ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/10/2020
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 23/2020 ಕಲಂ. 174 ಸಿಆರ್ಪಿಸಿ : ಇಂದು ದಿನಾಂಕ:01/10/2020 ರಂದು 2 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ ಶ್ರೀಮತಿ ಹುಸನಮ್ಮ ಗಂಡ ನಬೀಸಾಬ ಶೇಖಸಿಂಧಿ ವ:50 ಜಾ:ಮುಸ್ಲಿಂ ಉ:ಮನೆಗೆಲಸ ಸಾ:ಕೋನ್ಹಾಳ ತಾ:ಸುರಪೂರ ಇವರ ಪಿಯರ್ಾದಿ ಸಾರಾಂಶವೆನೆಂದರೆ ನನಗೆ ನಮ್ಮ ಅತ್ತೆಯ ಮಗನಾದ ನಬೀಸಾಬ ತಂದೆ ಚಂದಾ ಸಾಬ ಸಾ:ಹುಣಸಿಹೊಳೆ ಇವರೊಂದಿಗೆ ಮದುವೆಯಾಗಿ ನನಗೆ 3 ಜನ ಮಕ್ಕಳಿದ್ದು ಒಬ್ಬ ಗಂಡು ಮಗ ಮೈನುದ್ದಿನ ಮತ್ತು ಇಬ್ಬರು ಹೆಣ್ಣು ಮಕ್ಕಳು ಬಂಧಿಮಾ, ಶಮೀದಾ ಬೇಗಂ ಇರುತ್ತಾರೆ. ಎಲ್ಲರಿಗೆ ಮದುವೆಯಾಗಿರುತ್ತದೆ. ನನಗೆ ಇಬ್ಬರು ತಮ್ಮಂದಿರಿದ್ದು ಅವರು ಚಿಕ್ಕವರಿದ್ದರಿಂದ ನಮ್ಮ ತಂದೆ-ತಾಯಿಯವರು ನನಗೂ ನನ್ನ ಗಂಡನಿಗೆ ನಮ್ಮ ಮದುವೆಯಾದಾಗಿನಿಂದ ಅವರೊಂದಿಗೆ ಇಟ್ಟಿಕೊಂಡಿರುತ್ತಾರೆ. ಆಗಿನಿಂದ ಇಲ್ಲಿಯವರೆಗೆ ನಮ್ಮ ಮನೆಯ ಸಂಸಾರದ ಜವಾಬ್ದಾರಿಯನ್ನು ನನ್ನ ಗಂಡನಾದ ನಬೀಸಾಬನು ನೋಡಿಕೊಂಡು ಹೋಗುತ್ತಿದ್ದನು. ನಮ್ಮ ತಾಯಿಯ ಹೆಸರಿಗೆ ಕೋನ್ಹಾಳ ಸೀಮಾಂತರದ ಸವರ್ೆ ನಂ. 10/8 ರಲ್ಲಿ 3 ಎಕರೆ 19 ಗುಂಟೆ ಜಮೀನಿದ್ದು. ಸದರಿ ಜಮೀನಿನ ಮೇಲೆ ನನ್ನ ತಾಯಿಯ ಹೆಸರಿನಿಂದ ನನ್ನ ಗಂಡನು ಬೀಜ ಗೊಬ್ಬರಕ್ಕಾಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ದೇವಾಪೂರದಲ್ಲಿ 70 ಸಾವಿರ ರೂಪಾಯಿ ಬೆಳೆ ಸಾಲ ತೆಗೆದುಕೊಂಡಿರುತ್ತಾನೆ. ಮತ್ತು ನನ್ನ ಎರಡು ಹೆಣ್ಣು ಮಕ್ಕಳ ಮದುವೆಗೆ ಮತ್ತು ಮನೆ ಸಂಸಾರಕ್ಕಾಗಿ ಹಾಗೂ ಬೀಜ ಗೊಬ್ಬರಕ್ಕಾಗಿ ಊರ ರವರಲ್ಲಿ ಕೈಗಡ ಸಾಲ 5 ಲಕ್ಷ ರೂಪಾಯಿ ತೆಗೆದುಕೊಂಡಿರುತ್ತಾನೆ. ಈ ವರ್ಷ ಹೆಚ್ಚಿಗೆ ಮಳೆಯಾಗಿದ್ದರಿಂದ ಬೆಳೆ ಎಲ್ಲಾ ಹಾನಿಯಾಗಿರುತ್ತದೆ. ಆದ್ದರಿಂದ ದಿನಾಲು ನನ್ನ ಗಂಡ ಈ ವರ್ಷ ಫಸಲು ಸರಿಯಾಗಿ ಬರಲಿಲ್ಲ ಅಂದರೆ ನಾನು ಹೇಗೆ ಸಾಲ ತಿರಿಸಬೇಕು ಅಂತ ಚಿಂತೆ ಮಾಡುತ್ತಿದ್ದನು. ನಾವು ಮನೆಯವರೆಲ್ಲರೂ ನನ್ನ ಗಂಡನಿಗೆ ಸಾಲದ ಬಗ್ಗೆ ಚಿಂತೆ ಮಾಡಬೇಡ ಈ ವರ್ಷ ಇಲ್ಲಂದರೆ ಮುಂದಿನ ವರ್ಷ ಬೆಳೆ ಬೆಳೆದು ಸಾಲ ಮುಟ್ಟಿಸಿದ್ದರಾಯಿತು ಅಂತ ದೈರ್ಯ ಹೇಳುತ್ತಿದ್ದೇವು. ಆದರು ನನ್ನ ಗಂಡ ಸಾಲ ಬಹಳ ಆಗುತ್ತದೆ ಮುಂದೆ ಹೇಗೆ ಮಾಡುವದು. ಅಂತ ದಿನಾಲು ಚಿಂತಿಸುತ್ತಿದ್ದನು. ಹೀಗಿರುವಾಗ ಇಂದು ದಿನಾಂಕ:01/10/2020 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಬರುತ್ತೇನೆ. ಅಂತ ಹೇಳಿ ಮನೆಯಿಂದ ಹೋದನು. ನಂತರ 11:30 ಗಂಟೆ ಸುಮಾರಿಗೆ ನನ್ನ ಸೊಸೆಯಾದ ಸೋಫನ್ ಬೀ ಇವಳು ಕೂಡಾ ಹೊಲದಲ್ಲಿ ಕಸ ತೆಗೆಯುವುದು ಕೆಲಸ ಇದೆ ಅಂತ ಹೇಳಿ ಹೊಲಕ್ಕೆ ಹೋದಳು ನಂತರ 12:30 ಪಿ.ಎಮ್ ಕ್ಕೆ ನನ್ನ ಸೋಸೆ ಗಾಬರಿಯಾಗಿ ತಡಬಡಾಯಿಸುತ್ತಾ ಮನೆಗೆ ಬಂದು ವಿಷಯ ತಿಳಿಸಿದ್ದೆನೆಂದರೆ ಮಾವ ನಬೀಸಾಬ ಈತನು ನಮ್ಮ ಹೊಲದಲ್ಲಿರುವ ದೊಡ್ಡ ಬಾರಿ ಗಿಡಕ್ಕೆ ಕುರಿಗೆ ಕಟ್ಟುವ ಹಗ್ಗದಿಂದ ನೇಣು ಹಾಕಿಕೊಂಡಿರುತ್ತಾನೆ ಅಂತ ತಿಳಿಸಿದಳು. ನಾನು ಗಾಬರಿಯಿಂದ ನನ್ನ ಮಗ ಮೈನುದ್ದಿನ ಸೋಸೆ ಸೋಫನ್ ಬೀ ಹಾಗೂ ಮಗಳು ಶಮೀದಾ ಬೇಗಂ ಹಾಗೂ ಅಳಿಯ ಅಕ್ಬರ ಎಲ್ಲರೂ ಕೂಡಿ ಹೊಲಕ್ಕೆ ಹೋಗಿ ನೋಡಲಾಗಿ ನನ್ನ ಗಂಡ ದೊಡ್ಡ ಬಾರಿ ಗಿಡ್ಡಕ್ಕೆ ಕುರಿಗೆ ಕಟ್ಟುವ ಪ್ಲ್ಯಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದನ್ನು ನೋಡಿ ಗುರುತ್ತಿಸಿರುತ್ತೆವೆ. ನನ್ನ ಗಂಡು ಸಾಲ ಬಾಧೆ ತಾಳದೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.23/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 141/2020 ಕಲಂ 302 ಐಪಿಸಿ : ಇಂದು ದಿನಾಂಕ 01/10/2020 ರಂದು ಮಧ್ಯಾಹ್ನ 3-00 ಗಂಟೆಗೆ ಫಿರ್ಯಾಧಿದಾರರಾದ ಗಾವಿತ್ರಿ ಗಂಡ ನಿಂಗಪ್ಪ ವಿಶ್ವಕರ್ಮ ಸಾಃ ದಂಡಗುಂಡ ತಾಃ ಚಿತ್ತಾಪೂರ ಹಾಃವಃ ಹಳಗೇರಾ ತಾಃ ಯಾದಗಿರಿ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಕೂಲಿಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ಸುಮಾರು ಐದು ವರ್ಷಗಳ ಹಿಂದೆ ನನಗೆ ದಂಡಗುಂಡ ಗ್ರಾಮದ ನಿಂಗಪ್ಪ ಎಂಬುವವನ ಜೋತೆಗೆ ಮದುವೆಯಾಗಿರುತ್ತದೆ, ನಮಗೆ ಕಾಳಮ್ಮ ಎಂಬುವವಳು ಹೆಣ್ಣು ಮಗಳು ಇದ್ದಿರುತ್ತಾಳೆ, ಅವಳಿಗೆ 3 ವರ್ಷ ವಯಸ್ಸು ಇದ್ದಿರುತ್ತದೆ, ನನ್ನ ಗಂಡನಿಗೆ ಈ ಮೊದಲು ಮದುವೆಯಾಗಿತ್ತು, ಅವಳಿಗೆ ಒಂದು ಹೆಣ್ಣು ಮಗಳು ಇದ್ದಿರುತ್ತಾಳೆ, ನನ್ನ ಸವತಿ ಸತ್ತ ನಂತರ ನನಗೆ ಮದುವೆ ಮಾಡಿಕೊಂಡಿರುತ್ತಾನೆ, ನನ್ನ ಗಂಡ ನಿಂಗಪ್ಪ ಇತನು ಆಗಾಗ ಕುಡಿದ ಅಮಲಿನಲ್ಲಿ ಮನೆಗೆ ಬಂದು ಮಗಳು ಕಾಳಮ್ಮ ಇವಳಿಗೆ ಓದು ಓದು ಅಂತಾ ಕಿರಿಕಿರಿ ಮಾಡುತ್ತಿದ್ದನು, ಆಗ ನಾನು ನನ್ನ ಗಂಡನಿಗೆ ಅವಳು ಇನ್ನು ಚಿಕ್ಕವಳಿದ್ದಾಳೆ ಈ ವಯಸ್ಸಿನಲ್ಲಿ ಅವಳಿಗೆ ಈ ರೀತಿ ಹೊಡೆಯವುದು ಮತ್ತು ಕಿರಿಕಿರಿ ಮಾಡುವದು ಸರಿಯಲ್ಲ ಅಂತಾ ಹೇಳಿದರು ಕೂಡಾ ನನ್ನ ಗಂಡನು ಈಗಿನಿಂದಲೇ ಅವಳು ಸರಿಯಾಗಿ ಓದಬೇಕು ಅಂತಾ ಅವಳಿಗೆ ಬೈಯುವದು ಮತ್ತು ಹೊಡೆಬಡೆ ಮಾಡುತ್ತಾ ಬಂದಿರುತ್ತಾನೆ, ಹೀಗಿರುವಾಗ ನಿನ್ನೆ ದಿನಾಂಕ 30/09/2020 ರಂದು ರಾತ್ರಿ 8-30 ಗಂಟೆಗೆ ನಾನು ಮತ್ತು ನನ್ನ ಮಗಳು ಮನೆಯಲ್ಲಿರುವಾಗ ನನ್ನ ಗಂಡನು ಹೊರಗಡೆಯಿಂದ ಮನೆಗೆ ಬಂದನು, ಬಂದವನೇ ಮನೆಯಲ್ಲಿ ಆಟವಾಡುತ್ತಿದ್ದ ಮಗಳು ಕಾಳಮ್ಮಳಿಗೆ ಲೇ ಬೋಸಡಿ ಮಗಳೇ ಓದುವದು, ಬರೆಯುವದು ಬಿಟ್ಟು ಏನು ಮಾಡುತ್ತಿದ್ದಿ ಅಂತಾ ಅವಳಿಗೆ ಗದರಿಸಿದನು, ಆಗ ನಾನೇ ನನ್ನ ಗಂಡನಿಗೆ ಈ ಮೊದಲು ಹೇಳಿದಂತೆ ಬುದ್ದಿವಾದ ಹೇಳಿ ಸಮಾಧಾನ ಪಡಿಸಿದೆನು, ಆದರೂ ಕೂಡಾ ನನ್ನ ಗಂಡನು ಅವಳಿಗೆ ಎರಡು ಏಟು ಬೆನ್ನ ಮೇಲೆ ಹೊಡೆದನು, ಅದಾದ ನಂತರ ರಾತ್ರಿ 10-30 ಗಂಟೆ ಸುಮಾರಿಗೆ ನಾವು ಮನೆಯಲ್ಲಿ ಮಲಗಿಕೊಳ್ಳುವಾಗ ನನ್ನ ಗಂಡನು ಮಲಗಿಕೊಳ್ಳುತ್ತಿದ್ದ ನನ್ನ ಮಗಳಿಗೆ ಎದ್ದು ನಿಲ್ಲಿಸಿ ನೀನು ಮಲಗಿಕೊಳ್ಳಬೇಡ ಇನ್ನು ಓದು ಅಂತಾ ಕೈಯಿಂದ ಹೊಡೆಯಲು ಶುರು ಮಾಡಿದನು, ಅವನ ಹೊಡೆತದ ತಾಪ ತಾಳಲಾರದೇ ಮಗಳು ಜೋರಾಗಿ ಅಳುತ್ತಿದ್ದಾಗ ನನ್ನ ಗಂಡನು ಅಲ್ಲಿಯೇ ಮನೆಯಲ್ಲಿ ಇಟ್ಟಿದ್ದ ಒಂದು ರಿಪ್ಪರ (ಕಟ್ಟಿಗೆ) ತೆಗೆದುಕೊಂಡವನೇ ಏ ಬೋಸಡಿ ಮಗಳೇ ನಾನು ಹೇಳುವದು ಕೇಳುತ್ತಿಲ್ಲ ನಿನಗೆ ಇಲ್ಲಿಯೇ ಖಲಾಸ ಮಾಡಿ ಬಿಡುತ್ತೆನೆ ಅಂತಾ ಅಂದು ಕಟ್ಟಿಗೆಯಿಂದ ಅವಳ ತೆಲೆಗೆ ಹೊಡೆದನು, ಮತ್ತು ಅದೇ ರಿಪ್ಪರಿನಿಂದ ಬಲಗಲ್ಲದ ಮೇಲೆ, ಹಣೆಗೆ ಮತ್ತು ಬಲಗಾಲಿಗೆ ಹೊಡೆದನು, ಆಗ ನಾನು ಆತನ ಕೈಯಿಂದ ರಿಪ್ಪರ ಕಸಿದುಕೊಂಡು ಬಿಸಾಕಿದಾಗ ಮತ್ತೆ ನನ್ನ ಗಂಡನು ಇವತ್ತು ಇವಳಿಗೆ ಬಿಡುವದಿಲ್ಲ ಇವಳಿಗೆ ಕೊಲೆ ಮಾಡಿ ಬಿಡುತ್ತೆನೆ ಅಂತಾ ಕೊಲೆ ಮಾಡಬೇಕು ಅಂತಾ ಆವೇಶದಿಂದ ಮನೆಯಲ್ಲಿಯೇ ಇದ್ದ ಒಂದು ಕಬ್ಬಿಣದ ಪೈಪ್ದಿಂದ ಹೊಟ್ಟೆಗೆ ತಿವಿದನು, ಆಗ ಮಗಳು ಕಾಳಮ್ಮ ಅಳುತ್ತಾ ಬಿದ್ದು ಒದ್ದಾಡುತ್ತಾ ನಿದ್ದೆಗೆ ಜಾರಿದಳು, ನಾವು ಕೂಡಾ ಮಲಗಿಕೊಂಡೆವು, ನಾನು ಎಂದಿನಂತೆ ಇಂದು ದಿನಾಂಕ 01/10/2020 ರಂದು ಬೆಳಿಗ್ಗೆ 6-00 ಗಂಟೆಗೆ ಎದ್ದು ನೋಡಿದಾಗ ನನ್ನ ಮಗಳ ತಲೆಯಿಂದ ವೀಪರಿತ ರಕ್ತಸ್ರಾವವಾಗಿದ್ದು, ಎಬ್ಬಿಸಿ ನೋಡಬೇಕೆಂದು ಮಗಳಿಗೆ ಎಬ್ಬಿಸಲು ಪ್ರಯತ್ನಪಟ್ಟಾಗ ಅವಳು ಮೇಲೆ ಏಳದ ಕಾರಣ ನಾನು ಗಾಬರಿಯಿಂದ ಮನೆ ಹೊರಗಡೆ ಬಂದು ಶಾಣಮ್ಮ ಗೌಡಸಾನಿ ಇವರಿಗೆ ಕರೆದು ತೋರಿಸಿದಾಗ ನನ್ನ ಮಗಳು ಮೃತಪಟ್ಟಿರುವದಾಗಿ ತಿಳಿಯಿತು, ನನ್ನ ಗಂಡನು ನನ್ನ ಮಗಳಿಗೆ ರಿಪ್ಪರ(ಕಟ್ಟಿಗೆ)ದಿಂದ ಹೊಡೆದಿದ್ದರಿಂದ ನನ್ನ ಮಗಳ ತಲೆ ಮೇಲೆ ಎರಡು ಕಡೆ ಭಾರಿ ರಕ್ತಗಾಯ, ಹಣೆಗೆ, ಬಲಕಪಾಳಕ್ಕೆ, ಬಲಗಾಲಿಗೆ ಕಂದುಗಟ್ಟಿದ ಗಾಯಗಳು ಆಗಿದ್ದು ಮತ್ತು ಕಬ್ಬಿಣದ ಪೈಪದಿಂದ ಹೊಟ್ಟೆಗೆ ತಿವಿದಿದ್ದರಿಂದ ಹೊಟ್ಟೆ ಮೇಲೆ ದುಂಡಗೆ ಗುಪ್ತಗಾಯವಾಗಿತ್ತು, ಆಗ ನನ್ನ ಗಂಡನು ನನ್ನ ಮಗಳ ಮೈಮೇಲೆ ಇದ್ದ ರಕ್ತ ಹತ್ತಿದ ಅಂಗಿಯನ್ನು ತೆಗೆದು ಮನೆಯಲ್ಲಿ ಬಿಸಾಕಿ ಬೇರೊಂದು ಸ್ಕರ್ಟನ್ನು ಹಾಕಿದನು, ನಾನು ಈ ವಿಷಯವನ್ನು ನನ್ನ ಸಹೋದರರಾದ ಪಂಡಿತ ತಂದೆ ಶ್ರೀಶೈಲ ವಿಶ್ವಕರ್ಮ, ಆದಿಶೇಷ ತಂದೆ ಶ್ರೀಶೈಲ ವಿಶ್ವಕರ್ಮ ಇವರಿಗೆ ಪೋನ ಮೂಲಕ ತಿಳಿಸಿದಾಗ ಅವರು ಕೂಡಾ ನಮ್ಮೂರಿಗೆ ಬಂದರು, ನಂತರ ನನ್ನ ಸಹೋದರ ಜೋತೆಗೆ ವಿಚಾರಣೆ ಮಾಡಿ ತಡವಾಗಿ ಠಾಣೆಗೆ ಬಂದು ಹೇಳಿಕೆ ಕೊಟ್ಟಿರುತ್ತೆನೆ, ಈ ರೀತಿಯಾಗಿ ರಿಪ್ಪರ ಮತ್ತು ಕಬ್ಬಿಣದ ಪೈಪನಿಂದ ಮಗಳಾದ ಕಾಳಮ್ಮ ಇತಳಿಗೆ ಹೊಡೆದು ಮತ್ತು ತಿವಿದು ಭಾರಿ ರಕ್ತಗಾಯ, ಗುಪ್ತಗಾಯಗೊಳಿಸಿ ಕೊಲೆ ಮಾಡಿದ ನನ್ನ ಗಂಡನಾದ ನಿಂಗಪ್ಪ ತಂದೆ ಚೋಳಪ್ಪ ವಿಶ್ವಕರ್ಮ ಇತನ ವಿರುಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ, ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 141/2020 ಕಲಂ 302 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 115/2020 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 01/10/2020 ರಂದು 04:20 ಪಿ.ಎಮ್.ಕ್ಕೆ ಹುಲಕಲ್ ಗ್ರಾಮ ಹನುಮಾನ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6.15 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 07 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 4100/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ: ಪಿ.ಎ.ಆರ್ ನಂ. 12/2020 ಕಲಂ 109 ಸಿ.ಆರ್.ಪಿ.ಸಿ : ಮಾನ್ಯರವರಲ್ಲಿ ನಾನು ಕೃಷ್ಣಾ ಸುಬೇದಾರ ಪಿ.ಎಸ್.ಐ (ಅ.ವಿ) ಯಾದಗಿರಿ ನಗರ ಠಾಣೆ ತಮ್ಮಲ್ಲಿ ಸಲ್ಲಿಸುವ ವರದಿ ಏನೆಂದರೆ, ಇಂದು ದಿನಾಂಕ 01/10/2020 ರಂದು ನಾನು ಸಂಗಡ ಈರಪ್ಪ ಪಿ.ಸಿ 386 ರವರನ್ನು ಕರೆದುಕೊಂಡು ಸ್ಪೆಸೆಲ್ ಎನ್.ಆರ್.ಸಿ ಕರ್ತವ್ಯ ಕುರಿತು ರಾತ್ರಿ 12-00 ಎ.ಎಂ ದಿಂದ ಪೆಟ್ರೋಲಿಂಗ್ ಕುರಿತು ಹೋರಟು ಯಾದಗಿರಿ ನಗರದ ಮುಸ್ಲಿಂಪೂರ, ವಿಶ್ವರಾದ್ಯ ನಗರ, ಲಕ್ಷ್ಮೀ ನಗರ ಹಾಗೂ ಇತರ ಕಡೆಗಳಲ್ಲಿ ತಿರುಗಾಡಿ ರೈಲ್ವೆ ನಿಲ್ದಾಣದ ಕಡೆಗೆ ಬೆಳಿಗ್ಗೆ 4-30 ಗಂಟೆಯ ಸುಮಾರಿಗೆ ಹೋದಾಗ ಹಳೆಯ ತಹಸಿಲ್ ಕಾಯರ್ಾಲಯದ ಮುಂದೆ ಅಲ್ಲಿ ಒಬ್ಬ ವ್ಯಕ್ತಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ನೋಡಿ ತನ್ನ ಇರುವಿಕೆಯನ್ನು ಮರೆ ಮಾಚತೊಡಗಿದನು. ಆಗ ನಾವು ಅವನ ಹತ್ತಿರ ಹೋದಂತೆ ಅವನು ಅಲ್ಲಿಂದ ಓಡಿ ಹೋಗಲು ಪ್ರಾರಂಬಿಸಿದನು. ಸದರಿಯವನಿಗೆ ನಾವು ಬೆನ್ನು ಹತ್ತಿ ಹಿಡಿದು ವಿಚಾರಿಸಲು, ಅವನು ತನ್ನ ಹೆಸರು ವಿಳಾಸವನ್ನು ತಪ್ಪು ತಪ್ಪಾಗಿ ಹೇಳ ತೊಡಗಿದನು. ಅವನ ಮೇಲೆ ನಮಗೆ ಬಲವಾಗಿ ಸಂಶಯ ಬಂದಿದ್ದರಿಂದ 05-00 ಎ.ಎಂ ಗಂಟೆಯ ಸುಮಾರಿಗೆ ಠಾಣೆಗೆ ಕರೆದುಕೊಂಡು ಬಂದೆವು. ನಂತರ ಅವನಿಗೆ ಕೂಲಂಕುಶವಾಗಿ ವಿಚಾರಿಸಲಾಗಿ ಅವನು ತನ್ನ ಹೆಸರು ಅಬ್ಬಾಸಿ ತಂದೆ ಯುಸುಫ್ ಅಲಿ ವಯಾ 40 ವರ್ಷ, ಜಾ|| ಮುಸ್ಲಿಂ ಉ|| ಚಾಳೇಸ್ ವ್ಯಾಪಾರ ಸಾ|| ಚಿದ್ರಿ ರೋಡ್ ಹುಸೇನಿ ಕಾಲೋನಿ [ಇರಾನಿ ಗಲ್ಲಿ] ಬೀದರ ಅಂತಾ ತಿಳಿಸಿದನು. ಕಾರಣ ಸದರಿಯವನು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರಿಂದ ಅವನ ಮೇಲೆ ನಮಗೆ ಬಲವಾಗಿ ಸಂಶಯ ಬಂದಿದ್ದು, ಅವನಿಗೆ ಹೀಗೆ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡುವ ಸಾದ್ಯತೆಗಳು ಇದ್ದುದ್ದರಿಂದ ಮುಂಜಾಗ್ರತೆ ಕ್ರಮ ಕುರಿತು ಇಂದು ದಿನಾಂಕ 01/10/2020 ರಂದು ಬೆಳಿಗ್ಗೆ 6-00 ಗಂಟೆಗೆ ಅವನ ವಿರುದ್ದ ಠಾಣೆ ಪಿ.ಎ.ಆರ್ ನಂ 12/2020 ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.