ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/09/2020

By blogger on ಶನಿವಾರ, ಸೆಪ್ಟೆಂಬರ್ 19, 2020



                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/09/2020 

ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 201/2020 ಕಲಂ: 279, 338 ಐ.ಪಿಸಿ : ಇಂದು ದಿನಾಂಕಃ 17/09/2020 ರಂದು 4-00 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಕಿರಿಯ ಮಗನಾದ ಲಕ್ಷ್ಮೀಕಾಂತ @ ಕಾಂತಪ್ಪ ವಯಃ 35 ವರ್ಷ ಇತನು ದಿನಾಂಕ: 14/09/2020 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಮನೆಯಿಂದ ನಮ್ಮ ಮೋ.ಸೈಕಲ್ ನಂಬರ ಕೆ.ಎ 33 ಎಕ್ಸ್ 5843 ನೇದ್ದರ ಮೇಲೆ ಚನ್ನೂರ ಗ್ರಾಮದ ತನ್ನ ಮಾವನ ಮನೆಗೆ ಹೋಗಿ ತವರು ಮನೆಯಲ್ಲಿರುವ ತನ್ನ ಹೆಂಡತಿಯನ್ನು ಕರೆದುಕೊಂಡು ಬರುತ್ತೇನೆ ಅಂತ ನಮಗೆ ಮನೆಯಲ್ಲಿ ಹೇಳಿ ಹೋಗಿದ್ದನು. ನಂತರ  ಸಾಯಂಕಾಲ 5-45 ಗಂಟೆಗೆ ನಾವು ಮನೆಯಲ್ಲಿದ್ದಾಗ ನನ್ನ ಮಗನಾದ ಲಕ್ಷ್ಮೀಕಾಂತ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ನಮ್ಮ ಮೋ.ಸೈಕಲ್ ಮೇಲೆ ಕೆಂಭಾವಿಯಿಂದ ಸುರಪೂರ ಕಡೆಗೆ ಮುಖ್ಯರಸ್ತೆಯ ಮೇಲೆ ನನ್ನ ಸೈಡಿಗೆ ಹೊರಟಿದ್ದಾಗ 5-30 ಪಿ.ಎಮ್ ಸುಮಾರಿಗೆ ಸಿದ್ದಾಪೂರ ದಾಟಿ ಬರುವ ಕೆರೆಯ ಪಕ್ಕದ ತಿರುವು ರಸ್ತೆಯಲ್ಲಿ ಸುರಪೂರ ಕಡೆಯಿಂದ ಕಾರ ನಂಬರ ಕೆ.ಎ 28 ಝೆಡ್ 0511  ನೇದ್ದರ ಚಾಲಕನು ತನ್ನ ಕಾರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ವೇಗದಲ್ಲಿ ಕಾರ ಕಟ್ ಮಾಡದೇ ನೇರವಾಗಿ ನನ್ನ ಮೋ.ಸೈಕಲಿಗೆ ಡಿಕ್ಕಿಪಡಿಸಿದ್ದರಿಂದ ನಾನು ಮೋ.ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದೇನು. ಅಪಘಾತದಲ್ಲಿ ನನ್ನ ಬಲಗಾಲು ಮೊಣಕಾಲಿನ ಕೆಳಗಡೆ ಎಲಬು ಮುರಿದು ಭಾರಿಗುಪ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ಕಾರ ಚಾಲಕ ಹಾಗು ಅದರಲ್ಲಿದ್ದ ಇನ್ನೊಬ್ಬ ವ್ಯಕ್ತಿ ಇಬ್ಬರೂ ನನಗೆ ಸುರಪೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದು ಬೇಗ ಬರುವಂತೆ ತಿಳಿಸಿದನು. ಆಗ ನಾವು ಗಂಡ-ಹೆಂಡತಿ ಇಬ್ಬರೂ ಖಾಸಗಿ ಕಾರಿನಲ್ಲಿ ಸುರಪೂರ ಆಸ್ಪತ್ರೆಗೆ ಬಂದು ನನ್ನ ಮಗನಿಗೆ ನೋಡಿರುತ್ತೇವೆ. ಅಪಘಾತ ಪಡಿಸಿದ ಕಾರ ಚಾಲಕ ಆಸ್ಪತ್ರೆಯಲ್ಲೆ ಇದ್ದಾಗ ಆತನ ಹೆಸರು ವಿಳಾಸ ವಿಚಾರಿಸಲಾಗಿ ಹುಸೇನಸಾಬ ತಂದೆ ಫಕೀರಸಾಬ ನದಾಫ ಸಾ: ಮುದನೂರ (ಕೆ) ತಾಃ ಸುರಪೂರ ಅಂತ ತಿಳಿಸಿರುತ್ತಾನೆ. ಬಳಿಕ ವೈದ್ಯರು ನನ್ನ ಮಗನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ, ಅಂದು ಅವಸರವಾಗಿ ಅಂಬ್ಯೂಲೇನ್ಸ್ ವಾಹನದಲ್ಲಿ ನನ್ನ ಮಗನಿಗೆ ಹಾಕಿಕೊಂಡು ಕಲಬುರಗಿಗೆ ಕರೆದುಕೊಂಡು ಹೋಗಿ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ಅಲ್ಲಿ ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸುತ್ತಿದ್ದೇನೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಕಾರ ನಡೆಸಿಕೊಂಡು ಹೋಗಿ ನನ್ನ ಮಗನಿಗೆ ಡಿಕ್ಕಿ ಹೊಡೆದು ಭಾರಿ ಗುಪ್ತಗಾಯ ಪಡಿಸಿರುವ ಕಾರ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 201/2020 ಕಲಂ. 279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 202/2020 ಕಲಂ: 504, 505(2), 295(ಎ) ಐ.ಪಿಸಿ : ಇಂದು ದಿನಾಂಕಃ 17/09/2020 ರಂದು 8-30 ಪಿ.ಎಮ್ ಕ್ಕೆ ಶ್ರೀ ಲಕ್ಷ್ಮಣ ತಂದೆ ಸಂಜೀವಪ್ಪ ನಾವದಗಿ ಸಾ: ದೇವತಕಲ್ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಸುರಪೂರ ತಾಲೂಕಿನ ದೇವತಕಲ್ ಗ್ರಾಮದ 1)  ಬಸವರಾಜ ತಂದೆ ಚೆಳ್ಳಿಗೆಣ್ಣ ದೊಡ್ಡಮನಿ, 2) ಲಂಕೇಶ ತಂದೆ ಮಾಳಪ್ಪ ದೊಡ್ಡಮನಿ ಇವರಿಬ್ಬರೂ ಕೂಡಿಕೊಂಡು ವೀರ ಹೊರಾಟಗಾರನಾದ ಮದಕರಿ ನಾಯಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಡಿಯೋ ಅನ್ನು ವಾಟ್ಸಪ್ ನಲ್ಲಿ ಹರಿಬಿಟ್ಟಿರುತ್ತಾರೆ. ಇವರ ಮೊಬೈಲ್ ನಂಬರ 8971783981 ನಿಂದ ದಿನಾಂಕ: 16-09-2020 ರಂದು 10-11 ನಿಮಿಷಕ್ಕೆ ವಾಟ್ಸಪ್ ಸ್ಟೇಟಸ್ ಇಟ್ಟು ಹರಿಬಿಟ್ಟಿರುತ್ತಾರೆ. ಇದನ್ನು ನೋಡಿದ ನಾನು ನಮ್ಮ ಸಮಾಜದ ಮುಖಂಡರಿಗೂ, ತಾಲೂಕಾ ಸಂಘಟನೆಗಳಿಗೂ ತಿಳಿಸಿರುತ್ತೇನೆ. ಇವರಿಬ್ಬರೂ ಉದ್ದೇಶಪೂರ್ವಕವಾಗಿ ಸಮಾಜ ಸಮಾಜದ ನಡುವೆ ವೈಮನಸ್ಸು ಹುಟ್ಟಿಸುವ ಉದ್ದೇಶದಿಂದ ಅವಹೇಳನಕಾರಿ ಮಾತನಾಡಿರುವ ವಿಡಿಯೋ ಬಿಟ್ಟಿರುತ್ತಾರೆ. ಆದ್ದರಿಂದ ಸದರಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 202/2020 ಕಲಂ. 504, 505(2), 295(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.



ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 80/2020 ಕಲಂ:143,147,341,323,324,504,506,427 ಸಂ.149 ಐಪಿಸಿ : ಇಂದು ದಿನಾಂಕ.17/09/2020 ರಂದು 12-30 ಪಿಎಂಕ್ಕೆ ಶ್ರೀ  ಭಗವಾನ ತಂದೆ ದಾವುಜೀ ರಾಠೋಡ ವಃ 35 ವರ್ಷ, ಜಾಃ ಲಂಬಾಣಿ ಉಃ ಒಕ್ಕಲುತನ ಸಾಃ ಮುದ್ನಾಳ ದೊಡ್ಡ ತಾಂಡಾ ತಾಃಜಿಃಯಾದಗಿರಿ ರವರು ಠಾಣೆಗೆ ಹಾರಜಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ.16/09/2020 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಕಿರಾಣಿ ಸಾಮಾನುಗಳನ್ನು ತೆಗೆದುಕೊಳ್ಳಲು ಹಾಗೂ ಬ್ಯಾಟರಿ ಚಾರ್ಜರ ರಿಪೇರಿಗೆ ಯಾದಗಿರಿಗೆ ಬಂದಿದ್ದು ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ನನ್ನ ದ್ವೀಚಕ್ರ ವಾಹನ ಬಜಾಜ ಡಿಸ್ಕವರಿ ನಂ.ಕೆಎ-33-ಡಬ್ಲೂ-6462 ನೇದ್ದರ ಮೇಲೆ ನಮ್ಮ ಊರಿಗೆ ಹೋಗುತ್ತಿರುವಾಗ ಮದ್ಯಾಹ್ನ 2-30 ಗಂಟೆ ಸುಮಾರಿಗೆ ನಾನು ಸುಭಾಸ ಚೌಕ ಮೂಲಕ ನಮ್ಮ ತಾಂಡಕ್ಕೆ ಹೋರಟಾಗ ಸುಭಾಸ ಚೌಕದಲ್ಲಿ ಯಾದಗಿರಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘದವರಿಂದ ಶ್ರೀ ಮಹಷರ್ಿ ವಾಲ್ಮೀಕಿ ಋಷಿಗಳ ಬಗ್ಗೆ ಅವಾಮಾನ ಮಾಡಿರುತ್ತಾರೆ ಅಂತಾ ಪ್ರತಿಭಟನೆ ಹಮ್ಮಿಕೊಂಡಿದ್ದು ಪ್ರತಿಭಟನೆ ಕಾಲಕ್ಕೆ ಸುಭಾಸಚೌಕದಲ್ಲಿ ಜನರು ಸೇರಿದ್ದು ಆಗ ನಾನು ಊರಿಗೆ ಹೋಗಲು ದಾರಿ ಬಿಡುವಂತೆ ಅವರಿಗೆ ಕೇಳಿಕೊಂಡಾಗ ಪ್ರತಿಭಟನೆಯಲ್ಲಿ ಇದ್ದ ಕೆಲವರು ನನಗೆ ತಡೆದು ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬೈದು ದಾರಿ ಬಿಡುವಿದಿಲ್ಲಾ ಮಗನೇ ಪ್ರತಿಭಟನೆ ನಡೆದಿದ್ದು ಗೊತ್ತಾಗ್ತಾ ಇಲ್ಲಾ ಅಂತಾ ಅಂದಾಗ ನಾನು ಅವರಿಗೆ ಸ್ವಲ್ಪ ಅರ್ಜಂಟ ಊರಿಗೆ ಹೋಗುವುದಿದೆ ಅಂದಿದ್ದಕ್ಕೆ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹೇಗೆ ಹೋಗುತ್ತಿಯಾ ಮಗನೇ ಮುಂದಕ್ಕೆ ಹೋದರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಪ್ರತಿಭಟನೆಯಲ್ಲಿದ್ದ ಸುಮಾರು 10-15 ಜನರು ಕೂಡಿಕೊಂಡು ನನಗೆ ಕೈಯಿಂದ ಹೊಡೆ ಬಡೆ ಮಾಡಿ ನನ್ನ ಮೋಟಾರ ಸೈಕಲ ಮೇಲೆ ಕಲ್ಲು ಎತ್ತಿ ಹಾಕಿ ಅಂ.ಕಿ.20,000/-ರೂ ದಷ್ಟು ಲುಕ್ಸಾನ ಮಾಡಿದ್ದು ನನಗೆ ಕುತ್ತಿಗೆ, ಬೆನ್ನಿಗೆ, ಸೊಂಟಕ್ಕೆ, ತಲೆಗೆ, ಎಡಕಿಗೆ, ಹಾಗೂ ಅಲ್ಲಲ್ಲಿ ಒಳಪೆಟ್ಟುಗಳಾಗಿದ್ದು ಅವರಲ್ಲಿ ಒಬ್ಬನು ಬಡಿಗೆಯಿಂದ ತಲೆಗೆ ಹೊಡೆದಿರುತ್ತಾನೆ. ಆಗ ನಾನು ಚೀರಾಡುತ್ತಿರುವಾಗ ಅಲ್ಲಿದ್ದ ಪೊಲಿಸರು ಮತ್ತು ಇತರೆ ಸಾರ್ವಜನಿಕರು ಜಗಳವನ್ನು ಬಿಡಿಡಸಿದ್ದು ಆಗ ನಾನು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಆಗಿದ್ದು ಇರುತ್ತದೆ. ನನಗೆ ಹೊಡೆ ಬಡೆ ಮಾಡಿ ಮಾಡಿ ನನ್ನ ಮೋಟಾರ ಸೈಕಲ ಮೇಲೆ ಕಲ್ಲು ಎತ್ತಿ ಹಾಕಿ ಲುಕ್ಸಾನ ಮಾಡಿದವರ ಹೆಸರುಗಳು ನನಗೆ ಗೋತ್ತಾಗಿರುವುದಿಲ್ಲಾ ನಾನು ನೋಡಿದಲ್ಲಿ ಗುತರ್ಿಸುತ್ತೇನೆ ಮತ್ತು ಅವರ ಹೆಸರುಗಳು ಗೊತ್ತಾದಲ್ಲಿ ತಿಳಿಸುತ್ತೇನೆ. ನಾನು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಕಾಲಕ್ಕೆ ಯಾದಗಿರಿ ನಗರ ಠಾಣೆ ಪೊಲೀಸರು ಬಂದು ನನಗೆ ವಿಚಾರಿಸಿದ್ದು ನಾನು ನಮ್ಮ ಮನೆಯಲ್ಲಿ ವಿಚಾರಿಸಿ ನಂತರ ಈ ಬಗ್ಗೆ ಠಾಣೆಗೆ ಬಂದು ದೂರು ನೀಡುತ್ತೇನೆ ಅಂತಾ ತಿಳಿಸಿದ್ದು ಕಾರಣ ಈಗ ನಾನು ಮನೆಯಲ್ಲಿ ವಿಚಾರಿಸಿದ್ದು ನಮ್ಮ ಮನೆಯವರು ಕೇಸು ಮಾಡುವಂತೆ ತಿಳಿಸಿದ್ದರಿಂದ ಇಂದು ದಿನಾಂಕ.17/09/2020 ರಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ನೀಡುತ್ತಿದ್ದು ನನಗೆ ಹೊಡೆ ಬಡೆ ಮಾಡಿ ನನ್ನ ಮೋಟಾರ ಸೈಕಲ ಮೇಲೆ ಕಲ್ಲು ಎತ್ತಿ ಹಾಕಿ ಲುಕ್ಸಾನ ಮಾಡಿದವರ ಮೆಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.80/2020 ಕಲಂ.143,147, 341,323,324,504,506,427 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 81/2020 ಕಲಂ: ಪ್ರಿವೆನಶನ ಆಫ್ ಡ್ಯಾಮೆಜ್ ಟು ಪಬ್ಲಿಕ ಪ್ರಾಪಟರ್ಿ ಅ್ಯಕ್ಟ-1984 : ಇಂದು ದಿನಾಂಕ.17/09/2020 ರಂದು 2-15 ಪಿಎಂಕ್ಕೆ ಶ್ರೀ ಗೋವಿಂದಪ್ಪಗೌಡ ತಂ. ಹಣಮಗೌಡ ಪಾಟೀಲ ವಃ 33 ವರ್ಷ, ಜಾಃ ಹಿಂದು ಬೇಡರು ಉಃ ಕೆ.ಎಸ್.ಆರ್.ಟಿ.ಸಿ.ಬಸ್ ಚಾಲಕ ಸಾಃ ಬಸಾಪೂರ ತಾಃಹುಣಸಗಿ ಜಿಃಯಾದಗಿರಿ ರವರು ಠಾಣೆಗೆ ಹಾರಜಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ,  ನಾನು ಯಾದಗಿರಿ ಎನ್.ಇ.ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋದಲ್ಲಿ 8 ವರ್ಷಗಳಿಂದ ಚಾಲಕ ಅಂತಾ ಕರ್ತವ್ಯ ನಿರ್ವಸುತ್ತಿದ್ದೆನೆ. ನನ್ನ ಚಾಲಕನ ಬಿಲ್ಲೆ ಸಂ.837 ಇದ್ದು ನನಗೆ ಮತ್ತು ನಿವರ್ಾಕರಾದ ಪಂಡರಿ ಬಿಲ್ಲೆ ಸಂ. 7538 ರವರಿಗೆ ಮಾರ್ಗ ಸಂ. 16, 17 ಆದ ಯಾದಗಿರಿಯಿಂದ-ವಾಡಿಗೆ ಪ್ಯಾಸೆಂಜರುಗಳನ್ನು ತುಂಬಿಕೊಂಡು ಹೋಗಿ ಬರಲು   ದಿನಾಂಕ.15/09/2020 ರಿಂದ 16/09/2020 ರವರೆಗೆ ಕರ್ತವ್ಯಕ್ಕೆ ನೇಮಿಸಿದ್ದರಿಂದ, ದಿನಾಂಕ.15/09/2020 ರಂದು ಯಾದಗಿರಿಯಿಂದ-ವಾಡಿಗೆ ಟ್ರಿಪ್ ಹೋಗಿ ಬಂದಿದ್ದು ನಂತರ ನಿನ್ನೆ ದಿನಾಂಕ.16/09/2020 ರಂದು ಯಾದಗಿರಿಯಿಂದ-ವಾಡಿಗೆ ಹೋಗುವ ಕುರಿತು ಕೆ.ಎಸ್.ಅರ್.ಟಿ.ಸಿ ಬಸ್ ನಂ.ಕೆಎ33-ಎಫ.0350 ನೇದ್ದಕ್ಕೆ  ನನಗೆ ಚಾಲಕ ಅಂತಾ ಮತ್ತು ನಿವರ್ಾಹಕ ಪಂಡರಿ ತಂ. ದೇವಜೀ ಚವ್ಹಾಣ ಬಿಲ್ಲೆ ಸಂ. 7538 ರವರಿಗೆ ಕರ್ತವ್ಯಕ್ಕೆ ನೇಮಿಸಿದ್ದರು ಅದರಂತೆ ನಾವು ಮೇಲ್ಕಂಡ ಬಸನ್ನು ತೆಗೆದುಕೊಂಡು ಯಾದಗಿರಿಯಿಂದ ಪ್ಯಾಸೆಂಜರಗಳನ್ನು ತುಂಬಿಕೊಂಡು ಬೆಳೆಗ್ಗೆ 7-30 ಗಂಟೆಗೆ ಹೋರಟು ವಾಡಿಗೆ ಹೋಗಿ ನಂತರ ಯಾದಗಿರಿಗೆ ಬಂದಿದ್ದೆವು ಬೆಳಿಗ್ಗೆಯಿಂದ ಎರಡು ಟ್ರಿಪಗಳು ಮುಗಿಸಿದ್ದೆವು. ನಂತರ ಮೂರನೇ ಟ್ರಿಪ್ ಯಾದಗಿರಿಯಿಂದ-ವಾಡಿಗೆ ಹೋಗಲು ಹೊಸ ಬಸ್ ನಿಲ್ದಾಣಕ್ಕೆ ಬಂದು ಪ್ಯಾಸೆಂಜರಗಳನ್ನು ತುಂಬಿಕೊಂಡು ನಿನ್ನೆ ಮದ್ಯಾಹ್ನ 2-50 ಗಂಟೆ ಸುಮಾರಿಗೆ ಯಾದಗಿರಿ ನಗರದ ಡಾನ್ ಭೋಸ್ಕೋ ಶಾಲೆ ಹತ್ತಿರ ವಾಡಿಗೆ ಹೋಗುವ ಕುರಿತು ಹೋರಟಾಗ ಯಾದಗಿರಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘದವರಿಂದ ಶ್ರೀ ಮಹಷರ್ಿ ವಾಲ್ಮೀಕಿ ಋಷಿಗಳ ಬಗ್ಗೆ ಅವಾಮಾನ ಮಾಡಿರುತ್ತಾರೆ ಅಂತಾ ಪ್ರತಿಭಟನೆ ಹಮ್ಮಿಕೊಂಡಿದ್ದು, ಜನರು ಪ್ರತಿಭಟನೆ ಹೋರಟಿದ್ದು ಪ್ರತಿಭಟನೆಯಲ್ಲಿ ಬಹಳಷ್ಟು ಜನರು ಸೇರಿ ಯಾದಗಿರಿ-ಚಿತ್ತಾಪೂರ ರಸ್ತೆಯ ಮೇಲೆ ಬರುವ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಕಡೆಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ಆಗ ನಾನು ಬಸ್ನ್ನು ಸೈಡಿನಿಂದ ತೆಗೆದುಕೊಂಡು  ನಿಧಾನವಾಗಿ ಚಾಲಾಯಿಸಿಕೊಂಡು ಹೋಗುತ್ತಿರುವಾಗ ಪ್ರತಿಭಟನೆಯಲ್ಲಿದ್ದ ಕೆಲವು ಕಿಡಗೇಡಿಗಳು ನಮ್ಮ ಸಕರ್ಾರಿ ಬಸ್ಗೆ ಹಿಂದೆ ಅಳವಡಿಸಿದ ದೊಡ್ಡ ಗ್ಲಾಸಗೆ ಕಲ್ಲಿನಿಂದ ಹೊಡೆದು, ಗ್ಲಾಸ್ ಚೂರು ಮಾಡಿ ಲುಕ್ಸಾನ ಮಾಡಿದ್ದು ಪ್ರತಿಭಟನೆಯಲ್ಲಿ ಬಹಳಷ್ಟು ಜನರು ಸೇರಿದ್ದರಿಂದ ಗ್ಲಾಸ ಹೊಡೆದು ಹಾಕಿದವರ ಯಾರೆಂಬುವುದರ ಬಗ್ಗೆ ನಮಗೆ ತಿಳಿದು ಬಂದಿರುವುದಿಲ್ಲಾ. ಯಾರೊ ಕಿಡಗೇಡಿಗಳು ಈ ಕೃತ್ಯ ವೆಸಗಿದ್ದು ನಂತರ ಬಸ್ನ್ನು ಸೈಡಿನಲ್ಲಿ ನಿಲ್ಲಿಸಿ ಪ್ಯಾಸೆಂಜರುಗಳನ್ನು ಬೇರೆ ಬಸ್ನಲ್ಲಿ ಹತ್ತಿಸಿ ಕಳುಹಿಸಿಕೊಟ್ಟಿದ್ದು ಇರುತ್ತದೆ. ನಂತರ ಉಳಿದ ಸಂಚಾರಿ ವಾಹನಗಳಿಗೆ ತೊಂದರೆ ಆಗಬಹುದು ಅಂತಾ ಬಸನ್ನು ತೆಗೆದುಕೊಂಡು ಡಿಪೋಕ್ಕೆ ಹೋಗಿ ಹಿರಿಯ ಅಧಿಕಾರಿಗಳಿಗೆ ತೋರಿಸಿ ವಿಚಾರಿಸಿದ್ದು ರಾತ್ರಿ ತಡವಾಗಿರುತ್ತದೆ. ನಮ್ಮ ಹಿರಿಯ ಅಧಿಕಾರಿಗಳಲ್ಲಿ ಕೇಸು ಮಾಡುವಂತೆ ತಿಳಿಸಿದ್ದರಿಂದ ಇಂದು ದಿನಾಂಕ.17/09/2020 ರಂದು ಬಸ್ ಸಮೇತ ತಮ್ಮ ಠಾಣೆಗೆ ತಡವಾಗಿ ಬಂದು ದೂರು ಅಜರ್ಿ ನೀಡುತ್ತಿದ್ದು ಯಾರೋ ಕಿಡಗೇಡಿಗಳು ಎನ್.ಇ.ಕೆ.ಎಸ್.ಆರ್.ಟಿ.ಸಿ ಸಕರ್ಾರಿ ಬಸ್ ನಂ. ಕೆಎ-33-ಎಫ್.0350 ನೇದ್ದರ ಹಿಂದಿನ ಗ್ಲಾಸ್ಗೆ ಕಲ್ಲಿನಿಂದ ಹೊಡೆದು ಗ್ಲಾಸ ಒಡೆದು ಹಾಕಿ ಅಂ.ಕಿ.12,000/-ರೂ ದಷ್ಟು ಹಾಕಿ ಲುಕ್ಸಾನ ಮಾಡಿದ್ದು ಆರೋಪಿತರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.81/2020 ಕಲಂ. 3 ಪ್ರಿವೇನಶನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪಟರ್ಿ ಆ್ಯಕ್ಟ 1984 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

      

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 142/2020 ಕಲಂ: 279,337,304[ಎ] ಐ.ಪಿ.ಸಿ ಸಂಗಡ 187 ಐ ಎಮ್ ವಿ ಆಕ್ಟ್  : ಇಂದು ದಿನಾಂಕ 17.09.2020 ರಂದು 3.45 ಗಂಟೆಗೆ ಗಾಯಾಳು ಶ್ರೀ ನಿಂಗಪ್ಪ ತಂದೆ ಜೆಟ್ಟೆಪ್ಪ ಹೊಟ್ಟಿ ವ|| 40 ಜಾ|| ಕುರಬರ ಉ|| ಒಕ್ಕಲುತನ ಸಾ|| ಮಾಳಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನನ್ನ ಮನೆಯು ಸುರಪೂರ-ಪರಸನಳ್ಳಿ ಮುಖ್ಯ ರಸ್ತೆಯ ಪಕ್ಕದಲ್ಲಿದ್ದು ಇಂದು ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ಕೆಂಭಾವಿಗೆ ಬಂದಿದ್ದು ನಂತರ ನಾನು ನಮ್ಮ ಮನೆಗೆ ಹೋಗುವ ಕುರಿತು ಮದ್ಯಾಹ್ನ 1 ಗಂಟೆಗೆ ಕೆಂಭಾವಿ ಬಸ್ಸ ನಿಲ್ದಾಣದಲ್ಲಿದ್ದಾಗ ನನಗೆ ಪರಿಚಯವರಾದ ರೇವಣಸಿದ್ದಪ್ಪ ತಂದೆ ನಿಂಗಪ್ಪ ಯರಗಲ ಈತನು ತನ್ನ ಮೋಟರ್ ಸೈಕಲ ತೆಗೆದುಕೊಂಡು ಪರಸನಳ್ಳಿಗೆ ಹೋಗುವದಾಗಿ ತಿಳಿಸಿದ್ದು ನಾನು ಸಹ ನಮ್ಮ ಮನೆಗೆ ಬರುತ್ತೇನೆ ಅಂತ ಹೇಳಿದಾಗ ಸದರಿ ರೇವಣಸಿದ್ದ ಈತನು ಬಾ ಅಂದಿದ್ದು ನಾನು ರೇವಣಸಿದ್ದಪ್ಪ ಈತನ ಮೋಟರ ಸೈಕಲ ನಂಬರ ಕೆಎ-26 ಹೆಚ್-7161 ನೇದ್ದರ ಮೇಲೆ ಕುಳಿತು ಇಬ್ಬರೂ ಸುರಪೂರ ಕೆಂಭಾವಿ ಮುಖ್ಯ ರಸ್ತೆಯ ಪರಸನಳ್ಳಿ ವೈಷ್ಣವಿ ದಾಬಾದ ಪಕ್ಕದಲ್ಲಿ ರೋಡಿನ ಎಡಮಗ್ಗಲಿಗೆ ಹೊರಟಿದ್ದು ಅದೇ ಸಮಯಕ್ಕೆ ಒಂದು ಬಸ್ಸ ಕೆಂಭಾವಿ ಕಡೆಯಿಂದ ಬಂದು ನಮಗೆ ಹಿಂದಿಕ್ಕಿ ಮುಂದೆ ಹೋಗಿದ್ದು ನಾವು ಸಹ ನಮ್ಮ ಮೋಟರ್ ಸೈಕಲ ಮೇಲೆ ಪರಸನಳ್ಳಿ ಕಡೆಗೆ ಹೊರಟಾಗ ಅಂದಾಜು 1.30 ಪಿಎಮ್ ಸುಮಾರಿಗೆ ನಮ್ಮ ಮುಂದೆ ಹೋಗುತ್ತಿದ್ದ ಬಸ್ ಚಾಲಕನು ಒಮ್ಮಲೇ ತನ್ನ ಬಸ್ಸನ್ನು  ಅಲಕ್ಷತನದಿಂದ ರೋಡಿನ ಬಲಭಾಗಕ್ಕೆ ಹೋಗಿ ಒಮ್ಮಲೆ ಎಡಭಾಗಕ್ಕೆ ಬಂದಿದ್ದರಿಂದ ಸದರಿ ಬಸ್ಸಿನ ಹಿಂದಿನ ಟೈರ ನಮ್ಮ ಮೋಟರ ಸೈಕಲಗೆ ಬಲವಾಗಿ ಬಡೆದು ನಾವಿಬ್ಬರೂ ಮೋಟರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ಸದರ ಅಪಘಾತದಲ್ಲಿ ನನಗೆ ಬಲಮೆಲಕಿಗೆ, ಎರಡು ಮೊಳಕಾಲಿಗೆ ಹಾಗು ಎಡಭುಜಕ್ಕೆ ತರಚಿದ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು ನಂತರ ಅಲ್ಲಿಯೇ ರೋಡಿನ ಪಕ್ಕದಲ್ಲಿ ಬಿದ್ದ ನಮ್ಮ ಮೋಟರ ಸೈಕಲ ಚಾಲಕ ರೇವಣಸಿದ್ದ ತಂದೆ ನಿಂಗಪ್ಪ ಯರಗಲ ಈತನಿಗೆ ನೋಡಲು ಆತನಿಗೆ ಬಲಗಡೆ ಹಣೆಗೆ ಹಾಗು ಕಣ್ಣಿನ ಹತ್ತಿರ ಭಾರೀ ರಕ್ತಗಾಯವಾಗಿ ಮೂಗಿಗೂ ಸಹ ಭಾರೀ ರಕ್ತಗಾಯವಾಗಿ ಎಡಗಡೆ ಕಿವಿಯಿಂದ ರಕ್ತಸ್ರಾವವಾಗಿ ನರಳಾಡುತ್ತಿದ್ದು ಅಷ್ಟರಲ್ಲಿ 108 ವಾಹನ ಬಂದು ನಮ್ಮ ಮೋಟರ ಸೈಕಲ ಚಾಲಕನಾದ ರೇವಣಸಿದ್ದಪ್ಪ ಈತನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಹೋಗಿದ್ದು ನಂತರ ನಾನು ನಮಗೆ ಅಪಘಾತ ಪಡಿಸಿದ ಅಲ್ಲಿಯೇ ನಿಂತಿದ್ದ  ಬಸ್ಸ ನಂಬರ ನೋಡಲಾಗಿ ಕೆಎ-33 ಎಫ್- 0257 ಅಂತ ಇದ್ದು ಸದರಿ ಬಸ್ಸ ಕೆಂಭಾವಿ ಸುರಪೂರ ಬಸ್ಸ ಆಗಿದ್ದು ಅದರ ಚಾಲಕ ಇರಲಿಲ್ಲ ನಂತರ ಅಲ್ಲಿಯೇ ಇದ್ದ ಕಂಡಕ್ಟ್ರರ್ನಿಂದ ಚಾಲಕನ ಬಗ್ಗೆ ವಿಚಾರಿಸಿ ತಿಳಿಯಲಾಗಿ ರಾಮಣ್ಣ ಮಡಿವಾಳ ಸಾ|| ಪೇಠಅಮ್ಮಾಪೂರ ಹಾಗು ಬಸ್ಸ ಡಿಪೋ ಸುರಪೂರ ಅಂತ ಗೊತ್ತಾಗಿದ್ದು. ನಂತರ ನಾನು ಸಹ ಒಂದು ಖಾಸಗಿ ವಾಹನ ಹಿಡಿದು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದಿದ್ದು ಸೇರಿಕೆಯಾಗಿದ್ದು ಮತ್ತು ಸದರಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ರೇವಣಸಿದ್ದಪ್ಪ ತಂದೆ ನಿಂಗಪ್ಪ ಯರಗಲ ಈತನು ತನಗಾದ ಭಾರೀ ರಕ್ತಗಾಯದಿಂದ  ಆಸ್ಪತ್ರೆಯಲ್ಲಿಯೇ ಮದ್ಯಾಹ್ನ 3 ಗಂಟೆಗೆ ಮೃತಪಟ್ಟನು. ಕಾರಣ ನನಗೂ ಹಾಗು ನಮ್ಮ ಮೋಟರ ಸೈಕಲ ಚಾಕಲ ರೇವಣಸಿದ್ದ ಇವರಿಗೆ ಅಪಘಾತಪಡಿಸಿ ರೇವಣಸಿದ್ದಪ್ಪ ಈತನ ಸಾವಿಗೆ ಕಾರಣೀಬೂತನಾದ  ಬಸ್ಸ ನಂಬರ ಕೆಎ-33 ಎಫ್-0257 ನೇದ್ದರ ಚಾಲಕ ರಾಮಣ್ಣ ಮಡಿವಾಳ ಸುರಪೂರ ಡಿಪೋ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 142/2020 ಕಲಂ 279,337,304[ಎ] ಐಪಿಸಿ ಸಂಗಡ 187 ಐಎಮ್ವ್ಹಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 79/2020 ಕಲಂ: 78(3) ಕೆ.ಪಿ ಆಕ್ಟ್ : ದಿನಾಂಕ:17.09.2020 ರಂದು 3:30 ಪಿ.ಎಮ್.ಕ್ಕೆ ಸಕರ್ಾರಿ ತಫರ್ೇ ಶ್ರೀ ಬಾಷುಮಿಯಾ ಪಿಎಸ್ಐ ಕೊಡೇಕಲ್ಲ ಠಾಣೆ ಇವರು ನೀಡಿದ ಜ್ಞಾಪನ ಪತ್ರದ ಸಾರಾಂಶವೆನೇಂದರೆ ದಿನಾಂಕ:17/09/2020 ರಂದು 1:00 ಪಿ.ಎಮ್.ಕ್ಕೆ ನಾನು ಠಾಣೆಯಲ್ಲಿದ್ದಾಗ ಶ್ರೀ ಸದಾಶಿವ ಸೊನವನೆ ಪಿಐ ಡಿಸಿಐಬಿ ಘಟಕ ಯಾದಗಿರ ಜಿಲ್ಲೆ ರವರು ಗೆದ್ದಲಮರಿ ಗ್ರಾಮದಲ್ಲಿನ ರಾಮ್ ಟೇಲರ್ ಅಂಗಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1ರೂಪಾಯಿ 80ರೂಪಾಯಿ ಕೊಡುತ್ತೇವೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ತಮಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ. ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ನೀಡಿದ ಅನುಮತಿಯನ್ನು ಕಜ್ಜಪ್ಪ ಪಿಸಿ-251 ರವರು ಪಡೆದುಕೊಂಡು ತಂದು ಹಾಜರ ಪಡಿಸಿದ್ದು. ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:79/2020 ಕಲಂ: 78() ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 6:50 ಪಿ.ಎಮ್ಕ್ಕೆ ಮರಳಿ ಠಾಣೆಗೆ ಬಂದು ಮೂರು ಬಾಲ್ ಪೆನನ್ನು, ಅಂಕಿ ಸಂಖ್ಯೆಗಳನ್ನು ಬರೆದ ಮೂರು ಮಟಕಾ ಚೀಟಿ ಹಾಗೂ ನಗದು ಹಣ 5890/-ರೂ ಗಳನ್ನು ಮೂರು ಜನರನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 1) ಖಾನಪ್ಪ ತಂದೆ ಕಸನಪ್ಪ ಚವ್ಹಾಣ ವ||25ವರ್ಷ ಜಾ|| ಹಿಂದೂ ಲಂಬಾಣಿ ಉ|| ಟೇಲರಿಂಗ್ ಕೆಲಸ ಸಾ|| ಜುಮಾಲಪೂರ ದೊಡ್ಡತಾಂಡಾ, 2) ಪ್ರಕಾಶ ತಂದೆ ನಾರಾಯಣ ಚವ್ಹಾಣ ವ|| 22ವರ್ಷ ಜಾ|| ಹಿಂದೂ ಲಂಬಾಣಿ, ಉ|| ಟೇಲರಿಂಗ್, ಸಾ||ಜುಮಾಲಪೂರ ದೊಡ್ಡತಾಂಡಾ, 3) ಅಂಬ್ರೇಶ ತಂದೆ ಜಗನಪ್ಪ ಪವಾರ ವ|| 24ವರ್ಷ ಜಾ|| ಹಿಂದೂ ಲಂಬಾಣಿ, ಉ|| ಒಕ್ಕಲುತನ ಸಾ|| ಗೆದ್ದಲಮರಿ ತಾಂಡಾ


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 09/2020 ಕಲಂ 174  ಸಿ.ಆರ್.ಪಿಸಿ : ಇಂದು ದಿನಾಂಕ 17/09/2020 ರಂದು 12.30 ಪಿಎಮ್ ಕ್ಕೆ ಜೇಲ್ ಪೊಲೀಸ್ ಠಾಣೆ ಸೋಲಾಪೂರ ರವರಿಂದ ಅಂಚೆಯ ಕೆಲವು ದಾಖಲಾತಿಗಳು ವಸೂಲಾಗಿದ್ದು ಅದರ ಸಾರಾಂಶವೇನೆಂದರೆ ಶಹಾಪೂರ ತಾಲೂಕಿನ ಅಣಬಿ ಗ್ರಾಮದ ಪದ್ಮಾ ತಂದೆ ತಿಮ್ಮಣ್ಣ ವ: 13 ವರ್ಷ ಇವಳಿಗೆ ದಿನಾಂಕ 03/09/2020 ರಂದು ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಆಕೆಯ ಎಡಗಾಲು ಬೆರಳಿಗೆ ಯಾವುದೋ ಒಂದು ವಿಷಕಾರಿ ಹಾವು ಕಚ್ಚಿದ್ದು ಆಕೆಗೆ ಅಲ್ಲಿ ಇಲ್ಲಿ ಹಾಗು ಖಾನಗಿ ಉಪಚಾರ ಮಾಡಿಸಿದರೂ ಕಡಿಮೆ ಆಗದೇ ಇರುವದರಿಂದ  ಹೆಚ್ಚಿನ ಉಪಚಾರ ಕುರಿತು ದಿನಾಂಕ 06/09/2020 ರಂದು ಸೋಲಾಫೂರದ ಯಶೋಧರಾ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಇರುತ್ತದೆ.  ಉಪಚಾರದಲ್ಲಿದ್ದ ಪದ್ಮಾ ಇವಳು ಉಪಚಾರ ಫಲಿಸದೆ ದಿನಾಂಕ 07/09/2020 ರಂದು ರಾತ್ರಿ 11.15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತ ವಗೈರೆ ಸಾರಾಂಶದ ಮೇಲಿಂದ ಭೀ.ಗುಡಿ ಠಾಣೆ ಯುಡಿಆರ್ ನಂ: 09/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!