ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/09/2020

By blogger on ಭಾನುವಾರ, ಸೆಪ್ಟೆಂಬರ್ 6, 2020

                   



                        ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/09/2020                                                                                                                       

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 504,341,323,506 ಸಂ 149 ಐಪಿಸಿ : ಇಂದು ದಿನಾಂಕ:02/09/2020 ರಂದು 7-30 ಪಿಎಮ್ ಕ್ಕೆ ಶ್ರೀ ಬನ್ನಪ್ಪ ತಂದೆ ಅಡಿವೆಪ್ಪ ಗುಜರ್ೆಲಿ, ವ:23, ಜಾ:ಕುರುಬರ, ಉ:ಒಕ್ಕಲುತನ ಸಾ:ಅಗ್ನಿಹಾಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ನಮ್ಮ ತಂದೆ-ತಾಯಿಯೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಕಳೆದ ಸಾಲಿನ ಗೋನಾಲ ಜಾತ್ರೆಯಲ್ಲಿ ನಾವು ದೇವರು ಮಾಡಿದ್ದು, ನಮ್ಮ ತಂದೆಯು ಕುಂಭ ಒತ್ತು ದೇವಸ್ಥಾನಕ್ಕೆ ಹೋಗುತ್ತಿದ್ದಾಗ ನಮ್ಮೂರ ಮಾಳಪ್ಪ ತಂದೆ ತಮ್ಮಣ್ಣ ಕಲ್ಲೂರು ಈತನು ಬಂದು ನಮ್ಮ ತಂದೆಗೆ ಡಿಕ್ಕಿ ಹೊಡೆದನು. ಆಗ ಅವರಿಗೆ ಮತ್ತು ನಮಗೆ ಬಾಯಿ ಮಾತಿನ ತಕರಾರು ಆಗಿರುತ್ತದೆ. ಹೀಗಿದ್ದು ದಿನಾಂಕ: 28/08/2020 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾನು ನಮ್ಮೂರ ಸಂಗೋಳ್ಳಿ ರಾಯಣ್ಣನ ಕಟ್ಟೆ ಹತ್ತಿರ ಮಾತಾಡುತ್ತಾ ಕುಳಿತುಕೊಂಡಿದ್ದೆನು. ಅದೇ ವೇಳೆ ನಮ್ಮ ತಂದೆಯು ನಮ್ಮೂರಲ್ಲಿ ನಮ್ಮ ಬೀಗರು ದೇವರು ಮಾಡಿದ್ದು, ಅವರ ಮನಗೆ ಹೋಗಿ ಊಟ ಮಾಡಿಕೊಂಡು ಮರಳಿ ಬರುತ್ತಿದ್ದವನಿಗೆ ಸಂಗೋಳ್ಳಿ ರಾಯಣ್ಣನ ಕಟ್ಟೆ ಹತ್ತಿರ ನಮ್ಮೂರ 1) ಮಾಳಪ್ಪ ತಂದೆ ತಮ್ಮಣ್ಣ ಕಲ್ಲೂರು, 2) ನಿಂಗಪ್ಪ ತಂದೆ ಧರ್ಮಣ್ಣ ಕಲ್ಲೂರು, 3) ಮಲ್ಲಪ್ಪ ತಂದೆ ಶಿವರಾಜ ಕೊರ್ರಾನೋರ, 4) ಕರಿನಿಂಗಪ್ಪ ತಂದೆ ಮಲ್ಲಪ್ಪ ಗುಜರ್ೆಲಿ, 5) ಮಲ್ಲಪ್ಪ ತಂದೆ ಬೀರಪ್ಪ ಕೋಳಿ, 6) ಹೈಯಾಳಪ್ಪ ತಂದೆ ಶರಣಪ್ಪ ಕೊರ್ರಾನೋರ ಎಲ್ಲರೂ ಜಾ: ಕುರುಬರ ಸಾ:ಅಗ್ನಿಹಾಳ ಇವರುಗಳು ಸೇರಿಕೊಂಡು ಬಂದವರೆ ನಮ್ಮ ತಂದೆಗೆ ತಡೆದು ನಿಲ್ಲಿಸಿ, ಈ ಭೊಸುಡಿ ಮಗ ನಮಗೆ ಈ ಹಿಂದೆ ಗೋನಾಲ ಜಾತ್ರೆಯಲ್ಲಿ ಜಗಳ ಮಾಡ್ಯಾನ ಮತ್ತ ಈಗ ನಮ್ಮ ಎದುರು ಎದೆ ಉಬ್ಬಿಸಿ, ತಿರುಗಾಡತಾನ ಎಂದು ಜಗಳ ತೆಗೆದವರೆ ನಿಂಗಪ್ಪ ಮತ್ತು ಮಲ್ಲಪ್ಪ ಕೊರ್ರನೋರ ಇಬ್ಬರೂ ನಮ್ಮ ತಂದೆಗೆ ಗಟ್ಟಿಯಾಗಿ ಹಿಡಿದುಕೊಂಡಾಗ ಮಾಳಪ್ಪ ಈತನು ಬಂದು ನಮ್ಮ ತಂದೆಯ ಎಡ ಪಕ್ಕೆಗೆ ಕಾಲಿನಿಂದ ಜಾಡಿಸಿ ಒದ್ದುಬಿಟ್ಟನು. ಆಗ ನಮ್ಮ ತಂದೆಯು ಸತ್ತೆನೆಪ್ಪೊ ಎಂದು ಬೊರಲಾಗಿ ಕೆಳಗೆ ಬಿದ್ದಾಗ ಎದೆಗೆ ಒಳಪೆಟ್ಟಾಗಿರುತ್ತದೆ. ಆಗ ಕರಿನಿಂಗಪ್ಪ, ಹೈಯಾಳಪ್ಪ ಮತ್ತು ಮಲ್ಲಪ್ಪ ಕೋಳಿ ಇವರೂ ಕೈಯಿಂದ ಬೆನ್ನಿಗೆ ಹೊಡೆದರು. ಆಗ ಜಗಳವನ್ನು ನಾನು ಮತ್ತು ಅಲ್ಲಿಯೇ ಇದ್ದ ಹಣಮಂತ ತಂದೆ ಬಸಪ್ಪ ಶೇಕಸಿಂಧಿ ಹಾಗೂ ಚಂದಪ್ಪ ತಂದೆ ಧರ್ಮಣ್ಣ ಕಲ್ಲೂರು ಸೇರಿ ಬಿಡಿಸಿರುತ್ತೇವೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿ ಸೂಳೆ ಮಗನೆ ಇನ್ನೊಮ್ಮೆ ಸಿಕ್ಕಾಗ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ನಮ್ಮ ತಂದೆಗೆ ಸೈದಾಪೂರ ಆಸ್ಪತ್ರೆಯಲ್ಲಿ ತೋರಿಸಿರುತ್ತೇವೆ. ನಮ್ಮ ಹಿರಿಯರಿಗೆ ಊರಲ್ಲಿಯೇ ಅವರಿಗೆ ಕರೆಸಿ ವಿಚಾರ ಮಾಡಿ ಎಂದು ಹೇಳಿದಾಗ ನಮ್ಮ ಜನಾಂಗದ ಹಿರಿಯರು ಕರೆಯಲು ಹೊದರೆ ಅವರು ನಾವು ಬರುವುದಿಲ್ಲ ಅವರು ಏನು ಮಾಡಿಕೊಳ್ಳುತ್ತಾರೊ ಮಾಡಿಕೊಳ್ಳಲಿ ಎಂದು ಅಂದಿರುತ್ತಾರೆ. ಆದ್ದರಿಂದ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದೆವೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 101/2020 ಕಲಂ: 504,341,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.



ಯಾದಗಿರ ಪೊಲೀಸ ಠಾಣೆ ಗುನ್ನೆ ನಂ:- 109/2020 ಕಲಂ 87 ಕೆ.ಪಿ ಎಕ್ಟ : ಇಂದು ದಿನಾಂಕ 02-09-2020 ರಂದು 5-50 ಪಿಎಮ್ ಕ್ಕೆ ಶ್ರೀ ಶರಣಪ್ಪಾ ಹೆಚ್,ಸಿ-157 ಡಿ.ಸಿ.ಐ.ಬಿ ಘಟಕ ಯಾದಗಿರಿ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪತ್ರದೊಂದಿಗೆ ವರದಿ ನೀಡಿದ್ದು, ವರದಿಯ ಸಾರಾಂಶವೆನೆಂದರೆ ಇಂದು ದಿನಾಂಕ. 02-09-2020 ರಂದು 3 ಪಿಎಮ್ ಕ್ಕೆ ಆಫೀಸಿನಲ್ಲಿನಲ್ಲಿರುವಾಗ ತಮಗೆ ಮಾಹಿತಿ ಬಂದಿದ್ದೆನೆಂದರೆ  ಯಾದಗಿರಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯ ಶೇಟ್ಟಿಗೇರಾ ಯಾರೋ ಕೆಲವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಜೂಜುಕೋರರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸು ಕೊಳ್ಳುವಂತೆ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 112/2020 ಕಲಂ 87 ಕೆ.ಪಿ ಎಕ್ಟ ಅಡಿಯಲ್ಲಿ ಗುನ್ನ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. 

1) 15 ಜನ ಆರೋಪಿತರು

2) ನಗದು ಹಣ-31080-00 ರೂ

3) ಮೋಬೈಲುಗಳು-10


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ 15/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ 02.09.2020 ರಂದು 9.00 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಭಾಗಮ್ಮ ಗಂಡ ಸಾಹೇಬಗೌಡ ಮಳ್ಳಿ ಸಾ|| ಹೆಗ್ಗಣದೊಡ್ಡಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನನಗೆ ಒಬ್ಬ ಹೆಣ್ಣುಮಗಳು ಹಾಗೂ ಇಬ್ಬರು ಗಂಡುಮಕ್ಕಳಿರುತ್ತಾರೆ. ಹೆಣ್ಣುಮಗಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಹಿರಿಯ ಮಗನಾದ ಬಸವರಾಜ ಈತನು ಸುಮಾರು ದಿನಗಳಿಂದ ಪೂನಾದಲ್ಲಿ ಕೂಲಿ ಕೆಲಸ ಮಾಡಿಕೊಂಡು ಇರುತ್ತಾನೆ. ಕಿರಿಯ ಮಗನಾದ ವಿಶ್ವನಾಥ ಈತನು ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು ಇರುತ್ತದೆ. ನನ್ನ ಗಂಡನಾದ ಸಾಹೇಬಗೌಡ ತಂದೆ ಬಸಣ್ಣ ಮಳ್ಳಿ ವಯಾ|| 52 ಜಾ|| ಹಿಂದೂ ಗಾಣಿಗ ಉ|| ಒಕ್ಕಲುತನ ಇವರ ಹೆಸರಿನಲ್ಲಿ ಮಾಲಗತ್ತಿ ಸೀಮಾಂತರದಲ್ಲಿ ಹೊಲ ಸವರ್ೇ ನಂ. 310 ರಲ್ಲಿ 5.12 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ಹೋದ ವರ್ಷ ಕಬ್ಬಿನ ಬೆಳೆ ಮಾಡಿದ್ದು, ಸದರಿ ಬೆಳೆ ಸಲುವಾಗಿ ಕನರ್ಾಟಕ ಬ್ಯಾಂಕ ಸುರಪುರದಲ್ಲಿ 2,12,000/- ರೂ.ಗಳು ಹಾಗೂ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಮಾಲಗತ್ತಿಯಲ್ಲಿ 30,000/- ರೂ ಹಾಗೂ ಕೈಗಡವಾಗಿ 5 ಲಕ್ಷ ಹೀಗೆ ಸಾಲ ಮಾಡಿಕೊಂಡು ಹೋದ ವರ್ಷ ಸರಿಯಾಗಿ ಬೆಳೆ ಬಾರದೇ ಸಾಲ ಹಾಗೇ ಉಳಿದಿತ್ತು. ಕಾರಣ ನನ್ನ ಗಂಡನು ಸದರಿ ಸಾಲದಿಂದ ಬಳಲಿ ಮಾನಸಿಕವಾಗಿ ನೊಂದು ಸಾಲ ಹೇಗೆ ತೀರಿಸುವದು ಅಂತ ಚಿಂತೆ ಮಾಡುತ್ತಾ ಕುಳಿತುಕೊಳ್ಳುತ್ತಿದ್ದನು. ಹೀಗಿದ್ದು ನಿನ್ನೆ ದಿನಾಂಕ: 01/09/2020 ರಂದು ನಾನು ನನ್ನ ಕೆಲಸದ ನಿಮಿತ್ಯ ಚಿಂಚೊಳಿ ಗ್ರಾಮಕ್ಕೆ ಹೋಗಿದ್ದು ಮನೆಯಲ್ಲಿ ನನ್ನ ಗಂಡ ಒಬ್ಬನೆ ಇದ್ದನು. ಹೀಗಿರುತ್ತಾ ಇಂದು ದಿ: 02/09/2020 ರಂದು ಬೆಳಿಗ್ಗೆ 6 ಗಂಟೆಗೆ ನಮ್ಮ ಸಂಬಂದಿ ಶರಣಪ್ಪ ವಡಗೇರ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನನ್ನ ಗಂಡನು ನಿನ್ನೆ ದಿ: 01/09/2020 ರಂದು ರಾತ್ರಿ 11 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತ ತಿಳಿಸಿದಾಗ ಕೂಡಲೆ ನಾನು ಮನೆಗೆ ಬಂದು ನೋಡಲು ನನ್ನ ಗಂಡನು ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ನನ್ನ ಗಂಡ ಕೃಷಿ ಚಟುವಟಿಕೆ ಸಲುವಾಗಿ ಕನರ್ಾಟಕ ಬ್ಯಾಂಕ ಸುರಪುರದಲ್ಲಿ 2,12,000/- ರೂ.ಗಳು ಹಾಗೂ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಮಾಲಗತ್ತಿಯಲ್ಲಿ 30,000/- ರೂ ಹಾಗೂ ಕೈಗಡವಾಗಿ 5 ಲಕ್ಷ ಹೀಗೆ ಸಾಲ ಮಾಡಿಕೊಂಡು ಸದರಿ ಸಾಲ ಹೇಗೆ ತೀರಿಸುವದು ಅಂತ ಮಾನಸಿಕವಾಗಿ ನೊಂದು ನೇಣು ಹಾಕಿಕೊಂಡು ಮೃತಪಟ್ಟಿದ್ದು ಕಾರಣ ತಾವು ಬಂದು ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂಬರ 15/2020 ಕಲಂ 174 ಸಿಆರ್ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 104/2020 ಕಲಂ 323,504,506,498(ಎ) ಐಪಿಸಿ : ಫಿಯರ್ಾದಿಯು ಈಗ ಸುಮಾರು 2 ವರ್ಷಗಳ ಹಿಂದೆ ಆರೋಪಿತನೊಂದಿಗೆ ಮದುವೆಯಾಗಿದ್ದು 1 ವರ್ಷದಿಂದ ಆರೋಪಿತನು ಫಿಯರ್ಾದಿಗೆ ನೀನು ಸರಿಯಾಗಿಲ್ಲಾ, ನೀನು ಕಪ್ಪಗಿದ್ದೀ, ನಿನಗೆ ಸರಿಯಾಗಿ ಕೆಲಸ ಮಾಡಲು ಬರುವದಿಲ್ಲ ಅಂತ ಮಾನಸಿಕವಾಗಿ ಕಿರುಕುಳ ನೀಡುತ್ತ ಬಂದಿದ್ದು ದಿನಾಂಕ:01/09/2020 ರಂದು 4 ಪಿ.ಎಮ್. ಸುಮಾರಿಗೆ ಫಿಯರ್ಾದಿಯ ತವರು ಮನೆಯವರು ಬಂದು ಆರೋಪಿತನಿಗೆ ಬುದ್ದಿವಾದ ಹೇಳುತ್ತಿರುವಾಗ ಆರೋಪಿತನು ಫಿಯರ್ಾದಿಗೆ ಎಲೇ ಭೋಸಡಿ, ಸೂಳಿ ನಿಮ್ಮ ಮನೆಯವರಿಗೆ ಕರೆಸಿ ನನಗೆ ಬೈಯ್ಯಿಸುತ್ತಿದ್ದೀಯಾ ಅಂತಾ ಬೈದು ಕೈಯಿಂದ ಹೊಡೆಬಡೆ ಮಾಡಿ ಕೈಹಿಡಿದು ಎಳೆದುಕೊಂಡು ಹೋಗಿ ಮನೆಯಿಂದ ಹೊರಗೆ ದಬ್ಬಿ, ನಿಮ್ಮ ಮಗಳಿಗೆ ನಿಮ್ಮ ಮನೆಗೆ ಕರೆದುಕೊಂಡು ಹೋಗ್ರಿ ಈ ರಂಡಿ ಇಲ್ಲಿ ನಮ್ಮ ಮನೆಯಲ್ಲಿ ಇರುವುದು ಬೇಡ ಅಂತಾ ಮನೆಯಿಂದ ಹೊರಗೆ ಹಾಕಿರುತ್ತಾನೆ. ಇನ್ನೊಮ್ಮೆ ನಮ್ಮ ಮನೆಯ ಹತ್ತಿರ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಖಲಾಸ್ ಮಾಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 105/2020 ಕಲಂ 323,504,506,498(ಎ) ಸಂ 34 ಐಪಿಸಿ : ಫಿಯರ್ಾದಿ 5 ವರ್ಷಗಳ ಹಿಂದೆ ಆರೋಪಿ ಮಾಳಪ್ಪ ಈತನೊಂದಿಗೆ ಮದುವೆಯಾಗಿದ್ದು 1 ವರ್ಷದಿಂದ ಆರೋಪಿತರು ದಿನಾಲು ಫಿಯರ್ಾದಿಗೆ ನೀನು ಸರಿಯಾಗಿಲ್ಲಾ ನಿನಗೆ ಸರಿಯಾಗಿ ಕೆಲಸ ಮಾಡಲು ಬರುವದಿಲ್ಲ, ಅಡುಗೆ ಮಾಡಲು ಬರುವದಿಲ್ಲ, ನೀನು ಹುಚ್ಚಿಯ ಹಾಗೆ ಇದ್ದೀ ಅಂತ ಮಾನಸಿಕವಾಗಿ ಕಿರುಕುಳ ನೀಡುತ್ತ ಬಂದಿದ್ದು 3 ತಿಂಗಳ ಹಿಂದೆ ಆರೋಪಿತರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಮನೆಯಿಂದ ಹೊರಗೆ ಹಾಕಿದ್ದರಿಂದ ತವರು ಮನೆಗೆ ಬಂದಿರುತ್ತಾಳೆ.ಇಂದು ದಿನಾಂಕ:02/09/2020 ರಂದು 9 ಎ.ಎಮ್. ಸುಮಾರಿಗೆ ಫಿಯರ್ಾದಿ ಮತ್ತು ತವರು ಮನೆಯವರು ಕೂಡಿ ಆರೋಪಿತರ ಮನೆಗೆ ಹೋದಾಗ ನಿಮ್ಮ ಮಗಳಿಗೆ ನಿಮ್ಮ ಮನೆಗೆ ಕರೆದುಕೊಂಡು ಹೋಗ್ರಿ ಈ ರಂಡಿ ಇಲ್ಲಿ ನಮ್ಮ ಮನೆಯಲ್ಲಿ ಇರುವುದು ಬೇಡ ನಮ್ಮ ಮಗನಿಗೆ ನಾವು ಬೇರೆ ಮದುವೆ ಮಾಡುತ್ತೇವೆ ಅಂತಾ ಬೈದು ಕೈಯ್ಯಿಂದ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿ ಇನ್ನೊಮ್ಮೆ ನಮ್ಮ ಮನೆಯ ಹತ್ತಿರ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲಾ, ಖಲಾಸ್ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ ಬಗ್ಗೆ.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 106/2020 ಕಲಂ 279, 337, 338 ಐಪಿಸಿ ಸಂಗಡ 187 ಐ.ಎಮ್. ಎಕ್ಟ್ : ದಿನಾಂಕ:01/09/2020 ರಂದು 10.15 ಪಿ.ಎಮ್ ಸುಮಾರಿಗೆ ಶಹಾಪುರ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಮುಡಬೂಳ ಕ್ರಾಸ್ ಹತ್ತಿರ ಫಿಯರ್ಾದಿಯು ಆರೋಪಿತನ ಮೋಟರ್ ಸೈಕಲ್ ಮೇಲೆ ಕುಳಿತು ಕಲಬುರಗಿ ಕಡೆಗೆ ಹೊರಟಾಗ ಅವರ ಮುಂದುಗಡೆ ಆರೋಪಿತನ ಟಿಪ್ಪರ್ ಹೊರಟಿದ್ದು ಟಿಪ್ಪರ್ ಚಾಲಕನು ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ಯಾವುದೇ ಸಿಗ್ನಲ್ ಕೊಡದೇ ಒಮ್ಮೆಲೆ ಬ್ರೆಕ್ ಹೊಡೆದು ನಿಲ್ಲಿಸಿದ್ದರಿಂದ ಅದರ ಹಿಂದೆ ಮೋಟರ್ ಸೈಕಲ್ ಚಾಲಕ ರಮೇಶ ಈತನು ಸಹ ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಟಿಪ್ಪರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಸದರಿ ಅಪಘಾತದಲ್ಲಿ ಫಿಯರ್ಾದಿಯ ಎಡ ಹುಬ್ಬಿಗೆ ರಕ್ತಗಾಯವಾಗಿದ್ದು, ಆರೊಪಿ ರಮೇಶ ಈತನ ಬಾಯಿಗೆ, ಎಡ ಹುಬ್ಬಿನ ಮೆಲೆ ಹಣೆಗೆ, ಬಲ ಹುಬ್ಬಿನ ಮೇಲೆ ಹಣೆಗೆ, ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ. ಟಿಪ್ಪರ ಚಾಲಕನು ಟಿಪ್ಪರ ಬಿಟ್ಟು ಓಡಿ ಹೋಗಿದ್ದು ಸದರಿ ಅಪಘಾತಕ್ಕೆ ಎರಡೂ ಚಾಲಕರು ಕಾರಣರಿದ್ದು ಕಾನೂನು ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.



ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 63/2020  ಕಲಂ: 87 ಕೆ.ಪಿ ಯಾಕ್ಟ್ : ದಿನಾಂಕ: 02/09/2020 ರಂದು 2:30 ಪಿ .ಎಂ. ಕ್ಕೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ  ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಫನ ಪತ್ರ ನೀಡಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ: 02/09/2020 ರಂದು 11:00  ಎ.ಎಂ ಕ್ಕೆ ಠಾಣೆಯಲ್ಲಿದ್ದಾಗ ಜೊಗಂಡಬಾವಿ ಗ್ರಾಮದಲ್ಲಿನ ಶ್ರೀ ಹನುಮಾನ ದೇವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಿ ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ನೀಡುವಂತೆ ಪತ್ರ ಬರೆದು ವಿನಂತಿಸಿಕೊಂಡಿದ್ದು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರು ಸದರಿ ಇಸ್ಪೀಟ್ ಜೂಜಾಟ ಆಡುವವರ ಮೇಲೆ  ಪ್ರಕರಣ ದಾಖಲಿಸಿ ದಾಳಿಮಾಡಲು ಪರವಾನಿಗೆ ನೀಡಿದ್ದು ಕಾರಣ ನಿಮಗೆ ಎಪ್ ಐ ಆರ್ ದಾಖಲಿಸಲು ಸೂಚಿಸಿಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 63/2020 ಕಲಂ 87 ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.    ನಂತರ ಮಾನ್ಯ ಪಿ.ಎಸ್.ಐ ಸಾಹೇಬರು 5:30 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 3 ಜನ ಆರೋಪಿತರು ನಗದು ಹಣ 3500/- ರೂ, 52 ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ  ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. 

ಸಿಕ್ಕ ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 

1) ಸಂಗಪ್ಪ ತಂದೆ ದ್ಯಾಮಣ್ಣ ಗಡ್ಡಿ ವ:33 ವರ್ಷ ಉ:ಕುರಿಕಾಯುವದು ಜಾ:ಕುರಬರ ಸಾ:ಜೊಗಂಡಬಾವಿ 

2) ರಾಯಪ್ಪ ತಂದೆ ಯಲ್ಲಪ್ಪ ಗಡ್ಡಿ ವ:30 ವರ್ಷ ಉ:ಕುರಿಕಾಯುವದ ಜಾ:ಕುರಬರ ಸಾ:ಜೊಗಂಡಬಾವಿ 3) ಗೌಡಪ್ಪ ತಂದೆ ಪೀರಪ್ಪ ಚವನಬಾವಿ ವ:35 ವರ್ಷ ಉ:ಕುರಿಕಾಯುವದು ಜಾ:ಕುರಬರ ಸಾ:ಜೊಗಂಡಬಾವಿ

ಓಡಿಹೋದವರ ಹೆಸರು

1) ಮಂಜುನಾಥ ತಂದೆ ಮುದಕಪ್ಪ ಕುಂಬಾರ 

2) ಮಲ್ಲಕಾಜರ್ುನ ತಂದೆ ನಾಗಯ್ಯ ಹಿರೇಮಠ 

3) ಬಸವರಾಜ ತಂದೆ ಚಿನ್ನಪ್ಪ ಕುಂಬಾರ ಸಾ: ಎಲ್ಲರೂ ಜೊಗಂಡಬಾವಿ


      

ಸುರಪೂರ  ಪೊಲೀಸ ಠಾಣೆ ಗುನ್ನೆ ನಂ:- 195/2020 ಕಲಂ: 143,147,148,323,324,504,506 ಸಂಗಡ 149 ಐ.ಪಿ.ಸಿ : ಇಂದು ದಿನಾಂಕಃ 02/09/2020 ರಂದು 8-15 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀ ಪ್ರಕಾಶ ಇವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ ನಾನು ಮತ್ತು ನಾಗರಾಜ ತಂದೆ ಕಾಮಣ್ಣ ಬಿಸನಾಳ ಇಬ್ಬರೂ ಕೂಡಿ ಸುರಪೂರ ತಹಶೀಲ ಕಾಯರ್ಾಲಯದ ಕಡೆಗೆ ಹೋಗಿ ಅಲ್ಲಿಂದ ಮರಳಿ ಡೊಣ್ಣಿಗೇರಾ ಕಡೆಗೆ ಬರುತ್ತಿರುವಾಗ 10-15 ಎ.ಎಮ್ ಸುಮಾರಿಗೆ ಹಳೆ ಬಸ್ ನಿಲ್ದಾಣದ ಹತ್ತಿರ ರಸ್ತೆಯ ನಮಗೆ ಪರಿಚಯವಿರುವ ನಮ್ಮ ಜನಾಂಗದ 1) ಆಂಜನೇಯ ತಂದೆ ನಾಗಪ್ಪ ಪ್ಯಾಪ್ಲಿ 2) ವಿರೇಶ ತಂದೆ ಗೋಪಾಲ ಪ್ಯಾಪ್ಲಿ, 3) ರವಿಕುಮಾರ ತಂದೆ ಗಂಗಾಧರ 4) ರಾಮು ತಂದೆ ನಾಗಪ್ಪ ಪ್ಯಾಪ್ಲಿ 5) ಬಾಲರಾಜ ತಂದೆ ಮಲ್ಲಪ್ಪ 6) ನಾಗಪ್ಪ ತಂದೆ ರಾಮಣ್ಣ ಎಲ್ಲರೂ ಸಾ: ಬಿಚ್ಚಗಿತ್ತಕೇರಿ ಸುರಪೂರ ಇವರೆಲ್ಲರೂ ಅಕ್ರಮಕೂಟ ಕೂಡಿಕೊಂಡು ನಮ್ಮಿಬ್ಬರಿಗೆ ತಡೆದು ನಿಲ್ಲಿಸಿ ಅವರಲ್ಲಿ ಆಂಜನೇಯ ಇತನು ಏನಲೇ ಮಕ್ಕಳೇ, ಇಷ್ಟು ದಿವಸ ನನ್ನ ಜೊತೆ ತಿರುಗಾಡುತ್ತಿದ್ದವರು ಈಗ ನನ್ನ ಸಂಗಡ ಬಿಟ್ಟು ನನ್ನ ಜೊತೆ ವೈಮನಸ್ಸು ಹೊಂದಿರುವ ಮಂಜುನಾಥ ಕೊಂಡಾಡಿ ಜೊತೆ ತಿರುಗಾಡುತ್ತೀರಿ, ಎಷ್ಟು ಸೊಕ್ಕು ನಿಮಗೆ ಅಂತ ಹೇಳಿದಾಗ ನಾನು ಆತನಿಗೆ ನಮಗೆ ಅವನು ಬೇಕು, ನೀವು ಬೇಕು, ನೀವು ವೈಮನಸ್ಸು ಬೆಳೆಸಿಕೊಂಡರೇ, ನಾವ್ಯಾಕೆ ಆತನ ಹಿಂದೆ ತಿರುಗಾಡಬಾರದು ಅಂತ ಹೇಳಿದ್ದಕ್ಕೆ ಅವರೆಲ್ಲರೂ ಕೂಡಿ ನಮ್ಮಿಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಕೈಯಿಂದ ಹಾಗು ಬಡಿಗೆಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 195/2020 ಕಲಂ. 143,147,148,323,324,504,506 ಸಂಗಡ 149 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು. 

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!