ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/09/2020

By blogger on ಮಂಗಳವಾರ, ಸೆಪ್ಟೆಂಬರ್ 29, 2020

 


                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/09/2020 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 138/2020 ಕಲಂ 447, 323, 504, 506 ಐಪಿಸಿ : ಫಿರ್ಯಾಧಿ ಮತ್ತು ಆರೋಪಿತನು ಖಾಸ ಸಹೋದರರಿದ್ದು, ಇವರಿಬ್ಬರ ಮಧ್ಯ ಹೋಲದ ಡ್ವಾಣದ ವಿಷಯದಲ್ಲಿ ಈ ಮೊದಲಿಂದಲೂ ಜಗಳವಾಗುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 26-09-2020 ರಂದು 10-30 ಎ.ಎಂ ಕ್ಕೆ ಫಿರ್ಯಾಧಿದಾರರು ತಮ್ಮ ಹೋಲದಲ್ಲಿದ್ದ ಬೋರದಿಂದ ಮೋಟಾರ ಹೊರತೆಗೆದು ಅದನ್ನು ತೆಗೆದುಕೊಂಡು ಹೋಗುವ ಸಲುವಾಗಿ ಡ್ವಾಣದ ಮೇಲೆ ಕಾಲು ಜಾರಬಹುದು ಅಂತಾ ತಿಳಿದು ಆರೋಪಿ ಮತ್ತು ತಮ್ಮ ಮಧ್ಯ ಇರುವ ಡ್ವಾಣದ ಮೇಲೆ ಹುಲ್ಲು ಹಾಕಿದ್ದು ಇರುತ್ತದೆ. ಫಿರ್ಯಾಧಿದಾರರು ಹುಲ್ಲು ಹಾಕಿದ್ದಕ್ಕೆ ಮತ್ತು ಹಿಂದಿನ ಹಳೇ ವéೈಷಮ್ಯದಿಂದ ಆರೋಪಿತನು ಫಿರ್ಯಾಧಿಯ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಕೈಯಿಂದ ಹೊಡೆಬಡಿ ಮಾಡಿ ಜೀವದ ಭಯ ಹಾಕಿದ್ದು ಇರುತ್ತದೆ ಅಂತಾ ಫಿರ್ಯಾಧಿಯ ಸಾರಾಂಶವಿರುತ್ತದೆ

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 139/2020 ಕಲಂ 324, 504, 506 ಐಪಿಸಿ : ದಿನಾಂಕ 26/09/2020 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ತನ್ನ ಹೊಲಕ್ಕೆ ಹೋದಾಗ ಆರೋಪಿತನು ತನ್ನ ಹೊಲದಲ್ಲಿಯ ಬೊರವೆಲ್ ಪೈಪುಗಳು ಕಿತ್ತಿ ಫಿರ್ಯಾಧಿ ಹೊಲದಲ್ಲಿ ಹಾಕಿದ್ದು, ಆ ಪೈಪುಗಳನ್ನು ತೆಗೆ ಅಂತಾ ಹೇಳಿದ್ದರಿಂದ ಆರೋಪಿತನು ಹಳೇ ದ್ವೇಶದಿಂದ ಫಿರ್ಯಾಧಿ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಕಲ್ಲಿನಿಂದ  ಹೊಡೆಬಡೆ ಮಾಡಿ ಗುಪ್ತಗಾಯಗಳು ಮಾಡಿದ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.

ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 135/2020 ಕಲಂ 379 ಐಪಿಸಿ : ಇಂದು ದಿನಾಂಕ 26.09.2020 ರಂದು ಬೆಳಿಗ್ಗೆ 11:00 ಗಂಟೆಗೆ ಟಿಪ್ಪರ ನಂಬರ ಕೆಎ-33-ಎ-9453 ನೇದ್ದರಲ್ಲಿ ಅಕ್ರಮವಾಗಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಸಂಬಂದಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ಸಮಯ ಬೆಳಿಗ್ಗೆ 11:00 ಗಂಟೆಗೆ ಗುರುಮಠಕಲ್ ಪಟ್ಟಣದ ಚೆಪೆಟ್ಲಾ ಕ್ರಾಸ್ನಲ್ಲಿ ದಾಳಿ ಮಾಡಿದಾಗ ಸದರಿ ಮರಳು ತುಂಬಿದ ಟಿಪ್ಪರನ ಚಾಲಕನು ಸದರಿ ಟಿಪ್ಪರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಮರಳು ತುಂಬಿದ ಟಿಪ್ಪರ ಜಪ್ತಿ ಪಂಚನಾಮೆಯನ್ನು ಕೈಕೊಂಡು ನಂತರ ಮರಳಿ ಠಾಣೆಗೆ ಬಂದು ದಾಳೀಯ ಕಾಲಕ್ಕೆ ಓಡಿ ಹೋದ ಸದರಿ ಟಿಪ್ಪರನ ಚಾಲಕನ ವಿರುದ್ಧ ಮತ್ತು ಮಾಲೀಕನ ವಿರುದ್ದ ಕ್ರಮಕ್ಕಾಗಿ ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ: 135/2020 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:-  136/2020 ಕಲಂ 279, 337, 338 ಐಪಿಸಿ : ನಿನ್ನೆ ದಿನಾಂಕ 25.09.2020 ರಂದು ಮಧ್ಯಾಹ್ನ 3:00 ಗಂಟೆಗೆ ಗಾಯಾಳು ಆರೋಪಿತನು ತನ್ನೆ ಹೆಂಡತಿಯನ್ನು ಕೊಲಂಪಲ್ಲಿ ಗ್ರಾಮದಿಂದ ಕರೆದುಕೊಂಡು ಹೋಗಿ ನಾಲ್ವಾರ ಗ್ರಾಮದಲ್ಲಿ ಬಿಟ್ಟು ಮರಳಿ ಮೋಟಾರು ಸೈಕಲ್ ನಂಬರ ಕೆಎ-32-ವೈ-6254 ನೇದ್ದರ ಮೇಲೆ ಧರ್ಮಪೂರ ಮಾರ್ಗವಾಗಿ ಕೊಲಂಪಲ್ಲಿ ಗ್ರಾಮಕ್ಕೆ ಹೋಗುತ್ತಿದ್ದಾಗ ಧರ್ಮಪೂ ಘಾಟ್ನಲ್ಲಿ ಕವರ್್ ರೋಡಿನಲ್ಲಿ ತನ್ನ ಮೋಟಾರು ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ತಾನೆ ಬಿದ್ದು ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಮುಖಕ್ಕೆ, ಬಾಯಿಗೆ ಸಾಧಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದ ಬಗ್ಗೆ ಆತನ ಹೆಂಡತಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 136/2020 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:-  124/2020 ಕಲಂ 87 ಕೆ.ಪಿ ಕಾಯ್ದೆ : 1) ಜಯಪ್ಪ ತಂದೆ ಮಲ್ಲಪ್ಪ ಹುಲಿಬೆಟ್ಟ ವ|| 43 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕರಣಿಗಿ 2) ರವಿಂದ್ರರೆಡ್ಡಿ ತಂದೆ ಲಿಂಗರೆಡ್ಡಿ ವ|| 51 ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಕರಣಿಗಿ 3) ದೊಡ್ಡನೆಸಿಂಗಪ್ಪ ತಂದೆ ಹಣಮಂತ ಹುಲಿಬೆಟ್ಟ ವ|| 48 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕರಣಿಗಿ 4) ತಾಯಪ್ಪ ತಂದೆ ತಿಪ್ಪಣ್ಣ ಹುಲಿಬೆಟ್ಟ ವ|| 42 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕರಣಿಗಿ 5) ಬನ್ನಪ್ಪ ತಂದೆ ಬಸವರಾಜ ಸಾಹೂಕಾರ ವ|| 44 ವರ್ಷ ಜಾ|| ಬಣಜೀಗ ಉ|| ಒಕ್ಕಲುತನ ಸಾ|| ಕರಣಿಗಿ 6) ವೆಂಕಟೇಶ ತಂದೆ ಹಣಮಂತ ಗುಡಸೇ ವ|| 39 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕರಣಿಗಿ 7) ತಾಯಪ್ಪ ತಂದೆ ನರಸಿಂಗಪ್ಪ ಬಾಗಲಿ ವ|| 40 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕರಣಿಗಿ 8) ಅಂಜಪ್ಪ ತಂದೆ ನರಸಿಂಗಪ್ಪ ಬುಡಮಲ್ ವ|| 38 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕರಣಿಗಿ, 9) ವಿನಾಯಕರೆಡ್ಡಿ ತಂದೆ ಕೃಷ್ಣರೆಡ್ಡಿ ವ|| 60 ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಕರಣಿಗಿ 10) ರಾಜು ತಂದೆ ತಾಯಪ್ಪ ವ|| 36 ವರ್ಷ ಜಾ|| ವಡ್ಡರ ಉ|| ಒಕ್ಕಲುತನ ಸಾ|| ಕರಣಿಗಿ, 11) ಮಾಣಿಕಪ್ಪ ತಂದೆ ಜಾನಪ್ಪ ವ|| 55 ವರ್ಷ ಜಾ|| ಮಾದಿಗ ಉ|| ಒಕ್ಕಲುತನ ಸಾ|| ಕರಣಿಗಿ, 12) ತಾಯಪ್ಪ ತಂದೆ ಲಕ್ಷ್ಮಣ ಸುತಾರಿ ವ|| 25 ವರ್ಷ ಜಾ|| ಮಾದಿಗ ಉ|| ಒಕ್ಕಲುತನ ಸಾ|| ಕರಣಿಗಿ 13) ಜಯವಂತ ತಂದೆ ತಾಯಪ್ಪ ಪುರ್ರಾ ವ|| 28 ವರ್ಷ ಜಾ|| ಮಾದಿಗ ಉ|| ಒಕ್ಕಲುತನ ಸಾ|| ಕರಣಿಗಿ

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 106/2020 ಕಲಂ, 87 ಕೆ.ಪಿ ಆ್ಯಕ್ಟ್ : ಇಂದು ದಿನಾಂಕ 26/09/2020 ರಂದು 06.25 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರು ಠಾಣೆಗೆ ಬಂದು, ಜಪ್ತಿ ಪಂಚನಾಮೆ, ಮುದ್ದೇಮಾಲು ಮತ್ತು 12 ಜನರನ್ನು ಹಾಜರ ಪಡೆಸಿ ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ ಸಿಂಗನಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 12 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 45300=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು, 05.00 ಪಿಎಮ್ ದಿಂದ 06.00 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 06.25 ಪಿಎಂ ಕ್ಕೆ ಠಾಣೆಗೆ ಬಂದು ವರದಿ ತಯಾರಿಸಿ ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ: 106/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 87/2020 ಕಲಂ: 78(6) ಕೆ.ಪಿ.ಆಕ್ಟ್ : ಇಂದು ದಿನಾಂಕ.27/09/2020 ರಂದು ರಾತ್ರಿ 01-45 ಎಎಂಕ್ಕೆ ಮಾನ್ಯ ಸಿ.ಪಿ.ಐ ಸಾಹೇಬರು ಯಾದಗಿರಿ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ:26/09/2020 ರಂದು 8:30 ಪಿ.ಎಮ್. ಸುಮಾರಿಗೆ ಯಾದಗಿರಿ ನಗರದ ಡಬರ ಮೊಹಲ್ಲಾ ಏರಿಯಾದಲ್ಲಿ ಕೆಲವರು ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಅವರ ಮೇಲೆ ದಾಳಿ ಕೈಗೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ನಂತರ ಇಂದು ದಿನಾಂಕ:27/09/2020 ರಂದು ರಾತ್ರಿ 12:05 ಗಂಟೆಯ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ 1)ಸಾಬರೆಡ್ಡಿ ಸಿಪಿಸಿ-379 2)ಪ್ರಭುಗೌಡ ಸಿ.ಪಿ.ಸಿ-361, 3)ಮೋನಪ್ಪ ಸಿ.ಪಿ.ಸಿ-263, 4)ರಾಘವೇಂದ್ರರೆಡ್ಡಿ ಸಿ.ಪಿ.ಸಿ.-255, 5)ಅಮರೇಶ ಎ.ಹೆಚ್.ಸಿ.-47 ರವರೊಂದಿಗೆ ಹೊರಟು ಯಾದಗಿರಿ ನಗರದ ಡಬರ ಮೊಹಲ್ಲಾ ಏರಿಯಾದಲ್ಲಿ ಒಂದು ಮನೆಯಲ್ಲಿ ರಾತ್ರಿ 12:30 ಗಂಟೆಗೆ ದಾಳಿ ಕೈಗೊಂಡು 1) ಸೈಯ್ಯದ ಮಕ್ಸೂದ್ಅಲಿ ತಂದೆ ಕುದರತ ಅಲಿ ಸೈಯ್ಯದ್, ವಯ:35 ವರ್ಷ, ಜಾತಿ:ಮುಸ್ಲಿಂ, ಸಾ||ಡಬರಮೊಹಲ್ಲಾ, ಯಾದಗಿರಿ 2)ಅಯುಬಖಾನ್ ತಂದೆ ಮಂಜೂರ ಹುಸೇನ್ ಗುತ್ತೆದಾರ, ವಯ:39 ವರ್ಷ, ಜಾತಿ:ಮುಸ್ಲಿಂ, ಸಾ||ವಡಗೇರಾ ಇವರನ್ನು ವಶಕ್ಕೆ ಪಡೆದುಕೊಂಡು ಅವರಿಂದ 1)ನಗದು ಹಣ ರೂ.47000/-, 2)ಒಂದು ರೆಡ್ಮಿ ಮೊಬೈಲ್ ಅ.ಕಿ.ರೂ.1000/-, 3)ಒಂದು ಸಣ್ಣ ಲಾವಾ ಕಂಪನಿಯ ಮೊಬೈಲ್ ಅ.ಕಿ.ರೂ.200/- 4)ಒಂದು ಸಣ್ಣ ಲಾವಾ ಕಂಪನಿಯ ಮೊಬೈಲ್ ಅ.ಕಿ.ರೂ.200/- ಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಪಂಚನಾಮೆ ಕೈಗೊಂಡಿದ್ದು ಇರುತ್ತದೆ. ಮೇಲ್ಕಂಡ 2 ಜನ ಆರೋಪಿತರನ್ನು ಹಾಗು ಜಪ್ತಿಪಂಚನಾಮೆಯನ್ನು ಮುದ್ದೆಮಾಲಿನೊಂದಿಗೆ ಈ ಕೂಡ ತಮಗೆ ಒಪ್ಪಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪಡವಾನಿಗೆ ಪಡೆದುಕೊಂಡಿದ್ದು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ್ದರಿಂದ ಠಾಣೆ ಗುನ್ನೆ ನಂ.87/2020 ಕಲಂ.78(6) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!