ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/09/2020 ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 116/2020 ಕಲಂ. 279. 304(ಎ) ಐಪಿಸಿ & 187 ಐಎಮವಿ ಕಾಯ್ದೆ : ದಿನಾಂಕ: 14-09-2020 ರಂದು ಮದ್ಯಾಹ್ನ 12-30 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೇನೆಂದರೆ ದಿನಾಂಕ: 13-09-2020 ರಂದು ಬೆಳ್ಳಿಗೆ 11-00 ಗಂಟೆ ಸುಮಾರಿಗೆ ನನ್ನ ಮಗ ಸೋಮಪ್ಪ ಈತನು ಹತ್ತಿ ಹೊಲಕ್ಕೆ ಹೊಡೆಯಲು ಔಷದ ತರಲು ನಾನು ಯಾರನ್ನಾದರೂ ಕರೆದುಕೊಂಡು ಮಕ್ತಲ್ ಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮ ಮೋಟರ ಸೈಕಲ್ ನಂಬರ ಕೆಎ-33 ವೈ-4880 ನೇದ್ದನ್ನು ತೆಗೆದುಕೊಂಡು ಹೋದನು ಸಾಯಂಕಾಲ ಆದರೂ ನನ್ನ ಮಗ ಸೋಮಪ್ಪ ಬರೆದೆ ಕಾರಣ ನನ್ನ ಮಗ ಸಣ್ಣತಿಮ್ಮಪ್ಪ ಈತನು ಆತನಿಗೆ ಪೊನ್ ಮಡಿದನು ಆಗ ಸೋಮಪ್ಪನ ಮೊಬೈಲ್ ಸ್ವೀಚ್ ಆಪ್ ಅಂತಾ ಹೇಳಿತು ಆಗ ನಾವು ಆತನು ಬೀಗರ ಊರಾದ ಕಾಡ್ಲೂರಿಗೆ ಹೋಗಿರಬೇಕು ಮುಂಜಾನೆ ಬರಬಹುದು ಅಂತಾ ಸುಮ್ಮನಿದ್ದೆವು. ದಿನಾಂಕ: 14-09-2020 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಇರುವಾಗ ನಮ್ಮೂರಿನ ನರಸಪ್ಪ ತಂದೆ ಹಣಮಂತ ಈತನು ಬಂದು ತಿಳಿಸಿದ್ದೆನೆಂದರೆ ನಿನ್ನ ಮಗನಿಗೆ ಕಡೆಚೂರ ಕೆಐಎಡಿಬಿ ಹತ್ತಿರ ರೋಡಿನ ಮೇಲೆ ಅಪಘಾತವಾಗಿ ಸತ್ತಿರುತ್ತಾನೆ. ಅಂತಾ ತಿಳಿಸಿದ್ದರಿಂದ ಆಗ ನಾನು ಮತ್ತು ನನ್ನ ಮಗ ಸಣ್ಣತಿಮ್ಮಪ್ಪ ಇಬ್ಬರೂ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ಕೆಐಎಡಿಬಿ ಹತ್ತಿರ ನನ್ನ ಮಗ ಸೋಮಪ್ಪನಿಗೆ ಅಪಘಾತವಾಗಿದ್ದು ಅಪಘಾತದಲ್ಲಿ ನನ್ನ ಮಗ ಸೋಮಪ್ಪನಿಗೆ ಬಲಗಡೆ ಕುತ್ತಿಗೆಗೆ ಭಾರಿ ರಕ್ತಗಾಯವಾಗಿತ್ತು, ಬಲಗಾಲು ಮೊಣಕಾಲು ಕೆಳಗೆ ಎಲ್ಲಾ ಮುರಿದಿತ್ತು ಎಡಗಾಲಿಗೆ ಪಾದದ ಹತ್ತಿರ ಭಾರಿ ರಕ್ರಗಾಯವಾಗಿತ್ತು, ಹೊಟ್ಟೆಗೆ ತರಚಿದ ರಕ್ತಗಾಯವಾಗಿತ್ತು, ರೋಡಿ ಎರಡು ಕೈಗಳಿಗೆ ತರಚಿದ ಗಾಯವಾಗಿತ್ತು ನಮ್ಮ ಮೋಟರ ಸೈಕಲ್ ನಂಬರ ಕೆಎ-33 ವೈ- 4880 ಇದು ನ ಪಕ್ಕದಲ್ಲಿ ಬಿದ್ದು ನುಜ್ಜು ಗುಜ್ಜಾಗಿತ್ತು. ಸದರಿ ಘಟನೆಯು ದಿನಾಂಕ: 13-09-2020 ರಂದು ರಾತ್ರಿ 09-30 ಗಂಟೆಯಿಂದ ದಿನಾಂಕ: 14-09-2020 ರಂದು ಬೆಳಿಗ್ಗೆ 06-00 ಗಂಟೆ ಅವಧಿಯಲ್ಲಿ ನಡೆದಿರಬಹುದು ಆಗ ನನ್ನ ಮಗನ ಮೃತದೇಹವನ್ನು ಸೈದಾಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೊಣೆಗೆ ತಂದು ಹಾಕಿರುತ್ತೇವೆ. ಕಾರಣ ನನ್ನ ಮಗ ಸೋಮಪ್ಪ ತಂದೆ ಕರೆಪ್ಪ ಮ್ಯಾಕಲ್ ವ|| 28 ವರ್ಷ ಸಾ|| ಕಡೆಚೂರ ಈತನಿಗೆ ಯಾರೋ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಪಡಿಸಿದವನ ಮೆಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕಂತ ಪಿಯರ್ಾಧಿ ಇರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 110/2020 ಕಲಂ 379 ಐಪಿಸಿ : ದಿನಾಂಕ: 12/09/2020 ರಂದು ರಾತ್ರಿ 10.30 ಗಂಟೆಯಿಂದ ದಿನಾಂಕ 13/09/2020 ರ ರಾತ್ರಿ 2 ಎಎಮ್ ನ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿಯರ್ಾದಿ ವಾಸವಿರುವ ಭೀ.ಗುಡಿಯ ಜ್ಯೋತಿ ಧಾಬಾದ ಹಿಂದೆ ಇರುವ ಮನೆಯ ಮುಂದಿನ ಖುಲ್ಲಾ ಜಾಗದಲ್ಲಿ ಕಟ್ಟಿದ್ದ ದನಗಳ ಪೈಕಿ 01 ಆಕಳು, 01 ಎಮ್ಮೆ ಹಾಗು 01 ಆಕಳು ಕರು ಹೀಗೆ ಒಟ್ಟು 45000/- ರೂ ಕಿಮ್ಮತ್ತಿನ ದನಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಳುವಾದ ದನಗಳನ್ನು ಇಲ್ಲಿಯವರೆಗೆ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಕಾರಣ ಮಾನ್ಯರವರು ಕಳುವಾದ ದನಗಳನ್ನು ಪತ್ತೆ ಮಾಡಿ ಕಳ್ಳರ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಲಿಖಿತ ಫಿಯರ್ಾದಿ ಅಜರ್ಿ ಇರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 111/2020 ಕಲಂ 341, 323, 504, 506 ಸಂಗಡ 34 ಐಪಿಸಿ : ದಿನಾಂಕ: 13/09/2020 ರಂದು ಸಾಯಂಕಾಲ ಫಿಯರ್ಾದಿಯ ಅಣ್ಣ ಸಂಜೀವ ಈತನು ತನ್ನ ಮೋಟರ್ ಸೈಕಲ್ ಮೇಲೆ ಆರೋಪಿತನಾದ ಈರಪ್ಪ ಈತನಿಗೆ ಶಹಾಪೂರದಿಂದ ಕರೆದುಕೊಂಡು ಬಂದಿಲ್ಲ ಅಂತ ಅದೇ ಸಿಟ್ಟಿನಲ್ಲಿ ಇಂದು ದಿನಾಂಕ 14/09/2020 ರಂದು 9 ಪಿಮ್ ಕ್ಕೆ ಆರೋಪಿತರು ಫಿಯರ್ಾದಿಯ ಮನೆಯ ಹತ್ತಿರ ಬಂದು ಎಲೇ ಸಂಜ್ಯಾ ನಿನ್ನೆ ಶಾಪೂರದಿಂದ ಮೋಟರ್ ಸೈಕಲ್ ಮೇಲೆ ಕರೆದುಕೊಂಡು ಹೋಗು ಅಂತ ಅಂದಾಗ ಬಹಾಳ ಧಿಮಾಕಿನಿಂದ ಮಾತಾಡಿದಿ ಸೂಳೇ ಮಗನೆ ಅಂತ ಬೈಯ್ಯತೊಡಗಿದ್ದು ಆಗ ಫಿಯರ್ಾದಿ ಯಾಕೆ ಬೈಯ್ಯುತ್ತೀರಿ, ಅಂತ ಅವರಿಗೆ ಹೇಳಿ ಹನುಮಂತ ದೇವರ ಗುಡಿಯವರೆಗೆ ಕಳಿಸಿ ಬರುತ್ತಿದ್ದಾಗ ಆರೋಪಿತರು ಫಿಯರ್ಾದಿಗೆ ತಡೆದು ನಿಲ್ಲಿಸಿ, ಎಲೇ ಮಗನೆ ಅಂಜ್ಯಾ ನಿನ್ನ ಸಫೋಟರ್ಿನಿಂದ ನಿಮ್ಮ ಅಣ್ಣ ಬಹಾಳ ಹಾರಾಡ್ತಾನ ನಿಂದೇ ಇದರಾಗ ಬಹಾಳ ಸೊಕ್ಕು ಐತಿ ಅಂತ ಹೇಳಿ ತೆಕ್ಕಿಗೆ ಬಿದ್ದು ಕೈಯಿಂದ ಮುಖಕ್ಕೆ ಬೆನ್ನಿಗೆ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 87/2020 ಮಹಿಳೆ ಕಾಣೆಯಾದ ಬಗ್ಗೆ : ದಿನಾಂಕಃ 14/09/2020 ರಂದು 09.00 ಎ.ಎಂ ಗಂಟೆಗೆ ಪಿಯರ್ಾದಿ ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಕೊಟ್ಟಿದ್ದು ಏನೆಂದರೆ, ನಾನು ಮತ್ತು ನನ್ನ ಮಗಳು ಗಾಯತ್ರಿ ಇವಳ ಮದುವೆಯು 3 ವರ್ಷಗಳ ಹಿಂದೆ ಆಗಿದ್ದು, ಮದುವೆಯಾದ 6 ತಿಂಗಳಲ್ಲಿ ಅವಳ ಗಂಡನು ಮೃತಪಟ್ಟಿದ್ದರಿಂದ ಅವಳು ಅಂದಿನಿಂದ ಮಾನಸಿಕವಾಗಿ ತುಂಬಾ ಮನನೊಂದು 3-4 ಸಲ ಮನೆಯಿಂದ ಹೋಗಿದ್ದು, ಹುಡುಕಾಡಿ ಕರೆದುಕೊಂಡು ಬಂದಿದ್ದು, ಅದೆ ಒಂದು ಮನಸ್ಸಿನಲ್ಲಿ ಇಟ್ಟುಕೊಂಡು ದಿನಾಂಕ: 09/09/2020 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ; 10/09/2020 ರಂದು ಬೆಳಗಿನ 05.00 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯಿಂದ ಹೋದವಳು ಕಾಣೆಯಾಗಿದ್ದು ಇದುವರಗೆ ನಮ್ಮ ಸಂಭಂಧಿಕರ ಊರು ಹಾಗೂ ಇನ್ನಿತರ ಕಡೆಗಳಲ್ಲಿ ಹುಡುಕಾಡಿದರು ಸಿಕ್ಕಿರುವದಿಲ್ಲಾ ಅಂತಾ ಇಂದು ಠಾಣೆಗೆ ತಡವಾಗಿ ಬಂದು ದೂರು ಕೊಟ್ಟಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ.05/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ 14/09/2020 ರಂದು 2:00 ಪಿ.ಎಂ ಕ್ಕೆ ಶ್ರೀಮತಿ ಶ್ರೀದೇವಿ ಗಂಡ ವೆಂಕನಗೌಡ ಪೊಲೀಸ್ ಪಾಟೀಲ್ ಸಾ:ಮದಲಿಂಗನಾಳ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಪಿಯರ್ಾದಿ ಸಾರಾಂಶವೆನೆಂದರೆ ತನ್ನ ಮಗ ಬಸನಗೌಡನು ತಂದೆ ವೆಂಕನಗೌಡ ಪೊಲೀಸ್ ಪಾಟೀಲ್ ವ:11 ವರ್ಷ ಈತನು ದಿನಾಂಕ 13/09/2020 ರಂದು 11:00 ಎ.ಎಂ ಸುಮಾರಿಗೆ ನಾರಾಯಣಪೂರ ಎಡದಂಡೆ ಮುಖ್ಯ ಕಾಲುವೆಯಲ್ಲಿ 14 ನೇ ಕಿ.ಮೀ ಹತ್ತಿರ ಹಾಡುಕಾಯಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಬಿದ್ದು ನೀರಿನಲ್ಲಿ ಹರಿದುಕೊಂಡು ಹೋಗಿದ್ದು ಇಂದು ದಿನಾಂಕ 14/09/2020 ರಂದು ಮದ್ಯಾಹ್ನ 1:30 ಪಿ.ಎಂ ಸುಮಾರಿಗೆ ಬಪ್ಪರಗಿ ಬ್ರಿಡ್ಜ ಹತ್ತಿರ ಮೃತನ ಶವವು ಪತ್ತೆಯಾಗಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ನೀಡಿದ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆಯ ಯು.ಡಿ ಆರ್ ನಂ 05/2020 ಕಲಂ 174 ಸಿ ಆರ್ ಪಿ ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 141/2020 ಕಲಂ: 87 ಕೆಪಿ ಯಾಕ್ಟ : ದಿನಾಂಕ:14.09.2020 ರಂದು 02.00 ಪಿಎಮ್ ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ತಳ್ಳಳ್ಳಿ[ಕೆ] ಗ್ರಾಮದ ಕಡೆಗೆ ಪೆಟ್ರೋಲಿಂಗ ಕುರಿತು ಹೋದಾಗ ಸದರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 06-07 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 02.30 ಪಿಎಮ್ ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 3.30 ಗಂಟೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 141/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ದಾಳಿ ಕೈಕೊಂಡಿದ್ದು ದಾಳಿಯಲ್ಲಿ 05 ಜನ ಆರೋಪಿತರಿಗೆ ದಸ್ತಗಿರಿ ಮಾಡಿದ್ದು 2 ಜನರು ಓಡಿಹೋಗಿದ್ದು ಕಣದಲ್ಲಿ ಸಿಕ್ಕ 1250/- ರೂಪಾಯಿ ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಹಾಗು 1 ಬಿಳಿ ಬರಕಾವನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 37/2020 ಕಲಂ 279, 338 ಐಪಿಸಿ : ದಿನಾಂಕ 11/09/2020 ರಂದು 12 ಪಿ.ಎಂ.ದ ಸುಮಾರಿಗೆ ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದ ಎದುರಗಡೆ ಬರುವ ವಿಜಯಾಬ್ಯಾಂಕ್ ಮುಂದಿನ ಮುಖ್ಯ ರಸ್ತೆ ಮೇಲೆ ಈ ಕೇಸಿನ ಗಾಯಾಳು ಇಪ್ತೆಕಾರ್ ಹುಸೇನ್ ಇವರು ತಮ್ಮ ಮೋಟಾರು ಸೈಕಲ್ ನೊಂದಣಿ ಇಲ್ಲದ್ದು, ಅದರ ಚೆಸ್ಸಿ ನಂಬರ ಒಆ2-ಂ15-ಂಙ5ಎಘಊ-31585 ನೇದ್ದರ ಮೇಲೆ ಹೊಸ ಬಸ್ ನಿಲ್ದಾಣದ ಕಡೆಯಿಂದ ಶಾಸ್ತ್ರಿ ವೃತ್ತದ ಕಡೆಗೆ ಹೊರಟಿದ್ದಾಗ ಆರೋಪಿತನು ತನ್ನ ಕಮಾಂಡರ್ ಜೀಪ್ ನಂಬರ ಕೆಎ-25, ಎಮ್-8225 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಗಾಯಾಳುವಿನ ಮೊಟಾರು ಸೈಕಲ್ ನೇದ್ದಕ್ಕೆ ಓವರ್ ಟೇಕ್ ಮಾಡುವಾಗ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಇಪ್ತೆಕಾರ್ ಹುಸೇನ್ ಇವರಿಗೆ ಸೊಂಟಕ್ಕೆ ಭಾರೀ ಒಳಪೆಟ್ಟಾಗಿದ್ದು ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆಯಾಗಿ ನಂತರ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಎ.ಎಸ್.ಎಮ್. ಆಸ್ಪತ್ರೆಗೆ ಸೇರಿಕೆಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಈ ಘಟನೆ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿಕೊಂಡು ಇಂದು ದಿನಾಂಕ 14/09/2020 ರಂದು ತಡವಾಗಿ ಠಾಣೆಗೆ ಬಂದು ಪಿಯರ್ಾದು ನೀಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 199/2020 ಕಲಂ: 279,337, 338 ಐ.ಪಿಸಿ : ಇಂದು ದಿನಾಂಕಃ 14/09/2020 ರಂದು ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಹಣಮಂತರಾಯ ತಂದೆ ಬಸವಂತರಾಯ ಮೇಟಿ ಸಾ: ಕಬಾಡಗೇರಾ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ಬೊಮ್ಮಗುಡ್ಡ ಗ್ರಾಮದಲ್ಲಿ ನಮ್ಮ ಸಂಬಂಧಿಕರು ಮೃತಪಟ್ಟಿದ್ದರಿಂದ ಅಂತ್ಯಸಂಸ್ಕಾರಕ್ಕಾಗಿ ಸುರಪೂರದಿಂದ ನಾನು ನನ್ನ ಮೋ.ಸೈಕಲ್ ನಂಬರ ಕೆ.ಎ 33 ಆರ್ 0581 ನೇದ್ದರ ಮೇಲೆ ನನ್ನ ಸ್ನೇಹಿತನಾದ ಭೀಮಣ್ಣ ತಂದೆ ಪರಮಣ್ಣ ಮೂಲಿಮನಿ ವಯಃ 58 ವರ್ಷ ಇವರನ್ನು ಕರೆದುಕೊಂಡು ಹೋಗಿ, ಅಂತ್ಯಸಂಸ್ಕಾರ ಮುಗಿಸಿಕೊಂಡು ಮರಳಿ ಬಲಶೆಟ್ಟಿಹಾಳ ಮಾರ್ಗವಾಗಿ ಸುರಪೂರ ಕಡೆಗೆ ಬರುತ್ತಿರುವಾಗ ಲಿಂಗಸುಗೂರ-ಸುರಪೂರ ಮುಖ್ಯರಸ್ತೆಯ ಮೇಲೆ ಶಾಂತಪೂರ ಗ್ರಾಮ ದಾಟಿ ಬರುವ ಹಳ್ಳದ ಸೇತುವೆ ಹತ್ತಿರ ಹಿಂದಿನಿಂದ ಅಂದರೆ ಲಿಂಗಸುಗೂರ ಕಡೆಯಿಂದ ಒಬ್ಬ ಕಾರ ನಂಬರ ಕೆ.ಎ 01 ಎ.ಎಫ್ 8120 ನೇದ್ದರ ಚಾಲಕನಾದ ಮಲ್ಲೇಶೀ ತಂದೆ ಶಿವಣ್ಣ ಕವಾಲ್ದಾರ ಸಾ: ಸಿಂಗನಳ್ಳಿ ತಾಃ ಶಹಾಪೂರ ಇತನು ತನ್ನ ಕಾರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಮೋ.ಸೈಕಲಿಗೆ ಜೋರಾಗಿ ಡಿಕ್ಕಿಪಡಿಸಿದ ನಾವು ಮೋ.ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದೇವು. ಸದರಿ ಅಪಘಾತದಲ್ಲಿ ನನ್ನ ಬಲಹಣೆಯ ಮೇಲೆ ಹಾಗು ಎಡಗಡೆ ತಲೆಯಲ್ಲಿ, ಎಡಕಿವಿಗೆ ಭಾರಿರಕ್ತಗಾಯಗಳಾಗಿದ್ದು, ಎಡಭುಜದಲ್ಲಿ ಭಾರಿ ಗುಪ್ತಗಾಯವಾಗಿ, ಎಡಮೊಣಕೈ ಮತ್ತು ಅಂಗೈಗೆ ರಕ್ತಗಾಯ ಗಳಾಗಿರುತ್ತದೆ. ಮತ್ತು ಎರಡು ಕಾಲುಗಳ ಹಿಮ್ಮಡಿಗೆ, ಮತ್ತು ಎಡಮೊಣಕಾಲಿಗೆ ತರಚಿದ ರಕ್ತಗಾಯ ಗಳಾಗಿರುತ್ತವೆ. ನನ್ನ ಹಿಂದೆ ಕುಳಿತಿದ್ದ ಭೀಮಣ್ಣ ಇತನ ಹಣೆಯ ಮೇಲೆ ತಲೆಯಲ್ಲಿ ಭಾರಿಕ್ತಗಾಯಗಳಾಗಿದ್ದು, ಬಲಕಪಾಳಕ್ಕೆ ರಕ್ತಗಾಯವಾಗಿದ್ದು, ಬಾಯಿಯಲ್ಲಿ 4 ಹಲ್ಲುಗಳು ಮುರಿದಿರುತ್ತವೆ. ಹಾಗು ಬಲಮೊಣಕೈಗೆ, ಅಂಗೈಗೆ ರಕ್ತಗಾಯಗಳಾಗಿದ್ದು, ಬಲಮೊಣಕಾಲಿನ ಕೆಳಗೆ ಭಾರಿಗುಪ್ತಗಾಯವಾಗಿರುತ್ತದೆ. ನಮಗೆ ಅಪಘಾತವಾದಾಗ ಸಮಯ 5-15 ಪಿ.ಎಮ್ ಆಗಿರಬಹುದು. ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 199/2020 ಕಲಂ. 279, 337, 338 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.