ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/09/2020

By blogger on ಗುರುವಾರ, ಸೆಪ್ಟೆಂಬರ್ 24, 2020                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/09/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 85/2020 ಕಲಂ: 323.324.341.353.504.506 ಸಂ 34  ಐಪಿಸಿ : ಇಂದು ದಿನಾಂಕ  23/09/2020 ರಂದು 07.45 ಪಿ.ಎಮ್ಕ್ಕೆ ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಮೇರೆಗೆ ಆಸ್ಪತ್ರೆಗೆ 8.00 ಪಿ.ಎಮ್ಕ್ಕೆ ಬೇಟಿ ನೀಡಿ ಉಪಚಾರ ಹೊಂದುತ್ತಿದ್ದ ಗಾಯಳು ಪಿರ್ಯಾದಿ ಶ್ರೀ ಡಾ: ಸೂರ್ಯಪ್ರಕಾಶ ತಂದೆ ಮಲ್ಲಣ್ಣ ಕಂದಕೂರು ವಯಾ:53 ಜಾತಿ:ಲಿಂಗಾಯತ ಉ: ಜಿಲ್ಲಾ ಮಲೇರಿಯಾ ಅಧಿಕಾರಿಗಳು ಸಾ: ಕಂದಕೂರು ಕಾಂಪ್ಲಂಕ್ಸ್ ಗಾಂಧಿಚೌಕ ಯಾದಗಿರಿ  ರವರ  ಹೇಳಿಕೆಯನ್ನ ಪಡೆದುಕೊಂಡಿದ್ದು ಸಾರಾಂಶವೆನಂದರೆ ನಾನು  ಯಾದಗಿರಿ  ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ನಾನು ಜಿಲ್ಲಾ ಮಲೇರಿಯಾ ಅಧಿಕಾರಿಗಳು ಅಂತಾ 10 ವರ್ಷದಿಂದ  ಕರ್ತವ್ಯ ನಿರ್ವಹಿಸುತ್ತಿದ್ದನೆ. 3-4 ವರ್ಷಗಳಿಂದ ಯಾದಗಿರಿ ರಾಠಿಭವನದಲ್ಲಿದ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 1 ಜನೆವರಿ 2020 ರಂದು ಡಾ: ಲಕ್ಷ್ಮೀಕಾಂತ ಆರ್.ಸಿ.ಹೆಚ್.ಓ ರವರು  ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿಗಳು ಇರುವ ಕಾಲಕ್ಕೆ ರಾಠಿಭವನದಲ್ಲಿದ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗಂಜ್ ಏರಿಯಾದ  ಡಾ: ರವಿಂದ್ರ ಜಾಂಡೇದ ಖಾಸಗಿ ವೈದ್ಯರು ಇವರ ಮನೆಯಲ್ಲಿ  ಸ್ಥಳಾಂತರಿಸಿದ್ದರು. ನಂತರ ಡಿ.ಎಚ್.ಓ ಯಾದಗಿರಿ ರವರು ಡಾ: ಲಕ್ಷ್ಮೀಕಾಂತ ಆರ್.ಸಿ.ಹೆಚ್.ಓ ರವರನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಳಿಸಿ ನನಗೆ ಜನೆವರಿ 2020 ಸಾಲಿನಲ್ಲಿ  ನನಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿಗಳು ಅಂತಾ ನೇಮಸಿದ್ದು  ಇರುತ್ತದೆ ಆಗ  ಗಂಜ ಏರಿಯಾದ ಡಾ: ರವೀಂದ್ರ ಜಾಂಡೇದ ಇವರ ಮನೆಯಿಲ್ಲದ್ದ  ನಗರ ಆರೋಗ್ಯ ಕೇಂದ್ರಕ್ಕೆ ಮೇಲಾಧಿಕಾರಿಗಳು ಭೇಟಿ ನೀಡಿ ಇದು  ಊರ ಹೊರವಲಯದಲ್ಲಿದ್ದುರಿಂದ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಗಭರ್ಿಣಿಯರಿಗೆ ತೊಂದರೆಯಾಗುತ್ತಿದ್ದು  ಈ ಆರೋಗ್ಯ ಕೇಂದ್ರವನ್ನು   ಊರಲ್ಲಿರುವ ಸರಕಾರಿ ಕಟ್ಟಡಕ್ಕೆ  ಸ್ಥಳಾಂತರಗೊಳಿಸುವಂತೆ ಮೇಲಾಧಿಕಾರಿಗಳ ಆದೇಶದ ಪ್ರಕಾರ ನಾನು ಮೇ 2020 ರಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿರುವ ಹಳೆಯ ಐ.ಡಿ.ಎಸ್.ಪಿ ಕಛೇರಿಗೆ ಸ್ಥಳಾಂತರ ಗೊಳಿಸಲಾಯಿತು. ಡಾ: ರವೀಂದ್ರ ಜಾಂಡೆ ರವರು 3-4 ತಿಂಗಳಿಂದ  ತಮ್ಮ ಮನೆಯಲ್ಲಿದ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ 3 ತಿಂಗಳ ಬಾಡಿಗೆ  ಹಣ ಕೂಡುವಂತೆ ನನಗೆ  ಬಂದು ಕೇಳುತ್ತಿದ್ದರು ಆಗ ನಾನು  ಡಾ:ರವೀಂದ್ರ ಜಾಂಡೆರವರಿಗೆ  ಮಾನ್ಯ ಜಿಲ್ಲಾ ಪಂಚಾಯಿತ ಕಾರ್ಯನಿರ್ವಹಣ ಅಧಿಕಾರಿಗಳು ಯಾದಗಿರಿ (ಸಿ.ಇ.ಓ) ರವರ ಡಿ.ಎಚ್.ಎಸ್ ಸಭೆಯಲ್ಲಿ ಚಚರ್ಿಸಿ ಬಾಡಿಗೆ ಹಣ ಕೂಡಲು ಅನುಮತಿ ನೀಡಿದರೆ  ನಾನು  ಬಾಡಿಗೆ ಹಣ ನಿಮಗೆ ಕೊಡತ್ತೇನೆ ಅಂತಾ ತಿಳಿಸಿದೆನು. ನಂತರ ಡಾ:ರವೀಂದ್ರ ಜಾಂಡೇದ ರವರು ಪದೇ ಪದೇ ಬಾಡಿಗೆ ಹಣ ನೀಡವಂತೆ  ನನಗೆ ತೊಂದರೆ ಕೊಡುತ್ತಾ ಬಂದಿದ್ದನು ನಾನು ಮೇಲಾಧಿಕಾರಿಗಳ ಆದೇಶ ಬಂದ ನಂತರ  ಬಾಡಿಗೆ ಹಣ ನೀಡುತ್ತೆನೆ ಅಂತಾ ಅಂದರು ಕೂಡಾ ಕೇಳುತ್ತಿರಲಿಲ್ಲಾ. ಇಂದು ದಿನಾಂಕ 23/09/2020 ರಂದು  ನಾನು 12.55 ಪಿ.ಎಮ್ ಸುಮಾರಿಗೆ  ಯಾದಗಿರಿ  ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿರುವ  ನನ್ನ ಕಾರ್ಯಲಯದಲ್ಲಿ  ಜಿಲ್ಲಾ ಮಲೇರಿಯಾ  ಮತ್ತು ಕೋರನಾ ಕೋವಿಡ್ -19 ಕರ್ತವ್ಯದ ಮೇಲಿದ್ದಾಗ ಡಾ: ರವೀಂದ್ರ ಜಾಂಡೇದ ಹಾಗೂ ಇನ್ನಿಬ್ಬರು  ಕೂಡಿಕೊಂಡು ಏಕಾ ಏಕಿ ನನ್ನ ಚೆಂಬರದಲ್ಲಿ ಬಂದು  ಡಾ:ರವೀಂದ್ರ ಜಾಂಡೇದ ರವರು  ನನ್ನ ಎದೆಯ ಮೇಲಿನ  ಅಂಗಿ ಹಿಡಿದು ಏ ಮಗನೇ ಬಾಡಿಗೆ ಹಣ ಮಂಜೂರು ಮಾಡಲಿಕ್ಕೆ ಮೇಲಾಧಿಕಾರಿಗಳ ಅನುಮತಿ ಬೇಕು  ಅಂತಾ  ಹೇಳುತಿ ನಿನ್ನದು ಇದೇ ಆಯಿತು ಮಗನೇ ಅಂತಾ ಕೈಯಿಂದ ಕಪಾಳಕ್ಕೆ ಹೊಡೆದು ನಿನನ್ನು ಇವತ್ತು ಜೀವದ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ  ಟೇಬಲ್ ಬೆಲ್ಲ್ ನಿಂದ ನನ್ನ ಹಣೆಗೆ  ಹೊಡೆದನು. ಸಂಗಡ ಇದ್ದ ಇನ್ನಿಬ್ಬರ ಪೈಕಿ ಒಬ್ಬನು ಕಾಲಿನಿಂದ ಬೆನ್ನಿಗೆ ಒದ್ದನು ಇನ್ನೊಬ್ಬನು  ಕೈ ಮುಷ್ಟಿ ಮಾಡಿ ನನ್ನ ಎದೆಗೆ ಗುದ್ದಿ ಕುತ್ತಿಗೆ ಹಿಡಿದನು. ಆಗ ಡಾ: ರವೀಂದ್ರ ಜಾಂಡೇದ ಈತನು ಬಡಿಗೆಯಿಂದ ಬಲಗೈ ಹಸ್ತಕ್ಕೆ, ತೆಲೆ ಹಿಂದೆ ಹೊಡೆದು ಒಳಪೆಟ್ಟು ಮಾಡಿದ್ದು ಮೂರು ಜನರು ಕೂಡಿ ಈ ಬೋಸಡಿ ಮಗನಿಗೆ ಇವತ್ತು ಬಿಡಬಾರದು ಅಂತಾ ಅವಾಚ್ಚವಾಗಿ ಬೈದು ಜೀವದ ಬೆದರಿಕೆ ಹಾಕಿದಾಗ ನಾನು ಚೀರಾಡುವ ಸಪ್ಪಳವನ್ನು ಕೇಳಿ ಆಕಾಶ ತಂದೆ ಭೀಮಶಂಕರ ಡಿ ಗ್ರುಪ್ ನೌಕರ, ಮಹೇಶ ತಂದೆ ರಾಗಪ್ಪ ಡಿ ಗ್ರುಪ್ ನೌಕರ, ಶರಣಯ್ಯ ತಂದೆ ಮಲ್ಲಕಯ್ಯ ಹಿ.ಆ.ಸಹಾಯಕ, ಕಾಳಪ್ಪ ತಂದೆ ಭೀಮರಾಯ ಕಿರಿಯ.ಆ ಸಹಾಯಕ, ಸೂಗರಪ್ಪ ತಂದೆ ತಿಪ್ಪಣ್ಣ ಕಿ.ಆ.ಸಹಾಯಕ, ದತ್ತಾತ್ರಯ ತಂದೆ ನಾಗಪ್ಪ ಕಿ.ಆ.ಸಹಾಯಕ, ಖುಷರ್ಿದ್ ಅಹ್ಮದ ತಂದೆ ಇಮಾಮ ಪಟೇಲ್ ಕಿ.ಆ.ಸಹಾಯಕ ರವರು ಬಂದು ಜಗಳ ಬಿಡಿಸಿದರು. ನಂತರ ಈ ಘಟನೆ ಬಗ್ಗೆ ನಮ್ಮ ಮೇಲಾಧಿಕಾರಿಗಳಲ್ಲಿ ವಿಚಾರಿಸಿ ನನಗೆ ಪೆಟ್ಟಾಗಿದ್ದರಿಂದ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆಯಾಗಿರುತ್ತೆನೆ. ನಾನು ಇಂದು ದಿನಾಂಕ 23/09/2020 ರಂದು ಮದ್ಯಾಹ್ನ 12.55 ಪಿ.ಎಮ್ಕ್ಕೆ  ಸರಕಾರಿ ಕರ್ತವ್ಯದ ಮೇಲಿದ್ದಾಗ ನನ್ನ ಕರ್ತವ್ಯಕ್ಕೆ ಅಡೆತಡೆವುಂಟಮಾಡಿ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಡಾ: ರವೀಂದ್ರ ಜಾಂಡೇದ ಮತ್ತು ಇನ್ನಿಬ್ಬರ ಮೇಲೆ ಕಾನೂನು ಕ್ರಮ ಜರುಗಿಸುವದು. ಹಾಗೂ ಇನ್ನಿಬ್ಬರ ಹೆಸರು  ಗೋತ್ತಾಗಿರವದಿಲ್ಲಾ ಗೋತ್ತಾದ್ದಲ್ಲಿ ತಿಳಿಸುತ್ತೇನೆ ಮತ್ತು  ಅವರಿಬ್ಬರನ್ನು ನೋಡಿದಲ್ಲಿ ಗುರುತಿಸುತ್ತೆನೆ ಅಂತಾ  ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 9.15 ಪಿ.ಎಮ್ಕ್ಕೆ ಠಾಣೆಗೆ ಬಂದು  ಹೇಳಿಕೆ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 85/2020 ಕಲಂ 323.324.341.353.504.506 ಸಂ34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 132/2020 ಕಲಂ 341, 504, 506 ಸಂ 34 ಐಪಿಸಿ : ದಿನಾಂಕ 22/09/2020 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿ ಮತ್ತು ಅವರ ಮನೆಯವರು ತಮ್ಮ ಮನೆಯಲ್ಲಿ ಇರುವಾಗ ಆರೋಪಿತರಿಬ್ಬರೂ ಕೂಡಿ ಬಂದು ಹಳೇ ದ್ವೇಶದಿಂದ ಫಿರ್ಯಾಧಿ ಮತ್ತು ಅವರ ಮನೆಯವರಿಗೆ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಮತ್ತು ಮುಧೆ ಹೋಗದಂತೆ ತಡೆದು ನಿಲ್ಲಿಸಿದ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:-  133/2020 ಕಲಂ 363 ಐಪಿಸಿ : ಇಂದು ದಿನಾಂಕ 23-09-2020 ರಂದು 5-30 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಲಕ್ಷ್ಮೀ ಗಂಡ ಮಲ್ಲಪ್ಪಾ ಕಲಾಲ ವಯಾ: 35 ಉ: ಕೂಲಿ ಕೆಲಸ ಜಾ: ಇಳಿಗೇರ ಸಾ: ಹೋನಗೇರಾ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಫಿರ್ಯಾಧೀ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 21-09-2020 ರಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ಫಿರ್ಯಾಧಿ ಮತ್ತು ಅವಳ್ನ ಗಂಡ  ಹಾಗೂ ತನ್ನ ಮಕ್ಕಳಾದ ಶರಣಮ್ಮಾ ಮತ್ತು ರಾಕೇಶ ಎಲ್ಲರೂ ಕೂಡಿ ನಮ್ಮ ಹೋಲಕ್ಕೆ ಸದೆ ತೆಗೆಯಲು ಹೋಗಿದ್ದೆವು. ಮನೆಯಲ್ಲಿ ಮಂಜುಳಾ ಇವಳು ಒಬ್ಬಳೇ ಇದ್ದಳು. ನಾವು ಹೋಲದಿಂದ ಸಾಯಂಕಾಲ 6-30 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ನನ್ನ ಮಗಳು ಮಂಜುಳಾ ಇವಳು ಕಾಣಲಿಲ್ಲಾ. ನಾನು ನನ್ನ ಗಂಡ ಗಾಬರಿಗೊಂಡು ಊರಲ್ಲಿ ಎಲ್ಲಾ ಕಡೆಗೆ ಮತ್ತು ನಮ್ಮ ಸಂಬಂಧಿಕರ ಮನೆಗೆ ಹೋಗಿ ನೋಡಲಾಗಿ ಮಗಳ  ಸುಳಿವು ಸಿಗಲಿಲ್ಲಾ. ರಾತ್ರಿ 9 ಗಂಟೆ ಸುಮಾರಿಗೆ ತನ್ನ ಮೈದುನನಾದ ಯಮನಯ್ಯಾ ಇತನು ಬಂದು ತಮಗೆ ತಿಳಿಸಿದ್ದೆನೆಂದರೆ ನಾನು ಯಾದಗಿರಿಯಿಂದ ಟಿ.ವ್ಹಿ.ಎಸ್ ಮೋಟಾರ ಸೈಕಲ್ ಹೋನಗೇರಾ ಕಡೆಗೆ ಬರುತ್ತಿರುವಾಗ ಸಾಯಂಕಾಲ 7 ಗಂಟೆ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಬಂದಳ್ಳಿ ಹತ್ತಿರ ಹಾಸ್ಟೇಲ್ ಹತ್ತಿರ ಬರುತ್ತಿದ್ದಾಗ ಎದುರುಗಡೆಯಿಂದ ನಮ್ಮೂರಿನ ಬಸವರಾಜ ತಂದೆ ಸಾಬಣ್ಣಾ ಕುಂಬಾರ  ಇತನು ತನ್ನ ಅಟೋ ನಂ: ಕೆ.ಎ-33/ಬಿ-0635 ನೆದ್ದರಲ್ಲಿ ನಮ್ಮ ಮಗಳಾದ ಮಂಜುಳಾ ಇವಳನ್ನು ಕೂಡಿಸಿಕೊಂಡು ಹೋಗುವುದನ್ನು ನೋಡಿ ನಾನು ಮೋಟಾರ ಸೈಕಲ್ ನಿಲ್ಲಿಸಿ ಮಂಜುಳಾ ಅಂತಾ ಜೋರಾಗಿ ಕೂಗಿದರೂ ಆತನು ತನ್ನ ಅಟೋವನ್ನು ಇನ್ನೂ ಜೋರಾಗಿ ಓಡಿಸಹತ್ತಿದನು. ಆಗ ನಾನು ಮೋಟಾರ ಸೈಕಲನ್ನು ಪುನ: ತಿರುಗಿಸಿ ಯಾದಗಿರಿ ಬಂದರೂ ಕೂಡಾ ಮುಂದೆ ಅಟೋ ಯಾವ ಕಡೆಗೆ ಹೋಯಿತು ಎಂಬುದು ನನಗೆ ಗೊತ್ತಾಗಲಿಲ್ಲಾ. ನಾನು ಯಾದಗಿರಿಯಲ್ಲಿ ಎಲ್ಲಾ ಕಡೆಗೆ ಹುಡುಕಾಡಿದರೂ ನಮಗೆ ಆತನ ಅಟೋ ಸಿಗಲಿಲ್ಲಾ. ಅವರಿಗೆ ಹುಡುಕಾಡಿ ಇಲ್ಲಿಗೆ ಬರಲು ತಡವಾಗಿದೆ ಅಂತಾ ತಿಳಿಸಿದನು. ಬಸವರಾಜ ತಂದೆ ಸಾಬಣ್ಣಾ ಕುಂಬಾರ  ಇತನೇ ಅಪ್ರಾಪ್ತಳಾಧ ತನ್ನ ಮಗಳನ್ನು ಪುಸಲಾಯಿಸಿ ಬಲವಂತವಾಗಿ  ತನ್ನ ಅಟೋ ನಂ: ಕೆ.ಎ-33/ಬಿ-0635 ನೆದ್ದರಲ್ಲಿ ಅಪಹರಿಸಿಕೊಂಡು ಹೋಗಿದ್ದು ಪತ್ತೆ ಮಾಡಿ ಕೊಡಬೇಕು ಅಂತಾ ಫಿರ್ಯಾಧಿ ಸಾರಾಂಸದ ಮೇಲಿಂದ ಗುನ್ನೆ ದಾಖಲಾಗಿರುತ್ತದೆ.

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 17/2020 174 ಸಿ.ಆರ್.ಪಿ.ಸಿ : ಮೃತ ಜಗನ್ನಾಥರೆಡ್ಡಿ ತಂದೆ ದೇವಿಂದ್ರಪ್ಪ ಹತ್ತಿಕುಣಿ ಸಾ:ಗಡ್ಡೆಸೂಗೂರು ಈತನು ದಿನಾಂಕ: 22/09/2020 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಗಡ್ಡೆಸುಗೂರು ಸೀಮಾಂತರದ ತಮ್ಮ ಗದ್ದೆಗೆ ಮೋಟರ ಚಾಲು ಮಾಡಲು ಹೋಗಿದ್ದು, ಸದರಿ ಗದ್ದೆಯ ದಂಡೆಯ ಮೇಲೆ ಇರುವ ಹಳ್ಳದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಈಜಲು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ. ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 17/2020 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.   

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 123/2020, ಕಲಂ,143,147,323,354,504.506. ಸಂಗಡ 149 ಐ ಪಿ ಸಿ  : ದಿನಾಂಕ: 23-09-2020 ಸಾಯಮಕಾಲ 06-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ಪಿಯರ್ಾಧಿದಾರಳು ಮತ್ತು ಆಕೆಯ ಮನೆಯವರು ಮನೆಯ ಹತ್ತಿರ ಇರುವಾಗ ದಿನಾಂಕ: 22-09-2020 ರಂದು ರಾತ್ರಿ 07-30 ಗಂಟೆಗೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಲೇ ಸೂಳೆ ಮಕ್ಕಳೆ ಇವಾಗ ಎಫ್.ಐ. ಆರ್ ಮಾಡಿಸಿ ಬಂದಿವಿ ನೋಡರಲೇ  ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು  ಕೈಯಿಂದ ಹೊಡೆ ಬಡೆ ಮಾಡಿ ಸಿರೆ ಸೇರಗು ಹಿಡಿದು ಎಳದಾಡಿ ಅವಮಾನ ಮಾಡಿ ಕೂದಲು ಹಿಡಿದು ಎಳದಾಡಿ ಮನ ಬಂದಂತೆ ಕೈಯಿಂದ ಮೈಗೆ ಹೊಡೆದು ನಿಮಗೆ ಖಲಾಸ ಮಾಡುತ್ತೇವೆ ಊರಲ್ಲಿ ಹೆಂಗ ಸಂಸಾರ ಮಾಡುತ್ತಿರಿ ನೋಡೊಣ ಅಂತಾ ಜೀವದ ಬೆದರಿಕೆ  ಹಾಕಿದ ಬಗ್ಗೆ  ಪಿಯರ್ಾಧಿ ಸಾರಂಶ ಇರುತ್ತದೆ.

   

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 15/2020 ಕಲಂ. 174  ಸಿಆರ್ಪಿಸಿ : ದಿನಾಂಕ: 18-09-2020 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ನನ್ನ ಹೆಂಡತಿ ಹೊಲದ ಕೆಲಸಕ್ಕೆ ಹೋಗಿದ್ದು ನಾನು ನನ್ನ ಹೆಂಡತಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಮದ್ಯಾಹ್ನ 12-10 ಗಂಟೆ ಸುಮಾರಿಗೆ  ನಮ್ಮೂರಿನ ಜಗಪ್ಪ ತಂದೆ ಹಣಮಂತ ಈತನು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ನಿನ್ನ ತಾಯಿ ಬೆಳೆಗೆ ಹೊಡೆಯುವ ಎಣ್ಣೆ ಕುಡಿದಿದಾಳೆ ಕುಡಿದು ಮನೆಯ ಮುಂದೆ ಒದ್ದಾಡುತ್ತಿದ್ದಾಳೆ ಬೇಗ ಬಾ ಅಂತಾ ತಿಳಿಸಿದ್ದರಿಂದ ಆಗ ನಾನು ನನ್ನ ಹೆಂಡತಿ ಇಬ್ಬರೂ ಕೂಡಿ ಮನೆಗೆ ಬಂದು ನೋಡಲಾಗಿ ನನ್ನ ತಾಯಿ ಮನೆಯ ಮುಂದೆ ಒದಾಡುತಿದ್ದಳು ಆಗ ನನ್ನ ದೊಡ್ಡ ಮಗ ಉಮೇಶ ಈತನಿಗೆ ಎನಾಯಿತು ಅಂತಾ ಕೇಳಿಲಾಗಿ ನಾವು ಮನೆಯ ಅಂಗಳದಲ್ಲಿ ಆಟ ಆಡುತ್ತಿರುವಾಗ ಆಯಿ ಮನೆಯ ಒಳಗಡೆ ಹೋಗಿ ಮದ್ಯಾಹ್ನ 12-00 ಗಂಟೆಗೆ ಎಣ್ಣೆ ಕುಡಿದಿದ್ದಾಳೆ ಅಂತಾ ತಿಳಿಸಿದನು. ಆಗ ನನ್ನ ತಾಯಿಗೆ ವೈದ್ಯಕೀಯ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ನನ್ನ ತಾಯಿಗೆ ಸೈದಾಪೂರ ಸರಕಾರಿ ಆಸ್ಪತ್ರೆ  ತಂದು ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ರಾಯಚೂರ ರೀಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ರೀಮ್ಸ ಆಸ್ಪತ್ರೆಯಲ್ಲಿ ನನ್ನ ತಾಯಿ ವೈದ್ಯಕೀಯ ಉಪಚಾರ ಪಡೆಯುತ್ತ ವೈದ್ಯಕೀಯ ಉಪಚಾರ ಫಲಕಾರಿಯಾಗದೆ ದಿನಾಂಕ: 22-09-2020 ರಂದು ಮದ್ಯಾಹ್ನ 02-41 ಗಂಟೆಗೆ ಮರಹೊಂದಿರುತ್ತಾಳೆ. ಕಾರಣ ನನ್ನ ತಾಯಿ ಅಂನಂತಮ್ಮ ಗಂಡ ಮಾರೆಪ್ಪ ವ|| 50 ವರ್ಷ ಜಾ|| ಕಬ್ಬಲಿಗ ಉ|| ಹೊಲಮನೆ ಕೆಲಸ ಸಾ|| ಮಾದ್ವಾರ ಈಕೆಯು ಮಾನಸಿಕ ಅಸ್ವಸ್ತಳಾಗಿದ್ದರಿಂದ ಮನೆಯಲ್ಲಿಟ್ಟಿರುವ ಕ್ರೀಮಿನಾಷಕ ಎಣ್ಣೆ ಕುಡಿದು ಮೃತಪಟ್ಟಿರುತ್ತಾಳೆ ನನ್ನ ತಾಯಿಯ ಮರಣದಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲ ತಾವು ಮುಂದಿನ ಕ್ರಮ ಜರುಗಿಸಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಇರುತ್ತದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:-. 244/2020  ಕಲಂ 454, 457, 380  ಐ.ಪಿ.ಸಿ: ದಿನಾಂಕ 23/09/2020 ರಂದು, ಮುಂಜಾನೆ 09-30 ಗಂಟೆಗೆ ಫಿಯರ್ಾದಿ ಶ್ರೀ ಶಾಂತಕುಮಾರ ತಂದೆ ಅಯ್ಯಪ್ಪ ವಾಘಾ ವಯ 54 ವರ್ಷ ಜಾತಿ ಹಿಂದೂ ಲಿಂಗಾಯತ ಸಾಃ ಗಾಂಧಿಚೌಕ ಶಹಾಪೂರ ಇವರು ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಫಿಯರ್ಾದಿಯವರು ಇತ್ತಿಚೀಗೆ ಅಂದಾಜು 2 ತಿಂಗಳಿನಿಂದ ಶಹಾಪೂರದ ಹಳೆ ತಹಸೀಲ ಕಾಯರ್ಾಲಯದಲ್ಲಿರುವ ಉಪ-ಅಂಚೆ ಕಛೇರಿಯಲ್ಲಿ (ಪೋಸ್ಟ ಮಾಸ್ಟರ) ಉಪ-ಅಂಚೆ ಪಾಲಕರು ಅಂತ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ಸದರಿ ಕಛೇರಿಯಲ್ಲಿ ಶ್ರೀಮತಿ ಸಂಗೀತಾ ಬಿ.ಕುಲಕಣರ್ಿ ಇವರು ಪೋಸ್ಟ ಮಾಸ್ಟರರ್ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ದಿನಾಂಕ 22/09/2020 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಫಿಯರ್ಾದಿಯವರು, ಉಪ-ಅಂಚೆ ಕಛೇರಿಗೆ ಕರ್ತವ್ಯಕ್ಕೆ ಬರುತಿದ್ದಾಗ, ಶ್ರೀಮತಿ ಸಂಗೀತಾ ಇವರು ಪೋನ್ ಮಾಡಿ ಸರ್ ನಾನು ಆಫೀಸಿಗೆ ಬಂದಿದ್ದೇನೆ, ಕಛೇರಿಯ  ಬಾಗಿಲು ತೆರೆದಿರುತ್ತದೆ.  ಆಫೀಸನಲ್ಲಿ  ಕಾಗದ ಪತ್ರಗಳು ಚೆಲ್ಲಾಪಿಲ್ಲೆಯಾಗಿರುತ್ತವೆ ಮತ್ತು ದಿನನಿತ್ಯ ಕರ್ತವ್ಯ ನಿರ್ವಹಿಸುವ ಕಂಪ್ಯೂಟರ್ ಸಿಸ್ಟಮ್ ಕಾಣಸ್ತಾಯಿಲ್ಲ ಅಂತ ತಿಳಿಸಿದ ಮೆರೆಗೆ, ಸಮೀಪದಲ್ಲಿಯೇ ಇದ್ದೇನೆ ಬಂದೆ ಅಂತ ತಿಳಿಸಿ ಮುಂಜಾನೆ 10-05 ಗಂಟೆಯ ಸುಮಾರಿಗೆ ಉಪ-ಅಂಚೆ ಕಛೇರಿಗೆ ಫಿಯರ್ಾದಿಯವರು ಹೋಗಿ ನೋಡಲಾಗಿ ಆಫೀಸಿನ ಬಾಗಿಲು ತೆರೆದಿತ್ತು ಒಳಗಡೆ ಹೋಗಿ ನೋಡಲಾಗಿ ಕಾಗದ ಪತ್ರಗಳು ಚೆಲ್ಲಾಪಿಲ್ಲೆಯಾಗಿದ್ದವು, ಸದರಿ ಕಛೇರಿಗೆ ಕೇಂದ್ರ ಸರಕಾರದಿಂದ ಹಂಚಿಕೆಯಾದ ಪ್ರಸ್ತುತ ಕಾರ್ಯನಿರ್ವಹಿಸುತಿದ್ದ ಡೆಲ್ ಕಂಪನಿಯ ಕಂಪ್ಯೂಟರ್ ಅದರ ನಂಬರ ಊ8ಚಗಿಉಙಚ-91ಖಕಿಃಘಿ2  ಇದ್ದು ಅದರ ಬಿಡಿ ಭಾಗಗಳಾದ ಮಾನಿಟರ್, ಕೀ ಬೋಡರ್್, ಸಿ.ಪಿ.ಯು, ಮೌಸ್, ಒಂದು ಕ್ಯಾಮರಾ ಇರಲಿಲ್ಲ, ಅಂದಾಜು 24,000=00 ರೂಪಾಯಿ ಮೌಲ್ಯದ ಕಂಪ್ಯೂಟರ್ ಸಿಸ್ಟಮ್ ಮತ್ತು ಅದರ ಬಿಡಿಭಾಗಗಳು ಮತ್ತು ಒಂದು ಕ್ಯಾಮಾರವನ್ನು  ಯಾರೋ ಕಳ್ಳರು ದಿನಾಂಕ 21/09/2020 ರಂದು ಸಾಯಂಕಾಲ 17-30 ಗಂಟೆಯಿಂದ ದಿನಾಂಕ 22/09/2020 ರಂದು ಮುಂಜಾನೆ 10-00 ಗಂಟೆಯ ಅವಧಿಯಲ್ಲಿ ಉಪ-ಅಂಚೆ ಕಛೇರಿಯ  ಕೀಲಿ ಮುರಿದು ಒಳಗಡೆ ಹೋಗಿ ಕಳ್ಳತನ  ಮಾಡಿಕೊಂಡು ಹೋಗಿರುತ್ತಾರೆ. ನಂತರ ಈ ಬಗ್ಗೆ ಫಿಯರ್ಾದಿಯವರು ತಮ್ಮ ಮೇಲಾಧಿಕಾರಿಗಳಿಗೆ ಫೋನ್ ಮೂಲಕ ಮಾಹಿತಿ ನೀಡಿ, ಮೇಲಾಧಿಕಾರಿಗಳ ಸಲಹೆ ಸೂಚನೆಯ ಮೆರೆಗೆ ಇಂದು ಠಾಣೆಗೆ  ಹಾಜರಾಗಿ ದೂರು ಸಲ್ಲಿಸಿರುತ್ತಾರೆ. ಕಾರಣ ಶಹಾಪೂರದ ಉಪ-ಅಂಚೆ ಕಛೇರಿಯಲ್ಲಿರುವ ಕಂಪ್ಯೂಟರ ಸಿಸ್ಟಮ್ ಮತ್ತು ಅದರ ಬಿಡಿಭಾಗಗಳು ಕೇಂದ್ರ ಸರಕಾರದ ಸ್ವತ್ತಾಗಿದ್ದು, ಅವುಗಳನ್ನು ಕಳ್ಳತನವಾದ ಬಗ್ಗೆ ಕ್ರಮಕೈಕೊಂಡು ಕಳ್ಳತವಾದ ನಮ್ಮ ಮುದ್ದೆಮಾಲನ್ನು ಪತ್ತೆ ಹಚ್ಚಲು ವಿನಂತಿ ಅಂತ ಕೊಟ್ಟ ಫಿಯರ್ಾದಿಯವರ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ  244/2020 ಕಲಂ 454, 457, 380 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 144/2020 ಕಲಂ: 279, 304[ಎ] ಐ.ಪಿ.ಸಿ : ಇಂದು ದಿ: 23/09/2020 ರಂದು 6.30 ಎಎಮ್ಕ್ಕೆ ಪಿರ್ಯಾದಾರರಾರ ಶ್ರೀ ಜಮೀರಪಟೇಲ ತಂದೆ ಅಲ್ಲಾಪಟೆಲ ವ|| 23 ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ಟಿಪ್ಪುನಗರ ತಾಳಿಕೋಟಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನಂದರೆ, ನಮ್ಮ ತಂದೆ ತಾಯಿಗೆ ನಾವೂ ಎರಡು ಜನ ಗಂಡು ಮಕ್ಕಳಿರುತ್ತೇವೆ. ಇನ್ನೂ ಯಾರದೂ ಮದುವೆಯಾಗಿರುವದಿಲ್ಲ ನಾವಿಬ್ಬರೂ ಕಟ್ಟಿಗೆ ಅಡ್ಡಾದಲ್ಲಿ ಕೂಲಿಕೆಲಲಸ ಮಾಡಿಕೊಂಡು ಇರುತ್ತೇವೆ. ಕಲಬುಗರ್ಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸೈದಾಪೂರ ಗ್ರಾಮದಲ್ಲಿ ನಮ್ಮ ಸಂಬಂದಿಕರು ತೀರಿ ಹೋಗಿದ್ದರಿಂದ ನಮ್ಮ ಅಣ್ಣನಾದ ಸುಲೇಮಾನ ಪಟೇಲ ತಂದೆ ಅಲ್ಲಾಪಟೇಲ ಈತನು ಮಾತನಾಡಿಸಿ ಬಂದರಾಯಿತು ಅಂತ ದಿನಾಂಕ 21.09.2020 ರಂದು ನಮ್ಮ ಮೋಟರ ಸೈಕಲ ನಂಬರ ಕೆಎ-28 ಇಎಸ್-2990 ನೇದ್ದನ್ನು ತೆಗೆದುಕೊಂಡು ಸದರ ಸೈದಾಪೂರ ಗ್ರಾಮಕ್ಕೆ ಹೋಗಿ ನಮ್ಮ ಸಂಬಂದಿಕರಿಗೆ ಮಾತನಾಡಿಸಿ ಮರಳಿ ತಾಳಿಕೋಟಿಗೆ ಬರುವ ಕುರಿತು ಮೋಟರ್ ಸೈಕಲ ನಂಬರ ಕೆಎ-28 ಇಎಸ್-2990 ನೇದ್ದರಲ್ಲಿ ತಳ್ಳಳ್ಳಿ [ಬಿ] ಗ್ರಾಮ ದಾಟಿ ತನ್ನ ಮೋಟರ್ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದಾಗ ದಿನಾಂಕ 21.09.2020 ರಂದು ಮದ್ಯಾಹ್ನ 3.30 ಗಂಟೆಗೆ ಮೋಟರ ಸೈಕಲ ಸ್ಕಿಡ್ಡಾಗಿ ಬಿದ್ದು ತಲೆಯ ಹಿಂದಿನ ಭಾಗಕ್ಕೆ ರಕ್ತಗಾಯ ಹಾಗು ಭಾರೀ ಗುಪ್ತಗಾಯವಾಗಿ ರೋಡಿನಲ್ಲಿ ಬಿದ್ದಿರುತ್ತಾನೆ ಅಂತ ಯಾರೋ ಪೋನ ಮಾಡಿ ತಿಳಿಸಿದಾಗ ನಾನು ಕೂಡಲೆ ಒಂದು ಕಾರ್ ತೆಗೆದುಕೊಂಡು ಹೋಗಿ ನೋಡಲು ನನ್ನ ಅಣ್ಣ ಸುಲೇಮಾನ ಈತನು ತಲೆಯ ಹಿಂದೆ ರಕ್ತಗಾಯ ಹಾಗೂ ಭಾರಿಗುಪ್ತಗಾಯ ಹೊಂದಿ ರೋಡಿನ ಪಕ್ಕಕ್ಕೆ ಬಿದ್ದಿದ್ದು ಕೂಡಲೆ ನನ್ನ ಅಣ್ಣನಿಗೆ ಉಪಚಾರ ಕುರಿತು ನನ್ನ ಕಾರಿನಲ್ಲಿಯೇ ಸರಕಾರಿ ಆಸ್ಪತ್ರೆ ತಾಳಿಕೋಟಿಗೆ ಕರೆದುಕೊಂಡು ಬಂದು ಉಪಚಾರ ಪಡಿಸಿ ವೈದ್ಯರು ಹೆಚ್ಚಿನ ಉಪಚಾರ ಕುರಿತು ಬೇರೆ ಕಡೆ ಹೋಗಲು ತಿಳಿಸಿದ ಮೇರೆಗೆ ನನ್ನ ಅಣ್ಣನಿಗೆ ಹೆಚ್ಚಿನ ಉಪಚಾರ ಕುರಿತು ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ನನ್ನ ಅಣ್ಣ ಸುಲೇಮಾನ ಪಟೇಲ ತಂದೆ ಅಲ್ಲಾಪಟೇಲ ವಯಾ|| 27 ಈತನು ಉಪಚಾರ ಫಲಕಾರಿಯಾಗದೆ ನಿನ್ನೆ ದಿ: 22/09/2020 ರಂದು ಸಾಯಂಕಾಲ 6 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 144/2020 ಕಲಂ 279, 304[ಎ] ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ  ಪೊಲೀಸ ಠಾಣೆ ಗುನ್ನೆ ನಂ:- 145/2020 ಕಲಂ ಮನುಷ್ಯ ಕಾಣೆ : ಇಂದು ದಿ: 23.09.2020 ರಂದು ಮಹಾಂತಗೌಡ ತಂದೆ ಗುತ್ತಪ್ಪ ಬಿರಾದಾರ ವಯಸ್ಸು; 67 ಜಾತಿ: ಲಿಂಗಾಯತ ಉ: ಹೊಲಮನೆಗೆಲಸ ಸಾ: ಸಂಜೀವನಗರ ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ನನಗೆ  ಮೂರು ಜನ ಗಂಡು ಮಕ್ಕಳು ಮಾತ್ರ ಇರುತ್ತಾರೆ ನನ್ನ ಹಿರಿಯ ಮಗ ಬಸವರಾಜ ತಂದೆ ಮಹಾಂತಗೌಡ ಬಿರಾದಾರ ವ|| 36 ಈತನು ಅಲ್ಲಿಇಲ್ಲಿ ಕೂಲಿಕೆಲಸಕ್ಕೆ ಹೋಗುತ್ತಿದ್ದನು ಮತ್ತು ಸಾಯಂಕಾಲ ಮರಳಿ ಮನಗೆ ಬರುತ್ತಿದ್ದನು ಸದರಿಯವನಿಗೆ ಪಿಟ್ಸ್ ಕಾಯಿಲೆಯಿದ್ದು ಕಾರಣ ಸದರಿಯವನಿಗೆ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದೆವು. ಹೀಗಿದ್ದು ದಿನಾಂಕ 09.09.2020 ರಂದು ಮುಂಜಾನೆ 07 ಗಂಟೆಗೆ ನನ್ನ ಹಿರಿಯ ಮಗನಾದ ಬಸವರಾಜ ತಂದೆ ಮಹಾಂತಗೌಡ ಬಿರಾದಾರ ವ|| 36 ಈತನು ಹೊರಗಡೆ ಹೋಗಿ ಬರುತ್ತೇನೆ ಅಂತ ಹೇಳಿ ಲುಂಗಿ ಹಾಗು ಟೀಶರ್ಟ ಹಾಕಿಕೊಂಡು ಹೋದನು. ಸುಮಾರು ಗಂಟೆಗಳಾದರೂ ಮನೆಗೆ ಬಾರದೇ ಇದ್ದಾಗ ಎಲ್ಲಿಯಾದರೂ ಹೋಗಿರಬಹುದು ಬರುತ್ತಾನೆ ಅಂತ ಸುಮ್ಮನಿದ್ದೆವು. ನನ್ನ ಮಗನು ಆಗಾಗ ಸುಮಾರು ಮೂರು ದಿನಗಳವರೆಗೆ ಎಲ್ಲಿಗೆಯಾದರೂ ಹೋಗಿ ಮರಳಿ ಮನೆಗೆ ಬರುತ್ತಿದ್ದನು ಈ ರೀತಿ ಸುಮಾರು ನಾಲ್ಕು ಸಲ ಮಾಡಿ, ಸುಮಾರು ನಾಲ್ಕು ದಿನಗಳ ನಂತರ ಮನೆಗೆ ಬಂದಿರುತ್ತಾನೆ. ಸುಮಾರು 7-8 ದಿನಗಳು ಗತಿಸಿದರೂ ಮಗನು ಮನಗೆ  ಬಾರದೇ ಇದ್ದಾಗ ಗಾಬರಿಯಾಗಿ ನಾನು ಹಾಗು ನಮ್ಮ ಮಕ್ಕಳಾದ ಶಾಂತಗೌಡ ಬಿರಾದಾರ ಹಾಗು ಗುತ್ತಪ್ಪ ಬಿರಾದಾರ ಎಲ್ಲರೂ ಕೂಡಿ ಕೆಂಭಾವಿ ಶಹಾಪೂರ,ಸುರಪೂರ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಸಿಗಲಿಲ್ಲ. ನಂತರ ನಮ್ಮ ಸಂಬಂದಿಕರ ಗ್ರಾಮಗಳಾದ ಮಲ್ಕಾಪೂರ, ಹಂಗರಗಿ ಗ್ರಾಮಗಳಿಗೆ ಬೇಟಿ ನೀಡಿ ನನ್ನ ಮಗನ ಬಗ್ಗೆ ವಿಚಾರಿಸಲು ಸದರಿಯವನು ಎಲ್ಲಿಯೂ ಬಂದಿರುವದಿಲ್ಲ ಅಂತ ತಿಳಿಸಿದರು.. ನನ್ನ ಮಗನ ಹತ್ತಿರ ಯಾವದೇ ಮೋಬೈಲ್ ಇರುವದಿಲ್ಲ. ಹೀಗೆ  ಸುಮಾರು ಕಡೆಗಳಲ್ಲಿಯೂ ನನ್ನ ಮಗನಿಗೆ  ಹುಡುಕಾಡಿದರೂ ನನ್ನ ಮಗ ಎಲ್ಲಿಯೂ ಸಿಕ್ಕಿರುವದಿಲ್ಲ. ಸದರಿ ನನ್ನ ಮಗನ  ಚಹರೆ ಪಟ್ಟಿ, ಉದ್ದನೆಯ ಮುಖ, ಸಾದಗಪ್ಪು ಬಣ್ಣ, ಉದ್ದನೆಯ ಮೂಗು, ಸಾದಾರಣ ಮೈಕಟ್ಟು, ಎತ್ತರ 5 ಪೀಟ 5 ಇಂಚ, ಇದ್ದು ನಮ್ಮೂರಿನಿಂದ ಹೋಗುವಾಗ ಒಂದು ಕೆಂಪು ಚೌಕಡಿ ಲುಂಗಿ ಹಾಗು ತಿಳಿ ನೀಲಿ ಬಣ್ಣದ ಕೆಂಪು ಬಣ್ಣದ ಮಿಶ್ರಿತ ಟೀ ಶರ್ಟ  ಉಟ್ಟುಕೊಂಡು ಹೋಗಿದ್ದು ಇರುತ್ತದೆ. ಕಾರಣ ಮೆಲ್ಕಾಣಿಸಿದ ನನ್ನ ಮಗ ನಮ್ಮ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ, ಕಾರಣ ಕಾಣೆಯಾದ ನನ್ನ ಮಗ ಬಸವರಾಜ ತಂದೆ ಮಹಾಂತಗೌಡ ಬಿರಾದಾರ ವ|| 36  ಈತನನ್ನು ಹುಡುಕಿಕೊಡಲು ವಿನಂತಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 145/2020 ಕಲಂ: ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 


ಕೊಡೇಕಲ್  ಪೊಲೀಸ ಠಾಣೆ ಗುನ್ನೆ ನಂ:- 89/2020 279 ಐಪಿಸಿ : ದಿನಾಂಕ:21/09/2020 ರಂದು ಸಾಯಂಕಾಲ 04.00 ಗಂಟೆಯ ಸುಮಾರಿಗೆ ಆರೋಪಿತನು ತಾನು ಚಲಾಯಿಸುವ ಟಿಪ್ಪರ ನಂ:ಕೆಎ-28 ಸಿ-4976 ನೇದ್ದರಲ್ಲಿ ವ್ಹೈಟ್ ಮಿಕ್ಸರ್ ಹಾಕಿಕೊಂಡು ಕುಪ್ಪಿ ರೊಡಿಗೆ ಕೆಲಸಕ್ಕೆಂದು ತೆಗೆದುಕೊಂಡು ಹೊರಟಾಗ ಕುಪ್ಪಿ ರಸ್ತೆಯ ಮೇಲೆ ಆರೋಪಿತನು ತನ್ನ ಟಿಪ್ಪರನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿ ಎದುರುಗಡೆ ಕುರಿಗಳು ಬಂದಿದ್ದರಿಂದ ಅದೇ ವೇಗದಲ್ಲಿ ಟಿಪ್ಪರನ್ನು ಬಲಗಡೆ ಕಟ್ ಹೊಡೆದಿದ್ದರಿಂದ ನಿಯಂತ್ರಣ ತಪ್ಪಿ ಸದರಿ ಟಿಪ್ಪರ ರಸ್ತೆ ಬಲಗಡೆ ಪಲ್ಟಿ ಮಾಡಿದ್ದು, ಟಿಪ್ಪರ ಬಲಗಡೆ ಬಾಗಿಲು & ಮುಂಬಾಗದ ಬಲಗಡೆಯ ಬಾಗ ಹಾಗೂ ಕ್ಯಾಬಿನ್ ಡ್ಯಾಮೇಜ್ ಆಗಿದ್ದು, ಆರೋಪಿತನಿಗೆ & ಕ್ಲೀನರಿಗೆ ಯಾವುದೇ ಗಾಯವಗೈರೆ ಆಗಿರುವದಿಲ್ಲ, ಆರೋಪಿತನ ವಿರುದ್ದ ಕಾಯ್ದೆಸಿರಿ ಕ್ರಮ ಕೈಕೊಳ್ಳಲು ಕೊಟ್ಟ ದೂರು ಇರುತ್ತದೆ


ಹುಣಸಗಿ  ಪೊಲೀಸ ಠಾಣೆ ಗುನ್ನೆ ನಂ:- 90/2020 87  ಕೆ.ಪಿ ಯಾಕ್ಟ : ದಿನಾಂಕ:23/09/2020 ರಂದು 16.10 ಗಂಟೆಗೆ ಹುಣಸಗಿ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ಬಾಪುಗೌಡ ಪಾಟೀಲ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಬೆನಕನಹಳ್ಳಿ ಸೀಮಾಂತರದ ಯುಕೆಪಿ ಕೆನಾಲ ಹತ್ತಿರ ಖುಲ್ಲಾ ಜಾಗದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದು, ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:90/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ. ನಂತರ ಮಾನ್ಯ ಪಿ.ಎಸ್.ಐ ಸಾಹೇಬರಾದ ಶ್ರೀ ಬಾಪುಗೌಡ ಪಾಟೀಲ ರವರು ಠಾಣೆಗೆ 18.45 ಗಂಟೆಗೆ ಮರಳಿ ಠಾಣೆಗೆ ಬಂದು 4 ಜನ ಆರೋಪಿತರು & ನಗದು ಹಣ 6300/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ತಿಳಿಸಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ, 1)ಮಲ್ಲಿಕಾಜರ್ುನ ತಂದೆ ದೇವಿಂದ್ರಪ್ಪ ಅಪರಾಲ್ ವಯಾ-34 ವರ್ಷ ಜಾ:ಲಿಂಗಾಯತ ಉ:ಒಕ್ಕಲುತನ ಸಾ:ಗೋಡಿಹಾಳ(ಬಿ).  2)ನಾಗರಾಜ ತಂದೆ ಬಸವರಾಜ ಮರಾಠೀ ವಯಾ-23 ವರ್ಷ ಜಾ:ಮರಾಠ ಉ:ಒಕ್ಕಲುತನ ಸಾ:ವಜ್ಜಲ 3) ಬೀರಲಿಂಗ ತಂದೆ ರಾಯಣ್ಣ ಕೊಡೇಸೂರ ವಯಾ-24 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ದೇವತ್ಕಲ್ 4) ನಾಗೇಶ ತಂದೆ ಕನಕಪ್ಪ ದೊರಿ ವಯಾ-29 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಕಲ್ಲದೇವನಹಳ್ಳಿ ತಾ:ಹುಣಸಗಿಇರುತ್ತಾರೆ..

ಗೋಗಿ  ಪೊಲೀಸ ಠಾಣೆ ಗುನ್ನೆ ನಂ:- 104/2020   420 504, 506 ಸಂ: 340ಐಪಿಸಿ : ಇಂದು ದಿನಾಂಕ: 23/09/2020 ರಂದು 08.15 ಪಿಎಂ ಕ್ಕೆ ಗೋಗಿ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುವ ವಿಠೋಬಾ ಹೆಚ್.ಸಿ-91 ರವರು ಕೋರ್ಟ ಕರ್ತವ್ಯ ಮುಗಿಸಿಕೊಂಡು ಮರಳಿ ಠಾಣೆಗೆ ಬಂದು ಮಾನ್ಯ ನ್ಯಾಯಾಲಯದಿಂದ ವಸೂಲಾದ ಒಂದು ಖಾಸಗಿ ಪಿಯರ್ಾದಿ ಸಂ: 124/2020 ನೇದ್ದನ್ನು ತಂದು ಹಾಜರ ಪಡೆಸಿದ್ದು, ಸದರಿ ಖಾಸಗಿ ಪಿಯರ್ಾದಿ ಸಾರಂಶ ಏನಂದರೆ, ಆರೋಪಿ ನಂಬರ 1 ಹಾಗೂ 2 ಇಬ್ಬರು ಕೂಡಿಕೊಂಡು ಅಕ್ರಮವಾಗಿ ವಂಚನೆ ಮಾಡುವ ಉದ್ದೇಶದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹೆಸರಿನಲ್ಲಿ ಹೆಚ್ಚುವರಿಯಾಗಿ ಸಾಲವನ್ನು ಜಿಲ್ಲಾ ಸಹಕಾರ ಬ್ಯಾಂಕಿನಿಂದ 2017-2018 ರಲ್ಲಿ 22 ರೈತರ ಹೆಸರಿನಲ್ಲಿ 16,29,550 ಸಾಲವನ್ನು ಡಿ ಸೆಂಕ್ಷನ್ ಡಿಟೆಲ್ಸ ಆಜಾ ಪರ್ ಎಚ್.ಒ ಫಾರಮೆಟ್ ನಂತೆ ಮಂಜೂರಾತಿ ಪಡೆದುಕೊಂಡಿದ್ದಾರೆ. ಅದರಂತೆ ಬ್ಯಾಂಕ್ ಖಾತೆಯ ಸ್ಟೇಟ ಮೆಂಟ್ (1-4-2016 ರಿಂದ 30-06-2019) ವರೆಗೆ ಪಡೆದುಕೊಂಡು ನೋಡಿ ಪರಿಶಿಲಿಸಿದಾಗ ರು. 16,29,550 ಹಣ ಡ್ರಾ ಮಾಡಿಕೊಂಡಿರುವದು, ಬೆಳಕಿಗೆ ಬಂದಿದೆ. ಹೆಚ್ಚುವರಿ ಸಾಲ ಮಂಜೂರಾತಿಯಾಗಿದ್ದು, ಮತ್ತೆ ಪಿಯರ್ಾದಿದಾರರಿಗೆ ರೂ 74,800 ಬರಬೇಕಾಗಿತ್ತು, ಆದರೆ, ಆರೋಪಿ ನಂಬರ 1 ಹಾಗೂ 2 ಇಬ್ಬರು ಪಿಯರ್ಾದಿದಾರನಿಗೆ ಹಣ ನೀಡದೆ ವಂಚನೆ ಮಾಡಿ ಹಣ ಲಪಟಾಯಿಸಿದ್ದಾರೆ ಎಂಬುದು ಪಿಯರ್ಾದಿದಾರನ ಬಲವಾದ ಆರೋಪವಾಗಿದೆ. ಹೀಗಿರುವಾಗ ದಿನಾಂಕ: 20/08/2020 ರಮದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಪಿಯರ್ಾದಿದಾರನು ಗೋಗಿ ಕೆ ಗ್ರಾಮದ ಬಸ್ ನಿಲ್ದಾಣದ ಬಳಿ ಶಹಾಪೂರ ನಗರಕ್ಕೆ ಬರಲು ಸಾಕ್ಷಿದಾರ ಜೋತೆ ಮಾತಾಡುತ್ತಾ ನಿಂತಿರುವಾಗ ಅಲ್ಲಿಗೆ ಆರೋಪಿಗಳಾದ 1 ಹಾಗೂ 2 ಅವರು ಆಗಮಿಸಿ, ಪಿಯರ್ಾದಿದಾರನ ಜೋತೆ ವಾದಕ್ಕೆ ಇಳಿಯುತ್ತಾ ಲೇ ಬೋಸಡಿ ಮಗನ್ಯಾ ಉಮ್ಯಾ ಎಷ್ಟು ಸೋಕ್ಕು ನಿನಗೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಬ್ಯಾಂಕಿನಿಂದ ಹಚ್ಚುವರಿ ಹಣವನ್ನು ವಂಚನೆ ಮಾಡಿ ಹಣ ತಗೆದುಕೊಂಡಿದ್ದೇವೆ, ಈಗ ನೀನು ಏನು ಸೆಂಟ ಕಿತ್ತಿಕೊಳ್ಳಲು ಆಗುವದಿಲ್ಲ, ಯಾರಿಗೆ ದೂರು ಕೊಡುತಿ ನಾವು ನೋಡಿಕೊಳ್ಳುತ್ತೇವೆ. ಯಾರ ಮುಂದಾನ ವಂಚನೆ ಮಾಡಿ ಹಣ ತೆಗೆದುಕೊಂಡಾರ ಅಂತಾ ಹೇಳದಿ ಅಂದ್ರ ಪೆಟ್ರೋಲ ಹಾಕಿ ಸುಡುತ್ತೇವೆ ಎಂದು ಪಿಯರ್ಾದಿದಾರರನ್ನು ಅಡ್ಡಗಟ್ಟಿ ಹೊಡೆಯಲು ಯತ್ನಿಸಿದರು, ಆಗ ಸಾಕ್ಷಿದಾರರು ಪಿಯರ್ಾದಿದಾರನನ್ನು ಮತ್ತು ಆರೋಪಿಗಳಾದ 1 ಹಾಗೂ 2 ಅವರನ್ನು ಸಮಾದಾನಪಡಿಸಿ ಜಗಳ ಬಿಡಿಸಿದರು. ಆಗ ಆರೋಪಿಗಳು ನೋಡು ಇವರು ಬಂದು ಜಗಳ ಬಿಡಿಸಿಯಾರ ಅಂತ ನಿನ್ನ ಜೀವ ಉಳದಾದ ಇಲ್ಲಾ ಅಂದರ ಜೀವಸಹಿತ ಉಳಿತ್ತಿರಲಿಲ್ಲ ಎಂದು ಜೀವ ಬೆದರಿಕೆ ಹಾಕಿದರು. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 104/2020 ಕಲಂ, 420, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಗೋಗಿ  ಪೊಲೀಸ ಠಾಣೆ ಗುನ್ನೆ ನಂ:- 25/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ:23/09/2020 ರಂದು 03.30 ಪಿಎಂಕ್ಕೆ ನಾನು ಮತ್ತು ಶಂಕರೆಪ್ಪ ಎಎಸ್ಐ, ಶರಬಣ್ಣ ಹೆಚ್.ಸಿ-69 ಮತ್ತು ಹನುಮಂತ್ರಾಯ ಪಿಸಿ-331 ರವರು ಕೂಡಿ ಹಳ್ಳಿ ಬೆಟಿ ಮತ್ತು ಪೆಟ್ರೋಲಿಂಗ್ ಕುರಿತು ಹೋದಾಗ ಹೋಸ್ಕೇರಾ ಗ್ರಾಮದ ಬೇಟಿ ಮಾಡಿದ್ದು, ಆಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ಹೋಸ್ಕೆರಾ ಗ್ರಾಮದಲ್ಲಿನ ನಿವಾಸಿತರಾದ 1) ಭೀಮಣ್ಣ ತಂದೆ ಯಮನಪ್ಪ ನಾಗನಟಗಿ ವಯಾ:55 ಉ: ಒಕ್ಕಲುತನ ಜಾ: ಕುರುಬರ 2) ಮಾಳಪ್ಪ ತಂದೆ ಭೀಮಣ್ಣ ನಾಗನಟಗಿ ವಯಾ;25 ಉ: ಒಕ್ಕಲುತನ ಜಾ: ಕುರುಬರ 3) ಮರೆಪ್ಪ ತಂದೆ ನಾಗಪ್ಪ ಪಟೇಲರ ಬಯಾ: 55 ಉ: ಒಕ್ಕಲುತನ ಜಾ: ಬೇಡರ 4) ಸುರೇಶ ತಂದೆ ಮಾನಪ್ಪ ಪಟೇಲರ ವಯಾ: 30 ಉ: ಡ್ರೈವರ 5) ಭೀಮಣ್ಣ ತಂದೆ ಮರೆಪ್ಪ ಪಟೇಲ ವಯಾ: 27 ಉ: ಒಕ್ಕಲುತನ ಜಾ: ಬೇಡರ 6) ನಾಗರಾಜ ತಂದೆ ಮರೆಪ್ಪ ಪಟೇಲ ವಯಾ: 22 ಉ: ಅಟೋ ಡ್ರೈವರ ಜಾ: ಬೇಡರ ಎಲ್ಲರೂ ಸಾ: ಹೋಸ್ಕೇರಾ ಇವರುಗಳು, ಹೋಸ್ಕೇರಾ ಬಾಂಗ್ಲಾ ತಾಂಡಾದವರಾದ ಟೋಪು ತಂದೆ ಕಸನು ಜಾಧವ ಸಂಗಡ ಇತರರು, ಇವರೊಂದಿಗೆ ಹೋಸ್ಕೇರಾ ಗ್ರಾಮದ ಸೀಮಾಂತರ ಹೊಲ ಸವರ್ೇ ನಂ:223 ನೇದ್ದರಲ್ಲಿಯ 03.00 ಎಕರೆ ಜಮೀನು ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡಿರುತ್ತಾರೆ. ಸದರಿ ವಿಷಯದಲ್ಲಿ ಸದ್ಯ ಕೂಡ ಎರಡೂ ಪಾಟರ್ೀ ಜನರಲ್ಲಿ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ  ಇಬ್ಬರ ವಿರುದ್ಧ ಇಂದು ದಿನಾಂಕ:23/09/2020 ರಂದು 06.30 ಪಿಎಮ್ ಕ್ಕೆ ಠಾಣೆ ಪಿ.ಎ.ಆರ್ ನಂ: 25/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ


 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!