ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/08/2020

By blogger on ಶನಿವಾರ, ಆಗಸ್ಟ್ 22, 2020                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/08/2020 

                                                                                                                                

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 226/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ : ಇಂದು ದಿನಾಂಕ 20/08/2020  ರಂದು  ಬೆಳಗಿನ ಜಾವ 03-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ವೆಂಕಟೇಶ್ ಹೊಗಿಬಂಡಿ ಪೊಲೀಸ್ ಉಪ-ಅಧೀಕ್ಷಕರು, ಸುರಪೂರ ಉಪ ವಿಭಾಗ ರವರು, ಒಂದು ಮರಳು ತುಂಬಿದ ಟಿಪ್ಪರ ವಾಹನ ನಂ ಕೆಎ-33-ಎ-6924 ನೇದ್ದು ಹಾಜರ ಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಫಿಯರ್ಾದಿಯವರು ದಿನಾಂಕ 19/08/2020 ರಂದು ರಾತ್ರಿ 11-00 ಗಂಟೆಗೆ ಸುರಪೂರ ಉಪ-ವಿಭಾಗದ ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯ ನಿರ್ವಹಿಸುತ್ತಾ ಇಂದು ದಿನಾಂಕ 20/08/2020 ರಂದು ದೇವದುರ್ಗ ಕ್ರಾಸ್ ಹತ್ತಿರ ಬಂದು ನಿಂತಿದ್ದಾಗ ಬೆಳಗಿನ ಜಾವ 00-30 ಗಂಟೆಗೆ ಸುರಪೂರ ಕಡೆಯಿಂದ ಒಂದು ಟಿಪ್ಪರ ನಂ ಕೆಎ-33-ಎ-6924 ನೇದ್ದರಲ್ಲಿ  ಮರಳು ತುಂಬಿಕೊಂಡು ಬಂದಿದ್ದು, ಸದರಿ ವಾಹನವನ್ನು  ನಿಲ್ಲಿಸಿ ತಪಾಸಣೆ   ಮಾಡಿದ್ದು, ಸದರಿ ವ್ಯಕ್ತಿಗೆ ಮರಳನ್ನು ಸಾಗಿಸಲು ಅಧಿಕೃತವಾದ ರಾಜಧನ ರಾಯಲ್ಟಿ ಹಾಜರ ಪಡಿಸುವಂತೆ ಸೂಚಿಸಿದಾಗ ಟಿಪ್ಪರದಲ್ಲಿ ಇಟ್ಟಿರುತ್ತೇನೆ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಟಿಪ್ಪರನ ಕಡೆಗೆ ತೆರಳಿ ಅಲ್ಲಿಂದ ಪರಾರಿಯಾಗಿದ್ದು ಸಿಬ್ಬಂದಿಯವರು ಹಿಂಬಾಲಿಸಿದರು ಸಿಕ್ಕಿರುವುದಿಲ್ಲ. ನಂತರ ಸದರಿ ಟಿಪ್ಪರದಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಪರಾರಿಯಾದ ಚಾಲಕನೇ ವಾಹನದ ಮಾಲಿಕನೆಂದು ದಾಖಲಾತಿಗಳಿಂದ ಕಂಡು ಬಂದಿರುತ್ತದೆ.  ಸದರಿ ಟಿಪ್ಪರ ಚಾಲಕ/ಮಾಲಿಕನು ಸರಕಾರಕ್ಕೆ ಸೇರಿದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಪಡೆಯದೆ ಸಾಗಿಸುತಿದ್ದ ಬಗ್ಗೆ ಕಂಡು ಬಂದಿದ್ದರಿಂದ,  ಸ್ಥಳಕ್ಕೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಸದರಿಯವರ ಸಮಕ್ಷಮದಲ್ಲಿ ಬೆಳಗಿನ ಜಾವ 01-10 ಗಂಟೆಯಿಂದ 02-10 ಗಂಟೆಯ ವರೆಗೆ ಜಪ್ತಿಪಂಚನಾಮೆ ಮೂಲಕ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 226/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.                  


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 91/202078(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 20/08/2020 ರಂದು 07.30 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 20/08/2020 ರಂದು 02.30 ಪಿ.ಎಮ್ ಕ್ಕೆ ಹೋಸ್ಕೆರಾ ಗ್ರಾಮದಲ್ಲಿನ ಶೆಟ್ಟಿಕೇರಾ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾಧ ಭೀಮರೆಡ್ಡಿ @ ಭೀಮಯ್ಯ ತಂದೆ ರಂಗಯ್ಯ ಕಲಾಲ ವಯಾ:30 ಉ: ಹೋಟೆಲ ಕೆಲಸ ಜಾ: ಕಲಾಲಸಾ: ಹೋಸ್ಕರಾ ತಾ: ಶಹಾಪೂರ ಜಿ: ಯಾದಗಿರಿ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 07.10 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 450/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 91/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 60/2020 ಲಂ: 78 (3) ಕೆ.ಪಿ ಯಾಕ್ಟ್ : ಇಂದು ದಿನಾಂಕ: 20/08/2020 ರಂದು 3:30 ಪಿ.ಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಇಂದು ದಿನಾಂಕ 20/08/2020 ರಂದು 12:00 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಮೇಲಿನಗಡ್ಡಿ ಗ್ರಾಮದ ಶ್ರೀ ಗದ್ದೆಮ್ಮ ದೇವಿಯ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೆಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಜ್ಞಾಪನ ಪತ್ರದ ಮೂಲಕ ಆದೇಶಿಸಿದ್ದು ಜ್ಞಾಪನ ಪತ್ರ ಹಾಗೂ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದ  ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 60/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.  ನಂತರ ಮಾನ್ಯ ಪಿಎಸ್ಐ ಸಾಹೇಬರು 6:10 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಆರೋಪಿ ಹಾಗೂ ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 2040/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. 

ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 1) ಮೈಹಿಬೂಬ ತಂದೆ ಖರಿಮಸಾಬ ಮುಲ್ಲಾ ವ:36 ವರ್ಷ ಉ:ಟೆಲರಿಂಗ ಕೆಲಸ ಜಾ:ಮುಸ್ಲಿಂ  ಸಾ:ಮೇಲಿನಗಡ್ಡಿ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 217/2020  ಕಲಂ 279, 337, 338 304(ಎ)  ಐ.ಪಿ.ಸಿ : ದಿನಾಂಕ 05/08/2020 ರಂದು ಮದ್ಯಾಹ್ನ 12-30 ಗಂಟೆಗ ಫಿರ್ಯಾದಿ ಶ್ರೀಮತಿ ಅಂಜಮ್ಮ ಗಂಡ ಅಮರೇಶ ನಾಯ್ಕೋಡಿ ಸಾಃ ಜಿವೇಶ್ವರ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ ತನ್ನ ಗಂಡ  ಅಮರೇಶ ತಂದೆ ಗೊಲ್ಲಾಳಪ್ಪ ನಾಯ್ಕೋಡಿ ವಯ 30 ವರ್ಷ ಸಾಃ ಜಿವೇಶ್ವರ ನಗರ ಶಹಾಪೂರ ಇವರು ಸುಮಾರು 8-10 ವರ್ಷಗಳಿಂದ ಶಹಾಪೂರ ಭವಾನಿ ಟೇಲರ ಅಂಗಡಿಯಲ್ಲಿ ಟೇಲರಿಂಗ ಕೆಲಸ ಮಾಡಿಕೊಂಡಿದ್ದರು. ದಿನಾಂಕ 02/08/2020 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಅಮರೇಶ ಇವರು   ಸ್ವಲ್ಪ ಕೆಲಸವಿದೆ  ಹೊರಗಡೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋದರು. ನಂತರ ರಾತ್ರಿ 8-35 ಗಂಟೆಯ ಸುಮಾರಿಗೆ ಫಿರ್ಯಾದಿಯವರ ಚಿಕ್ಕಮನ ಮಗ ಮರಿಲಿಂಗ ಸಾಃ ಪಿಲ್ಟರ ಬೆಡ್ ಶಹಾಪೂರ ಇವನು ಫೋನ್ ಮಾಡಿ ನಾನು ಹಮಾಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತಿದ್ದಾಗ ಶಹಾಪೂರ-ಭೀಗುಡಿ ರೋಡಿನ ಮೇಲೆ ಶಹಾಪೂರದ ದೇವಿ ನಗರ ಕ್ರಾಸ್ ಹತ್ತಿರ ನಿಮ್ಮ ಗಂಡ ಅಮರೇಶ ಇವರಿಗೆ ಭೀ-ಗುಡಿ ಕಡೆಯಿಂದ ಒಂದು ಮೋಟರ ಸೈಕಲ್ ನಂ ಏಂ-33-ಙ-5252   ರ ಚಾಲಕ ನಾಗಯ್ಯ ತಂದೆ ಸಿದ್ದಲಿಂಗಯ್ಯ ಗುರುವಿನ ಸಾಃ ಹಳಿಪೇಠ ಶಹಾಪೂರ ಈತನು ಮೋಟರ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಅಮರೇಶ ಇವರಿಗೆ ಅಪಘಾತ ಪಡಿಸಿದ್ದರಿಂದ ಅಮರೇಶನಿಗೆ ಮತ್ತು ಮೋಟರ ಸೈಕಲ್ ಮೇಲೆ ಇದ್ದ ಇಬ್ಬರೂ ವ್ಯಕ್ತಿಗಳಿಗೆ   ಭಾರಿ ಹಾಗೂ ಸಾಧಾ ಗಾಯಗಳಾಗಿರುತ್ತವೆ ಅಂತ ತಿಳಿಸಿದ ಮೆರೆಗೆ ಸದರಿ ಫಿರ್ಯದಿಯವರು ಘಟನಾ ಸ್ಥಳಕ್ಕೆ ಬಂದು ಅಪಘಾತವಾಗಿದ್ದನ್ನು ನೋಡಿ ತನ್ನ ಗಂಡನಿಗೆ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ವೈದ್ಯಾಧಿಕಾರಿಗಳ ಸಲಹೆ ಮೆರೆಗೆ ಹೆಚ್ಚಿನ ಉಪಚಾರ ಕುರಿತು ಅದೆ ದಿನ ರಾತ್ರಿ ಕಲಬುರಗಿಗೆ ಹೋಗಿ  ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಸದರಿ ಅಪಘಾತಕ್ಕೆ ಕಾರಣಿಭೂತನಾದ ಮೋಟರ ಸೈಕಲ್ ಸವಾರ ನಾಗಯ್ಯ ತಂದೆ ಸಿದ್ದಲಿಂಗಯ್ಯ ಗುರುವಿನ ಸಾಃ ಹಳಿಪೇಠ ಈತನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ 217/2020 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.  ಹೀಗಿರುವಾಗ ಇಂದು ದಿನಾಂಕ 20/08/2020 ರಂದು ಸಾಯಂಕಾಲ 19-30 ಗಂಟೆಯ ಸುಮಾರಿಗೆ  ಕೇಸಿನ ಫಿರ್ಯಾಧಿ ಶ್ರೀಮತಿ ಅಂಜಮ್ಮ ಗಂಡ ಅಮರೇಶ ನಾಯ್ಕೋಡಿ ಸಾಃ ಜಿವೇಶ್ವರ ನಗರ ಶಹಾಪೂರ ಇವರು ಪುನಃ ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಇನ್ನೊಂದು ಅಜರ್ಿ ನೀಡಿದ ಸಾರಾಂಶವೆನೆಂದರೆ ತನ್ನ ಗಂಡ ಅಮರೇಶ ಇವರಿಗೆ ದಿನಾಂಕ 15/08/2020 ರ ವರೆಗೆ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದ್ದು ತನ್ನ ಗಂಡನ ಆರೋಗ್ಯದ ಬಗ್ಗೆ ವೈದ್ಯಾಧಿಕಾರಿಗಳು ಯಾವುದೇ ಗ್ಯಾರಂಟಿ ನೀಡದರಿಂದ ಆ ದಿನ ಸದರಿ ಆಸ್ಪತ್ರೆಯಿಂದ ಡಿಸ್ ಜಾಜ್ ಮಾಡಿಕೊಂಡು ಬಿಜಾಪೂರದ ಬಿ.ಎಲ್.ಡಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ಅಲ್ಲಿಯು ವೈದ್ಯಾಧಿಕಾರಿಗಳು ಗ್ಯಾರಂಟಿ ನೀಡದ ಕಾರಣ ಯಕ್ತಾಪೂರ ಗ್ರಾಮಕ್ಕೆ ಬಂದು ನಿನ್ನೆ ದಿನಾಂಕ 19/08/2020 ರಂದು ಖಾಸಗಿ ವಾಹನದಲ್ಲಿ ಬೆಂಗಳೂರಿನ ನೀಮಾನ್ಸ ಆಸ್ಪತ್ರೆಗೆ ಅಮರೇಶನ್ನು ಕರೆದುಕೊಂಡು ಚಿತ್ರದುರ್ಗ ದಾಟಿ ಹೋಗುತಿದ್ದಾಗ ಇಂದು ದಿನಾಂಕ 20/08/2020 ರಂದು ಮುಂಜಾನೆ 09-30 ಗಂಟೆಗೆ ಅಮರೇಶನು ಮೃತಪಟ್ಟಿರುತ್ತಾನೆ. ಅಲ್ಲಿಂದ ಮರಳಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದಿದ್ದು,   ಸದರಿ ಮೃತ ದೇಹವು ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿದ್ದು, ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ, ಈಗಾಗಲೆ ದಾಖಲಾದ ಪ್ರಕರಣದಲ್ಲಿ  ಕಲಂ 304(ಎ) ಐ.ಪಿ.ಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.  


 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!