ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/09/2020

By blogger on ಮಂಗಳವಾರ, ಸೆಪ್ಟೆಂಬರ್ 29, 2020

                     


                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/09/2020 

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 116/2020 ಕಲಂ: 304(ಎ) ಐಪಿಸಿ : ಇಂದು ದಿನಾಂಕ: 29/09/2020 ರಂದು 09:00 ಎಎಮ್ ಕ್ಕೆ ಶ್ರೀಮತಿ ದೇವಮ್ಮ ಗಂಡ ಬಸಪ್ಪ ಕೀಣಕೇರಿ ಸಾ:ಬೆಂಡೆಬೆಂಬಳ್ಳಿ ಇವರು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೇಂದರೆ, ನನ್ನ ಗಂಡ ಬಸಪ್ಪನು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ: 28/09/2020 ರಂದು ನನ್ನ ಗಂಡನು ನಮ್ಮ ಹಾಲಬಾವಿ ಹೊಂಡ ಹೊಲಕ್ಕೆ ಎತ್ತುಗಳನ್ನು ಹೊಡೆದುಕೊಂಡು ಹೋದನು. ನಾನು ಮನೆಯಲ್ಲಿದ್ದೆನು. ಸಂಜೆ 5-30 ಗಂಟೆ ಸುಮಾರಿಗೆ ನಮ್ಮೂರು ಹಣಮಂತ ತಂದೆ ನಾಗಪ್ಪ ಈತನು ನನಗೆ ಫೋನ ಮಾಡಿ ತಿಳಿಸಿದ್ದೇನಂದರೆ ನಿನ್ನ ಗಂಡ ಹೊಲದಿಂದ ಎತ್ತುಗಳು ಹೊಡೆದುಕೊಂಡು ಊರಿಗೆ ಬರುತ್ತಿದ್ದಾಗ ದಾರಿಯಲ್ಲಿ ಸಿದ್ದಣ್ಣಗೌಡ ತಂದೆ ನೀಲಕಂಠರಾಯ ಐರೆಡ್ಡಿ ಮತ್ತು ನಿತಿನಕುಮಾರ @ ಮುನ್ನಾಗೌಡ ತಂದೆ ಸಿದ್ದಣ್ಣಗೌಡ ಐರೆಡ್ಡಿ ಇವರ ಹೊಲದ ಹತ್ತಿರ ಕರೆಂಟ ಶಾಕ ಹೊಡೆದು ನಿಮ್ಮ ಒಂದು ಎತ್ತು, ನಿನ್ನ ಗಂಡ ಬಸಪ್ಪ ಮತ್ತು ಮೌಲಾಸಾಬ ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂದು ಹೇಳಿದಾಗ ಗಾಬರಿಯಿಂದ ನಾನು ಮತ್ತು ನನ್ನ ಅತ್ತೆ ಪರಮ್ಮ ಹಾಗೂ ಮೃತ ಮೌಲಾಸಾಬನ ಸಂಬಂಧಿಕರು ಕೂಡಿ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಿದ್ದು, ನಮ್ಮ ಕೆಂದ ಬಣ್ಣದ ಎತ್ತು, ನನ್ನ ಗಂಡ ಬಸಪ್ಪ ಮತ್ತು ನಮ್ಮೂರ ಮೌಲಾಸಾಬ ಇವರಿಗೆ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತ ಪಟ್ಟಿದ್ದರು. ಘಟನೆ ಬಗ್ಗೆ ಅಲ್ಲಿಯೇ ಇದ್ದ ಹಣಮಂತನಿಗೆ ಕೇಳಿದಾಗ ಅವರು ಹೇಳಿದ್ದೇನಂದರೆ ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಮತ್ತು ಮೌಲಾಸಾಬ ಇಬ್ಬರೂ ಕ್ರಿಮಿನಾಶಕ ಎಣ್ಣೆ ಸಿಂಪರಣೆ ಮಾಡಿ ವಾಪಸ ಊರಿಗೆ ಬರುತ್ತಿದ್ದಾಗ ಬಿಳ್ಹಾರ ಬಂಡಿ ದಾರಿಯಲ್ಲಿ ಬರುವ ಸಿದ್ದಣ್ಣಗೌಡ ಮತ್ತು ನಿತಿನಕುಮಾರ @ ಮುನ್ನಾಗೌಡ ರವರ ಹೊಲಕ್ಕೆ ಸುತ್ತಲು ಕಲ್ಲಿನ ಕಂಬ ಹಾಕಿ ಕಬ್ಬಿಣದ ಮುಳ್ಳು ತಂತಿ ಫಿನಿಸಿಂಗ ಮಾಡಿದ್ದು, ಅದರ ಮೇಲ್ಗಡೆ ತನ್ನ ಬೋರವೇಲ ಮೋಟರಕ್ಕೆ ಸವರ್ಿಸ ವೈರ ಎಳೆದುಕೊಂಡು ಹೋಗಿರುತ್ತಾನೆ. ಸದರಿ ಸವರ್ಿಸ್ ವೈರ ಮದ್ಯದಲ್ಲಿ ಕಟ್ ಆಗಿ ಕಬ್ಬಿಣದ ಮುಳ್ಳು ತಂತಿ ಮೇಲೆ ಬಿದ್ದಿದ್ದು, ಮುಳ್ಳು ತಂತಿಗೆ ವಿದ್ಯುತ ಪ್ರವಾಹವಾಗಿದ್ದು, ನಿನ್ನ ಗಂಡ ಎತ್ತುಗಳನ್ನು ಹೊಡೆದುಕೊಂಡು ಊರಿಗೆ ಬರುತ್ತಿದ್ದಾಗ ಕೆಂದ ಬಣ್ಣದ ಎತ್ತಿನ ಬಾಲ ಮುಳ್ಳು ತಂತಿಗೆ ಸಿಕ್ಕಿಬಿದ್ದಾಗ ಎತ್ತು ಬಾಲ ಬಿಡಿಸಿಕೊಳ್ಳಲು ಕಾಲು ಜಾಡಿಸಿದಾಗ ಎತ್ತಿನ ಕಾಲು ಮುಳ್ಳು ತಂತಿಗೆ ಸಿಕ್ಕಿಬಿದ್ದು, ನೋಡಿ ಬಸಪ್ಪ ಮತ್ತು ಮೌಲಾಸಾಬ ಇಬ್ಬರೂ ಎತ್ತಿನ ಕಾಲು ಬಿಡಿಸಿಕೊಳ್ಳಲು ಹೋದಾಗ ಕರೆಂಟ್ ಶಾಕ ತಗಲಿ ಎತ್ತು, ನಿನ್ನ ಗಂಡ ಬಸಪ್ಪ ಮತ್ತು ಮೌಲಾಸಾಬ ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸವರ್ಿಸ್ ವೈರ ಎಳೆದುಕೊಂಡು ಹೋಗಿ ನಿರ್ಲಕ್ಷ ತೋರಿಸಿದ್ದರಿಂದ ಸದರಿ ಸವರ್ಿಸ್ ವೈರ ತುಂಡಾಗಿ ಮುಳ್ಳು ತಂತಿ ಮೇಲೆ ಬಿದ್ದು, ಹೊಲದ ಮಾಲಿಕರ ನಿರ್ಲಕ್ಷತನದಿಂದ ಈ ಘಟನೆ ಸಂಭವಿಸಿರುತ್ತದೆ. ಇದಾದ ನಂತರ ನಮ್ಮ ಸಂಬಂಧಿಕರಾದ ತಿಪ್ಪಣ್ಣ ಮತ್ತು ನಿಂಗಪ್ಪ ಇವರು ಹೊಲದ ಮಾಲಿಕರ ಮನೆಗೆ ಹೋಗಿ ಈ ರೀತಿ ಘಟನೆ ಸಂಭವಿಸಿ ಅನಾಹುತವಾಗಿದೆ 3 ಜೀವ ಹಾನಿಯಾಗಿದೆ ಎಂದು ವಿಚಾರಿಸಿದರೆ ಹೊಲದ ಮಾಲಿಕ ಸಿದ್ದನಗೌಡನು ನಾನೇನು ಮಾಡಲಿ ಹೋಗು ಎಂದು ಉಡಾಫೆಯಾಗಿ ಮಾತುಗಳನ್ನಾಡಿ ಕಳುಹಿಸಿರುತ್ತಾನೆ. ಸದರಿ ಹೊಲದ ಸವರ್ೆ ನಂ. 85 ಇರುತ್ತದೆ. ಸದರಿ ಹೊಲವು ಸಿದ್ದನಗೌಡ ತಂದೆ ನೀಲಕಂಠರಾಯ ಐರೆಡ್ಡಿ ಮತ್ತು ಆತನ ಮಗನಾದ ನೀಲಕಂಠರೆಡ್ಡಿ ತಂದೆ ಸಿದ್ದನಗೌಡ ಇವರ ಹೆಸರಿನಲ್ಲಿ ಇರುತ್ತದೆ. ಸದರಿ ಘಟನೆಯು ಸಿದ್ದನಗೌಡ, ನೀಲಕಂಠರೆಡ್ಡಿ ಮತ್ತು ನಿತಿನಕುಮಾರ @ ಮುನ್ನಾಗೌಡ ಇವರ ನಿರ್ಲಕ್ಷತನದಿಂದ ಸಂಭವಿಸಿದ್ದು, ಈ ದುರ್ಘಟನೆಗೆ ಇವರೆ ಕಾರಣಿಭೂತರಾಗಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 116/2020 ಕಲಂ: 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 248/2020. ಕಲಂ 78 (3) ಕೆ.ಪಿ.ಆಕ್ಟ : ಆರೋಪಿತರು ದಿನಾಂಕ: 29-09-2020 ರಂದು 3:30 ಪಿ.ಎಮ್.ಕ್ಕೆ ಶಹಾಪುರ ರಾಖಂಗೇರಾ ಕ್ರಾಸ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 1400/- ರೂ. ನಗದು ಹಣ , ಎರಡು ಮಟಕಾ ಚೀಟಿಗಳು ಮತ್ತು ಒಂದು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 248/2020 ಕಲಂ.78 (3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 211/2020 ಕಲಂ 379 ಐ.ಪಿ.ಸಿ.  ಮತ್ತು ಕಲಂ. 44(1) ಕೆ,ಎಮ್,ಎಮ್,ಸಿ,ಆರ್.ಆಕ್ಟ 1994 : ಇಂದು ದಿನಾಂಕ:29-09-2020 ರಂದು 9:15 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ವೆಂಕಟೇಶ, ಆರಕ್ಷಕ ಉಪ ಅಧೀಕ್ಷಕರು, ಸುರಪೂರ ಉಪ-ವಿಭಾಗ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರದೊಂದಿಗೆ ಠಾಣೆಗೆ ಬಂದು  ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:29-09-2020 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನಾನು ಸಿಬ್ಬಂಧಿಯವರಾದ 1) ಶ್ರೀ ಸುಭಾಶ್ ಸಿಪಿಸಿ-174 ಸುರಪುರ ಪೊಲೀಸ್ ಠಾಣೆ, 2) ಶ್ರೀ ರಾಘವೇಂದ್ರ ಸಿಪಿಸಿ-339 ಕೆಂಭಾವಿ ಪೊಲೀಸ್ ಠಾಣೆ 3) ಶ್ರೀ ಮಂಜುನಾಥ ಸಿಪಿಸಿ-73 ಶಹಾಪೂರ ಪೊಲೀಸ್ ಠಾಣೆ ಹಾಗೂ 4) ಜೀಪ ಚಾಲಕನಾದ ಶ್ರೀ ಚಂದಪ್ಪಗೌಡ ಎ.ಪಿ.ಸಿ 143, ರವರೊಂದಿಗೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪೂರ ಕ್ರಾಸ್ ಹತ್ತಿರ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಮಾಹಿತಿ ತಿಳಿದು ಬಂದಿದ್ದೆನೆಂದರೆ ಶೆಳ್ಳಿಗಿ ಸೀಮಾಂತರ ಕೃಷ್ಣಾ ನದಿ ತೀರಿದಿಂದ ಯಾರೋ ತಮ್ಮ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ದೇವಾಪೂರ ಕ್ರಾಸ್ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂಧಿಯಾದ ಶ್ರೀ ಸುಭಾಶ್ ಸಿಪಿಸಿ ಇವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಶುಭಾಶ್ ಸಿಪಿಸಿ ರವರು ಇಬ್ಬರು ಪಂಚರಾದ 1)  ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 6:30 ಗಂಟೆಗೆ ಪಂಚರನ್ನಾಗಿ ಲಕ್ಷ್ಮೀಪೂರ ಕ್ರಾಸ್ ಹತ್ತಿರ ಬರಮಾಡಿಕೊಂಡು ಬಂದಿದ್ದು, ಸದರಿ ಪಂಚರು ಮತ್ತು ಸಿಬ್ಬಂಧಿಯವರಿಗೆ ವಿಷಯ ತಿಳಿಸಿ ಇಬ್ಬರು ಪಂಚರಿಗೆ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಎಲ್ಲಾ ಸಿಬ್ಬಂಧಿಯವರು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0253 ನೇದ್ದರಲ್ಲಿ ಕುಳಿತುಕೊಂಡು ಲಕ್ಷ್ಮೀಪೂರ ಕ್ರಾಸ್ದಿಂದ ಬೆಳಿಗ್ಗೆ 6:45 ಗಂಟೆ ಸುಮಾರಿಗೆ ಹೊರಟು ಬೆಳಿಗ್ಗೆ 7:30 ಗಂಟೆ ಸುಮಾರಿಗೆ ದೇವಾಪೂರ ಕ್ರಾಸ ಹತ್ತಿರ ಹೋಗುತ್ತಿರುವಾಗ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾವು ನಮ್ಮ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸಿಬ್ಬಂಧಿಯವರ ಸಹಾಯದಿಂದ ಸದರಿ ಟ್ಯಾಕ್ಟರ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಟ್ಯಾಕ್ಟರನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದರು. ನಂತರ ನಾನು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಪರೀಶಿಲಿಸಿ ನೋಡಲು ಒಂದು 7250 ಆ ಒಂಖಖಇಙ ಈಇಖಉಗಖಔಓ ಕಂಪನಿ ಟ್ಯಾಕ್ಟರ ಇದ್ದು ಅದರ ಇಂಜಿನ ನಂ ಇಏ  ಖ325.5ಏ287, ಚೆಸ್ಸಿ ನಂ. ಒಇಂಃಂಃಈ1ಇ ಏ2245398, ಟ್ರಾಲಿಗೆ ನಂಬರ ಇರುವುದಿಲ್ಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಪಂಚರ ಸಮಕ್ಷಮ ಬೆಳಿಗ್ಗೆ 7:30 ಗಂಟೆಯಿಂದ  ಬೆಳಿಗ್ಗೆ 8:30 ಗಂಟೆಯವರೆಗೆ  ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರನ್ನು  ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 1600/- ರೂ.ಗಳ ಕಿಮ್ಮತ್ತಿನ ಅಂದಾಜು 02 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಖಾಸಗಿ ಚಾಲಕನ ಸಹಾಯದಿಂದ ಠಾಣೆಗೆ ಬೆಳಿಗ್ಗೆ 9:15 ಗಂಟೆಗೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 93/2020  279 337 338 ಐಪಿಸಿ : ದಿನಾಂಕ:29/09/2020 ರಂದು ಹುಣಸಗಿ ಸರಕಾರಿ ದವಾಖಾನೆಯಿಂದಾ 11.00 ಗಂಟೆಗೆ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರಗೆ ಬೇಟಿ ಕೊಟ್ಟು ಗಾಯಳುವಿನ ಹೆಂಡತಿಯಾದ ಶ್ರೀಮತಿ. ಹಣಮಂತಿ ಗಂಡ ರಾಯಪ್ಪ ಪೊ.ಪಾಟೀಲ ವಯಾ-33 ವರ್ಷ ಜಾ:ಬೇಡರ ಉ:ಹೊಲಮನೆ ಕೆಲಸ ಸಾ:ಸಿದ್ದಾಪೂರ(ಬಿ) ತಾ:ಹುಣಸಗಿ ಯಾದಗಿರ ಇವರಿಗೆ ವಿಚಾರಿಸಲು ಹೇಳಿಕೆ ಕೊಟ್ಟ ಸಾರಾಂಶವೆನೆಂದರೇ, ಫಿರ್ಯಾದಿ & ಫಿರ್ಯಾದಿಯ ಗಂಡ ಕೂಡಿಕೊಂಡು ತಮ್ಮ ಮೋಟಾರ್ ಸೈಕಲ್ ನಂ: ಕೆಎ-04 ಹೆಚ್.ಬಿ-0804 ನೇದ್ದರ ಮೇಲೆ ತಮ್ಮೂರಿನಿಂದ ಬಂಡೆಪ್ಪನಳ್ಳಿ ಮುತ್ಯಾನ ಗದ್ದಿಗಿಗೆ ಹೋಗಿ ದರ್ಶನ ಮಾಡಿಕೊಂಡು ವಾಪಸು ತಮ್ಮೂರಿಗೆ ತಮ್ಮ ಮೋಟಾರ್ ಸೂಕಲ್ ಮೇಲೆ ಹೊರಟಾಗ ಹುಣಸಗಿ ಸಮೀಪ ಎಡಗಡೆಯಿಂದ ಹೊರಟಾಗ ರಸ್ತೆಯ ಎಡಗಡೆ ಕೆಳಗಡೆಯಿಂದ ಒಂದು ಮೋಟಾರ್ ಸೈಕಲ್ ಸವಾರನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ಕೊಂಡು ಬಂದು ಫಿರ್ಯಾದಿ & ತನ್ನ ಗಂಡನು ಹೊರಟ ಮೋಟಾರ್ ಸೈಕಲ್ಗೆ ಜೋರಾಗಿ ಡಿಕ್ಕಿ ಕೊಟ್ಟಿದ್ದು, ಫಿರ್ಯಾದಿ ಹಾಗೂ ಫಿರ್ಯಾದಿಯ ಗಂಡ ಇಬ್ಬರೂ ಬಲಗಡೆ ಬಂದು ರೋಡಿನ ಮೇಲೆ ಬಿದ್ದಿದ್ದು, ಫಿರ್ಯಾದಿಯ ಗಂಡನಾದ ರಾಯಪ್ಪನಿಗೆ ತಲೆಗೆ ಭಾರಿ ಒಳಪೆಟ್ಟಾಗಿದ್ದು, & ಹಿಂಬಾಗ ಭಾರಿ ಒಳಪೆಟ್ಟಾಗಿ ಗುಮಟಿ ಬಂದಿದ್ದು ಬೇವುಸ ಆಗಿದ್ದು ಇರುತ್ತದೆ. ಫಿರ್ಯಾದಿಗೆ ಮುಖಕ್ಕೆ ಭಾರಿ ತರಚಿದ ರಕ್ತಗಾಯವಾಗಿದ್ದು, ಹಾಗೂ ಹಣೆಗೆ ಗಲ್ಲಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ಡಿಕ್ಕಿ ಕೊಟ್ಟ ಮೋಟಾರ್ ಸೈಕಲ್ ನಂ: ಕೆಎ-33 ವಾಯ್-3570 ಸ್ಪ್ಲೆಂಡರ್ ಪ್ಲಸ್ ಇದ್ದು, ಅದರ ಚಾಲಕನು ಹೆಸರು ರಮೇಶ ತಂದೆ ಮಡಿವಾಳಪ್ಪ ಜಂಬೆರಾಳ ಸಾ:ಹುಣಸಗಿ ಅಂತಾ ಇದ್ದು, ಸದರಿಯವನ ವಿರುದ್ದ ಕಾಯ್ದೆ ಸಿರಿ ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿ ಹೇಳಿಕೆ ದೂರು ಕೊಟ್ಟಿದ್ದು ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ.    


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:-  66/2020 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 29/09/2020 ರಂದು 6:10 ಪಿ. ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 2:30 ಪಿ.ಎಂ ಕ್ಕೆ ನಾರಾಯಣಪೂರ ಐಬಿ ತಾಂಡಾದ ಸೇವಾಲಾಲ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 66/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 8:30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ  ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 1950/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 150/2020 PÀ®A: 379 L.¦.¹ : ಇಂದು ದಿ: 29/09/2020 ರಂದು 6 ಪಿಎಮ್ ಕ್ಕೆ ಪಿರ್ಯಾದಿದಾರರಾದ ಶ್ರೀ ಗಿರೀಶ ತಂದೆ ಶರಣಪ್ಪ ನಿಸಾ ಸೆಕ್ಯೂರಿಟಿ ಸುಪರವೈಸರ್ ಸಾ|| ರಾಯಚೂರು ಇವರು ಠಾಣೆಗೆ ಹಾಜರಾರಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ದಿ: 26/09/2020 ರಂದು ರಾತ್ರಿ 00.43 ಗಂಟೆಗೆ ನಮ್ಮ ಿಂಡಸ್ ಟವರ್ ಕಂಪನಿಯ ಅಲಾರಾಮ ಟೀಮ್ ನವರಿಂದ ತಿಳಿದುಬಂದಿದ್ದೇನೆಂದರೆ ಹೂವಿನಳ್ಳಿ ಗ್ರಾಮದ ಿಂಡಸ್ ಟವರ್ ಐಟಿ ನಂ 1281320 ನೇದ್ದರಲ್ಲಿ ಬ್ಯಾಟರಿ ಬ್ಯಾಂಕ್ ಕಳುವಿನ ಅಲಾರಾಮ ಬರುತ್ತಿದೆ ಅಂತ ತಿಳಿದ ಕೂಡಲೆ ನಾನು ರಾಯಚೂರಿನಿಂದ ಹೂವಿನಳ್ಳಿ ಗ್ರಾಮಕ್ಕೆ ದಿ: 26/09/2020 ರಂದು ಬೆಳಿಗ್ಗೆ 7 ಗಂಟೆಗೆ ಭೆಟಿ ಕೊಟ್ಟು ನೋಡಲಾಗಿ ಯಾರೋ ಕಳ್ಳರು ಶೆಲ್ಟರನ ಬೀಗ ಮುರಿದು ಒಳಗಡೆ ಹೋಗಿ ರ್ಯಾಕ್  ನಲ್ಲಿ ಅಳವಡಿಸಿದ 24 ಬ್ಯಾಟರಿಗಳನ್ನು .ಕಿ 24000/- ರೂ ಕಳವು ಮಾಡಿಕೊಂಡು ಹೋಗಿದ್ದು ಸದರಿ 24 ಬ್ಯಾಟರಿಗಳನ್ನು ಪತ್ತೆ ಮಾಡಿ ಕೊಡಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 150/2020 ಕಲಂ: 379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 151/2020 PÀ®A: 379 L.¦.¹ : ಇಂದು ದಿ: 29/09/2020 ರಂದು 6.30  ಪಿಎಮ್ ಕ್ಕೆ ಪಿರ್ಯಾದಿದಾರರಾದ ಶ್ರೀ ಗಿರೀಶ ತಂದೆ ಶರಣಪ್ಪ ನಿಸಾ ಸೆಕ್ಯೂರಿಟಿ ಸುಪರವೈಸರ್ ಸಾ|| ರಾಯಚೂರು ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ದಿ: 26/09/2020 ರಂದು ರಾತ್ರಿ 00.43 ಗಂಟೆಗೆ ನಮ್ಮ ಇಂಡಸ್ ಟವರ್ ಕಂಪನಿಯ ಅಲಾರಾಮ ಟೀಮ್ ನವರಿಂದ ತಿಳಿದುಬಂದಿದ್ದೇನೆಂದರೆ ಎಮ್ ಬೊಮನಳ್ಳಿ ಗ್ರಾಮದ ಇಂಡಸ್ ಟವರ್ ಐಟಿ ನಂ 1286376 ನೇದ್ದರಲ್ಲಿ ಬ್ಯಾಟರಿ ಬ್ಯಾಂಕ್ ಕಳುವಿನ ಅಲಾರಾಮ ಬರುತ್ತಿದೆ ಅಂತ ತಿಳಿದ ಕೂಡಲೆ ನಾನು ರಾಯಚೂರಿನಿಂದ  ಬಂದು ಮುನೀರ ಬೊಮನಳ್ಳಿ ಗ್ರಾಮಕ್ಕೆ ದಿ: 26/09/2020 ರಂದು ಬೆಳಿಗ್ಗೆ 8 ಗಂಟೆಗೆ ಭೆಟಿ ಕೊಟ್ಟು ನೋಡಲಾಗಿ ಯಾರೋ ಕಳ್ಳರು ಶೆಲ್ಟರನ ಬೀಗ ಮುರಿದು ಒಳಗಡೆ ಹೋಗಿ ರ್ಯಾಕ್  ನಲ್ಲಿ ಅಳವಡಿಸಿದ 11ಬ್ಯಾಟರಿ ಬ್ಯಾಂಕ್ ಗಳನ್ನು ನಟ್ಟು ಬೋಲ್ಟು ಗಳನ್ನು ಬಿಚ್ಚಿ ಕಳವು ಮಾಡಿಕೋಡಮು ಹೋಗಿರುತ್ತಾರೆ ಅವುಗಳ  .ಕಿ 11000/- ರೂ ಇರುತ್ತದೆ. ಕಳುವಾದ ಸಮಯ 1.30 ೆಮ್ ಆಗಿರುತ್ತದೆಸದರಿ 11 ಬ್ಯಾಟರಿ ಬ್ಯಾಂಕ್ ಶೆಲಗಳನ್ನು ಪತ್ತೆ ಮಾಡಿ ಕೊಡಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 151/2020 ಕಲಂ: 379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 152/2020 ಕಲಂ: 87 ಕೆಪಿ ಯಾಕ್ಟ : ದಿನಾಂಕ: 29.09.2020 ರಂದು 16.30 ಗಂಟೆಗೆ ಪಿರ್ಯಾದಿದಾರರು  ಠಾಣೆಯಲ್ಲಿದ್ದಾಗ ಯಾಳಗಿ ಗ್ರಾಮದ ಹಳ್ಳದ  ಪಕ್ಕದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಪಿರ್ಯಾಧಿದಾರರು ಹಾಗು ಠಾಣೆಯ ಸಿಬ್ಬಂದಿಯವರಾದ 1) ಶಿವಲಿಂಗಪ್ಪ ಹೆಚಸಿ 185 2) ಸಂಗಮೇಶ ಪಿಸಿ 244 3) ಬೀರಪ್ಪ ಪಿಸಿ 195 ಹಾಗೂ 4) ಸುಭಾಶ್ಚಂದ್ರ ಪಿಸಿ 174 5) ವಿರೇಶ ಪಿಸಿ 374 6) ಬಸಪ್ಪ ಪಿಸಿ 393 ಎಲ್ಲರು ಸುರಪುರ ಠಾಣೆ ಹಾಗೂ 7) ರಾಘವೇಂದ್ರ ಪಿಸಿ 339 ಕೆಂಭಾವಿ ಠಾಣೆ, 8) ಮಂಜುನಾಥ ಪಿಸಿ 73 ಶಹಾಪುರ ಠಾಣೆ ಎಲ್ಲರಿಗೂ ಕರೆದು ಬಾತ್ಮಿ ವಿಷಯ ತಿಳಿಸಿ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ  ವ||37 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಯ ಬೀರಪ್ಪ ಪಿಸಿ 195 ಇವರ ಮುಖಾಂತರ ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಮಾನ್ಯ ಡಿ ಎಸ್ ಪಿ ಸಾಹೇಬರು ಸುರಪೂರ ಹಾಗು ಮಾನ್ಯ ಸಿಪಿಐ ಸಾಹೇಬರು ಹುಣಸಗಿ ರವರ ಮಾರ್ಗದರ್ಶನದಲ್ಲಿ ಠಾಣೆಯಿಂದ 16.45 ಗಂಟೆಗೆ ಸರಕಾರಿ ಜೀಪ ನಂ. ಕೆಎ 33 ಜಿ 0074 ನೇದ್ದರಲ್ಲಿ ಠಾಣೆಯಿಂದ ಹೊರಟು 17.00 ಪಿಎಮ್ಕ್ಕೆ ಯಾಳಗಿ ಹಳ್ಳದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಹಳ್ಳದ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅದರಲ್ಲಿ ಒಬ್ಬನು ರಾಣಿ ಹೊರಗೆ ಅಂತ ಇನ್ನೊಬ್ಬ ರಾಣಿ ಒಳಗೆ ಅಂತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 17-05 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 07 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಸುಭಾಸ ತಂದೆ ಈರಣ್ಣ ಹಳ್ಳಿ ವಯಾ|| 28 ಜಾ|| ಲಿಂಗಾಯತ ಉ|| ಕೂಲಿ ಸಾ|| ಯಾಳಗಿ 2) ಬಸವರಾಜ ತಂದೆ ಗುರಣ್ಣ ಹಂದಿಗನೂರ ವಯಾ|| 30 ಜಾ|| ಲಿಂಗಾಯತ ಉ|| ಕೂಲಿ ಸಾ|| ಯಾಳಗಿ 3) ಅಬ್ದುಲ ಖದೀರ ತಂದೆ ಅಬ್ದುಲ ಮಜೀದ ಚೌದ್ರಿ ವಯಾ|| 27 ಜಾ|| ಮುಸ್ಲಿಂ ಉ|| ಕೂಲಿ ಸಾ|| ಯಾಳಗಿ 4) ಗುರಪ್ಪ ತಂದೆ ಬಸಪ್ಪ ಗುಗ್ಗರಿ ವಯಾ|| 35 ಜಾ|| ಲಿಂಗಾಯತ ಉ|| ಕೂಲಿ ಸಾ|| ಯಾಳಗಿ 5) ಶರಣಪ್ಪ ತಂದೆ ಸಿದ್ದನಗೌಡ ಉಮ್ಮಪ್ಪಗೋಳ ವಯಾ|| 35 ಜಾ|| ಲಿಂಗಾಯತ ಉ|| ಕೂಲಿ ಸಾ|| ಯಾಳಗಿ 6) ಮಹಿಬೂಬ ತಂದೆ ಖಾದರಸಾಬ ಅತ್ತಾರ ವಯಾ|| 34 ಜಾ|| ಮುಸ್ಲಿಂ ಉ|| ಕೂಲಿ ಸಾ|| ಯಾಳಗಿ 7) ಚಾಂದಸಾಬ ತಂದೆ ಖಾದರಸಾಬ ಯಲಿಗಾರ ವಯಾ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಯಾಳಗಿ  ಅಂತ ತಿಳಿಸಿದ್ದು, ಸದರಿಯವರು ಪಣಕ್ಕಾಗಿ ಬರಕಾದ ಮೇಲೆ ತಮ್ಮ ತಮ್ಮ ಮುಂದೆ ಇಟ್ಟಿದ್ದ ಒಟ್ಟು 11,130=00 ರೂಪಾಯಿ ನಗದು ಹಣ ಹಾಗೂ 52 ಇಸ್ಪೇಟ ಎಲೆಗಳು ಹಾಗೂ 1 ಬಿಳಿ ಬಣ್ಣದ ಬರಕಾವನ್ನು ಕೇಸಿನ ಮುಂದಿನ ಪುರಾವೆ ಕುರಿತು 17.05 ಗಂಟೆಯಿಂದ 18.05 ಗಂಟೆವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ, ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಠಾಣೆ ಗುನ್ನೆ ನಂ 152/2020 ಕಲಂ: 87 ಕೆಪಿ ಆಕ್ಟ  ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!