ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/09/2020

By blogger on ಮಂಗಳವಾರ, ಸೆಪ್ಟೆಂಬರ್ 8, 2020

 


                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/09/2020                                                                                                                       
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 117/2020 ಕಲಂ. 87 ಕೆ.ಪಿ ಎಕ್ಟ್ 1963 : ಇಂದು ದಿನಾಂಕ 05/09/2020 ರಂದು ಮಧ್ಯಾಹ್ನ 2-30 ಕ್ಕೆ ಶ್ರೀ ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ರವರು ಠಾಣೆಗೆ ಬಂದು ಜ್ಞಾಪನ ಪತ್ರ ನೀಡಿದ ಸಾರಾಂಶವೆನೆಂದರೆ ನಾನು ಇಂದು ದಿನಾಂಕ. 05/09/2020 ರಂದು ಮಧ್ಯಾಹ್ನ 12-15 ಪಿಎಮ್ ಕ್ಕೆ ನಾನು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮುಂಡರಗಿ  ಗ್ರಾಮದಲ್ಲಿ ತುಮ್ಮುನ ಕುಂಟಿ ಕೆರೆ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಂಡು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಪರವಾನಿಗೆ ಕೊಡಲು ಮಾನ್ಯರವರಲ್ಲಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ. ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಸದರಿ ಜ್ಞಾಪನ ಪತ್ರದಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 117/2020 ಕಲಂ 87 ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 234/2020  ಕಲಂ 279, 337, 338 ಐ.ಪಿ.ಸಿ : ಇಂದು ದಿನಾಂಕ 05/09/2020 ರಂದು ಮದ್ಯಾಹ್ನ 13-50 ಗಂಟೆಗೆ ಫಿಯರ್ಾದಿ ಶ್ರೀ ಬಸವರಾಜ ತಂದೆ ಮಲ್ಲಣ್ಣ ಅಣಬಿ ವಯ 40 ವರ್ಷ ಜಾತಿ ಲಿಂಗಾಯತ ಉಃ ಅಶೋಕ ಲೈಲ್ಯಾಂಡ್ ಲಾರಿ ಡ್ರೈವರ ಕೆಲಸ ಸಾಃ ಬೇವಿನಹಳ್ಳಿ ತಾಃ ಶಹಾಪೂರ ಜಿಃ ಯಾದಗಿರಿ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 04/09/2020 ರಂದು ಫಿಯರ್ಾದಿಯು ತನ್ನ ಗೆಳೆಯ ಹಣಮಂತನೊಂದಿಗೆ ತಮ್ಮ ಕೆಲಸದ ನಿಮಿತ್ಯ  ಮೋಟರ ಸೈಕಲ್ ಮೇಲೆ ಶಹಾಪೂರಕ್ಕೆ ಬಂದಿದ್ದರು, ಅದರಂತೆ ಫಿಯರ್ಾದಿಯ ಮಗ ಸಂಗಮೇಶನು ಜೋಳ ಬಿಸಿಕೊಂಡು ಹೋಗಲು ತನ್ನ ಗೆಳೆಯ ಮಹಾಂತೇಶನೊಂದಿಗೆ ಮೋಟರ ಸೈಕಲ್ ನಂ ಕೆಎ-33-ಕೆ-8821 ನೇದ್ದರ ಮೇಲೆ ಶಹಾಪೂರಕ್ಕೆ ಬಂದು, ಜೋಳ ಬಿಸಿಕೊಂಡು ಮರಳಿ ಊರಿಗೆ ಹೋಗುತಿದ್ದರು, ಅವರ ಹಿಂದಿನಿಂದ ಫಿಯರ್ಾದಿ ಮತ್ತು ಆತನ ಗೆಳೆಯ ಹಣಮಂತ  ಇವರು ತಮ್ಮ ಮೋಟರ ಸೈಕಲ್ ಮೇಲೆ ಅವರನ್ನು ಹಿಂಬಾಲಿಸಿಕೊಂಡು ಹೋಗುತಿದ್ದರು.  ಶಹಾಪೂರ-ಯಾದಗಿರಿ ಮುಖ್ಯೆ ರಸ್ತೆಯ ಮೇಲೆ ಶಹಾಪೂರ ನಗರದ ಮಗನಲಾಲ್ ಜೈನ್ ಶಾಲೆ ಇನ್ನೂ ಅಂದಾಜು 50 ರಿಂದ 60 ಮೀಟರ ಮುಂದೆ ಇರುವಾಗ ಸಾಯಂಕಾಲ 7-00 ಗಂಟೆಗೆ ಹೋಗುತಿದ್ದಾಗ ಎದರುಗಡೆಯಿಂದ ಅಂದರೆ ದೋರನಳ್ಳಿ ಕಡೆಯಿಂದ ಆರೋಪಿತನು ತನ್ನ ಆಟೋ ನಂ ಕೆಎ-33-ಎ-3422 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಫಿಯರ್ಾದಿಯ ಮಗ ಸಂಗಮೇಶನು ಚಲಾಯಿಸಿಕೊಂಡು ಹೋಗುತಿದ್ದ ಮೋಟರ ಸೈಕಲ್ ನಂ ಕೆಎ-33-ಕೆ-8821 ನೇದ್ದಕ್ಕೆ ಡಿಕ್ಕಿ ಮಾಡಿದರಿಂದ ಮೋಟರ ಸೈಕಲ್ ಸವಾರ ಸಂಗಮೇಶ ಮತ್ತು ಹಿಂಬದಿಯ ಸವಾರ ಮಹಾಂತೇಶ ಇಬ್ಬರಿಗೂ ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿದ್ದು ಮತ್ತು ಆಟೋ ಚಾಲಕ ಶಂಕರ ತಂದೆ ಸೋಮಸಿಂಗ್ ರಾಠೋಡನಿಗೆ ಸಾಧಾ ಪ್ರಮಾಣದ ಗಾಯಗಳಾಗಿದ್ದು, ಸದರಿ ಅಪಘಾತಕ್ಕೆ ಆಟೋ ಚಾಲಕನ ಅತಿವೇಗ ಮತ್ತು ಅಲಕ್ಷತನದಿಂದ ಅಪಘಾತ ಜರುಗಿದ್ದು ಸದರಿ ಚಾಲಕನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 234/2020 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 136/2020 ಕಲಂ: 279,337, 338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ : ಇಂದು ದಿ: 05/09/2020 ರಂದು ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಯಿಂದ ಎಮ್ಎಲ್ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಹೇಶಕುಮಾರ ಪಂಚಾಳ ಇವರ ಹೇಳಿಕೆ ಪಡೆದುಕೊಂಡು ನಂತರ ಮರಳಿ ಠಾಣೆಗೆ 8.15 ಪಿಎಮ್ಕ್ಕೆ ಬಂದಿದ್ದು ಇರುತ್ತದೆ. ಪಿರ್ಯಾದಿ ಹೇಳಿಕೆ ಸಾರಾಂಶವೇನೆಂದರೆ, ದಿನಾಂಕ: 04/09/2020 ರಂದು ತಾಳಿಕೋಟಿಯಲ್ಲಿ ಕೆಲಸವಿದ್ದ ನಿಮಿತ್ಯ ಪಿರ್ಯಾದಿದಾರರು ಹಾಗೂ ಆನಂದ ತಂದೆ ಅಂಬಣ್ಣ ಸಾತಪ್ಪಗೌಡ ಇಬ್ಬರು ಕೂಡಿಕೊಂಡು ತಮ್ಮ ಗೆಳೆಯನ ನಂಬರ ಇಲ್ಲದ ಹಿರೋ ಕಂಪನಿಯ ಹೆಚ್ಎಫ್ ಡಿಲಕ್ಸ್ ಮೋಟರ ಸೈಕಲ್ ತೆಗೆದುಕೊಂಡು ತಾಳಿಕೋಟಿಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗುವ ಕುರಿತು ಸಾಯಂಕಾಲ 5.00 ಗಂಟೆ ಸುಮಾರಿಗೆ ಶಹಾಪುರ-ಸಿಂದಗಿ ಮುಖ್ಯ ರಸ್ತೆಯ ಏವೂರ ದೊಡ್ಡ ತಾಂಡಾದ ಕ್ರಾಸ್ ಹತ್ತಿರ ಸೇವಾಲಾಲ ಗುಡಿಯ ಪಕ್ಕದ ರೋಡಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಒಂದು ಬುಲೆರೋ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಮೋಟರ ಸೈಕಲ್ಗೆ ಬಲವಾಗಿ ಡಿಕ್ಕಿಪಡಿಸಿದ್ದು, ಆಗ ಪಿರ್ಯಾದಿ ಹಾಗೂ ಸಂಗಡಿಗ ಮೋಟರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಅಪಘಾತಪಡಿಸಿದ ಬುಲೆರೋ ವಾಹನದ ಚಾಲಕ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಆತನ ಹೆಸರು ವಿಳಾಸ ತಿಳಿದುಬಂದಿರುವದಿಲ್ಲ. ಸದರಿ ಅಪಘಾತದಲ್ಲಿ ಪಿರ್ಯಾಧಿಗೆ ಹಣೆಯ ಎರಡೂ ಕಡೆಗೆ ರಕ್ತಗಾಯ ಆಗಿ ಎಡಗಡೆ ಕೈಗೆ ತರಚಿದ ಗಾಯಗಳಾಗಿದ್ದು ಅಲ್ಲದೆ ಬಲಗಡೆ ಕಾಲಿನ ಮೊಳಕಾಲ ಕೆಳಗೆ ಕಾಲುಮುರಿದಂತಾಗಿರುತ್ತದೆ. ಮೋಟರ ಸೈಕಲ್ ಹಿಂದೆ ಕುಳಿತ ಆನಂದ ಈತನಿಗೆ ಬಲಗಾಲ ಮೊಳಕಾಲ ಕೆಳಗೆ ಕಾಲು ಮುರಿದಂತಾಗಿದ್ದು, ಹಣೆಗೆ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತಪಡಿಸಿದ ಬುಲೆರೋ ವಾಹನದ ನಂಬರ ಕೆಎ 25 ಪಿ 6240 ಅಂತ ಇದ್ದು ನಂತರ  ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಪಿರ್ಯಾದಿ ಹಾಗೂ ಸಂಗಡಿಗ ಇಬ್ಬರು ನೇರವಾಗಿ ಕಾಮರೆಡ್ಡಿ ಆಸ್ಪತ್ರೆ ಕಲಬುಗರ್ಿಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ.

ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:-74/2020 ಕಲಂ: 78(3) ಕೆ.ಪಿ ಆಕ್ಟ್ : ದಿನಾಂಕ:05/09/2020 ರಂದು 3:00 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ ದಿನಾಂಕ:05.09.2020 ರಂದು 10:00 ಎ.ಎಮ್.ಕ್ಕೆ ತಾವು ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಬೀಟ್ ಸಿಬ್ಬಂದಿಯಾದ ಸಿದ್ರಾಮರೆಡ್ಡಿ ಪಿಸಿ-423 ರವರು ತಿಳಿಸಿದ್ದುಎನೇಂದರೆ ಬೈಲಕುಂಟಿ ಗ್ರಾಮದಲ್ಲಿನ ಶ್ರೀ ದುರ್ಗಮ್ಮ ದೇವಿಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1ರೂಪಾಯಿ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡ್ಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:74/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 6:50 ಪಿ.ಎಮ್ಕ್ಕೆ ಮರಳಿ ಠಾಣೆಗೆ ಬಂದು ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 2340/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. 
ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ಭೀಮಣ್ಣ ತಂದೆ ಗದ್ದೆಪ್ಪ ಅಮ್ಮಾಪೂರ ವ||36ವರ್ಷ ಜಾ||ಹಿಂದೂ ಬೇಡರ ಉ||ಒಕ್ಕಲುತನ ಸಾ||ಬೈಲಕುಂಟಿ ತಾ|| ಹುಣಸಗಿ
 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!