ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/09/2020
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 127/2020 ಕಲಂ 279, 337, 304(ಎ) ಐಪಿಸಿ : ನಿನ್ನೆ ದಿನಾಂಕ 03.09.2020 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಮೃತನು ತನ್ನ ಮನೆಯಲ್ಲಿ ಊಟ ಮಾಡಿ ತನ್ನ ಮಾವನ ಮಗನಾದ ಸಾರಬರಡ್ಡಿಯೊಂಗಿಗೆ ಕೂಡಿ ಟ್ರ್ಯಾಕ್ಟರನ ಕೂಲಿ ಕೆಲಸಕ್ಕೆಂದು ಹತ್ತಿಕುಣೀಯಿಂದ ಮೊಟ್ನಳ್ಳೀ ಕಡೆಗೆ ಟ್ರ್ಯಾಕ್ಟರ ನಂಬರ ಕೆಎ-33-ಟಿ.ಬಿ-0765 ಮತ್ತು ಟ್ರ್ಯಾಲ್ಲಿ ಹೋಗುತ್ತಿದ್ದಾಗ ಇರುತ್ತದೆ. ದಿನಾಂಕ 04.09.2020 ರಂದು ಸಮಯ ಬೆಳಗಿನ ಜಾವ 1:30 ಗಂಟೆಯಿಂದ 2:00 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದ ಕಟ್ ಹೊಡೆದಿದ್ದ ಪರಿಣಾಮವಾಗಿ ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಮಲ್ಲಿಕಾಜರ್ುನಿಗೆ ಆದ ಭಾರಿ ಗಾಯಗಳಿಂದ ಚಿಕಿತ್ಸೆ ಕುರಿತು ರೀಮ್ಸ್ ಆಸ್ಪತ್ರೆ ರಾಯಚೂರಗೆ ಕರೆದುಕೊಂಡು ಹೋಗುತ್ತಿದ್ದಾಗ ಸಮಯ ಬೆಳಗಿನ ಜಾವ 5:15 ಗಂಟೆಗೆ ಮೃತಪಟ್ಟಿದ್ದು ಆ ಬಗ್ಗೆ ಫಿರ್ಯಾದಿದಾರಳು ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶ ಮೇಲಂದ ಠಾಣೆ ಗುನ್ನೆ ನಂಬರ : 127/2020 ಕಲಂ: 279. 337, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 113/2020 ಕಲಂ 279,338 ಐಪಿಸಿ : ಇಂದು ದಿನಾಂಕ 04-09-2020 ರಂದು 10 ಎ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಪ್ರಕಾಶ ತಂದೆ ಭೀಮರಾಯ ಬಾವೂರ ವಯಾ:34 ಉ: ಶಿಕ್ಷಕರು ಜಾ: ಕಬ್ಬಲಿಗೇರ ಸಾ: ಜೀನಕೇರಾ ತಾ: ಜಿಲ್ಲಾ: ಯಾದಗಿರಿ ಠಾಣೆಗೆ ಬಂದು ತಮ್ಮ ಫಿರ್ಯಾಧಿಯನ್ನು ಸಲ್ಲಿಸಿದ್ದು ಸದರಿ ಫಿರ್ಯಾಧಿಯ ಸಾರಾಂಶವೆನೆಂದರೆ ದಿನಾಂಕ 01-09-2020 ರಂದು ಬಾಡಿಹಾಳ ಗ್ರಾಮದಲ್ಲಿ ನಮ್ಮ ಸಂಬಂಧಿಕರು ಮೃತಪಟ್ಟಿದ್ದರಿಂದ ಅಂತ್ಯಸಂಸ್ಕಾರಕ್ಕೆ ನಮ್ಮ ತಂದೆ ಹಾಗೂ ನಮ್ಮ ತಾಯಿಯಾದ ಶ್ರೀಮತಿ ಭಾಗಮ್ಮಾ ಮತ್ತು ನಮ್ಮ ಸಂಬಂಧಿಕರಾದ ಯಲ್ಲಮ್ಮಾ ಗಂಡ ಶರಣಪ್ಪಾ ಬಾವೂರ ಎಲ್ಲರೂ ಕೂಡಿಕೊಂಡು ನಮ್ಮ ಗ್ರಾಮದ ಮಹಬೂಬಪಟೇಲ್ ತಂದೆ ಅಮೀರಪಟೇಲ್ ಇವರ ಟಂಟಂ ನಂ:ಕೆ.ಎ-33/ಬಿ-1100 ನೇದ್ದನ್ನು ಬಾಡಿಗೆ ರೂಪದಲ್ಲಿ ತೆಗೆದುಕೊಂಡು ಹೋದರು. ಸಾಯಂಕಾಲ 7-40 ಗಂಟೆ ಸುಮಾರಿಗೆ ನಮ್ಮ ತಂದೆ ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ತಾವು ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮರಳಿ ಜೀನಕೇರಾ ಕಡೆಗೆ ಹೊರಟು ಶೇಟ್ಟಿಗೇರಾ ಗ್ರಾಮದ ಸಿದ್ದಾರೂಡ ಮಠದ ಹತ್ತಿರ ಬರುತ್ತಿರುವಾಗ ಎದುರಿನಿಂದ ಅಂದರೆ ಶೆಟ್ಟಿಗೇರಾ ಗೇಟಿನ ಕಡೆಯಿಂದ ಒಂದು ಟಂಟಂ ಗೂಡ್ಸ ಅಟೋ ನಂ:ಕೆ.ಎ-33/9235 ನೆದ್ದರ ಚಾಲಕನು ತನ್ನ ಗೂಡ್ಸ ಅಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಬಂದು ತನ್ನ ಚಾಲನೇಯ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಟಂಟಂ ಕ್ಕೆ ಡಿಕ್ಕಿಪಡಿಸಿದ್ದು ಈ ಘಟನೆಯಲ್ಲಿ ನನ್ನ ಬಲಗಾಲಿಗೆ ಭಾರಿ ಗಾಯವಾಗಿ ಮುರಿದಂತಾಗಿದೆ ಅಂತಾ ತಿಳಿಸಿದಾಗ ನಾನು ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ಮೇಲೆ ತೋರಿಸಿದಂತೆ ಅಪಘಾತವಾಗಿದ್ದು ಇರುತ್ತದೆ. ಈ ಘಟನೆಯಲ್ಲಿ ನಮ್ಮ ತಂದೆಯ ಬಲಗಾಲಿನ ತೊಡೆಗೆ ಹಾಗೂ ಕಪಗಂಡಿಯ ಎರಡು ಕಡೆ ಕಾಲು ಮುರಿದು ಭಾರಿ ಗುಪ್ತಗಾಯವಾಗಿತ್ತು. ಇನ್ನೂಳಿದವರಿಗೆ ಯಾವುದೇ ಗಾಯಗಳಾಗಿರಲಿಲ್ಲಾ. ಡಿಕ್ಕಿಪಡಿಸಿದ ಗೂಡ್ ವಾಹನ ಚಾಲಕನ ಹೆಸರು ಆಂಜನೇಯ ತಂದೆ ಹಣಮಂತ ಸಾ: ಯಾದಗಿರಿ ಅಂತಾ ಗೋತ್ತಾಯಿತು. ನಂತರ ಗಾಯಗೊಂಡಿದ ನಮ್ಮ ತಂದೆಗೆ ಮಹಬೂಬ ಇತನ ಟಂಟಂ ದಲ್ಲಿ ಹಾಕಿಕೊಂಡು ಉಪಚಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ, ನಮ್ಮ ತಂದೆಗೆ ವೈಧ್ಯಾಧಿಕಾರಿಗಳು ಜಿಲ್ಲಾ ಸಕರ್ಾರಿ ಆಸ್ಪತ್ರೆ ರವರು ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕೆ ಕಲಬುರಗಿಗೆ ತೆಗೆದುಕೊಂಡು ಸಲಹೇ ನೀಡಿದಾಗ ನಮ್ಮ ತಂದೆ ರಾತ್ರಿ ಕಲಬುರಗರ್ಿಯ ಯುನೈಟೇಡ್ ಆಸ್ಪತ್ರೆಗೆ ತೆಗೆದುಕೊಂಡು ಸೇರಿಕೆ ಮಾಡಿದ್ದು ನಮ್ಮ ತಂದೆಯವರು ಸಧ್ಯ ಕಲಬುಗರ್ಿಯಲ್ಲಿಯೇ ಉಪಚಾರ ಪಡೆಯುತ್ತಿದ್ದಾರೆ. ಈ ಘಟನೆಯು ಇಂದು ದಿನಾಂಕ 01-09-2020 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಶೆಟ್ಟಿಗೇರಾ ಹಾಗೂ ಲಿಂಗೇರಿ ರೋಡಿನ ಮೇಲೆ ಸಿದ್ದಾರೂಡ ಮಠದ ಹತ್ತಿರ ಜರುಗಿರುತ್ತದೆೆ. ಈ ಘಟನೆಗೆ ಕಾರಣನಾದ ಗೂಡ್ಸ ಅಟೋ ನಂ:ಕೆ.ಎ-33/9235 ಇದರ ಚಾಲಕನಾದ ಆಂಜನೇಯ ತಂದೆ ಹಣಮಂತ ಸಾ: ಯಾದಗಿರಿ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿ ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಜವಿದೆ. ನಮ್ಮ ತಂದೆಯ ಜೋತೆಯಲ್ಲಿ ಆಸ್ಪತ್ರೆಯಲ್ಲಿದ್ದು ಅವರಿಗೆ ಉಪಚಾರ ಕೊಡಿಸಿ ಠಾಣೆಗೆ ಬರಲು ತಡವಾಗಿದ್ದು ಇರುತ್ತದೆ ಅಂತಾ ಫಿರ್ಯಾಧಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:113/2020 ಕಲಂ 279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 115/2020 ಕಲಂ 78(3) ಕೆ.ಪಿ. ಆ್ಯಕ್ಟ : ಇಂದು ದಿನಾಂಕ 04/09/2020 ರಂದು ಮಧ್ಯಾಹ್ನ 3-30 ಕ್ಕೆ ಶ್ರೀ ಬಾಬುರಾವ ಎ.ಎಸ್.ಐ ರವರು ಠಾಣೆಗೆ ಬಂದು ವರದಿ ನೀಡಿದ ಸಾರಾಂಶವೆನೆಂದರೆ ಈ ಮೂಲಕ ನಿಮಗೆ ವರದಿ ನೀಡುವುದೆನೆಂದರೆ, ನಾನು ಇಂದು ದಿನಾಂಕ. 04/09/2020 ರಂದು 10-15 ಎಎಮ್ ಕ್ಕೆ ನಾನು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರಾಮಸಮುದ್ರ ಗ್ರಾಮದಲ್ಲಿ ಮಸ್ಕನಳ್ಳಿ ಕ್ರಾಸ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಮಟಕಾ ಜೂಜಾಟದಲ್ಲಿ ತೊಡಗಿದ್ದು, ಅಲ್ಲಿ ಹೋಗಿ ಬರುವ ಜನರಿಗೆ ಕರೆದು ಮಟಕಾ ಜೂಜಾಟ ಆಡಿ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆಯುತ್ತಿದ್ದಾನೆ ಅಂತಾ ಖಚಿತ ಭಾತ್ಮಿ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಂಡು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಪರವಾನಿಗೆ ಕೊಡಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಳ್ಳಲಾಗಿದೆ. ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 115/2020 ಕಲಂ 78(3) ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಕೈಕೊಂಡಿದ್ದು ಇರುತ್ತದೆ,
ಜಪ್ತಿ ಮಾಡಿದ ಮುದ್ದೆಮಾಲುಗಳು
1)ನಗದು ಹಣ 9,950/ರೂ
2)ಮಟಕಾ ಚೀಟಿ ಅ.ಕಿ. 00=00/ರೂ
3)ಒಂದು ಬಾಲಪೆನ್ನ ಅ.ಕಿ. 00=00/ರೂ
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 114/2020 ಕಲಂ 78(3) ಕೆ.ಪಿ. ಆ್ಯಕ್ಟ : ಇಂದು ದಿನಾಂಕ 04/09/2020 ರಂದು ಮಧ್ಯಾಹ್ನ 2-30 ಕ್ಕೆ ಶ್ರೀ ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ರವರು ಠಾಣೆಗೆ ಬಂದು ಜ್ಞಾಪನ ಪತ್ರ ನೀಡಿದ ಸಾರಾಂಶವೆನೆಂದರೆ ನಾನು ಇಂದು ದಿನಾಂಕ. 04/09/2020 ರಂದು 10-15 ಎಎಮ್ ಕ್ಕೆ ನಾನು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಯಡ್ಡಳ್ಳಿ ಗ್ರಾಮದಲ್ಲಿ ಹೊರುಂಚಾ ಕ್ರಾಸ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಅಲ್ಲಿ ಹೋಗಿ ಬರುವ ಜನರಿಗೆ ಕರೆದು ಮಟಕಾ ಜೂಜಾಟ ಆಡಿ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆಯುತ್ತಿದ್ದಾನೆ ಅಂತಾ ಖಚಿತ ಭಾತ್ಮಿ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಂಡು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಪರವಾನಿಗೆ ಕೊಡಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಳ್ಳಲಾಗಿದೆ. ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಸದರಿ ಜ್ಞಾಪನ ಪತ್ರದಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 114/2020 ಕಲಂ 78(3) ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
ಜಪ್ತಿ ಮಾಡಿದ ಮುದ್ದೆಮಾಲುಗಳು
1)ನಗದು ಹಣ 8,000/ರೂ
2)ಮಟಕಾ ಚೀಟಿ ಅ.ಕಿ. 00=00/ರೂ
3)ಒಂದು ಬಾಲಪೆನ್ನ ಅ.ಕಿ. 00=00/ರೂ
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 116/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 04-08-2020 ರಂದು 4 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಬನ್ನಮ್ಮಾ ಗಂಡ ಸಹದೇವಪ್ಪಾ ಸುಕ್ಕಪ್ಪನೋರ ವಯಾ:45 ಜಾ: ಮಾದಿಗ ಉ:ಅಶಾ ಕಾರ್ಯಕತರ್ೇ ಸಾ:ರಾಮಸಮುದ್ರ ತಾ:ಜಿ ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಸದರಿ ಹೇಳಿಕೆಯ ಸಾರಾಂಶವೆನೆಂದರೆ ದಿನಾಂಕ 03-08-2020 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಾನು ನನ್ನ ಗಂಡ ಮತ್ತು ಮಕ್ಕಳಾದ ಮಲ್ಲಿಕಾಜರ್ುನ . ಅನಂತಕುಮಾರ ಎಲ್ಲರೂ ನಮ್ಮ ಮನೆಯ ಮುಂದುಗಡೆ ಇದ್ದಾಗ ಅದೇ ವೇಳೆಗೆ ಈ ಮ ಮೊದಲಿನ ರಾತ್ರಿ ನನ್ನ ಗಂಡನ ಜೋತೆಯಲ್ಲಿ ಬೊಚಚ್ಲು ನೀರಿನ ವಿಷಯದಲ್ಲಿ ಜಗಳಾ ಮಾಡಿಕೊಂಡ 1) ಮಲ್ಲಪ್ಪಾ ತಂದೆ ಭೀಮಣ್ಣಾ ಅಚ್ಚಕೇರಿ ಮತ್ತು ಇತನ ಮಕ್ಕಳಾದ 2) ಭೀಮರಾಯ ತಂದೆ ಮಲ್ಲಪ್ಪಾ ಅಚ್ಚಕೇರಿ 3) ಮಲ್ಲಪ್ಪಾ ತಂದೆ ಮಲ್ಲಪ್ಪಾ ಅಚ್ಚಕೇರಿ 4) ರಾಜು ತಂದೆ ಮಲ್ಲಪ್ಪಾ ಅಚ್ಚಕೇರಿ 5) ಸಾಬಯ್ಯಾ ತಂದೆ ಮಲ್ಲಪ್ಪಾ ಅಚ್ಚಕೇರಿ ಇತನ ಹೆಂಡತಿಯಾದ 6) ಮಹಾದೇವಮ್ಮಾ ಗಂಡ ಮಲ್ಲಪ್ಪಾ ಅಚ್ಚಿಕೇರಿ ಹಾಗೂ ಸೊಸೆಯಾದ 7) ಮಲ್ಲಮ್ಮಾ ಗಂಡ ಮಲ್ಲಪ್ಪಾ ಅಚ್ಚಿಕೇರಿ ಹಾಗೂ ಇವರ ಸಂಬಂಧಿಕರಾದ 8) ಮಹಾದೇವಪ್ಪಾ ತಂದೆ ಆಶಪ್ಪಾ ಹಲಿಗಿ 9) ಭೀಮರಾಯ ತಂದೆ ಮಹಾದೇವಪ್ಪಾ ಹಲಿಗಿ 10) ಸಣ್ಣಮಲ್ಲಪ್ಪಾ ತಂದೆ ಆಶಪ್ಪಾ ಹಲಿಗಿ 11) ಮಲ್ಲಿಕಾಜರ್ೂನ ತಂದೆ ಮಲ್ಲಪ್ಪಾ ಹಲಿಗಿ 12) ಬಂಗಾರೆಪ್ಪಾ ತಂದೆ ಬಂಗಾರೆಪ್ಪಾ ಅಚ್ಚಿಕೇರಿ 13) ಮಲ್ಲಪ್ಪಾ ತಂದೆ ಶರಣಪ್ಪಾ ದನಕಾಯೇರ 14)ಸಂಗಮ್ಮಾ ಗಂಡ ಮಲ್ಲಪ್ಪಾ ದನಕಾಯೇರ ಇವರೆಲ್ಲರೂ ಕೂಡಿಕೊಂಡು ಆಕ್ರಮಕೂಡ ಕಟ್ಟಿಕೊಂಡು ಹಕಾರಿ ಹೊಡೆಯುತ್ತಾ ಕೈಯ್ಯಲ್ಲಿ ಕಲ್ಲು ಬಡಿಗೆಗಳು ಹಿಡಿದುಕೊಂಡು ನಮಗೆಲ್ಲರಿಗೆ ಎಲೇ ಭೊಸಡಿ ಮಕ್ಕಳೇ ನಿಮ್ಮ ಮನೆಯ ನೀರು ನಮ್ಮ ಮನೆ ಏಕೆ ಬಿಡುತ್ತಿರಿ ನಿಮಗೆ ಎಷ್ಟು ಸಲ ಹೇಳಿದರೂ ಕೇಳುತ್ತಿಲ್ಲಾ ನಿಮಗೆ ಸೊಕ್ಕು ಬಳ ಬಂದಿದೆ ಅಂತಾ ನಮಗೆ ಬೈಯ್ಯುತ್ತಿದ್ದಾಗ ಆಗ ನನ್ನ ಗಂಡನು ಅವರಿಗೆ ಮೊದಲಿನಿಂದಲೂ ಬೊಚ್ಚಲು ನೀರು ಅದೇ ಕಡೆಯಿಂದ ಹೊಗುತ್ತವೆ ಈಗ ಹೊಸದಾಗಿ ಹೇಳಿದರೇ ನಾವು ಬೊಚ್ಚಲು ನೀರು ಎಲ್ಲಿ ಬೀಡಬೇಕು ಅಂತಾ ಕೇಳಿದಾಗ ಅವರೆಲ್ಲರೂ ಒಮ್ಮೇಲೇ ಸೂಳೇ ಮಕ್ಕಳೇ ನಮಗೆ ಎದರು ಮಾತಾಡುತ್ತಿರೇನು ಇವತ್ತು ಒಂದು ಗತಿ ಕಾಣಿಸುತ್ತೆವೆ ಅಂದವರೇ ಅವರಲ್ಲಿ 1) ಮಲ್ಲಪ್ಪಾ ತಂದೆ ಭೀಮಣ್ಣಾ ಅಚ್ಚಕೇರಿ ಈತನು ಕಲ್ಲಿನಿಂದ ಎದೆಯ ಮೇಲೆ ಹೊಡೆದ ಗುಪ್ತಗಾಯ ಮಾಡಿದೆನು. ನನ್ನ ಮಗ ಮಲ್ಲಿಕಾಜರ್ುನ ಇತನಿಗೆ ಬೀಮರಾಯ ತಂದೆ ಮಲ್ಲಪ್ಪಾ, ಮಹಾದೇವಪ್ಪಾ ತಂದೆ ಆಶಪ್ಪಾ , ಬಂಗಾರೆಪ್ಪಾ ತಂದೆ ಬಂಗಾರೆಪ್ಪಾ ಹಾಗೂ ಸಾಬಣ್ಣಾ ತಂದೆ ಮಲ್ಲಪ್ಪಾ ಈ ಮೂವರು ಕೂಡಿ ತಮ್ಮ ಕೈಯ್ಯಲ್ಲಿದ್ದ ಬಡಿಗೆಗಳಿಂದ ನನ್ನ ಮಗನ ಎಡರಟ್ಟೆಗೆ, ಬೆನ್ನಿಗೆ ಕಾಲಿಗೆ ಹೊಡೆದು ಗುಪ್ತಗಾಯ ಮಾಡಿದರು. ಹಾಗೂ ನನ್ನ ಇನ್ನೋಬ್ಬ ಮಗನಾದ ಅನಂತಕುಮಾರ ಇತನಿಗೆ ಸಣ್ಣಮಲ್ಲಪ್ಪಾ ತಂದೆ ಆಶಪ್ಪಾ, ಮಲ್ಲಿಕಾಜರ್ುನ ತಂದೆ ಮಲ್ಲಪ್ಪಾ, ರಾಜು ತಂದೆ ಮಲ್ಲಪ್ಪಾ ಹಾಗೂ ಸಾಬಯ್ಯಾ ತಂದೆ ಮಲ್ಲಪ್ಪಾ ಇವರೆಲ್ಲರೂ ಕೂಡಿ ನೆಲಕ್ಕೆ ಹಾಗಿ ಕೈಮುಷ್ಟಿ ಮಾಡಿ ಹೊಟ್ಟೆಗೆ ಬೆನ್ನಿಗೆ ಹೋಡೆದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದರು. ಇನ್ನೂಳೀದವರೆಲ್ಲರೂ ನನ್ನ ಗಂಡ ಹಾಗೂ ಇಬ್ಬರೂ ಮಕ್ಕಳಿಗೆ ನೆಲಕ್ಕೆ ಹಾಕಿ ಕಾಲಿನಿಂದ ಒದ್ದರು. ಆಗ ನಾನು ಜಗಳಾ ಬಿಡಿಸಲು ಮಧ್ಯ ಹೋದಾಗ ಮಲ್ಲಮ್ಮಾ ಗಂಡ ಮಲ್ಲಪ್ಪಾ ಹಾಗೂ ಮಹಾದೇವಮ್ಮಾ ಗಂಡ ಮಲ್ಲಪ್ಪಾ ಇವರಿಬ್ಬರೂ ನನಗೆ ಕೈಯಿಂದ ಹೊಡೆದರು. ಆಗ ಅಲ್ಲಿಯೇ ಇದ್ದ ಮಲ್ಲಪ್ಪಾ ತಂದೆ ಸಿದ್ರಾಮಪ್ಪಾ, ಬಸಲಿಂಗಪ್ಪಾ ತಂದೆ ಬೀಮಶೇಪ್ಪಾ ಹಾಗೂ ಬಂಗಾರೆಮ್ಮಾ ಗಂಡ ಬಂಗಾರೆಪ್ಪಾ ಈ ಮೂರು ಜನರು ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಅವರೆಲ್ಲರೂ ಇನ್ನೊಮ್ಮೆ ಸಿಗರಿ ಸೂಳೆ ಮಕ್ಕಳೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿದರು. ನಂತರ ಅದೇ ದಿನ ನನ್ನ ಗಂಡನಿಗೆ ಇಬ್ಬರೂ ಮಕ್ಕಳಿಗೆ ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಈ ಜಗಳದ ಬಗ್ಗೆ ನಾನು ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದಿದ್ದು ನಮಗೆ ಈ ರೀತಿಯಾಗಿ ಬಡಿಗೆ ಮತ್ತು ಕಲ್ಲುಗಳಿಂದ ಹೊಡೆಬಡಿ ಮಾಡಿ ಜೀವಧ ಭಯ ಹಾಕಿ ಮೇಲ್ಕಂಡ 14 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 116/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 103/2020 ಕಲಂ: 143,147,148,504,324,323,506 ಸಂ 149 ಐಪಿಸಿ : ಇಂದು ದಿನಾಂಕ: 04/09/2020 ರಂದು 5-30 ಪಿಎಮ್ ಕ್ಕೆ ಶ್ರೀಮತಿ ಸರಸ್ವತಿ ಗಂಡ ದಶರಥ ಭಜಂತ್ರಿ, ವ:39, ಜಾ:ಭಜಂತ್ರಿ, ಉ:ಕುಲಕಸಬು ಸಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕುಲಕಸಬು ಮಾಡಿಕೊಂಡು ನನ್ನ ಗಂಡ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಸಣ್ಣಮ್ಮನ ದೊಡ್ಡಮ್ಮನ ಮಗನಾದ ಅಶೋಕ ತಂದೆ ಖಾಜಪ್ಪ ಭಜಂತ್ರಿ ಈತನು ವಿನಾಕಾಣ ನನ್ನೊಂದಿಗೆ ನಮ್ಮ ಮನೆ ಕಡೆ ಯಾಕೆ ಬರುತ್ತಿ ಎಂದು ಜಗಳ ಮಾಡುತ್ತಾ ಬರುತ್ತಿರುತ್ತಾನೆ. ಆದರೂ ನಾನು ಸಂಭಾಳಿಸಿಕೊಂಡು ನನ್ನ ಪಾಡಿಗೆ ನಾನು ಸುಮ್ಮನೆ ಇರುತ್ತೇನೆ. ಹೀಗಿದ್ದು ಮೊನ್ನೆ ದಿನಾಂಕ: 02/09/2020 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಸದರಿ ಅಶೋಕ ಈತನ ಮನೆ ಸಮಿಪದಿಂದ ಬಜಾರ ಕಡೆ ಹೋಗುತ್ತಿದ್ದಾಗ 1) ಅಶೋಕ ತಂದೆ ಖಾಜಪ್ಪ ಭಜಂತ್ರಿ, 2) ದೇವಮ್ಮ ಗಂಡ ಖಾಜಪ್ಪ ಭಜಂತ್ರಿ, 3) ಸಾಬಮ್ಮ ಗಂಡ ಅಶೋಕ ಭಜಂತ್ರಿ, 4) ಅಳ್ಳಮ್ಮ ಗಂಡ ಸೈದಪ್ಪ ಭಜಂತ್ರಿ ಮತ್ತು 5) ಮಲ್ಲಮ್ಮ ಗಂಡ ಯಂಕಪ್ಪ ಭಜಂತ್ರಿ ಎಲ್ಲರೂ ಸಾ:ವಡಗೇರಾ ಇವರುಗಳು ಸೇರಿಕೊಂಡು ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಲ್ಲು, ಬಡಿಗೆ ಹಿಡಿದುಕೊಂಡು ಎಲ್ಲರೂ ಸೇರಿ ಬಂದವರೆ ನನಗೆ ಈ ಭೋಸುಡಿ ನಮ್ಮ ಮನೆ ಕಡೆ ಬರಬೇಡ ಎಂದರು ಬರತಾಳ ಇವಳ ಸೊಕ್ಕು ಜಾಸ್ತಿಯಾಗ್ಯಾದ ಇವತ್ತು ಇವಳಿಗೆ ಒಂದು ಗತಿ ಕಾಣಿಸಬೇಕು ಎಂದು ಜಗಳ ತೆಗೆದವರೆ ದೇವಮ್ಮ ಮತ್ತು ಅಳ್ಳಮ್ಮ ಇಬ್ಬರೂ ನನಗೆ ಕುಸ್ತಿಗೆ ಬಿದ್ದು, ಕೈ ಮುಷ್ಠಿ ಮಾಡಿ ಬೆನ್ನಿಗೆ ಗುದ್ದಿದರು. ಸಾಬಮ್ಮ ಅಲ್ಲಿಯೇ ಬಿದ್ದ ಹಿಡಿಗಲ್ಲಿನಿಂದ ನನ್ನ ಎಡ ಹಸ್ತಕ್ಕೆ ಹೊಡೆದು ರಕ್ತಗಾಯ ಮಾಡಿದಳು. ಬಿಡಿಸಲು ನನ್ನ ಮಗ ಬಾಬು ಈತನಿಗೆ ಅಶೋಕನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೆನ್ನಿಗೆ ಮತ್ತು ಬಲ ರಟ್ಟೆಗೆ ಹೊಡೆದು ಒಳಪೆಟ್ಟು ಮಾಡಿದನು. ಮಲ್ಲಮ್ಮ ಗಂಡ ಯಂಕಪ್ಪ ಇವಳು ನನ್ನ ಮಗನಿಗೆ ಕೈಯಿಂದ ಎದೆಗೆ ಗುದ್ದಿರುತ್ತಾಳೆ. ಆಗ ಜಗಳವನ್ನು ಪ್ರಶಾಂತ ತಂದೆ ಶಿವಾಜಿ ಮತ್ತು ಮಲ್ಲಮ್ಮ ಗಂಡ ಪರಶುರಾಮ ಇವರು ಬಂದು ನಮಗೆ ಹೊಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವ್ವತ್ತು ಉಳದಿ ಸೂಳೆ ಮಗಳೆ ಇನ್ನೊಂದು ಸಲ ನಮ್ಮ ಕೈಗೆ ಸಿಕ್ಕರೆ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ದೂರು ಕೊಡುತ್ತಿದ್ದೆವೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.103/2020 ಕಲಂ: 143,147,148,504,324,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 233/2020. ಕಲಂ 78 (3) ಕೆ.ಪಿ.ಆಕ್ಟ : ಆರೋಪಿತನು ದಿನಾಂಕ: 04-09-2020 ರಂದು 4:10 ಪಿ.ಎಮ್.ಕ್ಕೆ ಮರಮಕಲ್ ಗ್ರಾಮದ ಅಂಬಾ ಭವಾನಿ ದೇವಸ್ಥಾನದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 1270/- ರೂ. ನಗದು ಹಣ , ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಅನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 233/2020 ಕಲಂ.78 (3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆಎನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 19/2020 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ 04/09/2020 ರಂದು ಬೆಳಿಗ್ಗೆ 09-45 ಎ.ಎಂಕ್ಕೆ ಗಂಟೆಗೆ ಫಿಯರ್ಾದಿದಾರನಾದ ನಾನು ಶ್ರೀದೇವಿ ಗಂಡ ಚಂದ್ರಪ್ಪ ಶೇರಿ ವ|| 45 ವರ್ಷ ಉ|| ಕೂಲಿ ಜಾ|| ಹಿಂದೂ ಗಾಣಿಗ ಸಾ|| ಸಗರ (ಬಿ), ಇದ್ದು ನನ್ನ ಗಂಡನಿಗೆ ಇಬ್ಬರು ಹೆಂಡತಿಯರಿದ್ದು ನಾನು ಮೋದಲನೇಯ ಹೆಂಡತಿ ಇದ್ದು ನನಗೆ ಚಂದಮ್ಮ ಎಂಬ ಹೆಣ್ಣು ಮಗಳಿದ್ದು ಇವಳಿಗೆ ಮದುವೆ ಮಾಡಿಕೊಟ್ಟಿದ್ದು, ನನಗೆ ಗಂಡು ಮಕ್ಕಳಾಗದ ಕಾರಣ ಬಸಮ್ಮ ಇವರನ್ನು ಮದುವೆ ಯಾಗಿದ್ದು ಬಸಮ್ಮ ಇವಳಿಗೆ ಮೂರು ಜನ ಮಕ್ಕಳಿದ್ದು ಅದರಲ್ಲಿ ಭೀಮಾಶಂಕರ ವ|| 27 ವರ್ಷ, ಬಾಗ್ಯಶ್ರೀ ವ|| 22 ವರ್ಷ, ವಿಶ್ವರಾದ್ಯ ವ|| 20 ವರ್ಷ, ಬಾಗ್ಯಶ್ರೀ ಇವಳನ್ನು ಹೆರುಂಡಿ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು, ನನ್ನ ಸವತಿ ಬಸಮ್ಮ ಇವಳು ಅಂದರ ಚಂದ್ರಪ್ಪ ಎರಡನೇಯ ಹೆಂಡತಿ ಸುಮಾರು 20 ವರ್ಷಗಳಿಂದೆ ಮೃತಪಟ್ಟಿದ್ದು ನಾನು ಮತ್ತು ನನ್ನ ಗಂಡ ಮತ್ತು ಬಸಮ್ಮನ ಮಕ್ಕಳು ಎಲ್ಲರೂ ಒಕ್ಕಲುತನ ಕೆಲಸಮಾಡಿಕೊಂಡು ಉಪಜೀವಿಸುತ್ತಿದ್ದು, ನನ್ನ ಗಂಡನ ಹೇಸರಿನಲ್ಲಿರು ಸಗರ ಸೀಮಾಂತರದಲ್ಲಿ 1 ಎ. 21 ಗುಂಟಿ ಹೋಲ ಮತ್ತು ನನ್ನ ಮಗ ಭೀಮಾಶಂಕರ ಮತ್ತು ವಿಶ್ವರಾದ್ಯ ಇಬ್ಬರ ಹೆಸರಿನಲ್ಲಿ ಜೌಂಟಿನಲ್ಲಿ 5 ಎಕರೇ 20 ಗುಂಟಿ ಹೋಲವಿದ್ದು ಒಕ್ಕಲುತನ ಕೆಲಸಮಾಡಿಕೊಂಡಿದ್ದು, ಹೀಗೆ ಮುರು ವರ್ಷಗಳಿಂದ ಹೋಲದಲ್ಲಿ ಸರಿಯಾಗಿ ಬೇಳ ಬರದಿದ್ದರಿಂದ ಹೋಲದ ಲಾಗಲೂಗಡಿಗೆ ಮತ್ತು ಸಂಸಾರ ಅಡಚಣೆ ಸಲುವಾಗಿ ಎಸ್.ಬಿ.ಐ ಸಗರ ಬ್ಯಾಂಕನಲ್ಲಿ 65,000/- ಸಾಲ ತೆಗಿದಿದ್ದು, ಮತ್ತು ನನ್ನ ಮಕ್ಕಳ ಹೆಸರಿನಲ್ಲಿ ಡಿ.ಸಿ.ಸಿ ಬ್ಯಾಂಕನಲ್ಲಿ 1,00,000/- ಮತ್ತು ಎಸ್.ಬಿ.ಐ ಸಗರ ಬ್ಯಾಂಕನಲ್ಲಿ 1,00,000/- ಸಾಲವಿದ್ದು ಮತ್ತು ಕೈ ಸಾಲ 3,00,000/- ಇದ್ದು ಸದರಿ ಸಾಲ ವಿಷಯವ ವಾಗಿ ನನ್ನ ಗಂಡ ಬಹಳ ಚಿಂತೆ ಮಾಡುತ್ತಾ ಇದ್ದ, ನಾವೂ ಏಕೆ ಚಿಂತೆ ಮಾಡುತ್ತಿದ್ದಿ, ನಾವೇಲ್ಲಾ ದುಡಿದು ತಿರಿಸದರಾಯಿತು ಎಂದು ಸಮದಾನ ಮಾಡುತ್ತಿದ್ದೆವು,
ಹೀಗಿದ್ದು ದಿನಾಂಕ 03/09/2020 ರಂದು ನಾನು ಮತ್ತು ನನ್ನ ಮಕ್ಕಳಾದ ಭೀಮಾಶಂಕರ, ವಿಶ್ವರಾದ್ಯ, ಮತ್ತು ಸೋಸೆ ಸಕ್ಕುಬಾಯಿ ಎಲ್ಲರೂ ಹೋಲದ ಕೆಲಸಕ್ಕೆ ಹೋಗಿದ್ದು, ನನ್ನ ಮನೆಯಲ್ಲಿ ಇದ್ದ, ನಂತರ ನಾವೂ ಸಾಯಾಂಕಾಲ 6 ಗಂಟೆಗೆ ಮನೆಗೆ ಬಂದು ರಾತ್ರಿ 09:00 ಪಿ.ಎಂ ಕ್ಕೆ ಎಲ್ಲರೂ ಊಟಮಾಡಿದೆವು ನನ್ನ ಗಂಡ ಚಂದ್ರಪ್ಪ ಇತನು ಸಾಲದ ಚಿಂತೆಯಲ್ಲಿ ಸರಿಯಾಗಿ ಊಟಮಾಡಲಿಲ್ಲಾ ನಾವೇಲ್ಲಾ, ಊಟ ಮಾಡು ಎನಾಗಲ್ಲಾ, ಈ ವರ್ಷ ಸಾಲ ತಿರಿಸದರಾಯಿತು ಎಂದು ದೈರ್ಯ ಹೇಳಿ ನಾನು ಮತ್ತು ನನ್ನ ಗಂಡ ಹಾಲನಲ್ಲಿ ಮಲಗಿದೇವು, ನನ್ನ ಮಗ ಸೋಸೆ ಎಂದು ರೂಮಿನಲ್ಲಿ ಮಲಗಿದ್ದು, ನನ್ನ ಕಿರಿಯ ಮಗ ವಿಶ್ವರಾದ್ಯ ಮಾಳಿಗೆ ಮೇಲೆ ಮಲಗಿದ್ದು, ದಿನಾಂಕ 04/09/2020 ರಂದು ಬೇಳಗ್ಗೆ 4:30 ಎ.ಎಂ ಕ್ಕೆ ನನ್ನ ಮಗ ಭೀಮಾಶಂಕರ ಎದ್ದು ಒಮ್ಮಲೇ ಚಿರಾಡುತ್ತಾ ಇದ್ದಾಗ ನಾನು ಎದ್ದು ಏನಾಯಿತು ಎಂದು ನೋಡಿದೇನು ಸದರ ನನ್ನ ಗಂಡ ಚಂದ್ರಪ್ಪ ಇತನು ನಮ್ಮ ಮನೆಯ ಜಂತಿಗೆ ಒಂದು ಹಗ್ಗದಿಂದ ನೆಣುಹಾಕಿಕೊಂಡಿದ್ದು ನಾವೂ ಅಳುತ್ತಾ, ಇದ್ದಾಗ ನನ್ನ ಮಗ ವಿಶ್ವರಾದ್ಯಕೂಡ ಎದ್ದು ಬಂದು, ನನ್ನ ಗಂಡನಿಗೆ ಇನ್ನು ಜೀವ ಇರುಬಹುದು ಎಂದು ನಾವೂ ಹಗ್ಗವನ್ನು ಕೋಯಿದು ಕೇಳಗೆ ಹಾಕಿದೇವು, ನನ್ನ ಗಂಡ ಚಂದ್ರಪ್ಪ ಇತನು ಸಾಲದ ಚಿಂತೆಯಲ್ಲಿ ನೆಣುಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ,
ಕಾರಣ ನನ್ನ ಗಂಡ ಚಂದ್ರಪ್ಪ ತಂದೆ ಭೀಮರಾಯ ಶೆರಿ ಇತನು ಸಾಲದ ಚಿಂತೆಯಲ್ಲಿ ದಿನಾಂಕ 03/09/2020 ರಂದು 10:00 ಪಿ.ಎಂ ರಿಂದ ದಿನಾಂಕ 04/09/2020 ರಂದು 4:30 ಎ.ಎಂದೋಳಗೆ ಸಾಲದ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ನಮ್ಮ ಮನೆಯ ಜೆಂತಿಗೆ ಹಗ್ಗದಿಂದ ನೆಣುಹಾಕಿಕೊಂಡು ಮೃತಪಟ್ಟಿದ್ದು, ಯಾರ ಮೇಲೆ ಯಾವೂದೆ ರೀತಿಯಾ ಸಂಶಾಯ ವಗೇರಾ ಇರುವದಿಲ್ಲಾ ಈ ಬಗ್ಗೆ ಮುಂದಿನ ಕ್ರಮ ಕೈಕೊಳ್ಳಲು ವಿನಂತಿ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 19/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 107/2020 ಕಲಂ 143,147,148,323,324,504,506 ಸಂಗಡ 149 ಐಪಿಸಿ : ದಿನಾಂಕ:27/08/2020 ರಂದು ಆರೋಪಿತರು ಫಿಯರ್ಾದಿಯ ಸಂಬಂಧಿಕರ ಸಮಕ್ಕೆ ಹೋಗಿ ಬಂದಿದ್ದು ಈ ವಿಷಯ ಆರೋಪಿತರು ಫಿಯರ್ಾದಿಗೆ ಹೇಳಿರಲಿಲ್ಲ. ಹೀಗಿದ್ದು ದಿನಾಂಕ:28/08/2020 ರಂದು ಮುಂಜಾನೆ 9 ಗಂಟೆ ಸುಮಾರಿಗೆ ಫಿಯರ್ಾದಿಯು ಆರೋಪಿ ನಿಂಗಪ್ಪನ ಹತ್ತಿರ ಹೋಗಿ ನಮ್ಮ ಸಂಬಂಧಿಕರ ಸಮದ ವಿಷಯ ನಮಗೆ ಯಾಕೆ ಹೇಳಲಿಲ್ಲ, ನಮ್ಮನ್ನು ಯಾಕೆ ಕರೆದುಕೊಂಡು ಹೋಗಿಲ್ಲ ಅಂತಾ ಕೇಳಿದ್ದಕ್ಕೆ ಆರೋಪಿತರು ಫಿಯರ್ಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಕಲ್ಲಿನಿಂದ ಹೊಡೆದು ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 99/2020 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 04/09/2020 ರಂದು 07.55 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 04/09/2020 ರಂದು ಗೋಗಿ ಕೆ ಗ್ರಾಮದ ಚಂದಾಹುಸೆನಿ ದಗರ್ಾ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾಧ ಈರಪ್ಪ ತಂದೆ ಬಸವಂತಪ್ಪ ದಂಡಂಬಳಿ ವಯಾ:50 ಜಾ: ಕಬ್ಬಲಿಗ ಉ: ಕೂಲಿ ಸಾ: ಗೋಗಿ ತಾ: ಶಹಾಪೂರ ಜಿ: ಯಾದಗೀರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 06.55 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 10600/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 99/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.