ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/09/2020

By blogger on ಮಂಗಳವಾರ, ಸೆಪ್ಟೆಂಬರ್ 8, 2020

 


                        ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/09/2020                                                                                                                       

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.26/2020 ಕಲಂ: 174 ಸಿ.ಆರ್.ಪಿ.ಸಿ : ನಿನ್ನೆ ದಿನಾಂಕ 07.09.2020 ರಂದು ಮಧ್ಯಾಹ್ನ 2:00 ಗಂಟೆಯ ಮೃತನು ಜಲ್ಲಪ್ಪ ತಂದೆ ಆಶಪ್ಪ ಜಲ್ಲಪೋಳ್ ಇತನು ಮನೆಯಲ್ಲಿ ಊಟ ಮಾಡಿ ತನ್ನ ಹೊಲದಲ್ಲಿಯ ಎಸರು ಬೆಳ್ಳಿಯನ್ನು ಕಿತ್ತಿ ಹಾಕಿ ಬರುತ್ತೇನೆ ಅಂತಾ ತನ್ನ ಹೆಂಡತಿಯಾದ ಫೀರ್ಯಾದಿದಾರಳೀಗೆ ಹೇಳಿ ಹೋಗಿದ್ದು ಸಂಜೆ 7:30 ಗಂಟೆಗೆ ಮನೆಗೆ ಬಂದು ಊಟ ಮಾಡಿದ ನಂತರ ರಾತ್ರಿ 10:00 ಗಂಟೆಯ ಸುಮಾರಿಗೆ ತನಗೆ ತಲೆ ಸುತ್ತುತ್ತಿದೆ ಅಂತಾ ತಿಳಿಸಿ ಸಂಜೆ 5:30 ಗಂಟೆಯ ಸುಮಾರಿಗೆ ಹೊಲದಲ್ಲಿ ಎಸರು ಬೆಳ್ಳಿ ಕಿತ್ತಿ ಹಾಕುತ್ತಿದ್ದಾಗ ಕಸದಲ್ಲದ್ದ ಹಾವು ತನ್ನ ಎಡಗಾಲ ಬಲ ಪಾದದ ಬಲಗಡೆಯಲ್ಲಿ ಕಚ್ಚಿತು ಕೂಡಲೇ ನಾನು ಅಲ್ಲೇ ಇದ್ದ ಗುಂಡಕಲ್ಲಿನಿಂದ ಆ ಹಾವನ್ನು ಸಾಯಿಸಿದೆ ಅಂತಾ ತಿಳಿಸಿರುತ್ತಾನೆ. ಕೂಡಲೇ ಫಿರ್ಯಾದಿದಾರಳು ತನ್ನ ಗಂಡನ್ನು ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ರಾಯಚೂರನ ರೀಮ್ಸ್ ಆಸ್ಪತ್ರೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ರಾತ್ರಿ 10:30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದರಿಂದ ಮರಳಿ ತನ್ನ ಗಂಡನ ಮೃತ ದೇಹವನ್ನು ಮನೆಗೆ ತಂದು ಹಾಕಿದ್ದು ಮಳೆ ಬರುತ್ತಿರುವುದರಿಂದ ತನಗೆ ಏನು ಮಾಡಬೇಕು ಅಂತಾ ಗೊತ್ತಾಗದೇ ಹಾಗೆ ಇದ್ದೆ. ಆ ಮೇಲೆ ಇಂದು ದಿನಾಂಕ 08.09.2020 ರಂದು ಬೆಳಿಗ್ಗೆ 5:30 ಗಂಟೆಯ ಸುಮಾರಿಗೆ ತನ್ನ ಗಂಡನ ಸಾವಿನ ವಿಚಾರ ಊರಲ್ಲಿ ಗೊತ್ತಾಗಿ ಊರಿನ ಜನರೊಂದಿಗೆ ಸೇರಿ ತನ್ನ ಗಂಡನ ಮೃತ ದೇಹವನ್ನು ಗುರುಮಠಕಲ್ ಸರಕಾರಿ ದವಾಖಾನೆಯ ಶವಗಾರ ಕೊಣೆಗೆ ತಂದು ಹಾಕಿರುತ್ತೆನೆ ಮುಂದಿನ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 26/2020 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 27/2020 ಕಲಂ. 174 ಸಿ.ಆರ್.ಪಿಸಿ  : ಇಂದು ದಿನಾಂಕ 08-09-2020 ರಂದು ಮಧ್ಯಾಹ್ನ 4-30 ಗಂಟೆಗೆ  ಫಿಯರ್ಾದಿ ಖುದ್ದಾಗಿ ಠಾಣೆಗೆ ಬಂದು ಹಾಜರಾಗಿ ಹೇಳಿಕೆ ನೀಡಿದ ಸಾರಾಂಶವೇನೆಂದರೆ,  ಇಂದು ದಿನಾಂಕ 08-09-2020 ರಂದು ಬೆಳಿಗ್ಗೆ ಫಿಯರ್ಾದಿಯ ಗಂಡ ಮೃತ ಅಮರೇಶ ತಂದೆ ಕಾಸಿರಾಮ ಮತ್ತು ಆತನ ತಮ್ಮ ಜಗದೀಶ ಇಬ್ಬರೂ ಕೂಡಿ ಹುಲ್ಲು ತರಲು ತಮ್ಮ ಸ್ವಂತ ಜಮೀನಾದ ಲಕ್ಷ್ಮೀಪಟ್ಟಿ ಎಂಬ ಜಮೀನಿಗೆ ಹೋದಾಗ ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಜಮೀನುದಲ್ಲಿ ಹುಲ್ಲು ಕೊಯ್ಯುವಾಗ ಯಾವುದೋ ವಿಷದ ಹಾವು ಅಮರೇಶನ ಬಲಗಾಲ ಹಿಮ್ಮಡಿಯ ಮೆಲೆ ಕಚ್ಚಿ ಗಾಯಗೊಳಿಸಿರುತ್ತದೆ.ಸದರಿ ವಿಷಯವನ್ನು ಮೃತನು ತನ್ನ ತಮ್ಮನಿಗೆ ತಿಳಿಸಿದ್ದು, ಮೃತನನ್ನು ಹೊತ್ತುಕೊಂಡು ಆತನ ತಮ್ಮ ಚಿಂತಕುಂಟಾ ಗ್ರಾಮಕ್ಕೆ ತರುತ್ತಿದ್ದಾಗ, ಬಾಯಿಯಿಂದ ನೊರೆಬಂದು ಮಾರ್ಗ ಮಧ್ಯದಲ್ಲಿ ಸತ್ತಿದ್ದು ಇರುತ್ತದೆ. ಸದರಿಯವನ ಸಾವಿನಲ್ಲಿ ಯಾರ ಮೇಲು ಸಂಶಯ, ವಗೈರೆ ಇರುವದಿಲ್ಲ ಮುಮದಿನ ಕ್ರಮ ಜರುಗಿಸಬೇಕು ಅಂತ ಸಾರಾಂಶ ಇರುತ್ತದೆ. 


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 119/2020 ಕಲಂ 279, 338 ಐಪಿಸಿ : ದಿನಾಂಕ 07/09/2020 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾಧಿಯ ತಮ್ಮ ಕಾಂತಪ್ಪ ಮತ್ತು ಅವನ ಮಗಳು ಇಬ್ಬರೂ ರಾಮಸಮುದ್ರ ಗ್ರಾಮದಲ್ಲಿ ಗ್ರಾಮ ಪಂಚಾಯತ ಎದುರುಗಡೆ ಗುರುಮಿಠಕಲ್-ಯಾದಗಿರಿ ರೋಡಿನ ಮೇಲೆ ರೋಡ ದಾಟುತ್ತಿರುವಾಗ ಗುರುಮಿಠಕಲ್ ಕಡೆಯಿಂದ ಕಾರ ನಂ ಎ.ಪಿ-22-ಪಿ-2288 ನೆದ್ದರ ಚಾಲಕ ರಾಜಶೇಖರ ಇತನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಸಂಗೀತಾ ಇವಳಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಭಾರಿ ರಕ್ತಗಾಯಗಳು ಮತ್ತು ತರಚಿದಗಾಯಗಳು ಆಗಿರುತ್ತವೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:-120/2019 ಕಲಂ 143 ಐಪಿಸಿ ಸಂ 87 ಕೆ.ಪಿ ಆಕ್ಟ್ : ಇಂದು ದಿನಾಂಕ 08/09/2020 ರಂದು ರಾತ್ರಿ 9-45 ಪಿ.ಎಂ ಕ್ಕೆ  ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಲೈಟಿನ ಬೆಳಕಿನಲ್ಲಿ ಇಸ್ಪಿಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಲ್ಹಾರ ಗ್ರಾಮದಲ್ಲಿ ಮಹಿಬೂಬಸಾಬ ದಗರ್ಾದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಹೋಗಿ ಪಂಚರು ಹಾಗೂ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ ಆರೋಪಿತರಿಗೆ ಹಿಡಿದು 16,580/ರೂ ನಗದು ಹಣ, 9 ಮೊಬೈಲಗಳು ಮತ್ತು 52 ಇಸ್ಪಿಟ್ ಎಲೆಗಳು ಆರೋಪಿತರಿಂದ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಜಪ್ತಿ ಪಂಚನಾಮೆಯ ಸಾರಂಶದ ಮೇಲಿಂದ ಈ ಮೇಲಿನಂತೆ ಗುನ್ನೆ ದಾಖಲಾಗಿದ್ದು ಇರುತ್ತದೆ,


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 21/2020 ಕಲಂ. 174 ಸಿಆರ್ಪಿಸಿ : ಇಂದು ದಿನಾಂಕ:08/09/2020 ರಂದು 8 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ ಶ್ರೀ ಕೃಷ್ಣ ತಂದೆ ಮರೆಪ್ಪ ಕಟ್ಟಿಮನಿ ವ:36 ಜಾ:ಎಸ್.ಸಿ ಉ:ಪೌರಕಾಮರ್ಿಕ ಸಾ:ಝಂಡದಕೇರಿ ಸುರಪೂರ ತಾ:ಸುರಪೂರ ಇವರ ಠಾಣೆಗೆ ಹಾಜರಾಗಿ ಪಿಯರ್ಾದಿ ನೀಡಿದ್ದೆನೆಂದರೆ ನಾನು ಸುಮಾರು 10 ವರ್ಷಗಳಿಂದ ಸುರಪೂರ ಪಟ್ಟಣದ ನಗರಸಭೆಯಲ್ಲಿ ಪೌರಕಾಮರ್ಿಕರಾಗಿ ಕೆಲಸ ಮಾಡುತ್ತಿದ್ದು ಇಂದು ದಿನಾಂಕ:08/09/2020 ರಂದು ಮುಂಜಾನೆ 5 ಗಂಟೆಗೆ ಎಂದಿನಂತೆ ಸುರಪೂರ ಪಟ್ಟಣದಲ್ಲಿ ಕೆಲಸಕ್ಕೆ ಹೋಗಿ ಕೆಲಸ ಮಾಡಿ ನಂತರ ಮುಂಜಾನೆ 7:30 ಎ.ಎಮ್ ಸುಮಾರಿಗೆ ನನಗೆ ತಲೆ ನೋವು ಕಂಡಿದ್ದರಿಂದ ನಾನು ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ಉಪಚಾರ ಕುರಿತು ಹೋಗಿದ್ದು ಅಲ್ಲಿ ಯಾರೋ ಒಬ್ಬ ವಯಸ್ಸಾದ ವೃದ್ಧೆ ಹೃದಯಾಘಾತದಿಂದ ನಿನ್ನೆ ದಿನಾಂಕ:07/09/2020  ರಾತ್ರಿ 9 ಪಿ.ಎಮ್ ಕ್ಕೆ ಮೃತಪಟ್ಟಿರುತ್ತಾಳೆ ಅಂತ ತಿಳಿದು ಬಂದಿದ್ದು ನಾನು ಅಲ್ಲಿಗೆ ಹೋಗಿ ನೋಡಿ ಯಾರೋ ಒಬ್ಬ ಮಹಿಳೆ ಅನಾರೋಗದಿಂದ ಮೃತಪಟ್ಟಿದ್ದು ಅವಳ ಹತ್ತಿರ ಹೋಗಿ ನೋಡಲಾಗಿ ಯಾವುದೇ ಚಿಟಿ ಮತ್ತು ಪೋನ ಇದ್ದಿರುವದಿಲ್ಲ ಅವರ ಸಂಬಂಧಿಕರ ಹೆಸರು ಕೂಡಾ ಇದ್ದಿರುವದಿಲ್ಲ ಮತ್ತು ಅವಳು ದಿನಾಂಕ: 17-08-2020 ರಂದು ಸುರಪೂರ ಬಸ್ ನಿಲ್ದಾಣದ ಹತ್ತಿರ ಅನಾರೋಗ್ಯದಿಂದ ಬಳಲುತ್ತಿದ್ದನ್ನು ನೋಡಿ ಯಾರೋ 108 ಕ್ಕೆ ಕರೆ ಮಾಡಿದ್ದು ಆಗ 108 ಅಂಬ್ಯುಲೇನ್ಸ ವಾಹನ ಬಂದು ಅವಳನ್ನು ಕರೆದುಕೊಂಡು ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಆಗ ಅವಳ ಹೆಸರು ಭೀಮಬಾಯಿ ತಂದೆ ಕುಂಟ ಮುದಕಪ್ಪ ಸಾ:ಉಳ್ಳೇಸೂಗೂರ ತಾ:ವಡಗೇರಾ ಅಂತ ತಿಳಿಸಿದ್ದು ಇರುತ್ತದೆ. ಅಂತ ತಿಳಿದು ಬಂತು ಮತ್ತು ನಾನು ಅವರ ಊರಿನವರದು ಯಾವುದೆ ಪೋನ ನಂಬರ ಹುಡಿಕಿದರು ಸಿಕ್ಕಿರುವದಿಲ್ಲ. ಆದ ಕಾರಣ ನಾನು ಇಂದು ಮುಂಜಾನೆ 8 ಎ.ಎಮ್ ಕ್ಕೆಠಾಣೆಗೆ ಬಂದು ವೃದ್ಧೆ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿರುತ್ತಾಳೆ. ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಪಿಯರ್ಾದಿ ನೀಡಿರುತ್ತೆನೆ. ಅಂತ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.21/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 10/2020 174 ಸಿ.ಆರ್.ಪಿ.ಸಿ :ದಿನಾಂಕ:07/09/2020 ರಂದು ಬೆಳಗ್ಗೆ 09.45 ಗಂಟೆಗೆ ಪಿಯರ್ಾದಿಗೆ ಮೃತನು ತನ್ನ ಮೋಟಾರ ಸೈಕಲ್ ಮೇಲೆ ಹುಣಸಗಿಗೆ ಬಿಟ್ಟು ವಾಪಸ್ಸು ಹೋಗುವಾಗ ಇಸ್ಲಾಂಪೂರ ಹತ್ತಿರ ಇರುವ ಯುಕೆಪಿ ಯ ಮೇನ್ ಕೆನಾಲದ ಡಿ-9 ಕಾಲುವೆ ಹತ್ತಿರ ಮೃತನು ತನ್ನ ಮೋಟಾರ ಸೈಕಲ್ ನಿಲ್ಲಿಸಿ ನೀರು ಕುಡಿಯಲು ಕೆನಾಲದಲ್ಲಿ ಇಳಿದಾಗ ಕಾಲುಜಾರಿ ಕೆನಾಲದಲ್ಲಿ ಬಿದ್ದು, ಈಜು ಬರದ್ದರಿಂದ ನೀರಿನಲ್ಲಿ ಕೊಚಿಕೊಂಡು ಹೋಗಿ ಇಂದು ದಿನಾಂಕ:08/09/2020 ರಂದು ಬೆಳಗಿನ ಜಾವ ಸದಬ- ಅಗ್ನಿ ನಡುವೆ ಮೃತ ಶವವು ಸಿಕ್ಕಿದ್ದು, ಸದರಿ ಶವವನ್ನು ಇಸ್ಲಾಂಪೂರ ಗ್ರಾಮದ ಹತ್ತಿರ ಇರುವ ಯುಕೆಪಿ ಮೆನ್ ಕೆನಾಲದ ಹತ್ತಿರ ತಂದು ಇಟ್ಟಿದ್ದು ಸದರಿ ಮೃತನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಇರುತ್ತದೆ ಅಂತಾ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದಾ ಠಾಣೆ ಯುಡಿಆರ್ ನಂ:10/2020 ಕಲಂ. 174 ಸಿಆರ್ಪಿಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 84/2020 78 (3) ಕೆ.ಪಿ ಯಾಕ್ಟ : ದಿನಾಂಕ:08/09/2020 ರಂದು 16.00 ಪಿ.ಎಮ್ ಕ್ಕೆ, ಶ್ರೀ. ಬಾಪುಗೌಡ ಪಾಟೀಲ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಮಟಕಾ ಬರೆದುಕೊಳ್ಳುವನ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:84/2020 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.ನಂತರ ಮಾನ್ಯ ಪಿಎಸ್ಐ ಸಾಹೇಬರು 18.30 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 8140/- ರೂ.ಗಳು ಒಂದು ಮಟಕಾ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತರ ಹೆಸರು  ನಿಂಗಣ್ಣ ತಂದೆ ದೇವಪ್ಪ ತಮದೊಡ್ಡಿ ವಯ-28 ಜಾ:ಕುರುರಬರ ಉ:ಮಟಕಾ ಬರೆದು ಕೊಳ್ಳುವದು  ಸಾ:ಯಡಹಳ್ಳಿ 2) ಬಸವರಾಜ ತಂದೆ ಗುರಣ್ಣ @ ಗುರಡ್ಡಿ ಸುರಪುರ ವಯ-23 ಜಾ:ಲಿಂಗಾಯತ ಉ:ಮಟಕಾ ಬರೆಯುವದು ಸಾ:ವಜ್ಜಲ ತಾ:ಹುಣಸಗಿ ಜಿ:ಯಾದಗಿರ ಇರುತ್ತಾರೆ.


 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!