ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/09/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 125/2020 ಕಲಂ 143, 147, 323, 504, 506 ಸಂ 149 ಐಪಿಸಿ : :-ದಿನಾಂಕ 09/09/2020 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಅವರ ಮನೆಯವರೆಲ್ಲರೂ ತಮ್ಮ ಮನೆ ಮುಂದೆ ಮಾತಾಡುತ್ತಾ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾಧಿ ಜೋತೆಗೆ ಜಗಳ ತೆಗೆದು ನೀನು ಈ ಹಿಂದೆ ನಮ್ಮ ಮನೆಯ ಹೆಣ್ಣುಮಗಳ ಮದುವೆ ನಿಲ್ಲಿಸಿದ್ದಿ ನಿನಗೆ ಬಹಳ ಸೊಕ್ಕುಯಿದೆ ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 126/2020 ಕಲಂ 143, 147, 148, 323, 324, 326, 341, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 15-09-2020 ರಂದು 5 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ರಾಮು ತಂದೆ ಬಾಬು ಚವ್ಹಾಣ ವಯಾ: 30 ಉ:ಒಕ್ಕಲುತನ ಜಾ: ಲಂಬಾಣಿ ಸಾ:ಅಲ್ಲಿಪೂರ ವಾರಿ ತಾಂಡಾ ತಾ:ಜಿ ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಿನ್ನೆ ದಿನಾಂಕ 14-09-2020 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಾನು ನನ್ನ ಅಣ್ಣನನಾದ ರಾಜು ತಂದೆ ಬಾಬು ಚವ್ಹಾಣ ಹಾಗೂ ನನ್ನ ತಾಯಿಯಾದ ನೀಲಿಬಾಯಿ ಎಲ್ಲರೂ ನಮ್ಮ ಮನೆಯ ಮುಂದೆಗಡೆ ಕುಳಿತುಕೊಂಡಾಗ ಆ ವೇಳೆಯಲ್ಲಿ ಮತ್ತೆ ಚರಂಡಿಯ ನೀರು ನಮ್ಮ ಮನೆಯ ಮುಂದುಗಡೆ ಬಂದು ಸಣ್ಣ ಮಕ್ಕಳಿಗೆ ತಿರುಗಾಡಲು ತೊಂದರೆಯಾದಾಗ ನಮ್ಮ ಅಣ್ಣ ಮತ್ತು ನಮ್ಮ ತಾಯಿ ನೀಲಿಬಾಯಿ ಎಲ್ಲರೂ ಕೂಡಿ ರವಿ ತಂದೆ ಗೋಬ್ರು ರಾಠೋಡ ಇತನಿಗೆ ನಿಮಗೆ ಎಷ್ಟು ಸಲ ಹೇಳಬೇಕು ನಿಮಗೆ ಹೇಳಿ ಸಾಕಾಗಿ ಹೋಗಿದೆ ಇದರಿಂದ ನಾವು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದೆವೆ ಅಂತಾ ಅನ್ನುತ್ತಿದ್ದಾಗ ಅದೇ ವೇಳೆಗೆ 1) ಮೋಹನ ತಂದೆ ಗೋಬ್ರು ರಾಠೋಡ ಮತ್ತು ಅಲ್ಲಿಯೇ ಇದ್ದ 2) ರವಿ ತಂದೆ ಗೋಬ್ರು ರಾಠೋಡ 3) ಗೋರ್ಯಾ ತಂದೆ ಗೋಬ್ರು ರಾಠೋಡ 4) ಧಾಮಾ ತಂದೆ ಕೇಸು ರಾಠೋಡ 5) ಪಪ್ಪ್ಯಾ ಕೇಸು ರಾಠೋಡ 6) ರಮೇಶ ತಂದೆ ಸೋಮು ಚವ್ಹಾಣ 7) ಸುನೀಲ ತಂದೆ ಹಾಭಾ ರಾಠೋಡ 8) ನರೇಶ ತಂದೆ ಗೋಮು ಚವ್ಹಾಣ 9) ಧಾನಿಬಾಯಿ ಗಂಡ ಸೋಮು ಚವ್ಹಾಣ 10) ಸಂಗೀತಾ ಗಂಡ ರವಿ ರಾಠೋಡ 11) ಕವಿತಾ ಗಂಡ ಗೋರ್ಯಾ ರಾಠೋಡ ಮತ್ತು 12) ಧಾನಿಭಾಯಿ ಗಂಡ ಮೋಹನ ರಾಠೋಡ ಇವರೆಲ್ಲರೂ ಕೂಡಿಕೊಂಡು ಆಕ್ರಮಕೂಟ ಕಟ್ಟಿಕೊಂಡು ಹಕಾರಿ ಹೊಡೆಯುತ್ತಾ ಕೈಯ್ಯಲ್ಲಿ ಕಲ್ಲುಗಳು ಕೊಡಲಿ ಹಿಡಿದುಕೊಂಡು ಸುತ್ತುವರಿದು ಅವಾಚ್ಯವಾಗಿ ಬೈದು ಬಡಿಗೆ ಕಲ್ಲು ಹಾಗು ಕೊಡಲಿಯಿಂದ ಹೊಡೆದು ಸಾದಾ ಮತ್ತು ಭಾರಿ ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿ ಜೀವಧ ಭಯ ಹಾಕಿದ್ದ ಬಗ್ಗೆ ಫಿರ್ಯಾಧಿ ಇರುತ್ತದೆ.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 127/2020 ಕಲಂ 323, 324, 504, 506 ಸಂ 34 ಐಪಿಸಿ : ದಿನಾಂಕ 15/09/2020 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಅವರ ಮನೆಯವರೆಲ್ಲರೂ ಕೂಡಿ ತನ್ನ ತಾಯಿಯ ಸಮಾಧಿ ಹತ್ತಿರ ಹೊಲದಲ್ಲಿ ಹುಲ್ಲು ಕಿತ್ತಿ ಸ್ವಚ್ಛ ಮಾಡುತ್ತಿರುವಾಗ ಆರೋಪಿತರೆಲ್ಲರೂ ಕೂಡಿ ಬಂದು ಫಿರ್ಯಾಧಿ ಜೋತೆಗೆ ಜಗಳ ತೆಗೆದು ನೀನು ಈ ಹೊಲಕ್ಕೆ ಯಾಕೆ ಬಂದಿದ್ದಿ ಸೂಳೇ, ರಂಡೇರೆ ಅಂತಾ ಅವಾಚ್ಯವಾಗಿ ಬೈದು ಜಗಳ ತೆಗೆದು ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಕಲ್ಲುಗಳಿಂದ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯಗಳು ಮತ್ತು ತರಚಿದ ಗಾಯಗಳು ಮಾಡಿದ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 131/2020 ಕಲಂ 20(ಎ)&(ಬಿ) ಎನ್.ಡಿ.ಪಿ.ಎಸ್. ಆಕ್ಟ್ : ಇಂದು ದಿನಾಂಕ 15.09.2020 ರಂದು ಮಧ್ಯಾಹ್ನ 2:00 ಗಂಟೆಗೆ ಗುರುಮಠಕಲ್ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಾಗ ಗುರುಮಠಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಮ್.ಟಿ.ಪಲ್ಲಿ ಸೀಮಾಂತರದಲ್ಲಿ ಚಪೆಟ್ಲಾ ಗ್ರಾಮದ ಆರೋಪಿ ಕನಕಪ್ಪ ನಾಯ್ಕಿನ್ ಈತನು ಕಾನೂನು ಬಾಹಿರವಾಗಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಹತ್ತಿ ಬೆಳೆಯ ಮಧ್ಯದಲ್ಲಿ ಗಾಂಜಾಗಿಡಗಳನ್ನು ಬೆಳಸಿದ್ದಾರೆ ಅಂತ ಖಚಿತ ಮಾಹಿತಿಯ ಮೇರೆಗೆ ಫಿಯರ್ಾದಿಯವರು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ದಾಳಿ ಮಾಡುವ ಕುರಿತು ಅನುಮತಿ ಪಡೆದುಕೊಂಡು, ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಗೆಜೆಟೆಡ್ ಅಧಿಕಾರಿ ಮಾನ್ಯ ತಹಸೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಗುರುಮಠಕಲ್ ಮತ್ತು ಎಮ್.ಟಿ.ಪಲ್ಲಿ ಗ್ರಾಮದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಹಾಗೂ ಪಂಚರು, ತೂಕ ಮಾಡುವ ವ್ಯಕ್ತಿ ಮತ್ತು ಸಾಧನದೊಂದಿಗೆ ಹಾಗೂ ಠಾಣೆಯ ಸಿಬ್ಬಂದಿಯವರೊಂದಿಗೆ ಠಾಣೆಯ ಸರಕಾರಿ ಜೀಪ್ ಮತ್ತು ಮಾನ್ಯ ತಹಸೀಲ್ದಾರರ ಜೀಪ್ನಲ್ಲಿ ಠಾಣೆಯಿಂದ ಸಂಜೆ 4:00 ಗಂಟೆಗೆ ಸ್ಥಳಕ್ಕೆ ಹೋಗಿ ಎಮ್.ಟಿ.ಪಲ್ಲಿ ಗ್ರಾಮದ ಸಿಮಾಂತರದ ಆರೋಪಿನ ಹತ್ತಿ ಗೆಳೆಯ ಹೊಲದಲ್ಲಿದ್ದ 18 ಹಸಿ ಗಾಂಜಾಗಿಡಗಳು ಸಿಕ್ಕಿದ್ದು, ಅವುಗಳನ್ನು ತೂಕ ಮಾಡಿಸಿದಾಗ 07 ಕೆ.ಜಿ ಆಗಿರುತ್ತವೆ. ಪ್ರತಿ ಕೆ.ಜಿಗೆ ಹಸಿ ಗಾಂಜಾ 3000 ರೂಪಾಯಿ ಇದ್ದು, 07 ಕೆ.ಜಿಗೆ 21000/- ರೂಪಾಯಿ ಗಾಂಜಾಗಿಡಗಳನ್ನು ಪಂಚರ ಹಾಗೂ ಗೆಜೆಟೆಡ್ ಅಧಿಕಾರಿಗಳ ಸಮಕ್ಷಮದಲ್ಲಿ ಸಂಜೆ 4:00 ಗಂಟೆಯಿಂದ ಸಂಜೆ 5:30 ಗಂಟೆಯ ಅವಧಿಯಲಿ ಜಪ್ತಿ ಪಡಿಸಿಕೊಂಡು ಅದರಲ್ಲಿ ತಜ್ಞರ ಪರೀಕ್ಷೆ ಕುರಿತು ಗಾಂಜಾ ಗಿಡಗಲ್ಲಿನ ಸ್ವಲ್ಪ -ಸ್ವಲ್ಪ ಎಲೆಗಳು,ಭೀಜಗಳು, ಹೂವಿನ ಭಾವನ್ನು ಅಂದಾಜು 500 ಗ್ರಾಂ ನಷ್ಟು ಪಡೆದುಕೊಂಡು ಒಂದು ಪ್ಲಾಸ್ಟೀಕ್ ಚೀಲದಲ್ಲಿ ಹಾಕಿ ನಂತರ ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಹೊಲೆದು ಅದರ ಮೇಲೆ ಠಾಣೆಯ ಉಏಐ ಎಂಬ ಅಕ್ಷರದಲ್ಲಿ ಸಿಲ್ ಮಾಡಿ ಮುದ್ದೆ ಮಾಲಿನೊಂದಿಗೆ ಸಂಜೆ 6:00 ಗಂಟೆಗೆ ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 131/2020 ಕಲಂ: 20(ಎ)&(ಬಿ) ಎನ್.ಡಿ.ಪಿ.ಎಸ್. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಯಾದಗಿರ ಪೊಲೀಸ ಠಾಣೆ ಗುನ್ನೆ ನಂ:- 22/2020 ಕಲಂ. 174 ಸಿಆರ್ಪಿಸಿ : ಇಂದು ದಿನಾಂಕ:15/09/2020 ರಂದು 6 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ ಶ್ರೀಮತಿ ಯಮನಮ್ಮ ಗಂಡ ಯಂಕಪ್ಪ ಕವ್ದಾರ ವ:40 ಜಾ:ಬೇಡರ ಉ:ಮನೆಗೆಲಸ ಸಾ:ದಾದ್ಲಾಪೂರ ತಾ:ಸುರಪೂರ ಇವರ ಪಿಯರ್ಾದಿ ಸಾರಾಂಶವೆನೆಂದರೆ ನನಗೆ 3 ಜನ ಮಕ್ಕಳಿದ್ದು ಒಬ್ಬಳು ಹೆಣ್ಣು ಮಗಳು ಅವಳಿಗೆ ಕರಡಕಲ್ ಗ್ರಾಮದ ಗಂಗಪ್ಪ ಎಂಬುವರಿಗೆ ಕೊಟ್ಟು ಮದುವೆಮಾಡಿರುತ್ತೆವೆ. ಮತ್ತು ಎರಡು ಗಂಡು ಮಕ್ಕಳು ಇರುತ್ತಾರೆ. ಅವರು ಲಿಂಗಸೂರದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ನನ್ನ ಗಂಡನು ದಿನಾಲು ಸಾರಾಯಿ ಕುಡಿಯುವ ಚಟವುಳ್ಳವನಾಗಿದ್ದು. ನನ್ನ ಗಂಡನು ಕೂಲಿ ಕೆಲಸ ಮತ್ತು ಟ್ರ್ಯಾಕ್ಟರ ಚಾಲಕನಾಗಿದ್ದು. ಅವನು ಕೆಲಸ ಹೋಗಿ ಮರಳಿ ಮನೆಗೆ ಬಂದ ಮೇಲೆ ದಿನಾಲು ಸರಾಯಿ ಕುಡಿಯುತ್ತಿದ್ದನು. ಅದರಂತೆ ನಿನ್ನೆ ದಿನಾಂಕ:14/09/2020 ರಂದು ರಾತ್ರಿ ಊಟ ಮಾಡಿರುತ್ತೆವೆ. ನನ್ನ ಗಂಡ ಯಂಕಪ್ಪನಿಗೆ ಊಟ ಮಾಡು ಅಂತ ಹೇಳಿದರೆ ನಾನು ಆ ಮೇಲೆ ಮಾಡುತ್ತೆನೆ ಅಂತ ಹೇಳೀದನು. ರಾತ್ರಿ 10:30 ಗಂಟೆ ಸುಮಾರಿ ಕುಡಿದ ಅಮಲಿನಲ್ಲಿ ಮನೆಯಲ್ಲಿದ್ದ ಹತ್ತಿ ಬೆಳೆಗೆ ಸಿಂಪಡಿಸುವ ಕ್ರಿಮಿನಾಷಕ ಔಷದ ಸೇವಿಸಿರುತ್ತಾನೆ. ಸೇವಿಸಿ ವಾಂತಿ ಮಾಡುತ್ತಿದ್ದಾಗ ನಾನು ಗಾಬರಿಯಾಗಿ ಏನಾಗಿದೆ ಎಂದು ವಿಚಾರಿಸಿದೆನು. ಅವನು ಒದ್ದಾಡ ತೋಡಗಿದನು. ಅವನ ಹತ್ತಿರ ಒಂದು ಕ್ರೀಮಿನಾಷಕ ಔಷದ ಬಾಟಲ್ ಬಿದ್ದಿರುತ್ತದೆ. ಅದನ್ನು ನನ್ನ ಸಂಬಂದಿಯಾದ ಸಂಜೀವಪ್ಪ ಇವನಿಗೆ ಕರೆಯಿಸಿದಾಗ ಅವನು ತನ್ನ ಸ್ನೇಹಿತ ಶಶಿಕುಮಾರನೊಂದಿಗೆ ಒಂದು ಆಟೋದಲ್ಲಿ ಬಂದು ಅದೇ ಆಟೋದಲ್ಲಿ ಕುಡಿಸಿಕೊಂಡು ನಾನು ಮತ್ತು ಮಕ್ಕಳು ಮೌನೇಶ, ನಾಗರಾಜ, ಸಂಜೀವಪ್ಪ ಮತ್ತು ಶಶಿಕುಮಾರ ಎಲ್ಲರೂ ಕೂಡಿಕೊಂಡು 11 ಪಿ.ಎಮ್ ಕ್ಕೆ ಕಕ್ಕೇರಾ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿರುತ್ತೆವೆ. ಅಲ್ಲಿ ಪ್ರಥಮ ಉಪಚಾರ ಮಾಡಿರುತ್ತಾರೆ. ಅಲ್ಲಿಯ ವೈದ್ಯರ ಸಲಹೇ ಮೇರೆಗೆ ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ದಿನಂಕ:15/09/2020 ರಂದು 1 ಎ.ಎಮ್ ಕ್ಕೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೆವೆ. ಇಲ್ಲಿಯ ವೈದ್ಯರು ಉಪಚಾರ ನೀಡುತ್ತಿದ್ದು. ರಾತ್ರಿ 2:30 ಎ.ಎಮ್ ಕ್ಕೆ ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ನನ್ನ ಗಂಡನು ಸರಾಯಿ ಕುಡಿದ ಅಮಲಿನಲ್ಲಿ ಕ್ರೀಮಿನಾಷ ಔಷದ ಸೇವಿಸಿ ಮೃತಪಟ್ಟಿರುತ್ತಾನೆ. ಸದರಿ ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.22/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 78/2020 ಕಲಂ: 279, 337, 338 ಐಪಿಸಿ : ದಿನಾಂಕ:15/09/2020 ರಂದು ಆಶಿವರ್ಾದ ಆಸ್ಪತ್ರೆ ಬಾಗಲಕೋಟದಲ್ಲಿ ಪಿಯರ್ಾದಿ ವೆಂಕಟೇಶ ತಂದೆ ಗೋಪಿಲಾಲ ರಾಠೋಡ್ ಸಾ||ಮಾರನಾಳ ದೊಡ್ಡ ತಾಂಡಾ ಇವರು ನೀಡಿದ ಹೇಳಿಕೆಯ ಸಾರಾಂಶವೆನೇಂದರೆ ದಿನಾಂಕ:13/09/2020 ರಂದು ತಾನು ಮತ್ತು ನಮ್ಮ ತಾಂಡಾದವರಾದ ಬಾಳಾರಾಮ ತಂದೆ ಶಂಕ್ರಪ್ಪ ರಾಠೋಡ್, ರಾಜು ತಂದೆ ರಾಮಪ್ಪ ರಾಠೋಡ್, ರಾಜು ತಂದೆ ಸೂರಪ್ಪ ರಾಠೋಡ ಕೂಡಿಕೊಂಡು ನಮ್ಮ ತಾಂಡಾದಿಂದ ರಾಜವಾಳ ತಾಂಡಾಕ್ಕೆ ದೇವರ ಕಾರ್ಯಕ್ರಮಕ್ಕೆ ನಮ್ಮ ಅಕ್ಕನ ಮನೆಗೆ ಹೋಗಿ ಅಲ್ಲಿಯೇ ವಸತಿ ಮಾಡಿ ದೇವರ ಕಾರ್ಯಕ್ರಮವನ್ನು ಮುಗಿಸಿಕೊಂಡು ದಿನಾಂಕ: ದಿನಾಂಕ:14/09/2020ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಮರಳಿ ನಮ್ಮ ತಾಂಡಾಕ್ಕೆ ಹೋಗುವ ಕುರಿತು ರಾಜಿವಾಳ ತಾಂಡಾದಿಂದ ನಾನು ಮತ್ತು ರಾಜು ತಂದೆ ಸೂರಪ್ಪ ರಾಠೋಡ ಬರುವಾಗ ನಮ್ಮ ತಾಂಡಾದಿಂದ ತೆಗೆದುಕೊಂಡು ಬಂದಿದ್ದ ಮೋಟರ್ ಸೈಕಲ್ ಮೇಲೆ ಹಾಗೂ ಬಾಳಾರಾಮ ತಂದೆ ಶಂಕ್ರಪ್ಪ ರಾಠೋಡ್ ಇತನು ತೆಗೆದುಕೊಂಡು ಬಂದಿದ್ದ ಮೋಟರ್ ಸೈಕಲ್ ನಂ: ಕೆ.ಎ 33 ಯು 1951 ನೇದ್ದರ ಮೇಲೆ ಹಿಂದುಗಡೆ ರಾಜು ತಂದೆ ರಾಮಪ್ಪ ರಾಠೋಡ್ ಇತನಿಗೆ ಕೂಡಿಸಿಕೊಂಡು ರಾಜಿವಾಳ ತಾಂಡಾದಿಂದ ಹೊರಟೆವು. ನಾವುಗಳು ಮೋಟರ್ ಸೈಕಲ್ಗಳ ಮೇಲೆ ನಮ್ಮ ಮಾರನಾಳ ತಾಂಡಾಕ್ಕೆ ಹೋಗುತ್ತಿದ್ದಾಗ ನಮ್ಮ ಮುಂದೆ ಬಾಳಾರಾಮ ತಂದೆ ಶಂಕ್ರೆಪ್ಪ ರಾಠೋಡ್ ಇತನು ಮೋಟರ್ ಸೈಕಲ್ ನಂ:ಕೆಎ33 ಯು 1951 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ನಮ್ಮ ಮೋಟರ್ ಸೈಕಲ್ ಮುಂದುಗಡೆ ಹೋಗುತ್ತಿದ್ದನು. ಆಗ ಎದುರುಗಡೆಯಿಂದ ಸಾಯಂಕಾಲ 6:30 ಗಂಟೆಯ ಸುಮಾರಿಗೆ ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ಕೊಡೇಕಲ್ ಕೆ.ಇ.ಬಿ ಹತ್ತಿರ ಕೊಡೇಕಲ್ ಕಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ನಮ್ಮ ಮುಂದೆ ಹೊರಟಿದ್ದ ಬಾಳಾರಾಮ ತಂದೆ ಶಂಕ್ರೆಪ್ಪ ರಾಠೋಡ್ ಇತನು ಮೋಟರ್ ಸೈಕಲ್ ನಂ:ಕೆಎ-33 ಯು-1951 ನೇದ್ದನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಹೋಗಿದ್ದರಿಂದ ಎರಡು ಮೋಟರ್ ಸೈಕಲ್ಗಳು ಮುಖಾಮುಖಿ ಡಿಕ್ಕಿಯಾಗಿ ಬಿದ್ದಿದ್ದು, ನಾವು ನಮ್ಮ ಮೋಟರ್ ಸೈಕಲ್ ನಿಲ್ಲಿಸಿ ಹೋಗಿ ನೋಡಲಾಗಿ ಬಾಳಾರಾಮ ರಾಠೋಡ್ ಇತನಿಗೆ ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿ ಮುರಿದಿದ್ದು, ಬಲಕೈಗೆ ತೊಳಿನ ಹತ್ತಿರ ಮುರಿದಿದ್ದು, ಮುಖದ ಮೇಲೆ ಎಡಗಡೆ ಹಣೆಗೆ ತೆರಚಿದಗಾಯ ವಾಗಿರುತ್ತದೆ. ಹಿಂದುಗಡೆ ಕುಳಿತಿದ್ದ ರಾಜು ತಂದೆ ರಾಮಪ್ಪ ರಾಠೋಡ್ ಇತನಿಗೆ ಬಲಗಾಲಿನ ತೊಡೆಗೆ ಭಾರಿ ರಕ್ತಗಾಯ, ಬೆನ್ನಿನ ಮೇಲೆ ತೆರಚಿದ ರಕ್ತಗಾಯ, ತಲೆಯ ಮೇಲೆ ರಕ್ತಗಾಯ, ಎಡಗಾಲಿಗೆ ರಕ್ತಗಾಯವಾಗಿದ್ದು ಇರುತ್ತದೆ. ಎದುರುಗಡೆಯಿಂದ ಬಂದು ಬಿದ್ದಿದ್ದ ಮೋಟರ್ ಸೈಕಲ್ ಸವಾರನಿಗೆ ಹೋಗಿ ನೋಡಿ ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂದೆ ಜೆಟ್ಟೆಪ್ಪ ಸಾ||ರಾಜನಕೋಳೂರ ಅಂತಾ ತಿಳಿಸಿದ್ದು, ಅವನಿಗೆ ಬಲಗಾಲಿನ ಪಾದಕ್ಕೆ ಭಾರಿ ರಕ್ತಗಾಯ, ಬಲಗೈ ತೋರು ಬೇರಳಿಗೆ ಭಾರಿ ಗುಪ್ತಗಾಯ, ಬಲ ಭುಜಕ್ಕೆ ಒಳಪೆಟ್ಟು, ಎಡಹೊಟ್ಟೆಯ ಮೇಲೆ ಮತ್ತು ಎಡ ಪಾದಕ್ಕೆ ತೆರಚಿದ ಗಾಯವಾಗಿರುತ್ತದೆ. ಅವನ ಮೋಟರ ಸೈಕಲ್ ನೋಡಲಾಗಿ ನಂ:ಕೆಎ-32 ಈ.ಜಿ-1243 ನೇದ್ದು ಇರುತ್ತದೆ. ನಂತರ ಅಪಘಾತದ ವಿಷಯ ತಿಳಿದು ರಾಜನಕೋಳುರ ಗ್ರಾಮದ ಲಕ್ಷ್ಮಣ ತಂದೆ ಹಣಮಂತ್ರಾಯ ಮೇಟಿ, ಆದೇಶ ತಂದೆ ಹಣಮಂತ್ರಾಯ ಯರಗೋಡಿ, ಮಲ್ಲಪ್ಪ ತಂದೆ ಸಿದ್ದಪ್ಪ ಸುರಪೂರ ಸ್ಥಳಕ್ಕೆ ಬಂದು ರಮೇಶ ತಂದೆ ಜೆಟ್ಟೆಪ್ಪ ಸಾ||ರಾಜನಕೋಳೂರ ಇತನಿಗೆ ಉಪಚಾರ ಕುರಿತು ಕರೆದುಕೊಂಡು ಹೋದರು. ನಂತರ ನಾವುಗಳು ಬಾಳರಾಮ ತಂದೆ ಶಂಕ್ರೆಪ್ಪ ರಾಠೋಡ್, ರಾಜು ತಂದೆ ರಾಮಪ್ಪ ರಾಠೋಡ್ ಇವರುಗಳಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಾಗಲಕೋಟಕ್ಕೆ ಬಂದು ಈ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಈ ಘಟನೆಯು ಮೋಟರ್ ಸೈಕಲ್ ನಂ:ಕೆಎ-33 ಯು-1951 ನೇದ್ದರ ಚಾಲಕನಾದ ಬಾಳಾರಾಮ ತಂದೆ ಶಂಕ್ರೆಪ್ಪ ರಾಠೋಡ್ ಸಾ||ಮಾರನಾಳ ದೊಡ್ಡ ತಾಂಡಾ ಇತನು ಮತ್ತು ಮೋಟರ್ ಸೈಕಲ್ ನಂ:ಕೆಎ-32 ಈ.ಜಿ-1243 ನೇದ್ದರ ಚಾಲಕನಾದ ರಮೇಶ ತಂದೆ ಜೆಟ್ಟೆಪ್ಪ ಸಾ||ರಾಜನಕೋಳೂರ ಇತನು ತಮ್ಮ ತಮ್ಮ ಮೋಟರ್ ಸೈಕಲಗಳನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿದ್ದರಿಂದ ಅಪಘಾತವಾಗಿದ್ದು ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 3:00 ಪಿಎಮ್ಕ್ಕೆ ಬಂದು ಸದರ ಪಿಯರ್ಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.78/2020 ಕಲಂ:279, 337, 338 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.