ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/10/2020

By blogger on ಶನಿವಾರ, ಅಕ್ಟೋಬರ್ 17, 2020

 


                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/10/2020 

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 147/2020 ಕಲಂ 78 (3) ಕೆ.ಪಿ ಎಕ್ಟ : ಇಂದು ದಿನಾಂಕ 09-10-2020 ರಂದು 7-05 ಪಿಎಮ್ ಕ್ಕೆ ಶ್ರೀ ನಾನಗೌಡ ಎಸ್ ಮಗಿ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪತ್ರದೊಂದಿಗೆ ಜ್ಞಾಪನ ಪತ್ರ ನೀಡಿದ್ದು, ಅದರ ಸಾರಾಂಶವೆನೆಂದರೆ ಇಂದು ದಿನಾಂಕ. 09-10-2020 ರಂದು 5-30 ಪಿ.ಎಮ್ ಕ್ಕೆ ಠಾಣೆಯಲ್ಲಿರುವಾಗ ಯಾದಗಿರಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯ ಯರಗೋಳ ಗ್ರಾಮದಲ್ಲಿ ಯಾರೋ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಮಟಕಾ ಜೂಜಾಟ ಆಡುತ್ತಿದ್ದವರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಇಂದು ದಿನಾಂಕ 09-10-2020 ರಂದು 6-55 ಪಿ.ಎಮ್ ಕ್ಕೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಜ್ಞಾಪನಾ ಪತ್ರದ ಜೋತೆಯಲ್ಲಿ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ಸಲ್ಲಿಸಿದ್ದು ಇರುತ್ತದೆ.  ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 147/2020 ಕಲಂ 78 (3) ಕೆ.ಪಿ ಎಕ್ಟ ಅಡಿಯಲ್ಲಿ ಗುನ್ನ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. 1) ಒಬ್ಬ ಆರೋಪಿ:-(ಮೋನಪ್ಪಾ ತಂದೆ ಹಣಮಂತ ಹೀರೆಬಾನರ ವಯಾ; 55 ಜಾ: ಕಬ್ಬಲಿಗೇರ ಉ: ಒಕ್ಕಲುತನ ಸಾ: ಯರಗೋಳ)2) ನಗದು ಹಣ-10920-00 ರೂ3) ಒಂದು ಬಾಲಪೆನ್ನು4) ಒಂದು ಮಟಕಾ ಅಂಕಿ ಸಂಖ್ಯೆಗಳು ಬರೆದ ಚೀಟಿ


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 216/2020 ಕಲಂ: 341, 143, 147, 148, 323, 324, 326, 504, 506 ಸಂ.149 ಐಪಿಸಿ : ಇಂದು ದಿನಾಂಕಃ 08/10/2020 ರಂದು 9-30 ಪಿ.ಎಮ್ ಕ್ಕೆ ಶ್ರೀ ರತ್ನರಾಜ ತಂದೆ ದೇವಪುತ್ರಪ್ಪ ಶಾಲಿಮನಿ ಸಾ: ಶಾಂತಪೂರ, ತಾಃ ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಬಂಡೋಳ್ಳಿ ಗ್ರಾಮದ ಸಿಮಾಂತರದ ಸವರ್ೆ ನಂಬರ 28 ರಲ್ಲಿ ನಮ್ಮ ಹೊಲವಿದ್ದು, ನನ್ನ ಹೊಲದ ಪಕ್ಕದಲ್ಲಿ ನನ್ನ ಚಿಕ್ಕಪ್ಪನ ಮಗನಾದ ಶಾಂತರಾಜ ತಂದೆ ಮಲ್ಲಪ್ಪ ತೆಂಗಿನಮನಿ ಸಾ: ಶಾಂತಪೂರ ಇವರ ಹೊಲವಿರುತ್ತದೆ. ನಾನು ನಮ್ಮ ಹೊಲದ ಡೊಣ ಒಡೆದು ಯಾರು ಅತಿಕ್ರಮಣ ಮಾಡಬಾರದೆಂದು ನಮ್ಮ ಹಾಗು ಶಾಂತರಾಜ ಇಬ್ಬರ ಮದ್ಯದಲ್ಲಿರುವ ಡೊಣದ ಮೇಲೆ ಎರಡು ಕಡೆ ಮೂಲೆಯಲ್ಲಿ ಸಿಮೆಂಟಿನಿಂದ ನಿಮರ್ಿಸಿದ ಪಿಲ್ಲರ ಹಾಕಿರುತ್ತೇನೆ. ಅದನ್ನು ನೋಡಿದ ಶಾಂತರಾಜ ಹಾಗು ಅಣ್ಣ-ತಮ್ಮಂದಿರು ಪಿಲ್ಲರ ನಮ್ಮ ಹೊಲದ ಕಡೆಗೆ ಹಾಕಿದ್ದಿ, ತಗಿ ಅದನ್ನು ಅಂತ ಹೇಳಿ ತಕರಾರು ಮಾಡುತ್ತ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕಃ 07/10/2020 ರಂದು 7-30 ಪಿ.ಎಮ್ ಕ್ಕೆ ನಾನು ಮತ್ತು ನನ್ನ ಅಣ್ಣನಾದ ರವಿಕುಮಾರ ತಂದೆ ದೇವಪುತ್ರಪ್ಪ ಶಾಲಿಮನಿ ಇಬ್ಬರೂ ನಮ್ಮ ಹೊಲದಿಂದ ಮುಖ್ಯರಸ್ತೆಯ ಮುಖಾಂತರ ಕೈಯಲ್ಲಿ ಬ್ಯಾಟರಿ ಹಿಡಿದುಕೊಂಡು ಮನೆಗೆ ಬರುತ್ತಿದ್ದಾಗ ಬಂಡೋಳ್ಳಿ ಆಶ್ರಯ ಕಾಲೋನಿ ಸಮೀಪದ ನಮ್ಮೊಂದಿಗೆ ಹೊಲದ ಡೊಣದ ವಿಷಯವಾಗಿ ತಕರಾರು ಮಾಡುತ್ತ ಬಂದಿರುವ ನಮ್ಮೂರಿನ 1) ಶಾಂತರಾಜ ತಂದೆ ಮಲ್ಲಪ್ಪ ತೆಂಗಿನಮನಿ ಹಾಗು ಅಣ್ಣ-ತಮ್ಮಂದಿರಾದ 2) ಧನರಾಜ ತಂದೆ ಮಲ್ಲಪ್ಪ ತೆಂಗಿನ ಮನಿ 3) ಮಾನಯ್ಯ ತಂದೆ ಮಲ್ಲಪ್ಪ ತೆಂಗಿನಮನಿ 4) ಚಂದ್ರಶೇಖರ ತಂದೆ ಮಲ್ಲಪ್ಪ ತೆಂಗಿನಮನಿ ಹಾಗು ಅವರ ಮಕ್ಕಳಾದ 5) ಅಜಯ ತಂದೆ ಶಾಂತರಾಜ ತೆಂಗಿನಮನಿ, 6) ಕಿರಣ ತಂದೆ ಧನರಾಜ ತೆಂಗಿನಮನಿ ಹಾಗು ಶಾಂತರಾಜನ ಅಕ್ಕನ ಮಗನಾದ 7) ಮಂಜುನಾಥ ತಂದೆ ದುರ್ಗಪ್ಪ ಯರಡೋಣಿ ಸಾ: ಹಟ್ಟಿ ತಾಃ ಲಿಂಗಸುಗೂರ ಇವರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದವರೇ ಶಾಂತಪೂರ-ತಿಂಥಣಿ ಬ್ರಿಜ್ ರಸ್ತೆಯ ಪಕ್ಕದಲ್ಲಿರುವ ಮಲ್ಲಿಕಾಜರ್ುನ ಮಠದ ಹತ್ತಿರ ನಮ್ಮಿಬ್ಬರಿಗೆ ತಡೆದು ನಿಲ್ಲಿಸಿ ಅವರಲ್ಲಿ ಶಾಂತರಾಜ ಇತನು ಏನಲೇ ಮಗನೇ ರತ್ನ್ಯಾ ಡೊಣ ಬಿಟ್ಟು ನಮ್ಮ ಹೊಲದ ಕಡೆಗೆ ಪಿಲ್ಲರ ಹಾಕಿದ್ದಿ ಮಗನೇ, ಅದನ್ನು ತಗಿ ಅಂದರೂ ತಗಿತಾ ಇಲ್ಲಾ ಏನಲೇ ಅನ್ನುತ್ತ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡಹಣೆಯ ಮೇಲೆ ಹೊಡೆದು ನಂತರ ಬಡಿಗೆಯಿಂದ ಎಡಗಲ್ಲದ ಮೇಲೆ ತಿವಿದಿದ್ದರಿಂದ ಭಾರಿ ರಕ್ತಗಾಯವಾಗಿರುತ್ತದೆ. ಬಳಿಕ ಧನರಾಜ ಇತನು ಎರಡು ಕೈಯಿಂದ ನನಗೆ ಬಿಗಿಯಾಗಿ ಹಿಡಿದುಕೊಂಡು ಹೊಡಿರಿ ಸೂಳೆಮಗನಿಗೆ ಅಂದಾಗ ಮಾನಯ್ಯ ಮತ್ತು ಚಂದ್ರಶೇಖರ ಇಬ್ಬರೂ ಕೈಯಿಂದ ನನ್ನ ಎದೆಗೆ, ಬೆನ್ನಿಗೆ, ಕುತ್ತಿಗೆ ಮೇಲೆ ಹೊಡೆದಿದ್ದರಿಂದ ಗುಪ್ತಗಾಯಗಳಾಗಿರುತ್ತವೆ. ಅಜಯ ತಂದೆ ಶಾಂತರಾಜ ಇತನು ತನ್ನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಬಡಿಗೆಯಿಂದ ನನ್ನ ಅಣ್ಣ ರವಿಕುಮಾರ ಇತನ ತಲೆಯ ಮೇಲೆ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿದ್ದು ಕಿರಣ ಹಾಗು ಮಂಜುನಾಥ ಇಬ್ಬರೂ ಈ ಸೂಳೆ ಮಕ್ಕಳದು ಬಹಳ ಸೊಕ್ಕಿದೆ ಅನ್ನುತ್ತ ಕೈಯಿಂದ ನನ್ನ ಅಣ್ಣನ ಬೆನ್ನಿಗೆ, ಹೆಡಕಿಗೆ ಹಾಗು ಹೊಟ್ಟೆಯ ಮೇಲೆ ಹೊಡೆದಿರುತ್ತಾರೆ. ಆಗ ನಾವು ಚಿರಾಡುತ್ತಿದ್ದಾಗ ಸಮೀಪದ ಬಂಡೋಳ್ಳಿ ಆಶ್ರಯ ಕಾಲೋನಿ ನಿವಾಸಿಯಾದ ದ್ಯಾವಪ್ಪ ತಂದೆ ಗಂಗಪ್ಪ ಸಾಹುಕಾರ ಹಾಗು ನಮ್ಮೂರ ಕಡೆಯಿಂದ ಮೋ.ಸೈಕಲ್ ಮೇಲೆ ಬಂದ ತಿಮ್ಮಯ್ಯ ತಂದೆ ಸಿದ್ರಾಮಯ್ಯ ಕಲಾಲ, ಭೀಮರಾಯ ತಂದೆ ರಾಜಪ್ಪ ದೊಡ್ಡಮನಿ ಇಬ್ಬರೂ ಸಾ: ಶಾಂತಪೂರ ಇವರು ಬಂದು ಬಡಿಸಿದ್ದು, ಆಗ ಅವರೆಲ್ಲರೂ ಲೇ ಸೂಳೆ ಮಕ್ಕಳೆ, ಇವತ್ತು ಜನರು ಬಂದಾರಂತ ಉಳಿದಿದ್ದಿರಿ, ಡೊಣದ ಮೇಲೆ ಪಿಲ್ಲರ ತಗೆದರೆ ಒಳ್ಳೆಯದು, ಇಲ್ಲದಿದ್ದರೆ ಖಲಾಸ ಮಾಡಿಬಿಡುತ್ತೇವೆ ಎಂದು ಬೈಯ್ಯುತ್ತ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಆಗ ನಮಗೆ ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿ, ಇಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿರುತ್ತೇವೆ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 216/2020 ಕಲಂ. 341, 143, 147, 148, 323, 324, 326, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 217/2020 ಕಲಂ.143,147,148,323,324,341,354,504,506 ಸಂ. 149 ಐಪಿಸಿ : ಇಂದು ದಿನಾಂಕ; 09/10/2020 ರಂದು 2-15 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಸರಕಾರಿ ಸುರಪುರದಿಂದ ಎಮ್ ಎಲ್ ಸಿ ಇದೆ ಅಂತಾ ಮಾಹಿತಿ ಮೆರೆಗೆ ಆಸ್ಪತ್ರೆಗೆ 2-30 ಪಿ.ಎಮ್ ಕ್ಕೆ ಬೇಟಿ ನೀಡಿದಾಗ ಉಪಚಾರ ಪಡೆಯುತ್ತಿದ್ದ ಗಾಯಾಳುದಾರನಾದ ಶಾಂತರಾಜ ಶಾಂತಪೂರ ಇತನು ಒಂದು ಗಣಕೀಕರಿಸಿದ ಅಜರ್ಿ ನೀಡಿದ್ದು ಸಾರಾಂಶವೆನೆಂದರೆ, ಬಂಡೊಳ್ಳಿ ಸಿಮಾಂತರದ ಸವರ್ೆ ನಂಬರ 28 ರಲ್ಲಿ 3 ಎಕರೆ 30 ಗುಂಟೆ ಜಮೀನು ಇದ್ದು ನಮ್ಮ ತಂದೆಯ ಹೆಸರಿನಲ್ಲಿರುತ್ತದೆ. ನಮ್ಮ ಹೊಲದ ಪಕ್ಕದಲ್ಲಿ ನಮ್ಮ ಅಣ್ಣತಮಕಿಯಾದ ರತ್ನರಾಜಾ ತಂದೆ ದೇವಪುತ್ರಪ್ಪ ಶಾಲಿಮದಿವರ ಹೊಲವಿರುತ್ತದೆ. ನಮ್ಮ ಹಾಗೂ ರತ್ನರಾಜಾ ಇಬ್ಬರ ಮಧ್ಯದಲ್ಲಿರುವ ರತ್ನರಾಜಾ ಇವರು ಡೊಣದ ಮೇಲೆ ಎರಡು ಕಡೆ ಮೂಲೆಯಲ್ಲಿ ಸಿಮೆಂಟಿನಿಂದ ಪಿಲ್ಲರ ಹಾಕಿದ್ದನು. ಅದನ್ನು ನೋಡಿದ ನಾನು ಪಿಲ್ಲರ ನಮ್ಮ ಹೊಲದಲ್ಲಿ ಹಾಕಿದ್ದಿ ಅದನ್ನು ತಗಿ ಅಂತಾ ಹೇಳಿದಾಗ ರತ್ನರಾಜಾ ಹಾಗೂ ಅವರ ಕಡೆಯವರು ನಾವು ತಗೆಯುವದಿಲ್ಲ ಅಂತಾ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿದ್ದರು. ಹೀಗಿದ್ದು ದಿನಾಂಕ:07/10/2020 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಣ್ಣಂಧಿರರಾದ ಧನರಾಜ ತಂದೆ ಮಲ್ಲಪ್ಪ , ಮೌನೇಶ ತಂದೆ ಮಲ್ಲಪ್ಪ, ಚಂದ್ರೇಶೇಖರ ತಂದೆ ಮಲ್ಲಪ್ಪ ನನ್ನ ತಾಯಿಯಾದ ಸುಂದರಮ್ಮ ಗಂಡ ಮಲ್ಲಪ್ಪ ಐದು ಜನರು ನಮ್ಮ ಹೊಲದಿಂದ ಮುಖ್ಯ ರಸ್ತೆಯ ಮುಖಾಂತರ ಕೈಯಲ್ಲಿ ಬ್ಯಾಟರಿ ಹಿಡಿದುಕೊಂಡು ಬಂಡೊಳ್ಳಿ ಆಶ್ರಯ ಕಾಲೋನಿ ಹತ್ತಿರ ಮನೆ ಕಡೆ ಬರುತ್ತಿರುವಾಗ ನಮ್ಮೋಂದಿಗೆ ತಕರಾರು ಮಾಡುತ್ತಿದ್ದ 1) ಜ್ಞಾನಮಿತ್ರ ತಂದೆ ದೇವಪುತ್ರಪ್ಪ .2) ರಾಜಪ್ಪ ತಂದೆ ಬೀಮಪ್ಪ 3) ಪೀಲಿಪ್ ತಂದೆ ರಾಜಪ್ಪ 4) ರವಿ ತಂದೆ ದೇವಪುತ್ರಪ್ಪ 5) ರತ್ನರಾಜ ತಂದೆ ದೇವಪುತ್ರಪ್ಪ 6) ಸಂಜಯ ತಂದೆ ಶಂಕರೆಪ್ಪ ಕುರಡಿ 7) ಶಾಂತಮ್ಮ ಗಂಡ ಸಂಜೀವ ಕುರಡಿ ಎಲ್ಲರೂ ಗುಂಪುಕಟ್ಟಿಕೊಂಡು ಬಂದವರೆ ನಮ್ಮೆಲ್ಲರನ್ನು ತಡದು ನಿಲ್ಲಿಸಿ ಅವರಲ್ಲಿ ಜ್ಞಾನಮಿತ್ರ ಈತನು ಎಲೇ ಬೊಸಡಿ ಮಕ್ಕಳೆ ನಮ್ಮ ಹೊಲದ ಡೊಣದಲ್ಲಿ ಪಿಲ್ಲರ ಹಾಕಿದ್ದರೆ ನಿಮ್ಮದೇನು ತಕರಾರು ಮಕ್ಕಳೆ ಅಂತಾ ಅವಾಚ್ಯ ಬೈದವರೆ ಜ್ಷಾನಮಿತ್ರ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡಗಡೆ ಬುಜಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ರಾಜಪ್ಪ ಮತ್ತು ಪಿಲೀಪ್ ಮತ್ತು ರವಿ , ರತ್ನಪ್ಪ ,ಸಂಜಯ ಇವರೆಲ್ಲರೂ ನನ್ನ ಅಣ್ಣಂದಿರರಾದ ಧನರಾಜ ಮತ್ತು ಮೌನೇಶ, ಚಂದ್ರಶೇಖರ ಮೂವರಿಗೂ ತೆಕ್ಕೆಯಲ್ಲಿ ಹಿಡಿದುಕೊಂಡು ಕೈಯಿಂದ ಗುದ್ದಿ ಕಾಲಿನಿಂದ ಒದ್ದರು ಶಾಂತಮ್ಮ ಇವಳು ತಾಯಿ ಸುಂದರಮ್ಮ ಇವಳ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಜಗ್ಗಾಡುತ್ತಿರುವಾಗ ಜ್ಷಾನಮಿತ್ರ ಈತನು ತಾಯಿ ಸುಂದರಮ್ಮ ಇವಳ ಸಿರೆ ಹಿಡಿದು ಎಳೆದಾಡಿ ಅವಮಾನ ಮಾಡಿ ನುಕಿಸಿಕೊಟ್ಟು ಎಲ್ಲರಿಗೂ ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ಆಗ ಅದೇ ಸಮಯಕ್ಕೆ ಮೌನೇಶ ತಂದೆ ದುರ್ಗಪ್ಪ, ಗಂಗಪ್ಪ ತಂದೆ ಭೀಮಪ್ಪ, ಗೋವಿಂದ ತಂದೆ ಹಣಮಪ್ಪ ಸಾ:ವಜ್ಜಲ್ ಇವರು ಜಗಳನ್ನು ನೋಡಿ ಬಿಡಿಸಿದರು. ಆಗ ಅವರು ನಮ್ಮ ಹೊಲದ ಪಿಲ್ಲರ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ. ಅಂದು ರಾತ್ರಿಯಾಗಿದ್ದರಿಂದ ನಾವು ಮನೆಯಲ್ಲಿಯೆ ಇದ್ದು ಗಾಯಗೊಂಡ ನನ್ನ ತಾಯಿಯಾದ ಸುಂದರಮ್ಮ ನಾನು ಇಬ್ಬರು ಸುರಪೂರ ಸರಕಾರಿ  ಆಸ್ಪತ್ರೆ ಬಂದು ಉಪಚಾರ ಪಡೆದುಕೊಂಡಿದ್ದು ನನ್ನ ತಾಯಿಗೆ ಹೆಚ್ಚಿನ ಉಪಚಾರ ಲಿಂಗಸೂರ ಕಳಿಸಿದ್ದು ಇರುತ್ತದೆ. ನಾನು ಸರಕಾರಿ ಆಸ್ಪತ್ರೆ ಸುರಪೂರದಲ್ಲಿಯೆ ಉಪಚಾರ ಪಡೆಯುತ್ತಿದ್ದ ಇರುತ್ತದೆ. ನಮಗೆ ಹೊಡೆ ಬಡೆ ಮಾಡಿದ ಮೇಲೆ ಹೇಳಿದ 7 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ. 217/2020 ಕಲಂ.143,147,148, 323,341, 324, 354, 504,506 ಸಂ. 149 ಐಪಿಸಿನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 218/2020 ಕಲಂ: 87 ಕೆ.ಪಿ.ಕಾಯ್ದೆ : ಇಂದು ದಿನಾಂಕ: 09-10-2020 ರಂದು 8:30 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ.ಕರ್ತವ್ಯದಲ್ಲಿದ್ದಾಗ ಶ್ರೀ ಚಂದ್ರಶೇಖರ್ ಪಿಎಸ್ಐ (ಕಾ&ಸು-2) ಸಾಹೇಬರು 6 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:09/10/2020 ರಂದು 4:15 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಪೂರ ಗ್ರಾಮದ ಸಿದ್ಧಾರೂಢ ಮಠದ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಶ್ರೀ ಮನೋಹರ್ 3) ಶ್ರೀ ಮಂಜುನಾಥ ಸಿಪಿಸಿ-271 4) ಶ್ರೀ ಪರಮೇಶ ಸಿಪಿಸಿ-142 ಇವರೆಲ್ಲರಿಗೂ ವಿಷಯ ತಿಳಿಸಿ,  ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು  ಇಬ್ಬರು ಪಂಚರಾದ 1) ಶ್ರೀ ಮಾನಪ್ಪ ತಂದೆ ಹಣಮಂತ ದೇವಣಗಾಂವ ವಯಾ:50 ವರ್ಷ ಉ:ಒಕ್ಕಲುತನ ಜಾ:ಬೇಡರ ಸಾ:ಹುಣಸಿಹೊಳೆ ತಾ:ಸುರಪೂರ 2) ಹಿಮಾಮಸಾಬ್ ತಂದೆ ದಾವಲಸಾಬ್ ಹವಲ್ದಾರ ವ|| 60 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ತಿಂಥಣಿ ತಾ|| ಸುರಪುರ ಇವರನ್ನು 4:45 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33.ಜಿ-0094 ನೇದ್ದರಲ್ಲಿ ಠಾಣೆಯಿಂದ ಹೊರಟು 5:45 ಪಿ.ಎಂ ಕ್ಕೆ ಶಾಂತಪೂರ ಗ್ರಾಮದ ಸಿದ್ದಾರೂಢ ಮಠದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಸಿದ್ದಾರೂಢ ಮಠದ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 5:50 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 6 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಭೀಮರಾಯ ಮರಿಲಿಂಗಪ್ಪ ವಂದಲಿ ಜಾ|| ಕುರುಬರ ವ|| 30 ವರ್ಷ ಉ|| ಕೂಲಿ ಸಾ|| ಹುಣಸಿಹೊಳೆ ತಾ|| ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಮಾನಪ್ಪ ತಂದೆ ಭೀಮರಾಯ ಗೋನಾಟ್ಲೆ ವ|| 40 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಹುಣಸಿಹೊಳೆ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1500/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಹುಸೇನ್ಸಾಬ್ ತಂದೆ ನಬಿಸಾಬ್ ನದಾಫ್ ವ|| 54 ವಷ್ ಉ|| ಒಕ್ಕಲುತನ ಸಾ|| ಹುಣಸಿಹೊಳೆ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1200/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಮಾನಯ್ಯ ತಂದೆ ಹಣಮಂತ್ರಾಯ ಹೂಗಾರ ಜಾ|| ಹೂಗಾರ ವ|| 45 ವರ್ಷ ಉ|| ಒಕ್ಕಲುತನ ಸಾ|| ಹುಣಸಿಹೊಳೆ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1350/- ರೂಗಳು ವಶಪಡಿಸಿಕೊಳ್ಳಲಾಯಿತು. 5) ರಾಚಯ್ಯ ತಂದೆ ಶಿವಯ್ಯ ಸ್ವಾಮಿ ಜಾ|| ಜಂಗಮ ವ|| 42 ವರ್ಷ ಉ|| ಕೂಲಿ ಸಾ|| ಬುಂಕಲದೊಡ್ಡಿ ತಾ|| ದೇವದುರ್ಗ ಜಿ|| ರಾಯಚೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಹಂಪಣ್ಣ ತಂದೆ ಈರಣ್ಣ ಅಂಗಡಿ ಜಾ|| ಲಿಂಗಾಯತ್ ವ|| 39 ವರ್ಷ ಉ|| ಹೊಟೆಲ್ ವ್ಯಾಪಾರ ಸಾ|| ತಿಂಥಣಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1850/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 6210/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 14210/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:55 ಪಿ.ಎಮ್ ದಿಂದ 6:55 ಪಿ.ಎಮ್ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದು ಇರುತ್ತದೆ. ನಂತರ 6 ಜನಆರೋಪಿರೊಂದಿಗೆ ಮರಳಿ ಠಾಣೆಗೆ 8 ಪಿ.ಎಂಕ್ಕೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 218/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡುತನಿಖೆಕೈಕೊಂಡೇನು.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 128/2020, ಕಲಂ, 323,354,504.506. ಸಂಗಡ 34 ಐ ಪಿ ಸಿ  :  ದಿನಾಂಕ: 09-10-2020 ಸಾಯಂಕಾಲ 06-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ಪಿಯರ್ಾಧಿದಾರಳು ಮತ್ತು ಆಕೆಯ ಮಗ ದಿನಾಂಕ: 08-10-2020 ರಂದು ಮದ್ಯಾಹ್ನ 03-00 ಗಂಟೆಗೆ  ತಮ್ಮ ಹೊಲದಲ್ಲಿ ಕಲ್ಲು ನೆಡುಹಾಕುತ್ತಿರುವಾಗ ಆರೋಪಿ ರಾಜಪ್ಪ ಈತನು ನನಗೆ ಲೇ ಸೂಳಿ ಮಗಳೆ ನಿನ್ನ ಗಂಡ ಬಂದು ಕಲ್ಲು ಹಾಕಲಿ ನಿನ್ನದು ಎನ ಆದಲೇ ನೀನು ಯಾಕೆ ಹಾಕುತ್ತಲೆ ಬೋಸಡಿ ರಂಡಿ ಅಂದು ಕೈಯಿಂದ ಕಪಾಳಕ್ಕೆ ಹೊಡೆದನು ಆಗ ನಾನು ಹಿಂದಕ್ಕೆ ಸರಿದಾಗ ಸಿದ್ದಪ್ಪ ಈತನು ನನಗೆ ಹಿಂದಿನಿಂದ ಸೀರೆ ಸೇರಗು ಹಿಡಿದು ಎಳದಾಡಿ ಕೆಳಗೆ ಬಿಳಿಸಿ ಅವಮಾನ ಮಾಡಿದನು. ತಾಯಪ್ಪ ಈತನು ಲೇ ಸೂಳೆ ಮಗಳೆ ನಿನ್ನ ಕಾಲಾಗ ನಮಗೆ ಸಾಕ ಸಾಕ ಆಗಿದೆ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇವೆ ಮಗಳೆ ನೀನು ಹೆಂಗ ಕಲ್ಲು ಹಾಕುತಿ ಅಂದು ಜೀವದ ಬೇದರಿಕೆ ಹಾಕಿ ಇನ್ನೊಂದು ಸಲ ನಮ್ಮ ಹೊಲದ ತಂಟೆಗೆನಾದರೂ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಮಗಳೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ  ಪಿಯರ್ಾಧಿ ಸಾರಂಶ ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ: 159/2020 ಕಲಂ: 379 ಐ.ಪಿ.ಸಿ : ಇಂದು ದಿ: 09/10/2020 ರಂದು 11.15 ಎಎಮ್ ಕ್ಕೆ ಫಿಯರ್ಾದಿದಾರರು ಠಾಣೆಗೆ  ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೆನೆಂದರೇ ಹಿರೋ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ ಕೆಎ-33.ವ್ಹಿ-5116 ಸಿಲ್ವರ ಬಣ್ಣದ ಮೋಟಾರ ಸೈಕಲ ಇದ್ದು ಸದರಿ ಮೋಟಾರ ಸೈಕಲ ಮಾಡಲ್ 2017 ನೇದ್ದು ಇದ್ದು ಸದರಿ ಮೋಟಾರ ಸೈಕಲನ್ನು ದಿನಾಲು ನಾನೇ ನಡೆಸಿಕೊಂಡು ಇರುತ್ತೇನೆ. ಹೀಗಿದ್ದು ದಿನಾಂಕ 30/09/2020 ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಕೆಲಸದ ನಿಮಿತ್ಯ ಕೆಂಭಾವಿಗೆ ಬಂದು ಕೆಂಭಾವಿ ಪಟ್ಟಣದ ಎಸ್ಬಿಐ ಬ್ಯಾಂಕ್ನಲ್ಲಿ ಕೆಲಸವಿದ್ದ ನಿಮಿತ್ಯ ಬ್ಯಾಂಕ್ ಮುಂದೆ ನನ್ನ ಮೋಟರ ಸೈಕಲ್ ನಿಲ್ಲಿಸಿ ಒಳಗಡೆ ಹೋಗಿ ನನ್ನ ಕೆಲಸ ಮುಗಿಸಿಕೊಂಡು ಮರಳಿ ನನ್ನ ಮೋಟರ ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲು ಸ್ಥಳದಲ್ಲಿ ನನ್ನ ಮೋಟರ ಸೈಕಲ್ ಇರಲಿಲ್ಲ. ನಂತರ ನಾನು ಗಾಬರಿಯಾಗಿ ಕೆಂಭಾವಿ ಪಟ್ಟಣದ ಬಸ್ ನಿಲ್ದಾಣ, ಸಂಜೀವನಗರ ಕ್ರಾಸ್, ಹುಣಸಗಿ ರೋಡ್ ಹೀಗೆ ಪಟ್ಟಣದ ಎಲ್ಲ ಕಡೆ ಹುಡುಕಾಡಲಾಗಿ ಸದರಿ ನನ್ನ ಮೋಟರ ಸೈಕಲ್ ಸಿಗಲಿಲ್ಲ. ನಂತರ ಕಳುವಾದ ಮೋಟರ ಸೈಕಲ್ ಪತ್ತೆ ಕುರಿತು  ಶಹಾಪುರ, ಸುರಪುರ, ಹುಣಸಗಿ, ತಾಳಿಕೋಟಿ ಎಲ್ಲ ಕಡೆ ಹೋಗಿ ನನ್ನ ಮೋಟರ್ ಸೈಕಲ್ ಹುಡುಕಾಡಲಾಗಿ ಎಲ್ಲಿಯೂ ಸಿಗಲಿಲ್ಲವಾದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡಿದ್ದು ಇರುತ್ತದೆ.ಕಾರಣ ದಿನಾಂಕ 30/09/2020 ರಂದು ಬೆಳಿಗ್ಗೆ 10.00 ಗಂಟೆಯಿಂದ 12.00 ಗಂಟೆಯ ಮದ್ಯದ ಅವಧಿಯಲ್ಲಿ ಎಸ್ಬಿಐ ಬ್ಯಾಂಕ್ ಕೆಂಭಾವಿಯ ಮುಂದೆ ನಿಲ್ಲಿಸಿದ ನನ್ನ ಮೋಟರ ಸೈಕಲ ಅಂದಾಜು ಕಿಮ್ಮತ್ತು 30,000/- ರೂ. ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆಮಾಡಿ ಕಾನೂನು ಪ್ರಕಾರ ಕ್ರಮಕೈಕೊಳ್ಳಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವಿರುತ್ತದೆ.



ಕೋಡೇಕಲ್ ಪೊಲೀಸ ಠಾಣೆ ಗುನ್ನೆ ನಂ: ಯು.ಡಿ.ಆರ್ ನಂ: 16/2020 ಕಲಂ: 174 ಸಿ.ಆರ್.ಪಿ.ಸಿ : ಇಂದು ದಿನಾಂಕ:09.10.2020 ರಂದು ಬೆಳಿಗ್ಗೆ 10:45 ಗಂಟೆಗೆ ಪಿಯರ್ಾದಿ ಶಾಂತಪ್ಪ ತಂದೆ ಧರ್ಮಪ್ಪ ರಾಠೋಡ ವ:55 ವರ್ಷ ಜಾ:ಹಿಂದೂ ಲಂಬಾಣಿ ಉ:ಒಕ್ಕಲುತನ ಸಾ:ಮನ್ನಾನಾಯಕ ತಾಂಡಾ ಬರದೇವನಾಳ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ಮಾಡಿಸಿಕೊಂಡು ಪಿಯರ್ಾದಿಯ ಅಜರ್ಿಯನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶ ಏನೆಂದರೆ, ನಮ್ಮ ತಂದೆ-ತಾಯಿಗೆ ಭೀಮಪ್ಪ, ನಾನು, ಶಂಕ್ರಪ್ಪ, ನೀಲಪ್ಪ, ಶಿವಪ್ಪ ಅಂತಾ ಹೆಸರಿನ ಐದು ಜನ ಗಂಡು ಮಕ್ಕಳಿದ್ದು ನಮ್ಮೆಲ್ಲರದ್ದೂ ಮದುವೆಯಾಗಿದ್ದು ನಾವೆಲ್ಲರು ನಮ್ಮ ನಮ್ಮ ಕುಟುಂಬದೊಂದಿಗೆ ಬೇರೆ ಬೇರೆ ಇರುತ್ತೇವೆ. ನಮ್ಮ ತಮ್ಮ ನೀಲಪ್ಪನ ಹಾಗೂ ನಮ್ಮ ಮನೆ ಅಕ್ಕ-ಪಕ್ಕದಲ್ಲಿಯೇ ಇದ್ದು ನನ್ನ ತಮ್ಮನಾದ ನೀಲಪ್ಪನಿಗೆ ಮೀನಾಕ್ಷಿ, ಅರುಣ, ಸಚಿನ್ ಅಂತಾ ಮೂರು ಜನ ಮಕ್ಕಳಿದ್ದು, ನನ್ನ ತಮ್ಮನಾದ ನೀಲಪ್ಪದು ಬರದೇವನಾಳ ಸೀಮಾಂತರದಲ್ಲಿ ಹೊಲ ಸವರ್ೇ ನಂ:28 ರಲ್ಲಿ 3 ಎಕರೆ ಜಮೀನು ಇದ್ದು ಹೊಲದ ಹೆಸರು ಬಸಮ್ಮನ ಕೇರಿ ಹೊಲ ಅಂತಾ ಇದ್ದು, ಈ ಹೊಲದಲ್ಲಿ ಸದ್ಯ ಹತ್ತಿಬೆಳೆ ಇರುತ್ತದೆ. ಹೀಗಿರುವಾಗ ನಿನ್ನೆ ದಿನಾಂಕ:08.10.2020 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನನ್ನ ತಮ್ಮ ನೀಲಪ್ಪ ಆತನ ಹೆಂಡತಿ ಕಮಲಾಕ್ಷಿ ಹಾಗೂ ನನ್ನ ಮಗನಾದ ಬಲರಾಮ ಹಾಗೂ ಅವನ ಹೆಂಡತಿ ಶಾರೂಬಾಯಿ ಮತ್ತು ನನ್ನ ತಮ್ಮ ನೀಲಪ್ಪನ ಮಗ ಅರುಣ ಎಲ್ಲರೂ ಕೂಡಿ ನನ್ನ ತಮ್ಮನ ಬಸಮ್ಮನಕೇರಿ ಹೊಲಕ್ಕೆ ಹತ್ತಿ ಬೆಳೆಗೆ ಕ್ರಿಮಿನಾಶಕ ಔಷಧವನ್ನು ಸಿಂಪಡಿಸಲು & ಕಳೆ ತೆಗೆಯಲು ಹೋಗಿದ್ದು ಅರುಣನು ತಮ್ಮ ಹೊಲದಲ್ಲಿ ಹತ್ತಿ ಬೆಳೆಗೆ ಕ್ರಿಮಿನಾಶಕ ಔಷಧವನ್ನು ಸಿಂಪಡಿಸಿದ್ದು, ನಂತರ ನಿನ್ನೆ ಸಾಯಂಕಾಲ 7:00 ಗಂಟೆಯ ಸುಮಾರಿಗೆ ಇವರೆಲ್ಲರೂ ಹೊಲದಿಂದ ಮನೆಗೆ ಬಂದಿದ್ದು ನಂತರ ರಾತ್ರಿ 8:30 ಗಂಟೆಯ ಸುಮಾರಿಗೆ ನನ್ನ ತಮ್ಮನ ಮಗನಾದ ಅರುಣ ರಾಠೋಡ ವ:20 ವರ್ಷ ಈತನು ತನಗೆ ಮಬ್ಬು ಮಬ್ಬು ಆಗುತ್ತಿದೆ ಚಕ್ರ ಬರುತ್ತಿದೆ ಅಂತಾ ಅನ್ನುತ್ತಿದ್ದು ಹಾಗೂ ವಾಂತಿಮಾಡಿಕೊಳ್ಳ ಹತ್ತಿದ್ದು ಆಗ ನಾನು & ಅವನ ತಂದೆ-ತಾಯಿಯವರು ಅರುಣನಿಗೆ ವಿಚಾರಿಸಲಾಗಿ ಹೊಲದಲ್ಲಿ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪರಣೆ ಮಾಡುವಾಗ ಜೋಗಾರಿ ಗಾಳಿ ಬೀಸುತ್ತಿದ್ದುದರಿಂದ ನಾನು ಸಿಂಪರಣೆಮಾಡುತ್ತಿದ್ದ ಕ್ರಿಮಿನಾಶಕ ಔಷಧವು ಬಾಯಿಗೆ & ಮೈಮೇಲೆ ಎಲ್ಲಾ ಸಿಡಿದಿದ್ದಾಗಿ ತಿಳಿಸಿದ್ದು ಆಗ ನನ್ನ ತಮ್ಮ, ತಮ್ಮನ ಹೆಂಡತಿ ಕಮಲಾಕ್ಷಿ, ನನ್ನ ಅಣ್ಣ ಭೀಮಪ್ಪನ ಮಗನಾದ ಕುಮಾರ ಹಾಗೂ ನಾನು ಎಲ್ಲರೂ ಕೂಡಿಕೊಂಡು ಅರುಣನಿಗೆ ಉಪಚಾರಕ್ಕಾಗಿ ರಾತ್ರಿ 10:00 ಗಂಟೆಯ ಸುಮಾರಿಗೆ ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿದ್ದು, ಕೊಡೆಕಲ್ಲ ಆಸ್ಪತ್ರೆಯ ವೈಧ್ಯರು ಅರುಣನಿಗೆ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದು ಆಗ ನನ್ನ ತಮ್ಮ ನೀಲಪ್ಪ, ಅವನ ಹೆಂಡತಿ ಕಮಲಾಕ್ಷಿ ಹಾಗೂ ನನ್ನ ಅಣ್ಣನ ಮಗ ಕುಮಾರ ರವರು ಕೂಡಿ ಅರುಣನಿಗೆ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರಕ್ಕೆ ಕರೆದುಕೊಂಡು ಹೋಗಿದ್ದು ನಾನು ಕೊಡೆಕಲ್ಲದಿಂದ ನಮ್ಮ ತಾಂಡಾ ಹೋಗಿ ಮನೆಯಲ್ಲಿದ್ದು, ಇಂದು ದಿನಾಂಕ:09.10.2020 ರಂದು ಬೆಳಿಗ್ಗೆ 09:20 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ವಿಜಯಪೂರ ಆಸ್ಪತ್ರೆಗೆ ಹೋದ ನನ್ನ ತಮ್ಮ ನೀಲಪ್ಪನು ನನಗೆ ಫೋನ್ ಮಾಡಿ ಅರುಣನು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೇ ಇಂದು ಬೆಳಿಗ್ಗೆ 09:15 ಗಂಟೆಗೆ ಮೃತಪಟ್ಟಿದ್ದು ನೀನು ಕೊಡೆಕಲ್ಲ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ಕೊಡು ಅಂತಾ ತಿಳಿಸಿದ್ದರಿಂದ ನಾನು ಈಗ ಬಂದು ದೂರು ಕೊಡುತ್ತಿದ್ದು, ನನ್ನ ತಮ್ಮನ ಮಗ ಅರುಣ ಈತನು ನಿನ್ನೆ ದಿನ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ತಮ್ಮ ಹೊಲದಲ್ಲಿ ಹತ್ತಿ ಬೆಳಗೆ ಕ್ರಿಮಿನಾಶಕ ಔಷಧವನ್ನು ಸಿಂಪರಣೆಮಾಡುವಾಗ ಗಾಳಿಯ ಮುಖಾಂತರ ಕ್ರಿಮಿನಾಶಕವು ಅವನ ಬಾಯಿ & ದೇಹಕ್ಕೆ ತಗುಲಿ ಚರ್ಮದ ಮೂಲಕ ದೇಹದ ಒಳಗೆ ಹೋಗಿದ್ದರಿಂದ ಅರುಣಿಗೆ ಉಪಚಾರಕ್ಕಾಗಿ ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ವಿಜಯಪೂರ ಬಿ.ಎಲ್.ಡಿ.ಈ ಆಸ್ಪತ್ರೆಗೆ ಸೇರಿಕೆಮಾಡಿದಾಗ ಉಪಚಾರ ಫಲಿಸದೇ ಇಂದು ದಿನಾಂಕ:09.10.2020 ರಂದು ಬೆಳಿಗ್ಗೆ 09:15 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಅರುಣನ ಮರಣದಲ್ಲಿ ಯಾರ ಮೇಲೂ ಯಾವುದೇ ಸಂಶಯ, ದೂರು ಇರುವುದಿಲ್ಲಾ ಅರುಣನ ಶವವು ವಿಜಯಪೂರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಇದ್ದು ತಾವು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿಯ ದೂರಿನ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂ.16/2020 ಕಲಂ: 174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.



ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:-  69/2020  ಕಲಂ:, 279,337,338, ಐಪಿಸಿ. : ಇಂದು ದಿನಾಂಕ 09/10/2020 ರಂದು 3:00 ಪಿ.ಎಂ ಕ್ಕೆ ಪಿಯರ್ಾದಿ ಶ್ರೀ ನಿಂಗಪ್ಪ ತಂದೆ ಕೋಟಪ್ಪ ಜಾದವ ವ:53ವರ್ಷ ಉ:ಒಕ್ಕಲುತನ ಜಾ:ಹಿಂದು ಲಮಾಣಿ ಸಾ:ಬ್ಯಾಲದಗಿಡದ ತಾಂಡಾ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪುಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಸದರಿ ಪಿಯರ್ಾದಿಯ ಅಜರ್ಿಯ ಸಾರಾಂಶವೆನೆಂದರೆ ಇಂದು ದಿನಾಂಕ 09/10/2020 ರಂದು ನನ್ನ ಮಗ ಕುಮಾರ ತಂದೆ ನಿಂಗಪ್ಪ ಜಾದವ ವ:30 ವರ್ಷ ಈತನು ನಮ್ಮ ಹೊಲಕ್ಕೆ ಹೊಡೆಯುವ ಎಣ್ಣಿ ಪಂಪ ರಿಪೇರಿ ಮಾಡಿಸಿಕೊಂಡು ಬರುವ ಸಲುವಾಗಿ ನಮ್ಮ ಹಿರೋ ಹೊಂಡಾ ಸ್ಪೆಲಂಡರ ಪ್ಲಸ್ ಮೋಟರ ಸೈಕಲ್ನ್ನು ತಗೆದುಕೊಂಡು ನಾಲತವಾಡಕ್ಕೆ ಹೋಗಿದ್ದನು. ಇಂದು ಮದ್ಯಾಹ್ನ 1:30 ಪಿ.ಎಂ ಸುಮಾರಿಗೆ ನಾನು ನನ್ನ ಹಿರಿಯ ಮಗ ಗೋಪಾಲ ಇಬ್ಬರು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಪಂಪ್ ಮಾಡಿಸಿಕೊಂಡು ಬರಲುಹೋದ ನನ್ನ ಎರಡನೆಯ ಮಗ ಕುಮಾರ ಈತನು ನನಗೆ ಪೋನಮಾಡಿ ತಿಳಿಸಿದ್ದೆನೆಂದರೆ ತಾನು ಪಂಪ ರಿಪೇರಿ ಮಾಡಿಸಿಕೊಂಡು ಮರಳಿ ತಾಂಡಾಕ್ಕೆ ಬರುವಾಗ ಎಣ್ಣಿವಡಗೇರಾ ಸೀಮಾಂತರದಲ್ಲಿ ಬರುತ್ತಿರುವಾಗ ಎದುರಿನಿಂದ ಬಂದ ಕಾರು ಡಿಕ್ಕಿಹೊಡಿಸಿದ್ದು ತಾನು ಬಿದ್ದಿರುತ್ತೇನೆ ಕೂಡಲೇ ಬರಬೇಕು ಅಂತಾ ತಿಳಿಸಿದನು, ಆಗ ನಾನು ಹಾಗೂ ನನ್ನ ಹಿರಿಯ ಮಗ ಗೋಪಾಲ ಮತ್ತು ನಮ್ಮ ತಾಂಡಾದ ನಮ್ಮ ಸಂಬಂದಿ ಬದ್ದು ತಂದೆ ಗೋವಿಂದ ಜಾದವ ಹಾಗೂ ಮೋತಿಲಾಲ ತಂದೆ ರಾಮಪ್ಪ ಜಾದವ ರವರು ಕೂಡಿಕೊಂಡು ನನ್ನ ಮಗನು ಬಿದ್ದ ಸ್ಥಳಕ್ಕೆ ಹೋಗಿ ನೋಡಿದ್ದು ಅಲ್ಲಿ ನನ್ನ ಮಗ ಕುಮಾರನು ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡಿದ್ದನು, ನಾವು ಹೋಗಿ ನನ್ನ ಮಗ ಕುಮಾರನಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ಅವನು ತಿಳಿಸಿದ್ದೆನೆಂದರೆ ನಾನು ಪಂಪ ರಿಪೇರಿ ಮಾಡಿಸಿಕೊಂಡು ಮರಳಿ ತಾಂಡಾಕ್ಕೆ ಬರುವ ಸಲುವಾಗಿ ನಾಲತವಾಡದಿಂದ ಬರುತ್ತಿದ್ದಾಗ ನಾಲತವಾಡ ಯಣ್ಣಿವಡಗೇರಾ ಮುಖ್ಯ ರಸ್ತೆಯಮೇಲೆ ಯಣ್ಣಿವಡಗೇರಾ ಸೀಮಾಂತರದ ಕಲ್ಯಾಣರಾವ ಕುಲಕಣರ್ಿ ರವರ ಹೊಲದ ಹತ್ತಿರ 1:20 ಪಿ.ಎಂ ಸುಮಾರಿಗೆ ನಾನು ಮೋಟರ ಸೈಕಲ್ ತಗೆದುಕೊಂಡು ಬರುತ್ತಿರುವಾಗ ಎದುರುಗಡೆಯಿಂದ ಕಾರ ನಂ ಕೆ.ಎ.33 ಎಂ-7917 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾನು ಹೋಗುತ್ತಿದ್ದ ಮೋಟರ ಸೈಕಲ್ಗೆ ಡಿಕ್ಕಿಪಡಿಸಿದ್ದು ನಾನು ಮೋಟರ ಸೈಕಲ್ ಸಮೇತ ಕೆಳಗಡೆ ಬಿದ್ದೆನು ಮೊಟರ ಸೈಕಲ್ದಿಂದ ಬಿದ್ದಿದ್ದರಿಂದ ನನಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ಒಳಪೆಟ್ಟಾಗಿ ನನ್ನ ಕಾಲು ಮುರಿದಿದ್ದು ಮುಖಕ್ಕೆ ಅಲ್ಲಲ್ಲಿ ತರುಚಿದ ಗಾಯಗಳಾಗಿದ್ದು ಅಲ್ಲಲ್ಲಿ ಒಳಪೆಟ್ಟಾಗಿರುತ್ತದೆ ಅಂತಾ ತಿಳಿಸಿದನು. ನಾವು ನೊಡಿದಾಗ ನನ್ನ ಮಗನು ಹೇಳಿದಂತೆ ಅವನಿಗೆ ಗಾಯಗಳಾಗಿದ್ದು ಆಗ ನಾವು ಕೂಡಲೇ ಒಂದು ಖಾಸಗಿವಾಹನವನ್ನು ತರಿಸಿ ಅದರಲ್ಲಿ ನನ್ನ ಮಗ ಕುಮಾರನನ್ನು ಹಾಕಿ ಅವನ ಜೊತೆಗೆ ನನ್ನ ಹಿರಿಯ ಮಗ ಗೋಪಾಲನನ್ನು ಕಳುಹಿಸಿಕೊಟ್ಟಿದ್ದು ಇರುತ್ತದೆ ನನ್ನ ಮಗನಿಗೆ ಅಪಘಾತ ಪಡಿಸಿದ ಕಾರ ಚಾಲಕನು ಅಲ್ಲಿಯೇ ಇದ್ದನು ಅವನ ಹೆಸರು ಕೇಳಲಾಗಿ ಅವನು ತನ್ನ ಹೆಸರು ಪ್ರಶಾಂತ ತಂದೆ ಚಂದ್ರು ಚವ್ಹಾಣ ಅಂತಾ ತಿಳಿಸಿದನು. ನಮ್ಮ ಮೋಟರ ಸೈಕಲ್ಗ ನಂಬರ ಪ್ಲೆಟೆ ಬರೆಸಿರುವದಿಲ್ಲ ಅದರ ಚೆಸ್ಸಿ ನಂ ಒಃಐಊಂ10ಂಒಆ9ಅ05381 ಇರುತ್ತದೆ. ಆದ್ದರಿಂದ ನನ್ನ ಮಗನಿಗೆ ಅಪಘಾತ ಪಡಿಸಿದ ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಜರ್ಿ ಇರುತ್ತದೆ.ಅಂತಾ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 69/2020 ಕಲಂ 279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 110/2020 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 09/10/2020 ರಂದು 08.15 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 09/10/2020 ರಂದು ಗೋಗಿ ಕೆ ಗ್ರಾಮದ ಪೋಸ್ಟ ಆಪೀಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಅಶೋಕ ತಂದೆ ಸಾಬಯ್ಯ ಗುತ್ತೇದಾರ ವಯಾ:50 ಉ: ಒಕ್ಕಲುತನ ಜಾ: ಇಳಗೇರ ಸಾ: ಗೊಗಿ ಪೇಠ ತಾ: ಶಹಾಪೂರ ಜಿ: ಯಾದಗೀರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 08.55 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 3450/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 110/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!