ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/08/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 72/2020 ಕಲಂ 78(3) ಕೆ.ಪಿ ಆ್ಯಕ್ಟ್ 1963 : ಇಂದು ದಿನಾಂಕ; 24/08/2020 ರಂದು 4-00 ಪಿಎಮ್ ಕ್ಕೆ ಶ್ರೀ ಎನ್ ವೈ ಗುಂಡುರಾವ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ. 24/08/2020 ರಂದು 10-45 ಎಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಲಿವಾಡ ಏರಿಯಾದ ಬಸವಣ್ಣ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 3-50 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 4-00 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.72/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 107/2020 ಕಲಂ. 279, 338 ಐಪಿಸಿ : ದಿನಾಂಕ 24-08-2020 ರಂದು ಮದ್ಯಾಹ್ನ 02-15 ಗಂಟೆಗೆ ಪಿಯಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 23-08-2020 ರಂದು ಬೆಳಿಗ್ಗೆ 11-00 ಗಂಟೆಗೆ ನಾವು ಗೆಳೆಯರು ಕೂಡಿಕೊಂಡು ಕಾರ ನಂ. ಕೆಎ-33 ಬಿ-8179 ನೆದ್ದನ್ನು ಬಾಡಿಗೆ ಮಾಡಿಕೊಂಡು ಗುರಮಿಠಕಲ್ ಹತ್ತಿರ ಇರುವ ಚಿಂತನಳ್ಳಿಯ ಗವಿಸಿದ್ದೇಶ್ವರ ಮಠಕ್ಕೆ ಹೋಗಿ ದೇವಸ ದರ್ಶನ ಮಾಡಿಕೊಂಡು ವಾಪಸ ರಾಯಚೂರಿಗೆ ಯಾದಗಿರಿ-ರಾಯಚೂರ ಮುಖ್ಯ ರಸ್ತೆಯ ಮೇಲೆ ಕಡೆಚೂರ ಕೆಐಎಡಿಬಿ ಬ್ರಿಜ್ ಹತ್ತಿರ ರಾತ್ರಿ 07-30 ಗಂಟೆಗೆ ಹೋಗುತ್ತಿರುವಾಗ ರಸ್ತೆಯ ಮೇಲೆ ನಾಯಿ ಅಡ್ಡ ಬಂದಿದ್ದರಿಂದ ಕಾರ ಚಾಲಕನು ಕಾರನ್ನು ಒಮ್ಮಲೆ ಬ್ರೇಕ್ ಮಾಡಿದ್ದರಿಂದ ಕಾರು ರೋಡಿನ ಪಕ್ಕದಲ್ಲಿ ಪಲ್ಟಿಯಾಗಿರುತ್ತದೆ ಕಾರಿನಲ್ಲಿ ಕುಳಿತ ಶರಣಬಸವ ತಂದೆ ಜಂಬಣ್ಣ ಈತನಿಗೆ ಬಲಗಾಲಿಗೆ ತೋಡೆಗೆ ಭಾರಿ ರಕ್ತಗಾಯವಾಗಿರುತ್ತದೆ ಸದರಿ ಘಟನೆಯು ಕಾರ ಚಾಲಕನು ತಾನು ನಡೆಸುವ ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ರಿಂದ ನಡೆದಿರುತ್ತದೆ ಅಂತಾ ಪಿಯಾಧಿ ಸಾರಂಶ ಇರುತ್ತದೆ
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 126/2020 ಕಲಂ 341, 323, 504, 506 ಸಂ. 34 ಐಪಿಸಿ : ಇಂದು ದಿನಾಂಕ: 24-08-2020 ರಂದು ರಾತ್ರಿ 8-00 ಗಂಟೆಗೆ ಅಜರ್ಿದಾರ ಠಾಣೆಗೆ ಬಂದು ನೀಡಿದ ದೂರು ಅಜರ್ಿ ಸಾರಾಂಶವೆನೆಂದರೆ, ದಿನಾಂಕ. 24.08.2020 ರಂದು ಬೆಳಿಗ್ಗೆ ಸುಮಾರು 7-00 ಗಂಟೆಯ ಸುಮಾರಿಗೆ ಅಜರ್ಿದಾರ ಬಯಲು ಕಡೆಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ಅಜರ್ಿದಾರನ ಮನೆಯ ಮುಂದಿನ ದಾರಿಯ ಹತ್ತಿರ ರಾಜು ರಾಠೋಡ ಮತ್ತು ಆತನ ಮಗ ನರೇಶ ಮತ್ತು ಆತನ ಹೆಂಡತಿ ಶಾಂತಿಬಾಯಿ ಮೂರು ಜನ ಕೂಡಿ ಜಗಳ ತೆಗೆದು, ಎದೆ ಮೇಲಿನ ಅಂಗಿ ಹಿಡಿದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಕೈಯಿಂದ ಮುಖಕ್ಕೆ, ತಲೆಗೆ ಹೊಡೆದಿದ್ದು ಮೂಗಿಗೆ ತೆರಚಿದ ರಕ್ತಗಾಯ ಮಾಡಿ ತಲೆಗೆ ಮತ್ತು ಬೆನ್ನಿಗೆ ಒಳಪೆಟ್ಟು ಮಾಡಿದ್ದು, ಅಜರ್ಿದಾರ ನ ತಾಯಿ ಶಿವಿಬಾಯಿಗೆ, ಶಾಂತಿಬಾಯಿ ಇವಳು ಕೈಯಿಂದ ಮುಷ್ಟಿಮಾಡಿ ಬೆನ್ನಿಗೆ ಗುದ್ದಿದ್ದು, ಕೆಳಗೆ ಬಿದ್ದುದರಿಂದ ಮೊಳಕಾಲಿಗೆ ಒಳಪೆಟ್ಟಾಗಿರುತ್ತದೆ. ನರೇಶ ಈತನು ಅಜರ್ಿದಾರನ ಬೆನ್ನಿಗೆ ಕೈಯಿಂದ ಗುದ್ದಿ ಒಳಪೆಟ್ಟು ಮಾಡಿರುತ್ತಾನೆ. ಮೂರು ಜನ ಸೇರಿ ಭೀಕಾರಿ ಸೂಳೇ ಮಕ್ಕಳೇ ನೀವು ಇನ್ನೊಮ್ಮೆ ಜಾಗದ ತಂಟೆಗೆ ಬಂದರೆ, ನಿಮಗೆ ಇಲ್ಲೇ ಖಲಾಸ ಮಾಡುತ್ತೇವೆ ಅಂತ ಜೀವದ ಭಯ ಹಾಕಿರುತ್ತಾರೆ ಅಂತ ದೂರು ಅಜರ್ಿ ಸಾರಾಂಶ ಇರುತ್ತದೆ.
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 194/2020 ಕಲಂ: 279,338 ಐ.ಪಿಸಿ: ಇಂದು ದಿನಾಂಕಃ 24/08/2020 ರಂದು ರಸ್ತೆ ಅಪಘಾತದಲ್ಲಿ ಗಾಯಹೊಂದಿ ಜಿ.ಜಿ.ಹೆಚ್ ಸುರಪೂರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಫಿಯರ್ಾದಿಯ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ನಿನ್ನೆ ರಾತ್ರಿ ನಾನು ಹಟ್ಟಿ ನಗರದಲ್ಲಿ ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ನಿರ್ವಹಿಸಿ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಇಂದು ದಿನಾಂಕಃ 24/08/2020 ರಂದು ಮುಂಜಾನೆ ನನ್ನ ಧರ್ಮಪತ್ನಿಯಾದ ಶ್ರೀಮತಿ ಉಮಾದೇವಿಯವರು ನನಗೆ ಫೋನ್ ಮಾಡಿ ನಿನ್ನೆಯಿಂದ ಜ್ವರ ಹಾಗು ಕೆಮ್ಮಿನಿಂದ ಬಳಲುತ್ತಿರುವದಾಗಿ ತಿಳಿಸಿದರಿಂದ ನಾನು ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಬರೋಣಾವೆಂದು ತಯಾರಾಗಿ ಮುಂಜಾನೆ 8-15 ಗಂಟೆಗೆ ಹಟ್ಟಿಯಿಂದ ನನ್ನ ಮೋ. ಸೈಕಲ್ ನಂಬರ ಕೆ.ಎ 33 ಯು 5788 ನೇದ್ದರ ಮೇಲೆ ಗುರಗುಂಟಾ, ತಿಂಥಣಿ ಬ್ರಿಜ್ ಮಾರ್ಗವಾಗಿ ಶಾಂತಪೂರ ಗ್ರಾಮಕ್ಕೆ ಬಂದು ಮುಖ್ಯರಸ್ತೆಯ ಪಕ್ಕದಲ್ಲಿರುವ ಒಂದು ಹೊಟೇಲನಲ್ಲಿ ಚಹಾ ಕುಡಿದಿರುತ್ತೇನೆ. ಚಹಾ ಕುಡಿಯುವಾಗ ನನ್ನ ಮೊಬೈಲ್ ಫೋನ್ ಟೆಬಲ್ ಮೇಲೆ ಇಟ್ಟು ಚಹಾ ಕುಡಿದು ಮೊಬೈಲ್ ಅಲ್ಲೆ ಮರೆತು ಮೋ.ಸೈಕಲ್ ಚಾಲು ಮಾಡಿಕೊಂಡು ದೇವಾಪೂರ ಕ್ರಾಸ್ ವರೆಗೆ ಬಂದಾಗ ನಾನು ನನ್ನ ಮೋಬೈಲ್ ಫೋನ್ ಹೊಟೇಲಿನಲ್ಲಿ ಮರೆತು ಬಂದಿರುವದು ನೆನಪಾಯಿತು. ಆದ್ದರಿಂದ ಅಲ್ಲಿಂದ ಮೋ.ಸೈಕಲ್ ತಿರುಗಿಸಿ ಶಾಂತಪೂರ ಕಡೆಗೆ ಹೊರಟಿದ್ದಾಗ 9-30 ಎ.ಎಮ್ ಸುಮಾರಿಗೆ ದೇವಾಪೂರ ಆಚೆ ಬರುವ ತಿರುವು ರಸ್ತೆಯ ಹತ್ತಿರ ಎದುರಿನಿಂದ ಬಿಳಿ ಬಣ್ಣದ ಕಾರ ನಂಬರ ಕೆ.ಎ 37 ಎನ್ 2591 ನೇದ್ದರ ಚಾಲಕನು ತನ್ನ ಕಾರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಒಮ್ಮೆಲೆ ಬಲಕ್ಕೆ ತಿರುಗಿಸಿ ನನ್ನ ಮೋ.ಸೈಕಲಿಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನನ್ನ ಬಲತೊಡೆಯಲ್ಲಿ ಎಲಬು ಮುರಿದು ಭಾರಿ ಗುಪ್ತಗಾಯವಾಗಿದ್ದು, ಬಲಮೊಣಕಾಲಿನ ಕೆಳಗಡೆ ಭಾರಿ ರಕ್ತಗಾಯ ಹಾಗು ಬಲಗೈ ಮದ್ಯದ ಬೆರಳಿಗೆ ರಕ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ಚಾಲಕನ ಹೆಸರು ವಿಚಾರಿಸಲಾಗಿ ಬಾಲಪ್ಪ ತಂದೆ ಗವಿಸಿದ್ದಪ್ಪ ಮತ್ತೂರ ಸಾ: ಕೊಪ್ಪಳ ಅಂತ ತಿಳಿಸಿದ್ದು ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಪಡೆದುಕೊಂಡು 12-15 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಠಾಣೆ ಗುನ್ನೆ ನಂ. 194/2020 ಕಲಂ. 279, 338 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.