ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/08/2020

By blogger on ಮಂಗಳವಾರ, ಆಗಸ್ಟ್ 25, 2020
                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/08/2020                                                                                                                      

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 19/2020  ಕಲಂ 279,  338, 304(ಎ) ಐಪಿಸಿ : ದಿನಾಂಕ 21/04/2020 ರಂದು 01-30 ಪಿ.ಎಂ ದ ಸುಮಾರಿಗೆ ಯಾದಗಿರಿ ನಗರದ ಶುಭಂ ಪೆಟ್ರೋಲ್ ಬಂಕ್ ಹತ್ತಿರ ಮುಖ್ಯ ರಸ್ತೆಯ ಬದಿಯಲ್ಲಿ ಈ ಕೇಸಿನ ಪಿಯರ್ಾದಿ ಮತ್ತು ಗಾಯಾಳು ಖಂಡಪ್ಪ ಇಬ್ಬರು ನಡೆದುಕೊಂಡು ಹೊರಟಿದ್ದಾಗ ಆರೋಪಿತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಎಕ್ಸ್-6985 ನೇದ್ದನ್ನು ಹೊಸಳ್ಳಿ ಕ್ರಾಸ್ ಕಡೆಯಿಂದ ಗಂಜ್ ಕಡೆಗೆ ನಡೆಸಿಕೊಂಡು ಹೋಗುತ್ತಿದ್ದಾಗ ಅತೀವೇಗ ಮತ್ತು ಅಲಕ್ಷ್ಯತನದಿಂದ ಗಾಯಾಳು ಖಂಡಪ್ಪ ಈತನಿಗೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಗಾಯಾಳು ಖಂಡಪ್ಪ ಈತನಿಗೆ ತಲೆಗೆ ಭಾರೀ ಗುಪ್ತಗಾಯವಾಗಿ ಬಲಕಿವಿಯಿಂದ ರಕ್ತ ಹೊರಬಂದು ಬೇವುಶ್ ಹೋಗಿದ್ದು ಇರುತ್ತದೆ. ಈ ಘಟನೆಗೆ ಕಾರಣನಾದ ಮೋಟಾರು ಸೈಕಲ್ ಸವಾರ ಶಂಕರ ತಂದೆ ಗೋಪಾಲ ಚವ್ಹಾಣ ಸಾ;ಆಶಾಪುರ ತಾಂಡ ಈತನ ಮೇಳೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 19/2020 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಹೀಗಿದ್ದು  ಈ ಪ್ರಕರಣದಲ್ಲಿನ ಗಾಯಾಳು ಖಂಡಪ್ಪ ಇವರಿಗೆ ದಿನಾಂಕ 21/04/2020 ರಂದು 01-30 ಪಿ.ಎಂ.ಕ್ಕೆ ರಸ್ತೆ ಅಪಘಾತದಲ್ಲಾದ ಗಾಯಗಳಿಗೆ ಚಿಕಿತ್ಸೆ ನೀಡಿದ ಯಾದಗಿರಿ ಸಕರ್ಾರಿ ಆಸ್ಪತ್ರೆಯ ವೈದ್ಯರು ಅದೇ ದಿನ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರ ಮೇರೆಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಉಪಚಾರಕ್ಕಾಗಿ ದಾಖಲು ಮಾಡಿದ್ದು, ತದನಂತರ ಯುನೈಟೆಡ್ ಆಸ್ಪತ್ರೆಯಿಂದ ವಿಜಯಪುರದ ಚೌದ್ರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಗಾಯಾಳು ಇವರು ಇಂದಿನವರೆಗೆ ಚೌದ್ರಿ ಆಸ್ಪತ್ರೆಯಲ್ಲಿ ಉಪಚಾಋ ಪಡೆದುಕೊಂಡಿದ್ದು, ಇಂದು ದಿನಾಂಕ 25/08/2020 ರಂದು ಬೆಳಿಗ್ಗೆ ಅಲ್ಲಿಂದ ಮತ್ತೆ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯೆ ಯಾದಗಿರಿ ಗಂಜ್ ಹತ್ತಿರ ಮೃತನಿಗೆ ಅಪಘಾತದಲ್ಲಾದ ಗಾಯಗಳ ಬಾಧೆಯಿಂದ  ಬೆಳಿಗ್ಗೆ 10 ಎ.ಎಂ.ದ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ  ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಿ ಅಂತಾ ಈ ಕೇಸಿನ ಪಿಯರ್ಾದಿ ಪುರವಣಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಮಾಹಿತಿಯನ್ನು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.  


ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 36/2020  ಕಲಂ 279, 338 ಐಪಿಸಿ : ನಿನ್ನೆ ದಿನಾಂಕ 24/08/2020 ರಂದು 12-40 ಪಿ.ಎಂ.ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮೇಲೆ ಬರುವ ಬಸವೆಶ್ವರ ಗಂಜ್ ಎರಡನೇ ಗೇಟ್  ಹತ್ತಿರ ಈ ಕೇಸಿನಲ್ಲಿನಟ್ಗಾಯಾಳು ದೇವಿಕಿಶನ್ ತನ್ನ ಮೋಟಾರು ಸೈಕಲ್ ನಂ. ಕೆಎ-33, ಎಸ್-8910 ನೇದ್ದನ್ನು ನಡೆಸಿಕೊಂಡು ಹೋಗುತ್ತಿದ್ದಾಗ ಟ್ರ್ಯಾಕ್ಟರ್ ನಂ.ಕೆಎ-33, ಟಿಬಿ-0435 ನೆದ್ದರ ಚಾಲಕನು ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೆ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೆದ್ದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ  ಗಾಯಾಳು ದೇವಿಕಿಶನ್ ಈತನಿಗೆ ಎಡಗೈ ಮೊಣಕೈ ಹತ್ತಿ ಕೈ ಮುರಿದಿದ್ದು  ಟ್ರ್ಯಾಕ್ಟರ ಚಾಲಕನ ಮೇಲೆ  ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಇಂದು ದಿನಾಂಕ 25/08/2020 ರಂದು ತಡವಾಗಿ ನೀಡಿದ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 36/2020 ಕಲಂ 279,  338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  


ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 73/2020 ಕಲಂ 379 ಐಪಿಸಿ : ಯರ್ಾದಿ ಸಾರಾಂಶವೇನೆಂದರೆ, ನಾನು ಯಾದಗಿರಿ ನಗರದ ಎಸ್.ಎಲ್.ವ್ಹಿ ಹೊಟೇಲ್ ಹಿಂದುಗಡೆ ಇರುವ ಗುಡ್ಲಕ್ ಕಂಪ್ಯೂಟರ್ ಸೆಂಟರ್ ಮಾಲಿಕರಾದ ದೇವಿಂದ್ರಪ್ಪ ಗುಂಡಳ್ಳಿ ರವರ ಮನೆಯಲ್ಲಿ ಬಾಡಿಗೆ ಇದ್ದೇನೆ. ನನ್ನದೊಂದು ಕಪ್ಪು ಬಣ್ಣದ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ ಏಂ 25 ಇಎ 3086 ಅಂತಾ ಇದ್ದು, ಅದರ ಇಟಿರಟಿಜ ಓಠ-ಊಂ10ಇಈಃಊಒ37533, ಅಚಿ ಓಠ-ಒಃಐಊಂ10ಇಚಃಊಒ42834, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 30,000/ ರೂಪಾಯಿಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು, ದಿನಾಂಕ 24/08/2020 ರಂದು ಸಾಯಂಕಾಲ 06-00 ಗಂಟೆಯ ಸುಮಾರಿಗೆ ನಾನು ಕೆಲಸ ಮುಗಿಸಿಕೊಂಡು ಮನೆಗೆ ನಮ್ಮ ಮೆನೆಯ ಮುಂದೆ ನನ್ನ ಮೋಟರ್ ಸೈಕಲ್ ನಿಲ್ಲಿಸಿ ನಾನು ಮನೆಯಲ್ಲಿ ಉಳಿದುಕೊಂಡೆನು. ನಂತರ ದಿನಾಂಕ 25/08/2020 ರಂದು ಬೆಳಿಗ್ಗೆ 06-00 ಎ.ಎಮ್ ಕ್ಕೆ ನಾನು ವಾಕಿಂಗ್ ಹೋಗಲು ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ಮನೆಯ ಅಕ್ಕ ಪಕ್ಕದಲ್ಲಿ ನೋಡಲಾಗಿ ನನ್ನ ಮೋಟರ್ ಸೈಕಲ್ ಸಿಗದೇ ಇದ್ದಾಗ ನನ್ನ ಗೆಳೆಯರಾದ ನಾಗರಾಜ ತಂದೆ ಮಲ್ಲಣ್ಣ ಬೀರನೂರ, ಮತ್ತು ಮಹೇಶ ತಂದೆ ಶರಣಪ್ಪ  ಪೂಜಾರಿ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದರು. ಎಲ್ಲರು ಕೂಡಿ ಇತರ ಸ್ಥಳಗಲ್ಲಿ ತಿರುಗಾಡಿ ನೋಡಲು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ನನ್ನ ಮೋಟರ್ ಸೈಕಲ್ ಎಲ್ಲಾ ಕಡೆಗೆ ಹುಡುಕಾಡಿ ಈಗ ಠಾಣೆಗೆ ಬಂದು ದೂರು ನೀಡುತ್ತಿದ್ದು, ನನ್ನ ಮೋಟರ್ ಸೈಕಲ್ ಪತ್ತೆಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 73/2020 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 97/2020 ಕಲಂ: 143, 147, 148, 504, 354, 323, 324, 114, 506 ಸಂ 149 ಐಪಿಸಿ : ಇಂದು ದಿನಾಂಕ: 25/08/2020 ರಂದು 5-45 ಪಿಎಮ್ ಕ್ಕೆ ಶ್ರೀಮತಿ ತಾಯಮ್ಮ ಗಂಡ ಹೈಯಾಳಪ್ಪ ಕಕ್ಕಸಗೇರಾ, ವ:26, ಜಾ:ಕಬ್ಬಲಿಗ, ಉ:ಹೊಲಮನೆ  ಸಾ:ಟಿ. ವಡಗೇರಾ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಟಿ. ವಡಗೇರಾ ಗ್ರಾಮದಲ್ಲಿ ಹೊಲಮನೆ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ಇಂದು ದಿನಾಂಕ: 25/08/2020 ರಂದು ಮುಂಜಾನೆ 7 ಗಂಟೆ ಸುಮಾರಿಗೆ ನನ್ನ ಗಂಡ ಹೈಯಾಳಪ್ಪನು ಮನೆಯಲ್ಲಿ  ಮಲಗಿಕೊಂಡಾಗ ನಮ್ಮೂರ ನಮ್ಮ ಜಾತಿಯ ಹಣಮಂತ ತಂದೆ ನಿಂಗಪ್ಪ ಹಳಿಕುರಿ ಮತ್ತು ಬಸಪ್ಪ ತಂದೆ ಮಹಾದೇವಪ್ಪ ಹಳಿಕುರಿ ಇಬ್ಬರೂ ಬಂದು ನಮ್ಮ ಗದ್ದೆಯಲಿ ಗೊಬ್ಬರ ಚೆಲ್ಲುವುದಿದೆ ಬಾ ಎಂದು ಕರೆದುಕೊಂಡು ಹೊದರು. ನಮ್ಮೂರ ಇಳಿಗೇರ ಶಾಂತಮ್ಮನ ಅಂಗಡಿ ಹತ್ತಿರ ಹೋಗುತ್ತಿದ್ದಾಗ ಹಣಮಂತ ಈತನಿಗೆ ಯಾರೋ ಅವನ ಕಡೆಯವರು ಫೋನ ಮಾಡಿ ಹೈಯಾಳಪ್ಪನಿಗೆ ಕರೆದುಕೊಂಡು ಬಂದಿರಿಲ್ಲ ಆ ಸೂಳೆ ಮಗನಿಗೆ ಇವತ್ತು ಖಲಾಸ ಮಾಡೆ ಬಿಡೋಣ ಎಂದು ಕೇಳಿದಾಗ ಕರೆದುಕೊಂಡು ಬರುತ್ತಿದ್ದೆವೆ ನೀವು ಎಲ್ಲಾ ತಯಾರಿ ಮಾಡ್ರಿ ಇವನಿಗೆ ಇವತ್ತು ಖಲಾಸ ಮಾಡೆ ಬಿಡೋಣ ಎಂದು ಮಾತಾಡುವುದು ಕೇಳಿಸಿಕೊಂಡ ನನ್ನ ಗಂಡ ಹೈಯಾಳಪ್ಪನು ಅನುಮಾನ ಬಂದು ಅಲ್ಲಿಂದ ಓಡಿ ಹೋಗಬೇಕೆನ್ನುವಾಗ ಅವನಿಗೆ ಬಸಪ್ಪನು ಗಟ್ಟಿಯಾಗಿ ಹಿಡಿದುಕೊಂಡಾಗ ಹಣಮಂತನು ಅಲ್ಲಿಯೇ ಅಂಗಡಿಯಲ್ಲಿದ್ದ ಒಂದು ಕೆ.ಜಿ ತೂಕದ ಕಲ್ಲನ್ನು ತೆಗೆದುಕೊಂಡು ನನ್ನ ಗಂಡನ ನಡು ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ಆದರೂ ನನ್ನ ಗಂಡನು ಅವರಿಂದ ಕೊಸರಿ ಬಿಡಿಸಿಕೊಂಡು ಮನೆಗೆ ಬಂದು ನಡೆದ ಸಂಗತಿ ಹೇಳಿದನು. ಇದಾದ ನಂತರ ಬೆಳಗ್ಗೆ 8 ಗಂಟೆ ಸುಮಾರಿಗೆ ನಮ್ಮೂರ ಮಾರೆಪ್ಪ ತಂದೆ ಬಾಲಪ್ಪ ಗ್ಯಾಂಗಲೀಡರ್ ಈತನು ಬಂದು ಹಣಮಂದೇವರ ಗುಡಿ ಹತ್ತಿರ ಕಟ್ಟೆಗೆ ನ್ಯಾಯ ಪಂಚಾಯತ ಕುಂತು ಮಾತಾಡಿ ಬಗೆಹರಿಸಿಕೊಳ್ಳೊಣ ಬಾ ಎಂದು ಕರೆದಾಗ ನನ್ನ ಗಂಡನು ನಾನು ಬರಲ್ಲ ಎಂದರು ಅವನು ಇಲ್ಲ ಬಾ ನಿನಗೆ ಯಾರು ಹೊಡೆಯಲ್ಲಾ ನಾನು ಇರುತ್ತೇನೆ ಎಂದು ಕರೆದುಕೊಂಡು ಹೋದನು. ನನ್ನ ಗಂಡನ ಹಿಂದೆ ನಾನು ಮತ್ತು ನನ್ನ ಗಂಡನ ಮೈದುನ ಶರಣಪ್ಪ ತಂದೆ ಹಣಮರೆಡ್ಡಿ ಹಾಗೂ ಅಣ್ಣತಮ್ಮಕಿಯವರಾದ ಸಾಬಣ್ಣ ತಂದೆ ಕನ್ನಗಿರಿಯಪ್ಪ ಮತ್ತು ನಮ್ಮ ದೂರದ ಸಂಬಂಧಿಯಾದ ಮಲ್ಲಣ್ಣ ತಂದೆ ನಿಂಗಣ್ಣ ಮ್ಯಾಗೇರಿ ಎಲ್ಲರೂ ಹಣಮಂದೇವರ ಗುಡಿಹತ್ತಿರ ಹೋದಾಗ ಅಲ್ಲಿ 1) ಹಣಮಂತ ತಂದೆ ನಿಂಗಪ್ಪ ಹಳಿಕುರಿ, 2) ಬಸಪ್ಪ ತಂದೆ ಮಹಾದೇವಪ್ಪ ಹಳಿಕುರಿ, 3) ಮಾರೆಪ್ಪ ತಂದೆ ಬಾಲಪ್ಪ ಗ್ಯಾಂಗಲೀಡರ ಹಳಿಕುರಿ, 4) ದೊಡ್ಡ ಬಾಲಪ್ಪ ತಂದೆ ಸಿದ್ದಣ್ಣ ಹಳಿಕುರಿ, 5) ಭೀಮಣ್ಣ ತಂದೆ ಸಿದ್ದಣ್ಣ ಹಳಿಕುರಿ, 6) ಭೀಮಣ್ಣ ತಂದೆ ನಿಂಗಪ್ಪ ಹಳಿಕುರಿ, 7) ಸಾಬಣ್ಣ ತಂದೆ ಮಹಾದೇವಪ್ಪ ಹಳಿಕುರಿ, 8) ಮಲ್ಲಪ್ಪ ತಂದೆ ಮಹಾದೇವಪ್ಪ ಹಳಿಕುರಿ, 9) ನಿಂಗಪ್ಪ ತಂದೆ ದೊಡ್ಡ ಮಲ್ಲಣ್ಣ, 10) ಮಹಾದೇವಪ್ಪ ತಂದೆ ಬಾಲಪ್ಪ ಹಳಿಕುರಿ, 11) ಮಾನಮ್ಮ ಗಂಡ ಹಣಮಂತ ಹಳಿಕುರಿ ಮತ್ತು ಇತರರು ಸೇರಿ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ನಿಂತಿದ್ದು, ಎಲ್ಲರೂ ನನ್ನ ಗಂಡನಿಗೆ ಮಗನೆ ಲೇ ಹೈಯಾಳಿ ನೀನು ಕೆನಾಲ ಹತ್ತಿರ ಬಟ್ಟೆ ಒಗೆಯುತ್ತಿದ್ದ ನಮ್ಮ ಮಾನಮ್ಮ ಗಂಡ ಹಣಮಂತ ಇವಳಿಗೆ ಕೈ ಸನ್ನೆ ಮಾಡಿ ಕರೆದಿರುವಿಯಂತೆ ಚೋದಿ ಮಗನೆ ನಿನ್ನ ಸೊಕ್ಕು ಜಾಸ್ತಿಯಾಗಿದೆ. ಇವತ್ತು ಯಾವ ನ್ಯಾಯ ಪಂಚಾಯತಿ ಮಾಡಲ್ಲ ನಿನಗೆ ಖಲಾಸ ಮಾಡುತ್ತೇವೆ ಎಂದು ಜಗಳ ತೆಗೆದವರೆ ದೊಡ್ಡ ಬಾಲಪ್ಪ ಈತನು ಬಂದು ನನ್ನ ಗಂಡನ ಕಾಲು ಹಿಡಿದು ಒಡ್ಡು ಮುರಿದು ಒಳ ಪೆಟ್ಟು ಮಾಡಿದನು. ಹಣಮಂತ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಬಲಗೈ ಮುಡ್ಡಿಗೆ ಹೊಡೆದು ಒಳಪೆಟ್ಟು ಮಾಡಿದನು. ಬಸಪ್ಪ ಈತನು ಹಿಡಿಗಲ್ಲಿನಿಂದ ಬೆನ್ನಿಗೆ ಹೊಡೆದನು. ಮಾನಮ್ಮ ಇವಳು ಬಂದು ಈ ಬಾಡಕೊ ನನಗೆ ಕೈ ಸನ್ನೆ ಮಾಡಿ ಕರೆದಾನ ಎಂದು ಕೈಯಿಂದ ಕಪಾಳಕ್ಕೆ ಹೊಡೆದಳು. ಮಾರೆಪ್ಪ ಈತನು ನಿಂತುಕೊಂಡು ಹೊಡೆಯಿರಿ ಈ ಸೂಳೆ ಮಗನಿಗೆ ನ್ಯಾಯ ಪಂಚಾಯತಿ ಇದೆ ಎಂದು ನಾನು ಕರೆದುಕೊಂಡು ಬಂದಿನಿ ಇವತ್ತು ಹೊಡೆದು ಖಲಾಸ ಮಾಡಿರಿ ಎಂದು ಹೇಳಿದ್ದರಿಂದ ಭೀಮಣ್ಣ ಮತ್ತು ಸಾಬಣ್ಣ ಇವರು ನನ್ನ ಗಂಡನಿಗೆ ನೆಲಕ್ಕೆ ಹಾಕಿ ಕಾಲಿನಿಂದ ಕಚ್ಚಿಪಿಚ್ಚಿ ತುಳಿದಾಡಿದರು. ಇದನ್ನು ನೋಡಿ ಬಿಡಿಸಲು ಹೊದ ನನಗೆ ಭೀಮಣ್ಣ ತಂದೆ ನಿಂಗಪ್ಪ ಈತನು ಬಂದು ನನ್ನ ಸೀರೆ ಸೆರಗು ಹಿಡಿದು ಜಗ್ಗಾಡಿ ಈ ಭೊಸಿಡಿದು ಸೊಕ್ಕು ಆಗ್ಯಾದ ಎಂದು ಕೈಯಿಂದ ನನ್ನ ಮೈ ಕೈ ಮುಟ್ಟಿ ಮಾನಭಂಗ ಮಾಡಲು ಪ್ರಯತ್ನಿಸಿ ನನ್ನ ಎದೆಗೆ, ಬೆನ್ನಿಗೆ ಹೊಡೆದನು. ಜಗಳ ಬಿಡಿಸಲು ಬಂದ ನನ್ನ ಗಂಡನ ತಮ್ಮನಾದ ಶರಣಪ್ಪನಿಗೆ ಮಹಾದೇವಪ್ಪನು ಹಿಡಿದುಕೊಂಡು ಮಲ್ಲಪ್ಪನು ಹಿಡಿಗಲ್ಲಿನಿಂದ ಬಲ ಭುಜಕ್ಕೆ ಹೊಡೆದು ತರಚಿದ ಗಾಯ ಮಾಡಿದನು. ಆಗ ನಮ್ಮೊಂದಿಗೆ ಬಂದಿದ್ದ ಮಲ್ಲಣ್ಣ ಮತ್ತು ಸಾಬಣ್ಣ ಇವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ನಾವು ಅಲ್ಲಿಂದ ನನ್ನ ಗಂಡ ಮತ್ತು ಮೈದನನಿಗೆ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಇಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದ್ದು, ವಡಗೇರಾ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ಹೇಳಿರುತ್ತೇವೆ. ಕಾರಣ ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 97/2020 ಕಲಂ: 143, 147, 148, 504, 354, 324, 323, 114, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 12/2020 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 25/08/2020 ರಂದು ಮೃತ ಫರೀನಾ ತಂದೆ ಮೈನುದ್ದಿನ ಇವಳು ತನ್ನ ತಾಯಿ ಮಹಿಬೂಬಿ ಮತ್ತು ಅಣ್ಣನಾದ ಮಹಿಬೂಬ ಇವರೊಂದಿಗೆ ತಮ್ಮ ಸ್ವಂತ ಹೊಲದಲ್ಲಿ ಹತ್ತಿ ಬೆಳೆಗೆ ಕ್ರಿಮಿನಾಶಕ ಎಣ್ಣೆ ಸಿಂಪರಣೆ ಮಾಡಲು ಹೋಗಿದ್ದು, ಸದರಿ ಫರಿನಾ ಇವಳು ಕೊಡದಿಂದ ನೀರು ತಂದು ಕೊಡುತ್ತಿದ್ದಳು. ಸದರಿ ಹತ್ತಿ ಬೆಳೆ ಕ್ರಿಮಿನಾಶಕ ಎಣ್ಣೆಯನ್ನು 5 ಲೀಟರದ ನೀರಿನ ಕ್ಯಾನಿನಲ್ಲಿ ತುಂಬಿ ಇಟ್ಟಿದ್ದು, ಅದರಿಂದ ಸಿಂಪರಣೆ ಮಾಡುವ ಡಬ್ಬಿಗೆ ಕ್ರಿಮಿನಾಶಕ ಹಾಕಿ ನೀರು ಕಲಿಸಿ, ಮಹಿಬೂಬನು ಹತ್ತಿ ಬೆಳೆಗೆ ಸಿಂಪರಣೆ ಮಾಡುತ್ತಿದ್ದನು. ಸಾಯಂಕಾಲ 4 ಗಂಟೆ ಸುಮಾರಿಗೆ ಮೃತ ಫರೀನಾ ಇವಳು ತನಗೆ ಬಾಯಾರಿಕೆ ಆಗಿದ್ದರಿಂದ ಸದರಿ 5 ಲೀಟರದ ಕ್ಯಾನಿನಲ್ಲಿ ಇದ್ದ ಕ್ರಿಮಿನಾಶಕವನ್ನು ನೀರು ಅಂತಾ ತಿಳಿದು ಗಟ ಗಟನೆ ಕುಡಿದಾಗ ಅವಳ ತಾಯಿ ಮಹೀಬೂಬಿ ನೋಡಿ ತನ್ನ ಮಗನಿಗೆ ಹೇಳಿ ಇಬ್ಬರೂ ಸೇರಿ ಫರಿನಾ ಇವಳಿಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಉಪಚಾರ ಪಡೆಯುತ್ತಾ 5-40 ಪಿಎಮ್ ಸುಮಾರಿಗೆ ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ಘಟನೆ ಆಕಸ್ಮಿಕ ಸಂಭವಿಸಿದ್ದು, ಯಾರ ಮೇಲೆ ಯಾವುದೇ ಫಿರ್ಯಾಧಿ ಸಂಶಯ ಇರುವುದಿಲ್ಲ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 12/2020 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.    


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 39/2020 ಕಲಂ 109 ಸಿಆರ್.ಪಿ.ಸಿ : ಇಂದು ದಿನಾಂಕ 25/08/2020 ರಂದು ಮದ್ಯಾಹ್ನ 14-10 ಗಂಟೆಗೆ ನಾರಾಯಣ ಹೆಚ್.ಸಿ 49  ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ವ್ಯಕ್ತಿಯನ್ನು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಮಾನ್ಯರವರ ಆದೇಶದಂತೆ ಇಂದು ದಿನಾಂಕ 25/08/2020 ರಂದು ಬೆಳಗಿನ ಜಾವ 04-00 ಗಂಟೆಗೆ ಗುಡ್ ಮಾನರ್ಿಂಗ್ ಬೀಟ್ ಕರ್ತವ್ಯ ಕುರಿತು ಹೊರಟು. ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಬೆಳಗಿನ ಜಾವ 05-30 ಗಂಟೆಯ ಸುಮಾರಿಗೆ ಹಳಿಸಗರ ಏರಿಯಾದ ಸಿಬರಬಂಡಿ ಕಟ್ಟೆಯ ಕಡೆಗೆ ಹೋದಾಗ ಒಬ್ಬ ವ್ಯಕ್ತಿ ಒಂದು ಕಿಲಿ ಹಾಕಿದ ಪಾನ್ ಶಾಪ್ ಅಂಗಡಿ ಏನಾದರು ಕಳ್ಳತನ ಮಾಡುವ ಉದ್ದೇಶದಿಂದ ಇಣುಕಿ -ಇಣುಕಿ ನೋಡುತಿದ್ದನು, ಸದರಿಯವನ ಮೇಲೆ ಸಂಶಯ ಬಂದು ಅವರ ಹತ್ತಿರ ಹೋಗುತಿದ್ದಾಗ ನಾನು ಸಮವಸ್ತ್ರದಲ್ಲಿರವುದನ್ನು ಕಂಡು ಸದರಿಯವನು ಅಲ್ಲಿಂದ ಓಡಿ ಹೋಗುತಿದ್ದಾಗ  ನಾನು  ಹಿಂಬಾಲಿಸಿ ಹಳಿಸಗರ ಏರಿಯಾದ ಹನುಮಾನ ಗುಡಿಯ ಎದರುಗಡೆ ಮುಂಜಾನೆ 05-45 ಗಂಟೆಗೆ ಹಿಡಿದುಕೊಂಡು  ಸದರಿಯವನ ಹೆಸರು ವಿಳಾಸ ವಿಚಾರಿಸಲು ತೊದಲ ನುಡಿಯುತ್ತಾ ಅಪ್ರಾ-`ತಪ್ರಾ ಹೇಳಲಾರಂಬಿಸಿದನು, ಸದರಿಯವನಿಗೆ  ಪುನಃ ಚೌಕಾಸಿ ಮಾಡಲಾಗಿ  1) ರಮೇಶ ತಂದೆ ಚನ್ನಪ್ಪ ಅರಳಿಮಟ್ಟಿ ವಯ 27 ವರ್ಷ ಜಾತಿ ಲಿಂಗಾಯತ  ಉಃ ಕೂಲಿ ಕೆಲಸ ಸಾಃ ಹೆಗಡಿಯಾಳ ತಾಃ ಜಿಃ ವಿಜಯಪೂರ  ಅಂತ ಹೇಳಿದನು. ಸದರಿಯವನು ಹಾಗೆಯೇ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ಮುಂಜಾಗ್ರತ ಕ್ರಮವಾಗಿ ತಾಬೆಗೆ ತೆಗೆದುಕೊಂಡು,  ಠಾಣೆಗೆ  ಕರೆತಂದು  ಸದರಿ ವ್ಯಕ್ತಿಯು  ವಿಜಯಪೂರ ಪಟ್ಟಣದ ಪೊಲೀಸ್ ಠಾಣೆಗಳ ಸರಹದ್ದಿಯಲ್ಲಿ ಎಲ್ಲಿಯಾದರು  ಸ್ವತ್ತಿನ ಪ್ರಕರಣ ಮಾಡಿದ ಬಗ್ಗೆ ವಿಚಾರಣೆ ಮಾಡಿ, ಆರೋಪಿತನ ವಿರುದ್ದ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್ ನಂ 39/2020 ಕಲಂ 109  ಸಿ.ಆರ್.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 227/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ : ಇಂದು ದಿನಾಂಕ 25/08/2020  ರಂದು  ಬೆಳಗಿನ ಜಾವ 04-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ವೆಂಕಟೇಶ್  ಪೊಲೀಸ್ ಉಪ-ಅಧೀಕ್ಷಕರು, ಸುರಪೂರ ಉಪ ವಿಭಾಗ ರವರು, ಒಂದು ಮರಳು ತುಂಬಿದ ಟಿಪ್ಪರ ವಾಹನ ನಂ ಕೆಎ-33-ಎ-8253 ನೇದ್ದು ಹಾಜರ ಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಫಿಯರ್ಾದಿಯವರು ದಿನಾಂಕ 24/08/2020 ರಂದು ವಿಶೇಷ ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯ ನಿರ್ವಹಿಸುತ್ತಾ ಇಂದು ದಿನಾಂಕ 25/08/2020 ರಂದು ದೇವದುರ್ಗ ಕ್ರಾಸ್ ಹತ್ತಿರ ಬಂದು ನಿಂತಿದ್ದಾಗ ಬೆಳಗಿನ ಜಾವ 01-10 ಗಂಟೆಗೆ ಎಮ್ ಕೊಳ್ಳುರ  ಕಡೆಯಿಂದ ಒಂದು ಟಿಪ್ಪರ ನಂ ಕೆಎ-33-ಎ-8253 ನೇದ್ದರಲ್ಲಿ  ಮರಳು ತುಂಬಿಕೊಂಡು ಬಂದಿದ್ದು, ಸದರಿ ವಾಹನವನ್ನು  ನಿಲ್ಲಿಸಿ ತಪಾಸಣೆ   ಮಾಡಿದ್ದು, ಸದರಿ ವ್ಯಕ್ತಿಗೆ ಮರಳನ್ನು ಸಾಗಿಸಲು ಅಧಿಕೃತವಾದ ರಾಜಧನ ರಾಯಲ್ಟಿ ಹಾಜರ ಪಡಿಸುವಂತೆ ಸೂಚಿಸಿದಾಗ ಟಿಪ್ಪರದಲ್ಲಿ ಇಟ್ಟಿರುತ್ತೇನೆ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಟಿಪ್ಪರನ ಕಡೆಗೆ ತೆರಳಿ ಅಲ್ಲಿಂದ ಪರಾರಿಯಾಗಿದ್ದು ಸಿಬ್ಬಂದಿಯವರು ಹಿಂಬಾಲಿಸಿದರು ಸಿಕ್ಕಿರುವುದಿಲ್ಲ. ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಸರಕಾರಕ್ಕೆ ಸೇರಿದ ಮರಳನ್ನು  ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಪಡೆಯದೆ ಸಾಗಿಸುತಿದ್ದ ಬಗ್ಗೆ ಕಂಡು ಬಂದಿದ್ದರಿಂದ,  ಸ್ಥಳಕ್ಕೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಸದರಿಯವರ ಸಮಕ್ಷಮದಲ್ಲಿ ಬೆಳಗಿನ ಜಾವ 02-10 ಗಂಟೆಯಿಂದ 03-10 ಗಂಟೆಯ ವರೆಗೆ ಜಪ್ತಿಪಂಚನಾಮೆ ಮೂಲಕ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 227/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 228/2020 ಕಲಂ 341, 504, 506 ಐಪಿಸಿ : ಇಂದು ದಿನಾಂಕ:25-08-2020 ರಂದು ಮುಂಜಾನೆ ಫಿಯರ್ಾದಿ  ಗ್ರಾಮ ದೇವತೆ ದೇವಸ್ಥಾನದಲ್ಲಿ ಖಾಂಡ ಪೂಜಾ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿ ಪ್ರಸಾದ ತೆಗೆದುಕೊಂಡು ಮರಳಿ ಮನೆಗೆ ಹೊರಟಿದ್ದೆನು.  ಹೀಗೆ ಹೊರಟಾಗ 9:30 ಗಂಟೆ ಸುಮಾರಿಗೆ  ಆರೋಪಿ ರಾಜಶೇಖರನು ಒಮ್ಮೆಲೆ    ಹಿಂದಿನಿಂದ ಮುಂದೆ ಬಂದು ಅಡ್ಡಗಟ್ಟಿ ನಿಂತು ತಡೆದು ನಿಲ್ಲಿಸಿ ಎನಲೇ ಸೂಳಿ ಮಕ್ಕಳೆ ನೀವು ಊರಿಗೆ ಬಂದು ಜೀವನ ಮಾಡುತ್ತೀರಿ ಇನ್ನು ನಿಮಗೆ ಉಳಿಗಾಲ್ಲ ನಿಮ್ಮ ಜೀವ ನಮ್ಮ ಕೈಯಲ್ಲಿದೆ ಎಂದನು. ಆಗ ನಾನು ಆತನಿಗೆ ಇಲ್ಲ ಮಾವ  ನಮ್ಮದು ಯಾವ ತಪ್ಪಿಲ್ಲ ನಮ್ಮ ಮೇಲೆ ದ್ವೇಶ ಸಾದಿಸಬೇಡ ಎಂದು ಹೇಳಿದರೂ ಸಹಿತ ಆತನು ಮಕ್ಕಳೆ ಎಂದಾದರೂ ಒಂದು ದಿನ ನಿಮ್ಮ ಜೀವ ನಮ್ಮ ಕೈಯಲ್ಲಿದೆ ನೀವು ಹೇಗೆ ಜೀವನ ಮಾಡುತ್ತೀರಿ ನೋಡುತ್ತೇನೆಂದು  ಬೆದರಿಕೆ ಹಾಕಿದನು ಅಷ್ಟರಲ್ಲಿ  ನಮ್ಮ  ತಂದೆ ಅಲ್ಲಿಗೆ ಬರುತ್ತಿದ್ದನು. ಮತ್ತು ಅಲ್ಲಿ ನಮ್ಮೂರ ಯಲ್ಲಪ್ಪ ತಂದೆ ಮಲ್ಲಪ್ಪ ಮ್ಯಾಕಲದೊಡ್ಡಿ ಎಂಬುವವರು ಬಂದು ಬಿಡಿಸಿಕೊಂಡರು.  ಆಗ ರಾಜಶೇಖರನು ಮಗನೆ ನೀವು ಜ್ವಾಕಿ ಇರಿ  ನಿಮ್ಮನ್ನು ಬಿಡುವುದಿಲ್ಲ ವೆಂದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಹೋದನು. ಆದ್ದರಿಂದ  ಇಂದು ದಿನಾಂಕ: 25-08-2020 ರಂದು ಮುಂಜಾನೆ 9:30 ಗಂಟೆಗೆ ಹಳೆ ವೈಷಮ್ಯದಿಂದ ನನಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ರಾಜಶೇಖರ ನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯದಿ ಸಾರಾಂಶ ವಿರುತ್ತದೆ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 229/2020. ಕಲಂ 279, 338 ಐ.ಪಿ.ಸಿ. ಮತ್ತು 187 ಐ.ಎಮ್.ವ್ಹಿ.ಆಕ್ಟ : ದಿನಾಂಕ: 25-08-2020 ರಂದು ಸಾಯಂಕಾಲ 11:30 ಗಂಟೆ ಸುಮಾರಿಗೆ ಶಹಾಪುರ ಓಲ್ಡ ಹೆಚ್.ಡಿ.ಎಫ್.ಸಿ. ಬ್ಯಾಂಕ ಮುಂದೆ ಫಿಯರ್ಾದಿ ಮತ್ತು ಅವರ ತಾಯಿ ತಿಪ್ಪವ್ವ 70 ವರ್ಷ ಇಬ್ಬರು ನಡೆದುಕೊಂಡು ಹಳೆ ಬಸ್ ನಿಲ್ದಾಣದ ಕಡೆಗೆ ಹೊರಟಾಗ ಹಿಂದಿನಿಂದ ಆರೋಪಿತನು ತನ್ನ ಗೂಡ್ಸ ವಾಹನ ನಂ. ಕೆ.ಎ.32-ಸಿ. 9118 ನೇದ್ದನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ನಿಂತ ಫಿರ್ಯಾದಿ ಮತ್ತು ಇನ್ನೊಬ್ಬ ಗಾಯಾಳು ತಿಪ್ಪವ್ವ ಗಂಡ ಭಿಮಣ್ಣ ಇವರಿಗೆ ಇವರಿಗೆ ಡಿಕ್ಕಿ ಪಡಿಸಿ ರವರು ಕೆಳಗೆ ಬೀಳಿಸಿ ಭಾರೀ  ಗಾಯ ಮಾಡಿ ವಾಹನವನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ   ಅಂತಾ ಇತ್ಯಾದಿ ಇದ್ದ  ಫಿರ್ಯದಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ.229/2020 ಕಲಂ. 279, 338 ಐ.ಪಿ.ಪಿ. ಮತ್ತು 187 ಐ.ಎಮ್.ವಿಆಕ್ಟ  ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು

      

ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 40/2020. ಕಲಂ 107 ಸಿ.ಆರ್.ಪಿ.ಸಿ.  :    ದಿನಾಂಕ: 25-07-2020 ರಂದು 3:30 ಪಿ.ಎಮ್.ಕ್ಕೆ ಶಹಾಪುರ ನಗರದ ಹಳಿಸಗರ ಏರಿಯಾದಲ್ಲಿ ಪೆಟ್ರೋಲಿಂಗ ಕುರಿತು ನಾನು ಮತ್ತು ನಾರಾಯಣ ಹೆಚ್.ಸಿ. 49 ರವರು ಹೋದಾಗ  ಅಲ್ಲಿ ಮಾಹಿತಿ ಬಂದಿದ್ದೇನಂದರೆ  ಈ ಹಿಂದೆ  ಗೋಗಿ ಪೊಲೀಸ ಠಾಣೆಯ ವ್ಯಾಪ್ತಿಯ ಬಾಣತಿಹಾಳ ಗ್ರಾಮದಲ್ಲಿ  ಸುರೇಶ ತಂದೆ ರಾಜಶೇಖರ ಎಂಬುವನ ಕೊಲೆ ಪ್ರಕರಣದ ಆರೋಪಿತರಾದ   ಹಣಮಂತ ತಂದೆ ಸಾಹೇಬಗೌಡ ಜಡೇನರ  ಮತ್ತು ಧರ್ಮರಾಜ ತಂದೆ ಹಣಮಂತ ಜಡೆನರ ಸಾ: ಇಬ್ಬರು ಹಳಿಸಗರ ಇವರುಗಳ ಜಾಮೀನಿನ ಮೇಲೆ ಹೊರಗೆ ಬಂದಿದ್ದು  ಇರುತ್ತದೆ.  ಸದರಿ ಮೃತ ಸುರೇಶನ ತಂದೆ ಅಣ್ಣತಮ್ಮಂದಿರಾದ 1) ರಾಜಶೇಖರ ತಂದೆ ರಾಮಯ್ಯ ಗಾಂಜಿ 2) ಆಂಜನೇಯ ತಂದೆ ರಾಜಶೇಖರ ಗಾಂಜಿ 3) ಅಶೋಕ ತಂದೆ ರಾಜಶೇಖರ ಗಾಂಜಿ 4) ರಮೇಶ ತಂದೆ ನಾಗಪ್ಪ ಗಾಂಜಿ ಸಾ:ಎಲ್ಲರೂ ಸಾ: ಹಳಿಸಗರ ಇವರುಗಳ ಹಣಮಂತ ಮತ್ತು ದರ್ಮರಾಜನ ಮೇಲೆ ಹಗೆತನ ಸಾದುಸುತ್ತಿದ್ದು ಇರುತ್ತದೆ. ಮತ್ತು ಎರಡೂ ಪಾಟರ್ಿಯ ಜನರು ಮತ್ತೆ ತಕರಾರು ಮಾಡಿಕೊಂಡು ತಮ್ಮ ಪ್ರಾಣ ಆಸ್ತಿ ಹಾನಿ ಮಾಡಿಕೊಳ್ಳುವ ಸಂಭವಗಳು ಹೆಚ್ಚಾಗಿದ್ದು ಇರುತ್ತದೆ  ಈ ಬಗ್ಗೆ ಇಂದು ದಿನಾಂಕ: 25-08-2020 ರಂದು ಫಿಯರ್ಾದಿ ಧರ್ಮರಾಜ ತಂದೆ ಹಣಮಂತ ಜಡೇನರ ಸಾ: ಹಳಿಸಗರ ಇವರು ಠಾಣೆಗೆ ಬಂದು ಒಂದು ಫಿರ್ಯದಿ ನೀಡಿದ್ದು ಅದರಂತೆ ಗುನ್ನೆ ನಂ. 228/2020 ಕಲಂ. 341, 504, 506 ಐ.ಪಿ.ಸಿ. ಪ್ರಕರಣ ಧಾಖಲಾಗಿದ್ದು ಇರುತ್ತದೆ. ಆದ್ದರಿಂದ ಸದರಿ ಮೇಲಿನ ನಾಲ್ಕು ಜನರ ವಿರುದ್ದ ನನ್ನದು ಸಕರ್ಾರಿ ತಫರ್ೆ ಫಿಯರ್ಾದಿ ಇದ್ದು  ಮುಂಜಾಗೃತಾ ಕ್ರಮವಾಗಿ ಅವರ ಮೇಲೆ ಕಲಂ. 107 ಸಿ.ಆರ್.ಪಿ.ಸಿ. ಅಡಿಯಲ್ಲಿ  ಕ್ರಮ ಜರುಗಿಸಲು ಸೂಚಿಲಸಾಗಿದೆ ಅಂತಾ ಇದ್ದ ವರದಿಯ ಆಧಾರದ ಮೇಲಿಂದ ಠಾಣೆ ಪಿ.ಎ.ಆರ್. ನಂ 40/2020 ಕಲಂ. 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಕ್ರಮ ಜರುಗಿಸಿದ್ದು ಇದೆ   


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 41/2020. ಕಲಂ 107 ಸಿ.ಆರ್.ಪಿ.ಸಿ. : ಇಂದು ದಿನಾಂಕ: 25-07-2020 ರಂದು 3:30 ಪಿ.ಎಮ್.ಕ್ಕೆ ಶಹಾಪುರ ನಗರದ ಹಳಿಸಗರ ಏರಿಯಾದಲ್ಲಿ ಪೆಟ್ರೋಲಿಂಗ ಕುರಿತು ನಾನು ಮತ್ತು ನಾರಾಯಣ ಹೆಚ್.ಸಿ. 49 ರವರು ಹೋದಾಗ  ಅಲ್ಲಿ ಮಾಹಿತಿ ಬಂದಿದ್ದೇನಂದರೆ  ಈ ಹಿಂದೆ  ಗೋಗಿ ಪೊಲೀಸ ಠಾಣೆಯ ವ್ಯಾಪ್ತಿಯ ಬಾಣತಿಹಾಳ ಗ್ರಾಮದಲ್ಲಿ  ಸುರೇಶ ತಂದೆ ರಾಜಶೇಖರ ಎಂಬುವನ ಕೊಲೆ ಪ್ರಕರಣದ ಆರೋಪಿತರಾದ   ಹಣಮಂತ ತಂದೆ ಸಾಹೇಬಗೌಡ ಜಡೇನರ  ಮತ್ತು ಧರ್ಮರಾಜ ತಂದೆ ಹಣಮಂತ ಜಡೆನರ ಸಾ: ಇಬ್ಬರು ಹಳಿಸಗರ ಇವರುಗಳ ಜಾಮೀನಿನ ಮೇಲೆ ಹೊರಗೆ ಬಂದಿದ್ದು  ಇರುತ್ತದೆ.  ಸದರಿ ಮೃತ ಸುರೇಶನ ತಂದೆ ಅಣ್ಣತಮ್ಮಂದಿರಾದ 1) ರಾಜಶೇಖರ ತಂದೆ ರಾಮಯ್ಯ ಗಾಂಜಿ 2) ಆಂಜನೇಯ ತಂದೆ ರಾಜಶೇಖರ ಗಾಂಜಿ 3) ಅಶೋಕ ತಂದೆ ರಾಜಶೇಖರ ಗಾಂಜಿ 4) ರಮೇಶ ತಂದೆ ನಾಗಪ್ಪ ಗಾಂಜಿ ಸಾ:ಎಲ್ಲರೂ ಸಾ: ಹಳಿಸಗರ ಇವರುಗಳ ಹಣಮಂತ ತಂದೆ ಸಾಹೇಬಗೌಡ ಜಡೇನರ ಮತ್ತು ದರ್ಮರಾಜ ತಂದೆ ಹಣಮಂತ ಜಡೇನರ ಸಾ: ಹಳಿಸಗರ ಶಹಾಪುರ ಇವರುಗಳ ನಡುವೆ ವೈಷಮ್ಯ ಇದ್ದು    ಮತ್ತು ಎರಡೂ ಪಾಟರ್ಿಯ ಜನರು ಮತ್ತೆ ತಕರಾರು ಮಾಡಿಕೊಂಡು ತಮ್ಮ ಪ್ರಾಣ ಆಸ್ತಿ ಹಾನಿ ಮಾಡಿಕೊಳ್ಳುವ ಸಂಭವಗಳು ಹೆಚ್ಚಾಗಿದ್ದು ಇರುತ್ತದೆ  ಈ ಬಗ್ಗೆ ಇಂದು ದಿನಾಂಕ: 25-08-2020 ರಂದು ಫಿಯರ್ಾದಿ ಧರ್ಮರಾಜ ತಂದೆ ಹಣಮಂತ ಜಡೇನರ ಸಾ: ಹಳಿಸಗರ ಇವರು ಠಾಣೆಗೆ ಬಂದು ಒಂದು ಫಿರ್ಯದಿ ನೀಡಿದ್ದು ಅದರಂತೆ ಗುನ್ನೆ ನಂ. 228/2020 ಕಲಂ. 341, 504, 506 ಐ.ಪಿ.ಸಿ. ಪ್ರಕರಣ ಧಾಖಲಾಗಿದ್ದು ಇರುತ್ತದೆ. ಆದ್ದರಿಂದ 1) ಹಣಮಂತ ತಂದೆ ಸಾಹೇಬಗೌಡ ಜಡೇನರ ಮತ್ತು 2) ದರ್ಮರಾಜ ತಂದೆ ಹಣಮಂತ ಜಡೇನರ ಸಾ: ಹಳಿಸಗರ ಶಹಾಪುರ ರವರ  ವಿರುದ್ದ ನನ್ನದು ಸಕರ್ಾರಿ ತಫರ್ೆ ಫಿಯರ್ಾದಿ ಇದ್ದು  ಮುಂಜಾಗೃತಾ ಕ್ರಮವಾಗಿ ಅವರ ಮೇಲೆ ಕಲಂ. 107 ಸಿ.ಆರ್.ಪಿ.ಸಿ. ಅಡಿಯಲ್ಲಿ  ಕ್ರಮ ಜರುಗಿಸಲು ಸೂಚಿಲಸಾಗಿದೆ ಅಂತಾ ಇದ್ದ ವರದಿಯ ಆಧಾರದ ಮೇಲಿಂದ ಠಾಣೆ ಪಿ.ಎ.ಆರ್. ನಂ 41/2020 ಕಲಂ. 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಕ್ರಮ ಜರುಗಿಸಿದ್ದು

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!