ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/08/2020
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 106/2020, ಕಲಂ, 341, 323.324,504.506. ಸಂಗಡ 34 ಐ ಪಿ ಸಿ : ದಿನಾಂಕ: 23-08-2020 ಮದ್ಯಾಹ್ನ 02-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯಾಧಿ ನೀಡಿದ ಸಾರಂಶವೆನೆಂದರೆ ನಾವು ತಮ್ಮ ತಂದೆ ತಾಯಿಗೆ 3 ಜನ ಗಂಡು ಮಕ್ಕಳಿದ್ದು ನಾವು 3 ಜನರು ಬೇರೆ ಬೇರೆಯಾಗಿದ್ದು ನನಗೆ ಹಳೆ ಮನೆ ಬಂದಿರುತ್ತದೆ ನಮ್ಮ ತಮ್ಮನವರಿಗೆ ಹೊಸ ಮನೆ ಬಂದಿರುತ್ತದೆ ನನ್ನ ಪಾಲಿಗೆ ಬಂದ ಹಳೆಯ ಮನೆಯ ಹತ್ತಿರ ನಮ್ಮ ತಮ್ಮನವರಿಗೆ ಖುಲ್ಲಾ ಜಾಗ ಬಂದಿರುತ್ತದೆ ಆ ಜಾಗದಲ್ಲಿ ನಮ್ಮ ತಮ್ಮನವರು ಎತ್ತುಗಳನ್ನು ಕಟ್ಟಿ ಹಾಕುತ್ತಿರುತ್ತಾರೆ ಒಮ್ಮೊಮ್ಮೆ ಎತ್ತುಗಳು ನಮ್ಮ ಮನೆಯ ಹತ್ತಿರ ಇರುವ ಕಂಬಕ್ಕೆ ತಿಕ್ಕುದ್ದವು ನಮ್ಮ ತಮ್ಮನವರಿಗೆ ಎತ್ತುಗಳನ್ನು ಬಿಡಬೇಡಿರಿ ಅಂತಾ ಹೇಳುತಿದ್ದೆನು ದಿನಾಂಕ: 22-08-2020 ರಂದು ಸಾಯಂಕಾಲ 05-30 ಗಂಟೆಗೆ ನಾನು ನಮ್ಮ ಹಳೆಯ ಮನೆಯ ಮಾಳಿಗೆಯ ಮೇಲೆ ಇರುವಾಗ ನಮ್ಮ ತಮ್ಮನವರ ಎತ್ತುಗಳು ಬಂದು ಕರೆಂಟ್ ಕಂಬಕ್ಕೆ ತಿಕ್ಕುತ್ತಿರುವಾಗ ನಾನು ಅವರಿಗೆ ರತ್ತುಗಳ ಸಂಗಡ ಬರ್ರಿ ಹಿಂದೆ ಬರಬೆಡಿರಿ ಎತ್ತುಗಳು ಕಂಬಕ್ಕೆ ತಿಕ್ಕುತ್ತವೆ ಅಂತಾ ಹೇಳಿದ್ದಕ್ಕೆ ನೀನು ಮಾಳಿಗೆ ಮೇಲೆ ನಿಂತು ಮಾತಾಡುತ್ತನಲೇ ಕೆಳಗೆ ಬಂದು ಮಾತಾಡು ಅಂತಾ ಅಂದು ಕೆಳಗೆ ಬಂದಾಗ ಶಿವಶಂಕರ ಈತನು ನನಗೆ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು ಆಮನಂದ ಈತನು ನನಗೆ ಎರಡು ಕೈಗಳನ್ನು ಹಿಡಿದುಕೊಂಡು ಕಳಗೆ ಬಿಳಿಸಿ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ್ದು ಆಗ ನಾನು ಅಂಜಿ ಮನೆಯ ಕಡೆಗೆ ಹೋಗುತ್ತಿರುವಾಗ ಶಿವ ಶಂಕರ ಈತನು ಅಡ್ಡಗಟ್ಟಿ ನಿಲ್ಲಿಸಿ ಎದೆಯ ಮೇಲಿನ ಅಂಗಿ ಹಿಡಿದು ಮುಂದೆ ಹೊದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
ಯಾದಗಿರ ಪೊಲೀಸ ಠಾಣೆ ಗುನ್ನೆ ನಂ:- 06/2020 ಕಲಂ 110 (ಇ)&(ಜಿ) ಸಿ.ಆರ್.ಪಿ.ಸಿ : ಇಂದು ದಿನಾಂಕ 23/08/2020 ರಂದು ಬೆಳಿಗ್ಗೆ 9-00 ಎ.ಎಂ. ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ವೆಂಕಟೇಶನಗರದಲ್ಲಿ ಒಬ್ಬನು ರಸ್ತೆಯಲ್ಲಿ ನಿಂತು ಗುಂಡಾಗಿರಿ ಮಾಡುತ್ತಾ ಹೋಗಿ ಬರುವ ಜನರಿಗೆ ತೊಂದರೆ ಕೊಡುತ್ತಿದ್ದಾನೆ ಅಂತಾ ಪೊಲೀಸ್ ಬಾತ್ಮಿ ಮಾಹಿತಿ ಬಂದಿತು, ನಾನು ಮತ್ತು ನಮ್ಮ ಸಿಬ್ಬಂಧಿಯವರಾದ ಶ್ರೀ ಪ್ರಭುಗೌಡ ಸಿಪಿಸಿ-361, ಮತ್ತು ಶ್ರೀ ಮಲ್ಲಪ್ಪ ಸಿಪಿಸಿ-136 ಎಲ್ಲರೂ ಕೂಡಿಕೊಂಡು ಸರಕಾರಿ ವಾಹನ ನಂ ಕೆ.ಎ-33-ಜಿ-0067 ನೆದ್ದರಲ್ಲಿ ಬೆಳಿಗ್ಗೆ 9-30 ಗಂಟೆಗೆ ವೆಂಕಟೇಶ ನಗರಕ್ಕೆ ಭೇಟಿ ನೀಡಿದಾಗ ವೆಂಕಟೇಶನಗರ ತಾಂಡಾದ ಕಮಾನ ಹತ್ತಿರ ಒಬ್ಬನು ಸಾರ್ವಜನಿಕ ರಸ್ತೆಯಲ್ಲಿ ನಿಂತು ಹೋಗಿ ಬರುವ ಜನರಿಗೆ ಮತ್ತು ವಾಹನಗಳಿಗೆ ಅಡೆತಡೆವುಂಟು ಮಾಡಿ ತೊಂದರೆ ಮಾಡುತ್ತಿದ್ದು, ಸದರಿ ವ್ಯಕ್ತಿ ಸಾರ್ವಜನಿಕರಿಗೆ ಅವಾಚ್ಯ ಪದಗಳಿಂದ ಬೈಯ್ಯುತ್ತಿದ್ದು, ಸದರಿ ವ್ಯಕ್ತಿಯಿಂದ ಸಾರ್ವಜನಿಕರಿಗೆ ಶಾಂತಿ ಭಂಗವನ್ನುಂಟು ಮಾಡಿ ಅಸಭ್ಯವಾಗಿ ವತರ್ಿಸಿ ಗುಂಡಾಗಿರಿ ಪ್ರದಶರ್ಿಸುತ್ತಿದ್ದುದನ್ನು ಖಚಿತಪಡಿಸಿಕೊಂಡು, ಸದರಿಯವನಿಗೆ ಹೀಗೆ ಬಿಟ್ಟಲ್ಲಿ ಮುಂದೆನಾದರೂ ಅನಾಹುತ ಮಾಡಿ ಘೋರ ಕೃತ್ಯವೆಸಗಬಹುದೆಂಬ ಸಂಭವ ಕಂಡು ಬಂದ ಮೇರೆಗೆ ಸದರಿಯವನಿಗೆ ಸಿಬ್ಬಂದಿಯವರ ಸಹಾಯದಿಂದ ಬೆಳಿಗ್ಗೆ 9-45 ಎ.ಎಂ.ಕ್ಕೆ ಹಿಡಿದು ವಿಚಾರಿಸಲು ತನ್ನ ಹೆಸರು ಮಂಗೇಶ ತಂದೆ ಪತ್ತು ರಾಠೋಡ ವಃ 30 ವರ್ಷ ಉಃ ಕೂಲಿ ಜಾ: ಲಮಾಣಿ ಸಾಃ ವೆಂಕಟೇಶ ನಗರ ತಾಃಜಿಃಯಾದಗಿರ ಅಂತಾ ತಿಳಿಸಿದ್ದು, ಅವನನ್ನು ಮುಂಜಾಗೃತ ಕ್ರಮಕ್ಕಾಗಿ ದಸ್ತಗಿರಿ ಮಾಡಿಕೊಂಡು ಠಾಣೆಗೆ ಬೆಳಿಗ್ಗೆ 10-15 ಎ.ಎಂ.ಕ್ಕೆ ಆರೋಪಿತನೊಂದಿಗೆ ಬಂದು ಸದರಿಯವನ ಮೇಲೆ ಠಾಣೆ ಪಿ.ಆರ್. ನಂ 06/2020 ಕಲಂ 110 (ಇ) & (ಜಿ) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 100/2020 ಕಲಂ 279 ಐ.ಪಿ.ಸಿ : ದಿನಾಂಕ:21/08/2020 ರಂದು ರಾತ್ರಿ 9.45 ಗಂಟೆ ಸುಮಾರಿಗೆ ಮದ್ರಕಿ ಸೀಮಾಂತರದಲ್ಲಿನ ಆರ್.ಎಸ್.ಫೈಬರ್ಸ್ ಕಾಟನ್ ಮಿಲ್ ಹತ್ತಿರ ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆಯನ್ನು ಫಿಯರ್ಾದಿಯ 02 ಎಮ್ಮೆಗಳು ಮತ್ತು 01 ಕೋಣ ದಾಟುತ್ತಿರುವಾಗ ಕಾರ್ ಚಾಲಕನು ಕಲಬುರಗಿ ಕಡೆಯಿಂದ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು 02 ಎಮ್ಮೆಗಳು, 01 ಕೋಣಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಎಮ್ಮೆಗಳು ಮತ್ತು ಕೋಣ ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ದೂರು.
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 193/2020 ಕಲಂ: 279 ಐ.ಪಿಸಿ : ಇಂದು ದಿನಾಂಕಃ 23/08/2020 ರಂದು 2-15 ಪಿ.ಎಮ್ ಕ್ಕೆ ಶ್ರೀಮತಿ ಯಲ್ಲಮ್ಮ ಗಂಡ ಕರಕಪ್ಪ ಬಾಕರ್ೆರ ಸಾ: ಶಿರಸಿ, ಜಿಲ್ಲೆ: ಉತ್ತರಕನ್ನಡ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಾನು ನಮ್ಮ ಮನೆಯ ಸಲುವಾಗಿ ತಿರುಗಾಡಲು ಖಿಂಖಿಂ ಖಿಂಉಔ ಕಾರ ನಂಬರ ಕೆ.ಎ 31 ಎನ್ 2733 ನೇದ್ದನ್ನು ಖರೀದಿಸಿದ್ದು, ಸದರಿ ಕಾರಿನಲ್ಲಿ ಕಳೆದ 3 ದಿವಸಗಳ ಹಿಂದೆ ಶಿರಸಿಯಿಂದ ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದಲ್ಲಿದಲ್ಲಿರುವ ನನ್ನ ಮಗಳ ಮನೆಗೆ ಬಂದಿರುತ್ತೇನೆ. ನಿನ್ನೆ ದಿನಾಂಕಃ 22/08/2020 ರಂದು ಮದ್ಯಾಹ್ನ ನಾನು ನನ್ನ ಕಾರಿನಲ್ಲಿ ಸಚೀನ ತಂದೆ ಚಂದ್ರಶೇಖರ ಬೊಮ್ಮನಳ್ಳಿ ಸಾ: ಮುದ್ದೇಬಿಹಾಳ, ಹಾ.ವಃ ಹುಣಸಗಿ ಇತನನ್ನು ಚಾಲಕನನ್ನಾಗಿ ಕರೆದುಕೊಂಡು ಸುರಪೂರದಲ್ಲಿರುವ ನಮ್ಮ ಸಂಬಂಧಿಕರಿಗೆ ಭೇಟಿಯಾಗಲು ಬಂದಿದ್ದೇನು. ಸುರಪೂರದಲ್ಲಿ ನಮ್ಮ ಸಂಬಂಧಿಕರಿಗೆ ಭೇಟಿಯಾಗಿ ಸಾಯಂಕಾಲ ಸುರಪೂರದಿಂದ ಮರಳಿ ಕಾರಿನಲ್ಲಿ ಹುಣಸಗಿ ಕಡೆಗೆ ಹೊರಟಿದ್ದಾಗ ನಮ್ಮ ಕಾರ ಚಾಲಕನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದಾಗ ಏನು ಅವಸರ ಇಲ್ಲಾ, ನಿಧಾನವಾಗಿ ನಡೆಸು ಅಂತ ಹೇಳಿದರೂ ಕೇಳದೇ ಅದೇ ವೆಗದಲ್ಲಿ ನಡೆಸಿಕೊಂಡು ಹೊರಟಿದ್ದಾಗ ದೇವತಕಲ್ ಸಿಮಾಂತರದ ಚನ್ನಪ್ಪ ಎಂಬುವವರ ಹೊಲದ ಹತ್ತಿರ ಒಮ್ಮೆಲೆ ಒಂದು ನಾಯಿ ರಸ್ತೆಗೆ ಅಡ್ಡ ಬಂದಿದ್ದರಿಂದ ಕಾರ ನಾಯಿಗೆ ಡಿಕ್ಕಿಯಾಗುವದನ್ನು ತಪ್ಪಿಸುವ ಸಲುವಾಗಿ ಚಾಲಕನು ವೇಗದಲ್ಲಿ ಕಾರ ಬಲಕ್ಕೆ ತಿರುಗಿಸಿದ್ದು, ಆಗ ಚಾಲಕನ ನಿಯಂತ್ರಣ ತಪ್ಪಿ ಒಮ್ಮೆಲೆ ಕಾರ ರಸ್ತೆಯ ಬಲಭಾಗದಲ್ಲಿರುವ ತಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿತು. ಆಗ ನಾನು ಮತ್ತು ಚಾಲಕ ಇಬ್ಬರೂ ನಿಧಾನವಾಗಿ ಡೋರ ತಗೆದು ಹೊರಗಡೆ ಬಂದಿದ್ದು, ನಮ್ಮಿಬ್ಬರಿಗೆ ಯಾವುದೇ ಗಾಯಗಳಾಗಿರುವದಿಲ್ಲ. ಕಾರ ಪಲ್ಟಿಯಾಗಿದ್ದರಿಂದ ಎರಡು ಡೋರಗಳು, ಹಿಂದಿನ ಮತ್ತು ಮುಂದಿನ ಗ್ಲಾಸಗಳು, ಕಾರಿನ ಮೇಲ್ಭಾಗ ಹಾಗು ಅಲ್ಲಲ್ಲಿ ಜಖಂಗೊಂಡಿರುತ್ತದೆ. ನಮ್ಮ ಕಾರ ಪಲ್ಟಿ ಆದಾಗ ಸಮಯ 6-30 ಪಿ.ಎಮ್ ಆಗಿರಬಹುದು. ಕಾರಣ ಸದರಿ ಕಾರ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 193/2020 ಕಲಂ. 279 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 79/2020 323, 324, 498(ಎ), 504, 506 ಐಪಿಸಿ : ಸುಮಾರು 4-5 ವರ್ಷಗಳಿಂದ ಸೆರೆ ಕುಡಿಯಲು ಪ್ರಾರಂಭಿಸಿ ಪಿರ್ಯಾದಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ತೊಂದರೆ ಕೊಡಲು ಪ್ರಾರಂಭಿಸಿದ್ದು,ದಿನಾಂಕ:23/08/2020 ರಂದು ಸಾಯಂಕಾಲ 05.00 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಆರೋಫಿತನು ಸೆರೆ ಕುಡಿಯಲು ಹಣ ಕೊಡು ಅಂತಾ ಕೇಳಿದಾಗ, ಫಿರ್ಯಾದಿಯು ಇಂದು ವ್ಯಾಪಾರ ಆಗಿಲ್ಲ ಹಣ ಎಲ್ಲಿಂದ ಕೊಡಲಿ ಅಂತಾ ಅಂದಾಗ ಫಿರ್ಯಾದಿಗೆ ಆರೋಪಿತನು ಏ ಸೂಳಿ ಹಣ ಕೊಡು ಅಂದರ ಕೊಡವಲ್ಲಿ ನಿಂದು ಬಹಳಾಗಿದೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಯವಾಗ ಫಿರ್ಯಾದಿಯ ತಮ್ಮನಾದ ಶಂಭುಲಿಂಗಪ್ಪನು ಬಂದು ಬಿಡಿಸಲು ಪ್ರಯತ್ನ ಮಾಡಿದಾಗ ಅವನಿಗೆ ಒಣ ಕಟ್ಟಿಗೆ ತೆಗೆದುಕೊಂಡು ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು, ಅಲ್ಲದೆ ಮೈಯಲ್ಲಾ ಹೊಡೆದಿದ್ದು, ಫಿರ್ಯಾದಿ & ಗಾಯಾಳು ಚೀರಾಡಿದಾಗ ಹೊಟೇಲ್ ಕುಳಿತ ಜನರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ಆರೋಫಿತನು ಹೊಡೆಯುವದನ್ನು ಬಿಟ್ಟು ಫಿರ್ಯಾದಿಗೆ ನಾನು ಕೇಳಿದಾಗ ಹಣ ಕೊಡದಿದ್ದರೆ ನಿನಗೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.