ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/10/2020

By blogger on ಶನಿವಾರ, ಅಕ್ಟೋಬರ್ 17, 2020                         ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/10/2020 

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 141/2020 ಕಲಂ 279, 337, 338 ಐಪಿಸಿ : ಇಂದು ದಿನಾಂಕ 05-10-2020 ರಂದು ಮಧ್ಯಾಹ್ನ 12-00 ಗಂಟೆಗೆ ಸರಕಾರಿ ಆಸ್ಪತ್ರೆ ಗುರುಮಠಕಲದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಲ್ಲಿಕಾಜರ್ುನ ಈತನ ತಂದೆ ನಾಗೇಶ ತಂದೆ ಹೊನ್ನಪ್ಪ ಮೇತ್ರಿ ವ|| 45 ವರ್ಷ ಜಾ|| ಮಾದಿಗ (ಎಸ್.ಸಿ)  ಉ|| ಒಕ್ಕಲುತನ ಸಾ|| ಗಾಜರಕೋಟ್  ತಾ||ಗುರುಮಠಕಲ್ ಜಿ||ಯಾದಗಿರಿ ಇವರ ಹೇಳಿಕೆ ಪಡೆದುಕೊಂಡಿದ್ದು ಸದರಿ ಫಿಯರ್ಾದಿ ಸಾರಾಂಶವೇನೆಂದರೆ, ಇಂದು ದಿನಾಂಕ. 05.10.2020 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಅಟೋ ನಂ. ಕೆಎ-33 ಎ-1246 ನೇದ್ದು ಪ್ಯಾಸೇಂಜರ ತೆಗೆದುಕೊಂಡು ಚಪೇಟ್ಲಾ ಕಡೆಗೆ ರೋಡಿನ ಮೇಲೆ ಹೊರಟಾಗ ಗಾಜರಕೋಟ ಕಡೆಯಿಂದ ತನ್ನ ಮಗ ಬೈಕ ಮೋಟಾರ ಸೈಕಲ ನಂ.ಕೆ.ಎ-32 ಇ.ಎಕ್ಷ್-6407 ಟಿ.ವಿ.ಎಸ್. ಸ್ಟಾರ ಸಿಟಿ ತೆಗೆದುಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊಗುತ್ತಿದ್ದಾಗ, ಅಟೋ ಚಾಲಕನು ತನ್ನ ಅಟೋವನ್ನು ಅತಿವೇಗವಾಗಿ ರೋಡಿನ ಮಧ್ಯ ಚಲಾಯಿಸಿದ್ದು, ಇಬ್ಬರು ಮುಖಾಮುಖಿಯಾಗಿ ಡಿಕ್ಕಿಪಡಿಸಿದ್ದು, ಸದರಿ ಬೈಕ ಮೇಲೆ ಇದ್ದ ತನ್ನ ಮಗ 1)ಮಲ್ಲಿಕಾಜರ್ುನನಿಗೆ  ಎಡಕಿವಿಗೆ, ಎಡಗಡೆ ಕುತ್ತಿಗೆಗೆ ಭಾರಿ ರಕ್ತಗಾಯವಾಗಿದ್ದು, ಬಾಯಿ ಮತ್ತು ಗದ್ದಕ್ಕೆ ರಕ್ತಗಾಯವಾಗಿರುತ್ತದೆ. ಅಟೋದಲ್ಲಿದ್ದವರಿಗೆ 2) ಚಂದ್ರಪ್ಪ ತಂದೆ ನರಸಪ್ಪ ಮಾಲೋಳ್ ವಯ|| 60 ವರ್ಷ,ಸಾ|| ಗಂಗಾರಾವಲಪಲ್ಲಿ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಎಡಕಣ್ಣಿನ ಹತ್ತಿರ, ಎರಡೂ ಮೊಳಕಾಲಿನ ಹತ್ತಿರ ತೆರಚಿದ ರಕ್ತಗಾಯವಾಗಿದ್ದು ಕಂಡುಬಂದಿರುತ್ತದೆ. 3) ಕಾಶಮ್ಮ ಗಂಡ ಬಸಪ್ಪ ಮಾಲೋಳ್ ವಯ|| 55 ವರ್ಷ, ಸಾ|| ಆಶನಪಲ್ಲಿ ಇವಳಿಗೆ ಬಲಗಾಲಿನ ಮೊಳಕಾಲಿಗೆ ತೆರಚಿದ ಗಾಯವಾಗಿ ಒಳಪೆಟ್ಟಾಗಿರುತ್ತದೆ. 4) ಮೊಗಲಮ್ಮ ಗಂಡ ಪೆಂಟಪ್ಪ ಬೇಗಾರ ವಯ||58 ವರ್ಷ, ಸಾ|| ಗಂಗಾರಾವಲಪಲ್ಲಿ ಇವಳಿಗೆ ಎಡಗೈ ಭುಜಕ್ಕೆ ಭಾರಿ ಒಳಪೆಟ್ಟಾಗಿದ್ದು, ಎಡಗಾಲಿನ ಮೇಲೆ ತೆರೆಚಿದ ಗಾಯವಗಿರುವದು ಕಂಡುಬಂದಿರುತ್ತದೆ. ನಂತರ ಅಟೋ ನಂ. ಕೆಎ-33 ಎ-1246 ನೇದ್ದರ ಅಟೋ ಡ್ರೈವರ 5) ಆನಂದ ತಂದೆ ವೆಂಕಟಪ್ಪ ಬೊಪ್ಪಕಾಳ ವಯ|| 27 ವರ್ಷ, ಸಾ|| ಚಪೇಟ್ಲಾ ಇವನಿಗೆ ನೋಡಲಾಗಿ ಹಣೆಗೆ, ಎಡಗೈಗೆ, ಎಡಕಾಲಿಗೆ ತೆರಚಿದ ರಕ್ತಗಾಯವಾಗಿರುತ್ತದೆ. ಸದರಿ ಅಟೋದಲ್ಲಿದ್ದ ಶ್ರೀಮತಿ ಮಲ್ಲಮ್ಮ ಗಂಡ ಕಾಶಪ್ಪ ಗುಂಡಪ್ಪೋಳ್ ವಯ|| 50 ವರ್ಷ, ಮತ್ತು ತಿಪ್ಪಮ್ಮ ಗಂಡ ರಾಮಪ್ಪ ಗುಂಡಪ್ಪೋಳ್ ವಯ|| 60 ವರ್ಷ, ಇಬ್ಬರೂ ಸಾ|| ಗಂಗಾರಾವಲಪಲ್ಲಿ ಇವರಿಗೆ ಯಾವುದೆ ಗಾಯ ವಗೈರೆ ಆಗಿರುದಿಲ್ಲ. ಸದರಿ ಘಟನೆ ಪ್ರತ್ಯೆಕ್ಷ ನೋಡಿದ ತಮ್ಮೂರಿನ ಪುಂಡಲಿಕ ತಂದೆ ಕೂಸಾ ಸಾ|| ಗಾಜರಕೋಟ್  ಈತನು ಘಟನೆ ನೋಡಿ ತಿಳಿಸಿರುತ್ತಾನೆ. ಕಾರಣ ಇಂದು ದಿನಾಂಕ. 05.10.2020 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನನ್ನ ಮಗ ಮಲ್ಲಿಕಾಜರ್ುನ ತಂದೆ ನಾಗೇಶ ಮೇತ್ರಿ ವಯ|| 20 ವರ್ಷ, ಈತನು ನಮ್ಮ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತದಿಂದ ಓಡಿಸಿಕೊಂಡು ಗುರುಮಠಕಲ ಕಡೆಗೆ ಹೊರಟಿದ್ದಾಗ ಎದರುಗಡೆ  ಗುರುಮಠಕಲ ಕಡೆಯಿಂದ ಚಪೆಟ್ಲಾ ಕಡೆಗೆ ಅತಿವೇಗವಾಗಿ, ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದ ಅಟೋ ನಂ. ಕೆಎ-33 ಎ-1246 ಆನಂದ ತಂದೆ ವೆಂಕಟಪ್ಪ ಬೊಪ್ಪಕಾಳ ವಯ|| 27 ವರ್ಷ, ಸಾ|| ಚಪೇಟ್ಲಾ ಇಬ್ಬರೂ ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ಅಪಘಾತಪಡಿಸಿದ್ದು, ಸದರಿ ಅಫಘಾತದಲ್ಲಿ ನನ್ನ ಮಗ ಮಲ್ಲಿಕಾಜರ್ುನನಿಗೆ ಮತ್ತು ಅಟೋದಲ್ಲಿದ್ದ ಚಂದ್ರಪ್ಪನಿಗೆ ಭಾರಿ ರಕ್ತಗಾಯಗಳಾಗಿದ್ದು, ಉಳಿದ 3 ಜನ ಅಟೋದಲ್ಲಿದ್ದವರಿಗೆ ಸಾದಾ ಸ್ವರೂಪದ ರಕ್ತಗಾಯಗಳಾಗಿರುತ್ತವೆ. ಕಾರಣ ಸದರಿ ಅಪಘಾತಕ್ಕೆ ಕಾರಣರಾದ  ಬೈಕ ಸವಾರ ಮತ್ತು ಅಟೋ ಚಾಲಕ ಇಬ್ಬರ ಮೇಲೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕುಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶ ಇರುತ್ತದೆ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 253/2020 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 05/10/2020  ರಂದು ಸಾಯಂಕಾಲ 17-00 ಗಂಟೆಗೆ   ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ್  ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು,  ಒಬ್ಬ ವ್ಯಕ್ತಿ ಹಾಗೂ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೇನೆಂದರೆ, ಇಂದು ದಿನಾಂಕ 05/10/2020  ರಂದು ಮುಂಜಾನೆ 11-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಬರುವ ಹುಂಡೆಕಲ್ ಗ್ರಾಮದ ಹನುಮಾನ ಗುಡಿಯ  ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ, ಸದರಿ ಪ್ರಕರಣವು ಅಸಂಜ್ಷೇಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 74/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿಮಾಡಿಕೊಂಡು, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮದ್ಯಾಹ್ನ 12-15  ಗಂಟೆಗೆ ಅನುಮತಿ ಪಡೆದುಕೊಂಡು, ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಮದ್ಯಾಹ್ನ 13-15 ಗಂಟೆಗೆ ದಾಳಿ ಮಾಡಿ  ಆರೋಪಿತನಾದ ಎ-1) ಬಸವರಾಜ ತಂದೆ ಸಿದ್ದಣ್ಣ ಹೂಗಾರ ವಯ 40 ವರ್ಷ ಜಾತಿ ಹೂಗಾರ ಉಃ ಮಟಕಾ ನಂಬರ ಬರೆದುಕೊಳ್ಳುವದು ಸಾಃ ಹುಂಡೆಕಲ್ ತಾಃ ಶಹಾಪೂರ ಜಿಃ ಯಾದಗಿರಿ ಇವನನ್ನು ವಶಕ್ಕೆ ಪಡೆದುಕೊಂಡು ಈತನಿಂದ ನಗದು ಹಣ 1540=00 ರೂಪಾಯಿ, ಒಂದು ಬಾಲ್ ಪೆನ್, ಹಾಗೂ ನಾಲ್ಕು ಮಟಕಾ ಚೀಟಿಗಳು ಮಧ್ಯಾಹ್ನ 13-20  ಗಂಟೆಯಿಂದ 14-20 ಗಂಟೆಯ ಅವಧಿಯಲ್ಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ 253/2020 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 68/2020 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 05/10/2020 ರಂದು 5:00 ಪಿ. ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 11:30 ಎ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಗಡ್ಡಿ ಗ್ರಾಮದ ಬಜಾರ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 68/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 7:40 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ  ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 1380/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. ಸಂಗಪ್ಪ ತಂದೆ ಭೀಮಪ್ಪ ಕಾಮನಕೇರಿ ವ:60 ವರ್ಷ ಉ:ವ್ಯಾಪಾರ ಜಾ:ಹಿಂದು ಅಂಬಿಗ ಸಾ:ದೇವರಗಡಿ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ: 254/2020. ಕಲಂ. 279.338 ಐ.ಪಿ.ಸಿ. : ಇಂದು ದಿನಾಂಕ: 05/10/2020 ರಂದು 18-25 ಗಂಟೆಗೆ ಶಹಾಪುರದ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ. ಎಂ.ಎಲ್.ಸಿ. ಇದೆ ಅಂತ ಮಾಹಿತಿಬಂದ ಮೇರೆಗೆ ಆಸ್ಪತ್ರೆಗೆ 18-30 ಗಂಟೆಗೆ ಹೋಗಿ ಉಪಚಾರ ಪಡೆಯುತ್ತಿದ್ದ ಪಿಯರ್ಾದಿ ಶ್ರೀ ಅಬ್ದುಲ್ ವಾಹಿದ ತಂದೆ ಮಹ್ಮದ ಹುಸೇನ ಸೌದಾಗರ ವ|| 35 ಜಾ|| ಮುಸ್ಲಿಂ ಉ|| ಚಾಲಕ ಸಾ|| ಖಾಜಿ ಕಾಲೂನಿ ಶಹಾಪೂರ ಇವರ ಹೇಳಿಕೆಯನ್ನು 19-30 ಗಂಟೆಯವರೆಗೆ ಪಡೆದುಕೊಂಡು ಮರಳಿ ಠಾಣೆಗೆ 20-00 ಗಂಟೆಗೆ ಬಂದು ಸದರಿ ಹೇಳಿಕೆಯ ಸಾರಾಂಶದ ವೆನೆಂದರೆ ಹೀಗಿದ್ದು ಶಹಾಪೂರದ ಇಂಡಸ್ಟ್ರೀಯಲ್ ಏರಿಯಾದಲ್ಲಿ ಇರುವ ನಮ್ಮ ತಮ್ಮನ ಬೇಕರಿ ಪ್ಯಾಕ್ಟರಿಯಲ್ಲಿ ಕೆಲಸವಿದ್ದುದ್ದರಿಂದ ದಿನಾಂಕ 05/10/2020 ರಂದು ಸಾಯಂಕಾಲ 5-55 ಗಂಟೆಗೆ ನಾನು ನಮ್ಮ ಮನೆಯಿಂದ ಇಂಡಸ್ಟ್ರೀಯಲ್ ಏರಿಯಾದಲ್ಲಿ ಇರುವ ನಮ್ಮ ತಮ್ಮನ ಬೇಕರಿ ಪ್ಯಾಕ್ಟರಿಗೆ ಹೋಗುವ ಸಂಬಂದವಾಗಿ ನನ್ನ ಗೇಳೆಯ ಮಲ್ಲಣ್ಣ ಈತನ ಮೋಟರ್ ಸೈಕಲ್ ನಂ ಕೆಎ-36ಇಹೆಚ್-5499 ನ್ನೇದ್ದನ್ನು ತೆಗೆದುಕೊಂಡು ಹೋರಟು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಭೀ,ಗುಡಿ-ಸುರಪೂರ ಮುಖ್ಯ ರಸ್ತೆಯ ಮೇಲೆ ಶಹಾಪೂರ ನಗರದ ಸುಬೇದಾರ ಆಸ್ಪತ್ರೆಯ ಮುಂದೆ ನಾನು ಎಡಗಡೆ ಸೈಡಿಗೆ ಹೋಗುತ್ತಿರುವಾಗ  ನನ್ನ ಹಿಂದಿನಿಂದ ಒಂದು ಕೆ.ಆರ್.ಟಿ.ಸಿ. ಬಸ್ಸ ಚಾಲಕನು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲ್ಕ್ಕೆ ಹಿಂದೆ ಡಿಕ್ಕಿಪಡಿಸಿ ಅಪಘಾತಮಾಡಿದ್ದರಿಂದ ಮೋಟರ್ ಸೈಕಲ್ ರಸ್ತೆಯಮೇಲೆ ಬಿದ್ದಿದ್ದು. ನಾನು ರಸ್ತೆಯ ಮೇಲೆ ಬಿದ್ದೆನು ಆಗ ಬಸ್ನ ಗಾಲಿ ನನ್ನ ಎರಡುಕಾಲಿನ ಮೇಲೆ ಹೋಗಿದ್ದು ಇರುತ್ತದೆ, ಸದರಿ ಅಪಘಾತದಲ್ಲಿ ನನಗೆ ಬಲಗಾಲ ತೋಡಿಯಿಂದ ಪಾದದವರೆಗೆ ಭಾರಿ ರಕ್ತಗಾಯ, ಎಡಗಾಲು ಪಾದದ ಮೇಲೆ ಭಾರಿ ರಕ್ತಗಾಯ, ಎಡಗಾಲು ಮೋಳಕಾಲಿಗೆ ತರಚಿದ ರಕ್ತಗಾಯ, ಎಡಗೈ ಹಸ್ತಕ್ಕೆ ತರಚಿದ ಗಾಯವಾಗಿದ್ದು ಇರುತ್ತದೆ. ಸದರಿ ಅಪಘಾತವನ್ನು ನೋಡಿ ಅಲ್ಲೆ ಇದ್ದ ಅಬುಬಕ್ಕರ ಸಿದ್ದಿಕ್ ತಂದೆ ಮೈಹಿಬೂಬಸಾಬ ಪಡದಳ್ಳಿ ಈತನು ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ನನಗೆ ಅಪಘಾತಮಾಡಿದ ಬಸ್ ಚಾಲಕನಿಗೆ ಹೆಸರು ವಿಚಾರಿಸಲಾಗಿ ತನ್ನ ಹೆಸರು ರಾಮಣ್ಣ ತಂದೆ ಬಸ್ಸಪ್ಪ ದೇವದುಗರ್ಾ ಡಿಪೋ ಸಾ|| ಮಾವಿನಬಾವಿ ಅಂತ ತಿಳಿಸಿದನು, ಬಸ್ಸಿನ ಕಂಡಕ್ಟರಗೆ ವಿಚಾರಿಸಲಾಗಿ ಶಿವಾನಂದ ತಂದೆ ಪರಮಪ್ಪ ದೇವದುಗರ್ಾ ಡಿಪೋ ಸಾ|| ಹುವಿನ ಹಿಪ್ಪರಗಿ ಅಂತ ತಿಳಿಸಿದನು, ಸದರಿ ಅಪಘಾತ ಮಾಡಿದ ಬಸ್ ನಂ ಕೆಎ-36ಎಫ್-1352 ನ್ನೇದ್ದು ಇರುತ್ತದೆ. ಬಸ್ಸ ಮತ್ತು ನನ್ನ ಮೋಟರ್ ಸೈಕಲ್ ನಂ ಕೆಎ-36ಇಹೆಚ್-5499 ನ್ನೇದ್ದು ಜಕಂ ಗೊಂಡಿದ್ದು ಇರುತ್ತದೆ. ಸದರಿ ಅಪಘಾತವು 6-00 ಗಂಟಗೆಯ ಸುಮಾರಿಗೆ ಜರುಗಿರುತ್ತದೆ. ನಾನು ನನ್ನ ತಮ್ಮ ಅಬ್ದುಲ್ ಸಲಾಮ ತಂದೆ ಮಹ್ಮದ ಹುಸೇನ ಸೌದಾಗರ ಈತನಿಗೆ ಪೋನ ಮಾಡಿ ಅಪಘಾತದ ವಿಷಯ ತಿಳಿಸಿದ್ದರಿಂದ ಅಬ್ದುಲ್ ಸಲಾಮನು ಅಪಘಾತವಾದ ಸ್ಥಳಕ್ಕೆ ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ನನಗೆ ಉಪಚಾರ ಕುರಿತು ಅಬ್ದುಲ್ ಸಲಾಮ, ಅಬುಬಕ್ಕರ ಇಬ್ಬರು ಕೂಡಿ ಒಂದು ಆಟೋದಲ್ಲಿ ಹಾಕಿಕೊಂಡು ಬಂದು ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಸೆರಿಕೆಮಾಡಿದ್ದು ಇರುತ್ತದೆ. ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 254/2020 ಕಲಂ: 279, 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.        

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!