ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/10/2020

By blogger on ಶನಿವಾರ, ಅಕ್ಟೋಬರ್ 17, 2020                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/10/2020 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 145/2020 ಕಲಂ 279, 337, 338 ಐಪಿಸಿ : ದಿನಾಂಕ 05/10/2020 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರ ಮತ್ತು ಆತನ ಗೆಳೆಯ ಇಬ್ಬರೂ ಕೂಡಿಕೊಂಡು ಊಟ ಮಾಡಿಕೊಂಡು ಬರುವ ಕುರಿತು ಧಾಬಾಕ್ಕೆ ಹೋಗುವ ಕುರಿತು ಆರೋಪಿತನ ಮೋಟಾರ ಸೈಕಲ್ ನಂ ಕೆ.ಎ-33-ವೈ-2669 ನೆದ್ದರ ಮೇಲೆ ಕುಳಿತುಕೊಂಡು ಹೋಗುವಾಗ ಆರೋಪಿತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುವಾಗ ಮೋಟಾರ ಸೈಕಲ್ ಸ್ಕಿಡ್ ಆಗಿ ಅಪಘಾತವಾಗಿದ್ದರಿಂದ ಫಿರ್ಯಾಧಿಗೆ ಮತ್ತು ಆರೋಪಿತನಿಗೆ ಭಾರಿ ರಕ್ತಗಾಯಗಳು, ಗುಪ್ತಗಾಯಗಳು ಮತ್ತು ತರಚಿದಗಾಯಗಳು ಆಗಿರುತ್ತವೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 214/2020 ಕಲಂ 279, 337 ಐಪಿಸಿ : ಇಂದು ದಿನಾಂಕ:06/10/2020 ರಂದು 12:30 ಪಿ.ಎಂ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಬಾಬುಲಾಲ ತಂದೆ ಗುಂಡಪ್ಪ ವಗ್ಗೆ ವಯಸ್ಸು||38 ವರ್ಷ ಉದ್ಯೋಗ||ಶಿಕ್ಷಕರು ಜಾತಿ||ಪರಿಶಿಷ್ಟ ಜಾತಿ ಸಾ||ವಿ ಕೆ ಸಲಗರ ತಾ|| ಕಮಲಾಪೂರ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ನೀಡಿದ್ದು ಸಾರಾಂಶವೇನೆಂದರೆ, ನಿನ್ನೆ ದಿನಾಂಕ:05-10-2020 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಯಾದಿಗಿರಿಯಿಂದ ವಾಡಿಗೆ ಹೋಗಬೆಕು ಅಂತಾ ಹೇಳಿ ನನ್ನ ಕಾರ ಚಾಲಕನಾದ ಶರಣಗೌಡ ತಂದೆ ಶಂಕರೆಪ್ಪ ಸಾಸಾಬಾಳ ವಯಾ||30 ಉ||ಡ್ರೈವರ ಜಾತಿ||ಲಿಂಗಾಯತ ಸಾ||ಕೆಂಬಾವಿ ಈತನೊಂದಿಗೆ ಕಾರ ತಗೆದುಕೊಂಡು ಸುರಪೂರಕ್ಕೆ ಬಂದು ನನ್ನನ್ನು ಸುರಪೂರದಲ್ಲಿ ಬಿಟ್ಟು ಮರಳಿ ಕೆಂಬಾವಿಗೆ ಹೋಗುತ್ತೆನೆ ಅಂತಾ ಕಾರ ತಗೆದುಕೊಂಡು ಹೋಗಿದ್ದನು. ಅಂದಾಜು ಸಾಯಂಕಾಲ 5-40 ಗಂಟೆ ಸುಮಾರಿಗೆ ನಾನು ಸುರಪೂರ ಬಸ್ಸ ನಿಲ್ದಾಣದಲ್ಲಿರುವಾಗ ನನ್ನ ಕಾರ ಚಾಲಕನಾದ ಶರಣಗೌಡ ಇತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಾನು ಸುರಪೂರದಿಂದ ಕೆಂಬಾವಿಗೆ ಹೋಗುವ ಕುರಿತು ಸುರಪೂರ-ಕೆಂಬಾವಿ ಮುಖ್ಯ ಗುಡಿ ಸಿದ್ದಾಪೂರ ಹತ್ತಿರ ಕರವಿಂಗ ರಸ್ತೆಯಲ್ಲಿ ಸಾಯಂಕಾಲ 5-30 ಗಂಟೆ ಸುಮಾರಿಗೆ ಕೆಂಬಾವಿ ಕಡೆಗೆ ಕಾರ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ರಸ್ತೆಯಲ್ಲಿ ಒಮ್ಮೆಲೆ ಎಮ್ಮಿ ಅಡ್ಡ ಬಂದಿದ್ದರಿಂದ ಒಮ್ಮೆಲ್ ಕಟ್ಟ ಹೊಡೆದು ಸೈಡ ತಗೆದುಕೊಳ್ಳಲು ಹೋಗಿ ಆಯಾ ತಪ್ಪಿ ರೋಡಿನ ಬಲಗಡೆಗೆ ಕಾರ ಪಲ್ಟಿಯಾಗಿ ರೋಡಿನ ಬಲಗಡೆಯ ತೆಗ್ಗಿನಲ್ಲಿ ಬಿದ್ದಿರುತ್ತದೆ. ಆಗ ಅದೆ ರಸ್ತೆಯ ಮುಖಾಂತರ ಹೋಗುತ್ತಿದ್ದ ಕೆಂಬಾವಿಗೆ ಹೋಗುತ್ತಿದ್ದ ತಿಪ್ಪಣ್ಣ ತಂದೆ ಹಣಮಂತ ನಾಯಕ ಹಾಗೂ ಈರಣ್ಣ ತಂದೆ ಶಿವಣ್ಣ ಪತ್ತಾರ ಸಾ:ಕೆಂಬಾವಿ ಇವರು ಘಟನೆಯನ್ನು ಕಣ್ಣಾರೆ ಕಂಡು  ಕಾರಿನಿಂದ ನನ್ನನ್ನು ಹೊರ ತಗೆದಿದ್ದು, ನನ್ನ ಬಲಗೈ ಹಸ್ತದ ಹತ್ತಿರ ಗುಪ್ತ ಪೆಟ್ಟಾಗಿರುತ್ತದೆ. ಅಂತಾ ವಿಷಯ ತಿಳಿಸಿದ ಕೂಡಲೆ ಘಟನಾ ಸ್ಥಳಕ್ಕೆ ಹೋಗಿ ನೋಡಲು ಕಾರ ನುಜ್ಜಾಗಿದ್ದು ಕಾರ ಚಾಲಕ ಶರಣಗೌಡ ಈತನಿಗೆ ಮೇಲೆ ಹೇಳಿದಂತೆ ಗುಪ್ತಗಾಯವಾಗಿದು ನಮಗೆ ಏನು ತೋಚದೆ ಇರುವದರಿಂದ ಕೆಂಬಾವಿಗೆ ಹೋಗಿದ್ದು ಇರುತ್ತದೆ. ಇಂದು ಕಾರ ಚಾಲಕ ಶರಣಗೌಡ ಈತನಿಗೆ ಕೈ ನೊವಾಗುತ್ತಿದ್ದರಿಂದ ಅವನನ್ನು ಕರೆದುಕೊಂಡು ಸುರಪೂರ ಆಸ್ಪತ್ರೆಯಲ್ಲಿ ತೋರಿಸಿ ಠಾಣೆಗೆ ತಡವಾಗಿ ಬಂದು ಪಿಯರ್ಾದಿ ನಿಡಿದ್ದು ಇರುತ್ತದೆ. ಸದರಿ ಅಪಘಾತವು ಕಾರಚಾಲಕನಾದ ಶರಣಗೌಡ ಈತನು ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊಗುತ್ತಿರುವಾಗ ಒಮ್ಮೆಲೆ ರಸ್ತೆಯಲ್ಲಿ ಎಮ್ಮಿ ಅಡ್ಡ ಬಂದಿದ್ದು ಕಟ್ಟ ಹೊಡೆದು ಸೈಡ ತಗೆದುಕೊಳ್ಳಲು ಹೋಗಿ ಕಾರನ್ನು ರಸ್ತೆಯ ಬಲಗಡೆ ಪಲ್ಟಿ ಮಾಡಿದ್ದು ಇರುತ್ತದೆ. ಕಾರ ಚಾಲಕ ಶರಣಗೌಡ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!