ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/08/2020
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 230/2020 ಕಲಂ 279, 283, 304(ಎ) ಐ.ಪಿ.ಸಿ : ಇಂದು ದಿನಾಂಕ 26/08/2020 ರಂದು 00.30 ಎ.ಎಂ.ಕ್ಕೆ ಶ್ರೀ ಶಿವರಾಜ ತಂ/ ಬಸಪ್ಪ ಅಕ್ಕರಗಿ ಸಾ|| ಬಾಪೂಜಿ ನಗರ, ದೇವದುರ್ಗ ತಾ|| ದೇವದುರ್ಗ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ತಂದೆ-ತಾಯಿಗೆ ನಾವು 3 ಜನ ಅಣ್ಣತಮ್ಮಂದಿರಿದ್ದು, ತಮ್ಮ ಹನುಮೇಶ ತಂ/ ಬಸಪ್ಪ ಅಕ್ಕರಗಿ ಮತ್ತು ನಿಂಗರಾಜ ತಂ/ ಬಸಪ್ಪ ಅಕ್ಕರಗಿ ಇವರಿಬ್ಬರು ದೇವದುರ್ಗದಲ್ಲಿ ವಿಡಿಯೋಗ್ರಫಿ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದರು. ಹೀಗಿದ್ದು, ನಿನ್ನೆ ದಿನಾಂಕ: 25/08/2020 ರಂದು ಮಧ್ಯಾಹ್ನದ ಸುಮಾರಿಗೆ ನನ್ನ ತಮ್ಮ ಹನುಮೇಶನು ಸುರಪುರದಲ್ಲಿ ವಿಡಿಯೋಗ್ರಫಿಗೆ ಸಂಬಂಧಿಸಿದಂತೆ ಕೆಲಸ ಇದೆ ಸುರಪುರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮೋಟರ ಸೈಕಲ್ ನಂ. ಕೆಎ-36 ಇಪಿ-7841 ನೇದ್ದರಲ್ಲಿ ಕುಳಿತು ಹೋಗಿದ್ದನು, ರಾತ್ರಿ 9.15 ಪಿ.ಎಂ. ಸುಮಾರಿಗೆ ನನಗೆ ಪರಿಚಯದ ದೇವಿಂದ್ರಪ್ಪ ತಂ/ ಮಹಾದೇವಪ್ಪ ಕಟ್ಟಿಮನಿ ಸಾ|| ಹಸನಾಪುರ ತಾ|| ಸುರಪುರ ಇವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು ದಿನಾಂಕ: 25/08/2020 ರಂದು ರಾತ್ರಿ 9.00 ಪಿ.ಎಂ. ಸುಮಾರಿಗೆ ನಾನು ನನ್ನ ಅಟೋದಲ್ಲಿ ಹತ್ತಿಗುಡೂರದ ಪ್ಯಾಸೇಂಜರ್ಗಳನ್ನು ಬಿಟ್ಟು ಮರಳಿ ಹಸನಾಪುರಕ್ಕೆ ಹೋಗುತ್ತಿದ್ದಾಗ, ಹತ್ತಿಗುಡೂರ-ಸುರಪುರ ಮುಖ್ಯ ರಸ್ತೆಯಲ್ಲಿ ಮಂಡಗಳ್ಳಿ ಪೆಟ್ರೋಲ್ ಬಂಕ ದಾಟಿ ಅಂದಾಜು 100 ಮೀಟರ ಸುರಪುರ ಕಡೆಗೆ ರೋಡಿನಲ್ಲಿ ಹತ್ತಿಗುಡೂರ ಕಡೆಗೆ ಮುಖ ಮಾಡಿ ರೋಡಿನ ಎಡ ಸೈಡಿನಲ್ಲಿ ಒಂದು ಟ್ರಾಕ್ಟರನ್ನು ಅದರ ಚಾಲಕನು ಯಾವುದೆ ಮುಂಜಾಗ್ರತೆ ಕ್ರಮ ಜರುಗಿಸದೆ ನಿಲ್ಲಿಸಿದ್ದು, ಅದೇ ಸಮಯಕ್ಕೆ ಸುರಪುರ ಕಡೆಯಿಂದ ಒಂದು ಮೋಟರ ಸೈಕಲ್ ಸವಾರನ್ನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ರೋಡಿನಲ್ಲಿ ನಿಂತಿದ್ದ ಟ್ರಾಕ್ಟರ ಹಿಂಭಾಗದಲ್ಲಿ ಡಿಕ್ಕಿಪಡಿಸಿ ರೋಡಿನಲ್ಲಿ ಬಿದ್ದನು ನಾನು ಹತ್ತಿರ ಹೋಗಿ ನೋಡಲಾಗಿ ಮೋಟರ ಸೈಕಲ್ ಸವಾರನು ನಿಮ್ಮ ತಮ್ಮ ಹನುಮೇಶ ಇದ್ದು, ಹನುಮೇಶನಿಗೆ ಎಡಗೈಗೆ ರಕ್ತಗಾಯ, ಮೊಳಕಾಲು, ಗದ್ದಕ್ಕೆ ಹಾಗೂ ಇತರೆ ಕಡೆಗೆ ತರಚಿದಗಾಯಗಳಾಗಿ, ತಲೆಗೆ ಭಾರೀ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಅಲ್ಲಿಯೇ ಇದ್ದ ಟ್ರಾಕ್ಟರ್ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಮಲ್ಲರಡ್ಡಿ ತಂ/ ಅಮ್ಮಣ್ಣ ಬಗಮ್ಮನೋರ ಸಾ|| ಗೌಡಗೇರಿ ತಾ|| ಜಿ|| ಯಾದಗಿರಿ ಅಂತಾ ಹೇಳಿದನು. ಸದರಿ ಟ್ರಾಕ್ಟರನ್ನು ನೋಡಲಾಗಿ ಮೆಸ್ಸಿ ಫೆರಗುಸೆನ್ 241 ಡಿ.ಐ ಟ್ರಾಕ್ಟರ ಇದ್ದು, ಸದರಿ ಟ್ರಾಕ್ಟರನ ಇಂಜಿನ್ ಮತ್ತು ಟ್ರಾಲಿಗೆ ರಜಿಸ್ಟರ್ ನಂಬರ ಇರಲಿಲ್ಲಿ ಇಂಜಿನ್ ನಂಬರ ನೋಡಲಾಗಿ ಖ325.1ಈ00485 ಚೆಸ್ಸಿ.ನಂ.861236 ಅಂತಾ ಇದ್ದು, ಟ್ರಾಲಿ ಚೆಸ್ಸಿ.ನಂ.08/2017 ಅಂತಾ ಇರುತ್ತದೆ ಎಂದು ಹೇಳಿದಾಗ ನಾನು ಮತ್ತು ನನ್ನ ತಮ್ಮನ ಹೆಂಡತಿ ಅಶ್ವಿನಿ ಹಾಗೂ ನಮ್ಮ ಓಣಿಯ ಮಲ್ಲಿಕಾಜರ್ುನ ತಂ/ ಹಣಮಪ್ಪ ಜೊಂಡೆ ಎಲ್ಲರೂ ಕೂಡಿ ಮಂಡಗಳ್ಳಿ ಪೆಟ್ರೋಲ್ ಬಂಕ ಹತ್ತಿರ ಬಂದು ನೋಡಲಾಗಿ ನನ್ನ ತಮ್ಮನು ಮೇಲೆ ಹೇಳಿದಂತೆ ಗಾಯಗಳನ್ನು ಹೊಂದಿ ಮೃತಪಟ್ಟಿದ್ದನು. ಕಾರಣ ಮೃತ ಹನುಮೇಶ ತಂ/ ಬಸಪ್ಪ ಅಕ್ಕರಗಿ ಮತ್ತು ಟ್ರಾಕ್ಟರ ಚಾಲಕ ಮಲ್ಲರಡ್ಡಿ ತಂ/ ಅಮ್ಮಣ್ಣ ಭಾಗಮ್ಮನೋರ ಇವರ ವಿರುದ್ದ ಕಾನೂನು ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 230/2020 ಕಲಂ 279, 283, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 231/2020 ಕಲಂ 279 338 ಐ.ಪಿ.ಸಿ : ಇಂದು ದಿನಾಂಕ 26/08/2020 ರಂದು ಮುಂಜಾನೆ 11-00 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತ ದೂರವಾಣಿ ಮೂಲಕ ಮಾಹಿತಿ ಬಂದ ಮೆರೆಗೆ ನಾನು ಜೊತೆಯಲಿ ಸಿದ್ರಾಮಯ್ಯ ಪಿ.ಸಿ 258 ರವರೊಂದಿಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪಡೆದುಕೊಂಡು ಉಪಚಾರ ಪಡೆಯುತಿದ್ದ ಗಾಯಾಳುದಾರನ್ನು ವಿಚಾರಿಸಿ ಗಾಯಾಳುವಿನ ಖಾಸಾ ಅಣ್ಣನಾದ ಶ್ರೀ ನಿಂಗಪ್ಪ ತಂದೆ ಅಯ್ಯಪ್ಪ ಶಹಾಪೂರ ಸಾಃ ಉಕ್ಕಿನಾಳ ಇವರು ಹೇಳಿಕೆಯ ಫಿಯರ್ಾದಿ ನೀಡಿದ್ದೆನೆಂದರೆ, ತಾನು ಮತ್ತು ತನ್ನ ಖಾಸಾ ತಮ್ಮನಾದ ಶರಣಪ್ಪ ತಂದೆ ಅಯ್ಯಪ್ಪ ಶಹಾಪೂರ ವಯ 30 ವರ್ಷ ಇಬ್ಬರೂ ಕೂಡಿ ಕೆಲವು ದಿನಗಳಿಂದ ಹೊಸಪೇಟೆ ತಾಲೂಕಿನಲ್ಲಿ ಮೇಸ್ತ್ರೀ ಕೆಲಸ ಮಾಡಿಕೊಂಡು ಅಲ್ಲಿಯೇ ಇದ್ದೇವು. ನಿನ್ನೆ ದಿನಾಂಕ 25/08/2020 ರಂದು ರಾತ್ರಿಯ ಸುಮಾರಿಗೆ ಹೊಸಪೇಟೆಯಿಂದ ಮೋಟರ ಸೈಕಲ್ ನಂ ಕೆಎ-33-ಕ್ಯೂ-8796 ನೇದ್ದರ ಮೇಲೆ ಇಬ್ಬರೂ ಕೂಡಿ ನಮ್ಮೂರಿಗೆ ಬರುತಿದ್ದೇವು. ಸದರಿ ಮೋಟರ ಸೈಕಲ್ ಶರಣಪ್ಪನು ಚಲಾಯಿಸುತಿದ್ದನು, ತಾನು ಹಿಂದುಗಡೆ ಕುಳಿತುಕೊಂಡಿದ್ದೇನು. ಹೀಗಿರುವಾಗ ಇಂದು ದಿನಾಂಕ 26/08/2020 ಮುಂಜಾನೆ 10-00 ಗಂಟೆಯ ಸುಮಾರಿಗೆ ಶಹಾಪೂರ ನಗರದ ಕೆ.ಇ.ಬಿ ಹತ್ತಿರ ಇರುವ ಬ್ರೀಡ್ಜ್ ಮೇಲೆ ಹೋಗುತಿದ್ದಾಗ ಎದರುಗಡೆಯಿಂದ ಅಂದರೆ ಭೀ-ಗುಡಿ ಕಡೆಯಿಂದ ಒಂದು ಗೂಡ್ಸ ವಾಹನ ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನಮ್ಮ ಮೋಟರ ಸೈಕಲ್ಗೆ ಡಿಕ್ಕಿ ಮಾಡಿದರಿಂದ ತನ್ನ ತಮ್ಮ ಶರಣಪ್ಪನಿಗೆ ಬಲಗಾಲ ಮೋಳಕಾಲ ಹತ್ತಿರ ಎಲಬು ಮುರಿದು ಭಾರಿ ರಕ್ತಗಾಯವಾಗಿರುತ್ತದೆ. ತನಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಉಪಚಾರ ಮಾಡಿಸಿಕೊಂಡಿರುವುದಿಲ್ಲ. ಸದರಿ ಅಪಘಾತಕ್ಕೆ ಗೂಡ್ಸ ವಾಹನ ನಂ ಕೆಎ-25-ಎಎ-4697 ನೇದ್ದರ ಚಾಲಕ ಗ್ಯಾನಪ್ಪ ತಂದೆ ಬೀರಪ್ಪ ಚುಪ್ರಿ ಸಾಃ ಹೊತಗೇರಿ ತಾಃ ಇಳಕಲ್ ಜಿಃ ಬಾಗಲಕೋಟ ಈತನ ಅತಿವೇಗ ಮತ್ತು ಅಲಕ್ಷತನದಿಂದ ಅಪಘಾತವಾಗಿದ್ದು ಸದರಿ ಚಾಲಕನ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ. ಅಂತ ನೀಡಿದ ಹೇಳಿಕೆಯನ್ನು ಲ್ಯಾಪ್-ಟಾಪನಲ್ಲಿ ಪಡೆದುಕೊಂಡು ಮರಳಿ ಠಾಣೆಗೆ 12-30 ಗಂಟೆಗೆ ಬಂದು ಫಿಯರ್ಾದಿಯವರ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 231/2020 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 108/2020 ಕಲಂ 87 ಕೆ.ಪಿ ಕಾಯ್ದೆ : ದಿನಾಂಕ: 25-08-2020 ರಂದು 04-00 ಪಿಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಗೆ ಬಂದು ಕೂಡ್ಲೂರ ಗ್ರಾಮದಲ್ಲಿ ಮದ್ಯಾಹ್ನ 02-45 ಗಂಟೆಗೆ ಅಂದರ ಬಾಹರ ಇಸ್ಪೆಟ ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.108/2020 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 106/2020 ಕಲಂ 143, 147, 447,427, 504, 506 ಸಂ 149 ಐಪಿಸಿ : ಇಂದು ದಿನಾಂಕ 26-08-2020 ರಂದು 4 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರಿ ಗೋವಿಂದಪ್ಪಾ ತಂದೆ ಹಣಮಂತ ಮೂಲಿಮನಿ ವಯಾ:45 ಉ:ಒಕ್ಕಲುತನ ಜಾ:ಬೇಡರ ಸಾ:ಠಾಣಗುಂಧಿ ತಾ:ಜಿ: ಯಾದಗಿರಿ ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮೂರ ಗ್ರಾಮದ ಸೀಮೆಯಲ್ಲಿ ನನ್ನ ಹಿರಿಯರಿಂದ ಬಂದ ಪಿತ್ರಾಜರ್ಿತ ಆಸ್ತಿ ಸ್ವಂತ ಹೋಲವಿದ್ದು ಅದರ ಸವರ್ೇ ನಂಬರ 343 ರಲ್ಲಿ ಒಟ್ಟು ವಿಸ್ತಿರ್ಣ 22-31 ಎಕರೆ ಇರುತ್ತದೆ. ಈ ಹೋಲದಲ್ಲಿ ಈಗ ಸುಮಾರು ವರ್ಷಗಳ ಹಿಂದೆ ಆಂದ್ರಪ್ರದೇಶದ ಚಿನ್ನಕೃಷ್ಣ ಎಂಬುವವರಿಗೆ 11 ಎಕರೆ ಮಾರಾಟ ಮಾಡಿರುತ್ತೆವೆ. ಸದರಿ ನಮ್ಮ ಹೋಲದಲ್ಲಿ ನಮ್ಮ ಗ್ರಾಮದ ನಮ್ಮ ಸಮಾಜದ ಅಯ್ಯಣ್ಣಾ ತಂದೆ ಶರಣಪ್ಪಾ ಚೂರಿ ಇತನು ಸುಮಾರು 6 ಎಕರೆ ಹೋಲವನ್ನು ಅತೀಕ್ರಮವಾಗಿ ಆಕ್ರಮಿಸಿಕೊಂಡಿದ್ದನು. ನಮ್ಮ ಹೋಲದ ಪಕ್ಕದಲ್ಲಿ ಸಕರ್ಾರಿ ವಿಶಾಲವಾದ ಗೌಠಾಣವಿದ್ದು ಲ್ಲಿ ಅಯ್ಯಣ್ಣಾ ಇತನ ಹೋಲವಿಲ್ಲದಿದ್ದರೂ ಕೂಡಾ ಅವನು ನಮ್ಮ ಹೋಲವನ್ನು ಆಕ್ರಮಿಸಿಕೊಂಡಿದ್ದರಿಂದ ಅವನಿಗೆ ಈಗ ಒಂದು ವರ್ಷದ ಹಿಂದೆ ಕೇಳಿದರೇ ನಾನು ಸಕರ್ಾರಿ ಜ್ಯಾಗೆಯಲ್ಲಿ ಸಾಗುವಳಿ ಮಾಡುತ್ತಿದ್ದೆನೆ ನಿನ್ನ ಹೋಲ ಆಕ್ರಮಿಸಿಕೊಂಡಿಲ್ಲಾ ಅಂತಾ ಹೇಳಿದನು. ಆಗ ನಾನು ಅವನಿಗೆ ನಿನಗೆ ಸಕರ್ಾರಿ ಜಮೀನು ಸಾಗುವಳಿ ಮಾಡಲು ಏನಾದರೂ ಹಕ್ಕುಪತ್ರವಿದೇಯಾ ಅಂತಾ ಕೇಳಿದಾಗ ಆ ವೇಳೆಯಲ್ಲಿ ಅವನು ಮತ್ತು ಅವನ ಮಕ್ಕಳೂ ನನಗೆ ಅವಾಚ್ಯವಾಗಿ ಬೈದು ನಿನ್ನ ಕೆಲಸ ನೀನು ನೋಡಿಕೋ ಅಂತಾ ನನಗೆ ಅಂಜಿಸಿದಾಗ ನಾನು ಭೂಮಾಪಕರಿಗೆ ನಮ್ಮ ಹೋಲ ಸವರ್ೇ ಮಾಡಿ ಕೊಡಲು ಅಜರ್ಿ ಸಲ್ಲಿಸಿದಾಗ ಭೂಮಾಪಕರು ಈಗ ಸುಮಾರು ಒಂದು ವರ್ಷದ ಹಿಂದೆ ಸವರ್ೇ ಮಾಡಿದಾಗ ಅಯ್ಯಣ್ಣಾ ಇತನು ನಮ್ಮ ಹೋಲ ಆಕ್ರಮಿಸಿಕೊಂಡಿದ್ದು ಪತ್ತೆಯಾಯಿತು. ಭೂಮಾಪಕರು ಆ ವೇಳೆಯಲ್ಲಿ ನಮ್ಮ ಹೋಲಕ್ಕೆ ಹದ್ದಿ ಮಾಡಿ ಕೊಟ್ಟಾಗ ನಾವು ಹೋದ ವರ್ಷವೇ ನಮ್ಮ ಹೋಲಕ್ಕೆ ಬದುವು ಹಾಕಿಕೊಂಡೆವು. ನಾವು ನಮ್ಮ ಹೋಲಕ್ಕೆ ಬದುವು ಹಾಕಿಕೊಂಡ ಮೇಲೆ ಅಯ್ಯಣ್ಣಾ ತಂದೆ ಶರಣಪ್ಪಾ ಚೂರಿ ಇತನು ಸುಮಾರು 10 ತಿಂಗಳತನಕ ನಮ್ಮ ಹೋಲದ ತಂಟೆಗೆ ಬರಲಿಲ್ಲಾ. ಹೀಗಿದ್ದು ದಿನಾಂಕ 12-05-2020 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಾನು ಹಾಗೂ ನಮ್ಮ ಅಳಿಯರಾದ ಚಂದ್ರಾರೆಡ್ಡಿ ತಂದೆ ನಾಗಪ್ಪಾ ಹಾಗೂ ಸಾಬಯ್ಯಾ ತಂದೆ ನಾಗಪ್ಪಾ ನಾವು ಮೂವರು ನಮ್ಮ ಹೋಲದಲ್ಲಿ ಕೆಲಸ ಮಾಡುತ್ತಿದ್ದೆವು. ಅದೇ ವೇಳೆಗೆ ಸದರಿ 1) ಅಯ್ಯಣ್ಣಾ ತಂದೆ ಶರಣಪ್ಪಾ ಚೂರಿ ಹಾಗೂ ಇತನ ಮಕ್ಕಳಾದ 2) ದೇವಪ್ಪಾ ತಂದೆ ಅಯ್ಯಣ್ಣಾ ಚೂರಿ 3) ಶರಣಪ್ಪಾ ತಂದೆ ಅಯ್ಯಣ್ಣಾ ಚೂರಿ 4) ಈಶಪ್ಪಾ ತಂದೆ ಅಯ್ಯಣ್ಣಾ ಚೂರಿ 5) ರಾಜಪ್ಪಾ ತಂದೆ ಅಯ್ಯಣ್ಣಾ ಚೂರಿ ಹಾಗೂ 6) ರಾಘು ತಂದೆ ಅಯ್ಯಣ್ಣಾ ಚೂರಿ ಇವರೆಲ್ಲರೂ ಕೂಡಿಕೊಂಡು ಹಕಾರಿ ಹೊಡೆಯುತ್ತಾ ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಂದವರೇ ನಾವು ಈ ಮೊದಲು ನಮ್ಮ ಹೋಲದ ಗಡಿಯುದ್ದಕ್ಕೂ ಹಾಕಿದ ಬುದುವನ್ನು ಹಾಳು ಮಾಡಹತ್ತಿದರು. ಆಗ ನಾವು ಅವರ ಹತ್ತಿರ ಹೋಗಿ ಹೀಗೇಕೆ ನಮ್ಮ ಹೋಲದ ಬದುವು ಹಾಳು ಮಾಡುತ್ತಿದ್ದಿರಿ, ಭೂಮಾಪಕರಿಂದ ಅಳತೆ ಮಾಡಿಸಿದ ಮೇಲೆ ನಾವು ಖಚರ್ು ಮಾಡಿ ಬದುವು ಹಾಕಿಸಿಕೊಂಡಿರುತ್ತೆವೆ, ಮೇಲಾಗಿ ಇಲ್ಲಿ ಆಸು ಪಾಸು ನಿಮ್ಮ ಹೋಲವಿಲ್ಲಾ ಆದರೂ ಕೂಡಾ ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲಾ ಅಂತಾ ಹೇಳಿದಾಗ ಅವರೆಲ್ಲರೂ ಏ ಸೂಳೇ ಮಕ್ಕಳೇ ನಾನು ಸಕರ್ಾರಿ ಜ್ಯಾಗೆ ಹೊಡೆಯುತ್ತೆವೆ ನಿನ್ನ ಹೋಲವು ಹೊಡೆಯುತ್ತೆವೆ ನೀನು ಏನು ಮಾಡಕೋತಿ ಮಾಡಕೋ ಭೋಸಡಿ ಮಗನೇ ಅಂತಾ ಬೈದರು ಮತ್ತು ನೀನು ಈ ಮೊದಲು ನಮ್ಮ ಕೈಯಿಂದ ಉಳಿದು ಹೋಗಿದ್ದಿ ಈಗ ವಿನಾಕಾರಣ ನಮ್ಮ ತಂಟೆಗೆ ಬಂದಲ್ಲಿ ನಿನ್ನನ್ನು ಇಲ್ಲಿಯೇ ಖಲಾಸ ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿ ಅಂಜಿಸಿ ಪೂತರ್ೀ ಹೋಲದ ಬದುವನ್ನು ನಾಶಪಡಿಸಿ ಅಲ್ಲಿಂದ ಹೋದರು. ನಂತರ ನಾನು ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರ ಮಾಡಿ ಹಿರಿಯರಿಗೆ ತಿಳಿಸಿ ದೀರ್ಘಕಾಲ ವಿಚಾರ ಮಾಡಿ ತಡವಾಗಿ ಇಂದು ಪೋಲಿಸ್ ಠಾಣೆಗೆ ಬಂದಿರುತ್ತೆನೆ. ಈ ರೀತಿಯಾಗಿ ಅಯ್ಯಣ್ಣಾ ತಂದೆ ಶರಣಪ್ಪಾ ಚೂರಿ ಇತನು ನಮ್ಮ ಹೋಲದ ಸುತ್ತಮುತ್ತಲೂ ತನ್ನ ಹೋಲವಿಲ್ಲದಿದ್ದರೂ ಕೂಡಾ ಅವನು ನಮ್ಮ ಹೋಲ ಸಾಗುವಳಿ ಮಾಡಿಕೊಳ್ಳುತ್ತೆನೆ ಅಂತಾ ತನ್ನ 5 ಮಕ್ಕಳೊಂದಿಗೆ ಕೂಡಿಕೊಂಡು ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನಮ್ಮ ಹೋಲದ ಬದುವು ಹಾಳು ಮಾಡಿದ್ದಲ್ಲದೇ ನನಗೆ ಅವಾಚ್ಯವಾಗಿ ಜೀವದ ಭಯ ಹಾಕಿದ್ದು ಇರುತ್ತದೆ. ಈ 6 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಫಿರ್ಯಾಧಿಯ ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 106/2020 ಕಲಂ 143, 147, 447, 427, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 74/2020 ಕಲಂ:504,506 ಐಪಿಸಿ : ಇಂದು ದಿನಾಂಕ.26/08/2020 ರಂದು 5-45 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ನಮ್ಮ ಠಾಣೆಯ ಕೋರ್ಟ ಕರ್ತವ್ಯ ಪಿಸಿ-100 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆಯನ್ನು ತಂದು ಹಾಜರಪಡಿಸಿದ್ದು ಪಿರ್ಯಾದಿ ಶ್ರೀ ಡಾ|| ಶಾಂತವೀರಪ್ಪ ತಂದೆ ಮಲ್ಲಿಕಾಜರ್ುನಪ್ಪ ಆವಂಟಿ ವ;67 ವರ್ಷ ಉ; ವೈದ್ಯರು ಜಾ; ಲಿಂಗಾಯತ ಸಾ; ಮಾತಾಮಾಣಿಕೇಶ್ವರಿ ನಗರ ಯಾದಗಿರಿ ರವರ ಅಜರ್ಿಯ ಸಾರಾಂಶವೆನಂದರೆ, ನನ್ನ ಮಗ ಡಾ|| ಮುನೇಶ ತಂದೆ ಶಾಂತವೀರಪ್ಪ ಈತನಿಗೆ ಕಲಬುರಗಿ ನಗರದ ಸುಬಾಷ ಮೂಲಗೆ ಸದ್ಯ ನಿವೃತ್ತ ಎ.ಎಸ್.ಐ ರವರ ಮಗಳಾದ ಅಶ್ವಿನಿ ಇವಳೊಂದಿಗೆ 8 ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ಈಗ ಅವರಿಗೆ 7 ವರ್ಷದ ಮನೋಜ ಹಾಗೂ 2 ವರ್ಷದ ಅಕ್ಷಯ ಎಂಬ ಇಬ್ಬರು ಗಂಡು ಮಕ್ಕಳು ಇರುತ್ತಾರೆ. ಮದುವೆಯಾದಾಗಿನಿಂದಲೂ ಆಶ್ವಿನಿ ಇವಳು ನನ್ನ ಮಗ ಮುನೇಶನೊಂದಿಗೆ ಆಗಾಗ ಕಿರಿಕಿರಿ ಮಾಡುತ್ತಾ ಬರುತ್ತಿದ್ದಳು ಹಾಗೂ ಅವಳ ತಂದೆ ಯಾದಗಿರಿಗೆ ಬಂದು ನನ್ನ ಮಗಳಿಗೆ ಏನಾದರು ಅಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಬೆದರಿಕೆ ಹಾಕುತ್ತಿದ್ದನು ಮತ್ತು ನಮ್ಮ ಮೇಲೆ ಸುಳ್ಳು ಆಪಾದನೆ ಮಾಡಿ ಕಲಬುರಗಿ ನ್ಯಾಯಾಲಯದಲ್ಲಿ ಡಿ.ವಿ ಆಕ್ಟ್ ಮತ್ತು ಕೌಟುಂಬಿಕ ಪ್ರಕರಣ ದಾಖಲು ಮಾಡಿದ್ದು ಹಾಗೂ ಯಾದಗಿರಿ ಮಹಿಳಾ ಪೊಲೀಸ ಠಾಣೆಯಲ್ಲಿ ಕಲಂ.498(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ಸದ್ಯ ನನ್ನ ಮಗ ಮುನೇಶ ಈತನ ಹೆಂಡತಿ ಹಾಗೂ ಅವರ ಮಕ್ಕಳು ಕಲಬುರಗಿಯ ಸುಬಾಷ ಮೂಲಗೆ ಅವರ ಹತ್ತಿರ ಇರುತ್ತಾರೆ. ಹಿರಿಯರ ಸಮಕ್ಷಮ ನ್ಯಾಯ ಪಂಚಾಯತಿ ಮಾಡಿ ಅಶ್ವಿನಿ ಇವಳನ್ನು ಕರೆದುಕೊಂಡು ಬರಲು ನಾವು ಪ್ರಯತ್ನಿಸಿದರು ಬಂದಿರುವುದಿಲ್ಲ. ದಿನಾಂಕ; 08/05/2020 ರಂದು 10-45 ಎಎಮ್ ಸುಮಾರಿಗೆ ಸದರಿ ಸುಬಾಷ ಮೂಲಗೆ ಇವರು ಯಾದಗಿರಿಯ ನಮ್ಮ ಮನೆಯ ಮುಂದೆ ಬಂದು ನನ್ನ ಮಗ ಮುನೇಶ, ನನಗೆ ಹಾಗೂ ನನ್ನ ಹೆಂಡತಿ ಚಂದ್ರಕಲಾ ಇವರೊಂದಿಗೆ ಜಗಳ ತೆಗೆದು ನನ್ನ ಮಗಳನ್ನು ಕರೆದುಕೊಂಡು ಹೋಗಲು ಬರುತ್ತೀರಿ ಮಕ್ಕಳೇ ನೀವು ಇನ್ನೊಮ್ಮೆ ನನ್ನ ಮಗಳಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದಲ್ಲಿ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಅವಾಚ್ಯ ಬೈದು ಜೀವ ಬೆದರಿಕೆ ಹಾಕಿರುತ್ತಾನೆ. ಈ ಘಟನೆಯನ್ನು ನಮ್ಮ ಪಕ್ಕದ ಮನೆಯವರಾದ ಭಗವಾನಸಿಂಗ ಮನಗುಳಿ ರವರು ನೋಡಿರುತ್ತಾರೆ. ಇಲ್ಲಿಯವರೆಗೆ ನಾವು ನಮ್ಮ ಬೀಗರಿಗೆ ತಿಳುವಳಿಕೆ ಬಂದು ಸುಧಾರಿಸಿಕೊಂಡು ಗಂಡ-ಹೆಂಡತಿಯನ್ನು ಒಂದು ಮಾಡುತ್ತಾರೆ ಅಂತಾ ನಾವು ಸುಮ್ಮನಿದ್ದರೂ ಸಹಾ ಮತ್ತೆ ಅದೇ ಚಾಳಿ ಮುಂದುವರೆಸಿ ನಮಗೆ ಬೈಯುವುದು ಮಾಡುತ್ತಿದ್ದು ಅವರು ಸುಧಾರಿಸಿಕೊಳ್ಳುವ ಸಾಧ್ಯತೆಗಳು ಇಲ್ಲದ್ದರಿಂದ ನಾನು ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸುತ್ತಿದ್ದು ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಅಜರ್ಿ ನೀಡಿದ್ದು ಇರುತ್ತದೆ. ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಠಾಣೆ ಗುನ್ನೆ ನಂ.74/2020 ಕಲಂ.504,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡನು.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ.04/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ 26/08/2020 ರಂದು 11:00 ಎ.ಎಂಕ್ಕೆ ಶ್ರೀ ಪಕೀರಸಾಬ ತಂದೆ ರಾಜಾಸಾಬ ನಾಣಾಪೂರ ವ:49 ವರ್ಷ ಉ:ಬಟ್ಟೆವ್ಯಾಪಾರಿ ಜಾ:ಮುಸ್ಲಿಂ ಸಾ:ತೆಕ್ಕಲಕೋಟೆ ತಾ: ಸಿರಗುಪ್ಪಾ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾದಿ ಸಲ್ಲಿಸಿದ್ದು ಪಿರ್ಯದಿಯ ಹೇಳಿಕೆ ಸಾರಾಂಶವೆನೆಂದರೆ ನನಗೆ ಮಹ್ಮದ ಯುನೂಸ್ ಹಾಗೂ ಮಹ್ನದ ರಜಾಕ ಅಂತಾ ಇಬ್ಬರು ಗಂಡು ಮಕ್ಕಳಿದ್ದುನಾನು ಹಾಗೂ ನನ್ನ ಮಗ ಯೂನುಸ್ ಇಬ್ಬರು ಬಟ್ಟೆ ವ್ಯಾಪಾರ ಮಾಡುತ್ತೇವೆ ನಾವು ಬಟ್ಟೆ ವ್ಯಾಪಾರವನ್ನು ಹಳ್ಳಿಹಳ್ಳಿಗೆ ಹೋಗಿ ತಿರುಗಾಡುತ್ತಾ ಮಾಡುತ್ತೇವೆ ನಾನು ಸುಮಾರು 8 ದಿವಸಗಳ ಹಿಂದೆ ನಮ್ಮೂರ ನಮ್ಮ ಸಂಬಂದಿಕರಾದ ಪಾರೂಕ. ಹುಸೇನ ಪೀರಸಾಬ. ರಫಿಕ , ಮಾಪಸಾ ಎಲ್ಲರೂಕೂಡಿಕೊಂಡು ನಮ್ಮ ಊರಿನಿಂದ ಲಿಂಗಸೂರಕ್ಕೆ ಬಂದು ಲಿಂಗಸೂರದಲ್ಲಿ ಒಂದುಮನೆ ಬಾಡಿಗೆ ಪಡೆದುಕೊಂಡು ನಮ್ಮ ಸಮಾನುಗಳನ್ನು ಅಲ್ಲಿ ಇಟ್ಟು ಅಲ್ಲಿಂದಲೆ ಹಳ್ಳಿಗಳಿಗೆ ಬಟ್ಟೆ ವ್ಯಾಪರ ಮಾಡಲುಹೋಗುತ್ತಿದ್ದೇವು ಬಟ್ಟೆ ವ್ಯಾಪಾರ ಮಾಡಿಕೊಂಡುಬಂದು ಮರಳಿ ಸಾಯಂಕಾಲ ಲಿಂಗಸೂರಕ್ಕೆ ಬಂದು ಅಲ್ಲಿ ವಸತಿ ಮಾಡುತ್ತಿದ್ದೇವು. ಎಂದಿನಂತೆ ದಿನಾಂಕ 25/08/2020 ರಂದು ಬೆಳಿಗ್ಗೆ ಎದ್ದು ನಾವು ವ್ಯಾಪಾರ ಮಾಡುವ ಸಲುವಾಗಿ ಎಲ್ಲರೂ ಒಂದೊಂದು ಕಡೆಗೆ ಹೋದೇವು ನಾನು ಬಂಗಾರ ಹಟ್ಟಿ ಕಡೆಗೆ ಹೊದೇನು ನನ್ನ ಮಗ ಮಹ್ಮದ ಯೂನುಸ್ ವ: 19 ವರ್ಷ ಹಾಗೂ ನನ್ನ ಅಳಿಯ ಪಾರೂಕ ತಂದೆ ಶಹಜಹಾನ ಇಬ್ಬರು ಕೂಡಿ ತಮ್ಮ ಮೋಟರ ಸೈಕಲ ತಗೆದುಕೊಂಡು ನಾಲತವಾಡ ಕಡೆಗೆ ಹೋದರು ನಾನು ದಿನಾಂಕ 25/08/2020 ರಂದು 12:40 ಪಿ.ಎಂ ಕ್ಕೆ ಬಂಗಾರ ಹಟ್ಟಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ನಮ್ಮ ಅಳಿಯ ಪಾರೂಕ ಈತನು ಪೋನ ಮಾಡಿ ತಿಳಿಸಿದ್ದೆನೆಂದರ ನಾನು ಹಾಗೂ ಯೂನುಸ್ ಇಬ್ಬರು ಕೂಡಿ ಬಟ್ಟೆ ವ್ಯಾಪಾರ ಮಾಡಿಕೊಂಡು ನಾರಾಯಣಪೂರ ಚೆಕ್ಕಪೊಸ್ಟ ಹತ್ತಿರ ನಾರಾಯಣಪೂರ ಡ್ಯಾಮನ ಎಡದಂಡೆ ಕಾಲುವೆಯಲ್ಲಿ ಬ್ರಿಡ್ಜ ಕೆಳಗಡೆ ಕ್ಯಾನಲಗೆ ಮಾಡಿರುವ ರ್ಯಾಂಪ ಹತ್ತಿರ ಕ್ಯಾನಲ್ದಲ್ಲಿ ಜಳಕ ಮಾಡುತ್ತಿದ್ದೇವು 12:30 ಪಿ.ಎಂ ಸುಮಾರಿಗೆ ನಾನು ಜಳಕ ಮಾಡಿ ಬಟ್ಟೆಯನ್ನು ಒಣಹಾಕಲು ಕ್ಯಾನಲ್ ಮೇಲೆ ಬಂದಿದ್ದು ಯುನಸ್ನು ಕ್ಯಾನಲದಲ್ಲಿ ಜಳಕ ಮಾಡುತ್ತಿದ್ದು ಯುನಸ್ನು ಜಳಕ ಮಾಡುತ್ತಿದ್ದಾಗ ಕ್ಯಾನಲ್ದಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ಯುನಸ್ನು ನೀರು ಹರಿಯುವ ರಭಸಕ್ಕೆ ನೀರಿನಲ್ಲಿ ಮುಳುಗುತ್ತಾ ಹರಿದುಕೊಂಡುಹೋಗಿರುತ್ತಾನೆ ನೀನು ಕೂಡಲೆ ಬರಬೇಕು ಅಂತಾ ತಿಳಿಸಿದನು ಆಗ ನಾನು ನನ್ನ ಜೊತೆಗೆ ವ್ಯಾಪಾರಕ್ಕೆ ಬಂದಿದ್ದ ಮಾಪಸಾ, ಹುಸೇನಪೀರಸಾಬ, ರಫಿಕ ರವರನ್ನು ಕರೆದುಕೊಂಡು ಬಂದು ನಾರಾಯಣಪೂರ ಚೆಕ್ಕ ಪೊಸ್ಟ ಹತ್ತಿರ ಇರುವ ಬ್ರಿಡ್ಜ ಹತ್ತಿರ ಕ್ಯಾನಲದಲ್ಲಿ ಬಂದು ನೋಡಿದ್ದು ಕ್ಯಾನಲ್ ತುಂಬಿ ಹರಿಯುತ್ತಿರುವದರಿಂದ ನನ್ನ ಮಗನು ನೀರಿನಲ್ಲಿ ಹರಿದುಕೊಂಡು ಹೋಗಿದನು ನಂತರ ನಾವೇಲ್ಲರೂ ಕೂಡಿ ನನ್ನ ಮಗನನ್ನು ಕ್ಯಾನಲ ಮೇಲೆ ಹುಡುಕಾಡುತ್ತಿದ್ದಾಗ ಇಂದು ದಿನಾಂಕ 26/08/2020 ರಂದು 9:00 ಎ ಎಂ ಸುಮಾರಿಗೆ ನಮಗೆ ಗೊತ್ತಾಗಿದ್ದೇನೆಂದರೆ ಕುರೆಕನಾಳ ಸೀಮಾಂತರದ ಉಪ ಕಾಲುವೆಯಲ್ಲಿ ಒಂದು ಗಂಡು ಶವ ಹೋಗುತ್ತಿದೆ ಅಂತಾ ಗೊತ್ತಾಗಿದ್ದು ನಾವು ಕೂಡಲೆ ಅಲ್ಲಿಗೆ ಹೋಗಿ ನೋಡಿದ್ದು ಆ ಶವವು ನನ್ನ ಮಗನದ್ದೆ ಇದ್ದು ನನ್ನ ಮಗನು ದಿನಾಂಕ 25/08/2020 ರಂದು ಮದ್ಯಾಹ್ನ 12:30 ಪಿ.ಎಂ ಸುಮಾರಿಗೆ ನಾರಾಯಣಪೂರ ಡ್ಯಾಂ ನ ಎಡದಂಡೆ ಕಾಲುವೆಯ ನಾರಾಯಣಪೂರ ಚೆಕ್ಪೊಸ್ಟ ಹತ್ತಿರ ಕಾಲುವೆಯಲ್ಲಿ ಜಳಕ ಮಾಡುವಾಗಿ ಆಕಸ್ಮಿಕ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ನನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲ ನನ್ನ ಮಗನ ಶವವು ಈಗ ಕುರೆಕನಾಳ ಸೀಮಾಂತರದ ಉಪಕಾಲುವೆಯಲ್ಲಿ ಇದ್ದು ತಾವು ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ ಹೇಳಿ ಬರೆಯಿಸಿದ ಹೇಳಿಕೆ ಇರುತ್ತದೆ ಅಂತಾ ನೀಡಿದ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್ ನಂ 04/2020 ಕಲಂ 174 ಸಿ ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 101/2020 ಕಲಂ 15(ಎ), 32(3) ಕೆ.ಇ ಎಕ್ಟ್ : ದಿನಾಂಕ: 26/08/2020 ರಂದು 5.20 ಪಿ.ಎಮ್.ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಶಿರವಾಳ ಗ್ರಾಮದ ತನ್ನ ದಿನಸಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿ ಆರೋಪಿತನಿಂದ ಸಿಕ್ಕ ಅಂದಾಜು 807.99/- ರೂ ಕಿಮ್ಮತ್ತಿನ 2.070 ಲೀಟರ್ ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.