ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/08/2020

By blogger on ಸೋಮವಾರ, ಆಗಸ್ಟ್ 31, 2020

 



                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/08/2020 
                                                                                                                                
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 70/2020 ಕಲಂ: 87  ಕೆ.ಪಿ ಆಕ್ಟ್ : ದಿನಾಂಕ: 29.08.2020 ರಂದು 10:00 ಎ.ಎಮ್.ಕ್ಕೆ ಸಕರ್ಾರಿ ತಫರ್ೆಯಾದ ಶ್ರೀ ಬಸನಗೌಡ ಎ.ಎಸ್.ಐ ರವರು ಠಾಣೆಯಲ್ಲಿದ್ದಾಗ ತಮಗೆ ಜುಮಾಲಪೂರ ದೊಡ್ಡತಾಂಡಾದಲ್ಲಿರುವ ಶ್ರೀ ಗುಗ್ಗರಿ ದೇವರ ಗುಡಿಯ ಹಿಂದಿನ ಆವರಣದಲ್ಲಿನ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ನೀಡಿದ ಅನುಮತಿಯನ್ನು ಕಜ್ಜಪ್ಪ ಪಿಸಿ-251 ರವರು ಪಡೆದುಕೊಂಡು ತಂದು ಹಾಜರ ಪಡಿಸಿದ್ದು. ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:70/2020 ಕಲಂ: 87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಬಸನಗೌಡ ಎ.ಎಸ್.ಐ ಸಾಹೇಬರು 3:40 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು 52 ಇಸ್ಪೀಟ್ ಎಲೆಗಳು ಮತ್ತು 25650/- ರೂ ನಗದು ಹಣ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. 
ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ತಿಪ್ಪಣ್ಣ ತಂದೆ ಪೀರಪ್ಪ ರಾಠೋಡ ವ|| 35ವರ್ಷ ಜಾ|| ಹಿಂದೂ ಲಂಬಾಣಿ ಉ|| ಒಕ್ಕಲುತನ 
2) ಚಂದ್ರಕಾಂತ ತಂದೆ ತಿರುಪತಿ ರಾಠೋಡ ವ|| 29ವರ್ಷ ಜಾ|| ಹಿಂದೂ ಲಂಬಾಣಿ ಉ|| ಒಕ್ಕಲುತನ 
3) ಪವನ ತಂದೆ ರಾಮಜಿ ರಾಠೋಡ ವ|| 27ವರ್ಷ ಜಾ|| ಹಿಂದೂ ಲಂಬಾಣಿ ಉ|| ಕೂಲಿ ಕೆಲಸ 
4) ಸೋಮನಾಥ ತಂದೆ ಕಸ್ತೂರೆಪ್ಪ ರಾಠೋಡ ವ|| 35ವರ್ಷ ಜಾ|| ಹಿಂದೂ ಲಂಬಾಣಿ ಉ|| ಕೂಲಿ ಕೆಲಸ 
5) ಗೋವಿಂದ ತಂದೆ ಹರಿಶೇಣ ಚವ್ಹಾಣ ವ|| 30ವರ್ಷ ಜಾ|| ಹಿಂದೂ ಲಂಬಾಣಿ ಉ|| ಕೂಲಿ ಕೆಲಸ 
6) ಗೋವಿಂದ ತಂದೆ ಬದ್ದೆಪ್ಪ ಪವ್ಹಾರ ವ|| 25ವರ್ಷ ಜಾ|| ಹಿಂದೂ ಲಂಬಾಣಿ ಉ|| ಕೂಲಿ ಕೆಲಸ 
ಸಾ|| ಎಲ್ಲಾರೂ ಜುಮಾಲಪೂರ ದೊಡ್ಡತಾಂಡಾ ತಾ|| ಹುಣಸಗಿ ಜಿ|| ಯಾದಗಿರ


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 71/2020 ಕಲಂ: 498(ಎ) 323 504 506 ಸಂ 34 ಐಪಿಸಿ : ಪಿಯರ್ಾದಿಗೆ ರಮೇಶ ತಂದೆ ಬೂದಪ್ಪ ರಾಠೋಡ ಸಾ|| ರೇವುನಾಯಕ ತಾಂಡಾ ಇವರೊಂದಿಗೆ ಮೂರು ವರ್ಷಗಳ ಹಿಂದೆ ರೇವುನಾಯಕ ತಾಂಡಾದಲ್ಲಿ ಮದುವೆ ಆಗಿದ್ದು ಮದುವೆ ಆದ ನಂತರ ಪಿಯರ್ಾದಿಯು ಗಂಡನ ಮನೆಯಲ್ಲಿಯೇ ಗಂಡನಾದ ರಮೇಶ ರಾಠೋಡ, ನಮ್ಮ ಮಾವನಾದ ಬೂದಪ್ಪ ರಾಠೋಡ, ಅತ್ತೆಯಾದ ಶಾಂತಮ್ಮ ರಾಠೋಡ, ನನ್ನ ಗಂಡನ ಅಣ್ಣನಾದ ಉಮೇಶ ರಾಠೋಡ ಇವರೊಂದಿಗೆ ವಾಸವಿದ್ದು ಮದುವೆಯಾದ ಒಂದು ವರ್ಷದವರೆಗೆ ಅವರೆಲ್ಲರೂ ಪಿಯರ್ಾದಿಗೆ ಒಳ್ಳೆಯ ರೀತಿಯಿಂದ ನೋಡಿಕೊಂಡಿದ್ದು ಪಿಯರ್ಾದಿಗೆ ಒಂದು ವರ್ಷವಾದರು ಮಕ್ಕಳು ಆಗದೇ ಇದ್ದುದರಿಂದ ಆರೋಪಿ ರಮೇಶ ರಾಠೋಡನು ಪಿಯರ್ಾದಿಗೆ ಸೂಳಿ ನೀನು ನನಗೆ ಎಷ್ಟುದಿವಸದಿಂದ ಮೂಲ ಆಗಿದಿ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲಾ. ಹೊಲದಲ್ಲಿ ಸಹ ಕೆಲಸ ಮಾಡಲು ಬರುವುದಿಲ್ಲ ಎನಾದರು ಹೇಳಿದರೆ ಎದುರು ವಾದಿಸುತ್ತಿ ಇಲ್ಲಿಯವರೆಗೆ ಮಕ್ಕಳು ಸಹ ಆಗಿರುವುದಿಲ್ಲ ಅಂತ ಪದೇ-ಪದೇ ಬೈಯುವದು ಹೊಡೆಬಡೆ ಮಾಡುತ್ತಾ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು ಅದನ್ನೆಲ್ಲಾ ಪಿಯರ್ಾದಿಯು ತನ್ನ ಸಂಸಾರ ಸರಿ ಆಗುತ್ತದೆ ಅಂತಾ ಸಹಿಸಿಕೊಂಡು ಬಂದಿದ್ದು ಅವರೆಲ್ಲರೂ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ದಿನಾಂಕ:18/08/2020 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ಪಿಯಾದಿಯು ಮನೆಯಲ್ಲಿದ್ದಾಗ ಆರೋಪಿತರು ಪಿಯರ್ಾದಿಗೆ ಲೇ ಸೂಳಿ ನೀನು ಸರಿಯಾಗಿ ಹೊಲ-ಮನೆ ಕೆಲಸ ಮಾಡುವುದಿಲ್ಲ ಇಲ್ಲಿಯವರೆಗೆ ನಿನಗೆ ಮಕ್ಕಳು ಆಗಿರುವುದಿಲ್ಲ ನೀನು ನಮ್ಮ ಮನೆಯಲ್ಲಿ ಇರುವದು ಬೇಡ ನಿನ್ನ ತವರು ಮನೆಗೆ ಹೋಗು ಅಂತಾ ಹೇಳಿ ಕೈಯಿಂದ ಪಿಯರ್ಾದಿಗೆ ಮೈ-ಕೈಗೆ ಹೊಡೆ-ಬಡೆ ಮಾಡಿದ್ದು ಪಿಯಾದಿಯು ಮನೆಯಲ್ಲಿನ ಆರೋಪಿತರ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ಬೇಸತ್ತು ಮನೆಯಲ್ಲಿದ್ದ ಕ್ರಿಮಿನಾಷಕ ಔಷದವನ್ನು ಅಂದೇ ಸಾಯಂಕಾಲ 6:00 ಗಂಟೆಯ ಸುಮಾರಿಗೆ ಸೇವನೆ ಮಾಡಿ ಅಸ್ವಸ್ಥಗೊಂಡಾಗ ಸಂಬಂದಿಕರು ವಿಜಯಪೂರ ಬಿಎಲ್ಡಿಈ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕೊಡಿಸಿದ್ದು ತನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಹೊಡೆ-ಬಡೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇರೆಗೆ ಕ್ರಮ ಜರುಗಿಸಿದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 130/2020 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 29/08/2020 ರಂದು 2.45 ಪಿ.ಎಮ್ ಕ್ಕೆ  ಹಣಮಂತಪ್ಪ ಪಿಎಸ್ಐ ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ  ವರದಿ ಸಲ್ಲಿಸಿದೆನೆಂದರೆ ಇಂದು ದಿನಾಂಕ: 29/08/2020 ರಂದು 12.30 ಗಂಟೆಗೆ ಸುಮಾರಿಗೆ ಠಾಣೆಯಲ್ಲಿದ್ದಾಗ ದಮಡಸೊಲ್ಲಾಪೂರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ 1) ಶಿವಲಿಂಗಪ್ಪ ಹೆಚ್ಸಿ-185 2) ಅಣವೀರಪ್ಪ ಪಿಸಿ 212 ಹಾಗೂ ಜೀಪ ಚಾಲಕ 3) ಪೆದ್ದಪ್ಪಗೌಡ ಪಿಸಿ-214 ರವರನ್ನು ಕರೆದು ಸದರಿ ವಿಷಯ ತಿಳಿಸಿ ಅಣವೀರಪ್ಪ ಪಿಸಿ-212 ರವರಿಂದ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ  ವ|| 37 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 47 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ ಕರೆಯಿಸಿ ಅವರಿಗೂ ಸಹ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 12.45 ಪಿ.ಎಮ್ ಕ್ಕೆ ಹೊರಟು 1.00 ಪಿ.ಎಮ್ ಕ್ಕೆ ದಂಡಸೊಲ್ಲಾಪೂರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 1.05 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಸಾಯಬಣ್ಣ ತಂದೆ ನಾಗಪ್ಪ ಹಡಪದ ವ|| 60 ಜಾ|| ನಾಯಿದ್ ಉ|| ಕೂಲಿಕೆಲಸ ಸಾ|| ದಂಡಸೊಲ್ಲಾಪೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1600/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 1.05 ಪಿ.ಎಮ್ ದಿಂದ 2.05 ಪಿ.ಎಮ್ ದವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡೆನು. ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 2.45 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ವರದಿ ನೀಡಿದ್ದು, ಸದರ ವರಧಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 16.30 ಪಿ ಎಮ್ ಕ್ಕೆೆ ಠಾಣೆ ಗುನ್ನೆ ನಂ 130/2020 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 131/2020 ಕಲಂ: 87 ಕೆಪಿ ಆಕ್ಟ: ಇಂದು ದಿನಾಂಕ: 29.08.2020 ರಂದು 16.00 ಘಂಟೆಗೆ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಏವೂರ ಮಡ್ಡಿ ತಾಂಡಾದ ಸೇವಾಲಾಲ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0074 ನೇದ್ದರಲ್ಲಿ ಸದರ ಏವೂರ ಮಡ್ಡಿ ತಾಂಡಾದ ಸೇವಾಲಾಲ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 16.50 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 10 ಜನ ಆರೋಪಿತರು ಸಿಕ್ಕಿದ್ದು  ಮತ್ತು ಒಟ್ಟು 3350/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು & 1 ಬರಕಾ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 18.30 ಪಿ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 20-30  ಪಿಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 131/2020 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!