ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/10/2020
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 126/2020, ಕಲಂ, 323,354,504.506. ಸಂಗಡ 34 ಐ ಪಿ ಸಿ : ದಿನಾಂಕ: 08-10-2020 ಮದ್ಯಾಹ್ನ 12-15 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಪಿಯರ್ಾಧಿದಾರಳು ಮತ್ತು ಆಕೆಯ ಗಂಡ ದಿನಾಂಕ: 08-10-2020 ರಂದು ಬೆಳಿಗ್ಗೆ 10-00 ಗಂಟೆಗೆ ತಮ್ಮ ಹೊಲದಲ್ಲಿ ಹತ್ತಿ ಬಿಡಿಸುತ್ತಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಪಿಯರ್ಾಧಿದಾರರ ಹೊಲದಲ್ಲಿ ಹೋಗುತ್ತಿರುವಾಗ ಆಗ ಪಿಯರ್ಾಧಿಯ ಗಂಡ ನಮ್ಮ ಹೊಲದಲ್ಲಿ ಯಾಕೆ ಹೋಗುತ್ತಿರಿ ಮೊದಲು ಇದ್ದ ದಾರಿಗೆ ಹೋಗುರಿ ಅಂತಾ ಹೇಳಿದ್ದಕ್ಕೆ ಆರೋಪಿತರೆಲ್ಲರೂ ಕೂಡಿ ಪಿಯರ್ಾಧಿ ಗಂಡನಿಗೆ ಲೇ ಸೂಳೆ ಮಗನೆ ನಿನಗೆ ಬಹಳ ಸೊಕ್ಕು ಆಗಿದೆ ಅಂದು ನನ್ನ ಗಂಡನಿಗೆ ಕೈಯಿಂದ ಹೊಡೆ ಬಡೆ ಮಾಡಿದ್ದು ಆಗ ನಾನು ಜಗಳದಲ್ಲಿ ಅಡ್ಡ ಹೋದಾಗ ನನಗೆ ಆರೋಪಿತರು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಸಿರೆ ಸೇರಗು ಹಿಡಿದು ಎಳದಾಡಿ ಅವಮಾನ ಮಾಡಿದ್ದು ಕೈಯಿಂದ ಮನ ಬಂದಂತೆ ಕೈಯಿಂದ ಮೈಗೆ ಹೊಡೆದು ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 127/2020, ಕಲಂ, 341,323,504.506. ಸಂಗಡ 34 ಐ ಪಿ ಸಿ : ದಿನಾಂಕ: 08-10-2020 ರಾತ್ರಿ 07-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಪಿಯರ್ಾಧಿದಾರಳು ಮತ್ತು ಆಕೆಯ ಗಂಡ ದಿನಾಂಕ: 08-10-2020 ರಂದು ಬೆಳಿಗ್ಗೆ 10-00 ಗಂಟೆಗೆ ಅಬುಲ್ ಹಸನ ಇವರ ಹೊಲದ ಹತ್ತಿರ ಹೋದಾಗ ಆರೋಪಿತರು ನನಗೆ ಲೇ ಸೂಳೆ ಮಗನೆ ನಮ್ಮ ಹೊಲದ ಕಡೆಗೆ ಯಾಕೆ ಬಂದಿದಿಲೇ ಲಂಗಾ ಸೂಳೆ ಮಗನೆ ಅಂತಾ ಬೈಯುತ್ತಿರುವಾಗ ಆಗ ನಾನು ಅವರಿಗೆ ನನಗೆ ಯಾಕೆ ಬೈಯುತ್ತಿ ನಾನು ಏನು ಮಾಡಿನಿ ಅಂತಾ ಅಂದಿದ್ದಕ್ಕೆ ಅಭೀದಲಿ ಈತನು ಹಿಂದೆ ಹೊಲದ ಸಂಬಂಧ ಜಗಳ ಮಾಡಿದಲ್ಲಾ ಮಗನೇ ನೀನು ಈ ಕಡೆ ಬಂದು ನಮಗೆ ಜಗಳ ಮಾಡಬೇಕಂತ ಮಾಡಿದೇನು ಸೂಳೆ ಮಗನೆ ಅಂದು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ಅಂಗಿ ಹಿಡದು ಎಳದಾಡುತ್ತಿರುವಾಗ ಆತನ ಹೆಂಡತಿ ಪವರ್ಿನಬೇಗಂ ಬಂದು ನನಗೆ ಲೇ ಲಂಗಾ ಸೂಳೆ ಮಗನೆ ನಮ್ಮ ಹೊಲದ ಕಡೆಗೆ ಯಾಕೆ ಬಂದಿ ಮತ್ತೆ ಎನು ಮಾಡಬೇಕಂತ ಮಾಡಿದಿ ಸೂಳೆ ಮಗನೆ ನಮ್ಮ ಹೊಲದ ಕಡೆಗೆ ಬರೋಕೆ ನಾಚಿಕೆ ಆಗದಿಲ್ಲೇನು ಅಂದು ಕೈಯಿಂದ ಬೆನ್ನಿಗೆ ಗುದ್ದಿದಳು. ಆಗ ನಾನು ಅಂಜಿ ನಮ್ಮ ಹೊಲದ ಕಡೆಗೆ ಹೋಗುತ್ತಿರುವಾಗ ಅಭೀದಲಿ ಈತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ ಲೇ ಸೂಳೆ ಮಗನೆ ಇನ್ನೊಂದು ಸಲ ನಮ್ಮ ಹೊಲದ ಕಡೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಮಗನೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 215/2020 ಕಲಂ 279, 338 ಐಪಿಸಿ : ಇಂದು ದಿನಾಂಕ: 08-10-2020 ರಂದು 4 ಪಿ.ಎಂ. ಸುಮಾರಿಗೆ ಠಾಣೆಯ ಎಸ್ ಹೆಚ್ ಡಿ ಕರ್ತವ್ಯದಲ್ಲಿರುವಾಗ ಠಾಣೆಯ ಶ್ರೀ ಮಹೇಶ ಹೆಚ್ಸಿ-105 ರವರು ಇಂದು ಬೆಳಿಗ್ಗೆ ಸುಮಾರಿಗೆ ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ಹೋಗಿ ಗಾಯಾಳುದಾರನಾದ ನಿಂಗಪ್ಪ ಪೊಲೀಸ್ ಪಾಟೀಲ ಸಾ:ವಿಬೂತಿಹಳ್ಳೀ ಈತನ ಹೇಳಿಕೆ ಪಡೆದುಕೊಂಡು ಬಂದಿದ್ದು, ಸದರಿ ಹೇಳಿಕೆಯ ಸಾರಾಂಶವೆನೆಂದರೆ ದಿನಾಂಕ:05-10-2020 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಮ್ಮೂರ ವಿಬೂತಿಹಳ್ಳಿಯಿಂದ ಟಂ.ಟಂ. ಬಾಡಿಗೆ ಬಂದಿದ್ದರಿಂದ ನನ್ನ ಟಂ.ಟಂ, ಅಟೋ ನಂಬರ ಕೆಎ-33 ಬಿ-1502 ನೇದ್ದನ್ನು ಬಾಡಿಗೆಯಾಗಿ ಸುರಪೂರಕ್ಕೆ ಬಂದು ಬಾಡಿಗೆ ಮುಗಿಸಿಕೊಂಡು ಅಂದೆ ಸಾಯಂಕಾಲ ಸುಮಾರಿಗೆ ಊರಿಗೆ ಹೋಗುವ ಕುರಿತು ಟಂ.ಟಂ. ಅಟೋವನ್ನು ನಡೆಸಿಕೊಂಡು ಹೊರಟಿದ್ದೆನು. ಅಂದಾಜು ರಾತ್ರಿ 08-30 ಗಂಟೆ ಸುಮಾರಿಗೆ ಸುರಪೂರ-ಶಹಾಪೂರ ಮುಖ್ಯ ರಸ್ತೆಯ ದೇವಿಕೇರಾ ಕ್ರಾಸ ದಾಟಿ ಸ್ವಲ್ಪ ಮುಂದುಗಡೆಯ ಬೊರವೆಲ್ಲ ಹತ್ತಿರ ರಸ್ತೆಯ ನನ್ನ ಎಡಬದಿಯ ಸೈಡಿಗೆ ನಾನು ನಿಧಾನವಾಗಿ ಅಟೋವನ್ನು ನಡೆಸಿಕೊಂಡು ಹೊರಟಿರುವಾಗ ಆಗ ಅದೇ ಸಮಯಕ್ಕೆ ಒಂದು ಕಾರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ನನ್ನ ಟಂ.ಟಂ. ಅಟೋಗೆ ಎದುರಿನಿಂದ ಡಿಕ್ಕಿ ಪಡಿಸಿದಾಗ ನನ್ನ ಟಂ.ಟಂ. ಅಟೋವು ಪಲ್ಟಿಯಾಗಿ ರೋಡಿನ ಪಕ್ಕದಲ್ಲಿ ಬಿದ್ದಿದ್ದು, ಆಗ ಅದೇ ಸಮಯಕ್ಕೆ ಅದೆ ರಸ್ತೆಯ ಮುಖಾಂತರ ಅಲ್ಲೆ ಹೋಗುತ್ತಿದ್ದ ಕೊಂಗಂಡಿ ಗ್ರಾಮದ ನಾಗಪ್ಪ ತಂದೆ ರಾಮಣ್ಣ ಗುಂಡಳ್ಳಿ, ಮಲ್ಲಪ್ಪ ತಂದೆ ಬೀರಪ್ಪ ಅನಸೂರ ಸಾ:ವಿಬೂತಿಹಳ್ಳಿ ಇವರು ಘಟನೆಯನ್ನು ಕಣ್ಣಾರೆ ಕಂಡು ಅಟೋದ ಹತ್ತಿರ ಬಂದು ನನ್ನನು ಅಟೋದಿಂದ ಹೊರಗಡೆ ಎಳೆದು ಎಬ್ಬಿಸಿ ಕೂಡಿಸಿದ್ದು, ನನ್ನ ಬಲಗಾಲ ತೊಡೆಯ ಮತ್ತು ಮೊಳಕಾಲ ಕೆಳಗೆ ಕಾಲು ಎರಡು ಕಡೆ ಮುರಿದಿದ್ದು, ಎಡಗಡೆ ಕಾಲಿನ ಹಿಂಬಡಿಯ ಹತ್ತಿರ ಎಲುಬು ಮುರಿದು ಭಾರಿ ರಕ್ತಗಾಯವಾಗಿದ್ದು, ಎಡಗೈ ಬುಜದ ಹತ್ತಿರ ಮತ್ತು ಉಂಗುರ ಬೆರಳಿನ ಹತ್ತಿರ ರಕ್ತಗಾಯ ಹಾಗೂ ಬಲ ಕಿವಿಯಲ್ಲಿ ರಕ್ತ ಬಂದಿದ್ದನ್ನು ನೋಡಿ ಅವರು ನನ್ನ ತಮ್ಮನಾದ ಹೊನ್ನಪ್ಪ ತಂದೆ ದೇವಿಂದ್ರಪ್ಪ ಪೊಲೀಸ್ ಪಾಟಿಲ ಈತನಿಗೆ ಪೋನ ಮಾಡಿ ವಿಷಯ ತಿಳಿಸಿದಾಗ ನನ್ನ ತಂದೆಯಾದ ದೇವಿಂದ್ರಪ್ಪ ತಂದೆ ಹಣಮಂತ್ರಾಯ ಪೊಲೀಸ ಪಾಟೀಲ ತಮ್ಮನಾದ ಹೊನ್ನಪ್ಪ ಹಾಗೂ ಅಣ್ಣತಮಕಿಯಾದ ನಿಲಪ್ಪ ತಂದೆ ನಿಂಗಪ್ಪಗೌಡ ಪೊಲೀಸ್ ಪಾಟೀಲ ಮೂವರು ಸ್ಥಳಕ್ಕೆ ಬಂದು ನನ್ನನ್ನು ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆಗೆ ಸುರಪೂರಕ್ಕೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಮಾಡಿಸಿ ಅಲ್ಲಿಂದ ವೈಧ್ಯಾಧಿಕಾರಿಗಳ ಸಲಹೇ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಅಪಘಾತ ಮಾಡಿದ ಕಾರ ಚಾಲಕನು ಕಾರ ಸಮೇತ ಸ್ಥಳದಲ್ಲಿಯೇ ಇದ್ದು ಕಾರ ನಂಬರ ಕೆಎ-34 ಎನ್-8689 ಇದ್ದು ಅದರ ಚಾಲಕನ ಹೆಸರು ಕೃಷ್ಣಕುಮಾರ ತಂದೆ ರಘುನಾಥರಾವ್ ಕರಣಮ್ ವಯಾ:38 ವರ್ಷ ಉ:ಪ್ರಾವೆಂಟ ವರ್ಕರ ಜಾತಿ: ಬ್ರಾಹ್ಮಣ ಸಾ:ಶಿರಗುಪ್ಪಾ ಜಿಲ್ಲಾ: ಬಳ್ಳಾರಿ ಅಂತಾ ಇರುತ್ತದೆ. ಸದರಿ ಅಪಘಾತವು ಕಾರ ಚಾಲಕನಾದ ಕೃಷ್ಣಕುಮಾರ ಈತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನಾನು ನಡೆಸಿಕೊಂಡು ಹೋಗುತ್ತಿದ್ದ ಟಂ.ಟಂ.ಅಟೋಗೆ ಎದುರಿನಿಂದ ಡಿಕ್ಕಿ ಪಡಿಸಿದ್ದರಿಂದ ಅಪಘಾತ ಸಂಬವಿಸಿದ್ದು ಇರುತ್ತದೆ. ನನಗೆ ಅಪಘಾತ ಆದ ಗಾಬರಿಯಲ್ಲಿ ನನಗೆ ಏನು ತೋಚದ ಕಾರಣ ನಾನು ಅದೇ ದಿವಸ ಪಿಯರ್ಾದಿ ನೀಡದೇ ನಮ್ಮ ತಂದೆಗೆ ವಿಚಾರ ಮಾಡಿ ಇಂದು ತಡವಾಗಿ ಪಿಯರ್ಾದಿ ನೀಡಿದ್ದು ಇರುತ್ತದೆ.ಕಾರ ಚಾಲಕ ಕೃಷ್ಣಕುಮಾರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಗೋಗಿ ಪೊಲೀಸ ಠಾಣೆ ಗುನ್ನೆ ನಂ: 16/2020 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 08/10/2020 ರಂದು 12-30 ಪಿಎಮ್ ಕ್ಕೆ ಶ್ರೀ ಮಲ್ಕಣ್ಣ ತಂದೆ ರಾಚಣ್ಣ ಕೋಟಿಕಾನಿ ಘಟಕ ವ್ಯವಸ್ಥಾಪಕರು, ಬೋರುಕಾ ಗೋಗಿ ಇವರು ಠಾಣೆಗೆ ಬಂದು ಒಂದು ಟೈಪ್ ಮಾಡಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ನಿನ್ನೆ ದಿನಾಂಕ: 07/10/2020 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನಾನು ಘಟಕದಲ್ಲಿ ಕೆಲಸ ಮಾಡುತ್ತಿರುವಾಗ ನಮ್ಮ ಪವರ್ ಪ್ಲಾಂಟ್ ನಂ: 1 ರಲ್ಲಿ ಗಾರ್ಡನ್ ಹೆಲ್ಪರ್ ಕೆಲಸ ಮಾಡುತ್ತಿದ್ದ ನಾಗಪ್ಪ ತಂದೆ ವಾಬಣ್ಣ ಕೊಂಡಿಕಾರ್ ಸಾ|| ಗೋಗಿ (ಕೆ) ಇವರು ಕಂಟ್ರೋಲ್ ರೂಮ್ಗೆ ಮಾಡಿ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ಗಾರ್ಡನ್ದಲ್ಲಿ ಕೆಲಸ ಮಾಡುತ್ತಾ ಎರಡು ಘಂಟೆಗೊಮ್ಮೆ ಬೋರುಕಾ ಸ್ಕಿಮ್-1 ಘಟಕದ ಇನ್ಟೆಕ್ ಟ್ರಾಶ್ ರ್ಯಾಕ್ ಗೇಟ್ ಹತ್ತಿರ ಕಸ ತೆಗೆಯುತ್ತಿದ್ದು, ಅದರಂತೆ ಕಸ ತೆಗೆಯಲು ಅಂದಾಜು 4-30 ಗಂಟೆ ಸುಮಾರಿಗೆ ಗೇಟ್ ಹತ್ತಿರ ಹೋದಾಗ, ನೀರಿನಲ್ಲಿ ಒಂದು ಅಪರಿಚಿತ ಶವ ತೇಲುತ್ತಾ ಬರುತ್ತಿರುವುದನ್ನು ಕಂಡು ಕಂಟ್ರೋಲ್ ರೂಮ್ಗೆ ವಿಷಯ ತಿಳಿಸಿದ್ದು, ಈ ವಿಷಯವನ್ನು ಕಂಟ್ರೋಲ್ ರೂಮ್ದವರು ನನಗೆ ತಿಳಿಸಿದ್ದು, ಆಗ ನಾನು ಮತ್ತು ಸೆಕ್ಯೂರಿಟಿ ಆಪೀಸರ್ ನಾಗರಾಜ ತಂದೆ ಲಕ್ಷ್ಮಣ ಹಾಸಿಲಕರ್ ಕೂಡಿ ಅಲ್ಲಿಗೆ 5-30 ಪಿಎಮ್ ಸುಮಾರಿಗೆ ಹೋಗಿ ನೋಡಲಾಗಿ, ಮೃತ ದೇಹವು ನೀರಿನಲ್ಲಿ ತೇಲುತ್ತಿರುತ್ತಿರಲಿಲ್ಲಾ. ಆಗ ನಾವು ಸಲ್ಪ ಸಮಯದವರೆಗೆ ಕಾದಿದ್ದು ನಂತರ ಶವ ಕಾಣದ ಕಾರಣ ಮರಳಿ ಹೋಗಿರುತ್ತೇವೆ. ಮತ್ತೆ ನಾನು ಹಾಗೂ ಸೆಕ್ಯೂರಿಟಿ ಆಪೀಸರ್ ನಾಗರಾಜ ತಂದೆ ಲಕ್ಷ್ಮಣ ಹಾಸಿಲಕರ್ ಕೂಡಿ ಇಂದು ದಿನಾಂಕ: 08/10/2020 ರಂದು ಮುಂಜಾನೆ 10-30 ಎಎಮ್ ಸುಮಾರಿಗೆ ಸ್ಕಿಮ್-1 ಘಟಕದ ಇನ್ಟೆಕ್ ಟ್ರಾಶ್ ರ್ಯಾಕ್ ಗೇಟ್ ಹತ್ತಿರ ಹೋದಾಗ, ಒಂದು ಮೃತ ದೇಹವು ಕಂಡು ಬಂದಿದ್ದು ಸಮೀಪ ಹೋಗಿ ನೋಡಲಾಗಿ ಸದರಿ ಮೃತ ದೇಹವು ಗಂಡು ಶವವಾಗಿದ್ದು, ಶವದ ವಯಸ್ಸು ಅಂದಾಜು 40-45 ವರ್ಷ ಇರಬಹುದು. ಮೃತದೇಹವು ಗುರುತು ಸಿಗದ ಸ್ಥಿತಿಯಲ್ಲಿ ಇದ್ದು, ಮೃತದೇಹದ ಚರ್ಮವು ಅಲ್ಲಲ್ಲಿ ಸುಲಿದಿದ್ದು, ಕಂಡು ಬಂದಿರುತ್ತದೆ. ಸದರಿ ಅಪರಿಚಿತ ಮೃತ ವ್ಯಕ್ತಿಯು ಕಾಲುವೆಯಲ್ಲಿ ಬಿದ್ದು ಮೃತ ಪಟ್ಟಿರಬಹುದು. ಕಾರಣ ತಾವುಗಳು ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಕೊಳ್ಳಲು ತಮ್ಮಲ್ಲಿ ವಿನಂತಿ ಅಂತಾ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ: 16/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ: 158/2020 498(ಎ), 304(ಬಿ) ಸಂಗಡ 34 ಐಪಿಸಿ & 3, 4 ಡಿಪಿ ಯಾಕ್ಟ್ : ಇಂದು ದಿ: 08/10/2020 ರಂದು 12.15 ಪಿಎಮ್ಕ್ಕೆ ಶ್ರೀ ಗುಡದಪ್ಪ ತಂದೆ ಈಶ್ವರಪ್ಪ ವಿಶ್ವಕರ್ಮ ವಯ:53 ವರ್ಷ ಜಾ; ವಿಶ್ವಕರ್ಮ ಉ: ಒಕ್ಕಲುತನ ಸಾ: ಗುಂಜಳ್ಳಿ ತಾ|| ಸಿಂಧನೂರ ಜಿ|| ರಾಯಚೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನ್ನ ಮಗಳಾದ ರೇಣುಕಾ @ ಕಾವೇರಿ ವಯಾ|| 26 ವರ್ಷ ಇವಳಿಗೆ ಈಗ್ಗೆ ಒಂದುವರೆ ವರ್ಷದ ಹಿಂದೆ ಕೆಂಭಾವಿ ಪಟ್ಟಣದ ಮಲ್ಲಿಕಾಜರ್ುನ ತಂದೆ ರುದ್ರಪ್ಪ ಬಡಿಗೇರ ಇವನಿಗೆ ಕೊಟ್ಟು ದಿನಾಂಕ: 28/11/2019 ರಂದು 1 ಲಕ್ಷ ರೂಪಾಯಿ ಹಾಗೂ 5 ತೊಲಿ ಬಂಗಾರ ಮತ್ತು ಅಂದಾಜು 1 ಲಕ್ಷ ರೂಪಾಯಿ ಕಿಮ್ಮತ್ತಿನ ಗೃಹ ಉಪಯೋಗಿ ವಸ್ತುಗಳು ವರದಕ್ಷಿಣೆಯನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಸುಮಾರು 5 ತಿಂಗಳ ವರೆಗೆ ನನ್ನ ಮಗಳು ತನ್ನ ಗಂಡ ಹಾಗೂ ಅವರ ಮನೆಯವರೊಂದಿಗೆ ಚೆನ್ನಾಗಿದ್ದಳು. ನಂತರ ಸುಮಾರು ಈಗ್ಗೆ 2-3 ತಿಂಗಳಿನಿಂದ ಮಗಳಾದ ರೇಣುಕಾ @ ಕಾವೇರಿ ಇವಳಿಗೆ ಅವಳ ಗಂಡ ಮಲ್ಲಿಕಾಜರ್ುನ ತಂದೆ ರುದ್ರಪ್ಪ ಬಡಿಗೇರ ಮತ್ತು ಅತ್ತೆಯಾದ ಕೃಷ್ಣಮ್ಮ ಗಂಡ ರುದ್ರಪ್ಪ ಬಡಿಗೇರ ಇಬ್ಬರು ಸೇರಿ ನನ್ನ ಮಗಳಿಗೆ ನೀನು ಚೆನ್ನಾಗಿಲ್ಲ, ನಿನ್ನಿಂದ ನಮಗೇನು ಲಾಭವಿಲ್ಲ, ನಿನಗೆ ಅಡುಗೆ ಮಾಡಲು ಬರುವದಿಲ್ಲ ನಿನಗೆ ನಿನ್ನ ತವರು ಮನೆಯವರು ಹೇಗೆ ಕೆಲಸ ಕಲಿಸಿದ್ದಾರೋ ಏನೊ ನಿನಗೇನು ಗೊತ್ತೇ ಇಲ್ಲ, ನೀನು ನಮ್ಮಿಂದ ತೊಲಗಿ ಹೋಗು, ಇಲ್ಲದಿದ್ದರೆ ನಿನ್ನ ತವರು ಮನೆಯಿಂದ ಇನ್ನೂ 5 ತೊಲಿ ಬಂಗಾರ ಹಾಗೂ 50 ಸಾವಿರ ರೂಪಾಯಿ ಹಣ ತೆಗೆದುಕೊಂಡು ಬಾ, ಇಲ್ಲದಿದ್ದರೆ ಎಲ್ಲಾದರು ಹೋಗಿ ಸಾಯಿ ಅಂತ ದಿನಾಲು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದು, ಅವರು ನೀಡುವ ಕಿರುಕುಳಕ್ಕೆ ಬೇಸತ್ತು ನನ್ನ ಮಗಳು ದಿನಾಂಕ: 07/10/2020 ರ ರಾತ್ರಿ 11.00 ಗಂಟೆಯಿಂದ ದಿ: 08/10/2020ರ ಬೆಳಗಿನ 6.00 ಗಂಟೆಯ ಅವಧಿಯಲ್ಲಿ ತನ್ನ ಅಡುಗೆ ಮನೆಯಲ್ಲಿನ ನಡುವೆ ಹಾಕಿದ ಕಬ್ಬಿಣದ ರಾಡಿಗೆ ಟವೇಲ್ದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ಕಾರಣ ನನ್ನ ಮಗಳ ಸಾವಿಗೆ ಕಾರಣರಾದ ಮೇಲ್ಕಾಣಿಸಿದ 2 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇತ್ಯಾದಿ ವಿವರದ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 158/2020 ಕಲಂ: 498ಎ, 304ಬಿ, 34 ಐಪಿಸಿ ಮತ್ತು 3, 4 ಡಿಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.