ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/09/2020

By blogger on ಭಾನುವಾರ, ಸೆಪ್ಟೆಂಬರ್ 6, 2020
                                    ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/09/2020 
                                                                                                                                
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 95/2020  143,147, 148, 341, 323, 324, 307, 504, 506 ಸಂ: 149 : ಇಂದು ದಿನಾಂಕ: 01/09/2020 ರಂದು 03.40 ಪಿಎಂ ಕ್ಕೆ ಅಜರ್ಿದಾರ ಶ್ರೀ. ಅಂಬರೇಶ ತಂದೆ ನಿಂಗಣ್ಣ ವಯಾ:28 ವರ್ಷ ಉ: ಡ್ರೈವರ ಜಾ: ಬೇಡರ ಸಾ: ಚಂದಾಪೂರ ತಾ: ಶಹಾಪೂರ ಜೀ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿ ನೀಡಿದ್ದು, ಅದರ ಸಾರಂಶ ಏನಂದರೆ, ನಮ್ಮ ಚಿಕ್ಕಪ್ಪನಾದ ಭೀಮಣ್ಣ ತಂದೆ ಕೃಷ್ಣಪ್ಪ ಗುಡ್ಡಾಕಾಯಿ ಸಾ: ಚಂದಾಪೂರ ಈತನು ಆಗಾಗ ನಮ್ಮ ಸಂಗಡ ವಿನಾಃ ಕಾರಣ ಜಗಳ ಮಾಡುತ್ತಾ ಬಂದಿದ್ದರು, ಹೀಗಿದ್ದು, ದಿನಾಂಕ:30/08/2020 ರಂದು ನಾನು ಮತ್ತು ನನ್ನ ಗೆಳೆಯ ಪರಶುರಾಮ ತಂದೆ ಕರಿಬಸ್ಸಪ್ಪ ಇಬ್ಬರು ಸೇರಿಕೊಂಡು ಶೆಟ್ಟಿಕೇರಿ ಕಡೆಯಿಂದ ವನದುಗರ್ಾ ಗ್ರಾಮದಲ್ಲಿನ ಮಾಕರ್ೇಟ ರೋಡಿನಲ್ಲಿ ಬರುತ್ತಿದ್ದಾಗ ಸಮಯ 05.30 ಪಿಎಂ ಸುಮಾರಿಗೆ ನಮ್ಮ ಚಿಕ್ಕಪ್ಪನಾದ 1) ಭೀಮಣ್ಣ ತಂದೆ ಕೃಷ್ಣಪ್ಪ ಗುಡ್ಡಾಕಾಯಿ ಮತ್ತು ಆತನ ಸಂಬಂದಿಕಾರದ 2) ಗುರುರಾಜ ತಂದೆ ತಿರುಪತಿ ಗುಡ್ಡಕಾಯಿ ಸಾ: ವನದುಗರ್ಾ, 3) ಹಣಮಂತ್ರಾಯ ತಂದೆ ಸಕ್ರೆಪ್ಪ ಮಾಚಗುಂಡಾಳ ದೊಡ್ಡಿ, 4) ದೇವರಾಜ ತಂದೆ ರಾಮಣ್ಣ ಮಾಚಗುಂಡಾಳ ದೊಡ್ಡಿ, 5) ಸೀತಪ್ಪ ತಂದೆ ಯಲ್ಲಪ್ಪ ಒಂಟೂರ 6) ಹಣಮಂತ್ರಾಯ ತಂದೆ ಮಾಹಾದೇವಪ್ಪ ಕಾಶಿರಾಜ 7) ಪ್ರಭು ತಂದೆ ಮಾನಯ್ಯ ಕಾಶಿರಾಜ 8) ವೆಂಕಟೇಶ ತಂದೆ ಯಲ್ಲಪ್ಪ ಅರೆದಗಡ್ಡಿ 9) ವೆಂಕಟೇಶ ತಂದೆ ರಾಜಕುಮಾರ ಯಂಗನಪಲ್ಲಿ 10) ವಂಚಯ್ಯ ಯಲ್ಲಪ್ಪ ಒಂಟೂರ ಸಾ: ಎಲ್ಲರೂ ವನದುಗರ್ಾ, ಇವರುಗಳು ಎಲ್ಲರೂ ಸೇರಿ ನನಗೆ ಕೋಲೆ ಮಾಡು ಉದ್ದೇಶದಿಂದ ಕಲ್ಲು ಬಡಿಗೆ ಮತ್ತು ರಾಡುಗಳನ್ನು ಹಿಡಿದುಕೊಂಡು ಬಂದು ನನ್ನ ಮೇಲೆ ಹಲ್ಲೆ ಮಾಡಲು ಬಂದ, ನಮ್ಮ ಚಿಕ್ಕಪ್ಪ ಭೀಮಣ್ಣ ಈತನು ಇದೆ ಸೂಳೆ ಮಗನೆ ನನಗೆ ಎದರು ಆಗಿದ್ದಾನೆ ಅಂತಾ ತೋರಿಸಿ ಈ ಸೂಳೆ ಮಗನಿಗೆ ಹೋಡಿರಿ ಅಂತಾ ಹೇಳಿ, ಭೀಮಣ್ಣನು ನನ್ನ ಕಪಾಳಕ್ಕೆ ಕೈಯಿಂದ ಹೊಡೆದನು, ಆಗ ಗುರುರಾಜ ಈತನು ಒಂದು ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತ ಪೆಟ್ಟು ಮಾಡಿದನು, ಹಣಮಂತ್ರಾಯ ತಂದೆ ಸಕ್ರೆಪ್ಪ ಈತನು ನನಗೆ ಕೋಲೆ ಮಾಡುವ ಉದ್ದೇಶದಿಂದ ಒಂದು ರಾಡಿನಿಂದ ನನ್ನ ತೆಲೆಗೆ ಬಲವಾಗಿ ಹೊಡೆದಾಗ ನಾನು ತಪ್ಪಿಸಿಕೊಂಡಿದ್ದು ರಾಡಿನ ಏಟು ನನ್ನ ಎಡಗಡೆಯ ತೋಳಿಗೆ ಮುಂಗೈಗೆ ಬಲವಾಗಿ ಬಿದ್ದು ಗುಪ್ತಗಾಯ ಆಗಿರುತ್ತದೆ, ಆಗ ವೆಂಕಟೇಶ ಯಂಗನಪಲ್ಲಿ ಈತನು ಒಂದು ಕಲ್ಲಿನಿಂದ ನನ್ನ ತೊಡೆ ಸಂದಿಗೆ ಹೊಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ. ಉಳಿದವರು ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದ್ದಿರುತ್ತಾರೆ, ಆಗ ನಾನು ಕೆಳಗೆ ಬಿದ್ದಿದ್ದು, ಓಡಿ ಹೋಗಬೇಕು ಅನ್ನುವಷ್ಟರಲ್ಲಿ ಮತ್ತೆ ನನಗೆ ಎಲ್ಲರೂ ಅಡ್ಡ ಗಟ್ಟಿ ತಡೆದು ನಿಲ್ಲಿಸಿ, ಕೈಯಿಂದ ಹೊೆಡೆಯುತ್ತಿದ್ದಾಗ ನನ್ನ ಜೋತೆಗೆ ಬಂದಿದ್ದ 1) ಪರಶುರಾಮ ತಂದೆ ಕರಿಬಸಪ್ಪ ಚಂದಾಪೂರ, 2) ಚಂದಣ್ಣ ತಂದೆ ಅಚ್ಚಪ್ಪಗೌಡ ಸಾ: ವನದುಗರ್ಾ 3) ಶಿವರಾಜ ತಂದೆ ಚಂದಪ್ಪ ಸಾ: ವನದುಗರ್ಾ ಇವರುಗಳು ಬಿಡಿಸಿಕೊಂಡರು, ಆಗ ಮೇಲಿನವರೆಲ್ಲರೂ ಇವತ್ತು ಉಳದಿದಿ ಮಗನೆ, ನಿಮ್ಮ ಚಿಕ್ಕಪ್ಪನ ಎದರು ಹಾಕಿಕೊಂಡರೆ, ನಿನಗೆ ಖಲಾಸ್ ಮಾಡಿ ಕೆನಾಲಕ್ಕೆ ಹಾಕುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ, ಮತ್ತು ಈ ವಿಷಯ ಯಾರಿಗಾದರು ಹೇಳಿದರೆ, ಕೇಸ್ ಏನಾದರೂ ಮಾಡಿದರೆ, ನಿನಗೆ ಜೀವಂತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಕಾರಣ ನಾನು ವಿಚಾರ ಮಾಡಿ ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು ತಡವಾಗಿ ಇಂದು ದಿನಾಂಕ:01/09/2020 ರಂದು ಠಾಣೆಗೆ ಬಂದು ಈ ದೂರು ಅಜರ್ಿಯನ್ನು ನೀಡಿರುತ್ತೇನೆ. ಆದ್ದರಿಂದ ನನಗೆ ರಾಡಿನಿಂದ ಹೊಡೆದು ಕೋಲೆ ಮಾಡಲು ಪ್ರಯತ್ನಿಸಿ ಅವಾಚ್ಯವಾಗಿ ಬೈಯ್ದು ಬಡಿಗೆಯಿಂದ ಕಲ್ಲಿನಿಂದ, ಮತ್ತು ಕೈಯಿಂದ ಹೊಡೆದು ಕಾಲಿನಿಂದ ಒದ್ದು, ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ ಮೇಲಿನ 10 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 95/2020 ಕಲಂ, 143,147, 148, 341, 323, 324, 307, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 110/2020, ಕಲಂ, 143,147,148,323.324,354,504.506. ಸಂಗಡ 149 ಐ ಪಿ ಸಿ  : ದಿನಾಂಕ: 01-09-2020 ಸಾಯಂಕಾಲ 04-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ಪಿಯರ್ಾಧಿ ಮತ್ತು ಗಾಯಾಳುಗಳು  ಮೊಹರಂ ಹಬ್ಬದ ಧಪನ್ ಕಾರ್ಯಕ್ರಮ ಇರುವದರಿಂದ ಊರಿನವರೂ ಕೂಡಿ ಅಲೈ ಆಡುತ್ತ  ಆರೋಪಿತರ ಮನೆಯ ಮುಂದೆ ರೋಡಿನ ಮಏಲೆ ಹೋಗುತ್ತಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಕೈಯಲ್ಲಿ ಕಟ್ಟಿಗೆಯ ಬಡಿಗೆಗಳನ್ನು ಮತ್ತು ಹಿಡಿ ಗಾತ್ರ ಕಲ್ಲನ್ನು ಹಿಡಿದುಕೊಂಡು ಲೇ ಸೂಳೆ ಮಕ್ಕಳೆ ಇಲ್ಲಿ ಯಾಕೆ ಅಲೈ ಆಡುತ್ತಿರಲರ ಸೂಳೆ ಮಕ್ಕಳೆ ನಿಮ್ಮದು ಸೋಕ್ಕು ಆದ ಮಕ್ಕಳೆ ಅಂತಾ ಬೈದು ಕಟ್ಟಿಗೆಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿ ಕೈಯಿಂದ ಮನ ಬಂದಂತೆ ಮೈಗೆ ಗುದ್ದಿ ಗುಪ್ತ ಪೆಟ್ಟು ಮಾಡಿ ಹೆಣ್ಣುಮಗಳಿಗೆ ಸೀರೆ ಹಿಡಿದು ಎಳದಾಡಿ ಅವಮಾನ ಮಾಡಿ ಊರಲ್ಲಿ ಎನಾದರೂ ಸೊಕ್ಕು ತೋರಿಸಿದರೆ ನಿಮಗೆ ಒಂದು ಜೀವ ಖಲಾಸ ಮಾಡುತ್ತೇವೆೆ ಮಕ್ಕಳೆ ಅಂತಾ  ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 134/2020 ಕಲಂ: 78(3) ಕೆಪಿ ಯಾಕ್ಟ : ದಿನಾಂಕ: 01.09.2020 ರಂದು 10.15 ಎಎಮ್ ಸುಮಾರಿಗೆ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಹದನೂರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 10.25 ಎ.ಎಮ್ ಕ್ಕೆ ಹೊರಟು 10.45 ಎ.ಎಮ್ ಕ್ಕೆ ಹದನೂರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 10.50 ಎಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಮಾಳಪ್ಪ ತಂದೆ ನಾಗಪ್ಪ ಪೂಜಾರಿ ವ|| 28 ಜಾ|| ಹಿಂದೂ ಕುರುಬ ಉ|| ಕೂಲಿ ಕೆಲಸ ಸಾ|| ಹದನೂರ ತಾ||ಸುರಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1650/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 10.50 ಎ.ಎಮ್ ದಿಂದ 11.50 ಎ.ಎಮ್ದವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 12.15 ಪಿಎಮ್ ಕ್ಕೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು ಸದರ ವರಧಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 02.15 ಪಿ ಎಮ್  ಕ್ಕೆೆ ಠಾಣೆ ಗುನ್ನೆ ನಂ 134/2020 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿದ್ದು ಇರುತ್ತದೆ.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 24/2020 ಕಲಂ. 174 ಸಿಆರ್.ಪಿಸಿ : ಇಂದು ದಿನಾಂಕ 31-08-2020 ರಂದು ಸಾಯಂಕಾಲ 7-00 ಗಂಟೆಗೆ ಜಿಲ್ಲಾ ಸಾರ್ವಜನಿಕ ಸರಕಾರಿ ಆಸ್ಪತ್ರೆ, ಕಲಬುರಗಿಯಿಂದ ಡೆತ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಶ್ರೀ ರಾಜೇಂದ್ರ ಎ.ಎಸ್.ಐ ರವರು ಸದರಿ ಆಸ್ಪತ್ರೆಗೆ ಭೇಟಿ ನೀಡಿ  ಫಿಯರ್ಾದಿ ಹೇಳಿಕೆ ಪಡೆದು  ಶ್ರೀ ಮಹ್ಮದ ಷರೀಫ ಪಿಸಿ- 226 ರವರ ಸಂಗಡ ಠಾಣೆಗೆ ಕಳಿಸಿದ್ದು ಸಾರಾಂಶವೇನೆಂದರೆ, ಫಿಯರ್ಾದಿಯ ಗಂಡ ಮೃತ ಸಿದ್ದಲಿಂಗಪ್ಪ ಈತನು ಸಂಸಾರದ ಅಡಚಣೆಗಾಗಿ, ತನಗೆ ಹತ್ತಿರದ ಪರಿಚಯದವರ ಬಳಿ 4-5 ಲಕ್ಷ ರೂ. ಕೈಗಡ ಸಾಲ ಮಾಡಿದ್ದು, ತಾನು ಮಾಡಿದ ಕೈಗಡ ಸಾಲ ತೀರಿಸಲಾಗದೆ ಹೆಂಡತಿಯ ತವರೂರಾದ ರಾಂಪೂರ ಗ್ರಾಮಕ್ಕೆ ಬಂದು ಅಲ್ಲಿಯೇ 6 ತಿಂಗಳು ಇದ್ದು, ದಿನಾಂಕ 26-08-2020 ರಂದು 7-30 ಪಿ.ಎಮ್.ಕ್ಕೆ ರಾಂಪೂರ ಬಸ್ಟ್ಯಾಂಡ ಹತ್ತಿರ ವಿಷ ಸೇವನೆ ಮಾಡಿ ಬಸ್ಟ್ಯಾಂಡ ಬಳಿ ಬಿದ್ದು ಒದ್ದಾಡುತ್ತಿದ್ದಾಗ ಅದನ್ನು ನೋಡಿದ ಜನರು ಫಿಯರ್ಾದಿಗೆ ವಿಷಯ ತಿಳಿಸಿದ್ದು, ಹೋಗಿ ನೋಡಿ ವಿಚಾರಿಸಿದಾಗ ತನಗೆ ಸಾಲಯಿದ್ದು ತಾನು ಸಾಯಬೇಕು ಅಂತ ವಿಷಸೇವನೆ ಮಾಡಿದ್ದಾಗಿ ಹೇಳಿದ್ದು ಬಾಯಿಯಿಂದ ವಾಂತಿಯಾಗಿ, ವಿಷ ಸೇವನೆ ಮಾಡಿದ ವಾಸನೆ ಬಂದಿದ್ದು, ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಒಯ್ದು ದಾಖಲು ಮಾಡಿದ್ದು, ಉಪಚಾರ ಪಡೆಯುತ್ತಾ ಇಂದು ದಿನಾಂಕ.31-08-2020 ರಂದು ಮಧ್ಯಾಹ್ನ 3-40 ಗಂಟೆಗೆ  ಮೃತಪಟ್ಟಿರುತ್ತಾನೆ. ಸದರಿಯವನ ಸಾವಿನಲ್ಲಿ ಯಾರ ಮೇಲೂ ಯಾವುದೇ ರೀತಿಯ ದೂರು, ಸಂಶಯ ವಗೈರೆ ಇರುವದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶ

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 111/2020 ಕಲಂ 143, 147, 323, 354, 504, 506 ಸಂ 149 ಐಪಿಸಿ : :-ದಿನಾಂಕ 30/08/2020 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಅವರ ಮನೆಯವರೆಲ್ಲರೂ ತಮ್ಮ ಮನೆ ಮುಂದೆ ಮಾತಾಡುತ್ತಾ ಇರುವಾಗ ಆರೋಪಿತನಾದ ಮಲ್ಲಪ್ಪ ತಂದೆ ಮಲ್ಲಪ್ಪ ಗುಡ್ಡೇರ ಇತನು ಏ ಬೋಸಡಿ ಮಕ್ಕಳೇ ನೀವು ನಿಮ್ಮ ಮನೆ ಮುಂದೆ ಕಲ್ಲುಗಳು ಹಾಕಿದಕ್ಕೆ ನಮಗೆ ನಡೆದಾಡಲು ದಾರಿ ಇಲ್ಲಾ, ನೀವು ಕಲ್ಲು ಹಾಕಿದ ಸಲುವಾಗಿ ನಮಗೆ ಬಹಳ ತೊಂದರೆ ಆಗುತ್ತಿದೆ ಕಲ್ಲು ತೆಗಿತಿರಿ ಇಲ್ಲಾ ಬೋಸಡಿ ಮಕ್ಕಳೇ ಅಂತಾ ಅವಾಚ್ಯಾಗಿ ಬೈಯ್ಯುತ್ತಿದ್ದನು, ಆಗ ನಾನು ಯಾಕೆ ಬೈಯ್ಯುತ್ತಿದ್ದಿ ಅಂತಾ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾಧಿಯ ಸೀರೆ ಸೆರಗು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನ ಮಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿರುವ  ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!