ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/08/2020 ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 66/2020 ಕಲಂ: 279, 304(ಎ) ಐಪಿಸಿ & 187 ಐಎಮ್ವ್ಹಿ ಆಕ್ಟ್ : ಇಂದು ದಿನಾಂಕ:18.08.2020 ರಂದು 11:00 ಎಎಮ್ ಕ್ಕೆ ಪಿರ್ಯಾಧಿ ಶ್ರೀಮತಿ. ಹಣಮಂತಿ ಗಂಡ ಬಸಪ್ಪ ಮಾಲಿಬಿರಾದಾರ ವ:27 ವರ್ಷ ಜಾ: ಹಿಂದೂ ಬೇಡರ ಉ:ಕೂಲಿಕೆಲಸ ಸಾ: ಬೆಣಸಿಗಡ್ಡಿ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಗಣಕೀಕರಿಸಿದ ಅಜರ್ಿಯನ್ನು ಹಾಜರ ಪಡಿಸಿದ್ದು, ಸದರ ಅಜರ್ಿಯ ಸಾರಾಂಶವೆನೆಂದರೆ ನನ್ನ ಗಂಡನಿಗೆ ಆದಪ್ಪ ಮತ್ತು ನಿಂಗಪ್ಪ ಅಂತ ಇಬ್ಬರು ಅಣ್ಣಂದಿರಿದ್ದು ನಮಗೆ ಅರುಣಕುಮಾರ, ಸುದೀಪ್, ಲಕ್ಷ್ಮೀ ಅಂತ ಮೂರು ಜನ ಮಕ್ಕಳಿದ್ದು. ನನ್ನ ಗಂಡನ ಅಣ್ಣನಾದ ನಿಂಗಪ್ಪನಿಗೆ ಆರೋಗ್ಯ ಸರಿಯಾಗಿಲ್ಲದ ಕಾರಣ ಅವನಿಗೆ ಗೆದ್ದಲಮರಿಯ ಖಾಸಗಿ ಆಸ್ಪತ್ರೆಗೆ ತೊರಿಸುತ್ತಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 17.08.2020 ರಂದು ರಾತ್ರಿ 08:00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಬಸಪ್ಪ ಇಬ್ಬರು ಕೂಡಿ ನನ್ನ ಗಂಡನ ಅಣ್ಣನಾದ ನಿಂಗಪ್ಪನಿಗೆ ಗೆದ್ದಲಮರಿ ಆಸ್ಪತ್ರೆಗೆ ತೊರಿಸಲು ನಮ್ಮೂರಿನಿಂದ ಏದಲಬಾವಿಯ ವರೆಗೆ ಒಂದು ಅಟೋದಲ್ಲಿ ಬಂದ್ದಿದ್ದು. ನಾವು ಬಂದ ಆಟೋವು ಕಕ್ಕೇರಾಕ್ಕೆ ಹೋಗಿದ್ದರಿಂದ ನಾವು ಏದಲಬಾವಿಯಲ್ಲಿ ಇಳಿದು ಏದಲಬಾವಿಯಿಂದ ಗೆದ್ದಲಮರಿ ತಾಂಡಾಕ್ಕೆ ಹೋಗುವ ರಸ್ತೆಯ ಮೇಲೆ ನಾವು ಮೂರು ಕೂಡಿ ನಡೆದುಕೊಂಡು ಹೋಗುತ್ತಿರುವಾಗ. ಏದಲಬಾವಿಯಿಂದ ಗೆದ್ದಲಮರಿ ತಾಂಡಕ್ಕೆ ಹೋಗುವ ಮುಖ್ಯ ರಸ್ತೆಯ ಗೆದ್ದಲಮರಿ ತಾಂಡಾದ ಸಮೀಪ ಪರಸಪ್ಪ್ನ ಹಳ್ಳದ ಬ್ರಿಡ್ಜ್ನ ಹತ್ತಿರದ ರಸ್ತೆಯ ಮೇಲೆ ಎಡಭಾಗದಲ್ಲಿ ನಾವು ನಡೆದುಕೊಂಡು ಹೋಗುತ್ತಿರುವಾಗ ನಮ್ಮ ಹಿಂದುಗಡೆಯಿಂದ ಒಬ್ಬ ಟ್ರ್ಯಾಕ್ಟರ್ ಸವಾರನು ತನ್ನ ಟ್ರ್ಯಾಕ್ಟರನ್ನ್ ಅತಿ ವೇಗ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದವನೆ ನಮ್ಮ ಪಕ್ಕದಲ್ಲಿ ನಮ್ಮ ಜೋತೆಗೆ ನಡೆದುಕೊಂಡು ಬರುತ್ತಿದ್ದ. ನನ್ನ ಗಂಡ ಬಸಪ್ಪನಿಗೆ ಹಿಂಬದಿಗೆ ಸದರಿ ಟ್ಯಾಕ್ಟರ್ ಚಾಲಕನು ಡಿಕ್ಕಿ ಪಡಿಸಿದ್ದರಿಂದ ನನ್ನ ಗಂಡನು ಕೇಳಗೆ ಬಿದ್ದಾಗ ಆ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ನ್ನು ನನ್ನ ಗಂಡನ ಮೇಲೆ ಹಾಯಿಸಿಕೊಂಡು ಹೋಗಿದ್ದು. ನಾವು ಗಾಬರಿಯಾಗಿ ನನ್ನ ಗಂಡನ ಹತ್ತಿರ ಹೋಗಿ ನೋಡಲಾಗಿ. ನನ್ನ ಗಂಡನ ಮುಖದ ಕಣ್ಣಿನ ಹುಬ್ಬಿನ ಮೇಲೆ, ಕಣ್ಣಿನ ಕೆಳಗೆ ರಕ್ತಗಾಯವಾಗಿದ್ದು. ನನ್ನ ಗಂಡನ ಹೊಟ್ಟೆಯ ಮೇಲೆ ಸದರಿ ಟ್ಯಾಕ್ಟರ್ ಹಾಯ್ದುಹೋಗಿದ್ದದಿಂದ ಹೊಟ್ಟೆಯ ಮೇಲೆ ಟಾಯರ್ ಗುರತಿನ ಭಾರಿಗಾಯವಾಗಿ, ನನ್ನ ಗಂಡನ ಗುದುದ್ವಾರ ಹರಿದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಸದರಿ ಟ್ಯಾಕ್ಟರಿ ಚಾಲಕನು ತನ್ನ ಟ್ಯಾಕ್ಟರನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ಓಡಿ ಹೋಗಿದ್ದು. ಈ ಟ್ಯಾಕ್ಟರ್ ಚಾಲಕನು ನಮ್ಮೂರಿನ ರಂಗನಾಥ ತಂದೆ ಪರಮನಗೌಡ ಮಾಲಿಗೌಡರ ಇದ್ದು. ಸದರಿ ಟ್ಯಾಕ್ಟರ್ ನೋಡಲಾಗಿ ಬಿಳಿ ಮತ್ತು ನೀಲಿ ಬಣ್ಣದ ಸ್ವರಾಜ್-744 ಇದ್ದು. ಸದರಿ ಟ್ಯಾಕ್ಟರ್ ನೋಂದಣಿ ಸಂಖ್ಯೆ ಕೆಎ-33 ಟಿಎ-9527 ಇದ್ದು. ಇದಕ್ಕೆ ಹಿಂದೆ ಟ್ರಾಲಿ ಜೋಡಿಸಿದ್ದು. ಟ್ರಾಲಿಗೆ ನಂಬರ್ ಬರೆದಿರುವದಿಲ್ಲಾ. ಆಗ ನನ್ನ ಜೋತೆಗೆ ಇದ್ದ ನನ್ನ ಗಂಡನ ಅಣ್ಣ ನಿಂಗಪ್ಪನು ತನ್ನ ತಂದೆ ಮಲ್ಲಪ್ಪ ತಂದೆ ನಿಂಗಪ್ಪ ಮಾಲಿಗೌಡರ, ತಾಯಿ ಬಸಮ್ಮ ಮತ್ತು ತನ್ನ ಅಣ್ಣ ಆದಪ್ಪನಿಗೆ ಪೋನ್ ಮಾಡಿದ್ದರಿಂದ ಸ್ವಲ್ಪ ಹೊತ್ತಿನ ನಂತರ ಇವರೆಲ್ಲರೂ ಬಂದಿದ್ದು. ನಾವು ಬೆಳಗಿನವರೆಗೆ ಅಲ್ಲಿಯೇ ಇದ್ದು. ಈ ದಿವಸ ಮುಂಜಾನೆ ನನ್ನ ಕಾಕನಾದ ದೇವಪ್ಪ ತಂದೆ ನಿಂಗಪ್ಪ ಬುದ್ದಿನ್, ಸಾ:ಇರುಬೆಗೇರಿ ತಾ: ದೇವದುರ್ಗ ಹಾ:ವ: ಬೆಣಸಿಗಡ್ಡಿ, ಅಂಬ್ರಪ್ಪ ತಂದೆ ಸೋಮನಿಂಗಪ್ಪ ಗುತ್ತೇದಾರ, ಸೋಮಪ್ಪ ತಂದೆ ಬೀಮಪ್ಪ ಮಾಲಿಗೌಡರ್, ನಾಗರಾಜ ತಂದೆ ಸೋಮಪ್ಪ ಜೋಗೂರು ಸಾ: ನಾರಾಯಣಪೂರ ಇವರುಗಳಿಗೆ ಪೋನ್ ಮಾಡಿ ತಿಳಿಸಿದ್ದರಿಂದ ಇವರುಗಳು ಬಂದಿದ್ದು. ನಾವು ನನ್ನ ಸಂಬಂದಿಕರೊಂದಿಗೆ ವಿಚಾರ ಮಾಡಿಕೊಂಡು ತಡವಾಗಿ ಬಂದಿದ್ದು. ನನ್ನ ಗಂಡನ ಶವವು ಅಪಘಾತವಾಗ ಸ್ಥಳಲ್ಲಿಯೇ ಇದ್ದು. ಕಾರಣ ನನ್ನ ಗಂಡ ಬಸಪ್ಪ ತಂದೆ ಮಲ್ಲಪ್ಪ ಮಾಲಿಬಿರಾದಾರ ವ:29 ವರ್ಷ ಜಾ: ಬೇಡರ ಉ: ಕೂಲಿಕೆಲಸ ಸಾ: ಬೆಣಸಿಗಡ್ಡಿ ತಾ:ಹುಣಸಗಿ ಇತನಿಗೆ ನಮ್ಮೂರಿನ ರಂಗನಾಥ ತಂದೆ ಪರಮನಗೌಡ ಮಾಲಿಗೌಡರ ಇನತು ತನ್ನ ಬಿಳಿ ಮತ್ತು ನೀಲಿ ಬಣ್ಣದ ಸ್ವರಾಜ್-744 ಇದ್ದು ಸದರಿ ಟ್ಯಾಕ್ಟರ್ ನೋಂದಣಿ ಸಂಖ್ಯೆ ಕೆಎ-33 ಟಿಎ-9527 ನೇದ್ದನ್ನು ಅತೀವೇಗವಾಗಿ, ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ, ನನ್ನ ಗಂಡನ ಮೇಲೆ ಹೊಟ್ಟೆಯ ಮೇಲೆ ಹಾಯಿಸಿಕೊಂಡು ಹೋಗಿದ್ದರಿಂದ ಹೊಟ್ಟೆಗೆ ಮತ್ತು ಗುದುದ್ವಾರಕ್ಕೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಸದರಿ ಟ್ಯಾಕ್ಟರ್ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಲು ವಿನಂತಿ ಅಂತಾ ಗಣಕೀಕೃತ ಪಿರ್ಯಾಧಿ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:66/2020 ಕಲಂ: 279, 304(ಎ), ಐಪಿಸಿ & 187 ಐಎಮ್ವ್ಹಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 67/2020 ಕಲಂ: 302, 201 ಐಪಿಸಿ : ಇಂದು ದಿನಾಂಕ:18/08/2020 ರಂದು 13.00 ಗಂಟೆಗೆ ಶ್ರೀ ತಿರುಪತಿ ತಂದೆ ದ್ಯಾವಪ್ಪ ಬಿರಾದರ ವ:38 ವರ್ಷ ಜಾ:ಬೇಡರ ಉ:ಒಕ್ಕಲುತನ (ದಳಪತಿ) ಸಾ:ಗೆದ್ದಲಮರಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಕೊಟ್ಟಿದ್ದು ಸಾರಾಂಶವೇನೆಂದರೆ, ಇಂದು ದಿ:18/08/2020 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ನಾನು ನಮೂರ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಜುಮಾಲಪೂರ ಸಣ್ಣ ತಾಂಡಾದ ಗೋವಿಂದ ರಾಠೋಡ ಇವರು ಬಂದು ನಮ್ಮ ಹೊಲದ ದಂಡಗೆ ಇರುವ ಕೃಷ್ಣಾನದಿಯಲ್ಲಿ ಒಂದು ಅಪರಚಿತ ಹೆಣ ತೇಲಿ ಬಂದಿರುತ್ತದೆ ಅಂತಾ ತಿಳಿಸಿದಾಗ, ನಾನು ಮತ್ತು ಸೋಮನಗೌಡ ಬಿರಾದರ, ಸೋಮು ಕಾರಬಾರಿ ಮೂರು ಜನರು ಕೂಡಿ ಹೊಳೆಯ ದಂಡೆಗೆ ಹೋಗಿ ನೋಡಲು ಗೋಪಿಸಿಂಗ್ ತಂದೆ ಠಾಕ್ರೆಪ್ಪ ಕಾರಬಾರಿ ಸಾ: ಜುಮಾಲಪೂರ ದೊಡ್ಡ ತಾಂಡಾ ಇವರ ಹೊಲದ ಪಕ್ಕದಲ್ಲಿರುವ ಕೃಷ್ಣಾನದಿಯ ದಂಡೆಯಲ್ಲಿಯ ಕಂಟಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಹೆಣ ಅಂದಾಜು 30 ರಿಂದಾ 35 ವಯಸ್ಸಿನದು ತೇಲಿದ್ದು ಇದ್ದು, ನಾವು ಎಲ್ಲರೂ ಸಮೀಪಕ್ಕೆ ಹೋಗಿ ನೋಡಲು ಹೆಣದ ಎರಡು ಕೈಗಳು ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿದಂತೆ ಕಂಡು ಬಂದಿರುತ್ತದೆ, ಮೃತದೇಹದ ಎರಡು ಕಾಲುಗಳಲ್ಲಿ ನೀಲಿ ಜೀನ್ಸ್ ಪ್ಯಾಂಟ್ ಇದ್ದಂತೆ ಕಂಡುಬರುತ್ತಿದೆ. ಮೃತದೇಹವು ಅಪರಿಚಿತವಾಗಿದ್ದು, ಅವನಿಗೆ ಯಾರೋ ದುಷ್ಕಮರ್ಿಗಳು ಯಾವದೋ ಒಂದು ದುರುದ್ದೇಶದಿಂದ ಕೊಲೆಮಾಡುವ ಉದ್ದೇಶದಿಂದ ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ ಸಾಕ್ಷಿ ನಾಶಪಡಿಸುವ ಸಲುವಾಗಿ ಕೃಷ್ಣಾನದಿಯ ನೀರಿನಲ್ಲಿ ಸುಮಾರು 4-5 ದಿನಗಳ ಹಿಂದೆ ಬಿಸಾಕಿದ್ದು ಇರುತ್ತದೆ ಅಂತಾ ಈತ್ಯಾದಿ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 70/2020 ಕಲಂ 379 ಐಪಿಸಿ : ನಾನು ಒಂದು ಅಪ್ಪೆ ಆಟೋ ನಂ ಕೆ.ಎ 33, 6050, ನೇದ್ದನ್ನು ತೆಗೆದುಕೊಂಡಿದ್ದು, ದಿನಾಲು ನಮ್ಮೂರಿನಿಂದ ಯಾದಗಿರಿಗೆ ಪ್ಯಾಸಿಜಂರ್ ಹೊಡೆದು ಉಪಜೀವನ ಸಾಗಿಸುತ್ತೇನೆ. ಹೀಗಿದ್ದು ದಿನಾಂಕ 11/08/2020 ರಂದು ಬೆಳಗಿನಿಂದ ಸಾಯಂಕಾಲದ ವರೆಗೆ ನಮ್ಮೂರಿನಿಂದ ಯಾದಗಿರಿಗೆ ಪ್ಯಾಸಿಂಜರ್ ಹೊಡೆದು, ಸಾಯಂಕಾಲ 05-00 ಗಂಟೆಯ ಸುಮಾರಿಗೆ ನಾನು ಯಾದಗಿರಿಗೆ ಬಂದು ನನ್ನ ಆಟೋ ಯಾದಗಿರಿ-ಶಹಾಪೂರ ರೋಡ ಮೇಲೆ ಯಾದಗಿರಿಯ ರೈಲ್ವೆ ಓವರ್ ಬ್ರಿಡ್ಜ್ ಹತ್ತಿರ ನಿಲ್ಲಿಸಿ, ನಾನು ಹಳೆಯ ಬಸ್ ನಿಲ್ದಾಣದ ಹತ್ತಿರ ಬಂದು ಮನೆಗೆ ಬೇಕಾಗುವ ಕಿರಾಣಿ ಸಾಮಾನುಗಳನ್ನು ಖರೀದಿ ಮಾಡಿ, ಮರಳಿ ಸಾಯಂಕಾಲ 05-30 ಗಂಟೆಯ ಸುಮಾರಿಗೆ ನನ್ನ ಆಟೋದ ಹತ್ತಿರ ಬಂದು ನೋಡಲಾಗಿ ನನ್ನ ಆಟೋ ಅಲ್ಲಿ ಇರಲಿಲ್ಲ. ಕೂಡಲೆ ನಾನು ನಮ್ಮೂರಿನ ಆಟೋ ಚಾಲಕ ಮಲ್ಲಪ್ಪ ತಂದೆ ಬಸ್ಸಪ್ಪ ತೆಲಗರ ಹಾಗೂ ನಮ್ಮೂರಿನ ಮರೆಪ್ಪ ತಂದೆ ದಂಡಪ್ಪ ತಳವಾರ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದರು. ಎಲ್ಲರು ಕೂಡಿ ಅಕ್ಕ ಪಕ್ಕದಲ್ಲಿ ಹಾಗೂ ಯಾದಗಿರಿಯ ವಿವಿದ ಕಡೆಗಳಲ್ಲಿ ತಿರುಗಾಡಿ ನೋಡಲಾಗಿ ನನ್ನ ಆಟೋ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಆಟೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆಟೋದ ಅಂದಾಜು ಕಿಮ್ಮತ್ತು 48,000/-ರೂಪಾಯಿಗಳು. ಆಟೋಡ ಇಟಿರಟಿಜ ಓಠ-ಖ8ಏ0583736, ಅಚಿ ಓಔ. ಈಏಏ756243, ಅಂತಾ ಇರುತ್ತದೆ. ಇಲ್ಲಿಯ ವರೆಗೆ ನಾನು ನನ್ನ ಆಟೋವನ್ನು ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ಕಾರಣ ಮಾನ್ಯರವರು ನನ್ನ ಆಟೋವನ್ನು ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 70/2020 ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 191/2020 ಕಲಂ 143,147,323, 504, 506, 498(ಎ) ಸಂಗಡ 149 ಐಪಿಸಿ : ಇಂದು ದಿನಾಂಕಃ 18/08/2020 ರಂದು 6-15 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀಮತಿ ಭಾಗ್ಯಮ್ಮ ಗಂಡ ಸಂಗಪ್ಪ ಪಂಚಾಯತಗೌಡ್ರ ಸಾ: ರಾಯದುರ್ಗ, ಹಾ.ವ: ಕುರುಬರಗಲ್ಲಿ ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ತವರೂರು ಸುರಪೂರ ನಗರದ ಕುರುಬರಗಲ್ಲಿ ಇದ್ದು, ನನಗೆ 2015 ನೇ ಸಾಲಿನಲ್ಲಿ ಲಿಂಗಸುಗೂರ ತಾಲೂಕಿನ ರಾಯದುರ್ಗ ಗ್ರಾಮದ ಸಂಗಪ್ಪ ತಂದೆ ಅಮರಪ್ಪ ಪಂಚಾಯತಗೌಡ್ರ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ಬಳಿಕ ನನಗೆ ನನ್ನ ಗಂಡನ ಮನೆಯಲ್ಲಿ ಸುಮಾರು 1 ವರ್ಷದವರೆಗೆ ಎಲ್ಲರೂ ಚೆನ್ನಾಗಿ ನೋಡಿಕೊಂಡಿರುತ್ತಾರೆ. ನಂತರ ನನ್ನ ಗಂಡನು ಸಾರಾಯಿ ಕುಡಿಯುವ ಚಟಕ್ಕೆ ದಾಸನಾಗಿದ್ದು ದಿನಾಲು ಕುಡಿದು ಮನೆಗೆ ಬಂದು ವಿನಾಕಾರಣ ನನಗೆ ನೀನು ಸರಿಯಾಗಿಲ್ಲಾ, ನನಗೆ ಒತ್ತಾಯವಾಗಿ ನಿನ್ನೊಂದಿಗೆ ಮದುವೆ ಮಾಡಿದ್ದಾರೇ ಲೇ ಸೂಳೆ, ನಿನ್ನಿಂದ ದುಡಿಯಲು ಸಹ ಆಗುವದಿಲ್ಲಾ, ಮನೆಯಲ್ಲಿ ಸುಮ್ಮನೇ ಬಿದ್ದಿರುತಿ, ಮನೆ ಬಿಟ್ಟು ಹೋಗು ಅಂತ ಜಗಳ ತಗೆದು ಹೊಡೆಬಡೆ ಮಾಡುತ್ತ ಬಂದಿದ್ದು, ಮನೆಯಲ್ಲಿ ನನ್ನ ಮಾವನಾದ ಅಮರಪ್ಪ ತಂದೆ ದ್ಯಾವಪ್ಪ, ಅತ್ತೆಯಾದ ನಂದಮ್ಮ ಗಂಡ ಅಮರಪ್ಪ, ಮೈದುನ ಪರಮಣ್ಣ ತಂದೆ ಅಮರಪ್ಪ ಹಾಗು ನೆಗೆಣಿ ದ್ಯಾವಮ್ಮ ಗಂಡ ಪರಮಣ್ಣ ಇವರೆಲ್ಲರೂ ಸಹ ಸೂಳೆಗೆ ಕೂಲಿ ಮಾಡಲು ಆಗುವದಿಲ್ಲಾ, ಹೊಡೆದು ಓಡಿಸು ನಿನಗೆ ಬೇರೆ ಮದುವೆ ಮಾಡಿಸುತ್ತೇವೆ ಅಂತ ಹೇಳುತ್ತ ಎಲ್ಲರೂ ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತ ಬಂದಿರುತ್ತಾರೆ. ನಾನು ಮನೆಯಲ್ಲಿ ಅಡಿಗೆ ಮಾಡಿದರೂ ವಿನಾಕಾರಣ ಅವರೆಲ್ಲರೂ ರೊಟ್ಟಿ ಸರಿಯಾಗಿಲ್ಲಾ, ಪಲ್ಯೆ ಸರಿಯಾಗಿಲ್ಲಾ ಅಂತ ನೆಪ ಹೇಳಿ ಜಗಳ ತಗೆದು ಹೊಡೆಬಡೆ ಮಾಡಿ ತೊಂದರೆ ಕೊಡುತ್ತ ಬಂದಿರುತ್ತಾರೆ. ಅವರ ಹಿಂಸೆ ತಾಳಲಾರದೇ ಕಳೆದ ಜನವರಿ ತಿಂಗಳಲ್ಲಿ ಸಂಕ್ರಮಣ ಹಬ್ಬಕ್ಕೆ ತವರು ಮನೆಗೆ ಹೋಗಿ ಬರುವದಾಗಿ ಹೇಳಿ ಇಬ್ಬರೂ ಮಕ್ಕಳೊಂದಿಗೆ ಸುರಪೂರದಲ್ಲಿರುವ ನನ್ನ ತವರು ಮನೆಗೆ ಬಂದವಳು ಇಲ್ಲೆ ಇದ್ದೇನು. ಹೀಗಿರುವಾಗ ದಿನಾಂಕಃ 04/08/2020 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ನಾನು ಕುರುಬರಗಲ್ಲಿರುವ ನನ್ನ ತವರು ಮನೆಯ ಮುಂದೆ ಕುಳಿತಿದ್ದಾಗ ನನ್ನ ಗಂಡನಾದ 1) ಸಂಗಪ್ಪ ತಂದೆ ಅಮರಪ್ಪ ಪಂಚಾಯತಗೌಡ್ರ, ಮಾವನಾದ 2) ಅಮರಪ್ಪ ತಂದೆ ದ್ಯಾವಪ್ಪ ಪಂಚಾಯತಗೌಡ್ರ, ಅತ್ತೆಯಾದ 3) ನಂದಮ್ಮ ಗಂಡ ಅಮರಪ್ಪ ಪಂಚಾಯತಗೌಡ್ರ, ಮೈದುನ 4) ಪರಮಣ್ಣ ತಂದೆ ಅಮರಪ್ಪ ಪಂಚಾಯತಗೌಡ್ರ ಹಾಗು ನೆಗೆಣಿ 5) ದ್ಯಾವಮ್ಮ ಗಂಡ ಪರಮಣ್ಣ ಪಂಚಾಯತಗೌಡ್ರ, ಎಲ್ಲರೂ ಸಾ|| ರಾಮದುರ್ಗ, ತಾಃ ಲಿಂಗಸುಗೂರ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆಯ ಹತ್ತಿರ ಬಂದು ನನಗೆ ಸೂಳೆ ತವರು ಮನೆಗೆ ಬಂದು ಇಲ್ಲೇ ಬಿದ್ದರೆ ಅಲ್ಲಿ ಸಂಸಾರ ಯಾರು ಮಾಡಬೇಕು ಮಾನಗೇಡಿ ರಂಡಿ, ನಮರಿಬ್ಬರೂ ಮಕ್ಕಳಿಗೆ ನಮಗೆ ಕೊಟ್ಟು, ವಿಚ್ಛೇದನ ಕೊಟ್ಟು ಬಿಡು ಅಂತಾ ಹೇಳಿದಾಗ, ನಾನು ಮಗನಿಗೂ ಕೊಡುವದಿಲ್ಲ, ವಿಚ್ಛೇದನ ಸಹ ಕೊಡುವದಿಲ್ಲ ಅಂತಾ ಹೇಳಿದ್ದಕ್ಕೆ ನನ್ನ ಗಂಡ, ಮಾವ-ಅತ್ತೆ, ಮೈದುನ ಹಾಗು ನೆಗೆಣಿ ಎಲ್ಲರೂ ಕೂಡಿ ನಮ್ಮ ಮಕ್ಕಳಿಗೆ ನಮಗೆ ಕೊಡುವದಿಲ್ಲ ಅಂತಾ ಹೇಳುತ್ತಿಯಾ ರಂಡಿ ಅನ್ನುತ್ತ ಕುದಲು ಹಿಡಿದು ನಮ್ಮ ಅಂಗಳದಲ್ಲಿ ಎಳೆದಾಡಿ ಹೊಡೆಯುತ್ತಿದ್ದಾಗ ತಂದೆ-ತಾಯಿ, ತಮ್ಮ ನಿಂಗಪ್ಪ ಹಾಗು ನಮ್ಮ ಓಣಿಯ ಹಣಮಂತ ತಂದೆ ನಿಂಗಪ್ಪ, ನಿಂಗಪ್ಪ ತಂದೆ ಶಿವಣ್ಣ ಇವರು ಬಂದು ಬಿಡಿಸಿರುತ್ತಾರೆ. ಆಗ ನನ್ನ ಗಂಡ ಹಾಗು ಮಾವ ಇಬ್ಬರೂ ನಮ್ಮ ಇಬ್ಬರೂ ಗಂಡು ಹುಡುಗರನ್ನು ಕೊಟ್ಟು ಮದುವೆ ವಿಚ್ಛೇದನ ಕೊಟ್ಟರೆ ಒಳ್ಳೆಯದು, ಇಲ್ಲದಿದ್ದರೆ ಇನ್ನೊಂದು ಸಲ ಇಲ್ಲಿಗೆ ಬಂದು ನಿನ್ನನ್ನು ಖಲಾಸ ಮಾಡಿ ಹೋಗುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 191/2020 ಕಲಂ 143,147,323, 504, 506, 498(ಎ) ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 30/2020 ಕಲಂ: 107 ಸಿ.ಆರ್.ಪಿ.ಸಿ: ಇಂದು ದಿನಾಂಕಃ 18/08/2020 ರಂದು 1-00 ಪಿ.ಎಮ್ ಕ್ಕೆ ಶ್ರೀ ಸಾಹೇಬಗೌಡ ಎಮ್ ಪಾಟೀಲ್, ಪಿ.ಐ ಸುರಪೂರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ಹಳ್ಳಿ ಭೇಟಿ ಕುರಿತು 11-30 ಎ.ಎಮ್ ಕ್ಕೆ ರತ್ತಾಳ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ಪೆಟ್ರೋಲಿಂಗ್ ಮಾಡಿ ಪ್ರಮುಖ ನಾಗರೀಕ ಸಮೀತಿ ಸದಸ್ಯರಿಗೆ ಹಾಗು ಪೊಲೀಸ್ ಬಾತ್ಮಿದಾರರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೆನೆಂದರೆ, ರತ್ತಾಳ ಗ್ರಾಮದ ಸಿಮಾಂತರದಲ್ಲಿರುವ ಹೊಲ ಸವರ್ೆ ನಂಬರ 4 ರಲ್ಲಿ 7 ಎಕರೆ 18 ಗುಂಟೆ ಮತ್ತು ದೇವಿಕೇರಿ ಸಿಮಾಂತರದ ಹೊಲ ಸವರ್ೆ ನಂ 91 ರಲ್ಲಿ 2 ಎಕರೆ 34 ಗುಂಟೆ ಜಮೀನಿನ ಸಂಬಂಧ ರಂಗಂಪೇಟ ನಿವಾಸಿಗಳಾದ ಅಯ್ಯುಬಖಾನ್ ತಂದೆ ಮುನುವರಖಾನ್ ಜಮಾದಾರ ಹಾಗು ಅವರ ಅಣ್ಣ-ತಮ್ಮಕೀಯ ಅನ್ವರಖಾನ ತಂದೆ ರಸೂಲಖಾನ್ ಜಮಾದಾರ ಇವರ ಮದ್ಯೆ ತಕರಾರು ನಡೆದಿದ್ದು, ಸದರಿ ಜಮೀನ ಸಂಬಂಧ ಎರಡು ಪಾಟರ್ಿಯವರ ಮದ್ಯೆ ಗಾಢವಾದ ದ್ವೇಷ ಬೆಳೆದು ಪರಸ್ಪರ ನಾ ಮೇಲು, ತಾ ಮೇಲು ಅನ್ನುತ್ತ ರಂಗಂಪೇಟ, ರತ್ತಾಳ, ದೇವಿಕೇರಿ ಗ್ರಾಮಗಳಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ 1) ಅಯ್ಯುಬಖಾನ್ ತಂದೆ ಮುನುವರಖಾನ್ ಜಮಾದಾರ ವಯಃ 46 ವರ್ಷ ಜಾತಿಃ ಮುಸ್ಲಿಂ ಉಃ ವ್ಯಾಪಾರ ಸಾ: ರಂಗಂಪೇಟ ಹಾ.ವಃ ಮುಸ್ಲಿಂಪೂರ ಯಾದಗಿರಿ, 2) ಮೀರಾಜಖಾನ್ ತಂದೆ ಮುನುವರಖಾನ್ ಜಮಾದಾರ ವಯಃ 50 ವರ್ಷ ಜಾತಿಃ ಮುಸ್ಲಿಂ ಉಃ ವ್ಯಾಪಾರ ಸಾ: ರಂಗಂಪೇಟ ಹಾ.ವಃ ಇಸ್ಲಾಮಾಬಾದ ಕಾಲೋನಿ ಕಲಬುರಗಿ, 3) ಕಯ್ಯುಮಖಾನ್ ತಂದೆ ಮುನುವರಖಾನ್ ಜಮಾದಾರ ವಯಃ 63 ವರ್ಷ ಜಾತಿಃ ಮುಸ್ಲಿಂ ಉಃ ಖಾಸಗಿ ಕೆಲಸ ಸಾ: ರಂಗಂಪೇಟ ಹಾ.ವಃ ಯಾದಗಿರಿ, 4) ಅಮ್ಜಾದಖಾನ್ ತಂದೆ ಮುನುವರಖಾನ್ ಜಮಾದಾರ ವಯಃ 45 ವರ್ಷ ಜಾತಿಃ ಮುಸ್ಲಿಂ ಉಃ ವ್ಯಾಪಾರ ಸಾ: ರಂಗಂಪೇಟ, ಹಾ.ವಃ ಯಾದಗಿರಿ ಇವರು 4 ಜನ ಅಣ್ಣ-ತವ್ಮ್ಮಂದಿರು ಅನ್ವರಖಾನ ತಂದೆ ರಸೂಲಖಾನ್ ಜಮಾದಾರ ಹಾಗು ಅವರ ಕುಟುಂಬದವರಿಗೆ ಹೊಡೆಬಡೆ ಮಾಡಿ ಕಾನೂನು ಸೂವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಹಾಗು ಜೀವಹಾನಿ, ಆಸ್ತಿಪಾಸ್ತಿ ಹಾನಿಯಾಗುವ ಸಾದ್ಯತೆ ಕಂಡು ಬಂದಿರುತ್ತದೆ. ಆದ್ದರಿಂದ 1-00 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ವರದಿ ನೀಡಿದ್ದು, ಸದರಿ 4 ಜನರ ವಿರುದ್ದ ಸೂಕ್ತ ಮುಂಜಾಗೃತಾ ಕ್ರಮ ಕೈಕೊಳ್ಳಬೇಕು ಅಂತ ವರದಿ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್ ನಂಬರ 30/2020 ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 31/2020 ಕಲಂ: 107 ಸಿ.ಆರ್.ಪಿ.ಸಿ : ಇಂದು ದಿನಾಂಕಃ 18/08/2020 ರಂದು 3-30 ಪಿ.ಎಮ್ ಕ್ಕೆ ಶ್ರೀ ಭಾಗಣ್ಣ ಎ.ಎಸ್.ಐ ಸುರಪೂರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ಹಳ್ಳಿ ಭೇಟಿ ಕುರಿತು 2-30 ಪಿ.ಎಮ್ ಕ್ಕೆ ರತ್ತಾಳ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ಪೆಟ್ರೋಲಿಂಗ್ ಮಾಡಿ ಪ್ರಮುಖ ನಾಗರೀಕ ಸಮೀತಿ ಸದಸ್ಯರಿಗೆ ಹಾಗು ಪೊಲೀಸ್ ಬಾತ್ಮಿದಾರರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೆನೆಂದರೆ, ರತ್ತಾಳ ಗ್ರಾಮದ ಸಿಮಾಂತರದಲ್ಲಿರುವ ಹೊಲ ಸವರ್ೆ ನಂಬರ 4 ರಲ್ಲಿ 7 ಎಕರೆ 18 ಗುಂಟೆ ಮತ್ತು ದೇವಿಕೇರಿ ಸಿಮಾಂತರದ ಹೊಲ ಸವರ್ೆ ನಂ 91 ರಲ್ಲಿ 2 ಎಕರೆ 34 ಗುಂಟೆ ಜಮೀನಿನ ಸಂಬಂಧ ರಂಗಂಪೇಟ ನಿವಾಸಿಗಳಾದ ಅಯ್ಯುಬಖಾನ್ ತಂದೆ ಮುನುವರಖಾನ್ ಜಮಾದಾರ ಹಾಗು ಅವರ ಅಣ್ಣ-ತಮ್ಮಕೀಯ ಅನ್ವರಖಾನ ತಂದೆ ರಸೂಲಖಾನ್ ಜಮಾದಾರ ಇವರ ಮದ್ಯೆ ತಕರಾರು ನಡೆದಿದ್ದು, ಸದರಿ ಜಮೀನ ಸಂಬಂಧ ಎರಡು ಪಾಟರ್ಿಯವರ ಮದ್ಯೆ ಗಾಢವಾದ ದ್ವೇಷ ಬೆಳೆದು ಪರಸ್ಪರ ನಾ ಮೇಲು, ತಾ ಮೇಲು ಅನ್ನುತ್ತ ರಂಗಂಪೇಟ, ರತ್ತಾಳ, ದೇವಿಕೇರಿ ಗ್ರಾಮಗಳಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ 1) ಅನ್ವರಖಾನ ತಂದೆ ರಸೂಲಖಾನ್ ಜಮಾದಾರ ವಯಃ 27 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ ಸಾ: ರಂಗಂಪೇಟ ತಾ: ಸುರಪೂರ 2) ಆಸೀಫಖಾನ್ ತಂದೆ ರಸೂಲಖಾನ್ ಜಮಾದಾರ ವಯಃ 25 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ ಸಾ: ರಂಗಂಪೇಟ ತಾ: ಸುರಪೂರ ಜಿಲ್ಲೆ: ಯಾದಗಿರಿ ಇವರಿಬ್ಬರೂ ಅಣ್ಣ-ತವ್ಮ್ಮಂದಿರು ಆಸ್ತಿ ವೈಷಮ್ಯದಿಂದ ಅಯ್ಯುಬಖಾನ್ ತಂದೆ ಮುನುವರಖಾನ್ ಜಮಾದಾರ ಹಾಗು ಅವರ ಕುಟುಂಬದವರಿಗೆ ಹೊಡೆಬಡೆ ಮಾಡಿ ಕಾನೂನು ಸೂವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಹಾಗು ಜೀವಹಾನಿ, ಆಸ್ತಿಪಾಸ್ತಿ ಹಾನಿಯಾಗುವ ಸಾದ್ಯತೆ ಕಂಡು ಬಂದಿರುತ್ತದೆ. ಆದ್ದರಿಂದ 3-30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ವರದಿ ನೀಡಿದ್ದು, ಸದರಿ 2 ಜನರ ವಿರುದ್ದ ಸೂಕ್ತ ಮುಂಜಾಗೃತಾ ಕ್ರಮ ಕೈಕೊಳ್ಳಬೇಕು ಅಂತ ವರದಿ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್ ನಂಬರ 31/2020 ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 224/2020 ಕಲಂ 295(ಎ) 298, 505(2) ಐ.ಪಿ.ಸಿ : ಇಂದು ದಿನಾಂಕ 18/08/2020 ರಂದು ಸಾಯಂಕಾಲ 17-30 ಗಂಟೆಗೆ ಫಿಯರ್ಾದಿ ಶ್ರೀ ಭೀಮಣ್ಣ ತಂದೆ ಸಿದ್ದಣ್ಣ ಸಿಂಧೇ ವಯ 50 ವರ್ಷ ಜಾತಿ ಹಿಂದೂ ಮರಾಠ ಉಃ ಕಂಟ್ರಾಕ್ಟರ ಸಾಃ ವಾಗಣಗೇರಾ ತಾಃ ಸುರಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಸಾಮಾಜಿಕ ಜಾಲತಾಣವಾದ ಪೇಸ್ಬುಕ್ನಲ್ಲಿ ಖಘಂಖಿ ಏಂಆಂಒ ಎಂಬ ಪ್ರೋಪೈಲ್ನಿಂದ ದಿನಾಂಕ 15/08/2020 ರಂದು ಮುಂಜಾನೆ 07-51 ಗಂಟೆಗೆ ಕ್ರಾಂತಿಕಾರಿ ಸಂಗೋಳ್ಳಿ ರಾಯಣ್ಣರವರ ಭಾವಚಿತ್ರ ಅಪ್ಲೋಡ್ ಮಾಡಿ ಸಮಸ್ತ ನಾಡಿನ ಜನತೆಗೆ 222 ನೇ ಶ್ರೀ ಕಾಂತಿವೀರ ಸಂಗೋಳ್ಳಿ ರಾಯಣ್ಣನ ಜಯಂತ್ಯೋತ್ಸವ ಹಾದರ್ಿಕ ಶುಭಾಶಯಗಳು ಅಂತ ಬರೆದಿದ್ದು ಇನ್ನೂ ಸ್ವಲ್ಪ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನಿಯರ ಬಗ್ಗೆ ವಿಷಯವಿದ್ದು ಸದರಿ ವಿಷಯಕ್ಕೆ ದೇವಪ್ಪ ಬೋರೆನವರ್ ಎಂಬ ಪೇಸ್ಬುಕ್ ಪ್ರೋಪೈಲ್ನಿಂದ ವೀರ ಛತ್ರಪತಿ ಶಿವಾಜಿ ಮಹಾರಾಜರ ವಿರುದ್ದ ಅವಹೇಳನಕಾರಿಯಾಗಿ ಲೋ ಗುಲಾಮ್ ನಾನು ಇತಿಹಾಸದ ವಿದ್ಯಾಥರ್ಿ ಮಗ, ಈ ಹಡಸಿ ಮಗ ಶವಾಜಿ ಕಟ್ಟಿದ್ದು ಮರಾಠಿ ಸಾಮ್ರಾಜ್ಯವೆ ವಿನಹ ಹಿಂದೂ ಸಾಮ್ರಾಜ್ಯವಲ್ಲ. ಮತ್ತೆ ಅವನು ಇನ್ನೂ ಸ್ವಲ್ಪ ಬದುಕಿದ್ದರೆ ನಾವೆಲ್ಲ ಮರಾಠಿಯಲ್ಲಿ ಬರೆಯಬೇಕಿತ್ತು. ಜಲ್ದಿ ಸತ್ತಿದ್ದೇ ಚಲೋ ಆಯಿತು ಪುಂಡ. ನಾನು ಬೇಕು ಅಂತಲೇ ಶವಾಜಿ ಅಂತ ಬರೆದಿದ್ದು, ಜೈ ರಣಹೇಡಿ ಚಕ್ಕಾಧಿಪತಿ ಶವಾಜಿ ಇನ್ನೂ ಅನೇಕ ರೀತಿಯಲ್ಲಿ ಅವಹೇಳನೆ ಮಾಡಿ ಒಬ್ಬ ಧೀಮಂತ ರಾಷ್ಟಭಕ್ತ ಸ್ವಾತಂತ್ರ ಹೋರಾಟಗಾರ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಮೇಲೆ ಇರುವ ಕೋಟ್ಯಾಂತರ ಹಿಂದೂಗಳು ಧಾಮರ್ಿಕ ಭಾವನೆಗಳಿಗೆ ಧಕ್ಕೆ ಬರುವ ಉದ್ದೇಶದಿಂದ ಬುದ್ದಿಪೂರ್ವಕವಾಗಿ ಪೇಸ್ಬುಕ್ನಲ್ಲಿ ಪೋಸ್ಟ ಕಮೆಂಟ್ಸ್ ಮಾಡಿರುತ್ತಾನೆ. ಅಲ್ಲದೆ ಅನೇಕ ರೀತಿಯ ಪೋಸ್ಟ ಕಮೆಂಟ್ಸ್ಗಳನ್ನು ಮಾಡಿರುತ್ತಾನೆ. ನಾನು ಸದರಿ ಕಮೆಂಟ್ಸ್ನ್ನು ದಿನಾಂಕ: 15/08/2020 ರಂದು ಮದ್ಯಾಹ್ನ 12-15 ಗಂಟೆಯ ಸುಮಾರಿಗೆ ನನ್ನ ಮೋಬೈಲ್ನಲ್ಲಿ ನೋಡಿರುತ್ತೇನೆ. ನೋಡುವಾಗ ನನ್ನ ಜೊತೆಯಲ್ಲಿ ಮಾನಪ್ಪ ಪಡಕೋಟೆ, ಚನ್ನಬಸು ಜಾಲಹಳ್ಳಿ, ಬಸವರಾಜ ಪಡಕೋಟೆ ರವರು ಹಾಜರಿದ್ದು, ಸದರಿ ಪೋಸ್ಟನ್ನು ನನ್ನ ಮೋಬೈಲ್ನಲ್ಲಿ ನೋಡಿರುತ್ತಾರೆ. ಹಾಗೂ ಸದರಿ ಪೋಸ್ಟ ಬಗ್ಗೆ ನನ್ನೊಂದಿಗೆ ಇದ್ದವರೊಂದಿಗೆ ಚಚರ್ೆ ಮಾಡಿ ನಂತರ ನಮ್ಮ ಸಮಾಜದ ಹಿರಿಯರಿಗೆ ವಿಚಾರಿಸಿಕೊಂಡು ಪೋಸ್ಟ ಮಾಡಿದ ವ್ಯಕ್ತಿ ಹೆಸರು ವಿಳಾಸ ತಿಳಿದುಕೊಳ್ಳಲಾಗಿ ದೇವಪ್ಪ ತಂದೆ ತಿಮ್ಮಯ್ಯ ಬೋರೆನವರ್ @ ಕಟಿಗೆಲ್ಲರ್ ವಯ 26 ವರ್ಷ ಜಾತಿ ಯಾದವಗೊಲ್ಲ ಸಾಃ ತಿಮ್ಮಾಪೂರದೊಡ್ಡಿ ತಾಃ ಶಹಾಪೂರ ಅಂತ ತಿಳಿದು ಬಂದಿರುತ್ತದೆ. ಸದರಿ ವ್ಯಕ್ತಿಯ ಹೆಸರು ವಿಳಾಸ ತಿಳಿದುಕೊಂಡು ಹಿರಿಯರಿಗೆ ವಿಚಾರಿಸಿಕೊಂಡು ಬರಲು ತಡವಾಗಿ ಇಂದು ದಿನಾಂಕ 18/08/2020 ರಂದು ಠಾಣೆಗೆ ಬಂದು ದೂರು ನೀಡಿರುತ್ತೆನೆ. ಕಾರಣ ಸಾಮಾಜಿಕ ಜಾಲತಾಣ ಪೇಸ್ಬುಕ್ನಲ್ಲಿರುವ ದೇವಪ್ಪ ಬೋರೆನವರ್ ಎಂಬ ಪ್ರೋಪೈಲ್ ಹೊಂದಿದ ದೇವಪ್ಪ ತಂದೆ ತಿಮ್ಮಯ್ಯ ಬೋರೆನವರ್ @ ಕಟಿಗೆಲ್ಲರ್ ಸಾಃ ತಿಮ್ಮಾಪೂರದೊಡ್ಡಿ ಈ ವ್ಯಕ್ತಿಯ ವಿರುದ್ದ ಸಮಸ್ತ ಹಿಂದೂ ಜನರ ಪರವಾಗಿ, ಈ ದೂರನ್ನು ಸಲ್ಲಿಸುತ್ತಿದ್ದು, ಕಾನುನು ಕ್ರಮ ಕೈಕೊಳ್ಳಲು ವಿನಂತಿ. ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 224/2020 ಕಲಂ 295(ಎ), 298, 505(2) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 225/2020 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ : ಮಾನ್ಯರೆ, ಮಾನ್ಯರೆ, ಇಂದು ದಿನಾಂಕ 18/08/2020 ರಂದು 17-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಸಿದ್ದೇಶ್ವರ ಗೇರಡೆ ಪಿ.ಎಸ್.ಐ. ಶಹಾಪುರ ಪೊಲಿಸ್ ಠಾಣೆ ರವರು, ಠಾಣೆಗೆ ಹಾಜರಾಗಿ ಒಂದು ಆರೋಪಿ, ಒಂದು ಮರಳು ತುಂಬಿದ ಟಿಪ್ಪರ ಹಾಜರಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 18/08/2020 ರಂದು ಅಕ್ರಮ ಮರಳು ತಡೆಗಟ್ಟುವ ಕುರಿತು ನಾನು ಮತ್ತು ನನ್ನ ಸಂಗಡ ಠಾಣೆಯ ಸಿಬ್ಬಂದಿಯಾದ ಶ್ರೀ ಮಲ್ಲಣ್ಣ ಹೆಚ್.ಸಿ.79. ದೇವರಾಜ ಪಿ.ಸಿ.282. ರವರಿಗೆ ಒಂದು ಖಾಸಗಿ ಜೀಪ ನೇದ್ದರಲ್ಲಿ ಎಲ್ಲರು ಕುಳಿತುಕೊಂಡು 16-00 ಗಂಟೆಗೆ ಠಾಣೆಯಿಂದ ಹೊರಟು ಪೇಟ್ರೋಲಿಂಗ ಮಾಡುತ್ತ 16-40 ಗಂಟೆಗೆ ದೇವದುಗರ್ಾ ಕ್ರಾಸ್ ಹತ್ತಿರ ಹೋಗಿ ನಿಂತಾಗ 17-00 ಗಂಟೆಗೆ ಸುರಪೂರ ಕಡೆಯಿಂದ ಒಂದು ಟಿಪ್ಪರ ಬರುತ್ತಿರುವದನ್ನು ನೋಡಿ ಅದಕ್ಕೆ ಕೈಮಾಡಿ ನಿಲ್ಲಸಿ ನೋಡಲಾಗಿ ಮರಳು ಲೋಡ್ ಮಾಡಿದ ಟಿಪ್ಪರ ಇದ್ದು ಸದರಿ ಟಿಪ್ಪರ ನೋಡಲಾಗಿ ಭಾರತ ಬೆಂಜ ಕಂಪನಿಯ ಟಿಪ್ಪರ ನಂ ಕೆಎ-33ಎ-7188 ಅಂತಾ ಇದ್ದು, ಸದರಿ ಟಿಪ್ಪರ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಶಂಕ್ರೇಪ್ಪ ತಂದೆ ಗಂಗಪ್ಪ ಉಪ್ಪಿನ ವ|| 24 ಜಾ|| ಲಿಂಗಾಯತ ಉ|| ಚಾಲಕ ಸಾ|| ಯಬಸೂರ ಗಣೇಶ ನಗರ ಹುಬ್ಬಳ್ಳಿ ತಾ|| ಹುಬ್ಬಳ್ಳಿ ಜಿ|| ದಾರವಾಡ ಅಂತಾ ಹೇಳಿದನು, ಸದರಿ ಟಿಪ್ಪರ ಚಾಲನಿಗೆ ಮರಳನ್ನು ಟಿಪ್ಪರದಲ್ಲಿ ಲೋಡ ಮಾಡಿ ಸಾಗಿಸುತ್ತಿರುವ ಬಗ್ಗೆ ಕಾಗದ ಪತ್ರಗಳನ್ನು ಹಾಜರ ಪಡಿಸಲು ಹೇಳಿದಾಗ ಸದರಿ ಟಿಪ್ಪರ ಚಾಲಕನು ನಮ್ಮ ಟಿಪ್ಪರ ಮಾಲಿಕರಾದ ರವಿಕುಮಾರ ತಂದೆ ಯಂಕೊಬಾ ಸಾ|| ಹೇಮನೂರ ಇವರು ಕಳ್ಳತನದಿಂದ ಕೃಷ್ಣ ನದಿಯಲ್ಲಿ ಮರಳನ್ನು ತುಂಬಿಕೊಂಡು ಶಹಾಪೂರಕ್ಕೆ ತಗೆದುಕೊಂಡು ಹೋಗಿ ಮಾರಾಟ ಮಾಡಲು ತಿಳಿಸಿರುತ್ತಾರೆ ಅಂತಾ ತಿಳಿಸಿದನು. ಸದರಿ ಟಿಪ್ಪರ ಪರಿಸಿಲಿಸಿ ನೋಡಲಾಗಿ ಭಾರತ ಬೆಂಜ ಕಂಪನಿಯ ಟಿಪ್ಪರ ನಂ ಕೆಎ-33ಎ-7188 ನೇದ್ದರ ಅ.ಕಿ|| 8 ಲಕ್ಷ ರೂಪಾಯಿ, ಸದರಿ ಟಿಪ್ಪರದಲ್ಲಿ ಅಂದಾಜು 10 ಕ್ಯೂಬಿಕ ಮೀಟರ್ನಷ್ಟು ಮರಳು ಇದ್ದು, ಅಂದಾಜು ಕಿಮ್ಮತ್ತು 7500=00 ರೂಪಾಯಿ ಮೌಲ್ಯದ ಮರಳನ್ನು ಯಾವದೆ ಧಾಖಲಾತಿ ಪಡೆಯದೆ, ಅಕ್ರಮವಾಗಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಟಿಪ್ಪರ ಚಾಲಕ ಮತ್ತು ಮಾಲಿಕನು ಸೇರಿ ಸದರಿ ಟಿಪ್ಪದಲ್ಲಿ ಮರಳು ಲೊಡ ಮಾಡಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದು ಖಚಿತವಾಗಿದ್ದರಿಂದ ಸದರಿ ಟಿಪ್ಪರ ಚಾಲಕನಿಗೆ ಮತ್ತು ಮರಳು ತುಂಬಿದ ಟಿಪ್ಪರ ವಶಕ್ಕೆ ತೆಗೆದುಕೊಂಡು ಸದರಿ ಟಿಪ್ಪರನ್ನು ಸದರಿ ಚಾಲಕನ ಸಹಾಯದಿಂದ ಟಿಪ್ಪರನ್ನು 18-30 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಗೆ ಬಂದು, ಮರಳು ತುಂಬಿದ ಟಿಪ್ಪರನ್ನು ಹಾಜರ ಪಡಿಸಿ ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಕ್ರಮ ಕೈಕೊಳ್ಳುವಂತೆ 19-00 ಗಂಟೆಗೆ ಸರಕಾರದ ಪರವಾಗಿ ಫಿಯರ್ಾದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 225/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.