ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/08/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 71/2020 ಕಲಂ 78(3) ಕೆ.ಪಿ ಆ್ಯಕ್ಟ್ 1963 : ಇಂದು ದಿನಾಂಕ; 21/08/2020 ರಂದು 6-30 ಪಿಎಮ್ ಕ್ಕೆ ಶ್ರೀ ಎನ್ ವೈ ಗುಂಡುರಾವ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ. 21/08/2020 ರಂದು 1-30 ಪಿಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕನಕಚೌಕದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 6-20 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 6-30 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.71/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 92/2020 ಕಲಂ 96 ಕೆ.ಪಿ. ಎಕ್ಟ್ : ಫಿಯರ್ಾದಿದಾರರು ಸಿಬ್ಬಂದಿಯವರೊಂದಿಗೆ ದಿನಾಂಕ:21/08/2020 ರಂದು 04.00 ಎ.ಎಮ್. ಸುಮಾರಿಗೆ ಗೋಗಿ ಕೆ ಬಸ್ ನಿಲ್ದಾಣದ ಹತ್ತಿರ ರಾತ್ರಿ ಗಸ್ತು ಮಾಡುತ್ತಾ ಹೋದಾಗ ಒಬ್ಬ ಆರೋಪಿತನು ಅವರನ್ನು ನೋಡಿ ಮರೆಮಾಚುತ್ತಾ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಬೆನ್ನಟ್ಟಿ ಅವರಿಗೆ ಹಿಡಿದು ವಿಚಾರಿಸಲಾಗಿ ಅಸಮರ್ಪಕ ಉತ್ತರ ಕೊಡುತ್ತಿದ್ದು ಪರಿಶೀಲಿಸಿ ನೋಡಲಾಗಿ ಅವನ ಬಳಿ ಒಂದು ಒಂದು ಕಬ್ಬಿಣದ ರಾಡು, ಒಂದು ಕಟಿಂಗ ಪ್ಲೇಯರ್ ಹಾಗೂ ಒಂದು ಟೆಸ್ಟರ್ ಸಿಕ್ಕಿದ್ದು ಸದರಿಯವನ ಮೇಲೆ ಬಲವಾದ ಸಂಶಯ ಬಂದಿದ್ದರಿಂದ ಮತ್ತು ಸದರಿಯವರಿಗೆ ಕೂಲಂಕುಷವಾಗಿ ವಿಚಾರಣೆಗೊಳಪಡಿಸುವ ಉದ್ದೇಶದಿಂದ ಅವರಿಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಬಂದು ಆರೋಪಿತರ ವಿರುಧ್ಧ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 128/2020 ಕಲಂ: 78(3) ಕೆಪಿ ಯಾಕ್ಟ : ನಾನು ಹಣಮಂತಪ್ಪ ಪಿಎಸ್ಐ [ಅವಿ] ಕೆಂಭಾವಿ ಪೊಲೀಸ್ ಠಾಣೆ ಇದ್ದು ಈ ವರದಿ ಕೊಡುವುದೇನೆಂದರೆ, ಇಂದು ದಿನಾಂಕ: 21.08.2020 ರಂದು 06.15 ಪಿಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಮಲ್ಲಾ [ಬಿ] ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ 1) ಶಿವಲಿಂಗಪ್ಪ ಹೆಚ್ಸಿ-185 2) ಸಂಗಮೇಶ ಪಿಸಿ-244 ಹಾಗೂ ಜೀಪ ಚಾಲಕ 3) ಅಣವೀರಪ್ಪ ಪಿಸಿ-212 ರವರನ್ನು ಕರೆದು ಸದರಿ ವಿಷಯ ತಿಳಿಸಿ ಅಣವೀರಪ್ಪ ಪಿಸಿ-212 ರವರಿಂದ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 37 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 47 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ ಕರೆಯಿಸಿ ಅವರಿಗೂ ಸಹ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 06.30 ಪಿ.ಎಮ್ ಕ್ಕೆ ಹೊರಟು 06.45 ಪಿ.ಎಮ್ ಕ್ಕೆ ಮಲ್ಲಾ [ಬಿ] ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 06.45 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಪ್ಪ ತಂದೆ ದೇವೀಮದ್ರಪ್ಪ ಬಡಿಗೇರ ವ|| 51 ಜಾ|\ ಪ ಜಾತಿ ಉ|| ಕೂಲಿಕೆಲಸ ಸಾ|| ಮಲ್ಲಾ[ಬಿ] ತಾ|| ಸುರಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1250/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 06.45 ಪಿ.ಎಮ್ ದಿಂದ 07.45 ಪಿ.ಎಮ್ ದವರೆಗೆ ಗುಡಿಯ ಲೈಟಿನ ಬೆಳಕಿನಲ್ಲಿ ಪಂಚರ ಸಮಕ್ಷಮ ವಶಪಡಿಸಿಕೊಂಡೆನು. ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 08.15 ಪಿಎಮ್ ಕ್ಕೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು ಸದರ ವರಧಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 09.30 ಪಿ ಎಮ್ ಕ್ಕೆೆ ಠಾಣೆ ಗುನ್ನೆ ನಂ 128/2020 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 18/2020 ಕಲಂ. 174 ಸಿಆರ್ಪಿಸಿ : ಇಂದು ದಿನಾಂಕ:21/04/2020 ರಂದು 6 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರಳಾದ ಶ್ರೀಮತಿ ಲಕ್ಷ್ಮೀ ಗಂಡ ಹೊನ್ನಕೇರಪ್ಪ ಗಡ್ಡದ ಸಾ:ರತ್ತಾಳ ಇವರ ಠಾಣೆಗೆ ಹಾಜರಾಗಿ ಪಿಯರ್ಾದಿ ನೀಡಿದ್ದೆನೆಂದರೆ ನನಗೆ ಸುಮಾರು 9 ವರ್ಷಗಳ ಹಿಂದೆ ರತ್ತಾಳ ಗ್ರಾಮದ ಹೊನ್ನಕೇರಪ್ಪ ಇವರೊಂದಿಗೆ ಮದುವೆಯಾಗಿದ್ದು ನಮಗೆ ಸಮರ್ಥ ಮತ್ತು ಸಮೃದ್ಧ ಎಂಬುವರ 2 ಮಕ್ಕಳಿದ್ದು ನನ್ನ ಗಂಡನಿಗೆ ಇಬ್ಬರು ತಮ್ಮಂದಿರಿದ್ದು ಒಬ್ಬಳು ಅಕ್ಕ ಇರುತ್ತಾಳೆ ಅವಳಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನಾವು ಎಲ್ಲರೂ ಕೂಡಿ ವಾಸವಾಗಿದ್ದು ನಮ್ಮ ಮಾವ ಮಲ್ಲಪ್ಪ ಹೆಸರಿನಲ್ಲಿರು ದೇವಿಕೇರಿ ಸೀಮಾಂತರದ ಸವರ್ೆ ನಂ. 123 ರ 36 ಗುಂಟೆ ಹೊಲದಲ್ಲಿ ಕವಳಿ(ಭತ್ತ) ಹಾಕಿದ್ದು ನಾನು ಅತ್ತೆ ಚಂದಮ್ಮ ಮಾವ ಮಲ್ಲಪ್ಪ ಮೈದುನ ರಾಮಣ್ಣ ವಾಸು ಎಲ್ಲರೂ ಹೊಲದಲ್ಲಿ ಕಸ ತೆಗೆಯಲು ಹೋಗಿರುತ್ತೆವೆ. ನನ್ನ ಗಂಡ ಹೊನ್ನಕೇರಪ್ಪ ಇವನು 4 ಗಂಟೆ ಸುಮಾರಿಗೆ ಊರದಿಂದ ಹೊಲಕ್ಕೆ ಬಂದಿದ್ದು ನಮ್ಮ ಹೊಲದಲ್ಲಿ ಕಸ್ ತೆಗೆಯುವ ಕೆಲಸ ಮಾಡುತ್ತಿದ್ದಾಗ 4:30 ಗಂಟೆ ಸುಮಾರಿಗೆ ಬಾರಿ ಗಾಳಿ ಬಿಸಿದ್ದು ಗಾಳಿಯಲ್ಲಿ ಆಕಸ್ಮಿಕವಾಗಿ ನಮ್ಮ ಹೊಲದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬದಿಂದ ವಿದ್ಯುತ್ ವೈರ್ ಕಟ್ಟಾಗಿ ನೆಲಕ್ಕೆ ಬಿದ್ದು ನನ್ನ ಗಂಡನಿಗೆ ವಿದ್ಯುತ್ ವೈರ್ ತಗುಲಿದ್ದರಿಂದ ಆತನು ಒದ್ದಾಡುತ್ತಿದಾಗ ಅಲ್ಲೆ ಇದ್ದ ನಾವು ಎಲ್ಲರೂ ಓಡಿ ಹೋಗಿ ಬಡಿಗೆಯಿಂದ ವೈರ್ ಸರಿಸಿದೆವು ವಿದ್ಯುತ್ ಶಾಖದಿಂದ ನನ್ನ ಗಂಡನು ಪ್ರಜ್ಞೆ ತಪ್ಪಿದಂತಾಗಿದ್ದರಿಂದ ತಕ್ಷಣ ನಾವು ಪೋನ ಮಾಡಿ ಆಟೋ ಟಂ ಟಂ ತರಿಸಿ ಅದರಲ್ಲಿ ಕರೆದುಕೊಂಡು ನಾವೆಲ್ಲರೂ ಸುರಪೂರ ಸಕರ್ಾರಿ ಆಸ್ಪತ್ರೆ ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುತ್ತಾನೆ ಅಂತ ತಿಳಿಸಿರುತ್ತಾರೆ. ನನ್ನ ಗಂಡ ಹೊನ್ನಕೇರಪ್ಪನು ವಿದ್ಯುತ್ ವೈರ್ ಬಿದ್ದು ವಿದ್ಯುತ್ ಶಾಖ ಹೊಡೆದ ಪರಿಣಾಮದಿಂದ ಮೃತಪಟ್ಟಿರುತ್ತಾನೆ. ಅವನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತ ಹೇಳಿಕೆ ನೀಡಿದ್ದು ನಿಜ ಇರುತ್ತದೆ. ಅಂತ ಹೇಳಿಕೆ ನೀಡಿದ್ದ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.18/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.