ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/09/2020
ವಡಗರಾ ಪೊಲೀಸ ಠಾಣೆ ಗುನ್ನೆ ನಂ:- 16/2020 174 ಸಿ.ಆರ್.ಪಿ.ಸಿ : ಮೃತ ಕಾಸಿಂಸಾಬ ತಂದೆ ಜಲಾಲಸಾಬ ಯಾದಗಿರಿ ಸಾ:ಕೋಡಾಲ ಈತನು ಕೋಡಾಲ ಸೀಮಾಂತರದಲ್ಲಿ ಸವರ್ೆ ನಂ. 138 ರಲ್ಲಿ 6 ಎಕರೆ 6 ಗುಂಟೆ ಜಮೀನು ಹೊಂದಿದ್ದು, ಸದರಿ ಜಮೀನಿನಲ್ಲಿ ಹತ್ತಿ ಬೆಳೆ ಬೆಳೆಯುವ ಕುರಿತು ಬೀಜ ಗೊಬ್ಬರಕ್ಕೆ ಮತ್ತು ಇತರ ಖಚರ್ಿಗೆ ಅಂತಾ ಯಾದಗಿರಿ ಐ.ಸಿ.ಐ.ಸಿ.ಐ ಬ್ಯಾಂಕಿನಲ್ಲಿ 5 ಲಕ್ಷ ರೂ. ಸಾಲ ಮಾಡಿದ್ದು, ಅಲ್ಲದೆ ಊರಿನಲ್ಲಿ ಕೈಗಡ ಅಂತಾ ಸುಮಾರು 3 ಲಕ್ಷ ರೂ. ಸಾಲ ಮಾಡಿಕೊಂಡಿರುತ್ತಾನೆ. ಆದರೆ ಇತ್ತಿಚ್ಚೆಗೆ ವಿಪರಿತ ಮಳೆಯಾಗಿ ಬೆಳೆದ ಹತ್ತಿ ಬೆಳೆಯಲ್ಲಿ ನೀರು ನಿಂತಿದ್ದರಿಂದ ಹತ್ತಿ ಬೆಳೆಯು ಕೊಳೆತು ನಾಶವಾಗುವ ಹಂತಕ್ಕೆ ಬಂದು ತಲುಪಿದ್ದರಿಂದ ಮಳೆ ಜಾಸ್ತಿಯಾಗಿ ಹತ್ತಿ ಬೆಳೆ ನಾಶವಾಗುತ್ತಿದೆ. ನಾನು ಬೀಜ ಗೊಬ್ಬರಕ್ಕೆ ಮಾಡಿದ ಸಾಲ ಹೇಗೆ ತೀರಿಸಲಿ ಎಂದು ತುಂಬಾ ಚಿಂತೆ ಮಾಡುತ್ತಿದ್ದಾಗ ಅವನ ಹೆಂಡತಿ ಮಕ್ಕಳು ಮುಂದೆ ಮಳೆ ಬೆಳೆ ಸರಿಯಾಗಿ ಆದಾಗ ತೀರಿಸಿದರಾಯ್ತು ಎಂದು ಹೇಳಿದರು ಕೂಡಾ ಅವನು ಕೇಳದೆ ತುಂಬಾ ಚಿಂತಾಕ್ರಾಂತನಾಗುತ್ತಿದ್ದನು. ನಿನ್ನೆ ದಿನಾಂಕ: 20/09/2020 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ತನ್ನ ಹತ್ತಿ ಹೊಲಕ್ಕೆ ಹೋಗಿ ಬೆಳೆಯಲ್ಲಿ ನೀರು ನಿಂತಿದ್ದನ್ನು ನೋಡಿ ಮನೆಗೆ ಬಂದು ತನ್ನ ಹೆಂಡತಿಗೆ ಹತ್ತಿ ಬೆಳೆಗೆ ಮಳೆ ಜಾಸ್ತಿಯಾಗಿ ಹೊಲದಲ್ಲಿ ನೀರು ನಿಂತಿದೆ. ಹೀಗಾಗಿ ನಾನು ಮಾಡಿದ ಸಾಲ ಹೇಗೆ ತೀರಿಸಲಿ ಎಂದು ಹೇಳಿ ಚಿಂತೆ ಮಾಡುತ್ತಿದ್ದನು. ಆ ನಂತರ ಅವನ ಹೆಂಡತಿ ಮುಮ್ತಾಜ ಅಡಿಗೆ ಮಾಡುತ್ತಿದ್ದಾಗ ಮೃತ ಕಾಸಿಂಸಾಬನು 6-30 ಪಿಎಮ್ ಸುಮಾರಿಗೆ ತನ್ನ ಮನೆಯ ಜಗಲಿ ಮೇಲಿದ್ದ ಕ್ರಿಮಿನಾಶಕವನ್ನು ಸೇವನೆ ಮಾಡಿ ಒದ್ದಾಡುವುದನ್ನು ಅವನ ಮಗಳು ರಜಿಯಾ ಕಂಡು ತನ್ನ ತಾಯಿಗೆ ಹೇಳಿದಾಗ ಆತನಿಗೆ ಉಪಚಾರ ಕುರಿತು ವಡಗೇರಾದಲ್ಲಿ ತೋರಿಸಿ, ಯಾದಗಿರಿ ಸೌದಾಗರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ರಾತ್ರಿ 10-30 ಪಿಎಮ್ ಸುಮಾರಿಗೆ ಕಾಸಿಂಸಾಬನು ಮೃತಪಟ್ಟಿರುತ್ತಾನೆ. ಮೃತನು ತನ್ನ ಹೊಲದಲ್ಲಿ ಬಿತ್ತಿ ಬೆಳೆಯುವ ಕುರಿತು ಮಾಡಿದ ಸಾಲ ಹೇಗೆ ತೀರಿಸಲಿ ಅಂತಾ ಚಿಂತೆ ಮಾಡಿ ಕ್ರಿಮಿನಾಶಕ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ-ಫಿರ್ಯಾಧಿ ವೈಗೆರೆ ಇರುವುದಿಲ್ಲ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 16/2020 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 114/2020 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 21/09/2020 ರಂದು 5 ಪಿ.ಎಮ್.ಕ್ಕೆ ಮದ್ರಕಿ ಸೀಮಾಂತರದಲ್ಲಿನ ಫಾರೆಸ್ಟ್ ಹೊಲದಲ್ಲಿ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6.45 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 04 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 90300/- ರೂ, 52 ಇಸ್ಪೇಟ ಎಲೆಗಳು, 3 ಮೋಟರ್ ಸೈಕಲಗಳು, 01 ಅಟೋ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.