ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/08/2020

By blogger on ಗುರುವಾರ, ಆಗಸ್ಟ್ 27, 2020






                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/08/2020 

                                                                                                                                

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 09/2020 ಕಲಂ 174 ಸಿಆರ್ಪಿಸಿ : ಮೃತನಿಗೆ ಸುಮಾರು 2-3 ವರ್ಷಗಳಿಂದ ಮಾನಸಿಕ ಅವಸ್ಥನಂತೆ ವರ್ತನೆ  ಮಾಡುತ್ತಿದ್ದು, ಅಲ್ಲದೇ ಫಿರ್ಯಾಧಿಯು ಯಾರ ಸಂಗಡ ಮಾತಾಡಿದರೇ ಅವರ ಮೇಲೆ ಸಂಶಯ ಮಾಡುವುದು ಹಾಗೂ ಅವಳ ಶೀಲ ಶಂಕಿಸಿ ಮನೆಯಲ್ಲಿ  ಅವಳ ಜೋತೆಯಲ್ಲಿ ಜಗಳಾ ಮಾಡಿಕೊಂಡು ಅವಳಿಗೆ ಹೊಡೆ ಬಡಿ ಮಾಡುವುದು ಮಾಡುತ್ತಿದ್ದನು. ಮೃತನಿಗೆ ಅವನ ಸಹೋದರಿಯರು ಬುದ್ದಿವಾದ ಹೇಳಿದರೂ ಅವನು ಅದೇ ರೀತಿಯಾಗಿ ವರ್ತನೆ ಮಾಡುತ್ತಾ ಬಂದಿದ್ದು ಇರುತ್ತದೆ. ಮತ್ತು ಮೃತನಿಗೆ ಸಂಸಾರದ ಅಡಚಣೆಯಿಂದ ಊರಲ್ಲಿ ಖಾಸಗಿ ಸಾಲ ಆಗಿದ್ದು ಈ ಎಲ್ಲಾ ವಿಷಯಗಳನ್ನು ಮೃತನು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಇಂದು ದಿನಾಂಕ 27-08-2020 ರಂದು ತಮ್ಮ ಹೋಲಕ್ಕೆ ಹೋಗಿ ತಮ್ಮ ಹೋಲದಲ್ಲಿಯ ಗಿಡಕ್ಕೆ ಬಟ್ಟೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೂ ಯಾವುದೇ ತರಹದ ಸಂಶಯವಿರುವುದಿಲ್ಲಾ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ: 09/2020 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 19/2020 ಕಲಂ. 174 ಸಿಆರ್ಪಿಸಿ : ಇಂದು ದಿನಾಂಕ:27/08/2020 ರಂದು 6 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರಳಾದ ಶ್ರೀಮತಿ ನೀಲಮ್ಮ ಗಂಡ ಮರೆಪ್ಪ ಮಕಾಶಿ ಸಾ:ಕುಪಗಲ್ ತಾ:ಸುರಪೂರ ಇವರ ಠಾಣೆಗೆ ಹಾಜರಾಗಿ ಪಿಯರ್ಾದಿ ನೀಡಿದ್ದೆನೆಂದರೆ  ನನಗೆ ಸುಮಾರು 13 ವರ್ಷಗಳ ಹಿಂದೆ ಕುಪಗಲ್ ಗ್ರಾಮದ ಮರೆಪ್ಪ ತಂದೆ ರಂಗಪ್ಪ ಮಕಾಶಿ ಎಂಬುವರೊಂದಿಗೆ ಮದುವೆ ಆಗಿದ್ದು. ನಮ್ಮ ದಾಂಪತ್ಯ ಜೀವನಕ್ಕೆ ಎರಡು ಜನ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇರುತ್ತಾರೆ. ಮತ್ತು ನನ್ನ ಗಂಡನ ಅಣ್ಣ ತಮ್ಮಂದಿರು 3 ಜನರಿದ್ದು ನಾವು ಎಲ್ಲರೂ ಬೇರೆ ಬೇರೆ ಮನೆ ಮಾಡಿಕೊಂಡು ಉಪಜೀವಿಸುತ್ತಿದ್ದೇವೆ. ನಮ್ಮ ಮಾವ ತಿರಿಕೊಂಡ ನಂತರ ನಮ್ಮ ಅತ್ತೆಯ ಹೆಸರಿಗೆ ಸವರ್ೆ ನಂ. 48 ರಲ್ಲಿ 8 ಎಕರೆ 20 ಗುಂಟೆ ಮತ್ತು ಸವರ್ೆ ನಂ. 15/1 ರಲ್ಲಿ 2 ಎಕರೆ 02 ಗುಂಟೆ ಜಮೀನು ಇದ್ದು ಸದರಿ ಜಮೀನು ನಾವೆ ಸಾಗುವಳಿ ಮಾಡಿಕೊಂಡು ಉಪಜೀವಿಸುತ್ತಿದ್ದು. ನನ್ನ ಗಂಡ ಕಿರಿಯ ಮಗನಿದ್ದರಿಂದ ನಮ್ಮ ಅತ್ತೆ ಲಚಮಮ್ಮ ಇವಳು ನಮ್ಮೊಂದಿಗೆ ವಾಸವಾಗಿರುತ್ತಾಳೆ. ಸದರಿ ಜಮೀನಿನಲ್ಲಿ ಹತ್ತಿ ಬೆಳೆ ಹಾಕಿರುತ್ತೆವೆ. ಬೀಜ ಗೊಬ್ಬರಕ್ಕೆ ಹಾಗೂ ಸಂಸಾರಕ್ಕಾಗಿ ಊರಿನವರಲ್ಲಿ 4 ಲಕ್ಷ ರೂಪಾಯಿ ಕೈಗಡ ಸಾಲವನ್ನು ನನ್ನ ಗಂಡ ಮಾಡಿರುತ್ತಾನೆ. ಮತ್ತು ಎಸ್.ಬಿ.ಐ ಬ್ಯಾಂಕ್ ರಂಗಂಪೇಟದಲ್ಲಿ ಸವರ್ೆ ನಂ. 48 ಮತ್ತು 15/1 ರಲ್ಲಿ ಹೊಲದ ಮೇಲೆ ಬೆಳೆ ಸಾಲ 1 ಲಕ್ಷ 17 ಸಾವಿರ ರೂಪಾಯಿ ಮಾಡಿರುತ್ತಾನೆ. ಸುಮಾರು 4-5 ವರ್ಷಗಳಿಂದ ಮಳೆ ಸರಿಯಾಗಿ ಬರದ ಕಾರಣ ಸರಿಯಾಗಿ ಬೆಳೆ ಬಂದಿರುವದಿಲ್ಲ. ಮತ್ತು ಈ ವರ್ಷ ಸ್ವಸಹಾಯಕ ಸಂಘ ಖಾನಾಪೂರ (ಎಸ್.ಹೆಚ್) ದಲ್ಲಿ 12 ಸಾವಿರ, ಮೈಸೂರ ಲಿಮಿಟೇಡ ಬ್ಯಾಂಕ ಸುರಪೂರದಲ್ಲಿ 26 ಸಾವಿರ, ಬಿ.ಎಲ್.ರತ್ನಾಕರ ಸಂಘ ಶಹಾಪೂರದಲ್ಲಿ 40 ಸಾವಿರ, ರಂಗಂಪೇಟ ಸಂಘದಲ್ಲಿ 50 ಸಾವಿರ ರೂಪಾಯಿ ನನ್ನ ಗಂಡ ಸಾಲ ಮಾಡಿರುತ್ತಾರೆ. ಈ ವರ್ಷ ಹೆಚ್ಚಿಗೆ ಮಳೆ ಬಂದಿದ್ದರಿಂದ ಎಲ್ಲಾ ಹತ್ತಿ ಬೆಳೆ ನೆಟೆ ಹೋಗಿ ನಷ್ಟ ವಾಗಿರುತ್ತದೆ. ಸಾಲ ತಿರಿಸಲಾಗದೇ ನನ್ನ ಗಂಡ ಸುಮಾರು ದಿನಗಳಿಂದ ದಿನಾಲು ಸಾಲದ ಬಗ್ಗೆ ಚಿಂತೆ ಮಾಡುತ್ತಾ ಇರುತ್ತಿದ್ದನು ಆಗ ನಾನು ನನ್ನ ಅತ್ತೆ ಲಚಮಮ್ಮ ಇಬ್ಬರು ಬುದ್ದಿ ಮಾತು ಹೇಳಿರುತ್ತೆವೆ. ಸಾಲದ ಬಗ್ಗೆ ಚಿಂತೆ ಮಾಡಬೇಡ ಈ ವರ್ಷ ಇಲ್ಲ ಆದರೆನಾಯಿತು ಮುಂದಿನ ವರ್ಷವಾದರು ಸರಿಯಾಗಿ ದುಡಿದು ಬೆಳೆ ಬಂದ ಮೇಲೆ ಸಾಲ ತಿರಿಸಿದರಾಯಿತು ಅಂತ ಹೇಳಿರುತ್ತೆವೆ. ಆದರು ನನ್ನ ಗಂಡ ದಿನಾಲು ಸಾಲದ ಬಗ್ಗೆ ಚಿಂತೆ ಮಾಡುವದು ಬಿಟ್ಟಿರುವದಿಲ್ಲ. ನಿನ್ನೆ ದಿನಾಂಕ:26/08/2020 ರಂದು ಮನೆಯಲ್ಲಿ ಮದ್ಯಾಹ್ನ 12 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ಹೋಗಿ ಬರುತ್ತೆನೆ ಅಂತ ಹೇಳಿ ಹೋಗಿರುತ್ತಾನೆ. ನಾನು ಮನೆಯಲ್ಲಿದ್ದಾಗ ಸಾಯಂಕಾಲ 7 ಗಂಟೆಗೆ ನಮ್ಮ ಮಾವ ಹಣಮಂತ್ರಾಯ ಈತನು ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ತಮ್ಮ ಮರೆಪ್ಪನು ಕುಪಗಲ್ ಸೀಮಾಮತರದ ಸವರ್ೆ ನಂ. 03 ರ ಹೊಲದಲ್ಲಿ ಹಳ್ಳದ ಹತ್ತಿರ ಲಕ್ಕಿ ಗಿಡಕ್ಕೆ ಬಿಳಿ ಲುಂಗಿಯಿಂದ ನೇಣು ಹಾಕಿಕೊಂಡಿರುತ್ತಾನೆ. ಅಂತ ವಿಷಯ ತಿಳಿಸಿದಾಗ ಆಗ ನಾನು ಗಾಬರಿಯಾಗಿ ನಾನು ಅಲ್ಲೆ ಇದ್ದ ಅತ್ತೆ ಲಚಮಮ್ಮ ಮಾವ ಬೀಮಣ್ಣ ಎಲ್ಲರೂ ಕೂಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ನೋಡಿ ಗುರುತ್ತಿಸಿರುತ್ತೆವೆ. ನನ್ನ ಗಂಡ ಸಾಲದ ಬಾಧೆ ತಾಳದೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ. ನಿನ್ನೆ ದಿನಾಂಕ:26/08/2020 ರಂದು ರಾತ್ರಿ ಆಗಿದ್ದರಿಂದ ಇಂದು ಮುಂಜಾನೆ ಠಾಣೆಗೆ ಬಂದು ಪಿಯರ್ಾದಿ ನೀರುತ್ತೆನೆ. ಅಂತ ಹೇಳಿಕೆ ನೀಡಿದ್ದ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.19/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 102/2020 ಕಲಂ 341, 323, 324, 355, 504, 506 ಸಂಗಡ 34 ಐಪಿಸಿ : ದಿನಾಂಕ:26/08/2020 ರಂದು 7.40 ಪಿ.ಎಮ್. ಸುಮಾರಿಗೆ ಫಿಯರ್ಾದಿಯು ತನ್ನ ಮೋಟರ್ ಸೈಕಲ್ ಮೇಲೆ ಊರ ಕಡೆಗೆ ಹೊರಟಾಗ ಆರೋಪಿತರು ಕುಡಿದ ಅಮಲಿನಲ್ಲಿ ಫಿಯರ್ಾದಿಗೆ ತಡೆದು ನಿಲ್ಲಿಸಿ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಕಲ್ಲಿನಿಂದ, ಚಪ್ಪಲಿಯಿಂದ ಹೊಡೆದು ಗಾಯಪಡಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಇರುತ್ತದೆ.

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 14/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ: 27/08/2020 ರಂದು 11 ಎ.ಎಮ್ ಕ್ಕೆ ಫಿಯರ್ಾದಿದರರು ಹಳ್ಳಿ ಭೇಟಿ ಕರ್ತವ್ಯ ಕುರಿತು ಮುಡಬೂಳ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಮುಡಬೂಳ ಗ್ರಾಮದ ಶಾಂತವೀರ ತಂದೆ ಶಂಕ್ರೆಪ್ಪ ಶೆಟ್ಟಿ ಹಾಗು ಪ್ರತಿವಾದಿ ಇವರ ನಡುವೆ ದಿನಾಂಕ 15/06/2020 ರಂದು 6.15 ಎಎಮ್ ಕ್ಕೆ ಮನೆ ಪಕ್ಕದಲ್ಲಿನ ಸಿಸಿ ರೋಡಿನ ಮೇಲೆ ಮಣ್ಣು ಹಾಕಿದ ವಿಷಯಕ್ಕೆ ಜಗಳಗಳಾಗಿ ಭೀ.ಗುಡಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಮತ್ತು ಪ್ರತಿಗುನ್ನೆಗಳು ದಾಖಲಾಗಿದ್ದು ಪ್ರತಿವಾದಿಗಳ ಮೇಲೆ ಗುನ್ನೆ ನಂ: 78/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ ನೇದ್ದು ದಾಖಲಾಗಿದ್ದು ಇರುತ್ತದೆ. ಪ್ರಕರಣ ದಾಖಲಾದಾಗಿನಿಂದ ಮಾನಪ್ಪ ತಂದೆ ಚಂದ್ರಶ್ಯಾ ವಾಳದ , ಹಾಗು ಇತರರು ಪಾಟರ್ಿ ಕಟ್ಟಿಕೊಂಡು ಶಾಂತವೀರ ಶೆಟ್ಟಿ ಇವರೊಂದಿಗೆ ವೈಮನಸ್ಸು ಬೆಳೆಸಿಕೊಂಡಿದ್ದು ಇರುತ್ತದೆ. ಮುಂದೆ ಯಾವ ವೇಳೆಯಲ್ಲಾದರೂ ಎರಡೂ ಪಾಟರ್ಿ ಜನರು ಎದುರುಬದರಾದಲ್ಲಿ ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಇಂದು ದಿನಾಂಕ: 27/08/2020 ರಂದು 2.15 ಪಿ.ಎಮ್ ಕ್ಕೆ ಠಾಣೆಯ ಪಿ.ಎ.ಆರ್ ನಂ:14/2020 ಕಲಂ 107 ಸಿ.ಆರ್.ಪಿ.ಸಿ  ನೇದ್ದರ ಅಡಿಯಲ್ಲಿ ಮುಂಜಾಗೃತಾ ಕ್ರಮ ಜರುಗಿಸಿದ ಬಗ್ಗೆ.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 15/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ: 27/08/2020 ರಂದು 11 ಎ.ಎಮ್ ಕ್ಕೆ ಫಿಯರ್ಾದಿದರರು ಹಳ್ಳಿ ಭೇಟಿ ಕರ್ತವ್ಯ ಕುರಿತು ಮುಡಬೂಳ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಮುಡಬೂಳ ಗ್ರಾಮದ ಮಹಾಂತೇಶ ತಂದೆ ಶರಣಪ್ಪ ವಾಳದ ಹಾಗು ಪ್ರತಿವಾದಿ ಜನರಾದ ಶಾಂತವೀರ ತಂದೆ ಶಂಕ್ರೆಪ್ಪ ಶೆಟ್ಟಿ ಹಾಗು ಸಂಗಡಿಗರ ಮದ್ಯ ದಿನಾಂಕ 15/06/2020 ರಂದು 6.15 ಎಎಮ್ ಕ್ಕೆ ಮನೆ ಪಕ್ಕದಲ್ಲಿನ ಸಿಸಿ ರೋಡಿನ ಮೇಲೆ ಮಣ್ಣು ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಜಗಳಗಳಾಗಿ ಎರಡೂ ಪಾಟರ್ಿ ಜನೆ ಮೇಲೆ ಭೀ.ಗುಡಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಮತ್ತು ಪ್ರತಿಗುನ್ನೆಗಳು ದಾಖಲಾಗಿದ್ದು ಇರುತ್ತದೆ. ಪ್ರತಿವಾದಿಗಳ ಮೇಲೆ ಗುನ್ನೆ ನಂ: 79/2020 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ ನೇದ್ದು ದಾಖಲಾಗಿದ್ದು ಪ್ರಕರಣ ದಾಖಲಾದಾಗಿನಿಂದ ಶಾಂತವೀರ ತಂದೆ ಶಂಕ್ರೆಪ್ಪ ಶೆಟ್ಟಿ ಅವನ ಸಂಗಡಿಗರು ಗ್ರಾಮದಲ್ಲಿ ಪಾಟರ್ಿ ಕಟ್ಟಿಕೊಂಡು ಮಹಾಂತೇಶ ತಂದೆ ಶರಣಪ್ಪ ವಾಳದ ಹಾಗು ಆತನ ಸಂಗಡಿಗರೊಂದಿಗೆ  ವೈಮನಸ್ಸು ಬೆಳೆಸಿಕೊಂಡಿದ್ದು ಇರುತ್ತದೆ. ಮುಂದೆ ಯಾವ ವೇಳೆಯಲ್ಲಾದರೂ ಎರಡೂ ಪಾಟರ್ಿ ಜನರು ಎದುರುಬದರಾದಲ್ಲಿ ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಇಂದು ದಿನಾಂಕ: 27/08/2020 ರಂದು 03.00 ಪಿ.ಎಮ್ ಕ್ಕೆ ಠಾಣೆಯ ಪಿ.ಎ.ಆರ್ ನಂ: 15/2020 ಕಲಂ 107 ಸಿ.ಆರ್.ಪಿ.ಸಿ  ನೇದ್ದರ ಅಡಿಯಲ್ಲಿ ಮುಂಜಾಗೃತಾ ಕ್ರಮ ಜರುಗಿಸಿದ ಬಗ್ಗೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 129/2020 ಕಲಂ: 279,337, ಐಪಿಸಿ : ಇಂದು ದಿನಾಂಕ 27.08.2020 ರಂದು 6.30 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಅಶೋಕ ತಂದೆ ಶರಣಗೌಡ ಮೂಲಿಮನಿ ವ|| 23 ಜಾ|| ರಡ್ಡಿ ಉ|| ವಿದ್ಯಾಥರ್ಿ ಸಾ|| ಯಾಳವಾರ ತಾ|| ದೇವರ ಹಿಪ್ಪರಗಿ ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ನಮ್ಮ ಅಣ್ಣನವರಾದ ರುದ್ರಗೌಡ ತಂದೆ ಚೆನ್ನಪ್ಪಗೌಡ ಪಾಟೀಲ ಸಾ|| ಬೈರವಾಡಗಿ ಇವರ ಹೆಸರಿನಲ್ಲಿ  ಮಾರುತಿ ಸುಜಕಿ ವಿಟಾರಾ ಬ್ರೀಜಾ ನಂಬರ ಕೆಎ-28 ಪಿ-6068 ಅಂತ ಇದ್ದು ಸದರಿ ಕಾರಿಗೆ ಕಾರ ಚಾಲಕರಾಗಿ ಮಲ್ಲಿಕಾಜರ್ುನ ತಂದೆ ಸಂಗಪ್ಪ ಅವರಾದಿ ಸಾ|| ಬೈರವಾಡಗಿ ಇವರು ಇರುತ್ತಾರೆ. ಹೀಗಿದ್ದು ಇಂದು ದಿನಾಂಕ 27.08.2020 ರಂದು ಬೆಳಿಗ್ಗೆ 9.30 ಗಂಟೆಗೆ ನಾನು ನಮ್ಮ ಅಣ್ಣನವರಾದ ರುದ್ರಗೌಡ ಇವರ ಕಾರ ನಂಬರ ಕೆಎ-28 ಪಿ-6068 ನೇದ್ದನ್ನು ತೆಗೆದುಕೊಂಡು ಯಾದಗಿರಿಗೆ ಹೋಗುವ ಕುರಿತು ಬರುತ್ತಾ ಅಂದಾಜು 11.15 ಎಎಮ್ ಸುಮಾರಿಗೆ ಹದನೂರ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ನಮ್ಮ ಕಾರ ಚಾಲಕ ಮಲ್ಲಿಕಾಜರ್ುನ ಅವರಾದಿ ಈತನು ಅತೀವೇಗವಾಗಿ ಕಾರ ನಡೆಸಿಕೊಂಡು ಹೋಗುತ್ತಿದ್ದಾಗ ಒಮ್ಮಲೇ ಒಂದು ನಾಯಿ ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಮುಂದೆ ಬರುತ್ತಿದ್ದ ಒಂದು ಗೂಡ್ಸ ಬುಲೆರೋ ಪಿಕಪ್ ವಾಹನಕ್ಕೆ ಬಲವಾಗಿ ಡಿಕ್ಕಿಹೊಡೆದಿದ್ದು ಸದರಿ ಅಪಘಾತದಕಲಲ್ಲಿ ನನಗೆ ಸಣ್ಣ ಪುಟ್ಟ ಗುಪ್ತಗಾಯಗಳಾಗಿದ್ದು ಆದರೆ ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ಮತ್ತು ಸದರಿ ಅಪಘಾತದಲ್ಲಿ ನಮ್ಮ ಕಾರ ಚಾಲಕನಿಗೆ ಬಲಗಾಲ ತೊಡೆಗೆ ಗುಪ್ತಗಾಯವಾಗಿದ್ದು ಇರುತ್ತದೆ. ಹಾಗು ಕಾರಿನ ಮುಂದಿನ ಭಾಗ ಪೂರ್ಣವಾಗಿ ಜಖಂಗೊಂಡಿದ್ದು ಅಲ್ಲದೇ ಬುಲೆರೋ ಪಿಕಪ್ ವಾಹನಕ್ಕೂ ಕೂಡ ಮುಂದಿನ ಭಾಗದಲ್ಲಿ ಜಖಂಗೊಂಡಿದ್ದು ಸದರ ವಾಹನದಲ್ಲಿದ್ದ ಚಾಲಕನಿಗೆ ಯಾವದೇ ಗಾಯವಗೈರೆ ಆಗಿರುವದಿಲ್ಲ.  ಸದರ ಅಪಘಾತಕ್ಕೆ  ನಮ್ಮ ಕಾರ ಚಾಲಕ ಮಲ್ಲಿಕಾಜರ್ುನ ಅವರಾದಿ ಈತನ ಅತೀವೇಗ ಹಾಗು ಅಲಕ್ಷತನದ ಚಾಲನೇಯೇ ಕಾರಣವಿದ್ದು ಕಾರಣ  ತಾವು ಸ್ಥಳಕ್ಕೆ ಬಂದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಈ ವಿನಂತಿ ಅಜರ್ಿ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 129/2020 ಕಲಂ 279,337 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 62/2020 ಕಲಂ: 504,505(2) ಐಪಿಸಿ:ಇಂದು ದಿನಾಂಕ 27/08/2020 ರಂದು 3:00 ಪಿ.ಎಂ ಕ್ಕೆ ಶ್ರೀ ಭೀಮಣ್ಣ ತಂದೆ ಸಂಗಪ್ಪ ಹೆಬ್ಬಾಳ ಸಾ:ಕೊಡೆಕಲ್ಲ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪುಮಾಡಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಪಿಯರ್ಾದಿ ಅಜರ್ಿಯ ಸಾರಾಂಶವೆನೆಂದರೆ ನಾನು ಕೊಡೆಕಲ್ಲ ಗ್ರಾಮದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತಿದ್ದು .ನನ್ನದು ಒಂದು ವಿವೋ ಮೋಬೈಲ ಸ್ಮಾರ್ಟಪೋನ ಇದ್ದು ಅದರ ನಂಬರ 6366320009 ಇದ್ದು ನಾನು ವಾಟ್ಸ್ಪ್ನ್ನು ಉಪಯೋಗಿಸುತ್ತಿದ್ದು ನಾನು ವಾಲ್ಮಿಕಿ ಹುಲಿಗಳು ಅನ್ನುವ ವಾಟ್ಸಪ್ಗೂಪ್ನಲ್ಲಿ ಸದಸ್ಯನಿದ್ದು ಅದರಲ್ಲಿ ಶ್ರೀ ನರಸಿಂಹನಾಯಕ (ರಾಜುಗೌಡರು ) ಶಾಸಕರು ಸುರಪೂರ  ಹಾಗೂ ಶ್ರೀ ರಾಜಾ ವೆಂಕಟಪ್ಪನಾಯಕ ಮಾಜಿ ಶಾಸಕರು ಸುರಪೂರ ಇವರ ಹಿಂಬಾಲಕರು ಹಾಗೂ ಅಭಿಮಾನಿಗಳು ಈ ಗ್ರೂಪನ ಸದಸ್ಯರಿದ್ದು ಅದರಲ್ಲಿ ಶ್ರೀ ರಾಜಾವೆಂಕಟಪ್ಪನಾಯಕ ರವರ ಅಭಿಮಾನಿಯಾದ ನಾಗರಾಜ ಜೋಗೂರ ಈತನು ಇರುತ್ತಾನೆ. ಈ ಗ್ರೂಪನ್ ಮೋದಲ ಅಡ್ಮಿನ್ ನಿಂಗು ಪಾಟೀಲ್ ಯರಕಿಹಾಳ ಈತನು ಇರುತ್ತಾನೆ ನಾನು ಎಂದಿನಂತೆ ನಿನ್ನೆ ದಿನಾಂಕ 26/08/2020 ರಂದು 11:06 ಎ.ಎಂ ಕ್ಕೆ ನಾನು ನನ್ನ ಮೋಬೈಲ್ದಲ್ಲಿ ವಾಟ್ಸಪ ನೋಡುತ್ತಿದ್ದಾಗ ವಾಲ್ಮಿಕಿ ಹುಲಿಗಳು ಅನ್ನುವ ಗ್ರೂಪ್ನಲ್ಲಿ ನಾರಾಯಣಪೂರ ಗ್ರಾಮದ ನಾಗರಾಜ ಜೋಗೂರ ಈತನು ತನ್ನ ಮೋಬೈಲ್ ನಂ 9945794922 ನಂಬರದಿಂದ ಶ್ರೀ ನರಸಿಂಹ ನಾಯಕ ರಾಜುಗೌಡರು ಶಾಸಕರು ಸುರಪೂರ ರವರು ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಎದುರು ಮಾಜಿ ಶಾಸಕರಾದ ಶ್ರೀ ರಾಜಾ ವೆಂಕಟಪ್ಪನಾಯಕ ಇವರ ಬಗ್ಗೆ  ಮಾತನಾಡಿರುವ ವಿಡಿಯೋ ತುಣುಕಿಗೆ ದೃಶ್ಯವನ್ನು ಅಡಿಟ್ಮಾಡಿದ ವಿಡಿಯೋವನ್ನು ಹಿಂಬಾಲಿಕರಿಗೆ ಮತ್ತು ಅಭಿಮಾನಿಗಳ ನಡುವೆ ಜಗಳ ಹಚ್ಚುವ ಉದ್ದೇಶದಿಂದ ಮತ್ತು ಶಾಂತಿ ಕದಡುವ ಉದ್ದೇಶದಿಂದ ಈ ವಿಡಿಯೋ ಶೆರ್ ಮಾಡಿದ್ದು ಇರುತ್ತದೆ ಆದ್ದರಿಂದ ಸದರಿ ನಾಗರಾಜ ಜೋಗೂರ ಇವರ ಮೇಲೆ  ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರಲ್ಲಿ ವಿನಂತಿ. ನಾನು ನಮ್ಮ ಸಮಾಜದ ಹಿರಿಯರೊಂದಿಗೆ ಈ ಬಗ್ಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ಪಿಯರ್ಾದಿ ಕೊಟ್ಟಿದ್ದು ಇರುತ್ತದೆ ಅಂತಾ ನೀಡಿದ ಪಿಯರ್ಾದಿಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 62/2020 ಕಲಂ 504, 505(2) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:-. 98/2020 ಕಲಂ: 498(ಎ), 504, 323, 506 ಸಂ 34 ಐಪಿಸಿ : ಾನು ಝರೀನಾ ಗಂಡ ಚಾಂದಾಷಾಶ ಸಿಲಾರವಾಲೆ ವ:30 ಜಾ: ಮುಸ್ಲಿಂ ಉ:ಮನೆಗೆಲಸ ಸಾ: ಗುರಸಣಗಿ ಇದ್ದು ಈಮೂಲಕ ತಮ್ಮಲಿ ಸಲ್ಲಿಸುವ ದೂರು ಅಜರ್ಿಯೆನೆಂದರೆ ನನಗೆ ಈಗೇ ಸುಮಾರು 8 ವರ್ಷಗಳ ಹಿಂದೇ ಗುರಸಣಗಿ ಗ್ರಾಮದ ಚಾಂದಪಾಷ ತಂದೆ ಖಾಜಾಪೀರ ಷೇಕ ಈತನೊಂದಿಗೆ ನಮ್ಮ ಸಂಪ್ರದಾಯದಂತೆ  ಮದುವೆ ಮಾಡಿಕೊಟ್ಟಿರುತಾರೆ. ನಮಗೆ 1)ಇಫರ್ಾನ 6ವರ್ಷ 2)ಇಪರ್ಾನ 2ವರ್ಷ ಇಬ್ಬರೂ ಮಕ್ಕಳಿರುತ್ತಾರೆ ಕೆಲ ದಿನ ಸರಿಯಾಗಿದ್ದ ನನ್ನ ಗಂಡ ಮತ್ತು ಅತ್ತೆಯಾದ ಖಾಜಾಬೀ ಗಂಡ ಖಾಜಾಪೀರ, ನಾದಿನಿಯಾದ ನಾಜಿಮೀನಾ ತಂದೆ ಖಾಜಾಪೀರ ಇವರೆಲ್ಲೂರು ಸೇರಿ ನನಗೆ ನೀನು ಸರಿಯಿಲ್ಲ ನಿನಗೆ ಕೆಲಸ ಮಾಡಲು ಬರುವುದಿಲ್ಲ  ನೀನು ಸಿಟಿಯಿಂದ ಬಂದಿನಿ ಅಂತಾ ಧಿಮಾಕು ತೋರಿಸುತ್ತಿಯಾ ಎಂದು ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡಲಾರಂಭಿಸಿದ್ದರು. ಆಗ ನಾನು ಈ ವಿಷಯವನ್ನು ನಮ್ಮ ತಾಯಿಗೆ ತಿಳಿಸಿದಾಗ ಅವರು ಹಾಗೆ ಹೊಂದಾಣಿಕೆ ಮಾಡಿಕೊಂಡು ಸಂಸಾರ ಮಾಡಿಕೊಂಡು ಹೋಗಬೇಕು ಎಂದು ಹೇಳಿದ ಮೇಲೆ ನಾನು ಹಾಗೆ ಸಂಸಾರ ಮಾಡಿಕೊಂಡು ಹೋಗುತಿದ್ದೇನು ಈ ವಿಷಯ  ನನ್ನ ಗಂಡನಿಗೆ ಗೊತ್ತಾಗಿ ಈಗೇ ನಾಲ್ಕು ತಿಂಗಳ ಹಿಂದೆ  ತಾಯಿಗೆ ಹೇಳುತ್ತಿಯಾ ಅಂತಾ ನನ್ನ ಬಲಗಾಲಿಗೆ ಹೊಡೆದಿರುತ್ತಾನೆ ನಾನು ಆಸ್ಪತ್ರೆಗೆ ತೋರಿಸಿಕೊಂಡು ನನ್ನ ತಾಯಿ ಹೇಳಿದಂತೆ ಮತ್ತೆ ಅವರ ಮನೆಯಲ್ಲಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದೇನು, ಹೀಗಿದ್ದು ದಿನಾಂಕ:23/08/2020 ರಂಧು ಮುಂಜಾನೆ 7:00 ಗಂಟೆ ಸುಂಆರಿಗೆ  ನಮ್ಮ ಮನೆಯ ಮುಂದೆ ಕುಳಿತಾಗ ನೀನು ಯಾರೀಗೆ  ನೋಡುತ್ತೀಯಾ ಸೂಳಿ ಎಂದೂ ನನ್ನ ಗಂಡನು ಬಂದು ನನಗೆ ಕೈಯಿಂದ  ಮುಷ್ಠಿ ಮಾಡಿ ಬೆನ್ನಿಗೆ ಹೊಡೆದನು. ಕೈಯಿಂದ ಕಪಾಳಕ್ಕೆ ಹೊಡೆಯತ್ತಿದ್ದನು ನನ್ನ ಅತ್ತೆ ಮತ್ತು ನಾದಿನಿ ಇವರು ಬಂದು ಈಕೆಯ ನಡೆತೆ ಸರಿಯಿಲ್ಲ ಎಂದು ಅವ್ಯಾಚ ಬೈದು  ಅತ್ತೆಯ ಕೈಯಿಂದ ಕಪಾಳಕ್ಕೆ ಹೊಡೆದಳು ಜಗಳ ಮಾಡುವುದನ್ನು ನೋಡಿ  ಅಲ್ಲಿಯೇ ಇದ್ದ ಇನ್ನೋಬ್ಬ ಮಾವನಾದ ಮಹ್ಮದ ಅಲಿ ತಂದೆ ಜಲಾಲಸಾಬ ಮತ್ತು ರೋಷನಬೀ ಗಂಡ ಮಹ್ಮದ ಅಲಿ ಬಂದು ಬಿಡಿಸಿರುತ್ತಾರೆ. ಇವತ್ತು ಉಳದಿ ಸೂಳಿ ನಾವು ಹೇಳಿದಂತೆೆ ಕೇಳಿಕೊಂಡು ಇರಬೇಕು ಇಲ್ಲದಿದ್ದರೇ ನಿನನ್ನು ಖಲಾಸ ಮಾಡುತ್ತೇವೆ ಎಂದು ಜೀವಬೆದರಿಕೆಯನ್ನು ಹಾಕಿರುತ್ತಾರೆ  ನಾನು ನನ್ನ ತಾಯಿ ಮತ್ತು ನಮ್ಮ ಹಿರಿಯರೊಂದಿಗೆ ವಿಚಾರವನ್ನು ಮಾಡಿಕೊಂಡು ಬಂದು ದೂರು ಕೊಂಡುತಿದ್ದೇನೆ, ಕಾರಣ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಕೈಯಿಂದ ಹೊಡೆದವರ ಮೇಲೆ ಸೂಕ್ತ ರೀತಯ ಕಾನೂನು ಕ್ರಮ ಜರಗಿಸಲು ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:98/2020ಕಲಂ:498(ಎ).504.323.506.ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡೇನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!