ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/09/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 86/2020 ಕಲಂ: 323.341.504.506 ಐಪಿಸಿ : ಇಂದು ದಿನಾಂಕ 24/09/2020 ರಂದು 5.45 ಪಿ.ಎಮ್ ಕ್ಕೆ ಪಿರ್ಯಾಧಿ ಶ್ರೀ ಡಾ|| ರವೀಂದ್ರ ತಂದೆ ಬಸವರಾಜ ಜಾಂಡೆದ ಸಾ; ಗಣೇಶ ನಗರ ಗಂಜ ಏರಿಯಾ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದೆರೆ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ರವರು ಯಾದಗಿರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಮ್ಮ ಮನೆಗೆ ಬಾಡಿಗೆಗೆ ಜನೇವರಿ-2020 ರಂದು ಪಡೆದುಕೊಂಡಿದ್ದು ಪ್ರತಿ ತಿಂಗಳು ಬಾಡಿಗೆ ಹಣ ಅಂತಾ ಲೊಕೋಪಯೋಗಿ ಇಲಾಖೆ ಯಾದಗಿರಿ ರವರು ಬಾಡಿಗೆ 22,159/-ರೂ. ದಂತೆ ಪ್ರತಿ ತಿಂಗಳು ದೃಡೀಕರಿಸಿ ಆರ್.ಸಿ.ಹೆಚ್.ಓ ಯಾದಗಿರಿ ರವರಿಗೆ ಪ್ರಮಾಣ ಪತ್ರ ನೀಡಿದ್ದು ಇರುತ್ತದೆ. ಅದರಂತೆ ಅಂದಿನ ಆರ್.ಸಿ.ಹೆಚ್.ಓ ಅಧಿಕಾರಿರವರು ಜನೇವರಿ-2020 ತಿಂಗಳ ಬಾಡಿಗೆ ಹಣ 22,159/-ರೂ. ನನಗೆ ಬ್ಯಾಂಕ ಖಾತೆ ಮೂಲಕ ಪಾವತಿ ಮಾಡಿರುತ್ತಾರೆ. ದಿನಾಂಕ; 23/09/2020 ರಂದು ಬೆಳೆಗ್ಗೆ 10-30 ಗಂಟೆ ಸುಮಾರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳ ಕಾಯರ್ಾಲಯಕ್ಕೆ ಭೇಟಿ ನೀಡಿ ಫೆಬ್ರವರಿ-2020 ತಿಂಗಳಿನಿಂದ ಅಗಸ್ಟ-2020 ತಿಂಗಳವರೆಗೆ ಬಾಡಿಗೆ ಹಣ ಮಂಜೂರು ಮಾಡುವಂತೆ ಕೇಳಿ ಕೊಂಡಾಗ ಡಿ.ಹೆಚ್.ಓ ರವರು ಡಾ|| ಸೂರ್ಯ ಪ್ರಕಾಶ ಕಂದಕೂರ ರವರಿಗೆ ಭೇಟಿ ಮಾಡುವಂತೆ ತಿಳಿಸಿದರು. ಆಗ ನಾನು ಮತ್ತು ನನ್ನ ಸಂಗಡ ಇದ್ದ ನಮ್ಮೂರಿನ ಮಲ್ಲಿಕಾಜರ್ುನ ಕೂಡಿಕೊಂಡು ಮಧ್ಯಾಹ್ನ 12.50 ಪಿ.ಎಮ್ ಸುಮಾರಿಗೆ ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿರುವ ಡಾ|| ಸೂರ್ಯ ಪ್ರಕಾಶ ಜಿಲ್ಲಾ ಮಲೇರಿಯಾ ಅಧಿಕಾರಿಗಳು ರವರ ಹತ್ತಿರ ಹೋಗಿ ಬಾಡಿಗೆ ಹಣದ ವಿಷಯದ ಬಗ್ಗೆ ಪ್ರಸ್ತಾಪಿಸಲು ಅವರು ನನಗೆ ನಿನ್ನ ಮನೆಯಲ್ಲಿ ಯಾರು ನಗರ ಆರೋಗ್ಯ ಕೇಂದ್ರವನ್ನು ನಡೆಸಲು ಕಟ್ಟಡ ಬಾಡಿಗೆಗೆ ಮಂಜೂರು ಮಾಡಿರುತ್ತಾರೆ ಅವರ ಹತ್ತಿರ ಬಾಡಿಗೆ ಹಣ ಕೇಳು ನನಗೆ ಏನು ಕೇಳುತ್ತೀಯಾ ಅಂತಾ ಅಂದರು. ನಾನು ಡಿ.ಹೆಚ್.ಓ ರವರಿಗೆ ಭೇಟಿಯಾಗಿ ಬಾಡಿಗೆ ಹಣದ ಬಗ್ಗೆ ವಿಚಾರಿಸಿದ್ದು ಆಗ ಅವರು ನಿಮಗೆ ಭೇಟಿಯಾಗಲು ತಿಳಿಸಿದ್ದರಿಂದ ನಿಮ್ಮ ಹತ್ತಿರ ಬಂದಿರುತ್ತೇನೆ ಅಂತಾ ಅಂದಾಗ ಡಾ|| ಸೂರ್ಯಪ್ರಕಾಶ ರವರು ಯಾವ ಬಾಡಿಗೆ ಹಣ ಈ ವಿಷಯ ನನಗೆ ಗೊತ್ತಿಲ್ಲ ಅಂತಾ ಅಂದಾಗ ನಾನು ನಮ್ಮ ಮನೆಯಲ್ಲಿ ನಗರ ಪ್ರಾಥಾಮಿಕ ಆರೋಗ್ಯ ಕೇಂದ್ರ ಇದ್ದು ಪ್ರತಿ ತಿಂಗಳು 22,159/-ರೂ. ದಂತೆ ಸರಕಾರ ಬಾಡಿಗೆ ಹಣ ನಿಗದಿಪಡಿಸಿದ್ದು ಜನೇವರಿ-2020 ಒಂದು ತಿಂಗಳ ಬಾಡಿಗೆ ಹಣ ಮಂಜೂರು ಮಾಡಿದ್ದು ಇನ್ನೂಳಿದ 7 ತಿಂಗಳ ಬಾಡಿಗೆ ಹಣ ನೀಡಿರುವುದು ಇಲ್ಲ ಅದಕ್ಕೆ ನಾನು ಬಾಡಿಗೆ ಹಣ ನೀಡುವಂತೆ ತಮಗೆ ಕೇಳುತ್ತಿದ್ದೆನೆ ಅಂತಾ ತಿಳಿಸಿದಾಗ ಯಾವುದೇ ಬಾಡಿಗೆ ಹಣ ಮಂಜೂರು ಮಾಡುವುದಿಲ್ಲ ಯಾರ ಹತ್ತಿರ ಹೋಗುತ್ತೀಯಾ ಹೋಗು ನನಗೇನು ಗೊತ್ತಿಲ್ಲ ಅಂತಾ ಅಂದಾಗ ನಾನು ಸರ್. ಯಾಕೆ ಹೀಗೆ ಹೇಳುತ್ತೀರಾ, ಹಿಗೇ ಹೇಳುವುದು ಸರಿಯಲ್ಲ ಅಂತಾ ಅಂದಿದ್ದಕ್ಕೆ ಲೇ ಸೂಳೇ ಮಗನೇ ಒಂದು ಸಲಾ ಹೇಳಿದರೇ ನಿನಗೆ ಅರ್ಥವಾಗಲ್ವಾ ಅಂತಾ ಅಂದಾಗ ನಾನು ಯಾಕೆ ಬೈಯುತ್ತೀರಾ ಅಂತಾ ಅಂದಿದ್ದಕ್ಕೆ ನಿನಗೆ ಸೊಕ್ಕು ಬಹಳ ಮಗನೇ ಅಂತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ, ಕೈಯಿಂದ ನನ್ನ ಕಪಾಳಕ್ಕೆ ಹೊಡೆದು ಇಲ್ಲಿಂದ ಹೊರಗೆ ಹೋಗದಿದ್ದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದಾಗ ಆಗ ನನ್ನ ಸಂಗಡ ಇದ್ದ ಮಲ್ಲಿಕಾಜರ್ುನ ಹಾಗೂ ಅಲ್ಲೇ ಇದ್ದ ನನಗೆ ಮುಖ ಪರಿಚಯವಿರುವ ಇನ್ನೊಬ್ಬನು ಜಗಳ ಬಿಡಿಸಿದ್ದು ಇರುತ್ತದೆ. ನಂತರ ನಾನು ಅಲ್ಲಿಂದ ಮನೆಗೆ ಬಂದು ಈ ವಿಷಯ ಮನೆಯಲ್ಲಿ ಚಚರ್ಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿದ್ದು ನನಗೆ ಜಗಳದಲ್ಲಿ ಗಾಯಗಳು ಆಗದೇ ಇದ್ದುದರಿಂದ ನಾನು ಆಸ್ಪತ್ರೆಗೆ ತೋರಿಸಿರುವುದಿಲ್ಲ ಮತ್ತು ನನಗೆ ಜಗಳ ಬಿಡಿಸಿದ ಇನ್ನೊಬ್ಬ ವ್ಯಕ್ತಿಯ ಹೆಸರು ನಂತರ ತಮಗೆ ತಿಳಿಸುತ್ತೇನೆ. ಸದರಿ ಡಾ|| ಸೂರ್ಯ ಪ್ರಕಾಶ ಕಂದಕೂರ ರವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 86/2020 ಕಲಂ 323.341.504.506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 134/2020 ಕಲಂ 32, 34 ಕೆ.ಇ ಎಕ್ಟ : ಇಂದು ದಿನಾಂಕ 24-09-2020 ರಂದು 3 ಪಿ.ಎಂ ಕ್ಕೆ ಆರೋಪಿತರು ಮಲ್ಹಾರ ಗ್ರಾಮದ ಹೋಟೇಲದಲ್ಲಿ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ ಅಂತಾ ಫಿರ್ಯಾಧಿದಾರರು ಖಚಿತ ಮಾಹಗಿತಿಯನ್ನು ಪಡೆದುಕೊಂಡು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತರಿಂದ ಒಟ್ಟು 5,621.14/ ರೂಪಾಯಿ ಕಿಮ್ಮತ್ತಿನ ಮೂರು ನಮೂನೆಯ ಮಧ್ಯವನ್ನು ಜಪ್ತಿಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಯಾದಗಿರ ಮಹಿಳಾ ಪೊಲೀಸ ಠಾಣೆ ಗುನ್ನೆ ನಂ:- 26/2020 ಕಲಂ: 504,506,354 ಐ.ಪಿ.ಸಿ : ಇಂದು ದಿನಾಂಕ: 24.09.2020 ರಂದು ಮದ್ಯಾಹ್ನ 2.15 ಗಂಟೆಗೆ ಪಿರ್ಯಾಧಿ ಡಾ| ಮಹಾಂತೇಶ್ವರಿ ಗಂಡ ಡಾ|| ರವಿಂದ್ರಕುಮಾರ ಜಾಂಡೇದ ವಯಾ-33 ಉ-ವೈದ್ಯರು ಜಾತಿ-ಲಿಂಗಾಯತ್ ಸಾ-ಗಂಜ ಏರಿಯಾ ಗಣೇಶ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಸಾರಂಶವೇನೆಂದರೆ ಪಿರ್ಯಾಧಿ ಶ್ರೀಮತಿ ಡಾ|| ಮಹಾಂತೇಶ್ವರಿ ಗಂಡ ಡಾ|| ರವಿಂದ್ರಕುಮಾರ ಜಾಂಡೇದ ರವರು ಡಿ.ಹೆಚ್.ಓ ಆಫೀಸ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು ದಿನಾಂಕ: 21.09.2020 ರಂದು ಬೆಳಿಗ್ಗೆ 11 ಗಂಟೆಗೆ ನಾನು ಮತ್ತು ಡಾ|| ಕೀತರ್ಿ ಇಬ್ಬರು ಕೂಡಿ ಡಿ.ಹೆಚ್.ಓ ಚೆಂಬರಗೆ ಹೋಗಿ ಆರ್.ಬಿ.ಎಸ್.ಕೆ ತಂಡ-1 ಹಾಗೂ ತಂಡ -2 ಕ್ಕೆ ಒದಗಿಸಿರುವ ಲ್ಯಾಫಟಾಫ್ಗಳು ರಿಪೇರಿ ಮಾಡಿದ ಹಣವನ್ನು ಇಲ್ಲಿಯವರಗೆ ಪಾವತಿಸಿರುವುದಿಲ್ಲ ಎಂದು ಡಿ.ಹೆಚ್.ಓ ರವರ ಗಮನಕ್ಕೆ ತಂದಿದ್ದು, ಆಗ ಅವರು ಶ್ರೀ ಡಾ|| ಲಕ್ಷ್ಮಿಕಾಂತ ಆರ್.ಸಿ.ಹೆಚ್.ಓ ಹಾಗೂ ಡಾ|| ಶ್ರೀ ಸೂರ್ಯಪ್ರಕಾಶ ಡಿ,ಎಂ.ಓ ಮತ್ತು ಡಿ.ಪಿ.ಎಂ ಮಹೇಂದ್ರ ರವರನ್ನು ಕರೆಯಿಸಿ ಕೂಡಲೇ ಲ್ಯಾಫಟಾಫ್ಗಳ ರಿಪೇರಿ ಮಾಡಿರುವ ಬಿಲ್ಲನ್ನು ಒದಗಿಸುವಂತೆ ಸೂಚಿಸಿದರು ಕೂಡ ಶ್ರೀ ಸೂರ್ಯಪ್ರಕಾಶ ಇವರು ಪಿರ್ಯಾಧಿಗೆ ನೀನು ಒಬ್ಬಳೆ ನನ್ನ ಆಫೀಸ್ ಗೆ ಬರಬೇಕು ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ 11.45 ಎ.ಎಂಕ್ಕೆ ನನ್ನನ್ನು ತನ್ನ ಚೆಂಬರನಲ್ಲಿ ಕೈಹಿಡಿದು ಎಳೆದಾಡಿ ನನ್ನ ಸಂಗಡ ಅಸಭ್ಯವಾಗಿ ವರ್ತನೆ ಮಾಡಿ ಮೈ ಕೈ ಮುಟ್ಟಿ ಅಪಮಾನ ಮಾಡಿರುತ್ತಾನೆ.ಎಂಬ ಇತ್ಯಾದಿ ದೂರಿನ ಮೇಲಿಂದ ಯಾದಗಿರಿ ಮಹಿಳಾ ಠಾಣೆಯಲ್ಲಿ ಗುನ್ನೆ ನಂ: 26/2020 ಕಲಂ: 504,506,354 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 147/2020 ಕಲಂ: 20 (ಎ) (ಬಿ) ಎನ್ಡಿಪಿಎಸ್ ಆಕ್ಟ : ಇಂದು ದಿನಾಂಕ: 24/09/2020 ರಂದು 10-00 ಎ.ಎಮ್.ಕ್ಕೆ ಪಿರ್ಯಾದಿದಾರರು ಕೆಂಭಾವಿ ಪೊಲೀಸ್ ಠಾಣೆಯಲ್ಲಿದ್ದಾಗ ನನಗೆ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಅಗ್ನಿ ಸಿಮಾಂತರದ ಸವರ್ೆ ನಂ: 176 ರಲ್ಲಿ ಶಂಕರಸಿಂಗ್ ತಂದೆ ಬಾಬುಸಿಂಗ್ ಹಜೆರೆ ಸಾ|| ಮುದನೂರ[ಬಿ] ಎಂಬುವನು ತನ್ನ ಹೊಲದಲ್ಲಿ ಅನಧಿಕೃತವಾಗಿ ಗಾಂಜಾ ಬೆಳೆದಿರುತ್ತಾನೆ ಅಂತಾ ಮಾಹಿತಿ ಬಂದ ಮೇರೆಗೆ ಅನಧಿಕೃತವಾಗಿ ಗಾಂಜಾ ಬೆಳೆದ ಸ್ಥಳದ ಮೇಲೆ ದಾಳಿ ಮಾಡುವ ಕುರಿತು ನಾನು ಹಾಗು ಮಾನ್ಯ ಎಸ್ ಪಿ ಸಾಹೇಬರು ಯಾದಗಿರಿ ರವರ ಆದೇಶದ ಮೇರೆಗೆ ಬಂದಂತಹ ವಿಶೇಷ ಘಟಕ ದಳ ಯಾದಗಿರಿಯ ಅಧಿಕಾರಿಯವರಾದ ಶ್ರೀ ಸುನೀಲ ಮೂಲಿಮನಿ ಪಿಐ ಸಿಇಎನ್ ವಿಶೇಷ ಘಟಕ ಯಾದಗಿರಿ ರವರು ಹಾಗು ಅವರ ಸಿಬ್ಬಂದಿಯವರಾದ ಶ್ರೀಮಂತ ಸಿಂಗೆ ಹೆಚ್ ಸಿ 141 ಡಿಸಿಬಿ, ಸೈದಪ್ಪ ಹೆಚ್ ಸಿ 34 ಸಿಪಿಐ ಕಛೇರಿ ಯಾದಗಿರಿ ಹಾಗು ನಮ್ಮ ಸಿಬ್ಬಂದಿಯವರಾದ ಬಲರಾಮ ಎ ಎಸ್ ಐ, ಶಂಕರಗೌಡ ಹೆಚ್ ಸಿ 33, ಶಿವಲಿಂಗಪ್ಪ ಹೆಚ್ ಸಿ 185, ಚೆಂದಪ್ಪ ಪಿಸಿ 316, ಬೀರಪ್ಪ ಪಿಸಿ 195, ಸಂಗಮೇಶ ಪಿಸಿ 244 ಎಲ್ಲರೂ ಕೂಡಿಕೊಂಡು ಹಾಗು ಇಬ್ಬರು ಪಂಚರಾದ 1) ಗುರು ತಂದೆ ಸಂಗಪ್ಪ ಅಪ್ಪಾಗೋಳ ವ|| 52 ಜಾ|| ನೇಕಾರ ಉ|| ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ಮುದನೂರ[ಬಿ] ಹಾಗೂ 2) ಅಬ್ದುಲ್ ಖೈಯುಮ್ ತಂದೆ ಮುತರ್ುಜಾ ವ|| 55 ಜಾ|| ಮುಸ್ಲೀಂ ಉ|| ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆೆ ಮುದನೂರ ಇವರನ್ನು ಠಾಣೆಯ ಎಸ್.ಬಿ ಕರ್ತವ್ಯ ಪಿಸಿ-195 ಬೀರಪ್ಪ ರವರ ಮುಖಾಂತರ ಠಾಣೆಗೆ ಕರೆಯಿಸಿ ಅವರಿಗೆ ವಿಷಯ ತಿಳಿಸಿದೆನು. ಹಾಗು ಪತ್ರಾಂಕಿತ ಅಧಿಕಾರಿಗಳಾದ ಶ್ರೀ ವಿನಯ ಪಾಟೀಲ ಮಾನ್ಯ ತಹಸೀಲ್ದಾರರು ಹುಣಸಗಿ ರವರಿಗೂ ಸಹ ಠಾಣೆಗೆ ಕರೆಯಿಸಿ ಭಾತ್ಮಿ ವಿಷಯ ತಿಳಿಸಿದೆನು. ನಂತರ ಸವರ್ೆ ನಂ: 176 ರಲ್ಲಿನ ಶಂಕರಸಿಂಗ ತಂದೆ ಬಾಬುಸಿಂಗ ಹಜೇರೆ ಈತನ ಹೊಲವನ್ನು ಗುರುತಿಸುವ ಕುರಿತು ಅಗ್ನಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಶ್ರೀಮತಿ ಶೀಲಾ ಗಂಡ ಹಣಮಂತ ಹೂಗಾರ ಇವರಿಗೆ ತಿಳಿಸಿದೆನು. ಗಾಂಜಾ ತೂಕ ಮಾಡುವ ಕುರಿತು ತೂಕ ಮಾಡುವ ಸಾಧನದೊಂದಿಗೆ ವ್ಯಾಪಾರಿಯಾದ ಮಕ್ತುಮ ತಂದೆ ಮಾಸುಮಸಾಬ ವಡಿಕೇರಿ ಸಾ: ಕೆಂಭಾವಿ ಇವರಿಗೆ ಕರೆಸಿದೆನು. ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪುರ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಪಂಚರು, ತೂಕ ಮಾಡುವರು ಇವರೆಲ್ಲರೊಂದಿಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಬಲರಾಮ ಎ ಎಸ್ ಐ, ಶಂಕರಗೌಡ ಹೆಚ್ ಸಿ 33, ಶಿವಲಿಂಗಪ್ಪ ಹೆಚ್ ಸಿ 185, ಚೆಂದಪ್ಪ ಪಿಸಿ 316, ಬೀರಪ್ಪ ಪಿಸಿ 195, ಸಂಗಮೇಶ ಪಿಸಿ 244 ನಮ್ಮ ವಾಹನ ಚಾಲಕನಾದ ಪೆದ್ದಪ್ಪಗೌಡ ಪಿಸಿ 214 ಇವರೊಂದಿಗೆ ನಮ್ಮ ಠಾಣೆಯ ಸರಕಾರಿ ಜೀಪ್ ನಂ:ಕೆಎ-33, ಜಿ-0074 ನೇದ್ದರಲ್ಲಿ ನಮ್ಮ ಸಿಬ್ಬಂದಿ ಜನರು, ಹಾಗೂ ಮಾನ್ಯ ತಹಸೀಲ್ದಾರರು ಹುಣಸಗಿ ಇವರ ಇನ್ನೊಂದು ಸಕರ್ಾರಿ ಜೀಪ ನಂಬರ ಕೆ.ಎ 33 ಜಿ 62 ನೇದ್ದರಲ್ಲಿ ಪಂಚರು, ತೂಕ ಮಾಡುವವರು ಇವರೊಂದಿಗೆ ಠಾಣೆಯಿಂದ 11.30 ಎ.ಎಮ್ ಕ್ಕೆ ಹೊರಟು ಗ್ರಾಮ ಲೆಕ್ಕಾಧಿಕಾರಿಗಳ ಸಹಾಯದಿಂದ ಮಾಹಿತಿ ಸ್ಥಳವಾದ ಅಗ್ನಿ ಸಿಮಾಂತರದಲ್ಲಿನ ಹಳ್ಳದ ಹತ್ತಿರ ವಾಹನಗಳನ್ನು ನಿಲ್ಲಿಸಿ ಸುಮಾರು 1 ಕೀಲೊ ಮೀಟರ ಪಶ್ಚಿಮಕ್ಕೆ ನಡೆದುಕೊಂಡು 12.30 ಪಿ.ಎಮ್ಕ್ಕೆ ಸವರ್ೆ ನಂ: 176 ನೇದ್ದರ ಹೊಲಕ್ಕೆ ನಡೆದುಕೊಂಡು ಹೋಗುತ್ತಿದ್ದಂತೆ ಹೊಲದಲ್ಲಿದ್ದ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾನೆ. ನಾವು ಹೊಲದ ಒಳಗಡೆ ತಿರುಗಾಡಿ ಪರಿಶೀಲಿಸಿ ನೋಡಲಾಗಿ, ಹತ್ತಿ ಬೆಳೆದ ಹೊಲದ ಉತ್ತರಕ್ಕೆ ಹಾಗೂ ದಕ್ಷಿಣಕ್ಕೆ ಅಲ್ಲಲ್ಲಿ ಹತ್ತಿಬೆಳೆಯಲ್ಲಿ ಗಾಂಜಾ ಗಿಡ ಬೆಳೆದಿರುವುದು ಕಂಡು ಬಂದಿರುತ್ತದೆ. ಓಡಿ ಹೋದ ವ್ಯಕ್ತಿಯ ಹೆಸರು ಶಂಕರಸಿಂಗ ತಂದೆ ಬಾಬುಸಿಂಗ ಹಜೇರೆ ಸಾ: ಮುದನೂರ (ಬಿ) ತಾ: ಹುಣಸಗಿ ಅಂತಾ ತಿಳಿದು ಬಂದಿದ್ದು ಸದರಿಯವನು ಅನಧಿಕೃತವಾಗಿ ತನ್ನ ಹೊಲದಲ್ಲಿ ಗಾಂಜಾ ಬೆಳೆದ ಬಗ್ಗೆ ಗೊತ್ತಾಗಿರುತ್ತದೆ. ಸದರಿ ಗಾಂಜಾಗಿಡಗಳನ್ನು ಪರಿಶೀಲಿಸಿ ನೋಡಲಾಗಿ ಹತ್ತಿ ಬೆಳೆಯಲ್ಲಿ ಗೊತ್ತಾಗದ ಹಾಗೆ ಗಾಂಜಾಗಿಡಗಳು ಬೆಳೆದಿದ್ದು, ಗಾಂಜಾಗಿಡಗಳಿಗೆ ಹೂವು, ಕಾಯಿ ಆಗಿದ್ದು, ಸುಮಾರು 4 ತಿಂಗಳ ಹಸಿ ಗಿಡಗಳಿರುತ್ತವೆ. ಸದರಿ ಗಿಡಗಳನ್ನು ಜಪ್ತಿಪಡಿಸಿಕೊಳ್ಳುವ ಕುರಿತು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಕಿತ್ತಿದ್ದು, ನೋಡಲಾಗಿ ಬೇರು ಮತ್ತು ಮಣ್ಣು ಸಮೇತ ಬಂದಿದ್ದು, 20 ಗಿಡಗಳು ದೊಡ್ಡ ಗಾತ್ರದ ಗಿಡಗಳಿದ್ದು ಅಳತೆ ಮಾಡಿ ನೋಡಲಾಗಿ 3 1/2 ಫೀಟ್ ಉದ್ದದ ಗಿಡಗಳಿದ್ದು, ಹೂ ಕಾಯಿ ಆಗಿದ್ದು ಉಳಿದ, 70 ಗಿಡಗಳು 2 ಫೀಟ್ ಉದ್ದದ ಗಿಡಗಳಿದ್ದು ಯಾವುದೇ ಹೂ ಕಾಯಿಗಳು ಆಗಿರುವದಿಲ್ಲ. ದೊಡ್ಡ ಗಾತ್ರದ 20 ಗಿಡಗಳಲ್ಲಿ 5 ಗಿಡಗಳ ಒಂದು ಪೆಂಡಿಯಾಗಿ ಒಟ್ಟು 4 ಪೆಂಡಿಗಳನ್ನು ಮಾಡಿದ್ದು ಹಾಗೂ ಸಣ್ಣ 70 ಗಿಡಗಳನ್ನು ಒಂದು ಪೆಂಡಿಯಾಗಿ ಬೇರ್ಪಡಿಸಿ ಎಲ್ಲಾ ಗಿಡಗಳನ್ನು ಪಂಚರ ಸಮಕ್ಷಮ ತೂಕ ಮಾಡಿ ನೋಡಲು ಒಟ್ಟು 22 ಕೆಜಿ 400 ಗ್ರಾಂ. ತೂಕ ಉಳ್ಳದ್ದಾಗಿದ್ದು, ಅಂದಾಜು ಬೆಲೆ, 67400/- ರೂ.ಗಳು ಆಗುತ್ತದೆ. ಸದರಿ 5 ಪೆಂಡಿಗಳ ಗಿಡದಿಂದ ಶಾಂಪಲ್ ಕುರಿತು ಸುಮಾರು 100 ಗ್ರಾಂ. ಹಸಿ ಗಾಂಜಾದ ಎಲೆ, ಹೂಗಳನ್ನು ಪರೀಕ್ಷೆ ಕುರಿತು ತೆಗೆದಿರಿಸಿ ಅದನ್ನು ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಅದರ ಮೇಲೆ ನನ್ನ ಮತ್ತು ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ, ಅರಗಿನಿಂದ ಕೆ ಅಂತಾ ಸೀಲ್ ಹಾಕಿದ್ದು ಅದೆ. ಗಾಂಜಾ ಗಿಡಗಳ ಜಪ್ತಿ ಪಂಚನಾಮೆಯನ್ನು 01.30 ಪಿ.ಎಮ್.ದಿಂದ 3.30 ಪಿ.ಎಮ್. ವರೆಗೆ ಕೈಕೊಂಡಿದ್ದು ಪಂಚನಾಮೆ ಕಾಲಕ್ಕೆ ವಿಶ್ವನಾಥ ಬಂಡೊಳಿ ಸಾ|| ಕೆಂಭಾವಿ ಇವರು ಫೋಟೊ ತೆಗೆದು ವಿಡಿಯೋ ಮಾಡಿರುತ್ತಾರೆ. ಸದರಿ ಮುದ್ದೇಮಾಲು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಮರಳಿ ಠಾಣೆಗೆ 4-00 ಪಿ.ಎಮ್.ಕ್ಕೆ ಬಂದು ಅಕ್ರಮ ಗಾಂಜಾ ಬೆಳೆದ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಿದ ವರಧಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂಬರ 147/2020 ಕಲಂ. 20(ಎ)(ಬಿ) ಎನ್.ಡಿ.ಪಿ.ಎಸ್ ಆಕ್ಟ್ 1985 ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 105/2020 279, 338 ಐಪಿಸಿ : ಇಂದು ದಿನಾಂಕ: 24/09/2020 ರಂದು 07.30 ಪಿಎಂ ಪಿಯರ್ಾದಿ ರಾಜು ತಂದೆ ಗೋವರ್ದನ ರಾಠೋಡ ವಯ|| 45 ಉ|| ಒಕ್ಕಲುತನ ಕೆಲಸ ಸಾ|| ಚಾಮನಾಳ ತಾಂಡಾ ತಾ|| ಶಹಾಪೂರ ಜಿ|| ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ದಸ್ತುರ ಮೂಲಕ ಬರೆಯಿಸಿದ ದೂರು ಅಜರ್ಿ ಹಾಜರ ಪಡೆಸಿದ್ದು, ಸದರಿ ಅಜರ್ಿ ಸಾರಂಶವೇನಂದರೆ, ದಿನಾಂಕ:19/09/2020 ರಂದು 7-30 ಪಿ.ಎಮ್ ಸಾಯಂಕಾಲ ಚಾಮನಾಳ ತಾಂಡಾದಿಂದ ಹಾರಣಗೇರಾ ಟಿ.ವಿ ನೆಟವರ್ಕ ( ಛತ್ರಿ) ಅಳವಡಿಕೆ ಕೇಲಸದ ಸಲುವಾಗಿ ಹಾರಣಗೇರಾಗೆ ಹೂಗುವ ರಸ್ತೆಯ ಧರ್ಶನಾಪೂರ ಕ್ರಾಸ್ ಹತ್ತಿರ ತನ್ನ ಗೆಳೆಯನಾದ ರಾಜಶೇಖರ ತಂದೆ ತಿಪ್ಪಣ್ಣ ಚಂದಾಪೂರ ನನ್ನ ತಮ್ಮನಾದ ನರಸಿಂಗ್ ತಂದೆ ಗೋವರ್ಧನ ರಾಠೋಡ ವಯ|| 34 ಉ|| ಟಿ.ಚಿ ಛತ್ರಿ ಅಳವಡಿಕೆ ಕೆಲಸ ಮತ್ತು ರಿಪೇರಿ ಸಾ|| ಚಾಮನಾಳ ತಾಂಡಾ ತಾಂಡಾದಿಂದ ಸ್ಪ್ಲೇಂಡರ ಪ್ಲಸ್ ಮೋಟರ ಸೈಕಲ ನಂ: ಕೆ.ಎ-33 ಡಬ್ಲ್ಯೂ-8189 ನೇದ್ದರ ಮೇಲೆ ಹೂಗುವಾಗ ರಾಜಶೇಖರ ಈತನು ಮೋಟರ ಸೈಕಲನ್ನು ಚಲಾಯಿಸುತ್ತಿರುವುದು ಮತ್ತು ನನ್ನ ತಮ್ಮನು ಬೈಕನ ಇಂಬದಿ ಸಾರಾನಿ ಹೋಗುತ್ತಿರುವಾಗ ರಾಜಶೇಖರ ಈತನು ಬೈಕನ್ನು ಅತೀವೇಗವಾಗಿ ಅಲಕ್ಷತನದಿಂದ ಚಲಾಯಿಸಿ ದರ್ಶನಾಪೂರ ಕ್ರಾಸ್ ಹತ್ತಿರ ಬೈಕನ್ನು ಸ್ಕಿಡ್ ಮಾಡಿ ನಿಯಂತ್ರಣ ತಪ್ಪಿ ಕೇಳಗೆ ಬಿಳಿಸಿರುತ್ತಾನೆ ಬೈಕ ಬಿದ್ದ ರಬ್ಬಸಕ್ಕೆ ತೆಲೆಹಣೆಗೆ ಬಲವಾದ ಪೇಟ್ಟಾಗಿರುತ್ತದೆ. ಎಂದು ದಾರಿಗೆ ಹೂಗುವವರು ನನಗೆ ದೂರವಾಣಿ ಮುಖಾಂತರ ತಿಳಿಸಿದ್ದಾರೆ. ಕಾರಣ ಆ ಸಮಯಕ್ಕೆ ದರ್ಶನಾಪೂರ ಕ್ರಾಸಿಗೆ ನಾನು ಮತ್ತು ಮಾನಪ್ಪ ತಂದೆ ವಾಲಪ್ಪ ಸಾ|| ರಬ್ಬನಳ್ಳಿ ತಾಂಡಾ ಮತ್ತು ಗೋವಿಂದ ತಂದೆ ಸಾಜುನಾಯ್ಕ ಸಾ|| ಚಾಮನಾಳ ತಾಂಡಾ ಬಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ರಾಜಶೇಖರ ಬೈಕ್ ಚಲಾಯಿಸಿದ ಬಗ್ಗೆ ತಿಳಿದಿರುತ್ತದೆ. ಹಾಗೂ ನನ್ನ ತಮ್ಮನಿಗೆ ಬಲವಾದ ತೆಲೆ ಹಣೆಯಬಾಗಕ್ಕೆ ಬಲವಾದ ಪೇಟ್ಟು ಬಿದ್ದಿರುವ ಕಾರಣ ಪ್ರಜ್ಞೆ ತಪ್ಪಿ ಬಿದ್ದಿರುತ್ತಾನೆ. ಕಾರಣ ನಾನು ಮತ್ತು ಗೋವಿಂದ ತಂದೆ ಸಾಜುನಾಯ್ಕ ಇಬ್ಬರು ಸೇರಿ ಗುಲಬಗರ್ಾದ ಯುನೈಟೆಡ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುತ್ತಾನೆ. ಅಪಘಾತ ಸಂಭವಿಸಿದ್ದರಿಂದ ಕಾನೂನು ಪ್ರಕ್ರೀಯೆ ಬಗ್ಗೆ ತಿಳುವಳಿಕೆ ಇರದ ಕಾರಣ ಇಂದು ದಿನಾಂಕ:24/09/2020 ರಂದು ದೂರನ್ನು ಸಲ್ಲಿಸಿರುತ್ತೆನೆ ಕಾರಣ ಅಪಘಾತ ಪಡಿಸಿದ ಬೈಕ್ ಚಾಲಕ ರಾಜಶೇಕರ ಇವನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ವಿನಂತಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 105/2020 ಕಲಂ, 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 245/2020.ಕಲಂಃ 78(3) ಕೆ.ಪಿ.ಆ್ಯಕ್ಟ : ಇಂದು ದಿನಾಂಕ 24/09/2020 ರಂದು 21-20 ಗಂಟೆಗೆ ಸ|| ತ|| ಪಿಯರ್ಾದಿ ಚೆನ್ನಯ್ಯ ಹೀರೆಮಠ ಪಿ.ಐ. ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ 24/09/2020 ರಂದು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ 18-40 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಸತೀಶ ಹೆಚ್.ಸಿ.165. ಗೋಕುಲ್ ಹುಸೇನ್ ಪಿ.ಸಿ. 172. ಬಾಗಣ್ಣ ಪಿ.ಸಿ.194. ಜೀಪಚಾಲಕ ನಾಗರೆಡ್ಡಿ ಎ.ಪಿ.ಸಿ.161. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಬಾಗಣ್ಣ ಪಿ.ಸಿ 194. ರವರಿಗೆ 18-45 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ 2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 18-50 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.ಮಾನ್ಯ ಡಿವೈ.ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಎಲ್ಲರು ಠಾಣೆಯ ಜೀಪ ನಂ ಕೆಎ-33ಜಿ-0138 ನೇದ್ದರಲ್ಲಿ ಕುಳಿತುಕೊಂಡು ದಾಳಿ ಕುರಿತು ಠಾಣೆಯಿಂದ 18-55 ಗಂಟೆಗೆ ಹೊರಟೇವು. ಸದರಿ ಜೀಪನ್ನು ನಾಗರೆಡ್ಡಿ ಎ.ಪಿ.ಸಿ.161. ರವರು ಚಲಾಯಿಸುತ್ತ ನೇರವಾಗಿ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಸ್ಪಲ್ಪ ದೂರದಲ್ಲಿ 19-25 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಜೀಪಿನಿಂದ ನಾವು ಎಲ್ಲರು ಇಳಿದು ಅಲ್ಲಿಂದ ಹನುಮಾನ ಗುಡಿಯ ಹತ್ತಿರ ನಡೆದುಕೊಂಡು ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 19-30 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ರಾಜು @ ಚೋಟಾರಾಮು ತಂದೆ ಹಣಮಂತ ನಾನೇರ ವ|| 25 ಜಾ|| ಬೇಡರ ಉ|| ಮಟಕಾಬರೆದುಕೊಳ್ಳುವದು ಸಾ|| ಬಸಣ್ಣ ದೇವರ ಗುಡಿಯ ಹತ್ತಿರ ಹೀರೆಹಗಿಸಿ ಯಾದಗಿರಿ ಅಂತ ಹೇಳಿದನು. ಈತನ ಹತ್ತಿರ ನಗದು ಹಣ 650-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಹಾಗೂ 2 ಮಟಕಾ ಚೀಟಿಗಳು, ಸಿಕ್ಕಿದ್ದು ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 650-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 19-30 ಗಂಟೆಯಿಂದ 20-30 ಗಂಟೆಯವರೆಗೆ ಹನುಮಾನ ಗುಡಿಯ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 21-00 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ, ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ 21-20 ಗಂಟೆಗೆ ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 245/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.