ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/10/2020

By blogger on ಶನಿವಾರ, ಅಕ್ಟೋಬರ್ 17, 2020

                  


                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/10/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:-  91/2020 ಕಲಂ: 269 ಐಪಿಸಿ : ಇಂದು ದಿನಾಂಕ; 03/10/2020 ರಂದು 11-30 ಎಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀಮತಿ ರತ್ನಮ್ಮ ಗಂ. ನಿಜಲಿಂಗಪ್ಪ ಕೊರಳ್ಳಿ ವಃ45 ವರ್ಷ ಜಾಃ ಲಿಂಗಾಯತ ಉಃ ಎಸ್.ಡಿ.ಎ ನಗರಸಭೆ ಕಾಯರ್ಾಲಯ ಯಾದಗಿರಿ. ಸಾಃ ಕನಕ ಚೌಕ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನಗೆ ಯಾದಗಿರಿಯ ವಾರ್ಡ ನಂ.26 ಲಕ್ಷ್ಮೀ ನಗರ ಏರಿಯಾದ ಕೊರೋನಾ (ಕೋವಿಡ್-19) ಗೃಹ ದಿಗ್ಬಂದನದಲ್ಲಿ ಇರುವ ಧನಾತ್ಮಕ ಸೋಂಕಿತ ವ್ಯಕ್ತಿಗಳ ಪರಿಶೀಲನೆ ಕುರಿತು ನೇಮಿಸಿದ್ದು ಇರುತ್ತದೆ. ಈ ಕೆಳಗಿನ ವ್ಯಕ್ತಿಗಳು ಕೊವಿಡ್-19 ಸೊಂಕು  ಧನಾತ್ಮಕ ಹೊಂದಿದ್ದು ಸದರಿಯವರಿಗೆ 14 ದಿವಸಗಳ ಕಾಲ ಗೃಹ ದಿಗ್ಬಂಧನ ವಿಧಿಸಿ ಆರೋಗ್ಯ ಇಲಾಖೆಯವರು ಮನೆಯಲ್ಲಿರಲು ಸೂಚಿಸಿರುತ್ತಾರೆ, ಸದರಿ ಗೃಹ ದಿಗ್ಬಂದನದಲ್ಲಿ ಇರುವವರೆಗೆ ಸ್ಥಳಿಯ ಆಶಾ, ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಂಭಂದಪಟ್ಟ ಹಿರಿಯ ಆರೋಗ್ಯ ಸಹಾಯಕರು ಬೆಳಿಗ್ಗೆ/ಸಾಯಂಕಾಲ ನಿಯಮಿತವಾಗಿ ಆರೋಗ್ಯ ಸ್ಥಿತಿ ಚೆಕ್ ಮಾಡಲು ಹೋದಾಗ ಸದರಿಯವರು ಗೃಹ ದಿಗ್ಬಂದನದಲ್ಲಿರದೆ ಮನೆಯಿಂದ ಹೊರಗಡೆ ತೀರುಗಾಡುತ್ತಿದ್ದು, ಸದರಿಯವರು ಕೋವಿಡ್ -19 (ಕೊರೊನಾ)ಧನಾತ್ಮಕ ಇದ್ದು ಮನೆಯಿಂದ ಹೊರಗಡೆ ತೀರುಗಾಡಿದರೆ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತದೆ ಅಂತಾ ಗೊತ್ತಿದ್ದರು ಗೃಹ ದಿಗ್ಬಂದನ ಉಲ್ಲಂಘನೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿ ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಉಂಟುಮಾಡಿ ಕೊರೋನಾ ಕೊವಿಡ್ 19 ಸೊಂಕು ಹಬ್ಬಿಸುವ ಸಾದ್ಯತೆ ಇರುತ್ತದೆ. ಸದರಿಯವರ ವಿವರ ಇಂತಿದೆ 1) ಸುಜಾತ 2) ಸಿದ್ರಾಮಪ್ಪ 3) ಆಯಿಶಾ ಸದರಿಯವರಿಗೆ ದಿನಾಂಕ; 12/09/2020 ರಿಂದ 26/09/2020 ರವರೆಗೆ 14 ದಿವಸಗಳ ಕಾಲ ಗೃಹ ದಿಗ್ಬಂದನದಲ್ಲಿರಲು ಆದೇಶವಿದ್ದು ಸದರಿಯವರು ಆದೇಶ ಉಲ್ಲಂಘನೆ ಮಾಡಿ ಮನೆಯಿಂದ ಹೊರಗಡೆ ತೀರುಗಾಡುತ್ತಿದ್ದು ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.91/2020 ಕಲಂ.269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.                                      


ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 92/2020 ಕಲಂ: 269 ಐಪಿಸಿ : ಇಂದು ದಿನಾಂಕ; 03/10/2020 ರಂದು 12-15 ಪಿಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀಮತಿ ಬಸ್ಸಮ್ಮ ಗಂಡ ಪಾಂಡುರಂಗ ತಳವಾರ ವ; 39 ವರ್ಷ ಜಾಃ ಕಬ್ಬಲಿಗ  ಉಃ ಎಸ್.ಡಿ.ಎ ನಗರಸಭೆ ಕಾಯರ್ಾಲಯ ಯಾದಗಿರಿ. ಸಾಃ ಶಹಾಪೂರ ಪೇಠ, ಶರಣನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನಗೆ ಯಾದಗಿರಿಯ ವಾರ್ಡ ನಂ.25 ಕೆ.ಇ.ಬಿ ಕಾಲೋನಿ ಏರಿಯಾದ ಕೊರೋನಾ (ಕೋವಿಡ್-19) ಗೃಹ ದಿಗ್ಬಂದನದಲ್ಲಿ ಇರುವ ಧನಾತ್ಮಕ ಸೋಂಕಿತ ವ್ಯಕ್ತಿಗಳ ಪರಿಶೀಲನೆ ಕುರಿತು ನೇಮಿಸಿದ್ದು ಇರುತ್ತದೆ. ಈ ಕೆಳಗಿನ ವ್ಯಕ್ತಿಗಳು ಕೊವಿಡ್-19 ಸೊಂಕು  ಧನಾತ್ಮಕ ಹೊಂದಿದ್ದು ಸದರಿಯವರಿಗೆ 14 ದಿವಸಗಳ ಕಾಲ ಗೃಹ ದಿಗ್ಬಂಧನ ವಿಧಿಸಿ ಆರೋಗ್ಯ ಇಲಾಖೆಯವರು ಮನೆಯಲ್ಲಿರಲು ಸೂಚಿಸಿರುತ್ತಾರೆ, ಸದರಿ ಗೃಹ ದಿಗ್ಬಂದನದಲ್ಲಿ ಇರುವವರೆಗೆ ಸ್ಥಳಿಯ ಆಶಾ, ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಂಭಂದಪಟ್ಟ ಹಿರಿಯ ಆರೋಗ್ಯ ಸಹಾಯಕರು ಬೆಳಿಗ್ಗೆ/ಸಾಯಂಕಾಲ ನಿಯಮಿತವಾಗಿ ಆರೋಗ್ಯ ಸ್ಥಿತಿ ಚೆಕ್ ಮಾಡಲು ಹೋದಾಗ ಸದರಿಯವರು ಗೃಹ ದಿಗ್ಬಂದನದಲ್ಲಿರದೆ ಮನೆಯಿಂದ ಹೊರಗಡೆ ತೀರುಗಾಡುತ್ತಿದ್ದು, ಸದರಿಯವರು ಕೋವಿಡ್ -19 (ಕೊರೊನಾ)ಧನಾತ್ಮಕ ಇದ್ದು ಮನೆಯಿಂದ ಹೊರಗಡೆ ತೀರುಗಾಡಿದರೆ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತದೆ ಅಂತಾ ಗೊತ್ತಿದ್ದರು ಗೃಹ ದಿಗ್ಬಂದನ ಉಲ್ಲಂಘನೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿ ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಉಂಟುಮಾಡಿಕೊರೋನಾ ಕೊವಿಡ್ 19 ಸೊಂಕು ಹಬ್ಬಿಸುವ ಸಾದ್ಯತೆಇರುತ್ತದೆ. ಸದರಿಯವರ ವಿವರ ಇಂತಿದೆ 1) ಜಯಪ್ಪ ತಂದೆ ಹಣಮಂತ 2) ಮಲ್ಲಿಕಾಜರ್ುನ ಸದರಿಯವರಿಗೆ ದಿನಾಂಕ; 13/09/2020 ರಿಂದ 27/09/2020 ರವರೆಗೆ 14 ದಿವಸಗಳ ಕಾಲ ಗೃಹ ದಿಗ್ಬಂದನದಲ್ಲಿರಲು ಆದೇಶವಿದ್ದು ಸದರಿಯವರು ಆದೇಶ ಉಲ್ಲಂಘನೆ ಮಾಡಿ ಮನೆಯಿಂದ ಹೊರಗಡೆ ತೀರುಗಾಡುತ್ತಿದ್ದು ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.92/2020 ಕಲಂ.269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- ಪಿ.ಎ.ಆರ್ ನಂ: 07/2020 ಕಲಂ 107 ಸಿ.ಆರ್.ಪಿ.ಸಿ : ಇಂದು ದಿನಾಂಕ 03-10-2020 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಾನು ಹಳ್ಳಿ ಬೇಟಿ ಕುರಿತು ಜೀನಕೇರಾ ಗ್ರಾಮಕ್ಕೆ ಬೇಟಿ ನೀಡಿ ನಂತರ ಜೀನಕೇರಾ ತಾಂಡಾಕ್ಕೆ ನೀಡಿದಾಗ ಅಲ್ಲಿ ಭಾತ್ಮೀದಾರರಿಂದ ತಿಳಿದು ಬಂದಿದ್ದೆನೆಂದರೆ ಒಂದನೇ ಪಾಟರ್ಿಯವರಾದ 1) ಶಂಕರ ತಂದೆ ಗೋಬ್ರ್ಯಾ ಜಾಧವ 2) ತುಕ್ಕ್ಯಾ ತಂದೆ ಗೋಬ್ರ್ಯಾ ಜಾದವ 3) ಪರಸ್ಯಾ ತಂದೆ ಗೋಬ್ರ್ಯಾ ಜಾದವ 4) ಜಿಂಗಿಬಾಯಿ ಗಂಡ  ಗೋಬ್ರ್ಯಾ ಜಾದವ 5) ಸಕ್ರಿಬಾಯಿ ಗಂಡ ಪರಸ್ಯಾ ಜಾಧವ ಹಾಗೂ 6) ಜ್ಯೋತಿಬಾಯಿ ಗಂಡ ಶಂಕ್ರ್ಯಾ ಜಾಧವ ಮತ್ತು ಎರಡನೇ ಪಾಟರ್ಿಯವರಾದ  1) ರಮೇಶ ತಂದೆ ಹರ್ಯಾ ಜಾಧವ 2) ಯಶೋದಾಬಾಯಿ ಗಂಡ ರಮೇಶ ಜಾಧವ ಇವರ ಮಧ್ಯ ವೈಶಮ್ಯ ಬೆಳೆದಿದ್ದು ಎನೆಂದರೆ ಎರಡನೇಯ ಪಾಟರ್ಿಯ ರಮೇಶ ಇತನ ಕಾಕನವರು ಬಾಂಬೆಯಲ್ಲಿದ್ದು ಅವರು ತಮ್ಮ ಅಡಚಣೆಯ ಸಲುವಾಗಿ ತಮ್ಮ ಹೋಲ ಮಾರಾಟಕ್ಕಿಟ್ಟಿದ್ದು ಇರುತ್ತದೆ. ಈ ಹೋಲವನ್ನು ರಮೇಶ ಇತನೇ ಕೊಂಡುಕೊಳ್ಳಲು ನಿಧರ್ಾರ ಮಾಡಿದ್ದು ಆದರೆ ರಮೇಶನ ಕಾಕ ಇತನು ತನ್ನ ಹೋಲ ಒಂದನೇ ಪಾಟರ್ಿಯ ಪರಸ್ಯಾ ಇತನಿಗೆ ಮಾರಾಟ ಮಾಡಲು ಮುಂದಾಗಿರುತ್ತಾನೆ. ಆದ್ದರಿಂದ ರಮೇಶನು ನಮ್ಮ ಕಾಕನ ಹೋಲ ನಾನೇ ಖರೀಧಿ ಮಾಡುತ್ತೆನೆ ಯಾರಿಗೂ ಖರೀಧಿ ಮಾಡಲು ಬಿಡುವುದಿಲ್ಲಾ ಅಂತಾ ಹಠ ಹಿಡಿದಿದ್ದು ಅದಕ್ಕೆ ಒಂದನೇ ಪಾಟರ್ಿಯ ಪರಸ್ಯಾ ಇತನು ಆ ಹೋಲ ನಾನು ಖರೀಧಿ ಮಾಡಿಯೇ ತಿರುತ್ತೆನೆಂದು ಪಟ್ಟು ಹಿಡಿದಿದ್ದು ಇರುತ್ತದೆ. ಅಲ್ಲದೇ  ರಮೇಶ ಇತನ ಹೋಲದಲ್ಲಿ ಒಂದನೇ ಪಾಟರ್ಿಯವರು ಕುರಿ ಬಿಟ್ಟು ಮೇಯಿಸಿದ್ದಾರೆೆ ಅಂತಾ ಎರಡು ಪಾಟರ್ಿಯವರ ಮಧ್ಯ ದಿನಾಂಕ 18-09-2020 ರಂದು ಜಗಳಾ ಆಗಿದ್ದು ಇರುತ್ತದೆ. ಈ ರೀತಿಯಾಗಿ ಎರಡು ಪಾಟರ್ಿಯವರು ಹೋಲ ಕೊಂಡುಕೊಳ್ಳುವ ವಿಷಯದಲ್ಲಿ ತೀವೃ ವೈಮನಸ್ಸು ಬೆಳೆಸಿಕೊಂಡು ಒಳಒಳಗೆ ಪಾಟರ್ಿ ಕಟ್ಟಿಕೊಂಡು ಕೈಗಳಲ್ಲಿ ಮಾರಕಾಸ್ರ್ತ ಹಿಡಿದುಕೊಂಡು ತಾಂಡಾದಲ್ಲಿ ತಿರುಗಾಡು ತ್ತಿದ್ದು ಎರಡೂ ಪಾಟರ್ಿ ಜನರ ಮದ್ಯ ಯಾವ ವೇಳೆಯಲ್ಲಾದರೂ ಜಗಳವಾಗಿ ಜೀವಹಾನಿ ಮತ್ತು ಆಸ್ತಿಪಾಸ್ತಿಗೆ ಹಾನಿ ಮಾಡಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗವುಂಟಾಗುವ ಸಂಭವ ಕಂಡುಬಂದಿರುತ್ತದೆ. ಆದ್ದರಿಂದ ಜೀನಕೇರಾ ತಾಂಡಾದಿಂದ ಮರಳಿ 11 ಎ.ಎಮ್ ಕ್ಕೆ ಠಾಣೆಗೆೆ ಬಂದು ಎರಡು ಪಾಟಿ ಜನರ ವಿರುದ್ದ ಮುಂಜಾಗೃತಾ ಕ್ರಮಕ್ಕಾಗಿ ಠಾಣೆಯ ಪಿ.ಎ.ಆರ್ ನಂ: 07/2020 ಕಲಂ 107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತಾ ಕ್ರಮ ಕೈಗೊಂಡಿದ್ದು ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ: 142/2020 ಕಲಂ 78 (3) ಕೆ.ಪಿ ಎಕ್ಟ : ಇಂದು ದಿನಾಂಕ 03-10-2020 ರಂದು 7-35 ಪಿಎಮ್ ಕ್ಕೆ ಶ್ರೀ ನಾನಗೌಡ ಎಸ್ ಮಗಿ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪತ್ರದೊಂದಿಗೆ ಜ್ಞಾಪನ ಪತ್ರ ನೀಡಿದ್ದು, ಅದರ ಸಾರಾಂಶವೆನೆಂದರೆ ಇಂದು ದಿನಾಂಕ. 03-10-2020 ರಂದು    4-45 ಪಿ.ಎಮ್ ಕ್ಕೆ ಠಾಣೆಯಲ್ಲಿರುವಾಗ ಯಾದಗಿರಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯ ಜೀನಕೇರಾ ಗ್ರಾಮದಲ್ಲಿ ಯಾರೋ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಮಟಕಾ ಜೂಜಾಟ ಆಡುತ್ತಿದ್ದವರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಇಂದು ದಿನಾಂಕ 03-10-2020 ರಂದು 7-25 ಪಿ.ಎಮ್ ಕ್ಕೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಜ್ಞಾಪನಾ ಪತ್ರದ ಜೋತೆಯಲ್ಲಿ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ಸಲ್ಲಿಸಿದ್ದು ಇರುತ್ತದೆ.  ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 142/2020 ಕಲಂ 78 (3) ಕೆ.ಪಿ ಎಕ್ಟ ಅಡಿಯಲ್ಲಿ ಗುನ್ನ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ: ಯು.ಡಿ.ಆರ್ ನಂ: 10/2020 ಕಲಂ 174 ಸಿಆರ್ಪಿಸಿ : ಮೃತನಿಗೆ ಸುಮಾರು 2 ವರ್ಷಗಳಿಂದ ಮೃತನಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಆತನಿಗೆ ಎಲ್ಲಾ ಕಡೆಗೆ ದವಾಖಾನೆಗೆ ತೋರಿಸಿದರೂ ಕಮ್ಮಿಯಾಗದ ಕಾರಣ ಮೃತನು ಮನಸ್ಸನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 02-10-2020 ರಂದು 9 ಪಿ.ಎಮ್ ಕ್ಕೆ  ತನ್ನ ಮನೆಯಲ್ಲಿ ಕ್ರಿಮಿನಾಶಕ ಎಣ್ಣೆ ಸೇವನೆ ಮಾಡಿದಾಗ ಅವನಿಗೆ ಉಪಚಾರ ಕುರಿತು ಜಿಜಿ.ಎಚ್ ಯಾದಗಿರಿಗೆ ಸೇರಿಕೆ ಮಾಡಿದ್ದು ಮತ್ತು ಹೆಚ್ಚಿನ ಉಪಚಾರಕ್ಕೆ ರಾಯಚೂರಿನ ರೀಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಮೃತನು ಉಪಚಾರ ಹೊಂದುತ್ತಾ ಇಂದು ದಿನಾಂಕ 03-10-2020 ರಂದು ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೂ ಯಾವುದೇ ತರಹದ ಸಂಶಯವಿರುವುದಿಲ್ಲಾ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ: 10/2020 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:-  ಪಿ,ಎ,ಆರ್ ನಂ 13/2020 ಕಲಂ 107 ಸಿ.ಆರ್.ಪಿ.ಸಿ : ನಾನು ಶ್ರೀ ಹಣಮಂತ ಪಿಎಸ್ಐ ಗುರುಮಠಕಲ ಪೊಲೀಸ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೇನಂದರೆ ಇಂದು ದಿನಾಂಕ: 03.10.2020 ರಂದು ಬೆಳಿಗ್ಗೆ 07.30 ಗಂಟೆ  ಸುಮಾರಿಗೆ ಹಳ್ಳಿ ಬೇಟಿ ಮತ್ತು ಪೆಟ್ರೋಲಿಂಗ್ ಕುರಿತು ಠಾಣೆಯಿಂದ ಹೊರಟು ಚಂಡ್ರಕಿ,ಮಡೆಪಲ್ಲಿ, ದಂತಾಪೂರ ಗ್ರಾಮಗಳಿಗೆ ಬೇಟಿ  ನೀಡಿದ ಪುಟಪಾಕ ಗ್ರಾಮಕ್ಕೆ ಹೋಗಿ ಅಲ್ಲಿ ಪೊಲೀಸ ಬಾತ್ಮಿದಾರರಿಗೆ ವಿಚಾರಿಸಿದಾಗ ತಿಳಿದು ಬಂದಿರುವುದೇನೆಂದರೆ, ಪುಟಪಾಕ ಗ್ರಾಮದ ಜಮೀನು ವಿಷಯಕ್ಕೆ ಸಂಬಂದಿಸಿದಂತೆ ಸವರ್ೇ ನಂ 202/ಎ 3 ಎಕರೆ ಮತ್ತು 203/ಎ 3 ಎಕರೆ 23 ಗುಂಟೆ  ಜಮೀನು ವಿಷಯದಲ್ಲಿ ಸುಮಾರು ದಿನಗಳಿಂದ ತಟ್ಟೆ ತಕರಾರುಗಳಿದ್ದು 1ನೇ ಪಾಟರ್ಿ ಜನರಾದ ಗ್ರಾಮ ಇವರ ನಡುವೆ ಆಂತರಿಕ ವೈಮನ್ಸಿನಿಂದ ಕೂಡಿದ್ದು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಈ ಎರಡು ಪಾಟರ್ಿಯ  ಜನರ ನಡುವೆ  ಕಲಹ ಉಂಟಾಗಿ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟಾಗುವ ಸಾದ್ಯತೆಗಳು ಇರುತ್ತವೆ, ಗ್ರಾಮದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ದಕ್ಕೆ ಉಂಟಾಗುವ ಸಾಧ್ಯತೆ ಇರುವದರಿಂದ ಎರಡೂ ಪಾಟರ್ಿಯ ಜನರ ಮೇಲೆ ಮುಂಜಾಗೃತ ಕ್ರಮವಾಗಿ ಕೋರಿ ಗುರುಮಠಕಲ ಪೊಲೀಸ ಠಾಣೆ ಪಿ,ಎ,ಆರ್ ನಂ 13/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ಸದರಿಯವರ ಮೇಲೆ ಕಲಂ.116 ಸಿ.ಆರ್,ಪಿಸಿ ಅಡಿಯಲ್ಲಿ ಬಾಂಡಕ್ರಮ ಜರುಗಿಸಲು ವಿನಂತಿ


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 139/2020  ಕಲಂ 454, 457, 380 ಐ.ಪಿ.ಸಿ : ಇಂದು ದಿನಾಂಕ 03.10.2020 ರಂದು ಮಧ್ಯಾಹ್ನ 2-30 ಗಂಟೆಗೆ ಅಜರ್ಿದಾರ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ದಿನಾಂಕ. 26.09.2020ರಂದು ಬೆಳಿಗ್ಗೆ ನಾನು ನನ್ನ ಹೆಂಡತಿ ಮತ್ತು ನನ್ನ ಮಕ್ಕಳನ್ನು ಕರೆದುಕೊಂಡು ನಮ್ಮ ಅತ್ತೆಗೆ ಮಾತನಾಡಿಸಲು ಯಾದಗಿರಿಗೆ ಹೋಗಿದ್ದು, ಮರಳಿ ದಿನಾಂಕ. 27.09.2020 ರಂದು ಮಧ್ಯಾಹ್ನ 12.00 ಗಂಟೆಗೆ ಬಂದು ನಮ್ಮ ಮನೆಯಲ್ಲಿ ನೋಡಲಾಗಿ ನಮ್ಮ ಮನೆಯ ದೇವರ ಕೋಣೆಯ ಬಾಗಿಲು ಚಿಲಕ ತೆಗೆದಿದ್ದು, ಸದರಿ ನಮ್ಮ ಮನೆಯ ದೇವರ ಕೋಣೆಯಲ್ಲಿದ್ದ ಎಸ್.ಬಿ.ಎಮ್.ಎಲ್ ಗನ ನಂ-209 ಅ.ಕಿ. 2,000/- ರೂ.ಕಿಮ್ಮತ್ತಿನದ್ದನ್ನು ಯಾರೋ ತೆಗೆದುಕೊಂಡು ಹೋಗಿದ್ದು, ನಮ್ಮ ತಂದೆಗೆ ಮತ್ತು ನಮ್ಮ ಮನೆಯ ಸುತ್ತಮುತ್ತಲಿನವರಿಗೆ ವಿಚಾರಿಸಿದ್ದು, ಯಾರಿಗೂ ಅದರ ಬಗ್ಗೆ ಗೊತ್ತಿರುವದಿಲ್ಲ ಅಂತ ತಿಳಿಸಿರುತ್ತಾರೆ. ದಿನಾಂಕ. 26.09.2020 ರಂದು ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ. 27.09.2020 ರ ಮಧ್ಯಾಹ್ನ 12.00 ಗಂಟೆವರೆಗಿನ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ದೇವರ ಕೊಣೆ ಬಾಗಿಲು ತೆಗೆದು ಅದರಲ್ಲಿ ಮೊಳೆಗೆ ಹಾಕಿದ್ದನ್ನು ತೆಗೆದುಕೊಂಡು ಹೋಗಿರುತ್ತಾರೆ. ಅವರು ಯಾರೆಂಬುದು ನನಗೆ ಗೊತ್ತಿರುವದಿಲ್ಲ. ನಾನು ಇಲ್ಲಿಯರೆಗೆ ನಮ್ಮ ಗ್ರಾಮದಲ್ಲಿ ಎಲ್ಲರಿಗೂ ವಿಚಾರಣೆ ಮಾಡಿದ್ದು ಮತ್ತು ಎಲ್ಲಾ ಕಡೆಗೂ ನನ್ನ ಗನ ಹುಡುಕಾಡಿದ್ದು ಇಲ್ಲಿಯರೆಗೆ ಪತ್ತೆಯಾಗಿರುವದಿಲ್ಲ.   ಕಾರಣ ನಾನು ನನ್ನ ಕುಟುಂಬದವರನ್ನು ಕರೆದುಕೊಂಡು ಯಾದಗಿರಿಗೆ ಹೋದಾಗ ಸರಿಯಾಗಿ ಕಣ್ಣು ಕಾಣದ ಮತ್ತು ಕಿವಿ ಕೇಳಿಸದ ನನ್ನ ತಂದೆ ಒಬ್ಬನೇ ಮನೆಯಲ್ಲಿದ್ದಾಗ ಯಾರೋ ಕಳ್ಳರು ಬೆಳೆ ರಕ್ಷಣೆಗಾಗಿ ನಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟುಕೊಂಡಿದ್ದ ಎಸ್.ಬಿ.ಎಮ್.ಎಲ್ ಗನ ನಂ-209 ನೇದ್ದನ್ನು ಕಳವು ಮಾಡಿಕೊಂಡು ಹೋಗಿದ್ದು, ಸದರಿ ನನ್ನ ಗನ ಕಳವು ಮಾಡಿಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಂಡು ನನ್ನ ಗನ ಪತ್ತೆ ಹಚ್ಚಬೇಕು ಅಂತ ಎಲ್ಲಾ ಕಡೆಗೂ ನನ್ನ ಗನ ಬಗ್ಗೆ ವಿಚಾರಿಸಿದ್ದು, ಎಲ್ಲಾ ಕಡೆಗೂ ಹುಡುಕಾಡಿ ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ ಅಂತ ಅಜರ್ಿ ಸಾರಾಂಶ ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 24/2020 ಕಲಂ. 174 ಸಿಆರ್ಪಿಸಿ : ಇಂದು ದಿನಾಂಕ:03/10/2020 ರಂದು 1:30 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ ಶ್ರೀಮತಿ ದೇವಮ್ಮ ಗಂಡ ಪದ್ಮಣ್ಣ ಕುರಿ (ಇಂಗಳಗಿ) ವ:38 ವರ್ಷ ಜಾ:ಕುರುಬರು ಉ:ಮನೆಗೆಲಸ ಸಾ:ದೇವಾಪೂರ ತಾ:ಸುರಪೂರ ಇವರ ಪಿಯರ್ಾದಿ ಸಾರಾಂಶವೆನೆಂದರೆ ನನಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಗಂಡನ ಅಣ್ಣತಮ್ಮಂದಿರು 3 ಜನರಿದ್ದು. ನಾವೆಲ್ಲರೂ ಬೇರೆ ಬೇರೆ ಮನೆ ಮಾಡಿಕೊಂಡು ಉಪಜೀವಿಸುತ್ತೆವೆ. ನನ್ನ ಗಂಡನ ಪಾಲಿಗೆ ಸವರ್ೆ ನಂ. 176 ರಲ್ಲಿ 5 ಎಕರೆ ಜಮೀನಿದ್ದು. ಸದರಿ ಜಮೀನಿನ ಮೇಲೆ ಬೀಜ ಗೊಬ್ಬರಕ್ಕಾಗಿ ನಮ್ಮ ಗ್ರಾಮದ ದೇವಾಪೂರ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ದಲ್ಲಿ 1,30,000/- ರೂಪಾಯಿ ಬೆಳೆ ಸಾಲ ತೆಗೆದುಕೊಂಡಿರುತ್ತಾನೆ. ಮತ್ತು ಈ ವರ್ಷ ಕೋವಿಡ್-19 ರಲ್ಲಿ ಜಮೀನಿನ ಮೇಲೆ 25,000/- ರೂಪಾಯಿ ಸಾಲ ಪಡೆದಿರುತ್ತಾನೆ. ಮತ್ತು ಹಿರಿಯ ಮಗಳಾದ ಸುವರ್ಣ ಇವಳ ಮದುವೆ ಇದೇ ವರ್ಷ ಮಾಡಿದ್ದು ಅವಳ ಮದುವೆ ಮತ್ತು ಸಂಸಾರಕ್ಕಾಗಿ ಹಾಗೂ ಈ ವರ್ಷ ಬೀಜ ಗೊಬ್ಬರಕ್ಕಾಗಿ ಕೈಗಡ 3 ಲಕ್ಷ ರೂಪಾಯಿ ಸಾಲ ಮಾಡಿದ್ದು ಇರುತ್ತದೆ. ಈ ವರ್ಷ ಮಳೆ ಹೆಚ್ಚಾಗಿದ್ದರಿಂದ ನಮ್ಮ ಹೊಲದಲ್ಲಿ ಹತ್ತಿ ಬೆಳೆ ಹಾಕಿದ್ದು ಮಳೆ ನೀರು ನಿಂತು ಬೆಳೆ ಎಲ್ಲಾ ಹಾನಿಯಾಗಿರುತ್ತದೆ. ಆದ್ದರಿಂದ ನನ್ನ ಗಂಡನು ದಿನಾಲು ಬೆಳೆ ಹಾನಿಯಾಗಿರುತ್ತದೆ. ಬ್ಯಾಂಕ್ ಸಾಲ ಮತ್ತು ಕೈಗಡ ಸಾಲ ಹೇಗೆ ತಿರಿಸಬೇಕು ಅಂತ ಚಿಂತೆ ಮಾಡುತ್ತಿದ್ದನು. ಆದರೆ ನಾವು ಮನೆಯಲ್ಲಿ ಎಲ್ಲರೂ ನನ್ನ ಗಂಡನಿಗೆ ಈ ವರ್ಷ ಬೆಳೆ ಹೋದರಾಯಿತು ಮುಂದಿನ ವರ್ಷ ಸರಿಯಾಗಿ ಬೆಳೆ ಬೆಳೆದು ಸಾಲ ತಿರಿಸಿದರಾಯ್ತು ಅಂತ ದೈರ್ಯ ಹೇಳುತ್ತಿದ್ದೇವು. ಮತ್ತು ನನ್ನ ಮೈದುನರು ಕೂಡಾ ದೈರ್ಯ ಹೇಳಿರುತ್ತಾರೆ ಆದರೂ ನನ್ನ ಗಂಡ ದಿನಾಲು ಸಾಲದ ಬಗ್ಗೆ ಚಿಂತೆ ಮಾಡುತ್ತಾ ಇರುತ್ತಿದ್ದನು. ಹೀಗಿರುವಾಗ ಇಂದು ದಿನಾಂಕ:03/10/2020 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನನ್ನ ಗಂಡನು ಮನೆಯಲ್ಲಿದ್ದ ಹತ್ತಿ ಬೆಳೆಗೆ ಹೊಡೆಯುವ ಕ್ರೀಮಿನಾಷಕ ಔಷದವನ್ನು ಸೇವಿಸಿ ಒದ್ದಾಡುತ್ತಿದ್ದನು ಅಲ್ಲೇ ಇದ್ದ ನಾನು ಯಾಕೆ ಏನಾಗಿದೆ ಎಂದು ವಿಚಾರಿಸಿದಾಗ ಸಾಲ ಬಾಧೆ ತಾಳದೇ ಕ್ರೀಮಿನಾಷಕ ಔಷದ ಸೇವಿಸಿರುತ್ತೆನೆ. ಅಂತ ತಿಳಿಸಿದೇನು ಆಗ ನಾನು ಗಾಬರಿಯಾಗಿ ಅಲ್ಲೇ ಇದ್ದ ನನ್ನ ಮೈದುನರಾದ ಚಿದಾನಂದ ಮತ್ತು ಸೋಮಶೇಖರ ರವರಿಗೆ ವಿಷಯ ತಿಳಿಸಿ ಒಂದು ಖಾಸಗಿ ವಾಹನದಲ್ಲಿ ನನ್ನ ಗಂಡನನ್ನು ಕುಡಿಸಿಕೊಂಡು ಸಂಗಡ ನನ್ನ ಮೈದುನರು ಮತ್ತು ತಂಗಿಯರು ಪಾರ್ವತಿ, ನೀಲಮ್ಮ, ನನ್ನ ಮಕ್ಕಳಾದ ಸುವರ್ಣ, ಅಶ್ವಿನಿ, ಅಶೋಕ ಎಲ್ಲರೂ ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ 9:30 ಎ.ಎಮ್ ಸುಮಾರಿಗೆ ಉಪಚಾರ ಕುರಿತು ಸೇರಿಕೆ ಮಾಡಿರುತ್ತೇವೆ. ಅಲ್ಲಿಯ ವೈದ್ಯರಿಂದ ಪ್ರಥಮ ಉಪಚಾರ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಆಸ್ಪತ್ರೆ ಯಾದಗಿರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ 12:15 ಪಿ.ಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಆಗ ನಾವು ಮರಳಿ ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ಬಂದು ಶವಗಾರ ಕೋಣೆಯಲ್ಲಿ ಹಾಕಿರುತ್ತೆವೆ. ನನ್ನ ಗಂಡನು ಸಾಲದ ಬಾಧೆ ತಾಳದೇ ಕ್ರೀಮಿನಾಷಕ ಔಷದ ಸೇವಿಸಿ ಮೃತಪಟ್ಟಿರುತ್ತಾನೆ. ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತ ಹೇಳಿಕೆ ನೀಡಿದ್ದರ. ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.24/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 251/2020. ಕಲಂ 379 ಐ.ಪಿ.ಸಿ. : ಇಂದು ದಿನಾಂಕ: 03-10-2020 ರಂದು 5:30 ಪಿ.ಎಮ್.ಕ್ಕೆ ಶ್ರೀಮತಿ ಮಾನಮ್ಮ ಗಂಡ ಭೀಮರಾಯ ಚಂದಾಪುರ ವಯ: 50 ವರ್ಷ ಜಾ: ಕುರುಬ ಉ: ಕುರಿ ಕಾಯುವುದು ಸಾ: ಹಳಿಸಗರ ಶಹಾಪುರ  ಇವರು ಠಾನೆಗೆ ಬಂದು ಒಂದು ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ನಾನು ಮತ್ತು ನಮ್ಮ ಸೊಪವ್ವ ಗಂಡ ದೇವಪ್ಪ ಶಾಖಾಪುರ ಇಬ್ಬರು ಸುಮಾರು 60 ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದೇವೆ ಹೀಗಿದ್ದು ನಿನ್ನೆ ದಿನಾಂಕ 02-10-2020 ರಂದು ನಾನು ಮತ್ತು ಸೋಪವ್ವ ಇಬ್ಬರೂ ಕುಡಿ ಕುರಿ ಮೇಯಿಸಲು ಹೋಗಿ ಕುರಿ ಮತ್ತು ಆಡುಗಳನ್ನು ಮೇಯಿಸಿಕೊಂಡು ಮರಳು ಸಾಯಂಕಾಲ 6:00 ಗಂಟೆಗೆ ನಮ್ಮ ಮನೆಯ ಹತ್ತಿರ ಇದ್ದ ಹಟ್ಟಿಯಲ್ಲಿ ಹಾಕಿ  ರಾತ್ರಿ 8 ಗಂಟೆಗೆ ಊಟಮಾಡಿ  ಮಲಗಿಕೊಂಡೆವು  ನಂತರ ಇಂದು ದಿನಾಂಕ: 02-10-2020 ರಂದು ಮುಂಜಾನೆ 6:00 ಗಂಟೆ ಸುಮಾರಿಗೆ ಕುರಿ ಮತ್ತು ಆಡುಗ 4 (ನಾಲ್ಕು) ಆಡುಗಳು ಇರಲಿಲ್ಲ ಸೋಪವ್ವನವು ಒಟ್ಟು 3 (ಮೂರು) ಆಡುಗಳು ಮತ್ತು ಒಂದು ಹೋತು ಇರಲಿಲ್ಲ   ಇಲ್ಲಿಯ ವರೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಸದರಿ 7 ಆಡುಗಳು ಮತ್ತು ಒಂದು ಹೋತಿನ ಕಿಮ್ಮತ್ತು ಸುಮಾರು 48000/-ರೂ. ಆಗುತ್ತದೆ. ನಾವು ಇಲ್ಲಿಯ ವರೆಗೆ ಹುಡುಕಾಡಿದರೂ ಸಿಕ್ಕಿರುವಿದಿಲ್ಲ. ಯಾರೋ ಕಳ್ಳರು ನಮ್ಮ ಆಡುಗಳನ್ನು ನಮ್ಮ ಕುರಿ ಹಟ್ಟಿಯಿಂದ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ   ನಾವು ಇಲ್ಲಿಯ ವರೆಗೆ ಹುಡುಕಾಡಿ  ಇಂದು ದಿನಾಂಕ : 03-10-2020 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಕಳ್ಳತನವಾದ ನಮ್ಮ ಆಡುಗಳನ್ನು ಹುಡುಕಿ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 251/2020 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:-. ಯು.ಡಿ.ಆರ್ ನಂ 22/2020 ಕಲಂ 174 ಸಿ.ಆರ್.ಪಿ.ಸಿ : ಮಾನ್ಯರೆ, ಇಂದು ದಿನಾಂಕ 03/10/2020 ರಂದು 03-00 ಗಂಟೆಗೆ ಫಿಯರ್ಾದಿ ಸಿದ್ದಮ್ಮ ಗಂಡ ಭೀಮರಾಯ ಚಂಡು ವ|| 30 ವರ್ಷ ಜಾ|| ಕಬ್ಬಲಿಗ ಉ|| ಹೋಲ ಮನಿ ಕೆಲಸ ಸಾ|| ಹಳಿಸಗರ ಇದ್ದು, ಸುಮಾರು 14 ವರ್ಷಗಳಿಂದೆ ಹಳಿಸಗರ ಗ್ರಾಮದ ಭೀಮರಾಯ ಇವರ ಜೋತೆ ಮಾಡಿಕೊಟ್ಟಿದ್ದು ನಮ್ಮ ಸಂಸಾರದಲ್ಲಿ ಎರಡು ಗಂಡು ಮಕ್ಕಳು ಹುಟ್ಟಿದ್ದು ಶರಣಪ್ಪ ವ|| 11 ವರ್ಷ, ಸಾಬರಡ್ಡಿ ವ|| 7 ವರ್ಷ ಮಕ್ಕಳಿದ್ದು, ನನ್ನ  ಗಂಡನ ಅಣ್ಣ ತಮ್ಮಂದೀರರು 5 ಜನರಿದ್ದು ನಾವೂ ಎಲ್ಲರೂ ಬೇರೆ ಬೇರೆಯಾಗಿ ಸಂಸಾರ ಮಾಡುತ್ತಿದ್ದು ನಮ್ಮ ಅತ್ತೆ ಕಿರಿಯ ಮಗನ ಹತ್ತಿರ ಇದ್ದು, ನನ್ನ ಗಂಡ ಭೀಮರಾಯ ಇತನು ಹಳಿಸಗರ ಸೀಮಾಂತರದಲ್ಲಿ ಇರುವ ನಮ್ಮ ಪಿತ್ರಾಜರ್ಿತ ಆಸ್ತಿ ಸವರ್ೇ ನಂ. 236/2, 2.20 ಎಕರೆ ಮತ್ತು 291/10 1.18 ಎಕರೆ ಹೋಲದಲ್ಲಿ ಬೇಸಾಯ ಮಾಡುತ್ತಾ ನಾನು ಮತ್ತು ನನ್ನ ಗಂಡ ಮತ್ತು ಮಕ್ಕಳೊಂದಿಗೆ ಉಪ ಜೀವಿಸುತ್ತಿದ್ದು, ಸದರ ನನ್ನ ಗಂಡ ಬೀಮರಾಯ ಈತನು ಹೋಲದ ಖರ್ಚ ವೆಚ್ಚಗಳಿಗಾಗಿ ಮತ್ತು ಸಂಸಾರದ ಅಡಚಣೆಗಾಗಿ ಅಲ್ಲಿ, ಇಲ್ಲಿ  5,00,000/- ಸಾಲ ಮಾಡಿಕೊಂಡಿದ್ದು, ಸದರ ಸಾಲದ ವಿಷಯವಾಗಿ ಯಾಗಲೂ ಚಿಂತೆ ಮಾಡುತ್ತಾ ಇದ್ದ ನಾನು ಮತ್ತು ನಮ್ಮ ಅತ್ತೆ ಏಕೆ ಚಿಂತೆ ಮಾಡತಿ, ಈ ವರ್ಷ ಇಲ್ಲ, ಮುಂದಿನ ವರ್ಷ  ತೀರಿಸಿದರಾಯಿತು ಎಂದು ದೈರ್ಯ ಹೇಳಿತ್ತಿದ್ದೆವು ಹೀಗಿದ್ದು, ದಿನಾಂಕ 03/10/2020 ರಂದು ಬೇಳಗ್ಗೆ 8 ಗಂಟೆಗೆ ನನ್ನ ಗಂಡ ಜಳಕ ಮಾಡಿ ನನ್ನ ಮುಂದೆ ಬಂದು ಸಾಲ ಬಾಳ ಆಗಿದೆ ಹೇಗೆ ತಿರುಸುವದು ಎಂದು ಬಹಳ ಚಿಂತೆಯಾಗಿದೆ ಈ ವರ್ಷ ಮಳೆ ಬಹಳ ಬಂದು ಬೇಲ ಒಳಗಾತ್ತಾ ಇವೆ, ಅಂತಾ ಹೇಳಿ, ನಾನು ಶಹಾಪೂರ ಕಡೆಗೆ ಹೋಗಿಬರುತ್ತೆನೆ ಎಂದು ಹೇಳಿ ಹೋಗಿದ್ದು,  ನಂತರ ನಾನು ಮನೆಯಲ್ಲಿ ಇದ್ದಾಗ ನನ್ನ ಮೈದುನ ಹಣಮಂತ ಮತ್ತು ನಮ್ಮ ಗ್ರಾಮದ ರಾಜು ಇವರು ಗಾಬರಿಯಾಗಿ ನನ್ನ ಗಂಡನನ್ನು ಒಂದು ಮೋಟಾರ ಸೈಕಲ ಮೇಲೆ ಕುಳಿಸಿಕೊಂಡು ಬಂದು, ನಮ್ಮ ಮೈದುನ ಈತನು ತಿಳಿಸಿದ್ದೆನಂದರೆ, ನಾನು ಹಳಿಸಗರ ಗ್ರಾಮದಲ್ಲಿದ್ದಾಗ ನಮ್ಮ ಅಣ್ಣ ಬೀಮರಾಯ ಈತನು ಪೋನ ಮಾಡಿ ತಿಳಿಸಿದ್ದೆನಂದರೆ, ನಾನು ಬೇವಿನಳ್ಳಿ ಕ್ರಾಸ್ ಹತ್ತಿರ ಸಾಲಬಾದೆಯಿಂದ ಕ್ರೀಮಿನಾಶಕ ವಿಷ್ ಸೇವನೆಮಾಡಿದ್ದೆನೆ ಎಂದು ತಿಳಿಸಿದ್ದು, ಕೂಡಲೇ ನಾನು ಮತ್ತು ರಾಜು ಇಬ್ಬರೂ ಕೂಡಿ ಹೋಗಿ ಸದರ ನಮ್ಮ ಅಣ್ಣನನ್ನು ಕರೆದುಕೊಂಡು ಬಂದಿದ್ದೆವೆ ಅಂತಾ ತಿಳಿಸಿದ್ದು, ನಾವೂ ಕೂಡಲೇ ಒಂದು ಅಟೋದಲ್ಲಿ ನಾನು ಮತ್ತು ಮೈದುನ ಹಣುಮಂತ, ಮತ್ತು ಶೀವಪ್ಪ, ರಾಜು ಎಲ್ಲರೂ ಕೂಡಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಸೇರಿಕೆ ಮಾಡಿದ್ದು, ವೈದ್ಯಾದೀಕಾರಿಗಳ ಸಲಹೆ ಮೆರೆಗೆ, ಹೆಚ್ಚಿನ ಉಪಚಾರ ಕುರಿತು ಕಲಬರುಗಿಗೆ ಕರೆದುಕೊಂಡು ಹೋಗುವಾಗ ಫರತಹಬಾದ ಹತ್ತಿರ 2:10 ಗಂಟೆಗೆ ಮೃತಪಟ್ಟಿದ್ದು ಅಲ್ಲಿಂದ ಮರಳಿ ಶಹಾಪೂರಕ್ಕೆ ಕರೆದುಕೊಂಡು ಬಂದಿದ್ದು ಇರುತ್ತದೆ.ಕಾರಣ ಮಾನ್ಯರವರು ನನ್ನ ಗಂಡ ಭೀಮರಾಯ ತಂದೆ ಸೋಮಯ್ಯ ಚಂಡು ವ|| 35 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಹಳಿಸಗರ ಇತನು ಸಾಲಬಾದೆಯಿಂದ ಜಿಗುಪ್ಸೆಗೊಂಡು ಕ್ರೀಮಿನಾಶಕ ವಿಷ್ ಸೇವೆನ ಮಾಡಿ ಆತ್ಮಹತ್ಯೆಮಾಡಿಕೊಂಡು ಮೃತಪಟ್ಟಿದ್ದು, ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವದೆ ರೀತಿಯ ಸಂಶಯ ವಿರುವದಿಲ್ಲಾ  ಈ ಬಗ್ಗೆ ಮುಂದಿನ ಕ್ರಮ ಕೈಕೊಳ್ಳಲು ವಿನಂತಿ.  ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 22/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಗೋಗಿ  ಪೊಲೀಸ ಠಾಣೆ ಗುನ್ನೆ ನಂ:- 107/2020 ಕಲಂ: 20 (ಎ) (ಬಿ) ಎನ್ಡಿಪಿಎಸ್ ಆಕ್ಟ : ಇಂದು ದಿನಾಂಕ: 03/10/2020 ರಂದು 2:15 ಪಿಎಮ್ಕ್ಕೆ ಠಾಣೆಯ ಶ್ರೀ ಹೈಯ್ಯಾಳಪ್ಪ ಪಿಸಿ-181 ರವರು ಶ್ರೀ ಸೋಮಲಿಂಗ ಒಡೆಯರ್, ಆರಕ್ಷಕ ಉಪ-ನಿರೀಕ್ಷಕರು, ಗೋಗಿ ಪೊಲೀಸ್ ಠಾಣೆ ರವರು ಸರಕಾರಿ ತಪರ್ೆಯಿಂದ ಪಿರ್ಯಾದಿಯಾಗಿ ಶೆಟ್ಟಿಕೇರಾ ಸೀಮಾಂತರದಲ್ಲಿಂದ ನೀಡಿದ ಒಂದು ವರದಿಯನ್ನು ತಂದು ಹಾಜರಪಡಿಸಿದ್ದು, ಸದರಿ ವರದಿ ಸಾರಾಂಶವೆನೆಂದರೆ, ನಾನು ಸೋಮಲಿಂಗ ಒಡೆಯರ ಪಿಎಸ್ಐ (ಕಾ.ಸು) ಗೋಗಿ ಪೊಲೀಸ್ ಠಾಣೆ ನಿಮಗೆ ಸೂಚಿಸುವದೇನೆಂದರೆ, ಇಂದು ದಿನಾಂಕ: 03/10/2020 ರಂದು 08.30 ಎ.ಎಮ್.ಕ್ಕೆ ನಾನು ಗೋಗಿ ಪೊಲೀಸ್ ಠಾಣೆಯಲ್ಲಿದ್ದಾಗ ನನಗೆ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಶೆಟ್ಟಕೇರಾ ಸಿಮಾಂತರದಲ್ಲಿ ಬರುವ ಕಲಾಲ ದೊಡ್ಡಿ ಹತ್ತಿರ ವನದುಗರ್ಾ ಗ್ರಾಮದ ನಿವಾಸಿ ಈರಣ್ಣಗೌಡ ತಂದೆ ರಾಮಚಂದ್ರ ಕಲಾಲ ವಯಾ:55 ಉ: ಒಕ್ಕಲುತನ ಜಾ: ಇಳಗೇರ ಸಾ: ವನದುಗರ್ಾ ತಾ: ಶಹಾಪೂರ ಈತನು ತನ್ನ ಶೆಟ್ಟಿಕೇರಿ ಸೀಮಾಂತರದ ಹೊಲ ಸವರ್ೆ ನಂಬರ 235/1 ನೇದ್ದರಲ್ಲಿ ತೊಗರಿ ಬೆಳೆಯ ಸಾಲಿನಲ್ಲಿ ಅನಧಿಕೃತವಾಗಿ ಯಾವುದೇ ಲೈಸನ್ಸ ಇಲ್ಲದೇ ಗಾಂಜಾ ಗಿಡಗಳನ್ನು ಬೆಳೆದಿರುತ್ತಾನೆ. ಅಂತಾ ಮಾಹಿತಿ ಬಂದ ಮೇರೆಗೆ ಅನಧಿಕೃತವಾಗಿ ಗಾಂಜಾ ಬೆಳೆದ ಸ್ಥಳದ ಮೇಲೆ ದಾಳಿ ಮಾಡುವ ಕುರಿತು ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪುರ ರವರಿಗೆ ಸದರಿ ಸ್ಥಳಕ್ಕೆ ಪತ್ರಾಂಕಿತ ಅಧೀಕಾರಿಗಳು ಮತ್ತು ಪಂಚರೊಂದಿಗೆ, ಹೋಗಿ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಅನುಮತಿ (ಸರ್ಚ ವಾರಂಟ) ನೀಡಲು ವಿನಂತಿಸಿ ಮುದ್ದಾಮ ಸಿಬ್ಬಂದಿಯವರಾದ ವೀರಣ್ಣ ಹೆಚ್.ಸಿ-138 ರವರಿಗೆ ಕೋರಿಕೆ ಪತ್ರದ ಜೋತೆಯಲ್ಲಿ ಕಳುಹಿಸಿರುತ್ತೇನೆ. ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪೂರ ರವರು ಸರ್ಚ ವಾರಂಟ ಹೊರಡಿಸಿ ಅನುಮತಿ ನೀಡಿದ ನಂತರ ಇಬ್ಬರೂ ಪಂಚರಾದ 1) ಶಿವಾನಂದ ತಂದೆ ನಿಂಗಪ್ಪ ಸಿದ್ರಾ ವಯಾ:51 ಉ: ಕಾರ್ಯದಶರ್ಿಗಳು ಗ್ರಾಮ ಪಂಚಾಯತಿ ವನದುಗರ್ಾ ಜಾ: ಕುರುಬರ ಸಾ: ಸಗರ ತಾ: ಶಹಾಪೂರ ಹಾಗೂ 2) ಭೀಮರಾಯ ತಂದೆ ನಾಗಪ್ಪ ಕನರ್ಾಳ ವಯಾ:36 ಉ: ಕರವಸೂಲಿಗಾರ ಗ್ರಾಮ ಪಂಚಾಯತಿ ವನದುಗರ್ಾ ಜಾ: ಬೇಡರ ಸಾ: ವನದುಗರ್ಾ ಇವರನ್ನು ಠಾಣೆಯ ಎಸ್.ಬಿ ಕರ್ತವ್ಯ ಪಿಸಿ-331 ಹನುಮಂತ್ರಾಯ ರವರ ಮುಖಾಂತರ ಠಾಣೆಗೆ ಕರೆಯಿಸಿ ಅವರಿಗೆ ವಿಷಯ ತಿಳಿಸಿದೆನು. ಹಾಗೂ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಜಗನ್ನಾಥ ರೆಡ್ಡಿ ಮಾನ್ಯ ತಹಸೀಲ್ದಾರರು ಶಹಾಪುರ ರವರಿಗೂ ಸಹ ಠಾಣೆಗೆ ಕರೆಯಿಸಿ ಭಾತ್ಮಿ ವಿಷಯ ತಿಳಿಸಿದೆನು. ಈರಣ್ಣಗೌಡ ತಂದೆ ರಾಮಚಂದ್ರಯ್ಯ ಕಲಾಲ ವಯಾ:55 ಉ: ಒಕ್ಕಲುತನ ಜಾ: ಇಳಗೇರ ಸಾ: ವನದುಗರ್ಾ ತಾ: ಶಹಾಪೂರ ಈತನ ಹೊಲ ಸವರ್ೆ ನಂಬರ 235/1 ನೇದ್ದರ ಹೊಲವನ್ನು ಗುರುತಿಸುವ ಕುರಿತು ಶೆಟ್ಟಿಕೇರಾ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಶ್ರೀ. ಮಂಜುನಾಥ ಸಿ. ತಂದೆ  ಚಿಕ್ಕಣ್ಣ ನಾಯಕ ಇವರಿಗೆ ತಿಳಿಸಿದೆನು. ಗಾಂಜಾ ತೂಕ ಮಾಡುವ ಕುರಿತು ತೂಕ ಮಾಡುವ ಸಾಧನದೊಂದಿಗೆ ವ್ಯಾಪಾರಿಯಾದ ಸಂಗಮೇಶ ತಂದೆ ಶಿವಪ್ಪ ಸಜ್ಜನ ಸಾ: ವನದುಗರ್ಾ ಇವರಿಗೆ ಕರೆಸಿದೆನು. ಮತ್ತು ದಾಳಿ ಸಮಯದಲ್ಲಿ ಪೋಟೋ ಮತ್ತು ವಿಡಿಯೋ ಗ್ರಾಫಿ ಮಾಡಲು ಶ್ರೀ ಅಬ್ದುಲ್ ರಜಾಕ ಪೋಟೋಗ್ರಾಫರ ಪೋಟೋ ಪ್ಲಾಶ್ ಗೋಗಿ ಪೇಠ ರವರಿಗೆ ಕರೆಯಿಸಿದೆನು, ನಂತರ ಸದರಿಯವರು ಮತ್ತು ನಮ್ಮ ಸಿಬ್ಬಂದಿಯವರಾದ ಯವರಾದ ಸಿದ್ದಣ್ಣ ಎಎಸ್ಐ, ಶಂಕ್ರೆಪ್ಪ ಎಎಸ್ಐ, ಮಲ್ಲಪ್ಪ ಹೆಚ್.ಸಿ-100, ಹಯ್ಯಾಳಪ್ಪ ಸಿಪಿಸಿ-181, ಹನುಮಂತ್ರಾಯ ಸಿಪಿಸಿ-331, ಶ್ರೀನಿವಾಸ ಸಿಪಿಸಿ-34, ಹಣಮಂತ್ರಾಯ ಸಿಪಿಸಿ-136, ನಿಂಗಪ್ಪ ಕಡ್ಲಿ ಸಿಪಿಸಿ-259, ಶರಣಗೌಡ ಹೆಚ್.ಸಿ-155 ಎಲ್ಲರೂ ಕೂಡಿಕೊಂಡು ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪೂರ ಮತ್ತು ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ ಸದರಿ ಪಂಚರು, ತೂಕ ಮಾಡುವರು, ಪೋಟೋಗ್ರಾಫರ್ ಇವರೆಲ್ಲರೊಂದಿಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯರು ನಮ್ಮ ಠಾಣೆಯ ಸರಕಾರಿ ಜೀಪ್ ನಂ:ಕೆಎ-33, ಜಿ-0160 ನೇದ್ದರಲ್ಲಿ ಹಾಗೂ ಮಾನ್ಯ ತಹಸೀಲ್ದಾರರು ಶಹಾಪೂರ ಇವರ ಸಕರ್ಾರಿ ಜೀಪ ನಂ: ಕೆಎ-33 ಜಿ-0243 ನೇದ್ದರಲ್ಲಿ ಪಂಚರು, ಗ್ರಾಮ ಲೆಕ್ಕಾಧಿಕಾರಿ, ಪೋಟೊ ಗ್ರಾಫರ್, ತೂಕ ಮಾಡುವವರು ಇವರೊಂದಿಗೆ ಠಾಣೆಯಿಂದ 11.30 ಎ.ಎಮ್ ಕ್ಕೆ ಹೊರಟು ಗ್ರಾಮ ಲೆಕ್ಕಾಧಿಕಾರಿಗಳ ಸಹಾಯದಿಂದ ಮಾಹಿತಿ ಸ್ಥಳವಾದ ಶೆಟ್ಟಿಕೇರಾ ಗ್ರಾಮ ಸಿಮಾಂತರದಲ್ಲಿನ ಕಲಾಲ ದೊಡ್ಡಿ ಹತ್ತಿರ ವಾಹನಗಳನ್ನು ನಿಲ್ಲಿಸಿ ಸುಮಾರು 500 ಮೀಟರ ಪೂರ್ವಕ್ಕೆ ನಡೆದುಕೊಂಡು 12.30 ಪಿ.ಎಮ್ಕ್ಕೆ ಸವರ್ೆ ನಂ: 235/1 ನೇದ್ದರ ಹೊಲಕ್ಕೆ ನಡೆದುಕೊಂಡು ಹೋಗುತ್ತಿದ್ದಂತೆ ಹೊಲದಲ್ಲಿದ್ದ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾನೆ. ನಾವು ಹೊಲದ ಒಳಗಡೆ ತಿರುಗಾಡಿ ಪರಿಶೀಲಿಸಿ ನೋಡಲಾಗಿ, ತೋಗರಿ ಬೆಳೆದ ಹೊಲದ ಉತ್ತರಕ್ಕೆ ದಂಡೆಯ ಹತ್ತಿರ ಸ್ವಲ್ಪ ಕಾಯಿಪಲ್ಲೆ ಬೆಳೆ ಹಾಕಿದ್ದು, ಅದಕ್ಕೆ ಹೊಂದಿಕೊಂಡು ಇರುವ ತೊಗರಿ ಬೆಳೆಯ ಕೊನೆಯ ಸಾಲಿಗೆ ಗಾಂಜಾ ಗಿಡ ಬೆಳೆದಿರುವುದು ಕಂಡು ಬಂದಿರುತ್ತದೆ. ಓಡಿ ಹೋದ ವ್ಯಕ್ತಿಯ ಹೆಸರು ಈರಣ್ಣಗೌಡ ತಂದೆ ರಾಮಚಂದ್ರಯ್ಯ ಕಲಾಲ ವಯಾ:55 ಉ: ಒಕ್ಕಲುತನ ಜಾ: ಇಳಗೇರ ಸಾ: ವನದುಗರ್ಾ ತಾ: ಶಹಾಪೂರ ಅಂತಾ ತಿಳಿದು ಬಂದಿದ್ದು, ಸದರಿಯವನು ಅನಧಿಕೃತವಾಗಿ ತನ್ನ ಹೊಲದಲ್ಲಿ ಗಾಂಜಾ ಗಿಡಗಳು ಬೆಳೆದ ಬಗ್ಗೆ ಗೊತ್ತಾಗಿರುತ್ತದೆ. ಸದರಿ ಗಾಂಜಾಗಿಡಗಳನ್ನು ಪರಿಶೀಲಿಸಿ ನಂತರ ಮತ್ತೆ ಹೊಲದಲ್ಲಿ ನೋಡಲಾಗಿ ತೋಗರಿ ಬೆಳೆಯಲ್ಲಿ ಅಲ್ಲಲ್ಲಿ ಗೊತ್ತಾಗದ ಹಾಗೆ ಗಾಂಜಾ ಗಿಡ ಬೆಳೆದಿದ್ದು, ಗಾಂಜಾಗಿಡಗಳಿಗೆ ಹೂವು, ಕಾಯಿ ಆಗಿದ್ದು, ಸುಮಾರು 3 ತಿಂಗಳ ಹಸಿ ಗಿಡಗಳಿರುತ್ತವೆ. ಕಾರಣ ಸದರಿ ಗಾಂಜಾ ಗಿಡಗಳನ್ನು ಬೆಳೆದ ಈರಣ್ಣಗೌಡ ತಂದೆ ರಾಮಚಂದ್ರಯ್ಯ ಕಲಾಲ ವಯಾ:55 ಉ: ಒಕ್ಕಲುತನ ಜಾ: ಇಳಗೇರ ಸಾ: ವನದುಗರ್ಾ ತಾ: ಶಹಾಪೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ಈ ವರದಿಯನ್ನು ಸಿಪಿಸಿ-181 ಶ್ರೀ ಹಯ್ಯಾಳಪ್ಪ ಇವರ ಕಡೆಯಿಂದ ಕಳುಹಿಸಿರುತ್ತೇನೆ. ಪ್ರಕರಣ ದಾಖಲಿಸಿ ಕ್ರಮ ಜರುಗಿಸಿ ಪ್ರಕರಣದ ಸಂಖ್ಯೆಯನ್ನು ಮುಂದಿನ ತನಿಖೆಯ ಕುರಿತು ಸೂಚಿಸಲು ಈ ಮೂಲಕ ಸೂಚಿಸಲಾಗಿದೆ ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 107/2020 ಕಲಂ, 120 (ಎ) (ಬಿ) ಎನ್.ಡಿ.ಪಿ.ಎಸ್. ಆಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   ನಂತರ ಸದರಿ ವರದಿ ಮೇಲಿಂದ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ಠಾಣಾಧಿಕಾರಿಯವರಿಗೆ ಕೇಳಲಾಗಿ ಗೋಗಿ ಠಾಣೆ ಗುನ್ನೆ ನಂ: 107/2020 ಕಲಂ: 20(ಎ)(ಬಿ)  ಎನ್ಡಿಪಿಎಸ್ ಆಕ್ಟ  ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತಿಳಿದು ಬಂದಿದ್ದು, ನಂತರ ಸದರಿ ಪ್ರಕರಣ ತನಿಖೆ ಆರಂಬಿಸಿಕೊಂಡು, ಪತ್ರಾಂಕಿತ ಅಧೀಕಾರಿಗಳಾದ ಶ್ರೀ ಜಗನ್ನಾಥರೆಡ್ಡಿ ಮಾನ್ಯ ತಹಸೀಲಾರರು ಶಹಾಪ್ಮರ ರವರ ಮತ್ತು ನಾವು ಪಂಚರ ಸಮಕ್ಷಮ ಪಿಎಸ್ಐ ರವರು ಪಂಚನಾಮೆಯನ್ನು ಮುಂದುವರೆಸಿದ್ದು, ಸದರಿ ಈರಣ್ಣಗೌಡ ತಂದೆ ರಾಮಚಂದ್ರಯ್ಯ ಕಲಾಲ ಈತನ ಹೊಲ ಸವರ್ೇ ನಂ: 235/1 ಹೊಲದಲ್ಲಿ ಗಾಂಜಾ ಗಿಡಗಳನ್ನು ಜಪ್ತಿಪಡಿಸಿಕೊಳ್ಳುವ ಕುರಿತು ಸಿಬ್ಬಂದಿಯವರ ಸಹಾಯದಿಂದ ಸದರಿ ಎಲ್ಲಾ ಗಾಂಜಾ ಗಿಡಗಳನ್ನು ಕಿತ್ತಿದ್ದು, ನೋಡಲಾಗಿ ಬೇರು ಮತ್ತು ಮಣ್ಣು ಸಮೇತ ಬಂದಿದ್ದು, ಮಣ್ಣನ್ನು ಜಾಡಿಸಲಾಯಿತು, 57 ಗಿಡಗಳಿದ್ದು ಕೆಲವು 2.1/2 ಪೀಟ ಮತ್ತು ಕೆಲವು 5.1/2 ಪೀಟ ಉದ್ದದ ಗಿಡಗಳಿದ್ದು, ಕೆಲವು ದೊಡ್ಡ ಗಿಡಗಳಿಗೆ ಹೂ ಕಾಯಿ ಆಗಿದ್ದು ಉಳಿದ, ಸಣ್ಣ ಗಿಡಗಳಿಗೆ ಯಾವುದೇ ಹೂ ಕಾಯಿಗಳು ಆಗಿರುವದಿಲ್ಲ. ಸದರಿ ಗಾಂಜಾ ಗಿಡಗಳ ಪೆಂಡಿಯಾಗಿ ಒಟ್ಟು 4 ಪೆಂಡಿಗಳನ್ನು ಮಾಡಿದ್ದು ಹಾಗೂ ಎಲ್ಲಾ ಗಾಂಜಾ ಗಿಡಗಳ ಪೆಂಡಿಗಳನ್ನು ಪಂಚರ ಸಮಕ್ಷಮ ತೂಕ ಮಾಡಿ ಒಟ್ಟು 57 ಗಿಡಗಳ ತೂಕ 20 ಕೆಜಿ 25 ಗ್ರಾಂ ಗಾಂಜಾ ಗಿಡಗಳು ಅ.ಕಿ 65400/- ರೂ ಗಳು ಜಪ್ತಿ ಮಾಡಿ ತಾಬಾಕ್ಕೆ ತೆಗೆದುಕೊಂಡರು.


ಭೀಗುಡಿ  ಪೊಲೀಸ ಠಾಣೆ ಗುನ್ನೆ ನಂ:- 117/2020 ಕಲಂ 279, 337, 338 ಐಪಿಸಿ : ದಿನಾಂಕ:03/10/2020 ರಂದು 3.00 ಪಿ.ಎಮ್ ಸುಮಾರಿಗೆ ಜಿಜಿಹೆಚ್ ಶಹಾಪುರ ದಿಂದ ಪೋನ್ ಮುಖಾಂತರ ಎಮ್ ಎಲ್.ಸಿ ಬಂದ ಮೇರೆಗೆ ಜಿಜಿಹೆಚ್ ಶಹಾಪರಕ್ಕೆ ಹೋಗಿ ಪಿಯರ್ಾದಿಗೆ ವಿಚಾರಿಸಲಾಗಿ ಹುರಸಗುಂಡಗಿ ಬಳಗಾರ ಇವರ ಹೊಲದ ಹತ್ತಿರ ಮುಖ್ಯ ರಸ್ತೆಯ ಮೇಲೆ ಫಿಯರ್ಾದಿ & ಆಕೆಯ ಗಂಡ ಬಸವಾಜ ಇಬ್ಬರು ತಮ್ಮ ಮೋಟಾರ ಸೈಕಲ್ ನಂ: ಕೆ.ಎ-33 ಎಸ್-0935 ನೇದ್ದರ ಮೇಲೆ ಕುಳಿತು ಹುರಸಗುಂಡಗಿ ಕಡೆಗೆ ಹೊರಟಾಗ ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನನ್ನ ಗಂಡನು ಮೋಟಾರ ಸೈಕಲ್ನ್ನು ರೋಡಿನ ಮೇಲೆ ಹೋಗುತ್ತಿರುವ ಕುದುರೆಗಳಿಗೆ ಡಿಕ್ಕಿ ಹೊಡೆಯಬಹುದೆಂದು ಒಮ್ಮೆಲೆ ಮೋಟಾರ ಸೈಕಲ್ ಬ್ರೇಕ್ ಹೊಡೆದೆನು. ಆಗ ಮೋಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿದ್ದು  ನನ್ನ ಗಂಡನಿಗೆ ತಲೆಗೆ, ಬುಜಕ್ಕೆ ಮತ್ತು ನನಗೆ ಕಪಾಳಕ್ಕೆ ಹಾಗೂ ಬುಜಕ್ಕೆ ರಕ್ತಗಾಯಗಳಾಗಿರುತ್ತವೆ ಅಂತ ಕಾನೂನು ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.


ಕೆಂಭಾವಿ  ಪೊಲೀಸ ಠಾಣೆ ಗುನ್ನೆ ನಂ:- 154/2020 ಕಲಂ: 78(3) ಕೆಪಿ ಯಾಕ್ಟ : ಶ್ರೀ ಸುದರ್ಶನರೆಡ್ಡಿ ಪಿಎಸ್ಐ [ಕಾ.ಸು]  ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದೆನೆಂದರೆ, ಇಂದು ದಿನಾಂಕ: 03.10.2020 ರಂದು 10.00 ಎಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಕೆಂಭಾವಿ ಪಟ್ಟಣದ ಟಿಪ್ಪು ಸುಲ್ತಾನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಭೀರಪ್ಪ ಪಿಸಿ-195  2) ಹುಲಿಗೆಪ್ಪ ಪಿಸಿ 340 ಹಾಗೂ ಜೀಪ ಚಾಲಕ 3) ಪೆದ್ದಪ್ಪಗೌಡ ಪಿಸಿ-214 ರವರನ್ನು ಕರೆದು ಸದರಿ ವಿಷಯ ತಿಳಿಸಿ ಭೀರಪ್ಪ ಪಿಸಿ-195 ರವರಿಂದ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ  ವ|| 38 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ ಕರೆಯಿಸಿ ಅವರಿಗೂ ಸಹ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಎಲ್ಲರೂ ಕೂಡಿಕೊಂಡು ಕೆಂಭಾವಿ ಪೊಲೀಸ್ ಠಾಣೆ ಜೀಪ್ ನಂ ಕೆ.ಎ 33 ಜಿ.0074 ನೇದ್ದರಲ್ಲಿ ಕುಳಿತು ಠಾಣೆಯಿಂದ 10.10 ಎ.ಎಮ್ ಕ್ಕೆ ಹೊರಟು 10.20 ಎ.ಎಮ್ ಕ್ಕೆ ಕೆಂಭಾವಿ ಪಟ್ಟಣದ ಟಿಪ್ಪು ಸುಲ್ತಾನ ಚೌಕ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 10.25 ಎಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲಣ್ಣ ತಂದೆ ತೋಟಪ್ಪ ಇಜೇರಿ ವ|| 65 ಜಾ|| ಹಿಂದೂ  ಗಾಣಿಗ  ಉ|| ಕೂಲಿಕೆಲಸ ಸಾ|| ಕೆಂಭಾವಿ ತಾ|| ಸುರಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 2160/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 10.25 ಎ.ಎಮ್ ದಿಂದ 11.25 ಎಎಮ್ ದವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 11.35 ಎಎಮ್ ಕ್ಕೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು, ಸದರಿ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 3.00 ಪಿಎಮ್ಕ್ಕೆ ಠಾಣಾ ಗುನ್ನೆ ನಂ 154/2020 ಕಲಂ: 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!