ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/08/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.12/2020 ಕಲಂ 174 : ಇಂದು ದಿನಾಂಕ; 19/08/2020 ರಂದು 8-15 ಪಿಎಮ್ ಕ್ಕೆ ಪಿರ್ಯಾಧಿ ಶ್ರೀ ಹಾಜೀಬಾಬಾ ತಂದೆ ಆವಾದ ಬಿನ್ ಸಾಲಮ ಚಾವುಶ ವಃ20 ಜಾಃ ಮುಸ್ಲಿಂ ಉಃ ಮೊಬೈಲ್ ಮೇಕ್ಯಾನಿಕ ಸಾಃ ದುಖಾನವಾಡಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆ-ತಾಯಿಗೆ ಇಬ್ಬರೂ ಗಂಡ ಮಕ್ಕಳಿದ್ದು ಹಿರಿಯ ಮಗನಾನಿದ್ದು ನನ್ನ ತಮ್ಮ ಸಯೀದ ಬೀನ್ ಆವಾದ ತಂ. ಆವಾದ ಬೀನ್ ಸಾಲಮ ವಃ17 ವರ್ಷ ಈತನು 10 ನೇ ತರಗತಿ ಮುಗಿಸಿದ್ದು ಇರುತ್ತದೆ ಹೀಗಿದ್ದು ನಮ್ಮ ಅತ್ತೆಯ ಮಗನಾದ ಮಹಮ್ಮದ ಅಕೀಲ ತಂ. ಖಲೀಲ ಅಹೆಮದ ಇತನು ಗಾಂಧಿ ಚೌಕದಲ್ಲಿ ಮೋಬೈಲ್ ಶಾಪ ಇದ್ದು ನನ್ನ ತಮ್ಮ ಸಯೀದ ಬೀನ್ ಆವಾದ ಇತನು ಯಾವಾಗಲೂ ಆತನ ಅಂಗಡಿಗೆ ಹೋಗುತ್ತಿದ್ದನು. ಎಂದಿನಂತೆ ಇವತ್ತಿನ ದಿವಸ ನನ್ನ ತಮ್ಮ ಸಯೀದ ಬೀನ್ ಆವಾದ ಮತ್ತು ನನ್ನ ಕಾಕನ ಮಗನಾದ ಅಮಾನ ಬೀನ್ ಅಸದ ತಂ. ಆಸದ ಬೀನ್ ಚಾವುಶ ವಃ16 ವರ್ಷ ಇಬ್ಬರೂ ಕೂಡಿಕೊಂಡು ಸಾಯಂಕಾಲ 5 ಗಂಟೆ ಸುಮಾರಿಗೆ ಮಹಮ್ಮದ ಅಕೀಲ ಇತನ ಮೋಬೈಲ್ ಅಂಗಡಿಗೆ ಹೋಗಿದ್ದರು. ನಂತರ ನನಗೆ ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ಅತ್ತೆಯ ಮಗನಾದ ಮಹಮ್ಮದ ಅಕೀಲ ಇವರು ಪೋನ ಮಾಡಿ ತಿಳಿಸಿದ್ದೆನೆಂದರೆ, ನಿಮ್ಮ ತಮ್ಮಂದಿರು ನಮ್ಮ ಅಂಗಡಿಯ ಬಿಲ್ಡಿಂಗ ಮೇಲೆ ಹೋದಾಗ ನಿಮ್ಮ ತಮ್ಮಂದಿರಿಗೆ ಕರೆಂಟ ಶಾಕ ಹೊಡೆದಿದೆ ಬೇಗ ಬಾ ಅಂತಾ ತಿಳಿಸಿದ್ದರಿಂದ ನಾನು ಕೂಡಲೆ ಗಾಂಧಿ ಚೌಕನಲ್ಲಿರುವ ನಮ್ಮ ಅತ್ತೆಯ ಅಂಗಡಿಗೆ ಬಂದಾಗ ನಮ್ಮ ತಮ್ಮಂದಿರು ಇಬ್ಬರು ಕರೆಂಟ ಶಾಕ ಹೊಡೆದು ಮೃತಪಟ್ಟಿದ್ದರು. ನಂತರ ನಾವು ಇನ್ನೂ ಜೀವ ಇರಬಹುದು ಅಂತಾ ಕೂಡಲೆ ಸಕರ್ಾರಿ ಆಸ್ಪತ್ರೆಗೆ ಸಾಗಿಸಿದ್ದು ವೈದ್ಯಾಧಿಕಾರಿಗಳು ನಮ್ಮ ತಮ್ಮಂದಿರು ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದರು. ನಂತರ ನಾನು, ನಮ್ಮ ಅತ್ತೆಯ ಮಗನಾದ ಮಹಮ್ಮದ ಅಕೀಲ ಇತನಿಗೆ ವಿಚಾರಿಸಲು ಅವನು ತಿಳಿಸಿದ್ದೆನೆಂದರೆ, ನಿಮ್ಮ ತಮ್ಮಂದಿರು ಸಾಯಂಕಾಲ ನಮ್ಮ 5 ಗಂಟೆ ಸುಮಾರಿಗೆ ಅಂಗಡಿಗೆ ಬಂದಿದ್ದು ಅಂಗಡಿಯಲ್ಲಿ ನಾನು ಕೆಲಸ ಮಾಡುತ್ತಿರುವಾಗ ಅವರಿಬ್ಬರು ಬಿಲ್ಡಿಂಗ ಮೇಲುಗಡೆ ಹೋದರು. ಇಬ್ಬರು ಚೀರಾಡುವ ಸಪ್ಪಳ ಕೇಳಿ ನಾನು ಮತ್ತು ಇತರರು ಕೂಡಿಕೊಂಡು ಮೇಲೆ ಹೋಗಿ ನೋಡಿದಾಗ ಕರೆಂಟ ಶಾಕ ಹೊಡೆದು ಬಿದ್ದಿದ್ದರು. ಇಬ್ಬರೂ ಕುಡಿಕೊಂಡು ಬಿಲ್ಡಿಂಗ ಚತ್ತಿನ ಮೇಲೆ ಮಳೆ ನೀರು ನಿಂತಿದ್ದು ಮಳೆನೀರನ್ನು ನಿಮ್ಮ ತಮ್ಮ ಸಯೀದ ಬೀನ್ ಆವಾದ ಇತನು ಕಬ್ಬಿಣದ ರಾಡಿನಿಂದ ನೀರು ಹೋಗಲು ಬಿಟ್ಟಿರುವ ಮೋರಿಯಲ್ಲಿ ಕಸ ಕಡ್ಡಿ ಇರಬಹುದು ಅಂತಾ ನೀರು ಹೋಗುವಂತೆ ಮಾಡಲು ಕಬ್ಬಿಣದ ರಾಡು ಆಡಿಸುತ್ತಿರುವಾಗ ಬಿಲ್ಡಿಂಗ ಹತ್ತಿರದಲ್ಲಿ ಹಾಯ್ದು ಹೋಗಿದ್ದ ಮೇನ್ ವಿದ್ಯುತ್ ವೈರ್ಗೆ ಆಕಸ್ಮಿಕವಾಗಿ ಕಬ್ಬಿಣದ ರಾಡು ವಿದ್ಯುತ್ ಮೇನ್ ವೈರಗೆ ತಗುಲಿ ಕರೆಂಟ ಶಾಕ ಹೊಡೆದಿದ್ದು ಆಗ ಆಮಾನ ಬೀನ್ ಅಸದ ಇತನು ಅವನನ್ನು ಕರೆಂಟ ಶಾಕನಿಂದ ತಪ್ಪಿಸಲು ಹೋಗಿ ಸಯೀದ ಬಿನ್ ಆವಾದ ಇತನಿಗೆ ಹಿಡಿದುಕೊಂಡಾಗ ಅವನಿಗೂ ಕೂಡಾ ಕರೆಂಟ ಶಾಕ ಹೊಡೆದು ಸಾಯಂಕಾಲ 6-50 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ತಿಳಿಸಿದನು. ನನ್ನ ತಮ್ಮ ಸಯೀದ ಬೀನ್ ಅವಾದ ಮತ್ತು ನಮ್ಮ ಕಾಕನ ಮಗನಾದ ಅಮಾನ ಬಿನ್ ಅಸದ ಇವರು ಕೂಡಿಕೊಂಡು ಬಿಲ್ಡಿಂಗ ಚತ್ತಿನ ಮೇಲೆ ಮಳೆ ನೀರು ನಿಂತಿದ್ದು ಮಳೆನೀರನ್ನು ನನ್ನ ತಮ್ಮ ಕಬ್ಬಿಣದ ರಾಡಿನಿಂದ ಮೋರಿಯಲ್ಲಿ ನೀರು ಹೋಗಲು ಕಬ್ಬಿಣದ ರಾಡು ಆಡಿಸುತ್ತಿರುವಾಗ ಬಿಲ್ಡಿಂಗ ಪಕ್ಕದಲ್ಲಿ ಹಾಯ್ದು ಹೋಗಿದ್ದ ವಿದ್ಯುತ್ ಮೇನ್ ವೈರ್ಗೆ ಆಕಸ್ಮಿಕವಾಗಿ ಕಬ್ಬಿಣದ ರಾಡು ಮೇನ್ ವೈರಗೆ ತಗುಲಿ ಕರೆಂಟ ಶಾಕ ಹೊಡೆದಿದ್ದು ಆಗ ಆಮಾನ ಬೀನ್ ಅಸದ ಇತನು ನನ್ನ ತಮ್ಮನನ್ನು ಕರೆಂಟ ಶಾಕನಿಂದ ತಪ್ಪಿಸಲು ಹೋಗಿ ನನ್ನ ತಮ್ಮನಿಗೆ ಹಿಡಿದುಕೊಂಡಾಗ ಅವನಿಗೂ ಕೂಡಾ ಕರೆಂಟ ಶಾಕ ಹೊಡೆದು ಸಾಯಂಕಾಲ 6-50 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ನಮ್ಮ ತಮ್ಮಂದಿರ ಸಾವಿನಲ್ಲಿ ಯಾರ ಮೇಲೆ ಸಂಶಯ ಇರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್ ನಂ.12/2020 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 104/2020 ಕಲಂ 269, 270 188 ಐಪಿಸಿ: ಇಂದು ದಿನಾಂಕ 19/08/2020 ರಂದು ಸಾಯಂಕಾಲ 7-30 ಗಂಟೆಗೆ ಶ್ರೀ ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ವರದಿ ಕೊಟ್ಟಿದ್ದೆನೆಂದರೆ ನಾನು ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಈ ಮೂಲಕ ವರದಿ ಕೊಡುವುದೆನೆಂದರೆ ಇಂದು ದಿನಾಂಕ 19/08/2020 ರಂದು ಸಾಯಂಕಾಲ 5-00 ಗಂಟೆಗೆ ಹಳ್ಳಿಗಳ ಭೇಟಿ ಕುರಿತು ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಪ್ರಭುಗೌಡ ಸಿಪಿಸಿ-361, ಶ್ರೀ ಮಲ್ಲಪ್ಪ ಸಿಪಿಸಿ-136 ಎಲ್ಲರೂ ಕೂಡಿಕೊಂಡು ಸರಾಕಾರಿ ವಾಹನ ನಂ ಕೆ.ಎ-33-ಜಿ-67 ನೆದ್ದರಲ್ಲಿ ಹೊರಟು ಭೀಮನಗರಕ್ಕೆ ಭೇಟಿ ನೀಡಿ ಅಲ್ಲಿಂದ ಅಲ್ಲಿಪೂರ ಗ್ರಾಮದಲ್ಲಿ ಇದ್ದಾಗ ಪೊಲೀಸ್ ಬಾತ್ಮಿ ಬಂದಿದ್ದೆನೆಂದರೆ ವೆಂಕಟೇಶನಗರದ ಸೀಮೆಯಲ್ಲಿ ಬರುವ ವೆಂಕಟೇಶ್ವರ ದೇವಸ್ಥಾನದ ಜಾತ್ರೆಯು ಪ್ರತಿ ವರ್ಷ ವಿಜೃಂಭಣೆಯಿಂದ ಜರುಗುತ್ತಿದ್ದು, ಸದರಿ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳಾದ ಅಲ್ಲಿಪೂರ, ವಡ್ನಳ್ಳಿ, ಯರಗೋಳ, ಕ್ಯಾಸಪ್ಪನಳ್ಳಿ, ಖಾನಳ್ಳಿ ಮತ್ತು ಕಂಚಗಾರಹಳ್ಳಿ ಗ್ರಾಮಗಳಿಂದ ಅನೇಕ ಭಕ್ತಾದಿಗಳು ಜಾತ್ರೆಗೆ ಆಗಮಿಸುತ್ತಿದ್ದು, ಈ ವರ್ಷ ಈಗ ಸಧ್ಯ ಕೋರೊನೋ ವೈರಾಣು ಸಂಬಂಧ ಜನರಿಗೆ ರೋಗಾಣು ಹರಡುತ್ತದೆ, ಈ ವರ್ಷ ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಮತ್ತು ಸದಸ್ಯರು ಕರೋನಾ ವೈರಸ್ ಹರಡಿರುವದರಿಂದ ಜಾತ್ರೆಯು ರದ್ದು ಪಡಿಸಲಾಗಿದೆ ಅಂತಾ ಪೇಪರದಲ್ಲಿ ಹಾಕಿರುತ್ತಾರೆ ಮತ್ತು ಡಂಗುರು ಹೊಡೆಯಿಸಿ ಜನರಿಗೆ ತಿಳಿಸಿರುತ್ತಾರೆ, ಆದರೂ ಕೂಡಾ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ದೇವಸ್ಥನದ ಹತ್ತಿರ ಸೇರಿರುತ್ತಾರೆ ಅಂತಾ ಮಾಹಿತಿ ಬಂದಿದ್ದರಿಂದ ಸಾಯಂಕಾಲ 6-00 ಗಂಟೆಗೆ ಅಲ್ಲಿಗೆ ಹೋಗಿ ನೋಡಲಾಗಿ ಈ ಮೇಲಿನಂತೆ ಜನರು ಗುಂಪು ಗುಂಪಾಗಿ ಸೇರಿರುತ್ತಾರೆ, ಮಾನ್ಯ ಕನರ್ಾಟಕ ಸರಕಾರ ಮತ್ತು ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆಧೇಶ ಪ್ರಕಾರ ಅಪಾಯಕರಿಯಾದ ಕೋರೊನೋ ವೈರಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾದ್ಯತೆ ಇರುವದರಿಂದ ಒಬ್ಬರಿಗೊಬ್ಬರೂ ಮೂರು ಫೀಟಿನಷ್ಟು ಅಂತರ ಕಾಯ್ದು ಕೊಂಡು ಇರಬೇಕು ಅಂತಾ ಆಧೇಶವಿದ್ದಿದ್ದು ಗೋತ್ತಿದ್ದರು ಕೂಡಾ ಈ ಸಮಯದಲ್ಲಿ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ವೆಂಕಟೇಶ ನಗರ ಸೀಮೆಯಲ್ಲಿ ಬರುವ ವೆಂಕಟೇಶ್ವರ ದೇವಸ್ಥಾನಕ್ಕೆ ಜಾತ್ರೆಗೆ ಬಂದು ಗುಂಪು ಗುಂಪಾಗಿ ಸೇರಿ ಸರಕಾರದ ಆಧೇಶ ಪಾಲನೆ ಮಾಡದೇ ಜಾತ್ರೆಯಲ್ಲಿ ಗುಂಪು ಗುಂಪಾಗಿ ನಿಂತು ಮಾನ್ಯ ಜಿಲ್ಲಾಧಿಕಾರಿಗಳ ಆಧೇಶ ಉಲ್ಲಂಘನೆ ಮಾಡಿರುತ್ತಾರೆ, ಅವರ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ, ಆದ್ದರಿಂದ ಸರಕಾರದ ಆಧೇಶವನ್ನು ಪಾಲನೆ ಮಾಡದೇ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 104/2020 ಕಲಂ 269, 270, 188 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 18/2020 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ 19/08/2020 ರಂದು 8-10 ಎ.ಎಂಕ್ಕೆ ಪಿಯರ್ಾದಿ ಶ್ರೀ ಮತಿ ಸವಿತ ಗಂಡ ಮಾನಯ್ಯ ಕವಲ್ದಾರ ವ|| 23 ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಇಬ್ರಾಹಿಂಪೂರ ತಾ|| ಶಹಾಪೂರ ಇದ್ದು ಈ ಮೇಲ್ಕಂಡ ವಿಷಯದಲ್ಲಿ ತಮ್ಮಲ್ಲಿ ವಿನಂತಿಸಿಕೊಳ್ಳುವದೆನಂದರ, ನನಗೆ ಸುಮಾರು 7-8 ವರ್ಷಗಳಿಂದೆ ಸಾಬಯ್ಯ ಕವಲ್ದಾರ ಇವರ ಮಗ ಮಾನಯ್ಯ ಜೋತೆ ಮದುವೆ ಮಾಡಿಕೊಟ್ಟಿದ್ದು, ನನ್ನ ಹೋಟ್ಟೆಯಿಂದ ಸಾಬವ್ವ ವ|| 5 ವರ್ಷ, ಸೇವಂತಿ 3 ವರ್ಷ ಎಂಬ ಇಬ್ಬರೂ ಹೆಣ್ಣು ಮಕ್ಕಳಿದ್ದು, ನಾನು ಮತ್ತು ನನ್ನ ಗಂಡ ಮಾನಪ್ಪ ತಂಧೆ ಸಾಬಯ್ಯ ಕವಲ್ದಾರ ವ|| 28 ವರ್ಷ ಒಕ್ಕಲುತನ ಮತ್ತು ಕೂಲಿ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಉಪ ಜೀವಿಸುತ್ತಿದ್ದು, ಹೀಗಿದ್ದು 2 ವರ್ಷಗಳಿಂದ ನನ್ನ ಗಂಡ ತನ್ನ ಅಣ್ಣ ತಮ್ಮಂದಿರರು ಜೋತೆ ಬೇರೆ ಬೇರೆಯಾಗಿ ಸ್ವಂತ ಸಂಸಾರ ಮಾಡಿಕೊಂಡು ನಮ್ಮ ಪಾಲಿಗ ಬಂದ ಹೋಲ ಮತ್ತು ನಮ್ಮ ಬಾವನ ಪಾಲಿನ ಹೋಲವನ್ನು ಲೀಜಿಗೆ ಹಾಕಿಕೊಂಡು ಒಕ್ಕಲುತನ ಮಾಡುತ್ತಿದ್ದು, ಈ ವರ್ಷ ಮಳೆ ಹೆಚ್ಚಾಗಿದ್ದರಿಂದ ನಮ್ಮ ಹೋಲದಲ್ಲಿ ಸದಿ ಹೆಚ್ಚಾಗಿರುವದರಿಂದ, ಹೋಲ ಬಿಳಿ ಬಿದ್ದಿದ್ದರ ಬಗ್ಗೆ ಚಿಂತೆ ಮಾಡುತ್ತಿದ್ದ ನಾವೂ ಏನಾಗಲ ಎಂದು ಸಮಾದಾನ ಹೆಳುತ್ತಿದ್ದೆವು. ಹೀಗಿದ್ದು ದಿನಾಂಕ 18/08/2020 ರಂದು ನಾನು ನಮ್ಮ ಹೋಲಕ್ಕೆ ಕಳೆ(ಸದಿ) ತೆಗಿಯು ಕುರಿತು ಹಾಳುಗಳೊಂದಿಗೆ ಹೋಗಿ ಸಾಯಾಂಕಾಲ 6:00 ಪಿ.ಎಂ ಸುಮಾರಿಗೆ ಮರಳಿ ಕಡೆ ಬಂದಾಗ ಮನೆಯ ಹತ್ತಿ ನಮ್ಮೂರಿನ ಜನ ಜಮಾಗಿದ್ದು, ಒಳಗೆ ಹೋಗಿ ನೋಡಲಾಗಿ ನನ್ನ ಗಂಡ ಮಾನಪ್ಪ ತಂದೆ ಸಾಬಯ್ಯ ಕವಲ್ದಾರ ಇತನು ಕ್ರೀಮಿನಾಶಾಕ ಎಣ್ಣಿ ಕುಡಿದು ಅಸ್ಥವ್ಯಸ್ಥ ನಾಗಿದ್ದು ನಾನು ವಿಚಾರಿಸಲಾಗಿ ಹೋಲ ಬಿಳ ಬಿದ್ದರಿಂದ ಕ್ರಿಮಿನಾಶಕ ಸೇವಿಸಿರುವದಾಗಿ ತಿಳಿಸಿದ್ದು, ಅಲ್ಲೆ ಇದ್ದು ನಮ್ಮ ಬಾವ ಸಾಹೇಬಗೌಡ, ನನ್ನ ಮೈದನ ನಾಗಪ್ಪ ಅವರಿಗೂ ಕೂಡ ಅದೆ ವಿಷಯಕ್ಕೆ ಕ್ರೀಮಿನಾಶಕ ಸೇವಿಸಿರುವದಾಗಿ ತಿಳಿಸಿದ್ದು ಇರುತ್ತದೆ, ಕೂಡಲೆ ನಾನು ಮತ್ತು ನಮ್ಮ ಭಾವ ಸಾಹೇಬಗೌಡ, ನಮ್ಮ ಮೈದುನ ನಾಗಪ್ಪ, ಮತ್ತು ನಮ್ಮೂರಿನ ಹಣಮಂತ್ರಾಯ ಎಲ್ಲರೂ ಕೂಡಿಕೊಂಡು ಒಂದು ಅಟೋದಲ್ಲಿ ಕರೆದುಕೊಂಡು ಉಪಚಾರ ಕುರಿತು ಶಹಾಪೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೇವು, ನಂತರ ವೈದ್ಯಾದೀಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಯಾದಗಿರ ಜಿಲ್ಲಾ ಸಕರ್ಾರಿ ಆಸ್ಪತ್ರೆ ಕರೆದುಕೊಂಡು ಬಂದೇವು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ರಯಚೂರಿಗೆ ಕರೆದುಕೊಂಡು ಹೋಗುವಾಗ ದಿನಾಂಕ 19/08/2020 ರಂದು 00:10 ಎ.ಎಂ ಕ್ಕೆ ನನ್ನ ಗಂಡ ಮಾನಯ್ಯ ಮೃತ ಪಟ್ಟಿದ್ದು ಅಲ್ಲಿಂದ ಮರಳಿ ಶವವನ್ನು ಯಾದಗಿರ ಶವಗಾರ ತಂದಿದ್ದು ಇದೆ.ಕಾರಣ ನನ್ನ ಗಂಡ ಮಾನಪ್ಪ ತಂದೆ ಸಾಬಯ್ಯ ಕವಲ್ದಾರ ವ|| 28 ವರ್ಷ ಈತನು ಮಳೆಗಾಲ ಹೆಚಾಗಿ ಹೋಲದಲ್ಲಿ ಸದಿ ಬಿದ್ದರಿಂದ ಮನನೊಂದು ದಿನಾಂಕ 18/08/2020 ರಂದು 5:30 ಪಿ.ಎಂ ದಿಂದ 6:00 ಪಿ.ಎಂ ದ ವರೇಗೆ ಕ್ರೀಮಿನಾಶಕ ಸೇವಿಸಿ ಉಪಚಾರ ಫಲಕಾರಿಯಾಗದೆ 19/08/2020 ರಂದು 12:10 ಎ.ಎಂ ಕ್ಕೆ ಮೃತಪಟ್ಟಿದ್ದು ಇರುತ್ತದೆ, ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವೂದೆ ರೀತಿಯಾ ಸಂಶಾಯ ಇರುವದಿಲ್ಲಾ ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-18/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 192/2020 ಕಲಂ 504, 506 ಸಂಗಡ 34 ಐಪಿಸಿ : ದಿನಾಂಕ: 18/08/2020 ರಂದು 9-00 ಪಿ.ಎಮ್ ಕ್ಕೆ ಶ್ರೀ ಮಲ್ಲಪ್ಪ ತಂದೆ ರಾಚಪ್ಪ ಶಿಬರಬಂಡಿ, ಸಾ: ಕಬಾಡಗೇರಾ ಸುರಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕಃ 17-08-2020 ರಂದು ರಾತ್ರಿ 11-00 ಗಂಟೆ ಸುಮಾರಿಗೆ 1) ಮುದಕಪ್ಪ ತಂದೆ ಜೋಗಪ್ಪ, 2) ಅಬ್ದುಲ್ ರಹೇಮಾನ್ ತಂದೆ ಅಬ್ದುಲ್ ಸಲೀಂ, ಮತ್ತು ಸಂಜು ಎಲ್ಲರೂ ವಾರ್ಡ ನಂ. 10, ಉದ್ದಾರ ಓಣಿ ಸುರಪೂರ ಇವರು ನಮ್ಮ ಸಂಘಟನೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕುಡಿದ ಮತ್ತಿನಲ್ಲಿ ನಗರದ ಆಸರ ಮೊಹಲ್ಲಾದ, ನಮ್ಮ ಜಯ ಕನರ್ಾಟಕದ ಉಪಾಧ್ಯಕ್ಷರ ಮನೆಯ ಮೇಲೆ ಹಾಕಿದ ಪ್ಲೇಕ್ಸ್ ಅನ್ನು ಹರಿದು ಹಾಕಿದ್ದಾರೆ. ಮತ್ತೆ ದಿನಾಂಕಃ 18-08-2020 ರಂದು ಬೆಳಿಗ್ಗೆ ನಮ್ಮ ಸಂಘದ ಅಲ್ಪ ಸಂಖ್ಯಾತರ ಅಧ್ಯಕ್ಷರಾದ ಶ್ರೀ ನಬೀಶಾ ತಂದೆ ಬಂದೇಲಿಶಾ ಸಾ: ಸುರಪೂರ ಇವರಿಗೆ ಕಾಮಣ್ಣ ದೊರಿ ಸಾ: ಸುರಪೂರ ಇವನು ತನ್ನ ಮೊಬೈಲಿನಿಂದ (ಮೊ: 9945396880) ಈ ಮೊ: 9980805504 ನಂಬರಿಗೆ ಕರೆ ಮಾಡಿ, ನನಗೂ ಹಾಗು ನಮ್ಮ ತಾಲೂಕಾಧ್ಯಕ್ಷರಾದ ಶ್ರೀ ರವಿನಾಯಕ ಭೈರಿಮಡ್ಡಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕುತ್ತಿದ್ದಾನೆ. ಇದರಿಂದ ನಮ್ಮ ಸಂಘಟನೆಯ ಪದಾಧಿಕಾರಿಗಳಿಗೂ ಹಾಗು ನನಗೂ ಪ್ರಾಣದ ಆತಂಕ ಉಂಟಾಗಿರುತ್ತದೆ. ಆದಕಾರಣ ತನಿಖೆ ನಡೆಸಿ, ನಮಗೆ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ ಕಾಮಣ್ಣ ದೊರಿ ಹಾಗು 03 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಇಂದು ದಿನಾಂಕಃ 19/08/2020 ರಂದು 3-00 ಪಿ.ಎಮ್ ಕ್ಕೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 90/2020 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 19/08/2020 ರಂದು 07.30 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 19/08/2020 ರಂದು 02.30 ಪಿ.ಎಮ್ ಕ್ಕೆ ಶೆಟ್ಟಿಕೇರಾ ಗ್ರಾಮದ ಲಿಂಗಯ್ಯ ಗುಡಿಯ ಹತ್ತಿರ ರೋಡಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾಧ ನಾಗಪ್ಪ ತಂದೆ ಹಣಮಂತ ಯಾದವ (ಪೂಜಾರಿ) ವಯಾ:28 ವರ್ಷ ಉ: ವ್ಯಾಪಾರ ಜಾ: ಯಾದವ ಸಾ: ರತ್ತಾಳ ತಾ: ಸುರಪೂರ ಹಾ:ವ: ಶೇಟ್ಟಿಕೇರಾ ತಾ: ಶಹಾಪೂರ ಜಿ: ಯಾದಗಿರಿ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 05.45 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 460/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 90/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.