ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/09/2020

By blogger on ಶನಿವಾರ, ಸೆಪ್ಟೆಂಬರ್ 12, 2020




                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/09/2020                                                                                                                       

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 77/2020 ಕಲಂ 273,284,ಐಪಿಸಿ ಮತ್ತು 32, 34 ಕೆ ಇ ಆಕ್ಟ :    ಇಂದು ದಿನಾಂಕ.11/09/2020 ರಂದು 1-30 ಪಿಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್ಐ (ಕಾ.ಸು) ಸಾಹೇಬರು ರವರು ಠಾಣೆಗೆ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ. 11/09/2020 ರಂದು 11-00 ಎಎಂ ಸುಮಾರಿಗೆ ಠಾಣೆಯಲ್ಲಿರುವಾಗ ಲಾಡೇಸಗಲ್ಲಿ ಬೀಟ ಸಿಬ್ಬಂದಿಯವರಾದ ಶ್ರೀ ಎಮ್.ಹೆಚ್ ಹಣಮರೆಡ್ಡಿ ಹೆಚ್,ಸಿ 171 ರವರು ಲಾಡೇಸಗಲ್ಲಿಯಲ್ಲಿ ವ್ಯಕ್ತಿಯೊಬ್ಬನು ಶಿವಪ್ಪ ಗೊಂದಳಿ ಇವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸೆಂಧಿ(ಹೆಂಡ)ಯನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದಾರೆ ಅಂತಾ ಭಾತ್ಮೀ ನೀಡಿದ್ದು ಇದೂ ಕಾನೂನು ಬಾಹಿರವಾಗಿದ್ದು ಸದರಿ ಸೆಂಧಿಯನ್ನು ಮನುಷ್ಯನು ಸೇವನೆ ಮಾಡಿದಲ್ಲಿ ಮನುಷ್ಯನ ಪ್ರಾಣಕ್ಕೆ ಅಪಾಯವಾಗುವಂತಹ ಹಾಗೂ ಮಾನವನ ದೇಹಕ್ಕೆ ಮಾರಣಾಂತಿಕ ಹಾನಿಯುಂಟಾಗುವ ರಾಸಾಯನಿಕ ಮಿಶ್ರಿತ ವಿಷಕಾರಿ ಕಲಬೆರೆಕೆ ಪಾನೀಯ ಮಾರಾಟ ಮಾಡುತ್ತಿದ್ದು  ದಾಳಿ ಕುರಿತು ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 11-40 ಎಎಂಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೋರಟು  11-50 ಎಎಂಕ್ಕೆ ಲಾಡೆಸಗಲ್ಲಿಯ ಚಂದ್ರಕಾಂತ ಪೂಜಾರಿ ಈತನ ಕಿರಾಣಿ ಅಂಗಡಿ ಹತ್ತಿರ ತಲುಪಿ ಜೀಪ ನಿಲ್ಲಿಸಿ ಎಲ್ಲರೂ ಮುಂದಕ್ಕೆ  ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಒಬ್ಬಳು ಪ್ಲಾಸ್ಟಿಕ ವಾಟರ ಬಾಟಲಿಗಳಲ್ಲಿ ಸೆಂಧಿಯನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು, ಒಬ್ಬ ವ್ಯಕ್ತಿ ಅಲ್ಲೇ ಕೈಯಲ್ಲಿ ಬಾಟಲಿ ಹಿಡಿದುಕೊಂಡು ಸೆಂಧಿ ಕುಡಿಯುತ್ತಾ ಕುಳಿತ್ತಿದ್ದನ್ನು ಖಚಿತ ಪಡಿಸಿಕೊಂಡು 12-00 ಪಿಎಮ್ ಕ್ಕೆ ಒಮ್ಮೇಲೆ ದಾಳಿ ಮಾಡಿ ಹಿಡಿಯುವಷ್ಠರಲ್ಲಿ ಸದರಿ ಸೆಂಧಿ ಮಾರಾಟ ಮಾಡುತ್ತಿದ್ದ ಮಹಿಳೆಯು ನಮ್ಮನ್ನು ನೋಡಿ ಓಡಿ ಹೋದಳು. ನಂತರ ಅಲ್ಲೇ ಸ್ಥಳದಲ್ಲಿ ಸೆಂಧಿ ಕುಡಿಯುತ್ತಾ ಕುಳಿತ್ತಿದ್ದ ವ್ಯಕ್ತಿಗೆ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಜಲಾಲ ತಂದೆ ಮಹ್ಮದ ಇಲ್ಮಾಯಿಲ್ ವ;55 ಜಾ; ಮುಸ್ಲಿಂ ಉ; ಹೊಟೇಲ ಕೆಲಸ ಸಾ; ಗಚ್ಚಿಬೌಡಿ ಯಾದಗಿರಿ ಅಂತಾ ತಿಳಿಸಿ, ತಾನು ಅಲ್ಲಿಗೆ ಸೆಂಧಿ ಕುಡಿಯಲು ಬಂದಿರುವುದಾಗಿ ತಿಳಿಸಿದನು. ನಂತರ ಸೆಂಧಿ ಮಾರಾಟ ಮಾಡುತ್ತಿದ್ದವಳ ಹೆಸರು ವಿಚಾರಿಸಲು ಸಾಬಮ್ಮ ಗಂಡ ರಾಮಣ್ಣ ಪೂಜಾರಿ ಸಾ; ಲಾಡೆಜಗಲ್ಲಿ ಯಾದಗಿರಿ ಅಂತಾ ತಿಳಿಸಿದನು.  ನಂತರ ಸ್ಥಳದಲ್ಲಿ 1 ಲೀಟರನ 16 ಪ್ಲಾಸ್ಟಿಕ ವಾಟರ ಬಾಟಲಿಗಳಲ್ಲಿ ಸೆಂಧಿ ಇದ್ದು, ಸದರಿ ಮಹ್ಮದ ಜಲಾಲ ಈತನಿಗೆ ಒಂದು ಲೀಟರನ ವಾಟರ ಬಾಟಲ ಸೆಂಧಿಗೆ ಎಷ್ಟು ಹಣ ಅಂತಾ ವಿಚಾರಿಸಲು ಸದರಿಯವನು ವಾಟರ ಬಾಟಲಿಯಲ್ಲಿನ ಒಂದು ಲೀಟರಿನಷ್ಟು ತುಂಬಿರುವ ಸೆಂಧಿಗೆ 10/-ರೂ  ದಂತೆ ಮಾರಾಟ ಮಾಡುತ್ತಾರೆ ಅಂತಾ ತಿಳಿಸಿದನು. ಒಟ್ಟು 16 ಲೀಟರ ಸೆಂಧಿಗೆ ಅಂದಾಜು ಕಿಮ್ಮತ್ತು 160=00 ರೂ. ಕಿಮತ್ತಿನ ಸೆಂಧಿಯಿದ್ದು ನಂತರ ಜಪ್ತಿಪಡಿಸಿಕೊಂಡ ಮೇಲ್ಕಂಡ 16 ಲೀಟರ ಸೆಂಧಿಯಲ್ಲಿ ಒಂದು ಲೀಟರನ ಎರಡು ಪ್ಲಾಸ್ಟಿಕ ವಾಟರ ಬಾಟಲಿಗಳಲ್ಲಿ ರಾಸಾಯನಿಕ ಪರಿಕ್ಷೇ ಕುರಿತು ಎಫ್.ಎಸ್.ಎಲ್ ಪರೀಕ್ಷೆಗೆ ಒಳಪಡಿಸಲು ಶ್ಯಾಂಪಲ್ಗಾಗಿ ತೆಗೆದು ಬಿಳಿಯ ಬಟ್ಟೆಯಿಂದ ಬಾಯಿ ಕಟ್ಟಿ ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ಪಂಚರ ಮತ್ತು ನಾನು ಸಹಿ ಮಾಡಿದ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಉಳಿದ ಎಲ್ಲಾ ಸೆಂಧಿ ತುಂಬಿರುವ ಪ್ಲಾಸ್ಟಿಕ ಬಾಟಲಿಗಳನ್ನು  ಮುಂದಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿದ್ದು ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 11/09/2020 ರಂದು 12-00 ಪಿಎಂ ದಿಂದ 1-00 ಪಿಎಂ ದವರೆಗೆ ಸ್ಥಳದಲ್ಲಿ ಕುಳಿತು ಲ್ಯಾಪಟ್ಯಾಪನಲ್ಲಿ ಗಣಕೀಕರಣ ಮಾಡಿ ನಂತರ ಯಾದಗಿರಿ ನಗರ ಠಾಣೆಗೆ 1-15 ಪಿಎಂಕ್ಕೆ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಬಂದು ಜಪ್ತಿ ಪಂಚನಾಮೆಯನ್ನು ಠಾಣೆಯಲ್ಲಿ ಪ್ರಿಂಟ್ ತೆಗೆದು  ಪಂಚರ ಸಹಿ ಮಾಡಿಸಿ ಮುಂದಿನ ಕ್ರಮಕ್ಕಾಗಿ 1-30 ಪಿಎಮ್ ಕ್ಕೆ ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 77/2020 ಕಲಂ.273, 284 ಐಪಿಸಿ ಮತ್ತು 32, 34, ಕೆ.ಇ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 78/2020 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 11/09/2020 ರಂದು 4-30 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಸವೆನೆಂದರೆ, ನಾನು ಇಂದು ದಿನಾಂಕ.11/09/2020 ರಂದು 1-50 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಲಾಡೇಸಗಲ್ಲಿ ಬೀಟ್ ಸಿಬ್ಬಂದಿ ಶ್ರೀ ಎಮ್.ಹೆಚ್ ಹಣಮರೆಡ್ಡಿ ಹೆಚ್,ಸಿ 171 ರವರು ಬಂದು ಯಾದಗಿರಿಯ ಲಾಡೇಸಗಲ್ಲಿಯ ಹಳೆ ತಹಸೀಲ್ ಕಾರ್ಯಲಯದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಬಂದಿರುತ್ತದೆ ಅಂತಾ ಮಾಹಿತಿ ನೀಡಿದ್ದು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 4-20 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 4-30 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.78/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 123/2020 ಕಲಂ 379 ಐಪಿಸಿ : ಇಂದು ದಿನಾಂಕ 11-09-2020 ರಂದು 5-30 ಪಿ.ಎಮ್ ಕ್ಕೆ ಶ್ರೀ ಲಿಂಗರಾಜ ತಂದೆ ಕುಪ್ಪೇರಾಯ ವಯಸ್ಸು: 29 ಉ: ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾದಗಿರಿ ಜಿಲ್ಲೆ ಸದರಿ ಲಿಖಿತ ವರದಿ ಫಿರ್ಯಾಧಿಯನ್ನು  ಠಾಣೆಗೆ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 11-09-2020 ರಂದು ನಾನು ಕಚೇರಿಯಲ್ಲಿ ಎಂದನಿಂತೆ ಕರ್ತವ್ಯ ನಿರ್ವಹಿಸುತ್ತಿರುವಾಗ, ಮಧ್ಯಾಹ್ನ ಅಂದಾಜು 12-30 ಪಿ.ಎಂ. ಗೆ ಯಾದಗಿರಿ ತಾಲ್ಲೂಕಿನ ಮಸ್ಕನಳಿ-ವರ್ಕನಳ್ಳ್ಳಿ ಗ್ರಾಮಸ್ಥರು ಅಂದಾಜು 05-06 ಜನರು ಬಂದು ನನಗೆ ತಿಳಿಸಿದ್ದೇನೆಂದರೆ, ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ ಗ್ರಾಮದ ಸೀಮಂತರ ಪ್ರದೇಶದ ಸಕರ್ಾರಿ ಸವರ್ೆ ನಂ. 38/1 ರಲ್ಲಿ ಶ್ರೀ ಶಾಂತಪ್ಪ ತಂದೆ ದೇವೆಂದ್ರಪ್ಪ ಮಾಳಿಕೇರಿ ಹಾಗೂ ಇತರರು ಅಕ್ರಮವಾಗಿ ಕಲ್ಲುಗಣಿಗಾರಿಕೆ ಮಾಡುತ್ತಿದ್ದು ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಮೌಖಿಕವಾಗಿ ದೂರು ನೀಡಿದ್ದು ಇರುತ್ತದೆ. ಅದರಂತೆ ನಾನು ಯಾದಗಿರಿ ವಲಯದ ಕಂದಾಯ ನಿರೀಕ್ಷಕರು ಶ್ರೀ. ಗಿರೀಶ್ ರಾಯಕೋಟಿ ಇವರಿಗೆ ದೂರವಾಣಿ ಮೂಲಕ ಸಮಯ ಮಧ್ಯಾಹ್ನ 1-00 ಪಿ ಎಂ ಗ್ ಕರೆ ಮಾಡಿ ವರ್ಕನಳ್ಳಿ ಗ್ರಾಮದ ಸಕರ್ಾರಿ ಸವರ್ೆ ನಂ. 38/1 ರಲ್ಲಿ ಶ್ರೀ ಶಾಂತಪ್ಪ ತಂದೆ ದೇವೆಂದ್ರಪ್ಪ ಮಾಳಿಕೇರಿ ಹಾಗೂ ಇತರರು ಅಕ್ರಮವಾಗಿ ಕಲ್ಲುಗಣಿಗಾರಿಕೆ ಮಾಡುತ್ತಿರುವುದಾಗಿ ಮಸ್ಕನಳ್ಳಿ- ವರ್ಕನಳ್ಳ್ಳಿ ಗ್ರಾಮಸ್ಥರು ಮೌಖಿಕ ದೂರು ನೀಡಿದ್ದು ಸದರಿ ಪ್ರದೇಶಕ್ಕೆ ಧಾಳಿಮಾಡಲು ಜೊತೆಗೂಡುವಂತೆ ತಿಳಿಸಿದ್ದು ಇರುತ್ತದೆ ಅದರಂತೆ ಮಧ್ಯಾಹ್ನ 2-00 ಪಿ.ಎಂ ಗೆ ನಾನು ಹಾಗೂ ನಮ್ಮ ಇಲಾಖೆಯ ಸಕರ್ಾರಿ ಜೀಪ್ ವಾಹನ ಸಂಖ್ಯ ಕೆ.ಎ. 04-ಜಿ 1490 ರಲ್ಲಿ ನಮ್ಮ ಇಲಾಖೆಯ ವಾಹನ ಚಾಲಕ ಶ್ರೀ. ಜಂಬಣ್ಣ ಇವರು ಕುಳಿತು ತಹಸೀಲ್ದಾರರ ಕಾಯರ್ಾಲಯಕ್ಕೆ ಯಾದಗಿರಿ ಇವರ ಕಛೇರಿಗೆ 2-15 ಪಿಎಂಗೆ ತಲುಪಿ ಅಲ್ಲಿ ಶ್ರೀ. ಗಿರೀಶ್ ರಾಯಕೋಟಿ, ಕಂದಾಯ ನಿರೀಕ್ಷಕರು, ಯಾದಗಿರಿ ವಲಯ ಹಾಗೂ ಶ್ರೀ. ಧನಂಜಯ ಗ್ರಾಮ ಲೆಕ್ಕಾಧಿಕಾರಿಗಳು ವರ್ಕನಳ್ಳಿ ಇವರೆಲ್ಲರು ಸೇರಿ ನಮ್ಮ ಸಕರ್ಾರಿ ಜೀಪ್ ನಲ್ಲಿ ಕುಳಿತುಕೊಂಡು ವರ್ಕನಳ್ಳಿ ಗ್ರಾಮದ ಸಕರ್ಾರಿ ಸವರ್ೆ ನಂ. 38/1 ರ ಕಡೆಗೆ ಹೊರೆಟೆವು ಅಂದಾಜು ಸಮಯ 3-00 ಪಿ.ಎಂಗೆ ಸದರಿ ಸವರ್ೇ ನಂ. ಪ್ರದೇಶಕ್ಕೆ ತಲುಪಿದೆವು.  ನಮ್ಮ ಜೀಪನ್ನು ಕಂಡಾಗ ಸದರಿ ಸವರ್ೆನಂ. ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಯಲ್ಲಯ ತೊಡಗಿದ್ದ ಕಾಮರ್ಿಕರು ಅಂದಾಜು 05-07 ಜನರು ಓಡಿಹೋಗಿದ್ದು ಇರುತ್ತದೆ. ನಾವೇಲ್ಲರು ವಾಹನದಿಂದ ಇಳಿದು ಸದರಿ ಸವರ್ೆ ನಂ. 38/1 ನ್ನು ಪರಿಶೀಲನೆ ಮಾಡಿದ್ದು ಅದರನ್ವಯ ಸದರಿ ಪ್ರದೇಶದಲ್ಲಿ 03 ಕಡೆ ಅನುಮತಿ ಪಡೆಯದೇ ಸಕರ್ಾರಿ ಸವರ್ೆ ನಂ. ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡಿದ್ದು ಕಂಡು ಬಂದಿರುತ್ತದೆ. ಪಿಟ್ ನಂ.1: ಉದ್ದ : 19 ಮೀಟರ್ ಇದ್ದು, ಅಗಲ: 15 ಮೀಟರ್ ಹಾಗೂ ಆಳ : 02 ಮೀಟರ್ ಇರುತ್ತದೆ ಸದರಿ ಪ್ರದೇಶದಿಂದ ಒಟ್ಟು 570 ಘನ ಮೀಟರ್ ಪ್ರದೇಶದಲ್ಲಿ ಗಣಿಗಾರಿಕೆಯಾಗಿದ್ದು ಈ ಪ್ರದೇಶದಿಂದ ಒಟ್ಟು ಅಂದಾಜು 40 ಮೆಟ್ರಿಕ್ ಟನ್ ಕಟ್ಟಡ ಕಲ್ಲು ಉತ್ಪಾದನೆ ಮಾಡಿ ರವಾನೆ ಮಾಡಿರುವುದು ಕಂಡುಬಂದಿರುತ್ತದೆ ಇದರ ಅಂದಾಜು ರಾಜಧನ 2,800 ರೂ. ಇರುತ್ತದೆ ಇದರ ಮಾರುಕಟ್ಟೆ ಬೆಲೆ 6,500 ಇರುತ್ತದೆ.  ಸದರಿ ಗಣಿಗಾರಿಕೆ ಪ್ರದೇಶದಲ್ಲಿ ಡ್ರಿಲ್ಲ್ಲಿಂಗ್ ಮೆಶಿನ್ ದೊರಕಿದ್ದು ಅದನ್ನು ಗಣಿಗಾರಿಕೆ ಪುರಾವೆಗೆಂದು ವಶಕ್ಕೆ ಪಡೆಯಲಾಯಿತು. ಅದರ ಅಂದಾಜು ಮೌಲ್ಯ ರೂ.10,000/- ಇರುತ್ತದೆ, 03 ಡ್ರಿಲ್ಲಿಂಗ್ ರಾಡ್ಗಳು ದೊರೆತ್ತಿದ್ದು ಅವುಗಳ ಒಟ್ಟು ಮೌಲ್ಯ ಅಂದಾಜು 3,000/- ರೂ. ಗಳು ಇರುತ್ತದೆ ಹಾಗೂ 02 ಸುತ್ತಿಗೆಗಳು ದೊರೆತ್ತಿದ್ದು ಅವುಗಳ ಒಟ್ಟು ಅಂದಾಜು ಮೌಲ್ಯ ರೂ. 1,000/- ಇರುತ್ತದೆ. ನಂತರ ಅಲ್ಲಿಂದ ಮುಂದೆ ವರೆದು ಅದೇ ಸವರ್ೆ ನಂ.ನ ಎರಡನೇ ಗಣಿಗಾರಿಕೆ ಪ್ರದೇಶ ನೋಡಲಾಗಿದ್ದು ಅದರ ಉದ್ದಳತೆಯು ಈರೀತಿ ಇರುತ್ತದೆ.  ಪಿಟ್ ನಂ. 02: ಉದ್ದ: ಅಂದಾಜು 10 ಮೀಟರ್, ಅಗಲ: ಅಂದಾಜು 09 ಮೀಟರ್, ಆಳ: ಅಂದಾಜು: 01 ಮೀಟರ್ ಇರುತ್ತದೆ ಸದರಿ ಪ್ರದೇಶದಲ್ಲಿ ಒಟ್ಟು 90 ಘನ ಮೀಟರ್ ಕಲ್ಲು ಗಣಿಗಾರಿಕೆಯಾಗಿರುತ್ತದೆ. ಈ ಪ್ರದೇಶದಿಂದ ಅಂದಾಜು 20 ಮೆಟ್ರಿಕ್ ಟನ್ರಷ್ಟು ಕಟ್ಟಡಕಲ್ಲುಗಳನ್ನು ಉತ್ಪಾದನೆ ಮಾಡಿ ರವಾನಿಸಿದ್ದು ಇರುತ್ತದೆ. ಇದರ ರಾಜಧನವು 1,400 ರೂ. ಗಳಾಗಿರುತ್ತದೆ. ಇದರ ಮಾರುಕಟ್ಟೆ ಮೌಲ್ಯವು ಅಂದಜು 3,500/- ರೂ.ಗಳಾಗಿರುತ್ತದೆ. ಅಲ್ಲಿಂದ ಮುಂದೆವರೆದು ಅದೇ ಸವರ್ೆ ನಂ. ಪ್ರದೇಶದ ಮೂರನೇಯ ಗಣಿಗಾರಿಕೆ ಪ್ರದೇಶ ನೋಡಲಾಗಿದ್ದು ಅದರ ಉದ್ದಳತೆಯು ಈರೀತಿ ಇರುತ್ತದೆ.   ಪಿಟ್ ನಂ. 03: ಉದ್ದ: ಅಂದಾಜು 20 ಮೀಟರ್, ಅಗಲ: ಅಂದಾಜು 12 ಮೀಟರ್, ಆಳ: ಎತ್ತರ: 06 ಮೀಟರ್ ಇರುತ್ತದೆ ಸದರಿ ಪ್ರದೇಶದಲ್ಲಿ ಒಟ್ಟು 1,440 ಘನ ಮೀಟರ್ ಕಲ್ಲು ಗಣಿಗಾರಿಕೆಯಾಗಿರುತ್ತದೆ. ಈ ಪ್ರದೇಶದಿಂದ ಅಂದಾಜು  ಮೆಟ್ರಿಕ್ 3,682 ಟನ್ರಷ್ಟು ಕಟ್ಟಡಕಲ್ಲುಗಳನ್ನು ಉತ್ಪಾದನೆ ಮಾಡಿ ರವಾನಿಸಿದ್ದು ಇರುತ್ತದೆ. ಇದರ ರಾಜಧನವು 2,57,740/- ರೂ. ಗಳಾಗಿರುತ್ತದೆ. ಇದರ ಮಾರುಕಟ್ಟೆ ಮೌಲ್ಯವು ಅಂದಜು 6,13,500/- ರೂ.ಗಳಾಗಿರುತ್ತದೆ ಸದರಿ ಗಣಿಗರಿಕೆಯ ಜಾಗೆಯ ಸವರ್ೆ ನಂ. 38/1 ಅನ್ನು ಕಂದಾಯ ಇಲಾಖೆಯವರು ದೃಢಪಡಿಸಿರುತ್ತಾರೆ.ಸದರಿ ಗಣಿಗಾರಿಕೆ ಪ್ರದೇಶದಲ್ಲಿ ಜಪ್ತಿಮಾಡಲಾದ ಡ್ರಿಲ್ಲಿಂಗ್ ಮೆಶಿನ್, 03 ಡ್ರಿಲ್ಲಿಂಗ್ ರಾಡ್ಗಳು ಹಾಗೂ 02 ಸುತ್ತಿಗೆಗಳೊಂದಿಗೆ ಠಾಣೆಗೆ ಬಂದು ಸುಮಾರು 5-30 ಪಿ.ಎಂ. ಗೆ ಹಾಜಾರಾಗಿ ವರದಿ ನೀಡಿದ್ದು ಇರುತ್ತದೆ ಅದರಂತೆ ಆರೋಪಿಯಾದ ಶಾಂತಪ್ಪ ತಂದೆ ದೇವೆಂದ್ರಪ್ಪ ಮಾಳಿಕೇರಿ ಸಾ. ವರ್ಕನಳ್ಳಿ ಹಾಗೂ ಗಣಿಗಾರಿಕೆಯಲ್ಲಿ ತೊಡಗಿದ್ದ ಇತರರು ಯಾವುದೇ ಪರವಾನಿಗೆ ಇಲ್ಲದೆ ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ ಗ್ರಾಮದ ಸಕರ್ಾರಿ ಸವರ್ೆ. ನಂ. 38/1 ರಲ್ಲಿ ಅನುಮತಿ ಪಡೆಯದೇ ಕಳ್ಳತನದಿಂದ ಕಲ್ಲುಗಣಿಗಾರಿಕೆ ಮಾಡಿದ್ದು ಸಕರ್ಾರದ ಸ್ವತ್ತಾದ ನೈಸಗರ್ಿಕ ಖನಿಜ ಕಟ್ಟಡದ ಕಲ್ಲುಗಳನ್ನು ಮಾರಾಟ ಮಾಡಿರುತ್ತಾರೆ. ಸದರಿ ಪ್ರದೇಶದಿಂದ ಒಟ್ಟು 2,61,940/- ರೂ. (ಕಟ್ಟಡ ಕಲ್ಲಿನ) ರಾಜಧನ ನಷ್ಠ ಉಂಟು ಮಾಡಿರುತ್ತಾರೆ ಇದರ ಒಟ್ಟು ಮಾರುಕಟ್ಟೆ ಮೌಲ್ಯವು ರೂ. 6,23,500/- ಆಗಿರುತ್ತದೆ. ಆದ ಕಾರಣ ಆರೋಪಿತರ ವಿರುದ್ದ ಐ.ಪಿ.ಸಿ ಕಲಂ. 379 ರಡಿಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 123/2020 ಕಲಂ 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 111/2020, ಕಲಂ, 143,147,148,323.324,354,504.506. ಸಂಗಡ 149 ಐ ಪಿ ಸಿ : ದಿನಾಂಕ: 11-09-2020 ಬೆಳಿಗ್ಗೆ 11-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ಪಿಯರ್ಾಧಿ ಆಕೆಯ ಮನೆಯವರು ದಿನಾಂಕ: 10-09-2020 ರಂದು ಬೆಳಿಗ್ಗೆ 06-30 ಗಂಟೆಗೆ ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಪಿಯರ್ಾದಿಯವರು ತಿರುಗಾಡುವ  ಮನೆಯ ಮುಂದಿನ ದಾರಿ ಬಂದ ಮಾಡಿದ್ದಕ್ಕೆ ಆರೋಪಿತರಿಗೆ ಯಾಕೆ ದಾರಿ ಬಂದ ಮಾಡಿರಿ ಅಂತಾ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಕೂಡಿ ಲೆ ಸೂಳೆ ಮಕ್ಕಳೆ ಇಲ್ಲೇನು ದಾರಿ ಆದನಲೇ ಅಂದು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮಾಡಿ ಹೆಣ್ಣು ಮಗಳಿಗೆ ಸೀರೆಯ ಸೇರಗನ್ನು ಹಿಡಿದು ಎಳದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ  ಪಿಯರ್ಾಧಿ ಸಾರಂಶ ಇರುತ್ತದೆ.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 112/2020, ಕಲಂ, 143,147,148,323.324,354,504.506. ಸಂಗಡ 149 ಐ ಪಿ ಸಿ : ದಿನಾಂಕ: 11-09-2020 ಸಾಯಂಕಾಲ 06-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ಪಿಯರ್ಾಧಿ ನಮ್ಮ ಮನೆಯವರು ದಿನಾಂಕ: 10-09-2020 ರಂದು ಬೆಳಿಗ್ಗೆ 06-30 ಗಂಟೆಗೆ ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಕೈಯಲ್ಲಿ ಕಟ್ಟಿಗೆ ಮತ್ತು ಕಲ್ಲನ್ನು ಹಿಡಿದುಕೊಂಡು ಮನೆಯ ಮುಂದಿನ ಜಾಗವನ್ನು ಸ್ವಚ್ಚ ಮಾಡಿದ್ದಕ್ಕೆ ಇದು ನಮ್ಮ ನೀವು ಯಾಕೆ ಸ್ವಚ್ಚ ಮಾಡಿರಿ ಲೆ ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹಾಗೂ ಕಲ್ಲಿನಿಂದ  ಹೊಡೆದು ರಕ್ತಗಾಯ ಮಾಡಿ ನನಗೆ  ಕುಪ್ಪಸ ಹಿಡಿದು ಎಳದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ  ಪಿಯರ್ಾಧಿ ಸಾರಂಶ ಇರುತ್ತದೆ.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 105/2020 ಕಲಂ: 504,341,323,427 ಸಂ 149 ಐಪಿಸಿ : ಇಂದು ದಿನಾಂಕ:11/09/2020 ರಂದು 7-35 ಪಿಎಮ್ ಕ್ಕೆ ಶ್ರೀ ಅರವಿಂದ ತಂದೆ ವಿರುಪಾಕ್ಷಪ್ಪ ತಡಕಲ್, ವ:40, ಜಾ:ಲಿಂಗಾಯತ, ಉ:ಮ್ಯಾನೇಜರ ಸಾ:ಲಕ್ಷ್ಮೀನಗರ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಯಾದಗಿರಿ-ಶಹಾಪೂರ ಮೇನ ರೋಡ ವಡಗೇರಾ ಕ್ರಾಸದಿಂದ ಸ್ವಲ್ಪ ದೂರದಲ್ಲಿರುವ ಪೂಜ್ಯ ಹೆಮರೆಡ್ಡಿ ಮಲ್ಲಮ್ಮ ಪೆಟ್ರೋಲಿಯಮ್ಸನಲ್ಲಿ ಮ್ಯಾನೇಜರ ಎಂದು ಕೆಲಸ ಮಾಡಿಕೊಂಡಿರುತ್ತೇನೆ. ಶ್ರೀ ವಿನೋದ ತಂದೆ ಬಾಪುಗೌಡ ಪಾಟಿಲ್ ಇವರು ಪೆಟ್ರೋಲ್ ಬಂಕ ಮಾಲಿಕರಿರುತ್ತಾರೆ. ಸಿದ್ದಲಿಂಗರೆಡ್ಡಿ ತಂದೆ ನಾಗಪ್ಪ ಹಡಪದ ಮತ್ತು ತಾಯಪ್ಪ ತಂದೆ ಶಿವರಾಯ  ಎಂಬ ಇಬ್ಬರೂ ಹುಡುಗರು ಪೆಟ್ರೋಲ್ ಹಾಕುವ ಕೂಲಿಯಾಳು ಎಂದು ಕೆಲಸ ಮಾಡಿಕೊಂಡಿರುತ್ತಾರೆ. ಸದರಿ ಸಿದ್ದಲಿಂಗರೆಡ್ಡಿ ಈತನ ಊರು ಗುರುಸಣಗಿ ಗ್ರಾಮ ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ: 10/09/2020 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಸದರಿ ಸಿದ್ದಲಿಂಗರೆಡ್ಡಿ ಈತನು ಗ್ರಾಹಕರಿಗೆ ಪೆಟ್ರೋಲ್ ಮತ್ತು ತಾಯಪ್ಪನು ಗ್ರಾಹಕರಿಗೆ ಡಿಸೇಲ್ ಹಾಕುತ್ತಿದ್ದರು. ನಾನು ಅಲ್ಲಿಯೇ ನಿಂತುಕೊಂಡಿದ್ದೇನು. ಸಿದ್ದಲಿಂಗರೆಡ್ಡಿ ಈತನು ಹಲೋ ಸುಪಾರಿಯನ್ನು ತಿಂದು ಅದರ ಖಾಲಿ ಚೀಟಿಯನ್ನು ಆ ಕಡೆ ಖಾಲಿ ಜಾಗದಲ್ಲಿ ಒಗೆದಾಗ ಅದು ಗಾಳಿಗೆ ಹಾರಿ ಬಂದು ಪೆಟ್ರೋಲ್ ಹಾಕಿಸಲು ಬಂದಿದ್ದ ಗ್ರಾಹಕ ನಬಿ ತಂದೆ ಮಹಿಬೂಬಸಾಬ ಹೊಸಮನಿ ಸಾ:ಗುರುಸಣಗಿ ಈತನ ಮೇಲೆ ಬಿತ್ತು ಅದಕ್ಕೆ ಅವನು ಸಿದ್ದಲಿಂಗರೆಡ್ಡಿಗೆ ಏ ಮನುಷ್ಯರಿಗೆ ನೋಡಿ ಬಿಸಾಕಲೆ ಎಂದು ಹೇಳಿದಾಗ ಸಿದ್ದಲಿಂಗರೆಡ್ಡಿಯು ಆತನಿಗೆ ತಪ್ಪಾಯಿತಣ್ಣ ಗಾಳಿಗೆ ಬಂದು ನಿಮ್ಮ ಮೇಲೆ ಬಿದ್ದಾದ ಎಂದು ಹೇಳಿದನು. ಪೆಟ್ರೋಲ್ ಹಾಕಿಸಿಕೊಂಡು ಹೋದ ನಬಿಯು ಕೆಲವೆ ಕ್ಷಣಗಳಲ್ಲಿ ತನ್ನೊಂದಿಗೆ ನಾಲ್ಕೈದು ಹುಡುಗರನ್ನು ಕರೆದುಕೊಂಡು ಮರಳಿ ಬಂದವನೆ ಸಿದ್ದಲಿಂಗರೆಡ್ಡಿಗೆ ಏ ಮಗನೆ ಸಿದ್ಯಾ ನೀನು ನಮ್ಮೂರಿನವ ಆಗಿ ನನ್ನ ಮೇಲೆ ಅಡಿಕೆ ಖಾಲಿ ಚೀಟಿ ಒಗೆದು ನನಗೆ ಮಂದಿಯೊಳಗ ಅವಮಾನ ಮಾಡುತ್ತಿಯೆನಲೇ ಭೊಸುಡಿ ಮಗನೆ ಎಂದು ಜಗಳ ತೆಗೆದವನೆ ಸಿದ್ದಲಿಂಗರೆಡ್ಡಿಗೆ ಕೈಯಿಂದ ಮುಷ್ಟಿ ಮಾಡಿ ಮುಖಕ್ಕೆ, ಹೊಟ್ಟೆಗೆ ಗುದ್ದಿದನು. ಆಗ ನಾನು ಯಾಕೆ ಹೊಡೆಯುತ್ತಿ ಎಂದು ಬಿಡಿಸಲು ನಡುವೆ ಹೋಗುತ್ತಿದ್ದಾಗ ಸದರಿ ನಬಿ ಈತನು ನೀನು ಯಾಕೆ ನಡುವೆ ಬರುತ್ತಿ ಲೇ ಭೊಸುಡಿಕೆ ಎಂದು ನನಗೆ ತಡೆದು ನಿಲ್ಲಿಸಿದನು. ಆದರು ನಾನು ಜಗಳ ಬಿಡಿಸಿ ನಮ್ಮ ಹುಡಗ ಸಿದ್ದಲಿಂಗರೆಡ್ಡಿಗೆ ನಮ್ಮ ಆಫಿಸನಲ್ಲಿ ಹಾಕಿ ಅದರ ಬಾಗಿಲ ಬಂದ ಮಾಡಿದೆನು. ಸದರಿ ನಬಿ ಈತನು ಸಿದ್ದಲಿಂಗರೆಡ್ಡಿಯು ಆಫಿಸನಲ್ಲಿ ಹೊದದ್ದಕ್ಕೆ ಸಿಟ್ಟಿನಲ್ಲಿ ನಮ್ಮ ಪೆಟ್ರೋಲ್ ಬಂಕಿನ ಆಫಿಸ ರೂಮಿನ ಗಾಜಿನ ಬಾಗಿಲಿಗೆ ಜಾಡಿಸಿ ಒದ್ದಿದ್ದರಿಂದ ಸದರಿ ಬಾಗಿಲ ಗಾಜು ಒಡೆದು ಅಂದಾಜು 15,000/- ರೂ. ಹಾನಿಯಾಗಿರುತ್ತದೆ. ವಿನಾಕಾರಣ ಅಡಿಕೆ ಖಾಲಿ ಚೀಟಿ ಗಾಳಿಗೆ ಮೈಮೇಲೆ ಬಂದು ಬಿದ್ದಿದ್ದಕ್ಕೆ ನೆಪ ಮಾಡಿಕೊಂಡು ಬಂದು ಜಗಳ ತೆಗೆದು ಸಿದ್ದಲಿಂಗರೆಡ್ಡಿಗೆ ಕೈಯಿಂದ ಹೊಡೆದು, ನನಗೆ ತಡೆದು ನಿಲ್ಲಿಸಿ, ನಮ್ಮ ಆಫಿಸ ರೂಮಿನ ಬಾಗಿಲು ಗಾಜು ಒಡೆದು ಲುಕ್ಸಾನೆ ಮಾಡಿದ ನಬಿ ಮತ್ತು ಅವನ ಸ್ನೇಹಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಮಾಲಿಕರಿಗೆ ವಿಷಯ ತಿಳಿಸಿ, ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ನಿಜವಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 105/2020 ಕಲಂ: 504,341,323,427 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 236/2020. ಕಲಂ 78 (3) ಕೆ.ಪಿ.ಆಕ್ಟ :    ಆರೋಪಿತರು ದಿನಾಂಕ: 11-09-2020 ರಂದು 5:45 ಪಿ.ಎಮ್.ಕ್ಕೆ ಶಹಾಪುರ ನಗರದ ದಿಗ್ಗಿಬೇಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 1680/- ರೂ. ನಗದು ಹಣ , ಎರಡು ಮಟಕಾ ಚೀಟಿಗಳು ಮತ್ತು ಎರಡು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 236/2020 ಕಲಂ.78 (3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 109/2020 ಕಲಂ 20(ಎ), 20(ಬಿ) ಎನ್ಡಿಪಿಎಸ್ ಎಕ್ಟ್ 1985: ಆರೋಪಿತನು ಮಕ್ತಾಪುರ ಮಡ್ಡಿಯಲ್ಲಿರುವ ತನ್ನ ಮನೆಯ ಪಕ್ಕದಲ್ಲಿನ ಖುಲ್ಲಾ ಜಾಗದಲ್ಲಿ ಅನಧಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದು ಹೂ & ಕಾಯಿಗಳಾಗಿರುತ್ತವೆ. ಫಿಯರ್ಾದಿದಾರರು ಮಾನ್ಯ ಎಸ್.ಪಿ. ಸಾಹೇಬರು ಯಾದಗಿರಿ, ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪುರ ರವರ ಮಾರ್ಗದರ್ಶನದಲ್ಲಿ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಿನಾಂಕ: 11/09/2020 ರಂದು 11.40 ಎ.ಎಮ್.ಕ್ಕೆ ದಾಳಿ ಮಾಡಿ ಅಂದಾಜು 2.2 ಕೆ.ಜಿ. ತೂಕದ 4 ಭಾಗಶಃ ಒಣಗಿದ ಹಾಗೂ 2 ಹಸಿ ಗಾಂಜಾ ಗಿಡಗಳು ಒಟ್ಟು 6 ಗಾಂಜಾ ಗಿಡಗಳು ಅ.ಕಿ. 6,600=00 ವಶಪಡಿಸಿಕೊಂಡಿದ್ದು, ಇದರ ಬಗ್ಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಓಡಿ ಹೋದ ಆರೋಪಿತನ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.

 

ಕೆಂಭಾವಿ  ಪೊಲೀಸ ಠಾಣೆ ಗುನ್ನೆ ನಂ:- 138/2020 ಕಲಂ: 379 ಐ.ಪಿ.ಸಿ : ಇಂದು ದಿನಾಂಕ: 11/09/2020 ರಂದು 1.00 ಪಿಎಮ್ಕ್ಕೆ ಫಿಯರ್ಾದಿ ಶ್ರೀ. ಮಲ್ಲಪ್ಪ ತಂದೆ ಮೈಲಾರೆಪ್ಪ ಹೆಗ್ಗೇರಿ ಸಾ|| ಕಿರದಳ್ಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾಧಿ ಸಾರಾಂಶವೇನೆಂದದರೆ, ನಮ್ಮವು 4 ಕುರಿಗಳು ಇದ್ದು ಸದರಿಯವುಗಳನ್ನು ದಿನಾಲು ಮೇಯಿಸಿಕೊಂಡು ಬಂದು ನಮ್ಮ ಮನೆಯ ಅಂಗಳದಲ್ಲಿ ಕಟ್ಟುತ್ತಿದ್ದೇವು. ಎಂದಿನಂತೆ ದಿನಾಂಕ 09.09.2020 ರಂದು ನಮ್ಮ ನಾಲ್ಕು ಕುರಿಗಳನ್ನು ಎಂದಿನಂತೆ ನಮ್ಮ ಮನೆಯ ಅಂಗಳದಲ್ಲಿ ಕಟ್ಟಿ ನಾವು ಎಲ್ಲರೂ ರಾತ್ರಿ 10 ಗಂಟೆಗೆ ಮನೆಯಲ್ಲಿ ಮಲಗಿಕೊಂಡಿದ್ದು ಆ ದಿ ರಾತ್ರಿ ಮಳೆ ಬಂದಿದ್ದರಿಂದ ನಾವು ಎಲ್ಲರೂ ಮನೆಯ ಒಳಗೆ ಮಲಗಿಕೊಂಡಿದ್ದೆವು. ಕುರಿಗಳನ್ನು ಮನೆಯ ಮುಂದೆ ಕುರಿ ಬಲಿ ಹಾಕಿ ಬಕರ್ಾ ಮುಚ್ಚಿ ಬಿಟ್ಟಿದ್ದೆವು. ಹೀಗಿದ್ದು ಎಂದಿನಂತೆ ದಿನಾಂಕ 10.09.2020 ರಂದು ಬೆಳಿಗ್ಗೆ 5 ಗಂಟೆಗೆ ಎದ್ದು ಹೊರಗೆ ಬಂದು ನೋಡಲು ನಮ್ಮ ಕುರಿ ಬಲೆಯಲ್ಲಿ ಹಾಕಿದ ನಮ್ಮ ನಾಲ್ಕು ಕುರಿಗಳು ಕಾಣಲಿಲ್ಲ ಆಗ ನಾನು ಗಾಬರಿಯಾಗಿ ಎಲ್ಲಿಯಾದರೂ ಹೋಗಿರಬಹುದು ಅಂತ ತುಂಬಾ ಕಡೆಗೆ ಹುಡುಕಾಡಿದರೂ ಎಲ್ಲಿಯೂ ಸಿಗಲಿಲ್ಲ. ಸದರ ನಮ್ಮ ನಾಲ್ಕು ಕುರಿಗಳನ್ನು ಮನೆಯ ಮುಂದೆ ಬಲೆಯಲ್ಲಿ ಹಾಕಿ ದಿನಾಂಕ 09.09.2020 ರಂದು ರಾತ್ರಿ ಮಳೆ ಬಂದಿದ್ದರಿಂದ ನಾವೆಲ್ಲರೂ ಮನೆಯ ಒಳಗೆ ಮಲಗಿಕೊಂಡಾಗ ಯಾರೋ ಕಳ್ಳರು ದಿನಾಂಕ 09.09.2020 ರ ರಾತ್ರಿ 10 ಗಂಟೆಯಿಂದ ದಿನಾಂಕ 10.09.2020 ರ ಬೆಳಗಿನ ಜಾವ 5 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಮುಂದಿನ ಕುರಿ ಬಲೆಯಲ್ಲಿ ಹಾಕಿದ 24,000/- ರೂ ಕಿಮ್ಮತ್ತಿನ ಕುರಿಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಬಗ್ಗೆ ಶಹಾಪೂರ ಸಂತೆಗೆ ಹೋಗಿ ನೋಡಲು ಅಲ್ಲಿ ನಮ್ಮ ಕುರಿಗಳು ಕಾಣಲಿಲ್ಲ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ಸಲ್ಲಿಸಿದ್ದು, ಕಾರಣ ನನ್ನ ಕಳುವಾದ 24,000/- ರೂ ಕಿಮ್ಮತ್ತಿನ ನಾಲ್ಕು ಕುರಿಗಳನ್ನು ಕಳುವು ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:138/2020 ಕಲಂ: 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.  


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 139/2020 ಕಲಂ: 87 ಕೆಪಿ ಯಾಕ್ಟ : ದಿನಾಂಕ:11.09.2020 ರಂದು 02.00 ಪಿಎಮ್ ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಮಲ್ಲಾ ಗ್ರಾಮದ ಕಡೆಗೆ ಪೆಟ್ರೋಲಿಂಗ ಕುರಿತು ಹೋದಾಗ ಸದರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 06-07 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 02.30 ಪಿಎಮ್ ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 3.00 ಗಂಟೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ  ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 138/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ಪಿರ್ಯಾದಿದಾರರು ದಾಳಿ ಕೈಕೊಂಡಿದ್ದು ದಾಳಿಯಲ್ಲಿ 07 ಜನ ಆರೋಪಿತರಿಗೆ ದಸ್ತಗಿರಿ ಮಾಡಿದ್ದು ಕಣದಲ್ಲಿ ಸಿಕ್ಕ 32000/- ರೂಪಾಯಿ ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಹಾಗು 1 ಬಿಳಿ ಬರಕಾವನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.



ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 64/2020 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 08/09/2020 ರಂದು 4:00 ಪಿ. ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 12:00 ಪಿ.ಎಂ ಕ್ಕೆ ನಾರಾಯಣಪೂರ ಗ್ರಾಮದ ಶ್ರೀ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 64/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 6:15 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಇಬ್ಬರು ಆರೋಪಿತರು ಹಾಗೂ ಎರಡು ಬಾಲ್ ಪೆನ್ ಹಾಗು ಎರಡು ಮಟಕಾ  ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 3800/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.

ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 

1) ರಾಜು ತಂದೆ ಸೋಮಲೆಪ್ಪ ರಾಠೋಡ ವ:26 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಲಂಬಾಣಿ ಸಾ:ನಾರಾಯಣಪೂರ 

ಬಲವಂತರಾಯ ತಂದೆ ಲಕ್ಷ್ಮಣ್ಣ ಬಿಜ್ಜೂರ ವ:24 ವರ್ಷ ಜಾ:ಬೇಡರ ಉ:ಕೂಲಿ ಕೆಲಸ ಸಾ:ನಾರಾಯಣಪೂರ 

ಹುಣಸಗಿ  ಪೊಲೀಸ ಠಾಣೆ ಗುನ್ನೆ ನಂ:- 86/2020 78 (3) ಕೆ.ಪಿ ಯಾಕ್ಟದಿನಾಂಕ:11/09/2020 ರಂದು 19.00 ಪಿ.ಎಮ್ ಕ್ಕೆ, ಶ್ರೀ. ಬಾಪುಗೌಡ ಪಾಟೀಲ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಹುಣಸಗಿ ಪಟ್ಟಣದ ಎ.ಪಿ.ಎಮ್.ಸಿ ಗೇಟ್  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಮಟಕಾ ಬರೆದುಕೊಳ್ಳುವನ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:86/2020 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

     ನಂತರ ಮಾನ್ಯ ಪಿಎಸ್ಐ ಸಾಹೇಬರು 20.45 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 5460/- ರೂ.ಗಳು 2 ಮಟಕಾ ನಂಬರ ಬರೆದ ಚೀಟಿಗಳು, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜಪ್ತಿ ಪಂಚನಾಮೆ & ಮುದ್ದೇಮಾಲು ನೀಡಿದ್ದು ಇರುತ್ತದೆ. ಆರೋಪಿತನ ಹೆಸರು  ಸರದಾರಪಟೇಲ್ ತಂದೆ ಸಂಗನಗೌಡ ಫಾಟೀಲ

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!