀರು ಹೋಗುವುದಿಲ್ಲ ಅದರಲ್ಲಿಯ ಕೌವಳಿ ಬತ್ತಿಹೊಗುತ್ತದೆ ಎಂದು ಹೇಳಿದ ನಂತರ ಆರೋಪಿತನು ಅಲ್ಲಿಂದ ಮುಂದೆ ಹೋದಗಿದ್ದು ಅದನ್ನು ನೋಡಿದ ಫೀರ್ಯಾದಿಯು ತಾನು ಲೀಜಿಗೆ ಹಾಕಿಕೊಂಡ ಹೊಲದ ಕಡೆಗೆ ಹೊಗುತ್ತಿದ್ದಾಗ ಆರೋಪಿತನು ಹಿಂದಿನಿಂದ ಬಂದು ಕಟ್ಟಿಗೆಯಿಂದ ಫಿರ್ಯಾದಿಯ ತಲೆಯ ಮೆಲೆ ಮೇಲೆ ಹೊಡೆದು ಸಾದಾ ಸ್ವರೂಪದ ರಕ್ತಗಾಯಗೊಳಿಸಿದ ಬಗ್ಗೆ ಫಿರ್ಯಾದಿಯು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ಒಂದು ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 144/2020 ಕಲಂ 324, 504  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ.06/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ 11/10/2020 ರಂದು ಮುಂಜಾನೆ 10:00 ಎ.ಎಂ ಕ್ಕೆ ಶ್ರೀಮತಿ ಮಹಾದೇವಿ ಗಂಡ ಪರಶುರಾಮ ಚಿನ್ನಾರಾಠೊಡ ವ:32 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಲಮಾಣಿ ಸಾ: ನಾರಾಯಣಪೂರ ಐಬಿ ತಾಂಡಾ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಪಿಯರ್ಾದಿ ಅಜರ್ಿಯ ಸಾರಾಂಶವೆನೆಂದರೆ ನನ್ನ ತವರು ಮನೆ ಮುದ್ದೆಬಿಹಾಳ ತಾಲೂಕಿನ ರೂಡಗಿ ತಾಂಡಾ ಇದ್ದು ನನಗೆ ಐಬಿ ತಾಂಡಾದ ಪರಶುರಾಮ ತಂದೆ ಪೂರಪ್ಪ ಚಿನ್ನಾರಾಠೋಡ ರವರೊಂದಿಗೆ ಮದುವೆಮಾಡಿಕೊಟ್ಟಿದ್ದು ಇರುತ್ತದೆ.  ನನ್ನ ಗಂಡ ಪರಶುರಾಮ ರವರಿಗೆ ತುಕರಾಮ, ರಾಮು, ಲಕ್ಷ್ಮಣ ಅಂತಾ ಮೂರ ಜನ ತಮ್ಮಂದಿರಿದ್ದು ಎಲ್ಲರದ್ದು ಮದುವೆಯಾಗಿದ್ದು ಎಲ್ಲರೂ ಬೇರೆಯಾಗಿದ್ದು ಬೇರೆ ಬೇರೆ ಮನೆಯಲ್ಲಿ ವಾಸವಿರುತ್ತಾರೆ. ನಮ್ಮ ಅತ್ತೆ ಮಾವ ರವರು ನನ್ನ ಮೈದುನ ರಾಮು ರವರ ಕಡೆ ಇದ್ದು ನಮ್ಮ ತಾಂಡಾದಲ್ಲಿ ನಮ್ಮ ಮನೆ ಮತ್ತು ರಾಮು ರವರ ಮನೆ ಅಕ್ಕಪಕ್ಕದಲ್ಲಿ ಇದ್ದು ತುಕರಾಮ ಹಾಗೂ ಲಕ್ಷ್ಮಣ್ಣ ರವರ ಮನೆಗಳು ಬೇರೆಕಡೆ ಇರುತ್ತವೆ.  ನಮ್ಮ ಮನೆಯಲ್ಲಿ ನಾನು ಮತ್ತು ಗಂಡ ಪರಶುರಾಮ 35 ವರ್ಷ,  ನನ್ನ ಮಗ ವಿಷ್ಣು, 14 ವರ್ಷ, ಕಾವ್ಯ  13 ವರ್ಷ, ಮಹೇಶ 11 ವರ್ಷ ಇರುತ್ತೇವೆ. ನನ್ನ ಗಂಡನು ಕುಡಿತದ ಚಟದವನಾಗಿದ್ದು ನನ್ನ ಗಂಡನು ಸಣ್ಣ ಸಣ್ಣ ವಿಷಯಗಳಿಗೆ ಕುಡಿದು ಬಂದು ನನ್ನೊಂದಿಗೆ ಜಗಳ ಮಾಡುವದು ನೀನು ನಿನ್ನ ತವರು ಮನೆಗೆ ಹೋಗು ಅಂತಾ ಅನ್ನುತ್ತಿದ್ದನು. ದಿನಾಂಕ 09/10/2020 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನನ್ನ ಗಂಡನು ಕುಡಿದು ಬಂದು ನನ್ನೊಂದಿಗೆ ಜಗಳ ತಗೆದು ನೀನು ನಮ್ಮ ಮನೆಯನ್ನು ಬಿಟ್ಟುಹೋಗು ನಮ್ಮ ಮನೆಯಲ್ಲಿ ಇರಬೇಡಾ ಅಂತಾ ಅಂದನು ಆಗ ನಾನು ದಿನಾಂಕ 09/10/2020 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ  ನನ್ನ ಮಗಳು ಕಾವ್ಯ ಹಾಗೂ ನನ್ನ ಮಗ ಮಹೇಶನನ್ನು ಕರೆದುಕೊಂಡು ನನ್ನ ತವರು ಮನೆ ರೂಡಿಗೆ ತಾಂಡಾಕ್ಕೆ ಹೋದೆನು. ನಾನು ನಿನ್ನೆ ದಿನಾಂಕ 10/10/2020 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ರೂಡಿಗೆ ತಾಂಡಾದ ನಮ್ಮ ತವರು ಮನೆಯಲ್ಲಿ ಇದ್ದಾಗ ನನ್ನ ತಮ್ಮ ಗುರುನಾಥನು ಹೊಲದಿಂದ ಬಂದು ನಿನ್ನ ಗಂಡನ ಮನೆಯವರು ಬೇಳಿಗ್ಗೆ ಪೋನ ಮಾಡಿದ್ದರು ನಿನ್ನ ಜೊತೆ ಮಾತನಾಡಬೇಕು ಅಂತಾ ನಾನು ಹೊಲದಲ್ಲಿ ಇದ್ದುದರಿಂದ ಸಾಯಂಕಾಲ ಹಚ್ಚಿಕೊಡುತ್ತೇನೆ ಅಂತಾ ಹೇಳಿದ್ದೇನು ಈಗ ಮಾತನಾಡು ಅಂತಾ ನನ್ನ ಮಗ ವಿಷ್ಣುವಿಗೆ ಪೋನ ಹಚ್ಚಿಕೊಟ್ಟನು ಆಗ ನನ್ನ ಮಗನು ನನಗೆ ತಿಳಿಸಿದ್ದೇನೆಂದರೆ ನೀವು ಮನೆಯನ್ನು ಬಿಟ್ಟು ಹೋದ ನಂತರ ಅಪ್ಪನು ನಿಮ್ಮ ಮೇಲೆ ಸಿಟ್ಟಾಗಿ ಇಂದು ದಿನಾಂಕ 10/10/2020 ರಂದು ಮುಂಜಾನೆ 6:00 ಗಂಟೆಯ ಸುಮಾರಿಗೆ ಕುಡಿದು ಬಂದು ಮನೆಯಲ್ಲಿ ಉರುಲುಹಾಕಿಕೊಂಡಿದ್ದು ಅದನ್ನು ನೋಡಿದ ನಾನು ಕೂಡಲೇ ಹೋಗಿ ಅಜ್ಜ ,ಅಜ್ಜಿ, ಕಾಕ, ಹಾಗೂ ಚಿಕ್ಕಮ್ಮರಿಗೆ  ಕರೆದುಕೊಂಡು ಬಂದಿದ್ದು ಎಲ್ಲರೂ ಸೇರಿ ಅಪ್ಪನನ್ನು ಹಗ್ಗದಿಂದ ಬಿಡಿಸಿಕೊಂಡು ಉಪಚಾರ ಕುರಿತು ರಾಜನಕೋಳರು ದವಾಖಾನೆಗೆ ಕರೆದುಕೊಂಡುಹೋಗಿದ್ದು ಅಲ್ಲಿ ಪ್ರಥಮೋಚಾರ ಮಾಡಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ಬಾಗಲಕೋಟೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತಾ ತಿಳಿಸಿದನು  ಇಂದು ರಾತ್ರಿಯಾಗಿದ್ದರಿಂದ ನಾಳೆ ಮುಂಜಾನೆ ಹೋದರಾಯಿತು ಅಂತಾ ನನ್ನ ತವರು ಮನೆಯಲ್ಲಿ ಇದ್ದಾಗ ಇಂದು ಮುಂಜಾನೆ 7:00 ಗಂಟೆಯ ಸುಮಾರಿಗೆ ನನ್ನ ಮೈದುನ ತುಕಾರಾಮನು ಬಾಗಲಕೋಟಿಯಿಂದ ಪೋನ ಮಾಡಿ ತಿಳಿಸಿದ್ದೆನೆಂದರೆ ಅಣ್ಣ ಪರಶುರಾಮನು ನಿನ್ನೆ ದಿನ ಮನೆಯಲ್ಲಿ ಉರುಲು ಹಾಕಿಕೊಂಡಿದ್ದರಿಂದ ಉಪಚಾರ ಕುರಿತು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೇ ಇಂದು ದಿನಾಂಕ 11/10/2020 ರಂದು ಮುಂಜಾನೆ 6:00 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ತಿಳಿಸಿದನು. ನನ್ನ ಗಂಡನು ಕುಡಿಯುವ ಚಟದವನಿದ್ದು ಯಾವಾಗಲು ಕುಡಿದುಬಂದು ನನ್ನೊಂದಿಗೆ ಜಗಳ ಮಾಡುತ್ತಿದ್ದಾಗ ನಾನು ದಿನಾಂಕ 09/10/2020 ರಂದು ನನ್ನ ಗಂಡನನ್ನು ಬಿಟ್ಟು ನನ್ನ ತವರು ಮನೆಗೆ ಹೋದಾಗ ನನ್ನ ಗಂಡನು ನಾನು ತವರು ಮನೆಗೆ ಹೋದದಕ್ಕೆ ಸಿಟ್ಟಾಗ ಕುಡಿದು ಬಂದು ದಿನಾಂಕ 10/10/2020 ರಂದು ಮುಂಜಾನೆ 6:00 ಗಂಟೆಯ ಸುಮಾರಿಗೆ ಮನೆಯಲ್ಲಿ ಉರುಲು ಹಾಕಿಕೊಂಡಿದ್ದು ಅದನ್ನು ನೋಡಿದ ನಮ್ಮ ಮನೆಯವರು ಬಿಡಿಸಿ ಉಪಚಾರ ಕುರಿತು ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ಸೇರಿಕೆಮಾಡಿದಾಗ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೇ ಇಂದು ದಿನಾಂಕ 11/10/2020 ರಂದು ಮುಂಜಾನೆ 6:00 ಗಂಟೆಗೆ ನನ್ನ ಗಂಡ ಪರಶುರಾಮ ತಂದೆ ಪೂರಪ್ಪ ಚಿನ್ನಾರಾಠೊಡ ವ:35 ವರ್ಷ ಉ:ಒಕ್ಕಲುತನ ಜಾ:ಹಿಂದು ಲಂಬಾಣಿ ಸಾ: ನಾರಾಯಣಪೂರ ಐಬಿ ತಾಂಡಾ ರವರು  ಮೃತಪಟ್ಟಿದ್ದು ನನ್ನ ಗಂಡನ ಮರಣದಲ್ಲಿ ಯಾರಮೇಲೆ ಯಾವುದೆ ಸಂಶಯವಿರುವದಿಲ್ಲ ನನ್ನ ಗಂಡನ ಶವವು ಬಾಗಲಕೋಟೆಯ ಕುಮಾರೇಶ್ವರ  ಆಸ್ಪತ್ರೆಯಲ್ಲಿ ಇರುತ್ತದೆ ತಾವು ಮುಂದಿನ ಕ್ರಮ ಜರುಗಿಸಬೇಕು ಅಂತಾ ನೀಡಿದ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಯು.ಡಿ ಆರ್ ನಂ 06/2020 ಕಲಂ 174 ಸಿ ಆರ್ ಪಿ ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 130/2020, ಕಲಂ, 323,324,504.506. ಸಂಗಡ 34 ಐ ಪಿ ಸಿ  : 11-10-2020 ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 10-10-2020 ರಂದು ಬೆಳಿಗ್ಗೆ 09-00 ಗಂಟೆಗೆ ನಾವು ನಮ್ಮ ಕುರಿಗಳನ್ನು ಯಲೇರಿ ಬನ್ನಪ್ಪ ಇವರ ಹೊಲದ ಹತ್ತಿರ ಕುರಿಗಳನ್ನು ಮೇಯಿಸುತ್ತಿರುವಾಗ ಆರೋಪಿತರೆಲ್ಲರೂ ಕೂಡಿ ಬಂದು ಲೇ ಸೂಳೆ ಮಕ್ಕಳೆ ನಾವು ಮೇಯಿಸುವ ಹೊಲದಲ್ಲಿ ಬಂದು ನೀವು ಯಾಕ ನಿಮ್ಮ ಕುರಿಗಳನ್ನು ಇಲ್ಲಿಗೆ ಹೊಡೆದುಕೊಂಡು ಬಂದು ಮೇಯಿಸುತ್ತಿದ್ದರಿ ಸೂಳೆ ಮಕ್ಕಳೆ ಅಂದು ನಮ್ಮ ಅಣ್ಣ ಮಹಾದೇವ ಈತನಿಗೆ ನರಸಪ್ಪ ಮತ್ತು ರಮೇಶ ಇಬ್ಬರು ಕಟ್ಟಿಗೆಯ ಬಡಿಗೆಗಳನ್ನು ತೆಗೆದುಕೊಂಡು ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು, ಸೊಂಟಕ್ಕೆ ಹೊಡೆದು ಗುಪ್ತ ಪೇಟ್ಟು ಮಾಡಿದ್ದು, ಮೂಗಿನ ಹತ್ತಿರ ಹೊಡೆದು ರಕ್ತಗಾಯ ಮಾಡಿದ್ದು, ಆಗ ನನ್ನ ತಂದೆ ಅಶೋಕ ಈತನು ಜಗಳದಲ್ಲಿ ಅಡ್ಡ ಹೋದಾಗ ಆತನಿಗೆ ಮಲ್ಲಪ್ಪ ಈತನು ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದನು. ಆಗ ನಾನು ಜಗಳದಲ್ಲಿ ಅಡ್ಡ ಹೋದಾಗ ಬನ್ನಪ್ಪ ಈತನು ನನಗೆ ಲೇ ಸೂಳೆ ಮಗನೆ ನೀನು ಯಾಕೆ ಅಡ್ಡ ಬರುತ್ತಲೆ ಅಂದು ಕೈಯಿಂದ ಮುಷ್ಠಿ ಮಾಡಿ ಹೊಟ್ಟೆಗೆ ಮತ್ತು ಎಡಗೈಗೆ ಗುದ್ದಿ  ಲೇ ಲಂಗಾ ಸೂಳೆ ಮಕ್ಕಳೆ ನೀವು ಏನಾದರೂ ಇಲ್ಲಿ ಕುರಿ ಮೇಯಿಸಿದರೆ ನಿಮಗೆ ಖಲಾಸ ಮಾಡುತ್ತೆವೆ ಮಕ್ಕಳೆ ನಿಮ್ಮದು ಸೊಕ್ಕು ಬಹಳ ಆಗಿದೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 131/2019  ಕಲಂ ಮನುಷ್ಯ ಕಾಣೆ : ಇಂದು ದಿನಾಂಕ: 11-10-2020 ರಂದು ರಾತ್ರಿ 08-30 ಗಂಟೆಗೆ ಪಿಯರ್ಾಧಿದಾರನು ದೂರು ನೀಡಿದ ಸಾರಂಶವೆನೆಂದರೆ ಈಗ ಸುಮಾರು 18 ವರ್ಷಗಳಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೈದಾಪೂರದಲ್ಲಿ ಶಿಕ್ಷಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ  ನಮ್ಮ ತಂದೆ ಸೈದಾಪೂರಕ್ಕೆ ಆಗಾಗ ಬಂದು ಮತ್ತೆ ಹೋಗುತಿದ್ದರು.  ದಿನಾಂಕ: 07-09-2020 ರಂದು ನನ್ನ ತಂದೆ ಸೈದಾಪೂರಕ್ಕೆ ಬಂದು ನನ್ನಲ್ಲಿ ಇದ್ದರು. ದಿನಾಂಕ: 14-09-2020 ರಂದು ನಾನು ಬೆಳಿಗ್ಗೆ 09-00 ಗಂಟೆಗೆ ಶಾಲೆಗೆ ಹೋಗಿದ್ದು ಮನೆಯಲ್ಲಿ ನನ್ನ ತಂದೆ ಮತ್ತು ನನ್ನ ಹೆಂಡತಿ ಮತ್ತು ಮಕ್ಕಳು ಇದ್ದರು ಸಾಯಂಕಾಲ 04-30 ಗಂಟೆ ಸುಮಾರಿಗೆ ನಾನು ಶಾಲೆಯಿಂದ ಮರಳಿ ಮನೆಗೆ ಬಂದಾಗ ನನ್ನ ಹೆಂಡತಿ ನನಗೆ ತಿಳಿಸಿದ್ದೆನೆಂದರೆ ಮಾಮ ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು ಇನ್ನು ವಾಪಸ ಮನೆಗೆ ಬಂದಿಲ್ಲ ಅಂತಾ ಹೇಳಿದ್ದರಿಂದ ಆಗ ನಾನು ಸೈದಾಪೂರ ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಸೈದಾಪೂರ ಸುತ್ತ ಮುತ್ತ ಹುಡುಕಾಡಿದರು ನನ್ನ ತಂದೆ ಇರಲಿಲ್ಲ. ಆಗ ನಾನು ನನ್ನ ತಮ್ಮನಾದ ಶಿವಯೋಗಿ ಈತನಿಗೆ ಪೋನ್ ಮಾಡಿ ಅಪ್ಪ ಊರಿಗೆ ಬಂದಿದ್ದಾನೆನು ಸೈದಾಪೂರದಲ್ಲಿ ಇಲ್ಲ ಅಂತಾ ಕೇಳಲಾಗಿ ಆತನು ಬಂದಿಲ್ಲ ಅಂತಾ ತಿಳಿಸಿದನು. ಮರುದಿನ ನಾನು ನಮ್ಮ ಬೀಗರು ನೆಂಟರ ಊರಿಗೆ ಪೋನ್ ಮಾಡಿ ನಮ್ಮ ಅಪ್ಪ ಬಂದಿದ್ದಾನೆನು ಅಂತಾ ಕೇಳಲಾಗಿ ಬಂದಿಲ್ಲ ಅಂತಾ ಹೇಳಿದರು ಎಲ್ಲಾದರು ಹೋಗಿರಬಹುದು ನಂತರ ಬರಬಹುದು ಅಂತಾ ಸುಮ್ಮನಿದ್ದೆನು ಮರು ದಿನ ಕೂಡ ನನ್ನ ತಂದೆ ಮನೆಗೆ ಬರದೆ ಇದ್ದಾಗ ನಾನು ನಮ್ಮ ಬೀಗರ ನೆಂಟರ ಊರುಗಳಿಗೆ ನಮ್ಮ ತಂದೆಗೆ ಹುಡುಕಾಡಲು ಹೋಗಿ ಎಲ್ಲಾ ಕಡೆ ಹುಡಿಕಾಡಿದರು ನನ್ನ ತಂದೆ ಸಿಗಲಿಲ್ಲ ಎಲ್ಲಾದರು ಹೋಗಿರಬಹುದು ಮತ್ತೆ ಬರಬಹುದು ಅಂತಾ ಹುಡುಕಾಡುತ್ತ ಇದ್ದೆನು ನಾನು ನನ್ನ ತಂದೆಗೆ ಎಲ್ಲಾ ಕಡೆ ಹುಡುಕಾಡಿದರು ನನ್ನ ತಂದೆ ಗುಂಡಪ್ಪ ತಂದೆ ಸಂಗಣ್ಣ ತಾಂಬುಳೆ ಅಂದಾಜು ವ|| 68 ವರ್ಷ ಜಾ|| ಲಿಂಗಾಯತ  ಸಾ|| ಕಿಣಿವಾಡಿ ತಾ|| ಅಕ್ಕಲಕೋಟ ಜಿ|| ಸೊಲ್ಲಾಪೂರ (ಮಹಾರಾಷ್ಟ) ಇವರು ಕಾಣೆಯಾಗಿದ್ದು ಇವರು ಕಾಣೆಯಾದ ದಿನದಂದು ಮೈಮೇಲೆ ಬಿಳಿಯ ಬಣ್ಣದ ಅಂಗಿ, ಬಿಳಿಯ ಬಣ್ಣದ ದೋತಿ, ತಲೆಯ ಮೇಲೆ ಬಿಳಿ ಬಣ್ಣದ ಟೋಪಿ ಇತ್ತು. ನನ್ನ ತಂದೆ ಕನ್ನಡ, ಮರಾಠಿ ಭಾಷೆಗಳನ್ನು ಮಾತಾಡಲು ಬರುತ್ತದೆ ನನ್ನ ತಂದೆ ದಿನಾಂಕ: 14-09-2020 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಕಾಣೆಯಾಗಿದ್ದು ಇಷ್ಟು ದಿನ ಎಲ್ಲಾ ಕಡೆ  ಹುಡುಕಾಡಿದರು ಸಿಗದ ಕಾರಣ ಇಂದು ದಿನಾಂಕ: 11-10-2020 ರಂದು ಠಾಣೆಗೆ ತಡವಾಗಿ ಬಂದು ನನ್ನ ತಂದೆ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಇರುತ್ತದೆ.



ಗೋಗಿ ಪೊಲೀಸ ಠಾಣೆ ಗುನ್ನೆ ನಂ: 112/2020 143, 147, 148, 323, 324, 354, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ: 11/10/2020 ರಂದು 7-30 ಪಿಎಮ್ ಕ್ಕೆ ಅಜರ್ಿದಾರನಾದ ರೂಪಚಂದ ತಂದೆ ತಿಪ್ಪಣ್ಣ ಚವ್ಹಾಣ ಸಾ|| ಹೊಸಕೇರಾ ಮೇಲಿನ ತಾಂಡಾ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ಪಿರ್ಯಾದಿ ಮತ್ತು ಆರೋಪಿತರ ನಡುವೆ ಮನೆಯ ಜಾಗದ ವಿಷಯದಲ್ಲಿ ತಕರಾರು ಇದ್ದು, ಇದೇ ವಿಷಯವಾಗಿ ದಿನಾಂಕ: 10/10/2020 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ, ಹೊಸಕೇರಾ ಮೇಲಿನ ತಾಂಡಾದ ಪಿರ್ಯಾದಿ ಮನೆಯ ಮುಂದೆ, ಪಿರ್ಯಾದಿ ಹಾಗೂ ಇತರರಿಗೆ ಆರೋಪಿತರೆಲ್ಲರೂ ಕೂಡಿ ಅವಾಚ್ಯ ಬೈದು, ಕೈಯಿಂದ, ಕಲ್ಲಿನಿಂದ, ಬಡಿಗೆಯಿಂದ ಹೊಡೆದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 112/2020 ಕಲಂ, 143, 147, 148, 323, 324, 354, 504, 506 ಸಂಗಡ 149 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಕೋಡೇಕಲ್ ಪೊಲೀಸ ಠಾಣೆ ಗುನ್ನೆ ನಂ: 113/2020 143, 147, 148, 323, 324, 354, 504, 506 ಸಂಗಡ 149 ಐಪಿಸಿ: ಇಂದು ದಿನಾಂಕ: 11/10/2020 ರಂದು 9-00 ಪಿಎಮ್ ಕ್ಕೆ ಅಜರ್ಿದಾರನಾದ ಶಂಕರ ತಂದೆ ಗನ್ನು ಜಾಧವ  ಸಾ|| ಹೊಸಕೇರಾ ಮೇಲಿನ ತಾಂಡಾ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ಪಿರ್ಯಾದಿ ಮತ್ತು ಆರೋಪಿತರ ನಡುವೆ ಮನೆಯ ಜಾಗದ ವಿಷಯದಲ್ಲಿ ತಕರಾರು ಇದ್ದು, ಇದೇ ವಿಷಯವಾಗಿ ದಿನಾಂಕ: 10/10/2020 ರಂದು ಸಾಯಂಕಾಲ ಗಂಟೆ ಸುಮಾರಿಗೆ, ಹೊಸಕೇರಾ ಮೇಲಿನ ತಾಂಡಾದ ಪಿರ್ಯಾದಿ ಮನೆಯ ಮುಂದೆ, ಪಿರ್ಯಾದಿ ಹಾಗೂ ಇತರರಿಗೆ ಆರೋಪಿತರೆಲ್ಲರೂ ಕೂಡಿ ಅವಾಚ್ಯ ಬೈದು, ಕೈಯಿಂದ, ಕಲ್ಲಿನಿಂದ, ಬಡಿಗೆಯಿಂದ ಹೊಡೆದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 112/2020 ಕಲಂ, 143, 147, 148, 323, 324, 354, 504, 506 ಸಂಗಡ 149 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!