ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/09/2020

By blogger on ಗುರುವಾರ, ಸೆಪ್ಟೆಂಬರ್ 10, 2020

                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/09/2020                                                                                                                       

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 121/2020 ಕಲಂ 447,427, 341, 504, 506 ಸಂ 34 ಐಪಿಸಿ : ಇಂದು ದಿನಾಂಕ 09-09-2020 ರಂದು 4 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರಿ ಸಂಜೀವಪ್ಪಾ ತಂದೆ ನಿಂಗಪ್ಪಾ ಭೀಮನಳ್ಳಿ ವಯಾ:55 ಜಾ: ಕಬ್ಬಲಿಗೇರ ಉ:ಒಕ್ಕಲುತನ  ಸಾ:ಯರಗೋಳ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಗೆ ನಾವು 4 ಜನರ ಸಹೋದರರಿದ್ದು ಎಲ್ಲರೂ ಬೇರೆ ಬೇರೆಯಾಗಿ ವಾಸವಾಗಿರುತ್ತೆವೆ. ನಮ್ಮೂರ ಗ್ರಾಮದ ಸೀಮೆಯಲ್ಲಿ ನನ್ನ ತಾಯಿಯ ಹೆಸರಿನಲ್ಲಿ ನಮ್ಮ ಸ್ವಂತ ಪತ್ರಾಜರ್ಿತ ಹೋಲವಿದ್ದು ಅದರ ಸವರ್ೇ ನಂಬರ 186/ಆ ಮತ್ತು 186/ಅ ಅಂತಾ ಇರುತ್ತದೆ. ಈ ಹೋಲದಲ್ಲಿ ತಾಯಿಯ ಉಪಜೀವನಕ್ಕೆ ಒಂದಿಷ್ಟು ಇಟ್ಟು ಇನ್ನೂಳಿದ ನಾವು 4 ಜನ ಸಹೋದರರು ಸಮನಾಗಿ ಹಂಚಿಕೊಂಡು ನಮ್ಮ ನಮ್ಮ ಹೋಲದಲ್ಲಿ ನಾವು ಸಾಗುವಳಿ ಮಾಡುತ್ತಿದ್ದೆವೆ. ನನ್ನ ಪಾಲಿಗೆ ಬಂದ ಹೋಲ ಸವರ್ೇ ನಂ: 186/ಆ ಇದರ ವಿಸ್ತೀರ್ಣ 1 ಎಕರೆ 25 ಗುಂಟೆ ಮತ್ತು ಸವೇ ಣಂ: 186/ಅ 20 ಗುಂಟೆ ಹೋಲಗಳಲ್ಲಿ ಈ ವರ್ಷ ಹೆಸರು ಬಿತ್ತಿದ್ದು ಹೆಸರು ರಾಶಿ ಮಾಡುವ ಹಂತಕ್ಕೆ ಬಂದಿತ್ತು. ಹೋಲ ಮಾತ್ರ ನಮ್ಮ ತಾಯಿಯವರ ಹೆಸರಿನಲ್ಲಿದೆ. ಈಗ  ಕೆಲವು ದಿವಸಗಳ ಹಿಂದೆ ನಮ್ಮ ತಾಯಿಯ ವರಿಗೆ ಆರೋಗ್ಯ ಸರಿ ಇರದ ಕಾರಣ ಅವಳಿಗೆ ದವಾಖಾನೆಗೆ ತೋರಿಸಿದಾಗ  ದವಾಖಾನೆಯ ಖಚು 3,60,000/- ಆಗಿದ್ದು ತಾಯಿಯ ಆಸ್ಪತ್ರೆಯ ಹಣ ಎಲ್ಲಾ 4 ಜನ ಸಹೋದರರು ಸಮನಾಗಿ ಕೊಡಬೇಕು ಅಂತಾ ನಮ್ಮೂರ ಹಿರಿಯರು ಹೇಳಿದ್ದರಿಂದ ನನ್ನ ಪಾಲಿಗೆ ಬಂದ ಹಣ ನಾನು ಕೊಡುತ್ತೆನೆಂದು ಒಪ್ಪಿಕೊಂಡಿದ್ದೆನು. ಈ ಹಣದ ಸಲುವಾಗಿ ನಮ್ಮ ತಮ್ಮಂದಿರರಾದ ಮಲ್ಲಿಕಾಜರ್ೂನ ತಂದೆ ನಿಂಗಪ್ಪಾ  ಮತ್ತು  ಮೋನಪ್ಪಾ ತಂದೆ ನಿಂಗಪ್ಪಾ ಇವರಿಬ್ಬರೂ ಕೂಡಿ ನಮ್ಮ ತಾಯಿಯವರ ದವಾಖಾನೆಯ ಹಣದ ವಿಷಯದಲ್ಲಿ ಜಗಳಾ ಮಾಡುತ್ತಾ ಬಂದಿದ್ದು ಅವರಿಗೆ ನಾನು ನನ್ನ ಸಂಸಾರದಲ್ಲಿ ಸ್ವಲ್ಪ ಅಡಚಣೆ ಇದೆ ಸ್ವಲ್ಪ ದಿನದಲ್ಲಿ ಕೊಡುತ್ತೆನೆ ಅಂತಾ ಅಂದರೂ ಕೂಡಾ ಅವರು ನನ್ನ ಮಾತಿಗೆ ಬೆಲೆ ಕೊಡದೇ ಜಗಳ ಮಾಡುತ್ತಾ ಬಂದಿರುತ್ತಾರೆ. ಈ ಹಿಂದೆ ನನ್ನ ಸಹೋದರರು ಸುಮ್ಮನೆ ಜಗಳಾ ಮಾಡಿ ಕೈಗೆ ಬಡಿಗೆಯಿಂದ ಹೊಡೆದು ಕೈ ಮುರಿದಿದ್ದು ಹಿರಿಯರ ಮಾತು ಕೇಳಿ ಕೇಸು ವಗೈರೆ ಮಾಡಿಲ್ಲಾ. ಈ ಹಿಂದೆ ನಮ್ಮ ತಂದೆಯವರು ರಸ್ತೆ ಅಪಘಾತದಲ್ಲಿ ಮೃತಪಟ್ಟಾಗಲೂ ಕೂಡಾ ಸಕಾರದಿಂದ ಹಣ ಬಂದಿದ್ದು ಅವರು ಆ ಹಣ ನನಗೆ ಕೊಡದೇ ತಾವೇ ಹಂಚಿಕೊಂಡಿದ್ದು ಕೇಳಿದರೇ ಆ ವೇಳೆಯಲ್ಲಿ ನನ್ನ ಜೋತೆಯಲ್ಲಿ ಜಗಳಾ ಮಾಡಿಕೊಂಡಿದ್ದರು. ಈಗ ಮತ್ತೆ ಅವರು ನಮಗೆ ಹಣ ಕೊಡದೇ ಹೋಲದಲ್ಲಿ ಸಾಗುವಳಿ ಮಾಡಿದರೇ ಮೊದಲು ಬಡಿಗೆಯಿಂದ ಹೊಡೆದು ಕೈ ಮುರಿದಿದ್ದೆವೆ ಈ ಸಲ ಕೊಡಲಿಯಿಂದ ಕಡಿದು ಹಾಕುತ್ತೆವೆ ಅಂಜಿಸುತ್ತಾ ಬಂದಿದ್ದು ಇರುತ್ತದೆ.  ಹೀಗಿದ್ದು ದಿನಾಂಕ 02-09-2020 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿಯಾದ ಲಕ್ಷ್ಮೀಬಾಯಿ ಇಬ್ಬರೂ ನಮ್ಮ ಹೋಲದಲ್ಲಿ ಹೆಸರು ಬಿಡಿಬೇಕೆಂದು ನಮ್ಮ ಹೋಲಕ್ಕೆ ಹೋಗಿ ಹೋಲದಲ್ಲಿ ಕೆಲಸ ಮಾಡುತ್ತಿದ್ದೆವು. ಅದೇ ವೇಳೆಗೆ ನನ್ನ ಸಹೋದರರಾದ 1) ಮಲ್ಲಿಕಾಜರ್ೂನ ತಂದೆ ನಿಂಗಪ್ಪಾ  ಮತ್ತು  2) ಮೋನಪ್ಪಾ ತಂದೆ ನಿಂಗಪ್ಪಾ ಹಾಗೂ ನನ್ನ ಸಹೋದರಿಯರಾದ 3) ಅನಸಮ್ಮಾ ಗಂಡ ಅಪ್ಪಣ್ಣಾ ಸಾ:ಮಳಗ ತಾ: ಚಿತಾಪೂರ ಹಾಗೂ 4) ಶಾಂತಮ್ಮಾ ಗಂಡ ಮರೆಪ್ಪಾ ಜೋಗೆ ಈ 4 ಜನರು ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಂದವರೇ ನಮಗೆ ಎಲೇ ಸೂಳೇ ಮಕ್ಕಳೇ ನೀವು ನಮಗೆ ಕೊಡಬೇಕಾದ ತಾಯಿಯ ದವಾಖಾನೆಯ ಹಣ ಇನ್ನೂ ಕೊಟ್ಟಿಲ್ಲಾ ಇನ್ನೂ ಯಾವಾಗ ಕೊಡೋದು ಭೋಸಡಿ ಮಕ್ಕಳೇ ನೀವು ಹಣ ಕೊಡದೇ ನಿಮ್ಮ ಹೋಲ ಸಾಗುವಳಿ ಮಡುವಂತಿಲ್ಲಾ ಅಂತಾ ನಮಗೆ ಬೈಯ್ಯುತ್ತಾ ನಿಂತರು. ಆಗ ನಾವು ನಮಗೆ ಸಂಸಾರದ ಅಡಚಣೆ ಇದ್ದ ಕಾರಣ ಕೊಡುವುದು ಆಗಿಲ್ಲಾ ಇನ್ನೂ ಸ್ವಲ್ಪ ದಿನದಲ್ಲಿ ಕೊಡುತ್ತೆನೆ ಅಂತಾ ಅಂತಾ ಹೇಳಿದರೂ ಕೂಡಾ ಅವರು ನಮ್ಮ ಮೈಮೇಲೆ ಬಂದು ಮಕ್ಕಳೇ ನೀವು ಮಾತ್ರ ನಿಮ್ಮ ಸಾಗುವಳಿ ಮಾಡಿಕೊಳ್ಳುತ್ತಿದ್ದಿರಿ ನಮಗೆ ಬೇಕಂತಲೇ ಹಣ ಕೊಡದೇ ಮುಂದಕ್ಕೆ ಹಾಕುತ್ತಾ ಹೊರಟಿದ್ದಿರಿ ಅಂತಾ ಅಂದವರೇ ಇವತ್ತು  ನಿಮಗೆ ಇಲ್ಲಿಯೇ ಖಲಾಸ ಮಾಡಿಬಿಡುತ್ತೆವೆ ಅಂತಾ ಚೀರಾಡಿ ನಮಗೆ ತಡೆದು ಸುತ್ತುಗಟ್ಟಿ ಅಡತಡೆ ಮಾಡುತ್ತಿದ್ದಾಗ ನಾನು ನನ್ನ ಹೆಂಡತಿ ಅಂಜಿ ಅಲ್ಲಿಂದ ಅಂತಾ ಊರ ಕಡೆಗೆ ಬಂದೇನು. ನಾವು ನಮ್ಮ ಹೋಲದಿಂದ ಊರ ಕಡೆಗೆ ಬಂದ ನಂತರ ಈ ಮೇಲ್ಕಂಡ 4 ಜನರು ಹೋಲದಲ್ಲಿದ್ದ ಹೆಸರು ಬಿಡಿಸಿ ಹೋಲದಲ್ಲಿಯ ಹೆಸರು ಬೆಳೆ ನಾಶ ಮಾಡುತ್ತಿದ್ದಾರೆ ಅಂತಾ ಗೊತ್ತಾಗಿ ನಾವು ನಾವು ನಮ್ಮೂರಿನ ಹಿರಿಯರಾದ ದುರ್ಗಪ್ಪಾ ತಂದೆ ನಿಂಗಪ್ಪಾ ಜೋಗಿ, ಬಸವರಾಜ ತಂದೆ ಮಹಾದೇವಪ್ಪಾ ಮಾನೇಗಾರ ಹಾಗೂ ಬಸವರಾಜ ತಂದೆ ದೊಡ್ಡಬಸಣ್ಣಾ ಮಾನೇಗಾರ ಇವರಿಗೆ ತಿಳಿಸಿ ಅವರೆಲ್ಲರನ್ನು ಕರೆದುಕೊಂಡು ನಮ್ಮ ಹೋಲಕ್ಕೆ ಹೋಗುವಷ್ಟರಲ್ಲಿ 4 ಜನರು ಸೇರಿಕೊಂಡು ನಮ್ಮ ಹೋಲದಲ್ಲಿದ್ದ ಹೆಸರು ಬಿಡಿಸಿ ಬೇಳೆಯನ್ನು ಟ್ರ್ಯಾಕ್ಟರ ಸಹಾಯದಿಂದ  ನಾಶಮಾಡುತ್ತಿದ್ದರು, ನಾವು ಅಲ್ಲಿಗೆ ಹೋದಾಗ ಅವರೆಲ್ಲರೂ ಅಲ್ಲಿಂದ ಹೊರಟು ಹೋದರು. ಈ ರೀತಿಯಾಗಿ ಈ ಮೇಲ್ಕಂಡ  4 ಜನರು ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನಮಗೆ ತಡೆದು ಸುತ್ತುಗಟ್ಟಿ ನಮಗೆ ಜೀವದ ಭಯ ಹಾಕೀ ನಮ್ಮ ಹೋಲದಲ್ಲಿದ್ದ ಸುಮಾರು 40 ರಿಂದ 50 ಸಾವಿರ ದಷ್ಟು ಹೆಸರು ಬೇಳೆಯನ್ನು ಹಾಳು ಮಾಡಿದ್ದು ಇವರ  ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ಫಿರ್ಯಾಧಿ ಸಾರಾಂಶಧ ಮೇಲಿಂದ ಠಾಣೆ ಗುನ್ನೆ ನಂ: 121/2020 ಕಲಂ 447, 427, 341, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು


ಶಹಪೂರ ಪೊಲೀಸ ಠಾಣೆ ಗುನ್ನೆ ನಂ:- 235/2020.ಕಲಂಃ 78(3) ಕೆ.ಪಿ.ಆ್ಯಕ್ಟ : ಇಂದು ದಿನಾಂಕ 09/09/2020 ರಂದು 01-00 ಗಂಟೆಗೆ ಸ|| ತ|| ಪಿಯರ್ಾದಿ ಚೆನ್ನಯ್ಯ ಹೀರೆಮಠ ಪಿ.ಐ. ಸಾಹೇಬರು ಠಾಣೆಗೆ ಬಂದು ಒಂದು ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ 08/09/2020 ರಂದು ಠಾಣೆಯಲ್ಲಿದ್ದಾಗ, ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಮುಂದೆ ಮೂರಜನ ವೆಕ್ತಿಗಳು ಸಾರ್ವಜನಿಕ ಖುಲ್ಲಾ ಜಾಗದಲ್ಲಿ, ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ ರಾತ್ರಿ 21-20 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್,ಸಿ,164, ಗೋಕುಲ್ ಹುಸೇನ್ ಪಿ.ಸಿ.172. ಬಾಗಣ್ಣ ಪಿ.ಸಿ.194. ಜೀಪಚಾಲಕ ನಾಗರೆಡ್ಡಿ ಎ.ಪಿ.ಸಿ.161. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಬಾಗಣ್ಣ ಪಿ.ಸಿ194, ರವರಿಗೆ 21-30 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶರಣು ತಂದೆ ಶಿವಪ್ಪ ಅಂಗಡಿ ವಯ 29 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿ ಸಗರ ಶಹಾಪೂರ  2] ಶ್ರೀ ಅಮಲಪ್ಪ ತಂದೆ ಭೀಮಪ್ಪ  ಐಕೂರ ವಯ 50 ವರ್ಷ ಜಾತಿ ಪ.ಜಾತಿ ಉಃ  ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರನ್ನು 21-40 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.ಡಿ.ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ. ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಠಾಣೆಯ ಜೀಪ ನಂಬರ ಕೆಎ-33ಜಿ-0138 ನೇದ್ದರಲ್ಲಿ, ದಾಳಿ ಕುರಿತು ಠಾಣೆಯಿಂದ 21-50 ಗಂಟೆಗೆ ಹೊರಟೇವು. ನೇರವಾಗಿ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಸ್ವಲ್ಪ ದೂರದಲ್ಲಿ 22-20 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಎಲ್ಲರು ಇಳಿದು ಅಲ್ಲಿಂದ  ನಡೆದುಕೊಂಡು ಹನುಮಾನ ಗುಡಿಯ ಹತ್ತಿರ 22-30 ಗಂಟೆಗೆ ಹೋಗಿ ಮನೆಗಳ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ ಹನುಮಾನ ಗುಡಿಯ ಮುಂದೆ ಇರುವ ಸಾರ್ವಜನಿಕ ಕುಲ್ಲಾ ಜಾಗೆಯಲ್ಲಿ 3 ಜನ ವ್ಯಕ್ತಿಗಳು ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳುತ್ತ ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದರು. ಮೂರು ಜನರಲ್ಲಿ ಒಬ್ಬನು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿನು, ಇನ್ನು ಇಬ್ಬರು ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಗೆ ಕೂಗಿ ಕರೆಯುತಿದ್ದರು. ಆಗ ನಾವೆಲ್ಲರೂ ಸದರಿಯವರು ಕೂಗಿಕರೆಯ್ಯ ಮಟಕಾ ಅಂಕಿಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಡು 22-40 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ. ದಾಳಿಯಲ್ಲಿ ಸಾರ್ವಜನಿಕರಿಂದ ಹಣ ಪಡೆದು ಕೊಳ್ಳುತ್ತ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದವನು ಸಿಕ್ಕಿಬಿದ್ದಿದ್ದು ಹಾಗೂ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಕರೆಯುತ್ತಿದ್ದ ಇಬ್ಬರು ವ್ಯೆಕ್ತಗಿಗಳು ಓಡಿಹೋಗಿದ್ದು ಹಿಂಬಾಲಿಸಿದರು ಸಿಕ್ಕಿರುವದಿಲ್ಲಾ, ಸಾರ್ವಜನಿಕರಿಂದ ಹಣ ಪಡೆದು ಕೊಳ್ಳೂತ್ತ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿನು, ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸಾಬಯ್ಯ ತಂದೆ ತಾನಪ್ಪ ಕವ್ಹಾಲ್ದಾರ ವ|| 22 ಜಾ|| ಬೇಡರ ಉ|| ಮಟಕಾ ಬರೆದುಕೊಳ್ಳೂವದು ಸಾ|| ಇಬ್ರಾಹಿಂಪೂರ ಅಂತ ಹೇಳಿದನು. ಸದರಿಯವನ ಹತ್ತಿರ 1) ನಗದು ಹಣ 1020/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ:00-00 ರೂ ಮತ್ತು ಸಾಬಯ್ಯ ಈತನಗೆ ಓಡಿ ಹೋದ ವ್ಯಕ್ತಿಗಳ ಹೆಸರು ವಿಳಾಸ ವಿಚಾರಿಸಲು  ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಕೂಗುತ್ತಿದ್ದ ವ್ಯಕ್ತಿಗಳಲ್ಲಿ ಒಬ್ಬನ ಹೆಸರು ಹುಸನಯ್ಯ ತಂದೆ ನಿಂಗಯ್ಯ ಕಲಾಲ್ ವ|| 30 ಜಾ|| ಈಡಿಗ ಉ|| ಮಟಕಾಬರೆದುಕೊಳ್ಳುವದು ಸಾ|| ಇಬ್ರಾಹಿಂಪೂರ ಮತ್ತು ಇನ್ನೋಬ್ಬನ ಹೆಸರು ಸುಬಾಷ ಸಾ|| ಹೆಡಗಿಮದ್ರಿ ಅಂತ ಹೇಳಿದನು ದಾಳಿಯಲ್ಲಿ ಸಿಕ್ಕಿದ ನಗದು ಹಣ 1020/- ರೂಪಾಯಿ ಮತ್ತು ಒಂದು ಬಾಲ್ ಪೆನ್ ಮತ್ತು 2 ಮಟಕಾ ಅಂಕಿ ಸಂಖ್ಯೆಗಳು ಬರೆದ ಚೀಟಿಗಳನ್ನು ಪಂಚರ ಸಮಕ್ಷಮದಲ್ಲಿ  ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 22-45 ರಿಂದ 23-45 ರವರೆಗೆ ಹನುಮಾನ ಗುಡಿಯ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ದಿನಾಂಕ 09/09/2020 ರಂದು 00-30 ಗಂಟೆಗೆ ಬಂದು ವರದಿಯನ್ನು ತಯ್ಯಾರಿಸಿ ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿತನ್ನು ಹಾಜರು ಪಡಿಸಿ 01-00 ಗಂಟೆಗೆ ವರದಿಯನ್ನು ತಯ್ಯಾರಿಸಿ ಮುಂದಿನ ಕ್ರಮಕೈಕೊಳ್ಳುವಂತೆ  ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 235/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 08/2020 ಕಲಂ 174  ಸಿ.ಆರ್.ಪಿಸಿ : ಮೃತ ರಾಮು ಈತನು ಬಹಳ ಸಿಟ್ಟಿನ ಸ್ವಭಾವದವನಿದ್ದು ಇಂದು ದಿನಾಂಕ:09/09/2020 ರಂದು ಮುಂಜಾನೆ ಮೃತ ರಾಮು ಮತ್ತು ಮನೆಯವರು ಹೊಲಕ್ಕೆ ಹೋಗಿ ಮದ್ಯಾಹ್ನ ಗಂಡ ಹೆಂಡತಿ ಮರಳಿ ಮನೆಗೆ ಬಂದಿದ್ದು ಇರುತ್ತದೆ. ಮೃತ ರಾಮು ಈತನು ತನ್ನ ಹೆಂಡತಿ ಅಶ್ಮಿತಾ ಇವಳಿಗೆ ಮತ್ತೆ ಹೊಲಕ್ಕೆ ಹೋಗೋಣ ನಡಿ ಅಂತಾ ಕರೆದಾಗ ಅವನ ಹೆಂಡತಿ ಇನ್ನ ಈಗರ ಹೊಲದಿಂದ ಬಂದೀವಿ ಮತ್ತ ಹೊಲಕ್ಕೆ ಹೋಗೋಣ ಅಂದ್ರೆ ಹೆಂಗೆ ನಾನು ಬರುವದಿಲ್ಲ ಅಂದಿದ್ದಕ್ಕೆ ಮೃತನು ತನ್ನ ಹೆಂಡತಿಗೆ ಎರಡು ಹೇಟು ಹೊಡೆದು ಅವಳಿಗೆ ಒಂದು ಕೋಣೆಯಲ್ಲಿ ಹಾಕಿ ಹೊರಗಿನಿಂದ ಚಿಲಕ ಹಾಕಿ ಮದ್ಯಾಹ್ನ 12 ಗಂಟೆ ಸುಮಾರಿಗೆ ಇನ್ನೊಂದು ಕೋಣೆಯಲ್ಲಿ ತಾನು ವಿಷ ಸೇವನೆ ಮಾಡಿದಾಗ ಅವನ ಹೆಂಡತಿ ಚೀರಾಡುವುದನ್ನು ಕೇಳಿ ಅಕ್ಕಪಕ್ಕದ ಮನೆಯವರು ಬಂದು ಮೃತನಿಗೆ ವೈದ್ಯಕೀಯ ಉಪಚಾರ ಕುರಿತು ಜಿಜಿಹೆಚ್ ಶಹಾಪುರಕ್ಕೆ ತಂದು ಸೇರಿಕೆ ಮಾಡಿದ್ದು 12.30 ಪಿ.ಎಮ್. ಸುಮಾರಿಗೆ ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಸದರಿಯವನ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ವಗೈರೆ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:08/2020 ಕಲಂ 174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 75/2020 504.505(2) ಐಪಿಸಿ : ದಿನಾಂಕ:09/08/2020 ರಂದು ಸಾಯಾಂಕಾಲ 6.30 ಗಂಟೆಗೆ ಅಜರ್ಿದಾರನಾದ ಶ್ರೀರಸೂಲ್ಸಾಬ ತಂದೆ ಉಮಾರಸಾಬ ಬೆಣ್ಣೂರ ಟಿಪ್ಪು ಸುಲ್ತಾನ ಸಂಯುಕ್ತ ಅಧ್ಯಕ್ಷರು ಹುಣಸಗಿ ತಾಲ್ಲೂಕ ಸಾ:ಹುಣಸಗಿ  ತಾ;ಹುಣಸಗಿ ಇತನು ಠಾಣೆಗೆ  ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದ ಸಾರಾಂಶವೆನೆಂದರೆ ದಿನಾಂಕ:07/08/2020 ರಂದು ಸಾಯಂಕಾಲ 07.15 ಗಂಟೆಗೆ ಆರೋಪಿತನು ತನ್ನ ಮೊಬೈಲ್ದಲ್ಲಿ ಟಿಪ್ಪು ಸುಲ್ತಾನ್ ಇತನ ಹತ್ತಿರ ಇರುವ ಹುಲಿಯನ್ನು ತೆಗೆದು ಹಂದಿಯನ್ನು ನಿಲ್ಲಿಸಿ ಏಕವಚನದಲ್ಲಿ ಟಿಪ್ಪುಸುಲ್ತಾನ ಬಗ್ಗೆ  ಇತನು ಹಂದಿ ಹಿಡಿಯಲು ಲಾಯಕ್ ಅಂತಾ ಅವಹೇಳನ ಮಾಡಿ, ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ಅವಹೇಳನ ಮಾಡಿದ ಬಗ್ಗೆ ಅಪರಾಧ


ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 76/2020 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ.09/09/2020 ರಂದು 8-15 ಪಿಎಂಕ್ಕೆ ಶ್ರೀ ಶರಣಗೌಡ ನ್ಯಾಮಣ್ಣೊರ ಸಿ.ಪಿ.ಐ ಯಾದಗಿರಿ ವೃತ್ತ ರವರು ಮಟಕಾ ಜೂಜಾಟ ದಾಳಿ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಟಕಾ ಜೂಜಾಟ ದಾಳಿ ಮಾಡಿ ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಠಾಣೆ ತಂದು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.09/09/2020 ರಂದು 4-30 ಪಿಎಂ ಸುಮಾರಿಗೆ ಯಾದಗಿರಿ ನಗರದ ಲಾಡೇಜಗಲ್ಲಿ ಏರಿಯಾದ ಶಿವಶಂಕ್ರಪ್ಪಗೌಡ ಮುನಗಲ್ ರವರ ಮನೆ ಹತ್ತಿರ ಸಿಸಿ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ವ್ಯಕ್ತಿಗಳು ಸಾವ್ಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದ ಮೇರೆಗೆ ಅವರ ಮೇಲೆ ದಾಳಿ ಮಾಡಿ ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಇಬ್ಬರೂ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಸೈದಪ್ಪ ಹೆಚ್.ಸಿ.34, ಗಣಪತಿ ಎಹಚ್.ಸಿ.31, ಗಜೇಂದ್ರ ಹೆಚ್.ಸಿ.123, ನೀಲಕಂಠಯ್ಯ ಸ್ವಾಮಿ ಪಿಸಿ-182, ಅಮರೇಶ ಎ.ಎಚ್.ಸಿ 47, ರವರೊಂದಿಗೆ ಹೊರಟು ಲಾಡೇಸಗಲ್ಲಿ ಏರಿಯಾದ ಶಿಶಂಕ್ರಪ್ಪಗೌಡ  ಮುನಗಲ್ ರವರ ಮನೆ ಹತ್ತಿರ ಸಿಸಿ ರಸ್ತೆಯ ಮೇಲೆ ಮಟಕಾ ಜೂಜಾಟ ಆಡುತ್ತಿದ್ದವರ ಮೆಲೆ 5-45 ಪಿಎಮಕ್ಕೆ ಪಂಚರ ಸಮಕ್ಷಮ ದಾಳಿ ಮಾಡಿ ಮಟಕಾ ಜೂಜಾಟ ಆಡುತ್ತಿದ್ದ 1) ವಿರೇಶಸ್ವಾಮಿ ತಂ. ಸಿದ್ದಯ್ಯ ಹೀರೇಮಠ ವಃ26 ಜಾಃ ಲಿಂಗಾಯತ ಉಃ ಕಿರಾಣಿ ವ್ಯಾಪಾರ ಸಾಃ ಲಾಡೇಸಗಲ್ಲಿ ಯಾದಗಿರಿ. 2) ಬಸ್ಸಯ್ಯ ಸ್ವಾಮಿ ತಂದೆ ಸಿದ್ದಯ್ಯಾ ಸ್ವಾಮಿ ಹಿರೇಮಠ ವಃ24 ಜಾಃ ಲಿಂಗಾಯತ ಉಃ ಕಿರಾಣಿ ವ್ಯಾಪಾರ ಸಾಃ ಲಾಡೇಸಗಲ್ಲಿ ಯಾದಗಿರಿ. ಮತ್ತು ಮಟಕಾ ಜೂಜಾಟ ಆಡುತ್ತಿದ್ದ 3) ಮಹೇಶ ತಂ. ಕಾಶಿರಾಮ ಕೊರೆಕರ ವಃ 22 ಜಾಃ ಮರಾಠ ಉಃ ಕೂಲಿಕೆಲಸ ಸಾಃ ಗಯಾಬಸಾಬ ದಗರ್ಾ ಹತ್ತಿರ ಸ್ಟೇಷನ್ ರೋಡ ಯಾದಗಿರಿ 4) ಸಾಬಯ್ಯಾ ತಂದೆ ಶರಣಪ್ಪ ಅಣೀಕೇರಿ ವಃ26 ಜಾಃ ಬೇಡರು ಉಃ ಕೂಲಿ ಸಾಃ ಎಂ.ಹೊಸಳ್ಳಿ ತಾಃಜಿಃಯಾದಗಿರಿ ಇವರನ್ನು ವಶಕ್ಕೆ ಪಡಿಸಿಕೊಂಡು ಅವರಿಂದ ದೊರೆತ 1) ನಗದು ಹಣ 35250/-ರೂ. 2)ಮಟಕಾ ಅಂಕಿಗಳನ್ನು ಬರೆದುಕೊಂಡ ಒಂದು ಚೀಟಿ ಅಂ.ಕಿ.00-00 3) ಒಂದು ಬಾಲ ಪೆನ್ ಅಂ.ಕಿ.00-00 ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು ನಂತರ ಜಪ್ತಿ ಪಂಚನಾಮೆಯನ್ನು 5-45 ಪಿಎಂದಿಂದ 6-30 ಪಿಎಂದವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಇರುತ್ತದೆ ಅಂತಾ ಕೊಟ್ಟ ಜ್ಞಾಪನಾ ಪತ್ರ ಕೊಟ್ಟಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.76/2020 ಕಲಂ.78(3) ಕೆ.ಪಿ.ಆಕ್ಯಕ್ಟ ಅಡಿಯಲ್ಲಿ ಕ್ರಮಕೈಕೊಂಡಿದ್ದು ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 100/2020 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 09/09/2020 ರಂದು 09.50 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 09/09/2020 ರಂದು ಗಂಗನಾಳ ಗ್ರಾಮದ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಈರಪ್ಪ ತಂದೆ ಬಸವಂತಪ್ಪ ದಂಡಂಬಳಿ ವಯಾ:50 ಜಾ: ಕಬ್ಬಲಿಗ ಉ: ಕೂಲಿ ಸಾ: ಗೋಗಿ ತಾ: ಶಹಾಪೂರ ಜಿ: ಯಾದಗೀರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 08.35 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 3700/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 100/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!