ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/10/2020

By blogger on ಶನಿವಾರ, ಅಕ್ಟೋಬರ್ 17, 2020

 


                         ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/10/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:-  93/2020 ಕಲಂ: 78(6) ಕೆ.ಪಿ.ಆಕ್ಟ್ :       ಇಂದು ದಿನಾಂಕ; 04/10/2020 ರಂದು 7-50 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ಇಂದು ದಿನಾಂಕ. 04/10/2020 ರಂದು 6-30 ಪಿಎಮ್ ಕ್ಕೆ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಐ.ಸಿ.ಐ.ಸಿ.ಐ. ಬ್ಯಾಂಕ ಹತ್ತಿರ ಯಾರೋ ಕೆಲವರು ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದು, ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 7-40 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 7-50 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.93/2020 ಕಲಂ.78(6) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                   


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 156/2020  ಕಲಂ: ಕಲಂ: 143, 147, 148, 323, 324,307, 504 ಸಂಗಡ 149 ಐಪಿಸಿ : ಇಂದು ದಿನಾಂಕ 04/10/2020 ರಂದು 9.00 ಎಎಮ್ಕ್ಕೆ ಪಿರ್ಯಾದಿ ಶ್ರೀ ಸಾಹೇಬಗೌಡ ತಂದೆ ಗುರುನಾಥಪ್ಪಗೌಡ ಯಾಳವಾರ ವಯಾ|| 42 ಜಾ|| ಲಿಂಗಾಯತ ರಡ್ಡಿ ಉ|| ಒಕ್ಕಲುತನ ಸಾ|| ಆಲ್ಹಾಳ ತಾ|| ಸುರಪುರ ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ, ನಿನ್ನೆ ದಿನಾಂಕ: 03/10/2020 ರಂದು ಎಮ್ ಬೊಮನಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಚುನಾವಣೆ ನಡೆದಿದ್ದು ಸದರಿ ಚುನಾವಣೆಯಲ್ಲಿ ನಾವು ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯಥರ್ಿಯ ಪರವಾಗಿ ಪ್ರಚಾರ ಮಾಡಿದ್ದರಿಂದ ನಮ್ಮೂರ ರಾಮನಗೌಡ ತಂದೆ ಬಸನಗೌಡ ಗೂಗಲ ಈತನು ನನ್ನ ಮೇಲೆ ಹಗೆತನ ಸಾದಿಸುತ್ತಿದ್ದನು. ಹೀಗಿದ್ದು ಇಂದು ದಿನಾಂಕ 04/10/2020 ರಂದು ಬೆಳಿಗ್ಗೆ 6.30 ಗಂಟೆಗೆ ನಾನು ಹಾಗೂ ನಮ್ಮ ಅಳಿಯ ಬಸನಗೌಡ ತಂದೆ ಹೇಮರೆಡ್ಡಿ ಚೆಟ್ಟರಕಿ ಹಾಗೂ ನಮ್ಮ ಅಣ್ಣನ ಮಗನಾದ ಬಸನಗೌಡ ತಂದೆ ಸೋಮನಗೌಡ ಯಾಳವಾರ ನಾವು 3 ಜನರು ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಿದ್ದಾಗ ಅದೇ ಸಮಯಕ್ಕೆ ನಮ್ಮೂರ ಕಾಂಗ್ರೆಸ್ ಪಕ್ಷದ ಬೆಂಬಲಿತರಾದ 1) ರಾಮನಗೌಡ ತಂದೆ ಬಸನಗೌಡ ಗೂಗಲ್ 2) ಲಾಲಪ್ಪ ತಂದೆ ಶರಣಪ್ಪ ಪಡಸಾಲಿ 3) ಪ್ರಕಾಶ ತಂದೆ ಶರಣಪ್ಪ ಪಡಸಾಲಿ 4) ಬಸಪ್ಪ ತಂದೆ ಶರಣಪ್ಪ ಪಡಸಾಲಿ 5) ಕಲ್ಯಾಣಪ್ಪಗೌಡ ತಂದೆ ನಿಂಗೊಡೆಪ್ಪ ಗೂಗಲ್ 6) ವೀರಭದ್ರಯ್ಯ ತಂದೆ ಸಿದ್ರಾಮಯ್ಯ ಮಠ ಸಾ|| ಎಲ್ಲರೂ ಆಲ್ಹಾಳ ಈ ಎಲ್ಲಾ ಜನರು ಗುಂಪುಕಟ್ಟಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಕಲ್ಲು, ಬಡಿಗೆ ಹಾಗೂ ಕಬ್ಬಿಣದ ರಾಡು ಹಿಡಿದುಕೊಂಡು ಬಂದವರೇ ಏನಲೆ ಮಗನೆ ಸಾಹೆಬ್ಯಾ ನಮ್ಮ ವಿರುದ್ದವಾಗಿ ಎಲೆಕ್ಷೆನ ಮಾಡುತ್ತಿಯಾ ಮಗನೆ ನಿನ್ನ ಸೊಕ್ಕು ಎಷ್ಟು ಅನ್ನುತ್ತಾ ಎಲ್ಲರೂ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ರಾಮನಗೌಡ ಈತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ತಲೆಯ ಮೇಲ್ಬಾಗದಲ್ಲಿ ಹೊಡೆದು ರಕ್ತಗಾಯಪಡಿಸಿದನು ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಬಸನಗೌಡ ಚಟ್ಟರಕಿ ಹಾಗೂ ಬಸನಗೌಡ ಯಾಳವಾರ ಇವರು ಬಿಡಿಸಿಕೊಳ್ಳಲು ಬಂದಾಗ ಬಸನಗೌಡ ಚಟ್ಟರಕಿ ಈತನಿಗೆ ಲಾಲಪ್ಪ ಪಡಸಾಲಿ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಹಾಗೂ ಬಲಗೈ ಮುಂಗೈಗೆ ಒಳಪೆಟ್ಟು ಹಾಗೂ ಎಡಗಾ ಮೊಳಕಾಲಿಗೆ ಹೊಡೆದು ಗುಪ್ತಗಾಯಪಡಿಸಿ ನಮ್ಮಿಬ್ಬರಿಗೂ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಹಾಗು ಬಸನಗೌಡ ಯಾಳವಾರ ಈತನಿಗೆ ಪ್ರಕಾಶ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಡುಬ್ಬಕ್ಕೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ನಂತರ ಎಲ್ಲರು ನಾವು 3 ಜನರಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾವು ನೆಲಕ್ಕೆ ಬಿದ್ದು ಚೀರಾಡುತ್ತಿದ್ದಾಗ ಅಲ್ಲಿಯೇ ಹೊರಟಿದ್ದ  ಚನ್ನಪ್ಪಗೌಡ ತಂದೆ ಭೀಮನಗೌಡ ಮಾಲಿಪಾಟೀಲ, ಸೋಮನಗೌಡ ತಂದೆ ಸಂಗಪ್ಪಗೌಡ ಯಾಳವಾರ, ಪ್ರಭು ತಂದೆ ಶಾಂತಪ್ಪ ತಳವಾರ ಇವರು ಬಂದು ಬಿಡಿಸಿಕೊಂಡಿದ್ದು ಇರುತ್ತದೆ ಅಂತ ಇತ್ಯಾದಿ ವಿವರದ ಪಿರ್ಯಾದಿ ಅರ್ಜಿ ಕೊಟ್ಟ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 156/2020 ಕಲಂ: 143, 147, 148, 323, 324,307, 504 ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 140/2020 ಕಲಂ 279, 337 ಐಪಿಸಿ : ಇಂದು ದಿನಾಂಕ 04-10-2020 ರಂದು ಸಾಯಂಕಾಲ 4-00 ಗಂಟೆಗೆ ಶ್ರೀ ಶ್ರೀನಿವಾಸ ತಂದೆ ಮಲ್ಲಿಕಾಜರ್ುನ ವಯ|| 25 ವರ್ಷ ಜಾ|| ಎಸ್.ಸಿ ಉ|| ಜೀಪ ಡ್ರೈವರ ಸಾ|| ಹರಿಜನವಾಡಾ ಗುರುಮಠಕಲ ತಾ|| ಗುರುಮಠಕಲ ಜಿ|| ಯಾದಗಿರಿ ಇವರು ಠಾಣೆಗೆ ಬಂದು ಹಾಜರಾಗಿ ಒಂದು ಗಣಕೀಕೃತ ಅಜರ್ಿ ನೀಡಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ. 04.10.2020 ರಂದು ಸಮಯ ಬೆಳಿಗ್ಗೆ 11-15 ಗಂಟೆಯ ಸುಮಾರಿಗೆ ತಹಶೀಲ್ದಾರರು ಗುರುಮಠಕಲರವರ ಸರಕಾರಿ ಬುಲೆರೋ ವಾಹನ ತೆಗೆದುಕೊಂಡು ಧರ್ಮಪೂರ ಗ್ರಾಮದ ಮೂಲಕ ತೊಟ್ಲೂರ ಕಡೆಗೆ ಹೊರಟಾಗ ಧರ್ಮಪೂರ ದಾಟಿ ಎಲ್ & ಟಿ ಕಂಪನಿ ಕ್ರಾಸ ಬಳಿ ನನ್ನ ಜೀಪಗೆ ಅಡ್ಡಲಾಗಿ ಪಕ್ಕದ ಜಮೀನುದಲ್ಲಿನ ಎತ್ತುಗಳು ರೋಡಿನ ಮೇಲೆ ಬಂದಿದ್ದರಿಂದ ನಾನು ನನ್ನ ಬುಲೆರೋ ವಾಹನವನ್ನು ಬ್ರೇಕ ಮಾಡಿ ನಿಲ್ಲಿಸಿದೆನು. ನನ್ನ ಹಿಂದೆ ಗುರುಮಠಕಲ ಕಡೆಯಿಂದ ಬರುತ್ತಿದ್ದ ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ಬಸ ನಂ. ಎ.ಪಿ-29 ಜೆಡ್-3298 ನೇದ್ದರ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಹಿಂದಿನಿಂದ ನಮ್ಮ ಬುಲೆರೋ ಜೀಪಗೆ ಡಿಕ್ಕಿಪಡಿಸಿದನು. ನಂತರ ನಾನು ಮತ್ತು ಶ್ರೀ ಸಂಗಮೇಶ ಜಿಡಗೇ ತಹಶೀಲ್ದಾರ ಸಾಹೇಬರು ಇಬ್ಬರೂ ನಮ್ಮ ಬುಲೆರೋ ವಾಹನದಿಂದ ಕೆಳಗೆ ಇಳಿದು ನೋಡಲಾಗಿ ನಮ್ಮ ಜೀಪ ಹಿಂದಿನ ಬಲಗಡೆ ಭಾಗದ ಇಂಡಿಕೇಟರ ಮತ್ತು ಬುಲರೋ ಜೀಪ ಹಿಂದಿನ ಡೋರ ಜಖಂಗೊಂಡಿದ್ದು, ಸದರಿ ಅಪಘಾತದಲ್ಲಿ ನನಗೆ ಕುತ್ತಿಗೆ ಹಿಂದಿನ ಭಾಗಕ್ಕೆ ಗುಪ್ತ ಪೆಟ್ಟಾಗಿದ್ದು, ನಮಗೆ ಡಿಕ್ಕಿಪಡಿಸಿದ ತೆಲಂಗಾಣ ರಾಜ್ಯದ ಬಸ ನಂ. ಎ.ಪಿ-29 ಜೆಡ್-3298  ನೇದ್ದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಎಸ್.ಬಿ. ನಕೀಬ್ ತಂದೆ ಅಬ್ದುಲ್ಲಾ ವಯ|| 59 ವರ್ಷ, ಜಾ|| ಮುಸ್ಲಿಂ, ಉ|| ಹೈದ್ರಾಬಾದ ಬಸ ಡಿಪೋ ನಂ-1 ಘಟಕದ ಬಸ ಚಾಲಕ ಸಾ|| ಚಂದ್ರಾಯಣ ಗುಟ್ಟಾ ಏರಿಯಾ ಮ.ನಂ-18-09-454/1/ಬಿ ಹೈದ್ರಾಬಾದ ತೆಲಂಗಾಣ ರಾಜ್ಯ ಅಂತ ತಿಳಿಸಿದನು. ಸದರಿ ಬಸ ವಾಹನ ಎಡಗಡೆಯ ಮುಂದಿನ ಭಾಗ ಜಖಂಗೊಂಡಿದ್ದು ಕಂಡುಬಂದಿರುತ್ತದೆ. ಸದರಿ ಬಸ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶ ಇರುತ್ತದೆ


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ: ಪಿ.ಎ.ಆರ್ 15/2020 ಕಲಂ:107 ಸಿಆರ್,ಪಿ,ಸಿ : ಶ್ರೀ ಹಣಮಂತ ಪಿಎಸ್ಐ ಗುರುಮಠಕಲ ಪೊಲೀಸ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೇನಂದರೆ ಇಂದು ದಿನಾಂಕ:04.10.2020 ರಂದು ಬೆಳಿಗ್ಗೆ 7.30 ಗಂಟೆ  ಸುಮಾರಿಗೆ ಹಳ್ಳಿ ಬೇಟಿ ಮತ್ತು ಪೆಟ್ರೋಲಿಂಗ್ ಕುರಿತು ಠಾಣೆಯಿಂದ ಹೊರಟು ಚಂಡ್ರಕಿ ಗ್ರಾಮಕ್ಕೆ ಬೇಟಿ  ನೀಡಿದ ನಂತರ ಸಮಯ 09.30 ಎಎಮ್ ಸುಮಾರಿಗೆ ರಾಂಪೂರ ಗ್ರಾಮಕ್ಕೆ ಹೋಗಿ ಅಲ್ಲಿ ಪೊಲೀಸ ಬಾತ್ಮಿದಾರರಿಗೆ ವಿಚಾರಿಸಿದಾಗ ತಿಳಿದು ಬಂದಿರುವುದೇನೆಂದರೆ, ರಾಂಪೂರ ಗ್ರಾಮದ ಜಮೀನು ವಿಷಯಕ್ಕೆ ಸಂಬಂದಿಸಿದಂತೆ ರಾಂಪೂರ ಸಿಮಾಂತರ ಸವರ್ೇ ನಂ 203/2 1 ಎಕರೆ 16 ಗುಂಟೆ ಮತ್ತು 203/4 1 ಎಕರೆ 2 ಗುಂಟೆ ಜಮೀನು ವಿಷಯದಲ್ಲಿ ಸುಮಾರು ದಿನಗಳಿಂದ ತಟ್ಟೆ ತಕರಾರುಗಳಿದ್ದು 1ನೇ ಪಾಟರ್ಿ ಜನರಾದ 1)ಸಾಬಣ್ಣ ತಂದೆ ಮಲ್ಲಪ್ಪ ಕಂಟಿ 2) ಮಲ್ಲಿಕಾಜರ್ುನ ತಂದೆ ಸಾಬಣ್ಣ ಸಾ:ಎಲ್ಲರೂ ರಾಂಪೂರ ಹಾಗೂ 2ನೇ ಪಾಟರ್ಿಯವರಾದ 1) ದೊಡ್ಡ ಹುಸೇನಪ್ಪ ತಂದೆ ಮಲ್ಲಪ್ಪ 2)ಸಣ್ಣ ಹುಸೇನಪ್ಪ ತಂದೆ ಮಲ್ಲಪ್ಪ 3)ರಾಜೇಂದ್ರ ತಂದೆ ಸಾಲಿಹುಸೇನಪ್ಪ ಸಾ:ಎಲ್ಲರೂ ರಾಪೂರ ಗ್ರಾಮ  ಇವರ ನಡುವೆ ಆಂತರಿಕ ವೈಮನ್ಸಿನಿಂದ ಕೂಡಿದ್ದು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಈ ಎರಡು ಪಾಟರ್ಿಯ  ಜನರ ನಡುವೆ  ಕಲಹ ಉಂಟಾಗಿ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟಾಗುವ ಸಾದ್ಯತೆಗಳು ಇರುತ್ತವೆ, ಸದರಿ ಎರಡೂ ಪಾಟರ್ಿಯ ಜನರ ಮೇಲೆ ಮುಂಜಾಗೃತ ಕ್ರಮವಾಗಿ ಕೋರಿ ಗುರುಮಠಕಲ ಪೊಲೀಸ ಠಾಣೆ ಪಿ.ಎ.ಆರ್ ನಂ 15/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ: ಪಿ.ಎ.ಆರ್ 14/2020 ಕಲಂ:107 ಸಿಆರ್,ಪಿ,ಸಿ : ಶ್ರೀ ಹಣಮಂತ ಪಿಎಸ್ಐ ಗುರುಮಠಕಲ ಪೊಲೀಸ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೇನಂದರೆ ಇಂದು ದಿನಾಂಕ:04.10.2020 ರಂದು ಬೆಳಿಗ್ಗೆ 07.30 ಗಂಟೆ  ಸುಮಾರಿಗೆ ಹಳ್ಳಿ ಬೇಟಿ ಮತ್ತು ಪೆಟ್ರೋಲಿಂಗ್ ಕುರಿತು ಠಾಣೆಯಿಂದ ಹೊರಟು ಚಂಡ್ರಕಿ ಗ್ರಾಮಕ್ಕೆ ಬೇಟಿ  ನೀಡಿದ ನಂತರ ಸಮಯ 07.45 ಎಎಮ್ ಸುಮಾರಿಗೆ ಚಂಡ್ರಕಿ ಗ್ರಾಮಕ್ಕೆ ಹೋಗಿ ಅಲ್ಲಿ ಪೊಲೀಸ ಬಾತ್ಮಿದಾರರಿಗೆ ವಿಚಾರಿಸಿದಾಗ ತಿಳಿದು ಬಂದಿರುವುದೇನೆಂದರೆ, ಪುಟಪಾಕ ಗ್ರಾಮದ ಜಮೀನು ವಿಷಯಕ್ಕೆ ಸಂಬಂದಿಸಿದಂತೆ ಚಂಡ್ರಕಿ ಸಿಮಾಂತರ ಸವರ್ೇ ನಂ 83/ಎ 3 ಎಕರೆ ಜಮೀನು ವಿಷಯದಲ್ಲಿ ಸುಮಾರು ದಿನಗಳಿಂದ ತಟ್ಟೆ ತಕರಾರುಗಳಿದ್ದು 1ನೇ ಪಾಟರ್ಿ ಜನರಾದ 1)ಯಂಕಪ್ಪ ತಂದೆ ಬಾಲಪ್ಪ ತುಮ್ 2) ಲಕ್ಷ್ಮಪ್ಪ@ನರಸಿಂಹಲು ತಂದೆ ನರಸಪ್ಪ ಸಾ:ಎಲ್ಲರೂ ಚಂಡ್ರಕಿ  ಹಾಗೂ 2ನೇ ಪಾಟರ್ಿಯವರಾದ 1) ನರಸಿಂಹಲು ತಂದೆ ಚೆನ್ನಪ್ಪ ಸಾ:ಚಂಡ್ರಕಿ ಗ್ರಾಮ ಇವರ ನಡುವೆ ಆಂತರಿಕ ವೈಮನ್ಸಿನಿಂದ ಕೂಡಿದ್ದು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಈ ಎರಡು ಪಾಟರ್ಿಯ  ಜನರ ನಡುವೆ  ಕಲಹ ಉಂಟಾಗಿ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟಾಗುವ ಸಾದ್ಯತೆಗಳು ಇರುತ್ತವೆ, ಚಂಡ್ರಕಿ ಗ್ರಾಮದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ದಕ್ಕೆ ಉಂಟಾಗುವ ಸಾಧ್ಯತೆ ಇರುವದರಿಂದ ಎರಡು ಪಾಟರ್ಿಯ ಜನರಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗವಾಗದಂತೆ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳುವ ಸಲುವಾಗಿ ಸದರಿ ಎರಡೂ ಪಾಟರ್ಿಯ ಜನರ ಮೇಲೆ ಮುಂಜಾಗೃತ ಕ್ರಮವಾಗಿ ಕೋರಿ ಗುರುಮಠಕಲ ಪೊಲೀಸ ಠಾಣೆ ಪಿ.ಎ.ಆರ್ ನಂ ನಂ 14/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:-  119/2020 ಕಲಂ: 87 ಕೆ.ಪಿ ಎಕ್ಟ್ : ಇಂದು ದಿನಾಂಕ: 04/10/2020 ರಂದು 04:30 ಪಿಎಮ್ ಕ್ಕೆ ಶ್ರೀ ಎಮ್.ಡಿ ಅಜೀಜ್ ಪಿ.ಎಸ್.ಐ (ಅವಿ) ವಡಗೇರಾ ಪೊಲೀಸ್ ಠಾಣೆ ರವರು ಜ್ಞಾಪನ ಪತ್ರ ಕೊಟ್ಟಿದ್ದರ ಸಾರಾಂಶವೇನಂದರೆ ಈ ಮೂಲಕ ನಿಮಗೆ ಜ್ಞಾಪನ ಪತ್ರ ನೀಡುವುದೇನಂದರೆ ನಾನು ಮತ್ತು ಪಿ.ಎಸ್.ಐ (ಕಾಸು) ಇಬ್ಬರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ನಮಗೆ ಮಾಹಿತಿ ಬಂದಿದ್ದೇನಂದರೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಖಾನಾಪೂರ ಯುಕೆಪಿ ಕ್ಯಾಂಪಿನಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಸದರಿ ಜೂಜುಕೋರರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡ ಲಗತ್ತಿಸಲಾಗಿದೆ ಎಂದು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 119/2020 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 125/2020 ಕಲಂ 87 ಕೆ.ಪಿ ಕಾಯ್ದೆ : ದಿನಾಂಕ: 04-10-2020 ರಂದು 07-10 ಪಿಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಗೆ ಬಂದು ಕಿಲ್ಲನಕೇರಾ ಗ್ರಾಮದಲ್ಲಿ ಸಾಯಂಕಾಲ 05-30 ಗಂಟೆಗೆ ಅಂದರ ಬಾಹರ ಇಸ್ಪೆಟ ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.125/2020 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 39/2020  ಕಲಂ 279, 337, 338 ಐಪಿಸಿ  ಸಂ. 187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 04/10/2020 ರಂದು  5 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ  ಮುಖ್ಯ ರಸ್ತೆಯ ಮೇಲೆ ಬರುವ ಡಾನ್ ಬೋಸ್ಕೋ ಶಾಲೆಯ ಹತ್ತಿರದ ಗುರುಸುಣಗಿ ಕ್ರಾಸದಲ್ಲಿ  ಈ ಕೇಸಿನಲ್ಲಿನ ಗಾಯಾಳುಗಳು ತಮ್ಮ ಮೋಟಾರು ಸೈಕಲ್ ನಂ. ಕೆಎ-33, ಎಕ್ಸ್-3112 ನೇದ್ದರ ಮೇಲೆ ಡಾನ್ ಬೋಸ್ಕೋ ಶಾಲೆಯಿಂದ ಅಲ್ಲಿಪುರದ ಕಡೆಗೆ ಹೋಗುತ್ತಿದ್ದಾಗ ಕಾರ್ ನಂಬರ ಕೆಎ-50, ಎ-7444 ನೆದ್ದರ ಚಾಲಕನು ಯಾದಗಿರಿ ಕಡೆಯಿಂದ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೆ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೆದ್ದಕ್ಕೆ ಓವರ್ ಟೇಕ್ ಮಾಡುವಾಗ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ  ಮೋಟಾರು ಸೈಕಲ್ ಸವಾರ ಮತ್ತು ಹಿಂಬದಿ ಕುಳಿತಿದ್ದ ಪಿಯರ್ಾದಿಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು  ಅಪಘಾತದ ನಂತರ ಕಾರ್ ಚಾಲಕನು ಘಟನಾ ಸ್ಥಳದಿಂದ ಕಾರ ಸಮೇತ ಓಡಿ ಹೋಗಿದ್ದು ಕಾರ ಚಾಲಕನ ಮೇಲೆ  ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ನೀಡಿದ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 39/2020  ಕಲಂ 279, 337, 338 ಐಪಿಸಿ  ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  



ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 252/2020. ಕಲಂ. 279.337.338 ಐ.ಪಿ.ಸಿ. ಮತ್ತು 187 ಐ.ಎಂ.ವಿ ಯಾಕ್ಟ :                ಇಂದು ದಿನಾಂಕ: 04/10/2020 ರಂದು 19-00 ಗಂಟೆಗೆ ಪಿಯರ್ಾದಿ ಶ್ರೀ ಶರಣಪ್ಪ ತಂದೆ ಪಂಪಣ್ಣ ತೊಂಡಿಹಾಳ ವ|| 60 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಮನಗನಾಳ ತಾ|| ಶಹಾಪೂರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ನನ್ನ ಮಗನಾದ ಶಶಿಕಾಂತ ತಂದೆ ಶರಣಪ್ಪ ತೊಂಡಿಹಾಳ ಈತನು ಹೈಯಾಳ(ಬಿ) ಸರಕಾರಿ ಆಸ್ಪತ್ರೆಯಲ್ಲಿ ಕಿರಿಯ ಆರೋಗ್ಯ ಸಹಾಯಕ (ಪು) ಅಂತ ಕರ್ತವ್ಯ ನಿರ್ವಹಿಸುತ್ತಿದ್ದು ಇರುತ್ತದೆ, ಶಶಿಕಾಂತನು ದಿನನಿತ್ಯದಂತೆ ನಮ್ಮ ಮೋಟರ್ ಸೈಕಲ್ ನಂ ಕೆಎ-33ಇಎ-3024 ನ್ನೇದ್ದರ ಮೇಲೆ ದಿನಾಂಕ 01/10/2020 ರಂದು ಬೆಳಿಗ್ಗೆ 8-00 ಗಂಟೆಗೆ ನಮ್ಮ ಮನೆಯಿಂದ ಹೋದನು. ನಂತರ ಶಶಿಕಾಂತನು  ಸಾಯಂಕಾಲ 5-55 ಗಂಟೆಯ ಸುಮಾರಿಗೆ ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ. ನಾನು ಹೈಯಾಳ ಸರಕಾರಿ ಆಸ್ಪತ್ರೆಗೆ ಹೋಗಿ ಕರ್ತವ್ಯ ನಿರ್ವಹಿಸಿ ಮರಳಿ ಶಹಾಪೂರಕ್ಕೆ ಬಂದು ಶಹಾಪೂರದಿಂದ ನಮ್ಮ ಊರಿಗೆ ಬರುತ್ತಿರುವಾಗ ಶಹಾಪೂರ-ಯಾದಗಿರಿ ಮುಖ್ಯ ರಸ್ತೆಯ ಮೇಲೆ 5-45 ಗಂಟೆಯ ಸುಮಾರಿಗೆ ದೋರನಹಳ್ಳಿ ದಾಟಿ ಮೇನ್ ಕೇನಾಲ್ ದಾಟಿ ಅಂದಾಜು 100 ಮೀಟರ್ ಅಂತರದಲ್ಲಿ ನಾನು ನನ್ನ ಮೋಟಾರ್ ಸೈಕಲ್ ತೆಗೆದುಕೊಂಡು ನನ್ನ ಎಡಗಡೆ ಸೈಡಿಗೆ ನಾನು ಬರುತ್ತಿರುವಾಗ ನನ್ನ ಎದುರಗಡೆಯಿಂದ ಅಂದರೆ ಯಾದಗಿರಿ ಕಡೆಯಿಂದ ಒಂದು ಮೋಟರ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ ಮೇಲೆ ಒಬ್ಬ ಹೆಣ್ಣುಮಗಳಿಗೆ ಕುಡಿಸಿಕೊಂಡು ತನ್ನ ಮೋಟರ ಸೈಕಲ್ ಅನ್ನು ಅತೀ ವೇಗೆ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲ್ಕ್ಕೆ ಡಿಕ್ಕಿ ಪಡೆಸಿ ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ನನಗೆ ಭಾರಿ ಸ್ವರೂಪದ ಗಾಯಗಳಾಗಿರುತ್ತವೆ ಮತ್ತು ನನಗೆ ಅಪಘಾತ ಮಾಡಿ ಮೋಟರ ಸೈಕಲ್ ನಂ ಕೆಎ-33ವೈ-4469 ಇರುತ್ತದೆ ಅಂತಾ ತಿಳಿಸಿದ್ದರಿಂದ. ನಾನು ಮತ್ತು ನಮ್ಮೂರ ಇಮಾಮ್ ಪಟೇಲ್ ತಂದೆ ಯಾಸೀನ್ ಪಟೇಲ ಇಬ್ಬರು ಕೂಡಿಕೊಂಡು ನಮ್ಮ ಕಾರಿನಲ್ಲಿ ಅಪಘಾತ ಸ್ಥಳಕ್ಕೆ ಬಂದು ನನ್ನ ಮಗ ಶಶಿಕಾಂತನನ್ನು ನೋಡಿ ವಿಚಾರಿಸಿ ನೋಡಲಾಗಿ ಶಶಿಕಾಂತನಿಗೆ ಬಲಗೈ ಬೆರಳುಗಳಿಗೆ ಭಾರಿ ರಕ್ತಗಾಯ, ಬಲಗಾಲು ಬೆರಳುಗಳಿಗೆ, ಹಿಂಬಡಿಗೆ ಭಾರಿ ರಕ್ತಗಾಯ, ತಲೆಯ ಹಿಂದೆ ರಕ್ತಗಾಯವಾಗಿರುತ್ತದೆ. ಸದರಿ ಅಪಘಾತ ಮಾಡಿದ ಮೋಟರ್ ಸೈಕಲ್ ಚಾಲಕ ಅಲ್ಲೆ ನಿಂತಿದ್ದು ಆತನಿಗೆ ವಿಚಾರಿಸಲಾಗಿ ನಾಗಪ್ಪ ತಂದೆ ಬೀಮಣ್ಣ ಪಾಲಿ ಸಾ: ಕಕ್ಕಸಗೇರಾ ತಾ|| ಶಹಾಪೂರ ಅಂತಾ ತಿಳಿಸಿದ್ದು ಸದರಿಯವನಿಗೆ ಬಲಗಾಲಿನ ಪಾದಕ್ಕೆ ಗುಪ್ತಗಾಯ, ಬಲಗೈ ಹಸ್ತಕ್ಕೆ, ತೋರುಬೆರಳಿಗೆ ರಕ್ತಗಾಯ ವಾಗಿರುತ್ತದೆ. ನಾಗಪ್ಪನ ಮೋಟಾರ್ ಸೈಕಲ್ ಹಿಂದುಗಡೆ ಕುಳಿತ್ತಿದ್ದ ಹೆಣ್ಣು ಮಗಳಿಗೆ ವಿಚಾರಿಸಲಾಗಿ ಆಕೆಯ ಹೆಸರು ಶಶಿಕಲಾ ಗಂಡ ನಾಗಪ್ಪ ಸಾ:ಕಕ್ಕಸಗೇರಾ ತಾ|| ಶಹಾಪೂರ ಅಂತಾ ತಿಳಿಸಿದಳು. ಸದರಿಯವರಿಗೆ ಬಲಗೈ ಹಸ್ತದ ಕೀಲುಗೆ, ಬಲಗೈ ಮೊಳಕೈಗೆ ತರಚಿದ ಗಾಯವಾಗಿರುತ್ತವೆ. ತಲೆಯ ಹಿಂದೆ ಮತ್ತು ಮುಖಕ್ಕೆ ತರಚಿದ ಗಾಯವಾಗಿರುತ್ತದೆ. ಸದರಿ ಅಪಘಾತವಾದ ನಮ್ಮ ಮೋಟರ್ ಸೈಕಲ್ ನೋಡಲಾಗಿ ಮೋಟರ್ ಸೈಕಲ್ ನಂ. ಕೆಎ-33 ಇಎ-3024 ಮತ್ತು ನಾಗಪ್ಪನ ಮೋಟಾರ್ ಸೈಕಲ್ ನಂ. ಕೆಎ-33 ವಾಯ್-4469 ನೇದ್ದವುಗಳು ಜಕಮ್ಗೊಂಡಿದ್ದು ಇರುತ್ತದೆ. ಸದರಿ ಅಪಘಾತವು ಸಾಯಂಕಾಲ 05-45 ಗಂಟೆಯ ಸುಮರಿಗೆ ಜರುಗಿರುತ್ತದೆ. ಶಶಿಕಾಂತನಿಗೆ ಉಪಚಾರ ಕುರಿತು ನಾನು ಮತ್ತು ಇಮಾಮ್ ಪಟೇಲ್ ಇಬ್ಬರು ಕೂಡಿಕೊಂಡು ನಮ್ಮ ಕಾರಿನಲ್ಲಿ ಕರೆದುಕೊಂಡು ಬಂದು  ಯಾದಗಿರಿಯ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿದೆವು ಶಶಿಕಾಂತನಿಗೆ ಉಪಚಾರಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ಶಶಿಕಾಂತನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ರಾಯಚೂರಿನ ಬಾಲಂಕು ಆಸ್ಪತ್ರೆಯಲ್ಲಿ  ಸೇರಿಕೆಮಾಡಿದೆನು. ನನ್ನ ಮಗನಿಗೆ ಉಪಚಾರ ಮಾಡಿಸುವದು ಅವಶ್ಯವಾಗಿದ್ದರಿಂದ ಉಪಚಾರ ಕುರಿತು ಸೇರಿಕೆಮಾಡಿ ನಮ್ಮ ಹಿರಿಯರಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ, ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 252/2020 ಕಲಂ: 279, 337, 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.    



ಗೋಗಿ ಪೊಲೀಸ ಠಾಣೆ ಗುನ್ನೆ ನಂ:-. 29/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ: 04/10/2020 ರಂದು 12-15 ಪಿಎಂ ಕ್ಕೆ ನಾನು ಮತ್ತು ಹನುಮಂತ್ರಾಯ ಪಿಸಿ-331, ರವರು ಕೂಡಿ ಪೆಟ್ರೋಲಿಂಗ್ ಕುರಿತು ಹೋದಾಗ ಶೆಟ್ಟಿಕೇರಾ  ಗ್ರಾಮಕ್ಕೆ  ಬೇಟಿ ಮಾಡಿದ್ದು, ಆಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ಶೆಟ್ಟಿಕೇರಾ ಗ್ರಾಮದ ನಿವಾಸಿತರಾದ 1) ಮಲ್ಲಕಾಜರ್ುನ ತಂದೆ ಮಾಳಪ್ಪ ಕಲ್ಲೂರ ವಯ: 27 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಶೆಟ್ಟಿಕೇರಾ 2) ಸಿದ್ದಣ್ಣಗೌಡ ತಂದೆ ಧರ್ಮಣ್ಣಗೌಡ ಪೊಲೀಸ್ ಪಾಟೀಲ್ ವಯ: 28 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಶೆಟಿಕೇರಾ 3) ಭೀಮನಗೌಡ ತಂದೆ ಶಂಕರಗೌಡ ಪೊಲೀಸ್ ಪಾಟೀಲ್ ವಯ: 28 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಶೆಟ್ಟಿಕೇರಾ 4) ರೇವಣಸಿದ್ದ ತಂದೆ ಚಂದಪ್ಪ ವನದುಗರ್ಾ ವಯ: 19 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ವನದುಗರ್ಾ 5) ಖಂಡಪ್ಪ ತಂದೆ ಭೀವ್ಮರಾಯ ಪೊಲೀಸ್ ಪಾಟೀಲ್ ವಯ: 22 ಜಾ: ಕುರುಬರ ಉ: ಒಕ್ಕಲುತನ ಸಾ: ಶೆಟ್ಟಿಕೇರಾ ಇವರುಗಳು, ಸೈದಾಪೂರ ಗ್ರಾಮದವರೇ ಆದ ಸಕ್ರೆಪ್ಪ ತಂದೆ ಮಾಳಪ್ಪ ಇಲಕಲ್ ಹಾಗೂ ಇತರರು ಇವರೊಂದಿಗೆ ಶೆಟ್ಟಿಕೇರಾ ಗ್ರಾಮ ಸೀಮಾಂತರ ಹೊಲ ಸವರ್ೆ ನಂ: 3 ನೇದ್ದರಲ್ಲಿ ದಾರಿಯ ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡಿರುತ್ತಾರೆ. ಸದರಿ ವಿಷಯದಲ್ಲಿ ಸದ್ಯ ಕೂಡ ಎರಡೂ ಪಾಟರ್ೀ ಜನರಲ್ಲಿ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ ಇಬ್ಬರ ವಿರುದ್ಧ ಇಂದು ದಿನಾಂಕ: 04/10/2020 ರಂದು 05-00 ಪಿಎಮ್ ಕ್ಕೆ ಠಾಣೆ ಪಿ.ಎ.ಆರ್ ನಂ: 29/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ


ಗೋಗಿ  ಪೊಲೀಸ ಠಾಣೆ ಗುನ್ನೆ ನಂ:- 30/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ: 04/10/2020 ರಂದು 12-15 ಪಿಎಂಕ್ಕೆ ನಾನು ಮತ್ತು ಹನುಮಂತ್ರಾಯ ಪಿಸಿ-331, ರವರು ಕೂಡಿ ಪೆಟ್ರೋಲಿಂಗ್ ಕುರಿತು ಹೋದಾಗ ಶೆಟ್ಟಿಕೇರಾ ಗ್ರಾಮಕ್ಕೆ  ಬೇಟಿ ಮಾಡಿದ್ದು, ಆಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ಶೆಟ್ಟಿಕೇರಾ  ಗ್ರಾಮದ ನಿವಾಸಿತರಾದ 1) ಚಂದಪ್ಪ ತಂದೆ ಮಾಳಪ್ಪ ಇಲಕಲ್ ವಯ: 25 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಶೆಟ್ಟಿಕೇರಾ 2) ಸಾಧು ತಂದೆ ಮಾಳಪ್ಪ ಇಲಕಲ್ ವಯ: 20 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಶೆಟ್ಟಿಕೇರಾ 3) ಮಹಾದೇವಪ್ಪ ತಂದೆ ಮಾಳಪ್ಪ ಇಲಕಲ್ ವಯ: 28 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಶೆಟ್ಟಿಕೇರಾ 4) ಸಕ್ರೆಪ್ಪ ತಂದೆ ಮಾಳಪ್ಪ ಇಲಕಲ್ ವಯ: 22 ವರ್ಷ ಜಾ: ಕುರುಬರ ಉ: ಡ್ರೈವರ್ ಸಾ: ಶೆಟ್ಟಿಕೇರಾ  ಇವರುಗಳು, ಶೆಟ್ಟಿಕೇರಾ ಗ್ರಾಮದವರೇ ಆದ ಮಲ್ಲಿಕಾಜರ್ುನ ತಂದೆ ಮಾಳಪ್ಪ ಕಲ್ಲೂರ ಸಂಗಡ ಇತರರು ಇವರೊಂದಿಗೆ ಶೆಟ್ಟಿಕೇರಾ ಗ್ರಾಮ ಸೀಮಾಂತರ ಹೊಲ ಸವರ್ೆ ನಂ: 3 ನೇದ್ದರ ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡಿರುತ್ತಾರೆ. ಸದರಿ ವಿಷಯದಲ್ಲಿ ಸದ್ಯ ಕೂಡ ಎರಡೂ ಪಾಟರ್ೀ ಜನರಲ್ಲಿ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ ನಾಲ್ಕು ಜನರ ವಿರುದ್ಧ ಇಂದು ದಿನಾಂಕ: 04/10/2020 ರಂದು 6.00 ಪಿಎಮ್ ಕ್ಕೆ ಠಾಣೆ ಪಿ.ಎ.ಆರ್ ನಂ: 30/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.


 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!