ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/09/2020
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 137/2020 ಕಲಂ 279, 337, 338 ಐಪಿಸಿ : ಇಂದು ದಿನಾಂಕ 28-09-2020 ರಂದು ಮಧ್ಯಾಹ್ನ 12.00 ಗಂಟೆಗೆ ಸರಕಾರಿ ಆಸ್ಪತ್ರೆ ಗುರುಮಠಕಲದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀಮತಿ ರೇಣುಕಾ ಗಂಡ ಮಹೇಶ ಕಿಂದಿಂಟಿ ವಯ|| 22 ವರ್ಷ ಜಾ|| ಎಸ್.ಸಿ(ಹರಿಜನ ಉ|| ಕೂಲಿಕೆಲಸ ಸಾ|| ಉಡುಮಲಗಿದ್ದ ತಾ|| ದಾಮರಗಿದ್ದ ಜಿ|| ನಾರಾಯಣಪೇಟ್ (ತೆಲಂಗಾಣ ರಾಜ್ಯ). ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ. 28-09-2020 ರಂದು ಬೆಳಿಗ್ಗೆ ಗಾಜರಕೋಟ್ ಗ್ರಾಮದಿಂದ ನನ್ನ ಒಂದು ವರ್ಷದ ಮಗಳಾದ ಐಶ್ವಯರ್ಾಳಿಗೆ ತಾಯಿ ಕಾರ್ಡ ಮಾಡಿಸಿಕೊಂಡು ಬರಲು ನನ್ನ ಗಂಡನೊಂದಿಗೆ ನಮ್ಮ ಸ್ವಂತ ಮೋಟಾರ ಸೈಕಲ್ ಬ್ಲ್ಯಾಕ್-ಬ್ಲೂ ಕಲರ ಪಲ್ಸರ್-150 ಸಿ.ಸಿ ಚೆಸ್ಸಿ ನಂ. ಒಆ2ಂ11ಅಙ2ಐಅಐ07630 & ಇಟಿರಟಿಜ.ಓಠ-ಆಊಙಅಐಐ24686 ನೇದ್ದರ ಮೇಲೆ ನಾನು, ನನ್ನ ಮಗಳು ಐಶ್ವಯರ್ಾಳನ್ನು ಕೂಡಿಸಿಕೊಂಡು ನನ್ನ ಗಂಡ ನಡೆಸುತ್ತಿದ್ದ ಸದರಿ ಬೈಕ ಮೇಲೆ ಗುರುಮಠಕಲ ಸರಕಾರಿ ಆಸ್ಪತ್ರೆಗೆ ಹೊರಟಿದ್ದಾಗ, ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಗಾಜರಕೋಟ್- ಗುರುಮಠಕಲ ಮಧ್ಯದ ರೋಡಿನ ಮೇಲೆ ಸಾಬಣ್ಣ ಬೋಡಾ, ಗಾಜರಕೋಟ್ ಇವರ ಜಮೀನು ಹತ್ತಿರ ನನ್ನ ಗಂಡ ನಾವು ಕುಳಿತ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದಾಗ ನಮ್ಮ ಎದುರಿಗೆ ಗುರುಮಠಕಲ ಕಡೆಯಿಂದ ಒಂದು ಖಾಸಗಿ ಜೀಪ ಹೊರಟಿದ್ದನ್ನು ನೋಡಿ ನನ್ನ ಗಂಡ ಬೈಕನ್ನು ಒಮ್ಮೆಲೆ ಲೆಫ್ಟ್ ಸೈಡಗೆ ಕಟ್ ಹೊಡೆದು ತೆಗೆದುಕೊಂಡಿದ್ದರಿಂದ ಬೈಕ ಪಲ್ಟಿಯಾಗಿ ರೋಡಿನ ಪಕ್ಕಕ್ಕೆ ಬಿದ್ದು ಅಪಘಾತ ಸಂಭವಿಸಿರುತ್ತದೆ. ಸದರಿ ಅಪಘಾತದಲ್ಲಿ ನನಗೆ ಬಲಗಡೆ ಮೆಲುಕಿನ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಬಲಗಡೆ ಭುಜಕ್ಕೆ, ಬೆನ್ನಿಗೆ ಭಾರಿ ಒಳಪೆಟ್ಟಾಗಿದ್ದು, ಮೈ,ಕೈಗೆ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ. ನನ್ನ ಗಂಡನಿಗೆ ಹಣೆಗೆ, ಮುಖಕ್ಕೆ ಮತ್ತು ಬಲಗಾಲಿನ ಪಾದಕ್ಕೆ ತೆರಚಿದ ರಕ್ತಗಾಯವಾಗಿರುತ್ತದೆ. ನನ್ನ ಮಗಳು ಐಶ್ವಯರ್ಾಗೆ ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ.ಸದರಿ ಮೊಟಾರ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಅಪಘಾತಪಡಿಸಿದ ನನ್ನ ಗಂಡ ಮಹೇಶ ತಂದೆ ಭೀಮಶಪ್ಪ ಕಿಂದಿಂಟಿ ವಯ|| 27 ವರ್ಷ, ಜಾ|| ಎಸ್.ಸಿ(ಹರಿಜನ) ಉ|| ಬಿಲ್ಡಿಂಗ ಕೆಲಸ ಸಾ|| ಸಾ|| ಉಡುಮಲಗಿದ್ದಾ ತಾ|| ದಾಮರಗಿದ್ದಾ ಜಿ|| ನಾರಾಯಣಪೆಟ್ ತೆಲಂಗಾಣ ರಾಜ್ಯ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿಯರ್ಾದಿ ಸಾರಾಂಶ ಇರುತ್ತದೆ.
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 13/2020 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ; 28/09/2020 ರಂದು 11-00 ಎಎಮ್ ಕ್ಕೆ ಪಿರ್ಯಾಧಿ ಶ್ರೀ ದೀಪಕ ತಂದೆ ಮಹೇಶ ಕುರಕುಂಬಳ ಸಾ; ಅಂಬೇಡ್ಕರ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ, ನಾನು ಎರಡು ತಿಂಗಳಿನಿಂದ ಯಾದಗಿರಿ ನಗರಸಭೆಯಲ್ಲಿ ಲೇಬರಗಳ ಮೇಲೆ ಸುಪರವೈಸರ ಅಂತಾ ಕೆಲಸ ಮಾಡಿಕೊಂಡು ಇರುತ್ತೇನೆ. ಇಂದು ದಿನಾಂಕ; 28/09/2020 ರಂದು ಬೆಳೆಗ್ಗೆ 10-00 ಗಂಟೆ ಸುಮಾರಿಗೆ ಲೇಬರಗಳನ್ನು ಚೆಕ್ ಮಾಡುತ್ತಾ ಯಾದಗಿರಿಯ ಹಳೆ ಬಸ ನಿಲ್ದಾಣದ ಹತಿರ ಹೋದಾಗ ಹಳೆ ಬಸ ನಿಲ್ದಾಣದ ಒಳಗಡೆ ಒಬ್ಬ ಸಾಧು ಮೃತಪಟ್ಟಿದ್ದರ ಬಗ್ಗೆ ತಿಳಿದು ಹೋಗಿ ನೋಡಲಾಗಿ ಒಬ್ಬ ಸಾಧು ಮುದಕನಿದ್ದು ಬಿಳಿಗಡ್ಡ, ಮೀಸೆ ಹಾಗೂ ಮೈಮೇಲೆ ಖಾವಿ ಬಟ್ಟೆ ತೋಟ್ಟಿದ್ದು ಮಲಗಿದಲ್ಲಿಯೇ ಮೃತಪಟ್ಟಿರುತ್ತಾನೆ. ಮೃತ ಸಾಧು ಈತನು ಅಲ್ಲಿ ಇಲ್ಲಿ ಭಿಕ್ಷೆ ಬೇಡಿಕೊಂಡು ತಿರುಗುತ್ತಿದ್ದು ರಾತ್ರಿ ಹಳೆ ಬಸನಿಲ್ದಾಣದಲ್ಲಿ ಮಲಗುತ್ತಿದ್ದಂತೆ ಕಂಡು ಬಂದಿರುತ್ತದೆ. ಮೃತ ಸಾಧು ಈತನ ಅಂದಾಜು ವಯಸ್ಸು 60 ರಿಂದ 65 ವರ್ಷ ಇರಬಹುದು ಮೃತ ಸಾಧು ಈತನ ಹೆಸರು ಬಾಬು ತಂದೆ ಯಶವಂತಪ್ಪ ದರೆಕರ ಸಾ; ಕಾಸರ ಬಾಲಕುಂದಾ ತಾ; ನೀಲಂಗಾ ಜಿ; ಲಾತುರ ಅಂತಾ ಸಾರ್ವಜನಿಕರಿಂದ ತಿಳಿದು ಬಂದಿದ್ದು ಅನಾರೋಗ್ಯದಿಂದ ಬಳಲಿ ಹೊಟ್ಟೆಗೆ ಆಹಾರವಿಲ್ಲದೇ ಮೃತಪಟ್ಟಿದ್ದು ಸದ್ರಿ ಘಟನೆಯು ನಿನ್ನೆ ದಿನಾಂಕ; 27/09/2020 ರಂದು ರಾತ್ರಿ 11-00 ಗಂಟೆಯಿಂದ ಇಂದು ದಿನಾಂಕ; 28/09/2020 ರಂದು ಬೆಳೆಗ್ಗೆ 9-00 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿದ್ದು ಮುಂದಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದು, ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್ ನಂ.13 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 210/2020 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 28/09/2020 ರಂದು 8:50 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ್ ಪಿಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:28/09/2020 ರಂದು 6:30 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪಟ್ಟಣದ ವಾಲ್ಮೀಕಿ ಚೌಕ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್ಸಿ-105 3) ಶ್ರೀ ಮಂಜುನಾಥ ಪಿಸಿ-271 ಹಾಗು ಜೀಪ್ ಚಾಲಕ 4) ಮಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಹಣಮಂತಗೌಡ ತಂದೆ ಭೀಮಣ್ಣ ಬಿಚಗತ್ತಿ ವಯಾ:46 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಬಿಚಗತ್ತಗೇರಿ ಸುರಪೂರ 2) ಶ್ರೀ ಲಕ್ಷ್ಮಣ ತಂದೆ ಮರೆಪ್ಪ ಡೊಣ್ಣಿಗೇರಿ ವಯಾ:28 ವರ್ಷ ಜಾ:ಬೇಡರ ಉ:ಕುರಿ ಕಾಯುವುದು ಸಾ:ಡೊಣ್ಣಿಗೇರಿ ಸುರಪೂರ ಸುರಪುರ ಇವರನ್ನು 6:45 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 7 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33 ಜಿ-0238 ನೇದ್ದರಲ್ಲಿ ಹೊರಟು 7:20 ಪಿ.ಎಮ್ ಕ್ಕೆ ಸುರಪೂರ ಪಟ್ಟಣದ ವಾಲ್ಮೀ ಚೌಕ್ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಸುರಪೂರ ಪಟ್ಟಣದ ವಾಲ್ಮೀ ಚೌಕ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ಲೈಟಿನ ಕಂಬದ ಬೆಳಕಿನಲ್ಲಿ ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 7:25 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಭೀಮಣ್ಣ ತಂದೆ ಪರಶುರಾಮ ಐಕೂರ ವಯಾ:30 ವರ್ಷ ಜಾ:ಬೇಡರ ಉ:ಅಟೋ ಡೈವರ್ ಸಾ:ಬಿಚಗತ್ತಗೇರಿ ಸುರಪುರ ಅಂತಾ ತಿಳಿಸಿದ್ದು, ಸದರಿಯವನಿಗೆ ವಿಚಾರಿಸಲಾಗಿ, ನನಗೆ ಮಟಕಾ ನಂಬರ್ ಬರೆಯಲು ಗೋಪಾಲ ತಂದೆ ಅಂಬಣ್ಣ ದರಬಾರಿ ವಯಾ:29 ವರ್ಷ ಜಾ: ಬೇಡರ ಉ:ಕೂಲಿ ಸಾ:ಬಿಚಗತ್ತಗೇರಿ ಸುರಪೂರ ಈತನು ಬರೆಯಲು ಹೇಳಿದ್ದು, ಆತನು ಹೇಳಿದ ಪ್ರಕಾರ ನಾನು ಮಟಕಾ ನಂಬರಗಳನ್ನು ಬರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ದಿನಾಲೂ ಗೋಪಾಲ ಈತನಿಗೆ ಕೊಡುತ್ತೇನೆ ಅಂತಾ ತಿಳಿಸಿರುತ್ತಾನೆ. ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 2350/- ರೂ.ಗಳು. ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 7:25 ಪಿ.ಎಮ್ ದಿಂದ 8:25 ಪಿ.ಎಮ್ದ ವರೆಗೆ ಲೈಟಿನ ಕಂಬದ ಬೆಳಕಿನಲ್ಲಿ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.