ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/09/2020

By blogger on ಶನಿವಾರ, ಸೆಪ್ಟೆಂಬರ್ 19, 2020

 


                          ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/09/2020 

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 102/2020 505 (2) ಐಪಿಸಿ : ಇಂದು ದಿನಾಂಕ: 18/09/2020 ರಂದು 12.30 ಪಿಎಂ ಕ್ಕೆ ಅಜರ್ಿದಾರರಾದ ಭೀಮರಾಯ ತಂದೆ ಬಸ್ಸಣ್ಣ ಮಾಲಿ ವಯಾ:32 ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ: ಶೆಟ್ಟಿಕೇರಾ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ದಸ್ತೂರ ಮೂಲಕ ಬರೆಯಿಸಿದ ಅಜರ್ಿ ಹಾಜರ ಪಡೆಸಿದ ಸಾರಂಶ ಏನಂದರೆ, ನಾನು ಭೀಮರಾಯ ತಂದೆ ಬಸ್ಸಣ್ಣ ಮಾಲಿ ವಯಾ:32 ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ: ಶೆಟ್ಟಿಕೇರಾ ತಾ: ಶಹಾಪೂರ ಇದ್ದು ಈ ಮೂಲಕ ಅಜರ್ಿ ನೀಡುವದೇನಂದರೆ, ನಮ್ಮ ಊರಲ್ಲಿ ವಾಲ್ಮೀಕಿ (ಬೇಡರ) ಸಮುದಾಯದ ಹುಡುಗರು ಸುದೀಪ ಈತನನ್ನು ನಮ್ಮ ನಾಯಕ ಅಂತಾ ನಂಬಿರುತ್ತೇವೆ, ಈ ಕಾರಣಕ್ಕೆ ಸುದಿಪನಿಗೆ ಅವಮಾನ ಮಾಡುವ ಮೂಲಕ ನಮ್ಮ ಸಮುದಾಯಕ್ಕೆ ಅವಮಾನ ಮಾಡುವ ಉದ್ದೇಶದಿಂದ ನಮ್ಮ ಊರಿನವರಾದ 1) ನಾಗರಾಜ ತಂದೆ ಜೇಜೆಪ್ಪ ಜೋಗಿನವರ ವಯಾ:19 ವರ್ಷ ಉ: ಒಕ್ಕಲುತನ ಜಾ: ಕುರುಬರ ಸಾ: ಶೆಟ್ಟಿಕೇರಾ ತಾ: ಶಹಾಪೂರ ಜಿ: ಯಾದಗಿರಿ ಈತನು ನಮ್ಮ ವಾಲ್ಮೀಕಿ ಜನಾಂಗದವರ ನಾಯಕ ಅಂತಾ ಪೂಜಿಸುವ ಪ್ರಖ್ಯಾತ ಕನ್ನಡ ಸಿನಿಮಾ ನಟರಾದ ಸುಧಿಪ ಇವರ ಭಾವ ಚಿತ್ರಕ್ಕೆ ಅವಮಾನ ಮಾಡಿ ಚಿತ್ರದ ಮೇಲೆ ಧೃವ ಸಜರ್ಾ ಇವರ ಕಾಲನ್ನು ಸುಧಿಪ ಇವರ ತಲೆಯ ಮೇಲೆ ಇಟ್ಟು ಅಪಮಾನ ಮಾಡಿದ ಭಾವಚಿತ್ರವನ್ನು ಸದರಿ ನಾಗರಾಜ ಈತನು ತನ್ನ ಮೋಬೈಲ ನಂ: 9845197096 ನೇದ್ದರ ವಾಟ್ಸಾಪ್ ಆಫ್ ದಿಂದ ತನ್ನ ಪ್ರೇಂಡ್ಸಿಫ್ ಗ್ರೂಪ ಎಂಬ ವಾಟ್ಸಾಫ್ ಗ್ರೂಫ್ ಗೆ ಕಳುಹಿಸಿದ್ದು ನಿನ್ನೆ ದಿನಾಂಕ:17/09/2020 ರಂದು 06.00 ಪಿಎಂ ಸುಮಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟು ವೈರಲ್ ಮಾಡಿದ್ದು ನನಗೆ ಗೊತ್ತಾಗಿರುತ್ತದೆ. ಸದರಿ ಅಪಮಾನ ಮಾಡಿದ ಭಾವ ಚಿತ್ರಗಳು ಮೌನೇಶ ತಂದೆ ಸಂಜೀವಪ್ಪ ಕಾಶಿರಾಜ ಸಾ: ಹೋಸ್ಕೇರಾ ದೊಡ್ಡಿ, ಅವರ ಮೂಲಕ ನಿಂಗಣ್ಣ ತಂದೆ ಶಿವಣ್ಣ ಕವಲ್ದಾರ, ವೆಂಕೋಬಾ ತಂದೆ ಹಣಮಂತ್ರಾಯ ಮಕಾಶಿ, ತಿರುಪತಿ ತಂದೆ ಭಿಮಣ್ಣ ಹೊಸ್ಮನಿ ಎಲ್ಲರೂ ಸಾ: ಶೇಟ್ಟಿಕೆರಾ ಇವರ ಮೋಬೈಲ್ ಗಳಿಗೆ ಕಳುಹಿಸಿರುತ್ತಾರೆ. ಕಾರಣ ಸದರಿ ಘಟನೆಯಿಂದ ನಮ್ಮ ಸಮೂದಾಯಕ್ಕೆ ಘಾಸಿಯಾಗಿದ್ದು, ಈ ಬಗ್ಗೆ ಊರಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ: 18/09/2020 ರಂದು 12.30 ಪಿಎಂ ಕ್ಕೆ ಠಾಣೆಗೆ ಬಂದು ಅಜರ್ಿ ನೀಡಿರುತ್ತೇನೆ. ಸದರಿ ಅಪರಾಧ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 102/2020 ಕಲಂ ಕಲಂ, 505(2) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 103/2020 ಕಲಂ, 87 ಕೆ.ಪಿ ಆ್ಯಕ್ಟ್ :  ಇಂದು ದಿನಾಂಕ 18/09/2020 ರಂದು 10.05 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರು ಠಾಣೆಗೆ ಬಂದು, ಜಪ್ತಿ ಪಂಚನಾಮೆ, ಮುದ್ದೇಮಾಲು ಮತ್ತು 5 ಜನರನ್ನು ಹಾಜರ ಪಡೆಸಿ ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ ಮಹಲರೋಜಾ ಕ್ರಾಸ್ ಹತ್ತಿರ ಐದಗೀರಸಾಬ ದಗರ್ಾದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 05 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 15300=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು, 2 ಚಾರ್ಜರ ಲೈಟಗಳನ್ನು 08.15 ಪಿಎಮ್ ದಿಂದ 09.15 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 10.05 ಪಿಎಂ ಕ್ಕೆ ಠಾಣೆಗೆ ಬಂದು ವರದಿ ತಯಾರಿಸಿ ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ: 103/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 129/2020 ಕಲಂ 341, 504, 506 ಸಂ 34 ಐಪಿಸಿ : :-ದಿನಾಂಕ 15/09/2020 ರಂದು ಸಾಯಂಕಾಲ 6-45 ಗಂಟೆಗೆ ಫಿರ್ಯಾಧಿದಾರನ ತಮ್ಮನಾದ ಅನಂತಕುಮಾರ ಇತನು ತನ್ನ ಹೊಲದಿಂದ ಮನೆ ಕಡೆಗೆ ಬರುವಾಗ ಆರೋಪಿತರೆಲ್ಲರೂ ಕೂಡಿ ಅನಂತಕುಮಾರ ಇತನನ್ನು ಹಳೇ ದ್ವೇಶದಿಂದ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಜಗಳ ತೆಗೆದು ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 107/2020 ಕಲಂ: 78(3) ಕೆ.ಪಿ.ಆಕ್ಟ್ : 18/09/2020 ರಂದು ವಡಗೇರಾ ಪೊಲೀಸ ಠಾಣಾ ವ್ಯಾಪ್ತಿಯ ಗೋನಾಲ ಗ್ರಾಮದ ಗ್ರಾಮ ಪಂಚಾಯತ ಕಾರ್ಯಲಯದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬನು ಸಾರ್ವಜನಿಕರಿಂದ 1/- ರೂ. ಗೆ 80/- ರೂ. ಗೆಲ್ಲಿರಿ ಮಟ್ಕಾ ಆಡಿರಿ ಎಂದು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಎಂದು ಖಚಿತ ಬಾತ್ಮಿ ಮೇಲಿಂದ ಪಂಚರ ಸಮಕ್ಷಮ ಎಮ್.ಡಿ ಅಜೀಜ್ ಪಿ.ಎಸ್.ಐ(ಅವಿ) ವಡಗೇರಾ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಒಬ್ಬನಿಗೆ ವಶಕ್ಕೆ ಪಡೆದುಕೊಂಡು ನಗದು ಹಣ, ಮಟ್ಕಾ ನಂಬರಗಳನ್ನು ಬರೆದ ಒಂದು ಚೀಟಿ, ಬಾಲಪೆನ್ ಮತ್ತು ಒಂದು ಮೊಬೈಲ್ ಪೋನ ಇವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರಪಡಿಸಿ, ಆರೋಪಿತನ ವಿರುದ್ದ ಕಾನೂನು ಕ್ರಮ ಕುರಿತು ವರದಿ ಸಲ್ಲಿಸಿದ್ದು ಇರುತ್ತದೆ. ಪ್ರಕರಣವು ಅಸಂಜ್ಞೆಯಾಗಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಸಮಯ ಸಂಜೆ 6.00 ಗಂಟೆಗೆ ಠಾಣೆ ಗುನ್ನೆ ನಂ. 107/2020 ಕಲಂ 78 (3) ಕೆ.ಪಿ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ 16/2020  ಕಲಂ 174 ಸಿಆರ್ಪಿಸಿ : ಇಂದು ದಿನಾಂಕ 18/09/2020 ರಂದು 08.00 ಎಎಮ್ ಕ್ಕೆ ಫಿಯರ್ಾದಿ ಅಜಿದಾರರಾದ ಶ್ರೀ ಅಮರೇಶ ತಂದೆ ಪೀರು ಜಾಧವ ವ|| 26 ಜಾ||ಲಂಬಾಣಿ ಉ|| ಕೂಲಿ ಕೆಲಸ  ಸಾ|| ಯಾಳಗಿ ತಾಂಡಾ ತಾ:ಸುರಪುರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಾವು ನಮ್ಮ ತಂದೆಗೆ 5 ಜನ ಗಂಡು ಮಕ್ಕಳು ಮತ್ತು 4 ಜನ ಹೆಣ್ಣು ಮಕ್ಕಳು ಇದ್ದು.  ನಮ್ಮ ಅಣ್ಣಾನಾದ ಶೇಖರ ವಯಾ:28 ವರ್ಷ ಈತನಿಗೆ ಸುಮಾರು 08 ವರ್ಷಗಳಿಂದ ಮದುವೆಯಾಗಿದ್ದು. ಸದ್ಯ ನಮ್ಮ ಅಣ್ಣ ಶೇಖರ ಇತನ ಹೆಂಡತಿಯು 2 ವರ್ಷಗಳಿಂದ ಬಿಟ್ಟು ತನ್ನ ತವರು ಮನೆಗೆ ಹೋಗಿದ್ದು. ಸದ್ಯ ನಮ್ಮ ಅಣ್ಣ ಶೇಖರ ಈತನು ಒಬ್ಬನೇ ಮಾನಸಿಕವಾಗಿ ನೊಂದು ಮನೆಯಲ್ಲಿಯೇ ವಾಸವಾಗಿದ್ದನು.  ಹೀಗಿದ್ದು ದಿನಾಂಕ 16/09/2020 ರಂದು 02.00 ಪಿ.ಎಮ್ ಸುಮಾರಿಗೆ ನನ್ನ ಅಣ್ಣನಾದ ಶೇಖರ ಈತನು ಕೆಂಭಾವಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು. ನಾನು ನಮ್ಮ ಮನೆಯಲ್ಲಿದ್ದಾಗ ಸಾಯಂಕಾಲ 04.00 ಪಿಎಮ್ ಕ್ಕೆ ನಮ್ಮ ತಾಂಡಾದ ಸುನೀಲ ಎಂಬುವವನು ನನಗೆ ಪೋನು ಮಾಡಿ ನಿಮ್ಮ ಅಣ್ಣ ಶೇಖರ ಈತನು ಕೆಂಭಾವಿ ಎಪಿಎಮ್ಸಿ ಬ್ರೀಜ್ ಹತ್ತಿರ ಕೆನಾಲ ಜಿಗಿದಿರುತ್ತಾನೆ ಅಂತಾ ತಿಳಿಸಿದಾಗ ನಾನು ಕೂಡಲೇ ಸದರಿ ಕೆನಾಲಕ್ಕೆ ಹೋಗಿ ನೋಡಲು ನನ್ನ ಅಣ್ಣ ಕಾಣಾದೇ ನೀರಿನಲ್ಲಿ ಮುಳುಗಿ ಹೋಗಿದ್ದನು. ಹೀಗಿರುತ್ತಾ ಇಂದು ದಿ:18/09/2020 ರಂದು 07.00 ಎಎಮ್ಕ್ಕೆ ನಮ್ಮ ಅಣ್ಣನನ್ನು ಹುಡುಕಾಡುತ್ತಾ ಐಬಿಸಿ ಕೆನಾಲದ ಒಂದನೇ ಡಿಸ್ಟಬುಟರ್ ಹತ್ತಿರ ಹೋದಾಗ ನನ್ನ ಅಣ್ಣನ ಮೃತ ದೇಹ ಪತ್ತೇಯಾಗಿದ್ದು. ಕಾರಣ ನನ್ನ ಅಣ್ಣನು ತನ್ನ ಹೆಂಡತಿ ಮನೆ ಬಿಟ್ಟು ಹೋದ ವಿಷಯದಿಂದ ಮಾನಸಿಕವಾಗಿ ಮನನೊಂದು ಕೆನಾಲ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು. ನನ್ನ ಅಣ್ಣನ ಸಾವಿನಲ್ಲಿ ನನ್ನದು ಯಾರ ಮೇಲೂ ಯಾವುದೇ ರೀತಿಯ ಸಂಶಯ ಇರುವುದಿಲ್ಲ ತಾವುಗಳು  ಮುಂದಿನ ಕಾನೂನು ಕ್ರಮ ಜರುಗಿಸಬೇಕು  ಅಂತ ವಿನಂತಿ ಇರುತ್ತದೆ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂಬರ 16/2020 ಕಲಂ 174 ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


      

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 82/2020 ಕಲಂ; 417,419,420,465,468 ಐಪಿಸಿ : ಇಂದು ದಿನಾಂಕ; 20/07/2019 ರಂದು 6-45 ಪಿಎಂಕ್ಕೆ  ಶ್ರೀ ಅಜುನ ತಂ. ಶಿವರಾಯ ಮೆಕಾಲಿ ವಃ31 ಜಾಃ ಬೇಡರ ಉಃ ಒಕ್ಕಲುತನ ಸಾಃ ನಾಸಿರವಾಡಿ ತಾಃ ಆಳಂದ ಜಿಃಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಕೊಟ್ಟಿದ್ದರ ಸಾರಾಂಶವೆನೆಂದರೆ, ಯಾದಗಿರಿಯಲ್ಲಿ ನಮ್ಮ ಸಂಭಂದಿಕರಿದ್ದು ನಾನು ಆಗಾಗ ನಾನು ಯಾದಗಿರಿಗೆ ಬಂದು ಯಾದಗಿರಯಲ್ಲಿ ಒಂದು ನಿವೇಶನವನ್ನು ತೆಗೆದುಕೊಳ್ಳುವ ಉದ್ದೇಶವಿತ್ತು ಯಾದಗಿರತಿ ಜಿಲ್ಲಾ ಯಾದಗಿರಿ ತಾಲೂಕ ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ನಿವೇಶನ ನಂ.2 ವಿಸ್ತೀರ್ಣ 70ಥ40 ಅಡಿ ಒಟ್ಟು 2800 ಚದರ ಅಡಿ ಇದ್ದು ಸದರಿ ನಿವೇಶನವು ಸವರ್ೆ ನಂ.598(2) ಯಾದಗಿರಿ (ಬಿ) ಗ್ರಾಮ ಸೀಮಾಂತರದಲ್ಲಿದ್ದು ಇದನ್ನು ಮಾನ್ಯ ಜಿಲ್ಲಾಧಿಕಾರಿಗಳು ಗುಲಬಗರ್ಾ ರವರು ತಮ್ಮ ಆಧೇಶ ಸಂ.ಕಂ.ಭೂ:ಕೃಯೆ:8:2006-07:7876 ದಿನಾಂಕ.27-06-2009 ರಂದು ಕೃಷಿಯೆತರವನ್ನಾಗಿ ಪರಿವತರ್ಿಸಿರುತ್ತಾರೆ. ಮೇಲೆ ತಿಳಿಸಿದ ನಿವೇಶನವನ್ನು ನಾನು ರೇವಣಸಿದ್ದಪ್ಪ ತಂ.ಗುರುಬೀಮರಾಯ ಕಲಬುಗರ್ಿ ಸಾಃ ಶಹಾಪುರ ರವರಿಂದ ದಿನಾಂಕ.29-03-2011 ರಂದು ವಿಕ್ರಯ ಖಂಡಿತ ಖರೀದಿ ಪತ್ರದ ಮೂಲಕ ಖರೀದಿ ಮಾಡಿರುತ್ತೇನೆ. ಸದರಿ ವಿಕ್ರಯ ಖಂಡಿತ ಖರೀದಿ ಪತ್ರವನ್ನು ಯಾದಗಿರಯ ಉಪ-ನೊಂಧಣಾದಿಕಾರಿಗಳ ಕಛೇರಿಯಲ್ಲಿ ನೊಂದಣಿ ಮಾಡಿಸಿಕೊಂಡಿದ್ದು ಸದರಿ ಖರೀದಿ ಪತ್ರ ಸಂ. ಬುಕ್ ನಂ.-1, 5020/10-11 ಇರುತ್ತದೆ, ಸದರಿ ನಿವೇಶನದ ಚೆಕ್ ಬಂಧಿ ಉತ್ತರಕಲ್ಕೆಃ12 ಮೀಟರ ಒಳರಸ್ತೆಮ ದಕ್ಷಿಣಕ್ಕೆಃ ನಿವೇಶನ ನಂ.6, ಪೂರ್ವಕ್ಕೆಃ ನಿವೇಶನ ನಂ.3 ಪಶ್ಚಿನಕ್ಕೆ ಃ ನಿವೇಶನ ನಂ.1 ಇರುತ್ತದೆ. ಈ ನಿವೇಶನವನ್ನು ನಾನು ಖರೀದಿ ನೊಂದಣಿ ಮಾಡಿಸಿಕೊಂಡ ನಂತರ ನನ್ನ ಹೆಸರಿಗೆ ವಗರ್ಾವಣೆ ಮಾಡಲು ಯಾದಗಿರಿ ನಗರ ಸಭೆಗೆ ಅಜರ್ಿಯ ಮೂಲಕ ವಿನಂತಿಸಿಕೊಂಡಿದ್ದು ಇರುತ್ತದೆ.ನಿವೇಶನದ ವಗರ್ಾಔಣೆಗಾಗಿ ಅಜರ್ಿ ಸಲ್ಲಿಸುವಾಗನನಗೆ ಪರಿಚಿತನಾದ ಯಾದಗಿರಿಯ ಅರುಣಕುಮಾರ ತಂ.ಶರಣಪ್ಪ ಗೌಡಗೇರಿ ಈತನು ನಾನು ಖರೀದಿಸಿದ ನಿವೇಶನವನ್ನು ನನ್ನ ಹೆಸರಿಗೆ ವಗರ್ಾವಣೆ ಮಾಡಿಸಿಕೊಡುತ್ತೇನೆಂದು ಹೇಳಿ ನಿವೇಶನದ ವಿಕ್ರ ಖಂಡಿತ ಖರೀದಿ ಪತ್ರದ ಮೂಲ ಪ್ರತಿಯನ್ನು ತೆಗೆದುಕೊಂಡಿರುತ್ತಾನೆ. ತರುವಾಯ ನಾನು ಸದರಿ ಅರುಣಕುಮಾರ ತಂದೆ ಶರಣಪ್ಪ ಗೌಡಗೇರಿ ಈತನಿಗೆ ಬೇಟಿಯಾಗಿ ಸಾಕಷ್ಟು ಸಾಲ ನನ್ನ ನಿವೇಶನದ ವಿಕ್ರಯ ಖರೀದಿ ಪತ್ರದ ಮೂಲ ಪ್ರತಿಯನ್ನು ಮರಳಿ ಕೊಡಲು ಕೇಳಿಕೊಂಡಿದ್ದು ಇರುತ್ತದೆ, ಆದರೆ ಅರುಣಕುಮಾರ ಈತನು ಏನಾದರೊಂದು ನೆಪ ಹೇಳುತ್ತಾ ನಿವೇಶನದ ವಿಕ್ರಯ ಖಂಡಿತ ಖರೀದಿ ಪತ್ರದ ಮೂಲ ಪ್ರತಿಯನ್ನು ಮೆರಳಿ ಕೊಟ್ಟಿರುವುದಿಲ್ಲಾ. ದಿನಾಂಕ.22-09-2018 ರಂದು ನಾನು ಸದರಿ ನಿವೇಶನಕ್ಕೆ ಸಂಭಂದಪಟ್ಟಂತೆ ಋಣಬಾರ ಪತ್ರ (ಇ.ಸಿ)ವನ್ನು ಯಾದಗಿರಿ ಉಪನೊಂದಣಾಧಿಖಾರಿ ಖಚೇರಿಯಿಂದ ಪಡೆದಿರುತ್ತೇನೆ ಸದರಿ ಋಣಬಾರ ಪತ್ರ (ಇಸಿ)ದಲ್ಲಿ ಕಂಡುಬರುವುದೆನೆಂದರೆ, ನನ್ನ ನಿವೇಶನವನ್ನು ಪಾಂಡುರಂಗರಾವ ತಂ.ತಿಪ್ಪಣ್ಣ ಇವರ ಹೆಸರಿಗೆ ನೊಂದಣಿಯಾಗಿದ್ದು ಕಂಡು ನನಗೆ ತುಂಬಾ ಆಶ್ಚರ್ಯವಾಯಿತು, ನಾನು ಯಾವತ್ತು ಯಾರಿಗೂ ನನ್ನ ನಿವೇಶನವನ್ನು ಮಾರಾಟ ಮಾಡಿರುವುದಿಲ್ಲಾವಾದ್ದರಿಂದ ಉಪ ನೊಂದಣಾದಿಕಾರಿ ಕಛೇರಿಯಲ್ಲಿ ನೊಂಧಣಿಗೆ ಸಂಭಂದಿಸಿದ ದಾಖಲೆಗಳನ್ನು ಪಡೆದು ನೋಡಲಾಗಿ ನನಗೆ ತಿಳಿದು ಬಂದಿದ್ದೆನೆಂದರೆ, ಅರುಣಕುಮಾರ ತಂ.ಶರಣಪ್ಪ ಗೌಡಗೇರಿ ಇತನು ನಾನು ಖರೀದಿಸಿದ ನಿವೇಶವನ್ನು ಯಾದಗಿರಿಯ ನಗರಸಭೆಯಲ್ಲಿ ನನ್ನ ಹೆಸರಿಗೆ ವಗರ್ಾವಣೆ ಮಾಡಿಸಿಕೊಂಡಿದ್ದೆನೆಂದು, ನನ್ನಿಂದ ಪಡೆದುಕೊಂಡ ನಿವೇಶನದ ವಿಕ್ರಯ ಖಂಡಿತ ಖರೀದಿ ಪತ್ರದ ಮೂಲ ಪ್ರತಿಯನ್ನು ನನಗೆ ಮರಳಿಸದೆ ಅದರ ಸಹಾಯದಿಂದ ಮೋಸದ ಕೃತ್ಯದಲ್ಲಿ ತೊಡಗಿ ಇತರರೊಂದಿಗೆ ಕೂಡಿ ನಾನು ಯಾದಗಿರಿಯಲ್ಲಿ ನಿರಂತರವಾಗಿ ಇರುವುದಿಲ್ಲಾವೆಂದು ತಿಳಿಸಿ ನನ್ನ ಮಾಲಿಕತ್ವ ಕಬ್ಜೆ ಹಾಗೂ ಹೆಸರಿನಲ್ಲಿರುವ ನಿವೇಶನವನ್ನು  ಬೇರೆ ಯಾರನ್ನು ನನ್ನಂತೆ ಸೃಷ್ಠಿ ಮಾಡಿ ಖೊಟ್ಟಿ ದಆಖಲಾತಿಗಳನ್ನು ಸೃಷ್ಠಿಸಿ ಖೊಟ್ಟಿ ಸಹಿ ಮಾಡಿ ನನ್ನ ನಿವೇಶನ ಸಂ.2 ನ್ನು ಖೊಟ್ಟಿ ಖರಿಇದಿ ಪತ್ರದ ಮೂಲಕ ಯಾದಗಿರಿ ಉಪ ನೊಂದಣಾಧಿಖಾರಿಗಳ ಕಛೇರಿಯಲ್ಲಿ ನೊಂದಣಿ ಮಾಡಿಸಿಕೊಂಡಿದ್ದು ಇರುತ್ತದೆ.  ಈ ಮೋಸದ ಕೃತ್ಯಕ್ಕೆ 1.ಅರುಣಕುಮಾರ ತಂ.ಶರಣಪ್ಪ ಗೌಡಿಗೇರಿ ಸಾಃರಾಜೀವ ಗಾಂಧಿ ನಗರ ಯಾದಗಿರಿ 2.ಪಾಂಡುರಂಗರಾವ ತಂ. ತಿಪ್ಪಣ್ಣ ಬಾಸುತ್ಕರ ಸಾಃ ಯಾದಗಿರಿ 3. ಅಯ್ಯಣ್ಣಗೌಡ ತಂ. ಮಲ್ಲಣ್ಣಗೌಡ ಮಾಲೀ ಪಾಟಿಲ ಸಾಃ ಕ್ಯಾಸಪನಳ್ಳಿ 4. ವೇಂಕಟೇಶ ತಂ. ದೆವಿಂದ್ರಪ್ಪ ಸುರಪೂರ ಸಾಃ ಯಾದಗಿರಿ 5. ಸಂಜಯ ತಂ. ದುರ್ಗಪ್ಪ ಚಲುವಾದಿ ಸಾಃ ಯಾದಗಿರಿ 6. ಶರಣಪ್ಪ ತಂ. ನಾರಾಯಣಪ್ಪ ಸುಂಗಲಕರ ಸಾಃ ಯಾದಗಿರಿ ಹಾಗೂ 7. ಮೋಸದ ಕೃತ್ಯದಲ್ಲಿ ನನ್ನ ಸ್ಥಳದಲ್ಲಿ ಖೊಟ್ಟಿಯಾಗಿ ನನ್ನ ಹೆಸರಿನಲ್ಲಿ ಖೊಟ್ಟಿಯಾಗಿ ಸಹಿ ಮಾಡಿದ ವ್ಯಕ್ತಿ ಇವರೆಲ್ಲರೂ ಕಾರಣರಾಗಿರುತ್ತಾರೆ. ದಿನಾಂಕ.20/07/2016 ರಂದು ಪಾಂಡುರಂಗರಾವ ತಂ.ತಿಪ್ಪಣ್ಣ ಬಾಸುತ್ಕೆರ ಸಾಃ ಯಾದಗಿರಿ ಇವರು ಮೇಲೆ ತಿಳಿಸಿದ ಅರುಣಕುಮಾರ ತಂ. ಶರಣಪ್ಪ ಗೌಢಿಗೇರಿ ಹಾಗೂ ಈತರರು ಸೇರಿ ನನ್ ಮಾಲಿಕತ್ವ ಕಬ್ಜೆ ಹಾಗೂ ನನ್ನ ಹೆಸರಿನಲ್ಲಿರುವ ನಿವೇಶನ ಸಂ.2 ಯದಗಿರಿ (ಬಿ) ಗ್ರಾಮ ವ್ಯಾಪ್ತಿಯಲ್ಲಿ ಬರುವ ಸವರ್ೆ ನಂ. 598/2 ವಿಸ್ತಿರ್ಣ 2800 ಚದುರ ಅಡಿ ನಿವೇಶನವನ್ನು ಬೇರೆ ಯಾರನ್ನೋ ಖೊಟ್ಟಿಯಾಗಿ ನನ್ನಂತೆ ಸೃಷ್ಠಿ ಮಾಡಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಖೊಟ್ಟಿ ಸಹಿ ಮಾಡಿ ನನ್ನ ನಿವೇಶವನ್ನು ತನ್ನ ಹೆಸರಿಗೆ ಖೊಟ್ಟಿ ಖರಿದಿ ನೊಂದಣಿಯನ್ನು ಯಾದಗಿರಿಉಪ ನೊಂಧಣಾದಿಕಾರಿ ಕಛೇರಿಯಲ್ಲಿ ಬುಕ್ ನಂ.1, 2571/2016-17 ರಂತೆ ಮಾಡಿಕೊಂಡು ಮೋಸದ ಕೃತ್ಯ ವೆಸಗಿರುತ್ತಾರೆ. ದಿನಾಂಕ.19/10/2017 ರಂದು ಪಾಂಡುರಂಗರಾವ ತಂ.ತಿಪ್ಪಣ್ಣ ರವರು ತನ್ನ ಹೆಸರಿಗೆ ಮಾಡಿಸಿಕೊಂಡ ಖೊಟ್ಟ ನೊಂದಣಿ ಪತ್ರದ ಆಧಾರದ ಮೇಲೆ ದರಿ ನಿವೇಶನವನ್ನು ತನ್ನ ಮಗನಾದ ನವನೀತ ತಂ.ಪಾಂಡುರಂಗರಾವ ಬಾಸುತ್ಕರ ಹೆಸರಿಗೆ ದಾನ ತಪ್ರದ ಮೂಲಕ ನಿವೇಶನವನ್ನು ಕಾನೂನು ಬಾಹಿರವಾಗಿ  ನೊಂದಣಿ ಮಾಡಿರುತ್ತಾನೆ ಸದರಿ ದಾನ ಪತ್ರ ಸಂ. ಬುಕ-1, 4771/2017-18 ದಿನಾಂಕ.19/10/2017 ಇದು ಸಹ ಮೋಸದಿಂದ ಕೂಡಿದ್ದಾಗಿದೆ. ಆದ್ದರಿಂದ ಮೋಸದ ಕೃತ್ಯದಲ್ಲಿ ಬಾಗಿಯಾದ 1.ಅರುಣಕುಮಾರ ತಂ.ಶರಣಪ್ಪ ಗೌಡಗೇರಿ ಸಾಃ ರಾಜಿವಗಂಧಿ ನಗರ ಯಾದಗಿರಿ 2.ಪಾಂಡುರಂಗರಾವ ತಂ. ತಿಪ್ಪಣ್ಣ ಬಾಸುತ್ಕರ ಸಾಃ ಯಾದಗಿರಿ 3. ಅಯ್ಯಣ್ಣಗೌಡ ತಂ. ಮಲ್ಲಣ್ಣಗೌಡ ಮಾಲೀ ಪಾಟಿಲ ಸಾಃ ಕ್ಯಾಸಪನಳ್ಳಿ 4. ವೇಂಕಟೇಶ ತಂ. ದೆವಿಂದ್ರಪ್ಪ ಸುರಪೂರ ಸಾಃ ಯಾದಗಿರಿ 5. ಸಂಜಯ ತಂ. ದುರ್ಗಪ್ಪ ಚಲುವಾದಿ ಸಾಃ ಯಾದಗಿರಿ 6. ಶರಣಪ್ಪ ತಂ. ನಾರಾಯಣಪ್ಪ ಸುಂಗಲಕರ ಸಾಃ ಯಾದಗಿರಿ ಹಾಗೂ 7. ಮೋಸದ ಕೃತ್ಯದಲ್ಲಿ ನನ್ನ ಸ್ಥಳದಲ್ಲಿ ಖೊಟ್ಟಿಯಾಗಿ ನನ್ನ ಹೆಸರಿನಲ್ಲಿ ಖೊಟ್ಟಿಯಾಗಿ ಸಹಿ ಮಾಡಿದ ವ್ಯಕ್ತಿ ಇವರೆಲ್ಲರ ವಿರುದ್ದ ಕಾನೂನು ಕ್ರ ಜರುಗಿಸಬೇಕೆಂದು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.82/2020 ಕಲಂ.417,419,420,465,468 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:-. 143/2020 ಕಲಂ: 379 ಐ.ಪಿ.ಸಿ ಮತ್ತು 44(1) ಕೆ.ಎಮ್.ಎಮ್.ಸಿ ರೂಲ್ : ಇಂದು ದಿ: 18/09/2020 ರಂದು 06.30 ಪಿ.ಎಮ್ಕ್ಕೆ ಶ್ರೀ ಸುದರ್ಶನರೆಡ್ಡಿ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಇಂದು ದಿನಾಂಕ: 18.09.2020 ರಂದು 04.00 ಪಿ.ಎಮ್ಕ್ಕೆ ಸಿಬ್ಬಂದಿಯವರಾದ 1) ರಾಜಶೇಖರ ಎ ಎಸ್ ಐ 2] ಶಿವಲಿಂಗಪ್ಪ ಹೆಚ್ ಸಿ 185 3] ಭೀರಪ್ಪ ಪಿಸಿ-195 4) ಸಂಗಮೇಶ ಪಿಸಿ-244 5) ಚಂದಪ್ಪ ಪಿಸಿ-316 ಹಾಗು ಜೀಪ ಚಾಲಕನಾದ 6) ಪೆದ್ದಪ್ಪಗೌಡ ಪಿಸಿ-214 ನೇದ್ದವರೊಂದಿಗೆ ಮಾಲಗತ್ತಿ ಕಡೆಗೆ ಪೆಟ್ರೋಲಿಂಗ್ ಕುರಿತು ಹೋದಾಗ ಮಾಹಿತಿ ಬಂದಿದ್ದೇನೆಂದರೆ, ತಿಪನಟಗಿ ಕಡೆಯಿಂದ ಗೌಡಗೇರಾ ಕಡೆಗೆ ಒಂದು ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಭೀರಪ್ಪ ಪಿಸಿ-195 ರವರ ಮುಖಾಂತರ ಇಬ್ಬರೂ ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ಹಾಗೂ ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ಸಾ|| ಇಬ್ಬರೂ ಕೆಂಭಾವಿ ಈ ಎರಡು ಜನರಿಗೆ ಗೌಡಗೇರಾ ಕ್ರಾಸಿಗೆ ಕರೆಯಿಸಿ ಸದರಿಯವರಿಗೂ ಸಹ ಭಾತ್ಮಿ ವಿಷಯ ತಿಳಿಯಿಸಿ, ಸದರ ಪಂಚರು ಹಾಗೂ ನಾವು ಠಾಣೆಯಿಂದ 04.30 ಪಿ.ಎಮ್ಕ್ಕೆ ಸರಕಾರಿ ಜೀಪ್ ನಂಬರ ಕೆಎ-33 ಜಿ-0074 ನೇದ್ದರಲ್ಲಿ ಗೌಡಗೇರಾ ಕ್ರಾಸಿಗೆ ಬಂದು ನಿಂತಾಗ ತಿಪನಟಗಿ ಕಡೆಯಿಂದ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬಂದಿದ್ದು, ಸದರಿ ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದೊಂದಿಗೆ 4.45 ಪಿ.ಎಮ್ ಕ್ಕೆ ಹಿಡಿದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲು ಆತನು ತನ್ನ ಹೆಸರು ಮರೆಪ್ಪ ತಂದೆ ಸುಭಾಶ್ಚಂದ್ರ ಟಣಕೇದಾರ ಸಾ|| ಗೌಡಗೇರಾ ಅಂತ ತಿಳಿಸಿದ್ದು, ಚಾಲಕನಿಗೆ ಮರಳಿನ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಮತ್ತು ಸರಕಾರಕ್ಕೆ ಯಾವದೇ ರಾಜಧನ ಕಟ್ಟಿರುವುದಿಲ್ಲಾ ಅಂತ ತಿಳಿಸಿದ್ದು, ನಂತರ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ ಸ್ವರಾಜ್ಯ-735 ಟ್ರ್ಯಾಕ್ಟರ ಇಂಜಿನ ನಂಬರ ನೋಡಲಾಗಿ ಕೆಎ.36/ಟಿಸಿ-162 ಅಂತ ಇದ್ದು ಹಾಗು ಟ್ರೈಲಿಗೆ ಯಾವದೇ ನಂಬರ ಇರುವದಿಲ.್ಲ ಸದರ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದು ಅದರ ಮಾಲಿಕನ ಹೆಸರು ಕೇಳಿ ತಿಳಿಯಲಾಗಿ ಭೀಮರಡ್ಡಿ ತಂದೆ ಸುಭಾಶ್ಚಂದ್ರ ಟಣಕೇದಾರ ಸಾ|| ಗೌಡಗೇರಾ ಅಂತಾ ತಿಳಿಸಿದನು. ಸದರಿ ಟ್ರಾಕ್ಟರದಲ್ಲಿ ಅಂದಾಜು 1600/- ರೂ ಕಿಮ್ಮತ್ತಿನ ಮರಳು ಇತ್ತು. ಸದರಿ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ 1645 ಗಂಟೆಯಿಂದ 1745 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಕೈಕೊಂಡು ಸದರಿ ಟ್ರ್ಯಾಕ್ಟರನ್ನು ಮರಳು ಸಮೇತ ಜಪ್ತ ಪಡೆಸಿಕೊಂಡಿದ್ದು ಇರುತ್ತದೆ. ನಂತರ ಸದರಿ ಟ್ರಾಕ್ಟರನ್ನು ಆರೋಪಿ ಚಾಲಕ ಮರೆಪ್ಪ ತಂದೆ ಸುಭಾಶ್ಚಂದ್ರ ಟಣಕೇದಾರ ಈತನ ಸಹಾಯದಿಂದ ಮರಳು ತುಂಬಿದ ಟ್ರಾಕ್ಟರನ್ನು 1830 ಗಂಟೆಗೆ ಠಾಣೆಗೆ ತಂದು ಮುಂದಿನ ಕ್ರಮ ಜರುಗಿಸಲು  ಒಪ್ಪಿಸಿದ್ದು ಇರುತ್ತದೆ. ಆದ್ದರಿಂದ ಸಕರ್ಾರಕ್ಕೆ ರಾಜಧನ (ರಾಯಲ್ಟಿ) ತುಂಬದೆ ಟ್ರಾಕ್ಟರದಲ್ಲಿ ಮರಳನ್ನು ಕಳ್ಳತನ ಮಾಡಿಕೊಂಡು  ಹೋಗುತ್ತಿದ್ದ ಟ್ರಾಕ್ಟರ ಚಾಲಕ ಹಾಗು ಅದರ ಮಾಲಿಕ ಇವರ ಮೇಲೆ  ಸೂಕ್ತ ಕಾನೂನು ಕ್ರಮ ಜರುಗಿಸಲು ಸುಚಿಸಿದ ಮೇರೆಗೆ  ಸದರಿ ವರದಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 143/2020 ಕಲಂ: 379 ಐಪಿಸಿ & 44(1) ಕೆ.ಎಮ್.ಎಮ್.ಸಿ ರೂಲ್ ಅಡಿಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 203/2020 ಕಲಂ: 87 ಕೆ.ಪಿ.ಕಾಯ್ದೆ : ಇಂದು ದಿನಾಂಕ:18/09/2020 ರಂದು 9 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗಸ.ತ ಫಿರ್ಯಾದಿ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ  ಸಾಹೇಬರುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 09 ಜನಆರೋಪಿತರನ್ನುಠಾಣೆಗೆತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ:18/09/2020 ರಂದು 4:30 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯಚಂದ್ಲಾಪುರಗ್ರಾಮದ ಹನುಮಾನದೇವರಗುಡಿಯ ಹತ್ತಿರ ಸಾರ್ವಜಿಕಖುಲ್ಲಾಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ಚಂದ್ರಶೇಖರ ಪಿಎಸ್ಐ(ಕಾ&ಸು-2) ಹಾಗೂ ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಸಿಪಿಸಿ-271 3) ಶ್ರೀ ಬಸವರಾಜ ಸಿಪಿಸಿ-180 4) ಶ್ರೀ ದೇವಿಂದ್ರಪ್ಪ ಸಿಪಿಸಿ-184 5) ಶ್ರೀ ಜಗದೀಶ ಸಿಪಿಸಿ-335 6) ಶ್ರೀ ದಯಾನಂದ ಸಿಪಿಸಿ-337 7) ಶ್ರೀ ಬಸಪ್ಪ ಸಿಪಿಸಿ-393 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ನಾಗಣ್ಣತಂದೆಚನ್ನಪ್ಪ ಪುಜಾರಿ ವ|| 32 ವರ್ಷಜಾ|| ದೇವಾಂಗ್ ಉ|| ಅರ್ಚಕ ಸಾ|| ರುಕ್ಮಾಪುರ 2) ಶ್ರೀ ಹಣಮಂತತಂದೆ ಬಾಲಯ್ಯಗೌಡ ಬಿರಾದರ ವ|| 32 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಚಂದ್ಲಾಪುರಇವರನ್ನು 5:30 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5:45ಪಿ.ಎಂ ಕ್ಕೆ ಠಾಣೆಯಜೀಪ್ ನಂ. ಕೆಎ-33.ಜಿ-238 ನೇದ್ದರಲ್ಲಿಠಾಣೆಯಿಂದ ಹೊರಟು 6:40 ಪಿ.ಎಂ ಕ್ಕೆ ಚಂದ್ಲಾಪುರಗ್ರಾಮದ ಹನುಮಾನದೇವರಗುಡಿಯ ಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಹನುಮಾನಗುಡಿಯ ಹತ್ತಿರ ಸಾರ್ವಜನಿಕಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೇಲೆಅವರ ಮೇಲೆ 6:45 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿಒಟ್ಟು 09 ಜನರು ಸಿಕ್ಕಿದ್ದು, ಒಬ್ಬ ವ್ಯಕ್ತಿಓಡಿಹೊಗಿದ್ದು, ಸಿಕ್ಕಿಬಿದ್ದ ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಚಿದಾನಂದತಂದೆ ಶರಣಪ್ಪ ಮೇಟಿ ವ|| 35 ವರ್ಷಜಾ|| ಕುರಬರ ಉ|| ಕೂಲಿ ಸಾ|| ಚಂದ್ಲಾಪುರತಾ|| ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 2500/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಆನಂದತಂದೆ ಸಂಗಪ್ಪ ಬಡಗ ವ|| 30 ವರ್ಷಜಾ|| ದೇವಾಂಗ ಉ|| ಗೌಂಡಿಕೆಸಲ ಸಾ|| ರುಕ್ಮಾಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 3000/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಚನ್ನಬಸಪ್ಪತಂದೆ ಬಸಪ್ಪ ಹುಗಾರ ವ|| 40 ವರ್ಷಜಾ|| ಹುಗಾರ ಉ|| ಕೂಲಿ ಸಾ|| ಹೆಮ್ಮಡಗಿಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 2600/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಶಿವಣ್ಣ ತಂದೆ ಭೀಮಣ್ಣ ನಾಗಶೇಟ್ಟಿ ವ|| 40 ವರ್ಷಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಶೇಳ್ಳಗಿ ಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 2800/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಅಮಲಪ್ಪತಂದೆತಿಮ್ಮಣ್ಣ ನಾಯಕ ವ|| 33 ವರ್ಷಜಾ|| ಬೇಡರು ಉ|| ಆಟೋ ಚಾಲಕ ಸಾ|| ತಿಮ್ಮಾಪುರ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 2700/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಅಮರೇಶತಂದೆ ಮಲ್ಲಿಕಾಜರ್ುನತಂಬಾಕಿ ವ|| 40 ವರ್ಷಜಾ||ಲಿಂಗಾಯತ ಉ|| ವ್ಯಾಪಾರ ಸಾ|| ದಿವಳಗುಡ್ಡ ಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 2200/- ರೂಗಳು ವಶಪಡಿಸಿಕೊಳ್ಳಲಾಯಿತು. 7) ಭೀಮಣ್ಣತಂದೆ ಮಲ್ಕಪ್ಪ ಚಾಕ ವ|| 54 ವರ್ಷಜಾ|| ರೆಡ್ಡಿ ಉ||ಖಾಸಗಿ ಶಿಕ್ಷಕ ಸಾ|| ತಿಮ್ಮಾಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 3100/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಮಲ್ಲಯ್ಯತಂದೆ ಬಸಣ್ಣಗುಜ್ಜಲ್ ವ|| 34 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಚಂದ್ಲಾಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 3100/- ರೂಗಳು ವಶಪಡಿಸಿಕೊಳ್ಳಲಾಯಿತು. 9) ಚಂದ್ರಾಮತಂದೆ ಶಿವಪ್ಪ ವಾರಿ ವ|| 45 ವರ್ಷಜಾ|| ಕುರಬರ ಉ|| ಒಕ್ಕಲುತನ ಸಾ|| ಚಂದ್ಲಾಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 3300/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆಇಟ್ಟ ಹಣ 17,910/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 43,210/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 6:45 ಪಿ.ಎಮ್ ದಿಂದ 7:45 ಪಿ.ಎಮ್ ವರೆಗೆಜೀಪ್ ಲೈಟಿನ ಬೆಳಗಿನಲ್ಲಿ ಬರೆದುಕೊಂಡಿದ್ದುಇರುತ್ತದೆ. ಸದರಿಯವರಿಂದ ಓಡಿ ಹೋದವನ ಹೆಸರು ವಿಳಾಸ ಕೇಳಿ ತಿಳಿದುಕೊಂಡಿದ್ದು 1) ಹಣಮಂತತಂದೆ ಸಿನಪ್ಪ ಮಾಲಿ ಪಾಟೀಲ್ ವ|| 45 ವರ್ಷಜಾ|| ಬೇಡರು ಉ|| ವ್ಯಾಪಾರ ಸಾ|| ಚಂದ್ಲಾಪುರಅಂತಾಇರುತ್ತದೆ. ಸದರಿ ಸಿಕ್ಕ 09 ಜನರೊಂದಿಗೆ ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, 09 ಜನಆರೋಪಿತರನ್ನು ಮತ್ತು ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಒಟ್ಟು 10 ಜನಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 203/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡುತನಿಖೆಕೈಕೊಂಡೇನು.


ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 120/2020 ಕಲಂ 20(ಎ)(ಬಿ) ಎನ್ಡಿಪಿಎಸ್ ಎಕ್ಟ್ 1985 : ಆರೋಪಿತರು ಬೆಳಗುಂದಿ ಸೀಮಾಂತರದ ಹೊಲ ಸವರ್ೆ ನಂ:345/5 ರಲ್ಲಿನ ಶಿವಸಿದ್ದ ಸೋಮೇಶ್ವರ ಮುಕ್ತಿ ಮಠದ ಹತ್ತಿರ ಗಾಂಜಾ ಗಿಡಗಳನ್ನು ಬೆಳೆದಿದ್ದು ಫಿಯರ್ಾದಿದಾರರು ದಿನಾಂಕ: 18-09-2020 ರಂದು 06-00 ಪಿಎಮ್ಕ್ಕೆ ದಾಳಿ ಮಾಡಿ ಒಟ್ಟು 2 ಕೆಜಿ 10 ಗ್ರಾಮ ಗಾಂಜಾ ಗಿಡಗಳು ಅವುಗಳ ಅಂದಾಜು ಕಿಮ್ಮತ್ತು 2000=00 ರೂ ಇರುತ್ತದೆ. ಗಾಂಜಾಗಿಡಗಳನ್ನು ವಶಕ್ಕೆ ತೆಗೆದುಕೊಂಡು ಇದರ ಬಗ್ಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಆರೋಪಿತರ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಿದ ಬಗ್ಗೆ.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!