ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/09/2020
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 113/2020 ಕಲಂ 379 ಐಪಿಸಿ : ಇಂದು ದಿನಾಂಕ: 19/09/2020 ರಂದು 1.30 ಪಿ.ಎಮ್.ಕ್ಕೆ ಶ್ರೀ ನಾಗೇಂದ್ರ ತಂದೆ ಮಲ್ಲಿಕಾಜರ್ುನ ಬಿರಾದರ ವಯಾ:45 ಏರೆಟೆಲ್ ಕಂಪನಿಯಲ್ಲಿ ಮೇಲ್ವಿಚಾರಕರು ಸಾ: ಜೆ ಆರ್ ನಗರ ಖಾದರಿ ಚೌಕ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿಯರ್ಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ಮದ್ದರಕಿ ಸೀಮಾಂತರದಲ್ಲಿ ಇಂಡಸ್ ಕಂಪನಿಯ ಟವರ ಇಂಡಸ ನಂ:1249560 ಸೈಟ್ ಐಡಿ ಎಮ್ ಡಿ ಕೆ.ಈ.ಆರ್/1 ನೇದ್ದಕ್ಕೆ ವಿದ್ಯುತ್ ಸರಬರಾಜಿಗಾಗಿ ಜೋಡಣೆ ಮಾಡಿದ 24 ಅಮರರಾಜ ಕಂಪನಿಯ ಅಂದಾಜು ಕಿಮ್ಮತ್ತು 24000/- ರೂ ಬೆಲೆ ಬಾಳುವ ಬ್ಯಾಟ್ರಿಗಳು ಯಾರೋ ಕಳ್ಳರು ದಿನಾಂಕ 11/09/2020 ರಂದು ರಾತ್ರಿ 03.00 ಗಂಟೆಯಿಂದ ನಸುಕಿನ ಜಾವ 04.00 ಗಂಟೆಯ ಮದ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:113/2020 ಕಲಂ 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 242/2020.ಕಲಂ. 379. ಐ.ಪಿ.ಸಿ : ಇಂದು ದಿನಾಂಕ 19/09/2020 ರಂದು ರಾತ್ರಿ 20-30 ಗಂಟೆಗೆ ಠಾಣೆಗೆ ಪಿಯರ್ಾದಿ ಶ್ರೀ ಸತೀಶಕುಮಾರ ತಂದೆ ಮಲ್ಲೇಶಪ್ಪ ಮೇದಾ ವ|| 33 ಜಾ|| ಮೇದಾ ಉ|| ವ್ಯಾಪಾರ ಸಾ|| ಬಸವೇಶ್ವರ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ, ದಿನಾಂಕ 25/05/2020 ರಂದು ಸಾಯಂಕಾಲ 6-00 ಗಂಟೆಗೆ ದಿನನಿತ್ಯದಂತೆ ನಾನು ನನ್ನ ಕೆಲಸಮುಗಿಸಿಕೊಂಡು ಬಂದು ನನ್ನ ಮೋಟರ್ ಸೈಕಲ್ ನಂ ಕೆಎ-55ಕ್ಯೂ-2421 ನೇದ್ದು ನಮ್ಮ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ನಮ್ಮ ಮನೆಯಲ್ಲಿ ಹೋಗಿ ಮನೆಯಲ್ಲಿ ಇದ್ದಾಗ ರಾತ್ರಿ ಊಟ ಮಾಡಿ ಹೋರಗಡೆ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ನನ್ನ ಮೋಟರ್ ಸೈಕಲ್ ನಂ ಕೆಎ-55ಕ್ಯೂ-2421 ನೇದ್ದು ಉಡುಕಾಡಲಾಗಿ ಸಿಕ್ಕಿರುವದಿಲ್ಲ ನನ್ನ ಬಜಾಜ್ ಕಂಪನಿಯ ಪಲ್ಸರ ಮೋಟರ್ ಸೈಕಲ್ ನಂ. ಏಂ-55ಕಿ-2421 ಇಓಉಓಇ ಓಔ-ಆಏಚಅಆಒ52579. ಅಊಇಖಖ ಓಔ-ಒಆ2ಂ13ಇಚಘಿಆಅಒ55446 ಅ:ಕಿ:49000=00 ರೂ ನೇದ್ದನ್ನು ನಮ್ಮ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಸಮಯದಲ್ಲಿ ದಿನಾಂಕ 25/05/2020 ರಂದು 6-00 ಪಿ.ಎಂ. ರಿಂದ 9-00 ಪಿ.ಎಂ. ಅವದಿಯಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ಹುಡುಕಾಡಲಾಗಿ ಸಿಕ್ಕಿರುವದಿಲ್ಲಾ. ಕಳ್ಳತನವಾದ ನನ್ನ ಮೋಟರ್ ಸೈಕಲ್ ಇಂದಲ್ಲಾ ನಾಳೆ ಸಿಗಬಹುದು ಎಂದು ತಿಳಿದು ಹುಡುಕಾಡಿದರು ಸಿಗದೆ ಇದ್ದಾಗ ಮತ್ತು ನನ್ನ ಗೆಳೆಯನಾದ ಅಕ್ಬರ ತಂದೆ ಘಫುರಸಾಬ ಅಲಂಬದರ್ಾರ ಸಾ|| ಸಿಲಾರಸಾಬ ದಗರ್ಾದ ಹಿಂದೆ ಗುತ್ತಿಪೇಠ ಶಹಾಪೂರ ಈತನಿಗೆ ನನ್ನ ಮೋಟರ್ ಸೈಕಲ್ ಕಳ್ಳತನವಾದ ಬಗ್ಗೆ ತಿಳಿಸಿದಾಗ ಅಕ್ಬರನು ಮೋಟರ್ ಸೈಕಲ್ ಕಳೇದ ಬಗ್ಗೆ ಕೇಸ ಕೊಟ್ಟರೆ ಸಿಗುತ್ತದೆ ಅಂತ ತಿಳಿಸಿದ್ದರಿಂದ ಇಂದು ದಿನಾಂಕ 19/09/2020 ರಂದು ತಡವಾಗಿ ಠಾಣೆಗೆ ಹಾಜರಾಗಿ ಕಳುವಾದ ನನ್ನ ಮೋಟರ್ ಸೈಕಲ್ ಪತ್ತೆ ಮಾಡಿಕೊಡಲು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 242/2020 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಕಲಿಸಿ ಕೊಂಡು ತನಿಕೆ ಕೈಕೊಂಡೆನು.