ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/08/2020
ಯಾದಗಿರ ಪೊಲೀಸ ಠಾಣೆ ಗುನ್ನೆ ನಂ:- 103/2020 ಕಲಂ 143, 147, 447,427, 341, 323, 504, 506 ಸಂ 149 ಐಪಿಸಿ : ಇಂದು ದಿನಾಂಕ 16-08-2020 ರಂದು 4 ಎ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರಿ ಸಣ್ಣಸಿದ್ದಲಿಂಗಪ್ಪಾ ತಂದೆ ಸಾಬಣ್ಣಾ ಮಾನೇಗಾರ ವಯಾ:50 ಉ:ಒಕ್ಕಲುತನ ಜಾ: ಕಬ್ಬಲಿಗೇರ ಸಾ: ಹತ್ತಿಕುಣಿ ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆಯನ್ನು ಸಲ್ಲಿಸಿದ್ದು ಅದರ ಸಾರಾಂಶದವೆನೆಂದರೆ ನಮ್ಮೂರ ಗ್ರಾಮದ ಸೀಮೆಯಲ್ಲಿ ನನ್ನ ಸ್ವಂತ ಹೋಲವಿದ್ದು ಅದರ ಸವರ್ೇ ನಂಬರ 105 ಇರುತ್ತದೆ. ಅದರ ವಿಸ್ತಿರ್ಣ 1-28 ಎಕರೆ ಇರುತ್ತದೆ. ಈ ಹೋಲ ನಮ್ಮ ಹಿರಿಯರಿಂದ ಬಂದ ಆಸ್ತಿಯಾಗಿರುತ್ತದೆ. ಈ ವರ್ಷ ಹೋಲದಲ್ಲಿ ಹೆಸರು ಬಿತ್ತಿದ್ದು ಹೋಲದಲ್ಲಿ ಹೆಸರು ಬೆಳೆಯಿದ್ದು ಹೆಸರು ರಾಶೀ ಮಾಡುವ ಹಂತಕ್ಕೆ ಬಂದಿದ್ದು ಇರುತ್ತದೆ. ನಮ್ಮ ಅಣ್ಣತಮಕಿಯವರಾದ ಈರಪ್ಪಾ ತಂದೆ ಮಲ್ಲಪ್ಪಾ ಮಾನೇಗಾರ ಇವರಿಗೂ ಕೂಡಾ ತಮ್ಮ ಹಿರಿಯರಿಂದ ಆಸ್ತಿ (ಹೋಲ) ಬಂದಿದ್ದು ಅವರು ಈಗ 8-10 ವರ್ಷಗಳ ಹಿಂದೆ ಮಾರಿಕೊಂಡಿರುತ್ತಾರೆ. ಈಗ 4-5 ತಿಂಗಳಿಂದ ಸದರಿ ನಮ್ಮ ಅಣ್ಣತಮಕಿಯವರಾದ ಈರಪ್ಪಾ ತಂದೆ ಮಲ್ಲಪ್ಪಾ ಮಾನೇಗಾರ ಇವರು ಇದ್ದಕ್ಕಿದ್ದಂತೆ ತಮ್ಮ ಮಕ್ಕಳೊಂದಿಗೆ ನಮ್ಮ ಜೋತೆಯಲ್ಲಿ ಜಗಳಾ ಮಾಡಿ ನಿಮ್ಮ ಹೋಲವು ಪಿತ್ರಾಜರ್ಿತ ಆಸ್ತಿ ಇದ್ದು ಈ ಹೋಲದಲ್ಲಿ ನಮಗೂ 12 ಗುಂಟೆ ಪಾಲು ಕೊಡಬೇಕು ಇಲ್ಲದಿದ್ದರೇ ಈ ಹೋಲ ನಿಮಗೆ ಸಾಗುವಳಿ ಮಾಡಲು ಬಿಡುವುದಿಲ್ಲಾ ಅಂತಾ ನಮ್ಮ ಜೋತೆಯಲ್ಲಿ ತಕರಾರು ಮಾಡಿಕೊಂಡಾಗ ಆ ವೇಳೆಯಲ್ಲಿ ಇನ್ನೂಳಿದ ಕೆಲವು ನಮ್ಮ ಅಣ್ಣತಮಕಿಯವರು ನಮಗೂ ಮತ್ತು ಅವರಿಗೂ ಕೂಡಿಸಿ ನ್ಯಾಯ ಪಂಚಾಯತಿ ಮಾಡಿ ನನ್ನ ಮಾಲೀಕತ್ವದಲ್ಲಿದ್ದ ಇನ್ನೊಂದು ಹೋಲ ಸವರ್ೇ ನಂ: 63 ರಲ್ಲಿ ಅವರಿಗೆ 24 ಗುಂಟೆ ಹೋಲ ಕೊಡುವ ಮಾತುಕತೆಯಾಗಿ ಅವರ ಹೆಸರಿಗೆ ರಜಿಸ್ರ್ಟೇಷನ್ ಮಾಡಿಕೊಡುವ ಮಾತುಕತೆಯಾಯಿತು. ಈ ವರ್ಷ ಕೋರೋನಾ ವೈರಸ್ ರೋಗ ಹರಡುವ ಹಿನ್ನೆಲೆಯಲ್ಲಿ 24 ಗುಂಟೆ ಹೋಲ ಅವರಿಗೆ ನೊಂದಾಯಿಸಿ ಕೊಡುವಲ್ಲಿ ಸ್ವಲ್ಪ ವಿಳಂಬವಾಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ 12-08-2020 ರಂದು 12-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಮನೆಯವರು ತಮ್ಮ ಹೋಲದಲ್ಲಿ ಕೆಲಸ ಮಾಡುತ್ತಿದ್ದಾಗ ಅದೇ ವೇಳೆಗೆ ಈ ಮೊದಲು ನಮ್ಮ ಜೋತೆಯಲ್ಲಿ ತಕರಾರು ಮಾಡಿಕೊಂಡ ಈ ಮೇಲ್ಕಂಡ 6 ಜನರು ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಂದಬರೇ ನಮಗೆ ಎಲೇ ಸೂಳೇ ಮಕ್ಕಳೇ ನೀವು ನಮಗೆ ಮಾಡಿಕೊಡಬೇಕಾದ 24 ಗಂಟೆ ಹೋಲ ಇನ್ನೂ ನಮ್ಮ ಹೆಸರಿಗೆ ಮಾಡಿಕೊಟ್ಟಿಲ್ಲಾ, ಈಗ 6 ತಿಂಗಳಾಯಿತು ಇನ್ನೂ ಯಾವಾಗ ಮಾಡಿಕೊಡೋದು ಭೋಸಡಿ ಮಕ್ಕಳೇ ಅಂತಾ ನಮಗೆ ಬೈಯ್ಯುತ್ತಾ ನಿಂತರು. ಆಗ ನಾವು ಅವರಿಗೆ ಲಾಕಡೌನ ಇದ್ದ ಸಲುವಾಗಿ ಕೆಲಸ ಮಾಡಿಕೊಡಲು ಸಾಧ್ಯವಾಗಿಲ್ಲಾ ಇನ್ನೂ ಒಂದು ವಾರದಲ್ಲಿ 24 ಗುಂಟೆ ಹೋಲ ನಿಮ್ಮ ಹೆಸರಿಗೆ ಮಾಡಿಕೊಡುತ್ತೆವೆ ಅಂತಾ ಹೇಳಿದರೂ ಕೂಡಾ ಅವರು ನಮ್ಮ ಮೈಮೇಲೆ ಬಂದು ಮಕ್ಕಳೇ ನೀವು ಮಾತ್ರ ನಿಮ್ಮ ಸಾಗುವಳಿ ಮಾಡಿಕೊಳ್ಳುತ್ತಿದ್ದಿರಿ ನಮಗೆ ಬೇಕಂತಲೇ ಮುಂದಕ್ಕೆ ಹಾಕುತ್ತಾ ಹೊರಟಿದ್ದಿರಿ ಅಂತಾ ಅಂದವರೇ ಅವರಲ್ಲಿ ಈರಪ್ಪಾ ತಂದೆ ಮಲ್ಲಪ್ಪಾ ಮಾನೇಗಾರ ಹಾಗೂ ಇತನ ಮಕ್ಕಳಾದ ದೇವಪ್ಪಾ ತಂದೆ ಶೇಖಪ್ಪಾ ಮತ್ತು ಮಲ್ಲಪ್ಪಾ ತಂದೆ ಮಹಾದೇವಪ್ಪಾ ಈ 4 ಜನರು ನನಗೆ ಸುತ್ತುಗಟ್ಟಿ ನನಗೆ ಮುಂದೆ ಹೋಗದಂತೆ ತಡೆದು ಅಡ್ಡಗಟ್ಟಿ ಕೈಯಿಂದ ಬೆನ್ನಿಗೆ ಮತ್ತು ಕಪಾಳಕ್ಕೆ ಕೈಯಿಂದ ಹೊಡೆದು ನಮ್ಮ ಹೋಲದಲ್ಲಿದ್ದ ಸುಮಾರು 40 ರಿಂದ 50 ಸಾವಿರ ದಷ್ಟು ಹೆಸರು ಬೇಳಯನ್ನು ಲುಕ್ಸಾನ ಮಾಡಿರುತ್ತಾರೆ ಈ ಬಗ್ಗೆ ಕಾನುನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಫಿರ್ಯಾಧಿ ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 222/2020. ಕಲಂ 87 ಕೆ.ಪಿ.ಆಕ್ಟ : ಆರೋಪಿತರು ದಿನಾಂಕ: 16-08-2020 ರಂದು 8:25 ಪಿ.ಎಮ್.ಕ್ಕೆ ದೋರನಳ್ಳಿ ಗ್ರಾವ್ಮದ ಯು.ಕೆ.ಪಿ. ಕ್ಯಾಂಪದ ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿ ದುಂಡಾಗಿ ಕುಳಿತು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 3100/- ರೂ. ನಗದು ಹಣ , ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 222/2020 ಕಲಂ.87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 125/2020 ಕಲಂ 279, 337 ಐಪಿಸಿ : ಇಂದು ದಿನಾಂಕ 16-08-2020 ರಂದು ರಾತ್ರಿ 10:00 ಗಂಟೆಗೆ ಫಿಯರ್ಾದಿ ಠಾಣೆಗೆ ಬಂದು ಹಾಜರಾಗಿ ಹೇಳಿಕೆ ನೀಡಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ್ದು, ಸಾರಾಂಶವೇನೆಂದರೆ, ಇಂದು ದಿನಾಂಕ 16-08-2020 ಸಮಯ ರಾತ್ರಿ 7-00 ಗಂಟೆಯ ಸುಮಾರಿಗೆ ಬಸ ನಂ. ಕೆಎ-33 ಎಫ್- 0163 ನೇದ್ದರಲ್ಲಿ ಪ್ಯಾಸೇಂಜರ ತೆಗೆದುಕೊಂಡು ಗುಂಜನೂರ ಕ್ರಾಸ ಹತ್ತಿರದ ಚೆಕಪೋಸ್ಟ ಬಳಿ ಚೆಕಪೋಸ್ಟ ಗೇಟಿನ ಮೂಲಕ ಹೊರಟಾಗ ಯಾದಗಿರಿ ಕಡೆಯಿಂದ ಬಂದ ಒಂದು ಟಾಟಾ ಕಂಪನಿಯ ಟ್ರಕ ವಾಹನ ನಂ.ಎಮ್.ಹೆಚ್.-12 ಎಲ್.ಟಿ- 8633 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ಬಸಗೆ ಡಿಕ್ಕಿಪಡಿಸಿದ್ದು, ಬಸ ಬಲಗಡೆ ಭಾಗದ ಶೇಪ ಜಖಂಗೊಂಡಿದ್ದು, ಟ್ರಕ ಚಾಲಕನ ಎಡಗಾಲಿನ ಮೊಳಕಾಲು ಹತ್ತಿರ ತೆರಚಿದ ಗಾಯ ಆಗಿರುವದು ಕಂಡುಬಂದಿರುತ್ತದೆ. ಟ್ರಕ ಎದುರಗಡೆಯ ಗ್ಲಾಸ ಒಡೆದಿದ್ದು, ವಾಹನದ ಮುಂದಿನ ಭಾಗ ಜಖಂಗೊಂಡಿದ್ದು ಕಂಡುಬಂದಿರುತ್ತದೆ. ಸದರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 89/2020 ಕಲಂ, 87 ಕೆ.ಪಿ ಆ್ಯಕ್ಟ್ : ಇಂದು ದಿನಾಂಕ 16/08/2020 ರಂದು 10.50 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರು ಠಾಣೆಗೆ ಬಂದು, ಜಪ್ತಿ ಪಂಚನಾಮೆ, ಮುದ್ದೇಮಾಲು ಮತ್ತು 4 ಜನರನ್ನು ಹಾಜರ ಪಡೆಸಿ ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ ಶೆಟ್ಟಿಕೇರಾ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 04 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 4830=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು, 2 ಚಾರ್ಜರ ಲೈಟಗಳನ್ನು 08.50 ಪಿಎಮ್ ದಿಂದ 09.50 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 10.50 ಪಿಎಂ ಕ್ಕೆ ಠಾಣೆಗೆ ಬಂದು ವರದಿ ತಯಾರಿಸಿ ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ: 89/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.