ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/08/2020
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 68/2020 ಕಲಂ: 279, 337, 304(ಎ) ಐಪಿಸಿ & 187 ಐಎಮ್ವ್ಹಿ ಆಕ್ಟ್ : ಇಂದು ದಿನಾಂಕ:22.08.2020 ರಂದು 08:00 ಎಎಮ್ ಕ್ಕೆ ಪಿರ್ಯಾಧಿ ಶ್ರೀ ಶಿವಪ್ಪ ತಂದೆ ಕುಡಲಿಗೆಪ್ಪ ಕುರಿ ವ:20 ವರ್ಷ ಜಾ:ಕುರುಬರ ಉ:ಕೂಲಿಕೆಲಸ ಸಾ:ಅಮ್ಮಾಪೂರ ಎಸ್.ಕೆ ತಾ:ಹುಣಸಗಿ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರನ್ನು ನೀಡಿದ್ದು, ಸದರಿ ಹೇಳಿಕೆ ದೂರಿನ ಸಾರಾಂಶವೆನೆಂದರೆ, ನಮ್ಮ ತಂದೆಗೆ ನಾವು ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣುಮಗಳು ಇದ್ದು ಹಿರಿಯವನು ನಾನು ಇದ್ದು, ನನ್ನ ಹಿಂದೆ ಗದ್ದೆಪ್ಪ, ಅಮರಪ್ಪ ಹಾಗೂ ಲಕ್ಷ್ಮೀಬಾಯಿ ಒಟ್ಟು ನಾಲ್ಕು ಜನ ಮಕ್ಕಳಿದ್ದು ನಮಗೆ ಯಾವುದೇ ಆಸ್ತಿ ಇರುವುದಿಲ್ಲಾ. ಕಡು ಬಡವರಿದ್ದು ನನ್ನ ತಂದೆ ಗೌಂಡಿಕೆಲಸಮಾಡಿಕೊಂಡು ಇರುತ್ತಿದ್ದು, ನಾವು ಕೂಲಿಕೆಲಸಮಾಡಿಕೊಂಡು ಇರುತ್ತೇವೆ. ಹೀಗಿದ್ದು ದಿನಾಂಕ:21.08.2020 ರಂದು ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ನಮ್ಮ ಕಾಕಾನ ಮಗನಾದ ಹಣಮಪ್ಪ ತಂದೆ ಮಾನಪ್ಪ ಕುರಿ ಈತನ ಸ್ಪ್ಲೆಂಡರ್ ಹಿರೋ ಮೋಟರ್ ಸೈಕಲ್ ನಂ:ಕೆಎ-33 ವೈ-8197 ನೇದ್ದರ ಮೇಲೆ ನನ್ನ ತಂದೆಯಾದ ಕುಡಲಿಗೆಪ್ಪ ಈತನು ಜುಮಾಲಪೂರದಲ್ಲಿರುವ ನಮ್ಮ ಸಂಬಂಧಿಕರಿಗೆ ಕೊಬ್ಬರಿಕುಬಸ ಕೊಡಲು ಮನೆಯಿಂದ ಹೋಗಿದ್ದರು. ಸಾಯಂಕಾಲ 5:30 ಗಂಟೆಯ ಸುಮಾರಿಗೆ ನನ್ನ ಕಾಕಾನ ಮಗನಾದ ಹನಮಪ್ಪ ಈತನು ನನಗೆ ಫೋನ್ ಮಾಡಿ ಹೇಳಿದ್ದೇನೆಂದರೆ, ನಾನು & ದೊಡ್ಡಪ್ಪನಾದ ಕುಡಲಿಗೆಪ್ಪ ಜುಮಾಲಪೂರದಿಂದ ಕೊಬ್ಬರಿಕುಬಸ ಕೊಟ್ಟು ನನ್ನ ಮೋಟರ್ ಸೈಕಲ್ಮೇಲೆ ದೊಡ್ಡಪ್ಪನಿಗೆ ಕೂಡಿಸಿಕೊಂಡು ನಮ್ಮೂರಿಗೆ ಬರುವಾಗ ಜುಮಾಲಪೂರ ತಾಂಡಾ ದಾಟಿ ಹೂವಣ್ಣ ಭಂಗಿ ರವರ ಹೊಲದ ಪಕ್ಕ ರಸ್ತೆಯ ಮೇಲೆ ನಿಧಾನವಾಗಿ ಬರುತ್ತಿದ್ದಾಗ ಸಾಯಂಕಾಲ 5:30 ಗಂಟೆಯ ಸುಮಾರಿಗೆ ಎದುರುಗಡೆ ಹಣಮಸಾಗರ ಕಡೆಯಿಂದ ಒಬ್ಬ ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದವನೇ ನನ್ನ ಮೋಟರ್ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಆಟೋವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಆಟೋ ನಂ:ಕೆಎ-33 ಬಿ-1201 ಇದ್ದು ಅಪಘಾತದಲ್ಲಿ ದೊಡ್ಡಪ್ಪನಾದ ಕುಡಲಿಗೆಪ್ಪನ ಬಲಗೈ ಮುಡ್ಡಿಯ ಹತ್ತಿರ ಭಾರೀ ಒಳಪೆಟ್ಟಾಗಿ ಮುರಿದಿದ್ದು ಮತ್ತು ಬಲಗಾಲು ಮೊಣಕಾಲ ಹತ್ತಿರ ಭಾರೀ ಒಳಪೆಟ್ಟಾಗಿ ಮುರಿದಿದ್ದು ನನ್ನ ಬಲಗಾಲ ಪಾದದ ಮೇಲೆ ಒಳಪೆಟ್ಟು & ಬಲಗೈ ಮುಡ್ಡಿಗೆ ಒಳಪೆಟ್ಟು ಹಾಗೂ ಮೂಗಿನ ಮೇಲೆ ತೆರಚಿದ ಗಾಯವಾಗಿರುತ್ತದೆ ಅಂತಾ ತಿಳಿಸಿದಾಗ ನಾನು ಗಾಬರಿಗೊಂಡು ವಿಷಯವನ್ನು ನನ್ನ ತಾಯಿ ಯಲ್ಲಮ್ಮ ಸಂಬಂಧಿಯಾದ ಬಸವರಾಜ ಕುರಿ ಇವರಿಗೆ ತಿಳಿಸಿ ಎಲ್ಲರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ಹಣಮಪ್ಪನು ಹೇಳಿದ ವಿಷಯವು ನಿಜವಿದ್ದು ಆಗ ಅಂದಾಜು 60 ವಯಸ್ಸಿನವನಾದ ನಮ್ಮ ತಂದೆಯನ್ನು ನಾನು ಮತ್ತು ಬಸವರಾಜ ತಂದೆ ಅಮರಪ್ಪ ಕುರಿ, ತಾಯಿ ಯಲ್ಲಮ್ಮ ಎಲ್ಲರು ಕೂಡಿಕೊಂಡು ನನ್ನ ತಂದೆ ಕುಡಲಿಗೆಪ್ಪನು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಅವನಿಗೆ ಮತ್ತು ಹಣಮಪ್ಪನಿಗೆ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ರಾಜನಕೋಳೂರ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ವಿಜಯಪೂರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಪಡಿಸುತ್ತಿದ್ದಾಗ ನನ್ನ ತಂದೆಯು ಗುಣ ಮುಖನಾಗದೇ ಇಂದು ದಿನಾಂಕ:22.08.2020 ರಂದು ಬೆಳಗಿನ ಜಾವ 00:30 ಗಂಟೆಗೆ ಮೃತಪಟ್ಟಿರುತ್ತಾನೆ. ಕಾರಣ ಮಾನ್ಯರು ನಾವು ಕುಳಿತಿದ್ದ ಮೋಟರ್ ಸೈಕಲ್ಗೆ ಡಿಕ್ಕಿ ಪಡಿಸಿ ಓಡಿ ಹೋದ ಆಟೊ ಚಾಲಕನ ಹೆಸರು ಗೊತ್ತಿರುವುದಿಲ್ಲಾ ನನ್ನ ತಮ್ಮ ಹಣಮಪ್ಪನು ಅವನಿಗೆ ನೋಡಿದರೆ ಗುರುತಿಸುವುದಾಗಿ ಹೇಳಿದ್ದು, ಅಪಘಾತಪಡಿಸಿದ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:68/2020 ಕಲಂ:279, 337, 304(ಎ) ಐಪಿಸಿ & 187 ಐಎಮ್ವ್ಹಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 99/2020 ಕಲಂ 143,147,148,323,324,342,504,506 ಸಂಗಡ 149 ಐಪಿಸಿ : ನಿನ್ನೆ ದಿನಾಂಕ: 21/08/2020 ರಂದು 8.30 ಪಿ.ಎಮ್. ಸುಮಾರಿಗೆ ಫಿಯರ್ಾದಿ ಮತ್ತು ಗಾಯಾಳಯ ಮೌನೇಶ ಇಬ್ಬರೂ ಫಿಯರ್ಾದಿಯ ಮನೆಯಲ್ಲಿ ಮಾತನಾಡುತ್ತಾ ನಿಂತಾಗ ಆರೋಪಿತರು ವಿನಾಕಾರಣ ಇಬ್ಬರ ನಡುವೆ ಅನೈತಿಕ ಸಂಬಂಧವಿದೆ ಅಂತಾ ಸಂಶಯಪಟ್ಟು ಫಿಯರ್ಾದಿ ಮತ್ತು ಗಾಯಾಳುವಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಕಲ್ಲು ಬಡಿಗೆಯಿಂದ ಹೊಡೆಬಡೆ ಮಾಡಿ ಮನೆ ಮುಂದಿನ ಗಿಡಕ್ಕೆ ಹಗ್ಗದಿಂದ ಕಟ್ಟಿ ಹಾಕಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಇರುತ್ತದೆ.
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 35/2020 ಕಲಂ 279, 337, 338 ಐಪಿಸಿ : ನಿನ್ನೆ ದಿನಾಂಕ 21/08/2020 ರಂದು 6-30 ಪಿ.ಎಂ.ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮೇಲೆ ಬರುವ ಮುಂಡರಗಿ ಗ್ರಾಮದ ಬಾದಲ್ ಕಾಟನ್ ಮಿಲ್ ಹತ್ತಿರ ಈ ಕೇಸಿನಲ್ಲಿನ ಎಲ್ಲಾ ಗಾಯಾಳುಗಳು ಕಾರ ನಂಬರ ಕೆಎ-03, ಎ.ಎಫ್-9367 ನೇದ್ದರ ಲ್ಲಿ ಕುಳಿತುಕೊಂಡು ಅಚೋಲಾ ಗ್ರಾಮದಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಮಾರ್ಗ ಮದ್ಯೆ ಕಾರ್ ಚಾಲಕ ಈಶಪ್ಪನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಿದ್ದಾಗ ರಸ್ತೆಗೆ ದನವೊಂದು ಅಡ್ಡ ಬಂದಾಗ ಕಾರಿಗೆ ಒಮ್ಮೊಲೆ ಬ್ರೇಕ್ ಹಾಕಿದಾಗ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ಡಾಗಿ ರಸ್ತ ಬಲ ಬದಿಗೆ ಹಾಕಿರುವ ಸಿಮೆಂಟ್ ಪೈಪಗಳಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಎಲ್ಲರಿಗೂ ಬಾರೀ ಒಳಪೆಟ್ಟು ಮತ್ತು ಸಾದಾಗಾಯಗಳು ಆಗಿದ್ದು ಕಾರ್ ಚಾಲಕನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಇಂದು ದಿನಾಂಕ 22/08/2020 ರಂದು ತಡವಾಗಿ ನೀಡಿದ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 35/2020 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.