ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/09/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 118/2020 ಕಲಂ 78 (3) ಕೆ.ಪಿ ಎಕ್ಟ : ಇಂದು ದಿನಾಂಕ 02-09-2020 ರಂದು 12-40 ಪಿಎಮ್ ಕ್ಕೆ ಶ್ರೀ ವೀರಣ್ಣಾ ಎಸ್ ಮಗಿ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪತ್ರದೊಂದಿಗೆ ಜ್ಞಾಪನ ಪತ್ರ ನೀಡಿದ್ದು, ಅದರ ಸಾರಾಂಶವೆನೆಂದರೆ ಇಂದು ದಿನಾಂಕ. 07-09-2020 ರಂದು 10 ಎ.ಎಮ್ ಕ್ಕೆ ಠಾಣೆಯಲ್ಲಿರುವಾಗ ಯಾದಗಿರಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯ ಬಾಚವಾರ ಗ್ರಾಮದಲ್ಲಿ ಯಾರೋ ಕೆಲವರು ಹಣವನ್ನು ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ ಜ್ಞಾಪನ ಪತ್ರದ ಸಾರಾಂಶವಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 118/2020 ಕಲಂ 78 (3) ಕೆ.ಪಿ ಎಕ್ಟ ಅಡಿಯಲ್ಲಿ ಗುನ್ನ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
1) ಒಬ್ಬ ಆರೋಪಿ
2) ನಗದು ಹಣ-2250-00 ರೂ
3) ಒಂದು ಬಾಲಪೆನ್ನು
4) ಒಂದು ಮಟಕಾ ಅಂಕಿ ಸಂಖ್ಯೆಗಳು ಬರೆದ ಚೀಟಿ
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 14/2020 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 07/09/2020 ರಂದು 7-30 ಎಎಮ್ ಕ್ಕೆ ಶ್ರೀ ಎಮ್. ಡಿ ಇಮ್ರಾನ ತಂದೆ ಲೇಟ್ ಫಕೀರ ಅಹ್ಮದಸಾಬ ಗುರುಮಿಠಕಲವಾಲೆ, ವ:42, ಜಾ:ಮುಸ್ಲಿಂ, ಉ:ಕಿರಾಣಾ ವ್ಯಾಪಾರ ಸಾ:ಅಜೀಜ್ ಕಾಲೋನಿ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನನಗೆ 3 ಜನ ಗಂಡು ಮತ್ತು ಒಬ್ಬ ಹೆಣ್ಣು ಮಗಳಿರುತ್ತಾಳೆ. ನನ್ನ ಎರಡನೆ ಮಗನಾದ ಎಮ್.ಡಿ ಇಫರ್ಾನವುಲ್ ಹುಸೇನ ಈತನು ಪ್ರಸ್ತುತ ಸಾಲಿನಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈಗ ಲಾಕಡೌನನಲ್ಲಿ ಶಾಲೆ ರಜೆ ಇರುವುದರಿಂದ ಮನೆಯಲ್ಲಿ ಇರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ: 06/09/2020 ರಂದು ಸಂಜೆ 4-30 ಗಂಟೆ ಸುಮಾರಿಗೆ ನನ್ನ ಮಗನಾದ ಎಮ್.ಡಿ ಇಫರ್ಾನವುಲ್ ಹುಸೇನ ಈತನು ತನ್ನ ಸ್ನೇಹಿತರಾದ 1) ಎಮ್.ಡಿ ಅಬ್ದುಲ್ ರೆಹಮಾನ, 2) ರೇಹಾನ, 3) ಅಯಾನೋದ್ದಿನ ಮತ್ತು 4) ಮೊಹ್ಮದ ಅಮಾನ ಇವರುಗಳೊಂದಿಗೆ ಗುರುಸಣಗಿ ಬ್ರಿಜ್ಡ್ ಕಂ ಬ್ಯಾರೇಜ್ಗೆ ಹೋಗಿ ನೋಡಿಕೊಂಡು ಬರುತ್ತೇವೆ ಎಂದು ನಮಗೆ ಹೇಳಿ ಹೋದನು. ನನ್ನ ಮಗ ಹೊದ ಸ್ವಲ್ಪ ಹೊತ್ತಿನ ನಂತರ ಅಂದರೆ 5-30 ಪಿಎಮ್ ಸುಮಾರಿಗೆ ನನ್ನ ಮಗನೊಂದಿಗೆ ಹೋಗಿದ್ದ ಅವನ ಸ್ನೇಹಿತನಾದ ಎಮ್.ಡಿ ಅಬ್ದುಲ್ ರೆಹಮಾನ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ನಿಮ್ಮ ಮಗ 2) ಎಮ್.ಡಿ ಇಫರ್ಾನವುಲ್ ಹುಸೇನ ಹಾಗೂ ನಮ್ಮ ಗೆಳೆಯರಾದ 3) ರೇಹಾನ, 4) ಅಯಾನೋದ್ದಿನ ಮತ್ತು 5) ಮೊಹ್ಮದ ಅಮಾನ ಈ 5 ಜನ ಸೇರಿ ಗುರುಸಣಗಿ ಭೀಮಾ ಬ್ರಿಡ್ಜ್ ಕಂ ಬ್ಯಾರೇಜಗೆ ಹೋಗಿ ಬ್ಯಾರೇಜ ನೋಡಿ, ಸದರಿ ಬ್ಯಾರೇಜ್ ಕೆಳಗಡೆ ನದಿ ದಂಡೆಗೆ ಹೋಗಿ ನದಿ ನೀರು ನೋಡೊಣ ಎಂದು ಮಾತಾಡಿ ಬ್ರಿಡ್ಜ್ ಕೆಳಗಡೆ ಹೋಗಿದ್ದು, ನಾನು ಮೊಬೈಲಿಗೆ ಇಯರ್ ಫೋನ ಹಾಕಿ ಹಾಡು ಕೇಳುತ್ತಿದ್ದಾಗ 2) ಎಮ್.ಡಿ ಇಫರ್ಾನವುಲ್ ಹುಸೇನ, 3) ರೇಹಾನ, 4) ಅಯಾನೋದ್ದಿನ ಮತ್ತು 5) ಮೊಹ್ಮದ ಅಮಾನ ಈ ನಾಲ್ಕು ಜನ ಒಬ್ಬರಿಗೊಬ್ಬರು ಕೈಗಳನ್ನು ಹಿಡಿದುಕೊಂಡು ನದಿಯ ಮೊಳಕಾಲು ವರೆಗಿನ ನೀರಿನಲ್ಲಿ ಹೊದರು, ಹಾಗೆಯೇ ಮುಂದೆ ಮುಂದೆ ನಡೆಯುತ್ತಾ ನದಿಯಲ್ಲಿ ಹೋದವರು ಒಮ್ಮಿಂದೊಮ್ಮಲೇ ನೀರಿನ ಆಳದಲ್ಲಿ ಬಿದ್ದು, ಒಬ್ಬರಿಗೊಬ್ಬರು ಹಿಡಿದುಕೊಂಡು ಮುಳುಗಿಬಿಟ್ಟಿರುತ್ತಾರೆ. ನೀವು ಬೇಗನೆ ಬನ್ನಿ ಎಂದು ಹೇಳಿದಾಗ ನಾನು ಮತ್ತು ನಮ್ಮ ಸಂಬಂಧಿಕರು ಹಾಗೂ ನನ್ನ ಮಗನ ಇತರ ಗೆಳೆಯರ ತಂದೆ-ತಾಯಿಯವರು ಕೂಡಿ ಸ್ಥಳಕ್ಕೆ ಬಂದು ನೋಡಿದೆವು. ಅಲ್ಲಿಯೇ ಇದ್ದ ಎಮ್.ಡಿ ಅಬ್ದುಲ್ ರೆಹಮಾನ ಈತನಿಗೆ ವಿಚಾರಿಸಲಾಗಿ ಅವನು ನಾವು 5 ಜನ ಗುರುಸಣಗಿ ಬ್ರಿಜ್ಡ್ ಕಂ ಬ್ಯಾರೇಜ್ ನೋಡಿ ನಂತರ ಕೆಳಗಡೆ ಭೀಮಾ ನದಿ ನೀರು ನೋಡೊಣ ಎಂದು ಹೇಳಿ ಕೆಳಗಡೆ ನದಿ ದಂಡೆಗೆ ಹೋದೆವು. ನಾನು ಇಫರ್ಾನವುಲ್ ಹುಸೇನ ಈತನ ಮೊಬೈಲಿಗೆ ಇಯರ್ ಫೋನ ಹಾಕಿ ಹಾಡು ಕೇಳುತ್ತಿದ್ದೆನು. ಆಗ 2) ಎಮ್.ಡಿ ಇಫರ್ಾನವುಲ್ ಹುಸೇನ, 3) ರೇಹಾನ, 4) ಅಯಾನೋದ್ದಿನ ಮತ್ತು 5) ಮೊಹ್ಮದ ಅಮಾನ ಈ ನಾಲ್ಕು ಜನ ಒಬ್ಬರಿಗೊಬ್ಬರು ತಮ್ಮ ಕೈಗಳನ್ನು ಹಿಡಿದುಕೊಂಡು ನದಿಯ ಮೊಳಕಾಲು ವರೆಗಿನ ನೀರಿನಲ್ಲಿ ಹೊದರು, ಹಾಗೆಯೇ ಮುಂದೆ ಮುಂದೆ ನದಿಯಲ್ಲಿ ನಡೆಯುತ್ತಾ ಹೋದವರು ಒಮ್ಮಿಂದೊಮ್ಮಲೇ ನೀರಿನ ಆಳದಲ್ಲಿ ಬಿದ್ದು, ಒಬ್ಬರಿಗೊಬ್ಬರು ಹಿಡಿದುಕೊಂಡು ಮುಳುಗಿಬಿಟ್ಟಿರುತ್ತಾರೆ ಎಂದು ಹೇಳಿದನು. ಆಗ ಪೊಲೀಸ್, ಅಗ್ನಿಶಾಮಕ ಇಲಾಖೆ, ಮುಳುಗು ತಜ್ಞರು ಮತ್ತು ಎನ್.ಡಿ.ಆರ್.ಎಫ್ ತಂಡದಿಂದ ರಾತ್ರಿಯಿಂದ ಇಂದು ದಿನಾಂಕ: 07/09/2020 ರ ಬೆಳಗಿನ ಜಾವದ ವರೆಗೆ ನಿರಂತರ ಶವಗಳ ಶೋಧನೆ ಮಾಡಿದಾಗ ಬೆಳಗ್ಗೆ 6-15 ಗಂಟೆ ಸುಮಾರಿಗೆ ಮೊದಲು ನನ್ನ ಮಗ ಎಮ್.ಡಿ ಇಫರ್ಾನವುಲ್ ಹುಸೇನ ಇತನ ಶವವು ಬಿದ್ದ ಸ್ಥಳದಿಂದ ಸುಮಾರು 100 ಮೀಟರ ಅಂತರದಲ್ಲಿ ದೊರೆಯಿತು. ಇದಾದ ಕೆಲ ಹೊತ್ತಿನ ನಂತರ ಇನ್ನುಳಿದ 2) ರೇಹಾನ, 3) ಅಯಾನೋದ್ದಿನ ಮತ್ತು 4) ಮೊಹ್ಮದ ಅಮಾನ ಈ ನಾಲ್ಕು ಜನರ ಶವವಗಳು ಅಲ್ಲಲ್ಲಿ ನದಿಯಲ್ಲಿ ದೊರೆತಿರುತ್ತವೆ. ಕಾರಣ ಭೀಮಾ ನದಿಯ ಬ್ರಿಜ್ಡ್ ಕಂ ಬ್ಯಾರೇಜ್ ಕೆಳಗಡೆ ನದಿ ದಂಡೆಯಲ್ಲಿ ನಾಲ್ಕು ಜನ ಕೈ ಕೈ ಹಿಡಿದುಕೊಂಡು ನದಿಯಲ್ಲಿ ಹೋಗಿ ನೀರಿನ ಆಳದ ಹೊಂಡದಲ್ಲಿ ಬಿದ್ದು, ಒಬ್ಬರಿಗೊಬ್ಬರು ಹಿಡಿದುಕೊಂಡು ಈಜಲು ಬರದೆ ನದಿಯಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಸದರಿ ಘಟನೆ ಆಕಸ್ಮಿಕ ಸಂಭವಿಸಿದ್ದು, ಯಾರ ಮೇಲೆ ಯಾವುದೇ ಸಂಶಯ ಫಿರ್ಯಾಧಿ ಇರುವುದಿಲ್ಲ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 14/2020 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 197/2020 ಕಲಂ: 279,338 ಐ.ಪಿಸಿ : ಇಂದು ದಿನಾಂಕಃ 07/09/2020 ರಂದು 5-30 ಪಿ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಲಕ್ಷ್ಮಣ ತಂದೆ ಭೀಕ್ಕೋಜಿ ಪೋಲಿಸಪಾಟೀಲ್ ಸಾ: ಚಂದಲಾಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ನಾನು ನಮ್ಮ ಮೋ.ಸೈಕಲ್ ನಂಬರ ಕೆ.ಎ 34 ಜೆ 5281 ನೇದ್ದರ ಮೇಲೆ ಮಂಡಗಳ್ಳಿ ಸಿಮಾಂತರದಲ್ಲಿರುವ ನಮ್ಮ ಹೊಲದಿಂದ ಭತ್ತದ ಬೆಳೆಯಲ್ಲಿ ಸಿಂಪರಣೆ ಮಾಡಲು ಕ್ರಿಮಿನಾಶಕ ಔಷಧ ಖರೀದಿಸಿಕೊಂಡು ಬರುವ ಸಲುವಾಗಿ ಮಂಡಗಳ್ಳಿ ಕ್ರಾಸ್ ಮಾರ್ಗವಾಗಿ ಶಹಾಪೂರ-ಸುರಪೂರ ಮುಖ್ಯರಸ್ತೆಯ ಮೇಲೆ ಸುರಪೂರ ಕಡೆಗೆ ಹೊರಟಿದ್ದಾಗ ಮದ್ಯಾಹ್ನ 2-00 ಪಿ.ಎಮ್ ಸುಮಾರಿಗೆ ಬಿಜಾಸಪೂರ-ಮಂಡಗಳ್ಳಿ ಮದ್ಯೆ ಸುರಪೂರ ಕಡೆಯಿಂದ ಒಬ್ಬ ಟವೇರಾ ಕಾರ ಚಾಲಕನು ತನ್ನ ಕಾರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ನನ್ನ ಮೋ.ಸೈಕಲಿಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಾನು ಮೋ.ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದೇನು. ಆಗ ನನ್ನ ಹಿಂದುಗಡೆ ಮೋ.ಸೈಕಲ್ ಮೇಲೆ ಹೊರಟಿದ್ದ ಗೌಡಪ್ಪ ಸಾ: ಮಂಡಗಳ್ಳಿ ಹಾಗು ಶಾರದಳ್ಳಿ ಗ್ರಾಮದ ವೆಂಕಟೇಶ ನಾಯಕ ಮತ್ತು ನನಗೆ ಅಪಘಾತ ಪಡಿಸಿದ ಟವೇರಾ ಕಾರ ಚಾಲಕ ಹಾಗು ಅದರಲ್ಲಿದ್ದ ಸತೀಶ ಪಾಟೀಲ್ ಎಲ್ಲರೂ ಬಂದು ನನಗೆ ಎಬ್ಬಿಸಿ ರಸ್ತೆಯ ಪಕ್ಕ ಮಲಗಿಸಿರುತ್ತಾರೆ. ಸದರಿ ಅಪಘಾತದಲ್ಲಿ ನನ್ನ ಹಣೆಗೆ, ಮೂಗಿಗೆ ಭಾರಿ ರಕ್ತಗಾಯಗಳಾಗಿದ್ದು, ಬಲಗಡೆ ಬೆನ್ನಿಗೆ ತರಚಿದ ಗಾಯಗಳಾಗಿ ಟೊಂಕದಲ್ಲಿ ಭಾರಿ ಒಳಪೆಟ್ಟಾಗಿರುತ್ತದೆ. ಹಾಗು ಬಲಗೈ ಹಸ್ತದ ಮಣಿಕಟ್ಟಿಗೆ ಮತ್ತು ಬಲಗಾಲಿನ ಪಾದದ ಮಣಿಕಟ್ಟಿಗೆ ತರಚಿದ ರಕ್ತಾಯಗಳಾಗಿರುತ್ತವೆ. ಅಪಘಾತ ಪಡಿಸಿದ ಕಾರ ಸ್ಥಳದಲ್ಲೆ ನಿಂತಿದ್ದು ಅದರ ನಂಬರ ಕೆ.ಎ 28 ಎನ್ 9907 ಇದ್ದು, ಕಾರ ಚಾಲಕನ ಹೆಸರು ಮೌಲಾಲಿ ತಂದೆ ಅಹ್ಮದಶಾ ಮುಲ್ಲಾ ಸಾ: ವಿಜಯಪೂರ ಅಂತ ತಿಳಿಸಿರುತ್ತಾನೆ. ಬಳಿಕ ನನ್ನ ಅಣ್ಣನು ಸ್ಥಳಕ್ಕೆ ಬಂದು ನನಗೆ ಒಂದು ಅಟೋರಿಕ್ಷಾದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತ ವಗೈರೆ ಹೇಳಿಕೆ ಪಡೆದುಕೊಂಡು 7-00 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 197/2020 ಕಲಂ. 279, 338 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.