ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/09/2020

By blogger on ಗುರುವಾರ, ಸೆಪ್ಟೆಂಬರ್ 10, 2020

 


                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/09/2020                                                                                                                       

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 122/2020 ಕಲಂ 279, 338, 304(ಎ) ಐಪಿಸಿ : ಇಂದು ದಿನಾಂಕ 10-09-2020 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ಶಾಂತಮ್ಮ ಗಂಡ ಸಾಬಣ್ಣ ರಾಂಪೂರ ಸಾಃ ಯಾಗಾಪೂರ ತಾ: ಚಿತ್ತಾಪೂರ ಜಿ: ಕಲಬುಗರ್ಿ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಕೂಲಿಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನನಗೆ ಇಬ್ಬರೂ ಮಕ್ಕಳಿದ್ದು, ಮೊದಲನೇಯ ಮಗ ದೇವರಾಜ ತಂದೆ ಸಾಬಣ್ಣ ರಾಂಪೂರ ವಯಾಃ 8 ವರ್ಷ ಮತ್ತು ಎರಡನೇಯ ಮಗ ಈಶಪ್ಪ ತಂದೆ ಸಾಬಣ್ಣ ರಾಂಪೂರ ವಯಾಃ 3 ವರ್ಷ ಅಂತಾ ಇದ್ದಿರುತ್ತಾರೆ, ನಿನ್ನೆ ದಿನಾಂಕ 09/09/2020 ರಂದು ನನ್ನ ತಂದೆ-ತಾಯಿಗೆ ಮಾತಾಡಿಸಿಕೊಂಡು ಬರೋಣ ಅಂತಾ ನಾನು, ನನ್ನ ಇಬ್ಬರೂ ಮಕ್ಕಳು ಕೂಡಿಕೊಂಡು ನನ್ನ ತವರು ಮನೆಯಾದ ಎಸ್.ಹೊಸಳ್ಳಿ ಗ್ರಾಮಕ್ಕೆ ಹೋಗಿದ್ದೆವು.ಹೀಗಿರುವಾಗ ಇಂದು ದಿನಾಂಕ 10-09-2020 ರಂದು ನನ್ನ ತಂದೆ-ತಾಯಿಗೆ ಮಾತಾಡಿಸಿಕೊಂಡು ನಮ್ಮೂರಿಗೆ ಹೋಗಬೇಕು ಅಂತಾ ಬೆಳಿಗ್ಗೆ 11-00 ಗಂಟೆಗೆ ನಮ್ಮೂರ ಅಟೋ ಸ್ಟ್ಯಾಂಡಿನಲ್ಲಿ ನಾನು, ನನ್ನ ಮಕ್ಕಳು, ನನ್ನ ತಂದೆ ಶರಣಪ್ಪ ತಂದೆ ಹಣಮಂತ ತಳವಾರ ಮತ್ತು ನನ್ನ ತಂಗಿಯ ಗಂಡನಾದ ಮಲ್ಲಿಕಾಜರ್ುನ ತಂದೆ ಸಾಬಣ್ಣ ಹುನಗುಂಟಿ ಎಲ್ಲರೂ ಕೂಡಿ ಅಟೋ ಸ್ಟ್ಯಾಂಡಿನಲ್ಲಿ ನಿಂತಿದ್ದೆವು, ಅಲ್ಲಿ ಒಂದು ಅಟೋ ನಂ ಕೆ.ಎ-33-ಎ-5607 ನೆದ್ದರ ಚಾಲಕನು ಅಟೋ ಯಾದಗಿರಿಗೆ ಹೋಗುತ್ತದೆ ಅಂತಾ ಹೇಳಿದ್ದರಿಂದ ನಾವೆಲ್ಲರೂ ಅಟೋದಲ್ಲಿ ಕುಳಿತೆವು, ನಂತರ ಅಟೋ ಚಾಲಕನು ಅಟೋ ಚಾಲು ಮಾಡಿಕೊಂಡು ಎಸ್.ಹೊಸಳ್ಳಿ ಗ್ರಾಮದಿಂದ ಯಾದಗಿರಿ ಕಡೆಗೆ ಓಡಿಸಿಕೊಂಡು ಹೋಗುತ್ತಿದ್ದನು,  ಮಾರ್ಗಮಧ್ಯ ಎಸ್.ಹೊಸಳ್ಳಿ-ಹೊನಗೇರಾ ರೋಡಿನ ಮೇಲೆ ಅಟೋ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಹೋಗುವಾಗ ಅಟೋದ ಮುಂದಿನ ಗಾಲಿಯ ಡಿಕ್ಸ ಉಚ್ಚಿ ಹೋಗಿ ಅಟೋ ಪಲ್ಟಿಯಾಯಿತು, ಈ ಅಪಘಾತದಲ್ಲಿ ನನಗೆ ಯಾವುದೇ ಗಾಯಗಳು ಆಗಿರುವದಿಲ್ಲ, ನನ್ನ ತಂದೆ ಶರಣಪ್ಪ ತಂದೆ ಹಣಮಂತ ತಳವಾರ ಇತನ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯ, ಕಣ್ಣಿನ ಹುಬ್ಬಿಗೆ ರಕ್ತಗಾಯ ಮತ್ತು ಎದೆಗೆ ಭಾರಿ ಗುಪ್ತಗಾಯವಾಗಿ ಬಾಯಿಯಿಂದ ರಕ್ತ ಬರುತ್ತ್ತಿದೆ, ನನ್ನ ಮಗನಾದ ದೇವರಾಜ ಇತನ ತಲೆಗೆ ಭಾರಿ ರಕ್ತಗಾಯವಾಗಿ ತಲೆ ಡೊಗಿ ಒಡೆದು ಭಾರಿ ರಕ್ತಸ್ರಾವ ಆಗಿ ಸ್ಥಳದಲ್ಲಿಯೇ ಸತ್ತಿರುತ್ತಾನೆ, ಈ ಅಪಘಾತವು ಇಂದು ದಿನಾಂಕ 10/09/2020 ರಂದು ಬೆಳಿಗ್ಗೆ 11-30 ಗಂಟೆಗೆ ನಡೆದಿರುತ್ತದೆ, ಅಪಘಾತ ಮಾಡಿದ ಚಾಲಕನ ಹೆಸರು ಚಾಂದಪಾಶಾ ತಂದೆ ಮಹಮೂದಸಾಬ ಸಾಃ ಎಸ್.ಹೊಸಳ್ಳಿ ಅಂತಾ ಗೋತ್ತಾಗಿರುತ್ತದೆ, ಈ ಅಪಘಾತವು ಅಟೋ ಚಾಲಕನಾದ ಚಾಂದಪಾಶಾ ತಂದೆ ಮಹಮೂದಸಾಬ ಸಾಃ ಎಸ್.ಹೊಸಳ್ಳಿ ಇವನ ನಿರ್ಲಕ್ಷತನದಿಂದ ನಡೆದಿದ್ದು, ಅವನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 122/2020 ಕಲಂ 279. 338, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 13/2020 ಕಲಂ. 174 (ಸಿ) ಸಿಆರ್ಪಿಸಿ  : ದಿನಾಂಕ: 10-09-2020 ರಂದು ಮದ್ಯಾಹ್ನ 01-30 ಗಂಟೆಗೆ ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೇನೆಚಿದರೆ ನನಗೆ ಮಹಾದೇವಿ ವ|| 17 ವರ್ಷ, ಮತ್ತು ಚಿರಂಜೀವಿ ವ|| 2 ವರ್ಷ ಅಂತಾ ಇಬ್ಬರೂ ಮಕ್ಕಳಿರುತ್ತಾರೆ ದಿನಾಂಕ: 08-09-2020 ರಂದು ರಾತ್ರಿ 10-00 ಗಂಟೆಗೆ ನಾನು ನನ್ನ ಗಂಡ ಮತ್ತು ನನ್ನ ಇಬ್ಬರೂ ಮಕ್ಕಳಾದ ಮಹಾದೇವಿ ಮತ್ತು ಚಿರಂಜೀವಿ ಎಲ್ಲರೂ ಮಲಗಿಕೊಂಡಿದ್ದೆವು ನನಗೆ ಮದ್ಯ ರಾತ್ರಿ 01-00 ಗಂಟೆಗೆ ಎಚ್ಚರವಾದಾಗ ನನ್ನ ಮಗಳು ಇರಲಿಲ್ಲ ಆಗ ನಾನು ನನ್ನ ಗಂಡನಿಗೆ ಎಬ್ಬಿಸಿ ಎಲ್ಲಾ ಕಡೆ ನನ್ನ ಮಗಳಿಗಾಗಿ ಹುಡಕಾಡಿದೆವು ನನ್ನ ಮಗಳು ಸಿಗಲಿಲ್ಲ.  ಬೆಳಿಗ್ಗೆ ಊರಲ್ಲಿ ಊರಲ್ಲಿ ನನ್ನ ಮಗಳು ಮತ್ತು ಹಣಮಂತ ತಂದೆ ನಿಂಗಪ್ಪ ಇವರು ಇಬ್ಬರೂ ಪ್ರೀತಿ ಮಾಡಿ ಎಲ್ಲೋ ಹೋಗಿದ್ದಾರೆ ಅಂತಾ ಮಾತಾಡುತಿದ್ದರು. ನನ್ನ ಮಗಳು ಎಲ್ಲೋ ಹೋಗಿರಬೇಕು ಅಂತಾ ನಾವು ಸುಮ್ಮನಿದ್ದೆವು. ದಿನಾಂಕ: 09-09-2020 ರಂದು ಸಾಯಂಕಾಲ 06-00 ಗಂಟೆಗೆ ಬಸವರಾಜಪ್ಪ ತಂದೆ ರುದ್ರಗೌಡ ಮಾಲಿಪಾಟಿಲ್ ಇವರ ಹೊಲ ಲೀಜಿಗೆ ಮಾಡುವ ಯೇಸುರಾಜ ತಂದೆ ಕೊಂಡರಾಜ ಈತನು ಊರಲ್ಲಿ ಬಂದು ಹಣಮಂತನ ಪೊನ್ ಬಸವರಾಜಪ್ಪಗೌಡನ ಹೊಲದ ಹೊಸ ಬಾವಿ ಬಾರಿ ಮೇಲೆ ದಂಡಿಗೆ ಇದೆ ಅಂತಾ ಹೇಳಿದ್ದು ಆಗ ಹಣಮಂತನ ಸಂಬಂದಿಕರು ಹೋಗಿ ನೋಡಿದ್ದು ಆಗ ಅವರಿಗೆ ಸಂಶಯ ಬಂದು ಬಾಯಿಯಲ್ಲಿ ಬಿದ್ದಿರಬೇಕು ಅಂತಾ ತಿಳಿದು ಬಾಯಿಯಲ್ಲಿ ಹುಡಕಾಡಿದ್ದು ಬಾವಿಯಲ್ಲಿ ಹುಡಕಾಡಿದಾಗ ಹಣಮಂತ ತಂದೆ ನಿಂಗಪ್ಪ ಈತನ ಮೃತ ದೇಹ ಮತ್ತು ನನ್ನ ಮಗಳಾದ ಮಹಾದೇವಿ ಈಕೆಯ ಮೃತದೇಹ ಸಿಕ್ಕಿರುತ್ತವೆ ಅಂತಾ ಊರ ಜನರು ಅಂದಾಡುವ ಸುದ್ದಿ ತಿಳಿದು ನಾನು ನನ್ನ ಗಂಡ ಶರಣಪ್ಪ ಮತ್ತು ಇತರರು ಕೂಡಿ ಇಂದು ದಿನಾಂಕ: 10-09-2020 ರಂದು ಬೆಳಿಗ್ಗೆ 06-00 ಗಂಟೆಗೆ ಹೊಸ ಬಾವಿ ಹತ್ತಿರ ಹೋಗಿ ನೋಡಲಾಗಿ ನನ್ನ ಮಗಳು ಮತ್ತು ಹಣಮಂತ ಇಬ್ಬರೂ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಬಾವಿಯಿಂದ ಮೃತದೇಹಗಳನ್ನು ತೆಗೆದು ಬಾವಿ ದಂಡೆಯ ಮೇಲೆ ಹಾಕಿದ್ದರು ಸದರಿ ಘಟನೆಯು ದಿನಾಂಕ: 09-09-2020 ರಂದು ಮದ್ಯ ರಾತ್ರಿ 01-00 ಗಂಟೆಯಿಂದ ದಿನಾಂಕ: 10-09-2020 ರಂದು ಬೆಳಿಗ್ಗೆ 06-00 ಗಂಟೆ ಅವಧಿಯಲ್ಲಿ ನಡೆದಿರುತ್ತದೆ

 

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 129/2020 ಕಲಂ 279, 337, 338 ಐಪಿಸಿ ಮತ್ತು ಕಲಂ. 187 ಐ.ಎಮ್.ವಿ.ಆಕ್ಟ : ಇಂದು ದಿನಾಂಕ 10-09-2020 ರಂದು ಮಧ್ಯಾಹ್ನ 3-45 ಗಂಟೆಗೆ ಸರಕಾರಿ ಆಸ್ಪತ್ರೆ ಗುರುಮಠಕಲದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ರಾಮುಲು ತಂದೆ ಚನ್ನಪ್ಪ ಮಾಲೆ ವಯ|| 23 ವರ್ಷ ಜಾ|| ಕಬ್ಬಲಿಗ  ಉ|| ವಿಧ್ಯಾಥರ್ಿ ಸಾ|| ಮೇದಕ  ತಾ|| ಸೇಡಂ ಜಿ|| ಕಲಬುರಗಿ ಇವನ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ. 10-09-2020 ರಂದು ಬೆಳಿಗ್ಗೆ ನಾನು ಮತ್ತು ನಮ್ಮೂರಿನ ಶಿವಕುಮಾರ ಕಲಾಲ ಇಬ್ಬರೂ ಕೂಡಿ ನನ್ನ ಸಹೋದರ ಸಂಬಂಧಿ ಅಶೋಕ ತಂದೆ ನರಸಪ್ಪ ಮಾಲೆ ಇವರ ಹೊಸ ಹೊಂಡಾ ಶೈನ ಬೈಕ ಚೆಸ್ಸಿ ನಂ-ಒಇ4ಎಅ65ಆಒಏಆ157211 ಇಟಿರಟಿಜ.ಓಠ-ಎಅ65ಇಆ0283066ನೇದ್ದನ್ನು ತೆಗೆದುಕೊಂಡು ಗುರುಮಠಕಲ ಪಟ್ಟಣದಲ್ಲಿ ಕಿರಾಣಿ ಸಾಮಾನು ಮತ್ತು ಶಾಲಾ ಪುಸ್ತಕಗಳನ್ನು ಖರೀದಿ ಮಾಡಲು ನಮ್ಮೂರಾದ ಮೇದಕದಿಂದ ಬಂದಿರುತ್ತೇವೆ. ನಂತರ ಸಾಮಾನುಗಳನ್ನು ಖರೀದಿ ಮಾಡಿಕೊಂಡು ಮತ್ತೆ ನಮ್ಮೂರಿನ ಶಿವಕುಮಾರ ಕಲಾಲ ಈತನನ್ನು ನನ್ನ ಬೈಕ ಹಿಂದೆ ಕೂಡಿಸಿಕೊಂಡು ಮರಳಿ ಮೇದಕಗೆ ಹೊರಟಾಗ ಗುರುಮಠಕಲ - ಹೈದ್ರಾಬಾದ ರೋಡಿನ ಮೇಲೆ ಯಶೋದಾ ಪೆಟ್ರೋಲ ಬಂಕ ಹತ್ತಿರ ಅಯ್ಯಪ್ಪ ಸ್ವಾಮಿ  ದೇವಸ್ಥಾನದ ಕ್ರಾಸ ಬಳಿ ಸಮಯ 3-15 ಗಂಟೆ ಸುಮಾರಿಗೆ ಹೈದ್ರಾಬಾದ ಕಡೆಯಿಂದ ಬಂದ ಒಬ್ಬ ವೈಟ್ ಕಲರ ಸ್ವೀಫ್ಟ್ ಡಿಜೈರ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಬೈಕಗೆ ಬಲಗಡೆ ಭಾಗಕ್ಕೆ ಜೋರಾಗಿ ಡಿಕ್ಕಿಪಡಿಸಿ ಅಪಘಾತಪಡಿಸಿದನು. ಸದರಿ ಅಪಘಾತದಿಂದಾಗಿ ಕೆಳಗಡೆ ಬಿದ್ದ ನನಗೆ ಬಲಗಾಲಿನ ಕಿರುಬೆರಳಿಗೆ ರಕ್ತಗಾಯವಾಗಿದ್ದು, ಶಿವಕುಮಾರನಿಗೆ ಬಲಗಾಲ ಮೊಣಕಾಲಿಗೆ ಭಾರಿ ರಕ್ತಗಾಯವಾಗಿ ಮೊಣಕಾಲಿನ ಹತ್ತಿರ ಮುರಿದಂತೆ ಕಂಡುಬಂದಿರುತ್ತದೆ. ಮತ್ತು ಬಲಗಾಲಿನ ಕಿರುಬೆರಳಿಗೆ ಕತ್ತರಿಸಿದಂತಾಗಿ ರಕ್ತಗಾಯವಾಗಿದ್ದು ಕಂಡುಬಂದಿರುತ್ತದೆ. ನಮಗೆ ಡಿಕ್ಕಿಪಡಿಸಿದ ಕಾರ ನಂಬರ ನೋಡಲಾಗಿ ವೈಟ್ ಕಲರ ಸ್ವೀಫ್ಟ ಕಾರಯಿದ್ದು  ಅದರ ನಂ. ಕೆಎ-41, ಸಿ-0598 ಇರುತ್ತದೆ. ಅದರ ಚಾಲಕನು ಕೆಳಗೆ ಬಿದ್ದ ನಮ್ಮನ್ನು ನೋಡಿ ತನ್ನ ಕಾರನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ. ಸದರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು  ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 130/2020 ಕಲಂ: 78() ಕೆ.ಪಿ. ಆಕ್ಟ್ : ನಿನ್ನೆ ದಿನಾಂಕ 10.09.2020 ರಂದು ಸಂಜೆ 4:00 ಗಂಟೆಗೆ ಚಿನ್ನಾಕಾರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 14/2020 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ.  ನಂತರ ಪಿಸಿ-148 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ರಾತ್ರಿ 8:30 ಗಂಟೆಗೆ ತಂದು ಪಿ.ಎಸ್.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ರಾತ್ರಿ 9:30 ಗಂಟೆಗೆ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 09 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಸಮಯ ರಾತ್ರಿ 11:00 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಹೆಚ್.ಸಿ-31 ಗುರುಮಠಕಲ್ ಠಾಣೆ ಗುನ್ನೆ ನಂಬರ 130/2020 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 75/2020 ಕಲಂ: 78(3) ಕೆ.ಪಿ ಆಕ್ಟ್ : ದಿನಾಂಕ:10/09/2020 ರಂದು 12:00 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ ದಿನಾಂಕ:10.09.2020 ರಂದು 10:00 ಎ.ಎಮ್.ಕ್ಕೆ ತಾವು ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಸಿಬ್ಬಂದಿಯಾದ ಸಿದ್ರಾಮರೆಡ್ಡಿ ಪಿಸಿ-423 ರವರು ತಿಳಿಸಿದ್ದುಎನೇಂದರೆ ಕಕ್ಕೇರಾ ಗ್ರಾಮದಲ್ಲಿನ ಶ್ರೀ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1ರೂಪಾಯಿ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡ್ಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:75/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ 3:10 ಪಿಎಮ್ಕ್ಕೆ ಮರಳಿ ಠಾಣೆಗೆ ಮಾನ್ಯ ಪಿಎಸ್ಐ ಸಾಹೇಬರು ಕಳುಹಿಸಿದ ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 4950/-ರೂ ಗಳನ್ನು ಮತ್ತು ಒಬ್ಬ ವ್ಯಕ್ತಿಯನ್ನು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಕಕ್ಕೇರಾ ದಿಂದಾ ಕಳುಹಿಸಿದ್ದನ್ನು ಸಿದ್ರಾಮರೆಡ್ಡಿ ಪಿಸಿ-423, ಶಿವರಾಜ ಪಿಸಿ-143 ರವರು ತಂದು ಹಾಜರು ಪಡೆಸಿದ್ದು ಇರುತ್ತದೆ.  ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 1) ಅಬ್ದುಲ್ ರೆಹಮಾನ್ ತಂದೆ ಬಾಬುಮಿಯಾ ಖಾಜಿ ವ|| 37ವರ್ಷ ಜಾ||ಮುಸ್ಲಿಂ ಉ|| ಒಕ್ಕಲುತನ ಸಾ|| ಕಕ್ಕೇರಾ ತಾ|| ಹುಣಸಗಿ


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 76/2020 ಕಲಂ: 78(3) ಕೆ.ಪಿ ಆಕ್ಟ್ : ದಿನಾಂಕ:10/09/2020 ರಂದು 1:00 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆ ಇವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ ದಿನಾಂಕ:10.09.2020 ರಂದು 11:00 ಎ.ಎಮ್.ಕ್ಕೆ ತಾವು ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಸಿಬ್ಬಂದಿಯಾದ ಸಿದ್ರಾಮಪ್ಪ ಪಿಸಿ-210 ರವರು ತಿಳಿಸಿದ್ದು ಎನೇಂದರೆ ಕಕ್ಕೇರಾ ಗ್ರಾಮದಲ್ಲಿನ        ಶ್ರೀ ಜಕಪ್ಪ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1ರೂಪಾಯಿ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡ್ಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:76/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 5:30 ಪಿ.ಎಮ್ಕ್ಕೆ ಮರಳಿ ಠಾಣೆಗೆ ಬಂದು ಒಂದು ಬಾಲ್ ಪೆನನ್ನು, ಅಂಕಿ ಸಂಖ್ಯೆಗಳನ್ನು ಬರೆದ ಒಂದು ಮಟಕಾ ಚೀಟಿ ಹಾಗೂ ನಗದು ಹಣ 1050/-ರೂ ಗಳನ್ನು ಒಬ್ಬ ವ್ಯಕ್ತಿಯನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 1) ಬಾಬುಲಾಲ್ ಜೈನ್ ತಂದೆ ಗೇವರ್ ಚಂದ್ ಜೈನ್ ವ|| 62ವರ್ಷ ಜಾ|| ಜೈನರು ಉ|| ಕಿರಾಣಿ ಅಂಗಡಿ ಸಾ||ಕಕ್ಕೇರಾ


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 22/2020 ಕಲಂ: 107 ಸಿ.ಆರ್.ಪಿ.ಸಿ. : ಮಾನ್ಯರವರಲ್ಲಿ ನಾನು ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ ಠಾಣೆ ಇದ್ದು ತಮ್ಮಲ್ಲಿ ವರದಿಯನ್ನು ಸಲ್ಲಿಸುವುದೆನೆಂದರೆ ಇಂದು ದಿನಾಂಕ 10.09.2020 ರಂದು 3.30 ಪಿ.ಎಮ್ಕ್ಕೆ ಹಳ್ಳಿಬೇಟಿ ಕುರಿತು ತೆಗ್ಗೆಳ್ಳಿ ಗ್ರಾಮಕ್ಕೆ  ಬೇಟಿ ನೀಡಿದಾಗ ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನಂದರೆ, ಬೈಚಬಾಳ ಸೀಮಾಂತರದ ಹೊಲ ಸವರ್ೇ ನಂಬರ 143 ನೇದ್ದರ ಹೊಲದ ಉಳಿಮೆ ಮಾಡುವ ವಿಷಯದಲ್ಲಿ  ತಕರಾರು ಆಗಿ ಗ್ರಾಮದಲ್ಲಿ ಎರಡು ಪಾಟರ್ಿಗಳಾಗಿದ್ದು ಕಾರಣ ಒಂದನೇಯ ಪಾಟರ್ಿಯ ಜನರಾದ 1) ಬಸವರಾಜ ತಂದೆ ಹಣಮಂತ ದೇವರಪೂಜಾರಿ 2) ಪುತ್ರಪ್ಪ ತಂದೆ ಮಹಾದೇವಪ್ಪ  3) ಭೀಮರಾಯ ತಂದೆ ಮಹಾದೇವಪ್ಪ 4) ಶರಣಬಸಪ್ಪ ತಂದೆ ಮಹಾದೇವಪ್ಪ 5) ನಾಗರಾಜ ತಂದೆ ಮಹಾದೇವಪ್ಪ 6) ಲಕ್ಷ್ಮಣ ತಂದೆ ಮಹಾದೇವಪ್ಪ 7) ರಮೇಶ ತಂದೆ ಮಹಾದೇವಪ್ಪ 8] ಮಹಾದೇವಪ್ಪ ತಂದೆ ಸಾಯಬಣ್ಣ 9] ಸಿದ್ದಣ್ಣ ತಂದೆ ಸಾಯಬಣ್ಣ 10] ಹಣಮಂತ್ರಾಯ ತಂದೆ ಸಿದ್ದಣ್ಣ 11] ಸಾಯಬಣ್ಣ ತಂದೆ ಸಿದ್ದಣ್ಣ 12] ಹಳ್ಳೆಪ್ಪ ತಂದೆ ಸಿದ್ದಣ್ಣ 13] ಸಕ್ರೆಪ್ಪ ತಂದೆ ಈಶ್ವರಪ್ಪ ಸಾ|| ಎಲ್ಲರೂ ತೆಗ್ಗೆಳ್ಳಿ ಹಾಗು ಎರಡನೇಯ ಪಾಟರ್ಿಯ ಜನರಾದ 1] ಸಹಾದೇವಪ್ಪ ತಂದೆ ಸಾಯಬಣ್ಣ ಹಣಮಂತ ದೇವರ ಪೂಜಾರಿ ಸಾ|| ತೆಗ್ಗೆಳ್ಳಿ ಈ ಎರಡು ಪಾಟರ್ಿ ಜನರ ಮದ್ಯ ಭಾರೀ ವೈಮನಸ್ಸು ಬೆಳೆದು ಯಾವ ಸಂದರ್ಭದಲ್ಲಿಯಾದರು ಗಲಾಟೆ ಮಾಡಿಕೊಂಡು ಸಾರ್ವಜನಿಕ ಶಾಂತತಾ ಬಂಗ ಉಂಟುಮಾಡುವ ಸಾದ್ಯತೆ ಇರುತ್ತದೆ ಹಾಗು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗುವದಲ್ಲದೇ ಜೀವ ಹಾನಿಯಾಗುವ ಸಂಭವ ಕಂಡು ಬಂದಿದ್ದರಿಂದ ಮರಳಿ ಠಾಣೆಗೆ 5 ಪಿ.ಎಮ್ ಕ್ಕೆ ಬಂದು ಸದರ ಎರಡು ಪಾಟರ್ಿ ಜನರ ವಿರುದ್ದ ಮುಂಜಾಗ್ರಾತ ಕ್ರಮವಾಗಿ ಠಾಣಾ ಪಿಎಆರ್ ನಂಬರ 22/2020 ಕಲಂ 107 ಸಿಆರ್ಪಿಸಿ ನೇದ್ದರಲ್ಲಿ ಕ್ರಮ ಜರಗಿಸಿದ್ದು ಕಾರಣ ಸದರ ಎರಡು ಪಾಟರ್ಿ ಜನರನ್ನು ಕರೆಯಿಸಿ ಗ್ರಾಮದಲ್ಲಿ ಒಳ್ಳೆಯ ನಡತೆಯಿಂದ ಇರುವಂತೆ ಕಲಂ 111 ಸಿಆರ್ಪಿಸಿ ಅಡಿಯಲ್ಲಿ ಇಂಟೇರಿಯಂ ಬಾಂಡ ಬರೆಯಿಸಿಕೊಳ್ಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 85/2020 78 (3) ಕೆ.ಪಿ ಯಾಕ್ಟ : ದಿನಾಂಕ:10/09/2020 ರಂದು 18.40 ಪಿ.ಎಮ್ ಕ್ಕೆ, ಶ್ರೀ. ಬಾಪುಗೌಡ ಪಾಟೀಲ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮನಟಗಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಮಟಕಾ ಬರೆದುಕೊಳ್ಳುವನ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:85/2020 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 20.45 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1845/- ರೂ.ಗಳು ಒಂದು ಮಟಕಾ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತನ ಹೆಸರು  ದೇವಣ್ಣ ತಂದೆ ಅಮರಪ್ಪ ಸಾಲೋಡಗಿ ವಯ-26 ಜಾ:ಕುರುಬರ ಉ:ಮಟಕಾ ಬರೆದುಕೊಳ್ಳುವದು

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!