ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/09/2020

By blogger on ಬುಧವಾರ, ಸೆಪ್ಟೆಂಬರ್ 23, 2020                                    ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/09/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 83/2020 ಕಲಂ; 417, 419 ಐಪಿಸಿ : ಇಂದು ದಿನಾಂಕ; 20/09/2020 ರಂದು 3-00 ಪಿಎಮ್ ಕ್ಕೆ ಶ್ರೀ ಮಂಜುನಾಥ ಆರ್.ವಿ ಪಿ.ಐ ಎಸ್.ಸಿ.ಆರ್.ಬಿ ಬೆಂಗಳೂರು ಕ್ಯಾಂಪ ಯಾದಗಿರಿ ರವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಸಲ್ಲಿಸಿದ್ದೆನೆಂದರೆ, ನಾನು ಮಾನ್ಯ ಪೊಲೀಸ ಅಧಿಕ್ಷಕರು ರಾಜ್ಯ ಅಪರಾಧ ದಾಖಲಾತಿ ವಿಭಾಗ ಬೆಂಗಳೂರು ರವರ ಆದೇಶದಂತೆ ಪೊಲೀಸ ಕಾನ್ಸಟೇಬಲ್(ಸಿವಿಲ್) (ಕಲ್ಯಾಣ ಕನರ್ಾಟಕ) (ಪುರುಷ & ಮಹಿಳಾ) 558 ಹುದ್ದೆಗಳ ಲಿಖಿತ ಪರಿಕ್ಷೆ ದಿನಾಂಕ; 20/09/2020 ರಂದು ನಿಗದಿಪಡಿಸಿದ್ದರಿಂದ ಲಿಖಿತ ಪರಿಕ್ಷೇಗೆ ಉಸ್ತುವಾರಿ ಮತ್ತು ಬಂದೊಬಸ್ತ ಸಲುವಾಗಿ ದಿನಾಂಕ; 19/09/2020 ರಂದು 10-30 ಎಎಮ್ ಕ್ಕೆ ಮಾನ್ಯ ಪೊಲೀಸ ಅಧಿಕ್ಷಕರು ಯಾದಗಿರಿ ಜಿಲ್ಲೆ ರವರ ಮುಂದೆ  ವರದಿ ಮಾಡಿಕೊಂಡಿದ್ದು ಇರುತ್ತದೆ. ಅದರಂತೆ ನನಗೆ ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರು ಯಾದಗಿರಿ ನಗರದ ಹತ್ತಿಕುಣಿ ರಸ್ತೆಗೆ ಬರುವ ಶ್ರೀ ಮಹಾತ್ಮ ಗಾಂಧಿ ಫ್ರೌಡ ಶಾಲೆಗೆ ನೇಮಕ ಮಾಡಿದ್ದು ಇರುತ್ತದೆ. ಇಂದು ದಿನಾಂಕ; 20/09/2020 ರಂದು 7-00 ಎಎಮ್ ಕ್ಕೆ ಪೊಲೀಸ ಕಾನ್ಸಟೇಬಲ್(ಸಿವಿಲ್) (ಕಲ್ಯಾಣ ಕನರ್ಾಟಕ) (ಪುರುಷ & ಮಹಿಳಾ) 558 ಹುದ್ದೆಗಳ ಲಿಖಿತ ಪರಿಕ್ಷೆ ಕುರಿತು ಶ್ರೀ ಮಹಾತ್ಮ ಗಾಂಧಿ ಫ್ರೌಡ ಶಾಲೆಯಲ್ಲಿ ಬಂದೋಬಸ್ತ ಮತ್ತು ಉಸ್ತುವಾರಿ ಕರ್ತವ್ಯಕ್ಕಾಗಿ ಬಂದಿದ್ದು ಸಂಗಡ ಶ್ರೀ ವಿಜಯಕುಮಾರ ಪಿ.ಎಸ್.ಐ ಡಿ.ಸಿ.ಬಿ ಘಟಕ ಯಾದಗಿರಿ, ಶ್ರೀಮಂತ ಸಿಂಘೆ ಸಿ.ಹೆಚ್.ಸಿ-141 ಡಿ.ಸಿ.ಬಿ ಘಟಕ  ರವರು ಇದ್ದು ಶ್ರೀ ಮಹಾತ್ಮ ಗಾಂಧಿ ಶಾಲೆಯಲ್ಲಿ ಒಟ್ಟು 240 ಅಭ್ಯಥರ್ಿಗಳ ಲಿಖಿತ ಪರೀಕ್ಷೆ ಇದ್ದು 11-00 ಎಎಮ್ ದಿಂದ 12-30 ಪಿಎಮ್ ದವರೆಗೆ ಪರೀಕ್ಷಾ ಅವಧಿ ನಿಗದಿ ಸಮಯವಿದ್ದು ಆ ಕಾಲಕ್ಕೆ ಅಂದಾಜು ಸಮಯ 11-08 ಎಎಮ್ ಸುಮಾರಿಗೆ ನಾನು ಪರೀಕ್ಷಾ ಕೇಂದ್ರದ ರೂಮ ನಂ. 08 ರಿಂದ, ರೂಮ್ ನಂ.06 ರ ಕಡೆಗೆ ಬರುವಾಗ ಅಲ್ಲಿ ರೂಮ್ ನಂ. 06 ರ ಕೊಠಡಿ ಪರಿವೀಕ್ಷಕಿರವರಾದ ಕು. ಅಫ್ರೀನ್ ಶಿಕ್ಷಕರು  ತಿಳಿಸಿದ್ದೆನೆಂದರೆ, ಬೆಳೆಗ್ಗೆ 11-00 ಗಂಟೆಗೆ ಲಿಖಿತ ಪರೀಕ್ಷೆಗಳು ಪ್ರಾರಂಭವಾಗಿದ್ದು ಹಾಜರಿದ್ದ ಅಭ್ಯಥರ್ಿಗಳಿಗೆ ಪ್ರಶ್ನಾ ಪತ್ರಿಕೆ ಹಾಗೂ ಓ.ಎಮ್.ಆರ್ ಶೀಟಗಳನ್ನು ಕೊಟ್ಟಿದ್ದು ನಂತರ, 11-05 ಎಎಮ್ ಕ್ಕೆ ಮರೆಪ್ಪ ಎಂಬ ಅಭ್ಯಥರ್ಿಯು ಪರೀಕ್ಷೆ ಬರೆಯಲು ರೂಮಿನ ಒಳಗಡೆ ಬಂದು ಗೈರು ಹಾಜರಿದ್ದ ಅಭ್ಯಥರ್ಿಯ ರೂಲ್ ನಂ.5437072 ನೇದ್ದರ ಸ್ಥಾನದಲ್ಲಿ ಕುಳಿತಿದ್ದನು. ಆಗ ನಾನು ಮರೆಪ್ಪ ಈತನ ಪ್ರವೇಶ ಪತ್ರ ಪರಿಶೀಲಿಸಲು ಪ್ರವೇಶ ಪತ್ರ ಇರಲಿಲ್ಲ. ತನ್ನ ಹತ್ತಿರವಿದ್ದ ಅಪ್ಲಿಕೇಷನ್ ಫಾರ್ಮ ಪ್ರತಿ ತೋರಿಸಿದ್ದು ಈ ವ್ಯಕ್ತಿಯು ರೋಲ ನಂ.5437077 ನೇದ್ದರ ಅಭ್ಯಥರ್ಿಯಾಗಿದ್ದು, ರೂಲ ನಂ.5437077 ರಲ್ಲಿ ಈ ಮೊದಲೇ ಒಬ್ಬ ಅಭ್ಯಥರ್ಿಯು ಲಿಖಿತ ಪರೀಕ್ಷೆ ಬರೆಯಲು ಕುಳಿತಿದ್ದಾಗಿ ನನಗೆ ತಿಳಿಸಿದರು. ಆಗ ನಾನು ಕೊಠಡಿ ನಂ.06 ನೇದ್ದರಲ್ಲಿ ಹೋಗಿ ಪರಿಶೀಲಿಸಲು ದೇವರಾಜ ಈತನ ಹತ್ತಿರ ಇದ್ದ ಪ್ರವೇಶ ಪತ್ರ ದಾಖಲಾತಿ ಹಾಗೂ ಆತನ ತಮ್ಮ ಮರೆಪ್ಪ ಈತನ ಪ್ರವೇಶ ಪತ್ರದ ದಾಖಲಾತಿ ಪರಿಶೀಲಿಸಲು ದೇವರಾಜ ಈತನ ಹತ್ತಿರ ತನ್ನ ತಮ್ಮನಾದ ಮರೆಪ್ಪ ಈತನ ಪರೀಕ್ಷಾ ಪ್ರವೇಶ ಪತ್ರ ಹಾಗೂ ತನ್ನ ತಮ್ಮನ ಆಧಾರ ಕಾರ್ಡ ಇದ್ದವು. ನಂತರ ಆತನ ತಮ್ಮ ಮರೆಪ್ಪ ಈತನ ಹತ್ತಿರ ತನ್ನ ಅಜರ್ಿಯ ಅಪ್ಲಿಕೇಷನ ನಂ.3392291, ಕ್ರಮ ಸಂಖ್ಯೆ.2717 ನೇದ್ದು ಪ್ರತಿ ಹಾಗೂ ತನ್ನ ಆಧಾರ ಕಾರ್ಡ ಇದ್ದವು. ದೇವರಾಜ ಈತನಿಗೆ ವಿಚಾರಿಸಲು ತನ್ನ ಹೆಸರು ದೇವರಾಜ ತಂದೆ ಮಲ್ಲಪ್ಪ ಹೆಗ್ಗಣಗೇರಿ ಉ; ಪೊಲೀಸ ಕಾನ್ಸಟೇಬಲ್ ಸಾ; ಕದರಾಪೂರ ಅಂತಾ ತಿಳಸಿ ತಾನು ಚಿಕ್ಕಬಳ್ಳಾಪೂರ ಜಿಲ್ಲೆಯ ಬಾಗೆಪಲ್ಲಿ ಪೊಲೀಸ ಠಾಣೆಯಲ್ಲಿ ಪೊಲೀಸ ಕಾನ್ಸಟೇಬಲ್ ಆಗಿರುವುದಾಗಿ ತಿಳಿಸಿದ್ದು ತನ್ನ ತಮ್ಮ ಮರೆಪ್ಪ ತಂದೆ ಮಲ್ಲಪ್ಪ ಹೆಗ್ಗಣಗೇರಿ ಈತನಿಗೆ ಪೊಲೀಸ್ ಕಾನ್ಸಟೇಬಲ್ ಕೆಲಸ ಸಿಗಬೇಕೆಂಬ ಉದ್ದೇಶದಿಂದ ಆತನ ಬದಲು ನಾನು ಆತನ ಪರವಾಗಿ ಪೊಲೀಸ ಕಾನ್ಸಟೇಬಲ ಹುದ್ದೆಯ ಸ್ಪಧರ್ಾತ್ಮಕ ಲಿಖಿತ ಪರೀಕ್ಷೆ ಬರೆಯಲು ಬಂದಿರುತ್ತೇನೆ ಅಂತಾ ತಿಳಿಸಿದನು.ದೇವರಾಜ ಈತನು ತನ್ನ ತಮ್ಮನ ಪ್ರವೇಶ ಪತ್ರದ ರೂಲ್ ನಂ.5437077 ನೇದ್ದು ಪ್ರಶ್ನೇ ಪತ್ರಿಕೆ (ಬಿ) ಸಿರಿಸ್ ಬಳಸಿಕೊಂಡು ತಾನೇ ಮರೆಪ್ಪನಂತೆ ನಟಿಸಿ ತನ್ನ ತಮ್ಮನ ಸ್ಥಾನದಲ್ಲಿ ಕುಳಿತುಕೊಂಡು ಪೊಲೀಸ ಕಾನ್ಸಟೇಬಲ್(ಸಿವಿಲ್) (ಕಲ್ಯಾಣ ಕನರ್ಾಟಕ) (ಪುರುಷ & ಮಹಿಳಾ) 558 ಹುದ್ದೆಗಳ ಲಿಖಿತ ಪರೀಕ್ಷೆ ಬರೆಯಲು ಕುಳಿತು ತನ್ನ ತಮ್ಮ ಮರೆಪ್ಪನಂತೆ ನಟಿಸಿ, ಓ.ಎಮ್.ಆರ್ ಶೀಟಗಳನ್ನು ಬಳಸಿಕೊಂಡು ಅಣ್ಣತಮ್ಮರಿಬ್ಬರು ಪರೀಕ್ಷಾ ಕೊಠಡಿ ಒಳಗಡೆ ಇದ್ದು ಪರಿಕ್ಷೇ ಬರೆದು ವಂಚನೆ ಮಾಡಿದ್ದು ದೇವರಾಜ ಈತನು ಶಿಸ್ತಿನ ಪೊಲೀಸ ಇಲಾಖೆಯಲ್ಲಿದ್ದು ತನ್ನ ತಮ್ಮನಿಗೆ ಸರಕಾರಿ ನೌಕರಿ ಗಿಟ್ಟಿಸಿಕೊಳ್ಳುವುದಕ್ಕಾಗಿ ತನ್ನ ತಮ್ಮನೊಂದಿಗೆ ಶಾಮೀಲಾಗಿ ಪರೀಕ್ಷಾ ಕೇಂದ್ರದಲ್ಲಿ ತನ್ನ ತಮ್ಮನ ಪ್ರವೇಶ ಪತ್ರವನ್ನು ಮತ್ತು ಆಧಾರ ಕಾರ್ಡನ್ನು ಬಳಸಿಕೊಂಡು ತನ್ನ ತಮ್ಮ ಮರೆಪ್ಪ ಈತನಿಗೆ ಕೊಠಡಿ ಒಳಗೆ ಗೈರು ಹಾಜರಿದ್ದ ಅಭ್ಯಥರ್ಿಯ ಸ್ಥಳದಲ್ಲಿ ಕೂಡಿಸಿರುತ್ತಾನೆ. ಪೊಲೀಸ ಇಲಾಖೆಯವರು ಸೂಕ್ತ ಕಟ್ಟುನಿಟ್ಟಿನ ಬಂದೋಬಸ್ತ ಮತ್ತು ಪರೀಕ್ಷಾ ಕೊಠಡಿಯೊಳಗೆ ವಿಡಿಯೋ ಚಿತ್ರೀಕರಣ ಬಂದೋಬಸ್ತ ಮಾಡಿದ್ದರೂ ಕೂಡಾ ಇಲಾಖೆಯ ಕಣ್ಣಿಗೆ ಮಣ್ಣೆರಚಿ ವಂಚನೆ ಮಾಡಿರುತ್ತಾರೆ. ನಂತರ ಆರೋಪಿತರಾದ ದೇವರಾಜ ಮತ್ತು ಮರೆಪ್ಪ ರವರಗಳನ್ನು ಭಾಗಣ್ಣ ಎ.ಎಸ್.ಐ ಶೋರಾಪೂರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರ ಬೆಂಗಾವಲಿನಲ್ಲಿ   ಯಾದಗಿರಿ ನಗರ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿರುತ್ತೇನೆ. ಆರೋಪಿತನಾದ ದೇವರಾಜ ಎಂಬುವವನಿಗೆ ನೀಡಲಾಗಿದ್ದ ಮೂಲ ಪ್ರಶ್ನೆ ಪತ್ರಿಕೆ (ಬಿ) ಸಿರಿಸ್ ಮತ್ತು ಓ.ಎಂ.ಆರ್.ಶೀಟ ನಂ. 5437077 ಹಾಗೂ ಅವನ ತಮ್ಮ ಮರೆಪ್ಪ ಎಂಬುವವನು ಕುಳಿತು ಪರೀಕ್ಷೆ ಬರೆಯಲು ಪ್ರಯತ್ನಿಸಿದ್ದ ಸ್ಥಳದಲ್ಲಿ ಹಾಜರಾಗಬೇಕಿದ್ದ, ಗೈರು ಹಾಜರಿದ್ದ ಮತ್ತೊಬ್ಬ ಅಭ್ಯಥರ್ಿಯಾದ ಮಹಾದೇವಪ್ಪಗೆ ಸಂಭಂದಪಟ್ಟ ಈತನ ರೋಲ್ ನಂ.5437072 ರವರ ಪ್ರಶ್ನೇ ಪತ್ರಿಕೆ ಮತ್ತು ಓ.ಎಂ.ಆರ್.ಶೀಟಗಳನ್ನು ಮಾನ್ಯ ಎಸ್.ಪಿ.ಸಾಹೇಬರು ಯಾದಗಿರಿ ರವರ ಕಛೆರಿಗೆ ಮುಂದಿನ ಕ್ರಮಕ್ಕಾಗಿ ನೀಡಿರುತ್ತೇನೆ. ನಾನು ಇಂದು ನಡೆದ ಪೊಲೀಸ್ ಕಾನ್ಸಟೇಬಲ ರವರ ಪರೀಕ್ಷೆ ಪ್ರಕ್ರೀಯೆಗಳೆಲ್ಲವನ್ನು ಮುಗಿಸಿಕೊಂಡು  ಯಾದಗಿರಿ ನಗರ ಪೊಲೀಸ್ ಠಾಣೆಗೆ ಕರೆತಂದು ಹಾಜರುಪಡಿಸಿ, ಠಾಣೆಯಲ್ಲಿ ದೂರು ಸಲ್ಲಿಸುತ್ತಿದ್ದು ದೂರು ದಾಖಲಿಸಿಕೊಂಡು ಕ್ರಮಕೈಕೊಳ್ಳಲು ಸೂಚಿಸಿದ್ದರಿಂದ ಠಾಣೆಯ ಗುನ್ನೆ ನಂ.83/2020 ಕಲಂ.417, 419 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 108/2020 ಕಲಂ: 379 ಐಪಿಸಿ : ಇಂದು ದಿನಾಂಕ: 20/09/2020 ರಂದು 4-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 20/09/2020 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ನಾನು ವಡಗೇರಾ ಕ್ರಾಸ ಹತ್ತಿರ ಇದ್ದಾಗ ಗುರುಸಣಗಿ ಸೀಮಾಂತರದಲ್ಲಿ ಹಳ್ಳದಿಂದ ಟ್ರ್ಯಾಕ್ಟರನಲ್ಲಿ ಕಳ್ಳತನದಿಂದ ಮರಳನ್ನು ತುಂಬಿ ಸಾಗಿಸುತ್ತಿರುವುದಾಗಿ ಖಚಿತ ಬಾತ್ಮಿ ಬಂದಿರುತ್ತದೆ. ಆಗ ನಾನು ಮತ್ತು ಸಿಬ್ಬಂದಿಯವರಾದ 1) ಪ್ರಕಾಶ ಹೆಚ್.ಸಿ 18 (ಪಿ) ಮತ್ತು 2) ಸೈದಪ್ಪ ಹೆಚ್.ಸಿ 34 ರವರೊಂದಿಗೆ ಸಕರ್ಾರಿ ಜೀಪ ನಂ. ಕೆಎ-33-ಜಿ-115 ನೆದ್ದರಲ್ಲಿ ಹೊರಟು 3-15 ಪಿಎಮ್ ಸುಮಾರಿಗೆ ಗುರುಸಣಗಿ-ಮಾಳಳ್ಳಿ ರೋಡ ಹುಲಕಲ್ (ಜೆ) ಗ್ರಾಮಕ್ಕೆ ಹೋಗುವ ಕ್ರಾಸ ರೋಡಿನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಬರುವುದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಸದರಿ ಟ್ರ್ಯಾಕ್ಟರ ನಿಲ್ಲಿಸಲು ಹೋದಾಗ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ಅನ್ನು ಅಲ್ಲಿಯೇ ರಸ್ತೆ ಪಕ್ಕದಲ್ಲಿ ನಿಲ್ಲಿಸಿ, ಓಡಿ ಹೋದನು. ಅವನ ಹಿಂದೆ ಬೆನ್ನತ್ತಿದರೂ ಸಿಗಲಿಲ್ಲ. ಸದರಿ ಟ್ರ್ಯಾಕ್ಟರ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಟ್ರ್ಯಾಕ್ಟರ ನಂಬರ ನೋಡಲಾಗಿ ನಂ. ಕೆಎ 33 ಟಿ 1731 ಮತ್ತು ಟ್ರ್ಯಾಲಿ ನಂ. ಇರುವುದಿಲ್ಲ. ಸದರಿ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಮರಳು ತುಂಬಿದ್ದು, ಅಂದಾಜು ಕಿಮ್ಮತ್ತು 1200/- ರೂ. ಆಗಬಹುದು ಸದರಿ ಟ್ರ್ಯಾಕ್ಟರ ಚಾಲಕನು ಅಕ್ರಮವಾಗಿ ಮತ್ತು ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ನಾವು ದಾಳಿ ಮಾಡಿದಾಗ ಟ್ರ್ಯಾಕ್ಟರ ಚಾಲಕನು ತಮ್ಮ ಹತ್ತಿರ ರಾಯಲ್ಟಿ ವೈಗೆರೆ ದಾಖಲಾತಿ ಇಲ್ಲದ ಕಾರಣ ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ನಿಮಗೆ ದೂರು ನಿಡಿದ್ದು, ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 108/2020 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 109/2020 ಕಲಂ: 87 ಕೆ.ಪಿ ಎಕ್ಟ್ : 20/09/2020 ರಂದು 4-45 ಪಿಎಮ್ ಕ್ಕೆ ಪಿ.ಎಸ್.ಐ (ಅವಿ) ವಡಗೇರಾರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 20/09/2020 ರಂದು 2:00 ಪಿಎಂ ಸುಮಾರಿಗೆ ನಾನು ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ತಡಿಬಿಡಿ ಗ್ರಾಮದ ಹೊರಗಡೆ ಸರಕಾರಿ ಪ್ರೌಢ ಶಾಲೆ ಹತ್ತಿರ ರಸ್ತೆಯ ಪಕ್ಕದ ಜಾಲಿಗಿಡದ ಪಕ್ಕದ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ 1) ಮರೆಪ್ಪ ಹೆಚ್.ಸಿ 18, 2) ಪ್ರಕಾಶ ಹೆಚ್.ಸಿ 18, 3) ರಾಜಶೇಖರ ಪಿಸಿ 177 ಮತ್ತು 4) ಸಾಬರೆಡ್ಡಿ ಪಿಸಿ 290 ಇವರೊಂದಿಗೆ ಖಾಸಗಿ ಕ್ರೂಷರ ಜೀಪ ನಂ. ಕೆಎ 33/ 3767 ಎಮ್ ನೇದ್ದರಲ್ಲಿ ಕೂಡಿಸಿಕೊಂಡು 2-30 ಪಿಎಂ ಕ್ಕೆ ವಡಗೇರಾ ಠಾಣೆಯಿಂದ ಹೊರಟು 3:00 ಪಿ.ಎಂ. ಕ್ಕೆ ತಡಿಬಿಡಿ ಕ್ರಾಸ ಹತ್ತಿರ ರಸ್ತೆಯ ಹತ್ತಿರ ರೋಡಿನ ಮೇಲೆ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಸರಕಾರಿ ಪ್ರೌಢ ಶಾಲೆಯನ್ನು ಮರೆಯಾಗಿ ಹಿಂದಿನಿಂದ ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎನ್ನುವ ಇಸ್ಪಿಟ್ ಜೂಜಾಟವನ್ನು ಹಣ ಪಣಕ್ಕಿಟ್ಟು, ಆಡುವುದನ್ನು ನೋಡಿ ಖಚಿತಪಡಿಸಿಕೊಂಡು ಡ3-15 ಪಿಎಮ್ ಕ್ಕೆ ಒಮ್ಮೆಲೆ ಇಸ್ಪಿಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿ ಹಿಡಿಯಲಾಗಿ ಇಸ್ಪೀಟ್ ಆಡುತ್ತಿದ್ದ ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ವಶಕ್ಕೆ ಪಡೆದುಕೊಂಡ ಜನರನ್ನು ವಿಚಾರಿಸಲಾಗಿ ತಮ್ಮ ಹೆಸರು 1) ಬಸವರಾಜಪ್ಪ ತಂದೆ ಶರಣಪ್ಪ ಖನ್ನಗೊಂಡ, ವ:60, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಸಗರ ತಾ:ಶಹಾಪೂರ ಈತನ ಹತ್ತಿರ ನಗದು ಹಣ 980/- ರೂ ಮತ್ತು 21 ಇಸ್ಪೀಟ್ ಎಲೆಗಳು 2) ಚಂದ್ರಾಮಪ್ಪ ತಂದೆ ಭಾಗಣ್ಣ ನಾಲ್ವಡಗಿ, ವ:55, ಜಾ:ಕುರುಬರ, ಉ:ಒಕ್ಕಲುತನ ಸಾ:ತಡಿಬಿಡಿ ಈತನ ಹತ್ತಿರ ನಗದು ಹಣ 835/- ರೂ, 3) ಶೇಖರ ತಂದೆ ಮರೆಪ್ಪ ಶಿರವಾರ, ವ:38, ಜಾ:ಮಾದಿಗ, ಉ:ಡ್ರೈವರ ಸಾ:ಹಿರೆಅಗಸಿ ಯಾದಗಿರಿ ಈತನ ಹತ್ತಿರ ನಗದು ಹಣ 550/- ರೂ, 4) ಚಂದ್ರಶೇಖರ ತಂದೆ ಯಂಕಪ್ಪ ದೊರೆ, ವ:49, ಜಾ:ದೊರೆ, ಉ:ಒಕ್ಕಲುತನ ಸಾ:ವಾಲ್ಮೀಕಿ ಚೌಕ ಶೋರಾಪೂರ ಈತನ ಹತ್ತಿರ ನಗದು ಹಣ 750/- ರೂ, 5) ಶೇಖರ ತಂದೆ ಮಲ್ಲಪ್ಪ ಬಳಗಾರ, ವ:40, ಜಾ:ಲಿಂಗಾಯತ, ಉ:ವ್ಯಾಪಾರ ಸಾ:ಶಹಾಪೂರ ಈತನ ಹತ್ತಿರ ನಗದು ಹಣ 625/- ರೂ., 6) ದೇವಿಂದ್ರ ತಂದೆ ಭೀಮಣ್ಣ ಬುಡಾಯಿನೋರ, ವ:42, ಜಾ:ದೊರೆ, ಉ:ವ್ಯಾಪಾರ ಸಾ:ವಾಲ್ಮೀಕಿ ನಗರ ಯಾದಗಿರಿ ಈತನ ಹತ್ತಿರ ನಗದು ಹಣ 720/- ರೂ., 7) ಶಿವಕುಮಾರ ತಂದೆ ಭೀಮಪ್ಪ ಪೂಜಾರಿ, ವ:45, ಜಾ:ಕುರುಬರ, ಉ:ಡ್ರೈವರ ಸಾ:ಸ್ಟೇಷನ ಏರಿಯಾ ಯಾದಗಿರಿ ಈತನ ಹತ್ತಿರ ನಗದು ಹಣ 380/- ರೂ. ಅಂತಾ ಹೇಳಿದರು. ಸ್ಥಳದಲ್ಲಿ ಎಲ್ಲರ ಮಧ್ಯೆ 31 ಇಸ್ಪಿಟ್ ಎಲೆಗಳು ಮತ್ತು 1420/- ರೂ ಹೀಗೆ ಒಟ್ಟು 6260/- ರೂ. ಗಳು ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳು ದೊರೆತವು. ದಾಳಿಯ ಬಗ್ಗೆ 3-15 ಪಿಎಮ್ ದಿಂದ 4-15 ಪಿಎಮ್ ದ ವರೆಗೆ ಜಪ್ತಿಪಂಚನಾಮೆಯನ್ನು ಕೈಗೊಂಡು ಮೇಲ್ಕಂಡ ಆರೋಪಿತರನ್ನು ಮತ್ತು ಮುದ್ದೇಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ಕೊಟ್ಟಿದ್ದರಿಂದ 6-45 ಪಿಎಮ್ ಕ್ಕೆ ಗುನ್ನೆ ನಂ. 109/2020 ಕಲಂ: 87 ಕೆ.ಪಿ ಎಕ್ಟ 1963 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 121/2020 ಕಲಂ 32,34 ಕೆ,ಇ ಯಾಕ್ಟ್ : ಇಂದು ದಿನಾಂಕ: 20-09-2020 ರಂದು 06-45 ಪಿ.ಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಕಡೆಚೂರ ಗ್ರಾಮದ ಕನಕ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮದ್ಯದ ಪಾಕೆಟಗಳನ್ನು ವಶಕ್ಕೆ ಪಡೆದುಕೊಂಡು ಜ್ಞಾಪನ ಪತ್ರದೊಂದಿಗೆ ಮದ್ಯದ ಪಾಕೆಟಗಳನ್ನು ಮತ್ತು ಜಪ್ತಿಪಂಚನಾಮೆಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ. 121/2020 ಕಲಂ. 32, 34 ಕೆ.ಇ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!