ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/09/2020

By blogger on ಶನಿವಾರ, ಸೆಪ್ಟೆಂಬರ್ 12, 2020

 



                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/09/2020                                                                                                                       

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 237/2019.ಕಲಂ, 143,147,148,323,324,504,506ಸಂ,149. ಐ.ಪಿ.ಸಿ. : ಇಂದು ದಿನಾಂಕ 12/09/2020 ರಂದು ಮದ್ಯಾಹ್ನ 14-30 ಗಂಟೆಗೆ ಪಿಯರ್ಾದಿ ಶ್ರೀ ಶೀವಪ್ಪ ತಂದೆ ಧರ್ಮಪ್ಪ ದೊಡ್ಮನಿ ವ|| 38 ಜಾ||  ಮಾದಿಗ ಉ|| ಒಕ್ಕಲುತನ ಸಾ|| ಅನವಾರ ತಾ|| ಶಹಾಪೂರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ೀ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ. ಹೀಗಿದ್ದು ದಿನಾಂಕ 11/09/2020 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಮ್ಮ ವಿಜಯಕುಮಾರ ತಂದೆ ಧರ್ಮಪ್ಪ ದೊಡ್ಮನಿ ಇಬ್ಬರು ನಮ್ಮೂರ ಬಸಯ್ಯ ಮುತ್ಯಾನ ಮಠದ ಹತ್ತಿರ ಇದ್ದಾಗ ನನ್ನ ತಮ್ಮನಾದ ಗ್ಯಾನಪ್ಪ ತಂದೆ ಧರ್ಮಪ್ಪ ದೊಡ್ಮನಿ ಈತನು ನಮ್ಮ ಹೋಲದಿಂದ ನಮ್ಮ ಹತ್ತಿರ ಬಂದು ನಿಂತಾಗ ಅಲ್ಲೆ ನಿಂತಿದ್ದ ನಮ್ಮೂರ 1] ಚಂದ್ರಪ್ಪ ತಂದೆ ತಿಪ್ಪಣ್ಣ ಶ್ಯಾಂತಿಗೇರಿ, 2] ನಾಗಪ್ಪ ತಂದೆ ಮಲ್ಲಪ್ಪ ಹೋಸಮನಿ, 3] ಸಿದ್ದಪ್ಪ ತಂದೆ ಮಲ್ಲಪ್ಪ ದೇವದುಗರ್ಾ, 4] ಮಲ್ಲಪ್ಪ ತಂದೆ ಮರೇಪ್ಪ ದೇವದುಗರ್ಾ, 5] ರಾಜು ತಂದೆ ಮಲ್ಲಪ್ಪ ಹೋಸಮನಿ, 6] ಈಶ್ವರ ತಂದೆ ಶರಣಪ್ಪ ಶಾಂತಗೇರಿ, 7] ಬಸಪ್ಪ ತಂದೆ ಭೀಮಪ್ಪ ಅಚ್ಚಕೇರಿ 8] ಸಕ್ರೇಪ್ಪ ತಂದೆ ಮರೇಪ್ಪ ಹರನೂರ, 9] ಬಸ್ಸಪ್ಪ ತಂದೆ ಬಸಲಿಂಗಪ್ಪ ಹೋಸಮನಿ, ಇವರೆಲ್ಲರು ಕೂಡಿಕೊಂಡು ಎಕೊದ್ದೇಶದಿಂದ ನಮ್ಮ ಹತ್ತಿರ ಬಂದವರೆ ಲೇ ಗ್ಯಾನ್ಯಾ ಸೂಳಿ ಮಗನೆ ನಿನ್ನದು ಊರಲ್ಲಿ ಬಹಳ ಆಗ್ಯಾದ ಅಂತ ಅವಾಶ್ಚವಾಗಿ ಬೈಯುತ್ತ ಅವರಲ್ಲಿ ಕೆಲವರು ಬಡಿಗೆ ಹಿಡಿದುಕೊಂಡು ಬಂದು, ಅವರಲ್ಲಿ ಚಂದಪ್ಪ ಈತನು ತನ್ನ ಕೈಯಲ್ಲಿದ್ದ ಒಂದು ಬಡಿಗೆಯಿಂದ ಗ್ಯಾನಪ್ಪನ ಹಣೆಯ ಮೇಲೆ ತಲೆಗೆ ಹೋಡೆದು ರಕ್ತಗಾಯ ಮಾಡಿದನು ನಾಗಪ್ಪನು ಅಲ್ಲೆ ಬಿದ್ದಿದ್ದ ಒಂದು ಕಲ್ಲಿನಿಂದ ಗ್ಯಾನಪ್ಪನ ಎಡಗಡೆ ಹಿಂದೆ ತಲೆಗೆ ಹೊಡೆದು ರಕ್ತಗಾಯ ಮಾಡಿದನು, ಸಿದ್ದಪ್ಪ, ಮಲ್ಲಪ್ಪ, ಈಶ್ವರ, ಮೂವರು ಕೂಡಿ ಗ್ಯಾನಪ್ಪನಿಗೆ ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ ಎಡಗಡೆ ಹಸ್ತದ ಮಣಿಕಟ್ಟಿನ ಹತ್ತಿರ ಹೋಟ್ಟೆಗೆ ಗುಪ್ತಗಾಯವಾಗಿರುತ್ತದೆ, ರಾಜು ಈತನು ತನ್ನ ಕೈಯಲ್ಲಿದ್ದ ಒಂದು ಬಡಿಗೆಯಿಂದ ನನಗೆ ತಲೆಯ ಹಿಂದೆ ಹೋಡೆದು ರಕ್ತಗಾಯ ಮಾಡಿದನು, ಅದೆ ಬಡಿಗೆಯಿಂದ ನನ್ನ ತಮ್ಮ ವಿಜಯಕುಮಾರನಿಗೆ ಮುಂದಿನ ಹಣೆಯ ಮೇಲೆ ತಲೆಗೆ ಹೋಡೆದು ರಕ್ತಗಾಯ ಮಾಡಿದನು, ಬಸಪ್ಪ ತಂದೆ ಭೀಮಪ್ಪ ಈತನು ತನ್ನ ಕೈಯಿಂದ ನನ್ನ ಎಡಗೈ ಮೋಳಕೈಗೆ ಹೋಡೆದು ಗುಪ್ತಗಾಯ ಮಾಡಿದನು, ಸಕ್ರೇಪ್ಪ ಹರನೂರ, ಬಸಪ್ಪ ತಂದೆ ಬಸಲಿಂಗಪ್ಪ ಇಬ್ಬರು ಕೂಡಿ ನನಗೆ ನೆಲಕ್ಕೆ ಹಾಗಿ ಎಳೆದಾಡಿದರು ಅಲ್ಲೆ ಹೋರಟಿದ್ದ ನನ್ನ ಅಕ್ಕ ಮಾಳಮ್ಮ ತಂದೆ ಧರ್ಮಪ್ಪ, ಬಸಪ್ಪ ತಂದೆ ದೇವಸುಂದ್ರಪ್ಪ ದೋಡ್ಮನಿ, ಕನಕಪ್ಪ ತಂದೆ ಬಸಪ್ಪ ದೊಡಮನಿ, ಇವರು ಜಗಳ ನೋಡಿ ಬಂದು ಬಿಡಿಸಿಕೊಂಡರು, ಅವರೆಲ್ಲರು ಇವತ್ತು ಉಳಿದುಕೊಂಡಿರಿ ಮಕ್ಕಳೆ ಇನ್ನೋಮ್ಮಿ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವಸಹಿತ ಬಿಡುವದಿಲ್ಲಾ ಅಂತ ಜೀವಬೆದರಿಕೆ ಹಾಕಿ ಹೋದರು, ಸದರಿ ಜಗಳವು ಬಸಯ್ಯ ಮುತ್ಯಾನ ಮಠದ ಹತ್ತಿರ ರಸ್ತೆಯ ಮೇಲೆ 6-00 ಗಂಟೆಗೆ ಜರುಗಿರುತ್ತದೆ ಆಗ ನನಗೆ ಮತ್ತು ಗ್ಯಾನಪ್ಪನಿಗೆ, ವಿಜಯಕುಮಾರನಿಗೆ, ಮೂರು ಜನರಿಗೆ ಉಪಚಾರ ಕುರಿತು ನನ್ನ ಅಕ್ಕ ಮಾಳಮ್ಮ, ಬಸ್ಸಪ್ಪ, ಕನಕಪ್ಪ ಇವರು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಬಂದು ಶಹಾಪುರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದರಿಂದ ಉಪಚಾರ ಪಡೆದಿದ್ದು. ನನ್ನ ತಮ್ಮ ಗ್ಯಾನಪ್ಪನಿಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಅಕ್ಕ ಮಾಳಮ್ಮ ಈಕೆಯು ಗ್ಯಾನಪ್ಪನಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ, ನಾನು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದುರುನಿಡಿದ್ದು ಇರುತ್ತದೆ, ಅಂತ ದೂರಿನ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 237/2020 ಕಲಂ 143,147,148,323,324,504,506,ಸಂ,149 ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 238/2020 ಕಲಂ 143, 147, 148, 323, 324, 504,506, ಸಂಗಡ 149  ಐಪಿಸಿ : ಫಿರ್ಯಾದಿದಾರನು ಮೊಟಾರ ಸೈಕಲನ್ನು ನಿಧಾನವಾಗಿ ನಡೆಸು ಎಂದು ಫಿರ್ಯಾದಿ ಹೇಳಿದ್ದಕ್ಕೆ  ಆರೋಪಿತರೆಲ್ಲರೂ ಕೂಡಿ ದಿನಾಂಕ: 11-09-2020 ರಂದು 6:00 ಪಿ.ಎಮ್.ಕ್ಕೆ ಫಿರ್ಯಾದಿದಾರರಿಗೆ ಮತ್ತು ಆತನ ಅಣ್ಣ ಸಿದ್ರಾಮ ಮತ್ತು ಮಲ್ಲಪ್ಪ ಇವರಿಗೆ  ಅಕ್ರಮ ಕೂಟ ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಬಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಫಿಯರ್ಾದಿಗೆ , ಫಿಯರ್ಾದಿಯ ಅಣ್ಣ ಸಿದ್ರಾಮನಿಗೆ ಮತ್ತು ತಂದೆ ಮಲ್ಲಪ್ಪನಿಗೆ ಗಾಯ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 238/2020 ಕಲಂ. 143, 147, 148, 323, 324, 504, 506, ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


 

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 101/2020 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 12/09/2020 ರಂದು 06.45 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 12/09/2020 ರಂದು ಗೋಗಿ ಕೆ ಗ್ರಾಮದ ಆಸ್ಪತ್ರೆ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಶರಬಯ್ಯ ಸ್ವಾಮಿ ತಂದೆ ದೊಡ್ಡಯ್ಯ ಸ್ವಾಮಿ ಹಿರೇಮಠ ವಯಾ:40 ವರ್ಷ ಉ: ಜಂಗಮ ಸಾ: ಗೊಗಿ ಕೆ ತಾ: ಶಹಾಪೂರ ಜಿ: ಯಾದಗೀರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 05.10 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 2450/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 101/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 113/2020 ಕಲಂ 87 ಕೆ.ಪಿ ಕಾಯ್ದೆ : ದಿನಾಂಕ: 12-09-2020 ರಂದು 03-10 ಪಿಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಗೆ ಬಂದು ನೀಲಹಳ್ಳಿ ಗ್ರಾಮದಲ್ಲಿ ಮದ್ಯಾಹ್ನ 02-00 ಗಂಟೆಗೆ ಅಂದರ ಬಾಹರ ಇಸ್ಪೆಟ  ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.113/2020 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 114/2020 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 12-09-2020 ರಂದು ಸಾಯಂಕಾಲ 04-20 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಸೈದಾಪೂರದ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 2050=00 ರೂಪಾಯಿಗಳು, ಒಂದು ಮಟಕಾ ಬರೆದ ಚೀಟಿ ಒಂದು ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.114/2020 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 115/2020 ಕಲಂ. 279, 337, 338 ಐಪಿಸಿ  & 187 ಐಎಮವಿ ಕಾಯ್ದೆ : ದಿನಾಂಕ 12-09-2020 ರಂದು ಮದ್ಯಾಹ್ನ 12-10 ಗಂಟೆಗೆ ರಾಯಚೂರ ಧನ್ವಂತರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ಬಂದಿದ್ದು ಎಮ್ ಎಲ್ ಸಿ ಕುರಿತು ರಾಯಚೂರಿಗೆ ಹೋಗಿ ಅಲ್ಲಿ ಗಾಯಾಳುಗಳನ್ನು ವಿಚಾರಿಸಿ ಬನ್ನ ಈತನು ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 11-09-2020 ರಂದು ರಾತ್ರಿ 08-30 ಗಂಟೆಗೆ ನಾನು ಮತ್ತು ಸೋಮಪ್ಪ ಇಬ್ಬರೂ ಕೂಡಿಕೊಂಡು ಮೋಟರ ಸೈಕಲ್ ನಂಬರ ಕೆಎ-50 ಎಸ್-7705 ನೇದ್ದರಲ್ಲಿ ಬಳಿಚಕ್ರ ಗ್ರಾಮಕ್ಕೆ ಹೋಗುವಾಗ ಬಳಿಚಕ್ರ ಹತ್ತಿರ ಟ್ರಾಕ್ಟರ ಚಾಲನು ತಾನು ನಡೆಸುವ ಸೋನಾಲಿಕ ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ನಮ್ಮ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಎಡಕಾಲಿಗೆ ಮತ್ತು ಸೊಂಟಕ್ಕೆ ಬಾರಿ ಗಾಯವಾಗಿದ್ದು ಸೋಮಪ್ಪನಿಗೆ ಎಡಾಕುಗೆ ಭಾರಿ ರಕ್ತಗಾಯವಾಗಿ ಮುರಿದಂತೆ ಆಗಿರುತ್ತದೆ  ಸೋನಾಲಿಕ ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ರಿಂದ ನಡೆದಿರುತ್ತದೆ ಅಂತಾ ಪಿಯಾಧಿ ಸಾರಂಶ ಇರುತ್ತದೆ



ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 28/2020 ಕಲಂ: 174 ಸಿ.ಆರ್.ಪಿ.ಸಿ : ಸುಮಾರು 15 ದಿನಗಳ ಹಿಂದೆ ಮೃತ ಬಿಯಾರಾಮ ಜಾಟ ಈತನು ತನ್ನ ಸಂಬಂಧಿಕರಾದ ಫಿರ್ಯಾದಿ ರಾಜು ಜಾಟ ಇವರು ಸೈದಾಪೂರ ಪಟ್ಟಣದಲ್ಲಿಯ ಮನೆಗೆ ಬಂದಿರುತ್ತಾನೆ. ನಂತರ ನಿನ್ನೆ ದಿನಾಂಕ 11.09.2020 ರಂದು ಬೆಳಿಗ್ಗೆ ಫಿರ್ಯಾದಿಯ ತಮ್ಮಂದಿರು ಮತ್ತು ಅವರ ಮೂರು ಜನ ಸ್ನೇಹಿತರು ಹಾಗೂ ಮೃತ ಬಿಯಾರಾಮ ಸೇರಿ ಒಟ್ಟು ಆರು ಜನರು ಸೈದಾಪೂರ ದಿಂದ ಚಿಂತನಳ್ಳಿಯ ಗವಿ ಸಿದ್ದಿಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಸಮಯ ಮಧ್ಯಾಹ್ನ 3:00 ನಜರಾಪೂರ ಸಿಮಾಂತರದ ದಬ-ದಬಿ ಫಾಲ್ಸ್ ನೋಡಲು ಬಂದಿದ್ದು ಇರುತ್ತದೆ. ನಂತರ ಎಲ್ಲಾರು ನೀರಿನ ದಡದಲ್ಲಿ  ನಿಂತು ಫೋಟೊ ಇಳಿದ ಮೇಲೆ ಮೃತ ದಬ-ದಬಿಯಲ್ಲಿ ನೀರು ಬೀಳುವ ಜಾಗದಲ್ಲಿ ಹೋಗಿ ನಿಲ್ಲುತ್ತೇನೆ ಫೋಟೊ ತೆಗಿಯಿರಿ ಅಂತಾ ಉಳಿದ ಐದು ಜನರಿಗೆ ಹೇಳಿ ನೀರು ಬೀಳುವ ಜಾಗದ ಹತ್ತಿರ ಹೋದಾಗ ನೀರಿನಲ್ಲಿ ಮುಳುಗಿದ್ದು ಎಷ್ಟೊತ್ತಾದರು ಮೇಲಕ್ಕೆ ಬಾರದೇ ಇರುವುವದಿಂದ ಉಳಿದ ಐದು ಜನರು ಹಾಗೂ ಇತರರು ಕೂಡಿಕೊಂಡು ನೀರಲ್ಲಿ ಹುಡುಕಿದ್ದರು ಸಹ ಸಿಗದೇ ಇರುವುದರಿಂದ ನಂತರ ಇಂದು ದಿನಾಂಕ 12.09.2020 ರಂದು ಬೆಳಿಗ್ಗೆ 8:30 ಗಂಟೆಯ ಸುಮಾರಿಗೆ ಮೃತ ದೇಹವು ನೀರಲ್ಲಿ ತೇಲುತ್ತಿರುವುದನ್ನು ಕಂಡು ಠಾಣೆಗೆ ಬಂದು ಹೇಳಿಕೆ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 28/2020 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.



ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 77/2020 ಕಲಂ: ಮಹಿಳೆ ಮತ್ತು ಹೆಣ್ಣು ಮಗು ಕಾಣೆ. : ದಿನಾಂಕ:12.09.2020 ರಂದು 3:00 ಪಿಎಮ್ಕ್ಕೆ ಪಿಯರ್ಾದಿ ಸೋಮಣ್ಣ ತಂದೆ ಪರಮಣ್ಣ ಲಾಟಿ ಸಾ|| ಕೆರಿ ಜಂಪಾರ ದೊಡ್ಡಿ ಕಕ್ಕೇರಾ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಿಸಿದ ಅಜರ್ಿಯನ್ನು ಹಾಜರ ಪಡಿಸಿದ್ದು ಸದರ ಅಜರ್ಿಯ ಸಾರಾಂಶವೆನೆಂದರೆ ನಮ್ಮ ಮನೆಯು ಕಕ್ಕೇರಾ ಸೀಮಾಂತರದ ಹೊಲ ಸವರ್ೇ ನಂ. 92ರಲ್ಲಿಯ ಹೊಲದಲ್ಲಿ ಇರುತ್ತದೆ. ನನಗೆ ಅಸ್ಕಿ ಗ್ರಾಮದ ರೇಣುಕಾ ತಂದೆ ಸಾಬಣ್ಣ ವಾಲಿಕಾರ ಸಾ|| ಅಸ್ಕಿ ತಾ|| ತಾಳಿಕೋಟಿ ಇವಳೊಂದಿಗೆ ಬಾಲ್ಯದಲ್ಲಿಯೇ ವಿವಾಹವಾಗಿರುತ್ತದೆ. ನನ್ನ ಹೆಂಡತಿ ದೊಡ್ಡವಳಾದ ಬಳಿಕ ನಾವು ಸಂಸಾರಿಕ ಜೀವನವನ್ನು ಅನೋನ್ಯವಾಗಿ ಮಾಡಿದ್ದು ನಮಗೆ ಅನಿಲಕುಮಾರ, ಪ್ರಶಾಂತ ಅಂತಾ ಇಬ್ಬರೂ ಗಂಡು ಮಕ್ಕಳು ಬಸಮ್ಮ ಅಂತಾ ಒಂದು ಹೆಣ್ಣು ಮಗು ಆಗಿರುತ್ತವೆ. ನಾವು ಸ್ವಂತ ಐದು ಜನ ಅಣ್ಣ ತಮ್ಮಂದಿರಿದ್ದು ಎಲ್ಲಾರೂ ಪ್ರತ್ಯೇಕವಾಗಿ ನಮ್ಮ ನಮ್ಮ ಪಾಲಿಗೆ ಬಂದ ಜಮೀನು ತೆಗೆದುಕೊಂಡು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತೇವೆ. ನನ್ನ ಕುಟುಂಬದೊಂದಿಗೆ ನನ್ನ ತಾಯಿಯಾದ ನಿಂಗಮ್ಮ ಲಾಟಿ ಇವಳು ವಾಸವಿರುತ್ತಾಳೆ. ನಾವು ಮನೆಯಲ್ಲಿ ಗಂಡ ಹೆಂಡತಿ ಅನೋನ್ಯತೆಯಿಂದ ಸಂಸಾರವನ್ನು ಮಾಡಿಕೊಂಡು ಬಂದಿದ್ದು ಯಾವುದೇ ರೀತಿಯ ಜಗಳ ಮಾಡಿಕೊಂಡು ಬಂದಿರುವುದಿಲ್ಲ ನನ್ನ ಹೆಂಡತಿಯು ಸಹ ನಮ್ಮೊಂದಿಗೆ ಒಳ್ಳೆಯ ರೀತಿಯಲ್ಲಿ ಇದ್ದು ನನಗೆ, ನನ್ನ ಮಕ್ಕಳಿಗೆ, ನಮ್ಮ ತಾಯಿಗೆ ಸರಿಯಾದ ಆರೈಕೆಯನ್ನು ಮತ್ತು ಹೊಲ-ಮನೆ ಕೆಲಸವನ್ನು ಮಾಡಿಕೊಂಡು ಬಂದಿರುತ್ತಾಳೆ. ಹೀಗಿದ್ದು ದಿನಾಂಕ:08/09/2020 ರಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ನಾನು ಕಕ್ಕೇರಾ ಸೀಮಾಂತರದ ನಮ್ಮ ಹೊಲದ ಸವರ್ೇ ನಂ.535 ನೇದ್ದರಲ್ಲಿ ಕೆಲಸ ಮಾಡಲು ಹೋಗಿ ಹೊಲದಲ್ಲಿ ಕೆಲಸ ಮಾಡಿ ಮರಳಿ ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ಹೊಲದಿಂದ ಮನೆಗೆ ಬಂದು ನೋಡಲಾಗಿ ಮನೆಯಲ್ಲಿ ನನ್ನ ಹೆಂಡತಿ ಮತ್ತು ಮಗಳಾದ ಬಸಮ್ಮಳು ಕಾಣಿಸಲಿಲ್ಲ ಮನೆಯಲ್ಲಿದ್ದ ನನ್ನ ಮಗನಾದ ಅನಿಲಕುಮಾರನಿಗೆ ನಿಮ್ಮ ತಾಯಿ ಮತ್ತು ನಿಮ್ಮ ತಂಗಿಯಾದ ಬಸಮ್ಮಳು ಎಲ್ಲಿ ಇದ್ದಾಳೆ ಅಂತಾ ಕೇಳಿದಾಗ ನನ್ನ ಮಗನು ಅವರು ಊರಿಗೆ ಹೋಗಿರುತ್ತಾರೆ ಅಂತಾ ತಿಳಿಸಿದನು. ನಂತರ ನಾನು ನಮ್ಮ ತಾಯಿಯಾದ ನಿಂಗಮ್ಮಳಿಗೆ ನಿಮ್ಮ ಸೊಸೆ ಎಲ್ಲಿ ಹೋಗಿರುತ್ತಾಳೆ ಮುದನೂರಿಗೆ ಹೋಗಿದ್ದು ನಿಜನಾ ಸುಳ್ಳಾ ಅಂತಾ ಕೇಳಿದಾಗ ನಮ್ಮ ತಾಯಿಯು ನನಗೆ ದಿನಾಂಕ:08/09/2020 ರಂದು ಮದ್ಯಾಹ್ನ 12:30 ಗಂಟೆಯ ಸುಮಾರಿಗೆ ನಿನ್ನ ಹೆಂಡತಿಯಾದ ರೇಣುಕಾಳು ಮಗಳಾದ ಬಸಮ್ಮಳಿಗೆ ಕರೆದುಕೊಂಡು ತಾನು ಮುದನೂರ ಗ್ರಾಮಕ್ಕೆ ತನ್ನ ಅಜ್ಜಿಯಾದ ಮಡಿವಾಳಮ್ಮ ಗೊಂದಲೇರ ಇವಳಿಗೆ ಮಾತನಾಡಿಸಿಕೊಂಡು ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾಳೆ ಅಂತಾ ತಿಳಸಿದಳು. ನಂತರ ನಾನು ಮುದನೂರ ಗ್ರಾಮದಲ್ಲಿನ ನನ್ನ ಅಳಿಯನಾದ ಜಟ್ಟೆಪ್ಪ ತಂದೆ ಸಾಬಣ್ಣ ವಾಲಿಕಾರ ಇವರಿಗೆ ಪೋನ್ ಮಾಡಿ ವಿಚಾರಿಸಿದ್ದು ಅಲ್ಲಿಗೇ ತಮ್ಮ ಅಕ್ಕಳು ಬಂದಿರುವುದಿಲ್ಲ ಅಂತಾ ತಿಳಿಸಿದರು. ನಂತರ ನಾನು ಅಂದೇ ನಮ್ಮೂರಲ್ಲಿ, ನಮ್ಮ ಹೊಲಗಳಿಗೆ ಹೋಗಿ ನನ್ನ ಹೆಂಡತಿ ಮತ್ತು ನನ್ನ ಮಗಳಿಗೆ ಹುಡುಕಾಡಿದ್ದು ಸಿಗಲಿಲ್ಲ. ನಂತರ ಇಲ್ಲಿಯವರೆಗೆ ನನ್ನ ಹೆಂಡತಿಯಾದ ರೇಣುಕಾ ಲಾಟಿ ವ|| 27ವರ್ಷ, ಮಗಳಾದ ಬಸಮ್ಮ ಲಾಟಿ ವ|| 5ವರ್ಷ ಇವಳಿಗೆ ನಾನು ಮತ್ತು ನಮ್ಮ ಸಂಭಂದಿಕರಾದ ಅಯ್ಯಪ್ಪ ತಂದೆ ಪರಮಣ್ಣ ಲಾಟಿ, ನಂದಪ್ಪ ತಂದೆ ಜಟ್ಟೆಪ್ಪ ಕುರಿ, ಜುಮ್ಮಣ್ಣ ತಂದೆ ಮಲ್ಲಪ್ಪ ಕವಾಸ, ರಾಯಪ್ಪ ತಂದೆ ನಿಂಗಪ್ಪ ಜಂಪಾ ಸಾ|| ಎಲ್ಲಾರೂ ಕೆರಿ ಜಂಪಾರ ದೊಡ್ಡಿ ಕಕ್ಕೇರಾ ಕೂಡಿಕೊಂಡು ಹುಣಸಗಿ, ಮಾಳೂರ, ತಾಳಿಕೋಟಿ, ಪೀರಾಪೂರ, ಶಹಾಪೂರ, ಜೇವಗರ್ಿ, ಕಲಬುಗರ್ಿ, ಯಾದಗಿರ, ಲಿಂಗಸ್ಗೂರ, ಮೈಲಾಪೂರ, ಐದಬಾಯಿ ಗ್ರಾಮಗಳಿಗೆ ಬೇಟಿಕೊಟ್ಟು ಅಲ್ಲಿ ನನ್ನ ಹೆಂಡತಿ ಮತ್ತು ಮಗಳ ಬಗ್ಗೆ ವಿಚಾರಿಸಿ ಹುಡುಕಾಡಿದರು ಸಿಕ್ಕಿರುವುದಿಲ್ಲ. ನನ್ನಂತೆ ನನ್ನ ಹೆಂಡತಿಯ ತವರು ಮನೆಯವರಾದ ಅಳಿಯ ಜಟ್ಟೆಪ್ಪ ವಾಲಿಕಾರಾ, ಮುದಕಣ್ಣ ತಂದೆ ಸಿದ್ರಾಮ ನಾಯಿಕೊಡಿ ಸಾ|| ಪೀರಾಪೂರ ಇವರು ಸಹ ಯಾದಗಿರ, ಸುಂಟಾಣ, ಮಾಳಳ್ಳಿ, ತೆಗ್ಗಳ್ಳಿ, ಲಿಂಗಸ್ಗೂರ, ಸಿಂದನೂರ ಮತ್ತು ಇತರೆ ಕಡೆ ಹುಡುಕಾಡಿದ್ದು ಅಲ್ಲದೇ ದೇವರು ಕೇಳಿ ಹುಡುಕಾಡಿದರು ಇಲ್ಲಿಯವರೆಗೆ ನನ್ನ ಹೆಂಡತಿ ಮತ್ತು ಮಗಳು ಪತ್ತೆ ಆಗಿರುವುದಿಲ್ಲ. ನನ್ನ ಹೆಂಡತಿ ರೇಣುಕಾಳು ಐದನೇ ತರಗತಿವರೆಗೆ ಓದಿದ್ದು ಇರುತ್ತದೆ. ನನ್ನ ಹೆಂಡತಿಯು ಸಾಧಾರಣ ಮೈಕಟ್ಟು, ನಡುಗೆಂಪು ಬಣ್ಣ, ದುಂಡು ಮುಖ ಹೊಂದಿದ್ದು ಸುಮಾರು 4.8ಫೀಟ್ ಎತ್ತರ ಇದ್ದು ಕೆಂಪು ದಡೆಯುಳ್ಳ ಸಾದನೀಲಿ ಬಣ್ಣದ ಬಿಳಿಗೆರೆಯುಳ್ಳ ಇಲಕಲ್ ಸೀರೆ, ಮತ್ತು ಚಾಕಲೇಟ್ ಬಣ್ಣದ ಜಂಪಾರ ಧರಿಸಿದ್ದು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದು ಹಿಂದಿ ಭಾಷೆಯನ್ನು ಸ್ವಲ ಸ್ವಲ್ಪ ಮಾತನಾಡುತ್ತಾಳೆ. ನನ್ನ ಮಗಳಾದ ಬಸಮ್ಮಳು ಸಾಧರಣ ಮೈಕಟ್ಟು, ಕಪ್ಪು ಬಣ್ಣ, ದುಂಡನೇಯ ಮುಖ, ಮಂಡು ಮೂಗು ಎತ್ತರ ಸುಮಾರು 2.6 ಪೀಟ್ ಹೊಂದಿದ್ದು. ಗುಲಾಬಿ ಬಣ್ಣದ ಪ್ರಾಕ್ ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ. ಕಾರಣ ನನ್ನ ಹೆಂಡತಿ ರೇಣುಕಾಳಿಗೆ ಮತ್ತು ಮಗಳಾದ ಬಸಮ್ಮಳಿಗೆ ಪತ್ತೆ ಮಾಡಿಕೊಡಲು ಮಾನ್ಯರವರಲ್ಲಿ ವಿನಂತಿ  ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.77/2020 ಕಲಂ: ಮಹಿಳೆ ಮತ್ತು ಹೆಣ್ಣು ಮಗು ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!