ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/08/2020

By blogger on ಗುರುವಾರ, ಆಗಸ್ಟ್ 13, 2020

 



                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/08/2020 

                                                                                                                                

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ ಆರ್.ನಂ.11/2020 ಕಲಂ 174  : ಇಂದು ದಿನಾಂಕ.13/08/2020 ರಂದು 8-30 ಪಿಎಂಕ್ಕೆ ಅಜಿದಾರನಾದ ಶ್ರೀ ಹೊನ್ನಪ್ಪ ತಂ. ಬಸವರಾಜ ಮರಮಕಲ್ ವಃ25 ಜಾಃ ಕುರುಬರು ಉಃ ವ್ಯವಸಾಯ ಸಾಃ ವಡಗೇರಾ ತಾಃ ವಡಗೇರಾ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಗೆ ನಾವು ಮೂರು ಜನ ಗಂಡು ಮಕ್ಕಳಿದ್ದು ಹಿರಿಯ ಮಗನಾದ ಭೀರಪ್ಪ ತಂದೆ ಬಸವರಾಜ ಮರಮಕಲ್ ವಃ35 ವರ್ಷ ಉಃ ಒಕ್ಕಲುತನ ಸಾಃ ವಡಗೇರಾ ಅಂತಾ ನಮ್ಮ ಅಣ್ಣ ಭೀರಪ್ಪ ಇತನಿಗೆ ಹುಟ್ಟಿನಿಂದಲೂ ಬಲಗೈ ಮೊಂಡವಿದ್ದು ಮೊಳಕೈವರೆಗೆ ಮಾತ್ರವಿರುತ್ತದೆ. ನಮ್ಮ ತಂದೆ ಬಸವರಾಜ ಇವರು ಹೀಗೆ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದು ನಮಗೆ 5 ಎಕರೆ ಹೊಲವಿದ್ದು ಹತ್ತಿ ಬೆಳೆ ಬಿತ್ತಿರುತ್ತೇವೆ ನಮ್ಮ ತಂದೆ ತೀರಿಕೊಂಡ ನಂತರ ಮನೆಯ ಸಂಸಾರದ ಮತ್ತು ಒಕ್ಕಲುತನಕ್ಕೆ ಸಂಭಂದಿಸಿದಂತೆ ಎಲ್ಲಾ ಜವಾಬ್ದಾರಿ ನಮ್ಮ ಅಣ್ಣ ಭೀರಪ್ಪ ಇತನೆ ನೋಡಿಕೊಳ್ಳುತ್ತಿದ್ದನು ವರ್ಷ ವರ್ಷ ಮಳೆ ಸರಿಯಾಗಿ ಆಗದೆ ಇದ್ದುದ್ದರಿಂದ ಬೆಳೆ ಬಾರದೆ ಹಾನಿಯಾಗಿದ್ದರಿಂದ ವ್ಯವಸಾಯಕ್ಕಾಗಿ ನಮ್ಮ ಅಣ್ಣ ಭೀರಪ್ಪನು ನಮ್ಮ ಜೀವಂತವಿರುವಾಗಲೇ ಹಿಂದೆ ಊರಿನ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ ವಡಗೇರಾದಲ್ಲಿ ಸುಮಾರು ಒಂದು ಲಕ್ಷ್ಯದಷ್ಟು ಸಾಲ ತೆಗೆದುಕೊಂಡಿದ್ದನು ನಂತರ ನಮ್ಮ ಅಣ್ಣ ಭೀರಪ್ಪ ಇತನು ಮನೆಯಲ್ಲಿ ಯಾವಾಗಲೂ ನಮ್ಮ ತಂದೆ ತೀರಿಕೊಂಡರು ಬ್ಯಾಂಕ ಸಾಲ ಇದೆ ಬೆಳೆಗಳು ಸರಿಯಾಗಿ ಬಾರದೆ ಇದ್ದುದ್ದರಿಂದ ವರ್ಷ ವರ್ಷ ಬ್ಯಾಂಕ ಸಾಲ ಕಟ್ಟಲು ಆಗುತ್ತಿಲ್ಲಾ ಅಂತಾ ಮನೆಯಲ್ಲಿ ಬಹಳ ಚಿಂತೆ ಮಾಡುತ್ತಿದ್ದನು ಈ ವರ್ಷ ಬೆಳೆಗಳು ಬರುವುದು ಲಕ್ಷಣ ಕಾಣುತ್ತಿಲ್ಲಾ ಹೇಗೆ ಮಾಡುವುದು ಸಾಲ ಹೇಗೆ ತೀರಿಸುವುದು ಅಂತಾ ಚಿಂತಿಸುತ್ತಿದ್ದನು ಆಗ ನಾವು ಮನೆಯಲ್ಲಿ ನಮ್ಮ ಅಣ್ಣನಿಗೆ ಹೇಗಾದರೂ ಮಾಡಿ ಎಲ್ಲರೂ ದುಡಿದು ಸಾಲ ತೀರಿಸೋಣ ಅಂತಾ ನಮ್ಮ ಅಣ್ಣನಿಗೆ ದೈರ್ಯ ಹೇಳುತಿದ್ದೆವು ನಿನ್ನೆ ದಿನಾಂಕ.12/08/2020 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಮ್ಮ ಅಣ್ಣ ಭೀರಪ್ಪನು ಯಾದಗಿರಿಗೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದರು ರಾತ್ರಿ ಹೊತ್ತಾದರೂ ಮನೆಗೆ ಬಂದಿರಲಿಲ್ಲಾ ಬಸ್ ತಪ್ಪಿರಬಹುದು ಬೆಳಿಗ್ಗೆ ಬರಬಹುದು ಅಂತಾ ಸುಮ್ಮನಿದ್ದೆವು ಇಂದು ಬೆಳಿಗ್ಗೆ ಕೂಡಾ  ಮನೆಗೆ ಬಾರದೆ ಇದ್ದುದ್ದರಿಂದ ನಾವು ಯಾದಗಿರಿಗೆ ಬಂದು ಅಲ್ಲಲ್ಲಿ ಹುಡುಕಾಡಿ ನಮ್ಮ ಪರಿಚಯಸ್ಥರಲ್ಲಿ ನಮ್ಮ ಅಣ್ಣನ ಬಗ್ಗೆ ವಿಚಾರಿಸಲು ಗೊತ್ತಾಗಲಿಲ್ಲಾ. ನಂತರ ಇಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಮಗೆ ಗೊತ್ತಾಗಿದ್ದೆನೆಂದರೆ ನಮ್ಮ ಅಣ್ಣ ಬೀರಪ್ಪನು ಯಾದಗಿರಿ ನಗರದ ಶಾಸ್ತ್ರೀ ಚೌಕ ಹತ್ತಿರ ಇರುವ ಒಂದು ಹಾಳುಬಿದ್ದ ರೂಮನಲ್ಲಿ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ನಮ್ಮ ಅಣ್ಣನ ಶವವು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಇರುತ್ತದೆ ಅಂತಾ ವಿಷಯ ಗೊತ್ತಾಗಿದ್ದು ಕೂಡಲೇ ನಾನು ಮತ್ತು ನಮ್ಮ ಚಿಕ್ಕಪ್ಪನ ಮಗ ಯಲ್ಲಾಲಿಂಗ ಹಾಗೂ ಊರಿನ ಇತರರು ಕೂಡಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ಮೃತಪಟ್ಟಿದ್ದನು. ಕುತ್ತಿಗೆ ತಾನು ಯಾವಗಲೂ ತೊಡುತ್ತಿದ್ದ ಲುಂಗಿಯಿಂದ ಕುತ್ತಿಗೆ ನೇಣು ಹಾಕಿಕೊಂಡಿದ್ದು ಕುತ್ತಿಗೆ ಕಂದುಗಟ್ಟಿದ ಗಾಯವಾಗಿ ಚರ್ಮ ಸುಲಿದಂತಾಗಿರುತ್ತದೆ. ನಮ್ಮ ಅಣ್ಣನ ಸಾವಿನಲ್ಲಿ ಯಾರ ಮೇಲೆ ಸಂಶಯ ಇರುವುದಿಲ್ಲಾ. ನಮ್ಮ ಅಣ್ಣ ಭೀರಪ್ಪ ಇತನು ವ್ಯವಸಾಯ ಸಲುವಾಗಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ ವಡಗೇರಾದಲ್ಲಿ ಸಾಲ ಮಾಡಿದ್ದು ಸಾಲ ತೀರಿಸಲು ಆಗದ ಕಾರಣ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದನು. ಸಾಲದ ವಿಷಯದಲ್ಲಿ ನಮ್ಮ ಅಣ್ಣ ನಿನ್ನೆ ಯಾದಗಿರಿಗೆ ಹೋಗಿ ಬರುತ್ತೇನೆ ಅಂತಾ ನೆಪ ಮಾಡಿಕೊಂಡು ಯಾದಗಿರಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಸದರಿ ಘಟನೆ ನಿನ್ನೆ ದಿನಾಂಕ 12/08/2020 ರಂದು ರಾತ್ರಿ 8 ಗಂಟೆಯಿಂದ ಇಂದು ದಿನಾಂಕ.13/08/2020 ರ ಸಾಯಂಕಾಲ 5 ಗಂಟೆಯ ಮದ್ಯದ ಅವದಿಯಲ್ಲಿ ಜರುಗಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟಿದ್ದರ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ.11/2020 ಕಲಂ.174 ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 69/2020 ಕಲಂ: 143,147,323,324,447,504,506,149 ಐಪಿಸಿ : ಇಂದು ದಿನಾಂಕ.13/08/2020 ರಂದು 5-30 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಠಾಣೆಯ ಕೋರ್ಟ ಪಿಸಿ-100 ರವರು ಒಂದು ನ್ಯಾಯಾಲಯದ ಉಲ್ಲೇಖಿತ ದೂರು ತಂದು ಹಾಜರಪಡಿಸಿದ್ದು ಸಾರಾಂಶವೆನಂದರೆ,  1945 ಹೈದ್ರಾಬಾದ ನಿಜಾಮ ಸಕರ್ಾರ ಯಾದಗಿರಿ ನಗರದಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಯಾದಗಿರಿ (ಬಿ) ಸವರ್ೆ ನಂ.400, 401 ಕೃಷಿ ಭೂಮಿಯನ್ನು ಸ್ವಾಧಿನ ಪಡಿಸಿಕೊಂಡು ಅಂದಿನ ಭೂ ಮಾಲಿಕರಿಗೆ ಪರಿಹಾರವನ್ನು ಪಾವತಿಸಿದ್ದು ಇರುತ್ತದೆ ನಂತರ ಅದರಲ್ಲಿ ಕೈಗಾರಿಕಾ ಪ್ಲಾಟಗಳನ್ನು ರಚಿಸಿ ಕೈಗಾರೊಕೊದ್ಯಮಿಗಳಿಗೆ ಮಾರಾಟ ಮಾಡಿದ್ದು ಇರುತ್ತದೆ ನಂತರ 1948 ರಲ್ಲಿ ಭಾರತ ಸ್ವತಂತ್ರ ನಂತರ ರಾಜಕೀಯ ಚಳುವಳಿ ಬದಲಾವಣೆಗಳಾಗಿ ಕೈಗಾರಿಕೆಗಳನ್ನು ನಿಲ್ಲಿಸಲಾಯಿತು. ಆಗ ಕೆಲವು ಕೈಗಾರಿಕೊದ್ಯಮಿಗಳು ಯಾದಗಿರಿ ಬಿಟ್ಟು ಹೋಗಿದ್ದು ಹೋಗುವಾಗ ಕೈಗಾರಿಕೊಧ್ಯಮಿಗಳು ಸವರ್ೆ ನಂ.400 ಮತ್ತು 401 ರಲ್ಲಿಯ ಜಮೀನನ್ನು ಮಾರಾಟ ಮಾಡಿದ್ದು ಆಗ ಪಿರ್ಯಾದಿ ಮತ್ತು ಅವರ ಸಹೋದರರು ಸದರಿ ಆಸ್ತಿಯನ್ನು ಖರೀದಿಸಿ ಅದರಲ್ಲಿ ಸಾಗುವಳಿಯನ್ನು ಪ್ರಾರಂಭಿಸಿದ್ದು ಸದರಿ ಭೂಮಿ ಪಿರ್ಯಾದಿದಾರರನ್ನು ಮಾಲಿಕರು ಅಂತಾ ಪರಿವತರ್ಿಸಲಾಯಿತು ಆಗ ಪಿರ್ಯಾದಿದಾರರು ತನ್ನ ಸಹೋದರನೊಂದಿಗೆ ಈ ಜಮೀನನ್ನು ಹೊಂದಿದ್ದು ಇರುತ್ತದೆ. ಆರೋಪಿತರುಗಳು ಇದಕ್ಕೆ ವಿರುದ್ದವಾಗಿ ಹಲವಾರು ಮೊಕದ್ದಮೆಗಳನ್ನು ಹೂಡಿದ್ದು ಅವುಗಳು ವಜಾ ಆಗಿ ಪಿರ್ಯಾದಿದಾರರ ಪರವಾಗಿ ತೀಪರ್ು ಬಂದಿದ್ದು ಇರುತ್ತದೆ. ದಿನಾಂಕ.12/06/2020 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಆರೋಪಿ ನಂ.1 ಮತ್ತು 3 ನೇದ್ದವರು ಕಾನೂನು ಬಾಹಿರವಾಗಿ ಅಕ್ರಮ ಪ್ರವೇಶ ಮಾಡಿ ಜೊತೆಗೆ ತಂದಿದ್ದ ಜೆ.ಸಿ.ಬಿ ನಂ.ಕೆಎ-33-7013 ನೇದ್ದರಿಂದ ಕಾನೂನು ಬಾಹಿರವಾಗಿ ಉಳುಮೆ ಮಾಡುತ್ತಿದ್ದು ಆ ಕಾಲಕ್ಕೆ ಸಾಕ್ಷಿದಾರರು ನೋಡಿದ್ದು ಇರುತ್ತದೆ. ನಂತರ ಪಿರ್ಯಾದಿದಾರರು ಸ್ಥಳಕ್ಕೆ ಬಂದು ಯಾಕೆ ಉಳುಮೆ ಮಾಡುತ್ತಿ ಅಂತಾ ಕೇಳಿದ್ದಕ್ಕೆ ಆರೋಪಿ ನಂ.1 ನೇದ್ದವನು ಕೈಯಲ್ಲಿ ರಾಡು ಹಿಡಿದುಕೊಂಡು ಬಂದು ಇದು ಯಾರಪ್ಪನ ಹೊಲ ಇಲ್ಲಿಂದ ಕೂಡಲೆ ಕಾಲು ಕಿತ್ತು ಇನ್ನೂ ನಿಂತರ ಇಲ್ಲೆ ಕಡಿದು ಹಾಕಿ ಸಮಾಧಿ ಮಾಡುತ್ತೇನೆ ಅಂತಾ ಬೈದಾಡಿದನು. ನಂತರ ಉಳಿದ ಆರೋಪಿತರು ಅಲ್ಲಿಗೆ ಬಂದು ಆರೋಪಿ ನಂ.1 ನೆದ್ದವನ ಜೊತೆ ಸೇರಿ ಗಲಾಟೆ ಮಾಡುತ್ತಿದ್ದಾಗ ಸಾಕ್ಷಿದಾರರು ಜಗಳದಿಂದ ಬಿಡಿಸಿದ್ದು ಇರುತ್ತದೆ. ಇಲ್ಲದಿದ್ದರೆ ಎಲ್ಲಾ ಆರೊಪಿತರು ಸೇರಿ ಅಜರ್ಿದಾರರ ಮೇಲೆ ಹಲ್ಲೆ ಮಾಡುವ ಸಾದ್ಯತೆ ಇರುತ್ತದೆ. ನಗರ ಪೊಲೀಸ್ ಠಾಣೆಗೆ ಅಜರ್ಿ ನೀಡಲು ಹೋಗಿದ್ದು ಪೊಲೀಸ್ ಠಾಣೆಯಲ್ಲಿ ಇದು ಸಿವ್ಹಿಲ್ ವ್ಯಾಜ್ಯ ಹಿಂಬರಹ ನೀಡಿ ದೂರನ್ನು ಮುಕ್ತಾಯಗೊಳಿಸಿರುತ್ತಾರೆ. ನಂತರ ಆರೋಪಿತರು ಮತ್ತೆ ಅಕ್ರಮವಾಗಿ ಉಳುಮೆ ಮಾಡಲು ಪ್ರಯತ್ನಿಸಿದಾಗ ದಿನಾಂಕ.13/06/2020 ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಯಾವುದೆ ಕ್ರಮ ಜರುಗಿಸಿರುವುದಿಲ್ಲಾ ಆರೋಪಿತರು ಕಲಂ.143,147,323, 324,447,504,506 ಸಂ.34 ಐಪಿಸಿ ಪ್ರಕಾರ ಅಪರಾದ ಮಾಡಿದ್ದು ಕಾರಣ ಮಾನ್ಯ ನ್ಯಾಯಾಲಯವು ಆರೋಪಿತರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಇತ್ಯಾದಿಯಾಗಿ ಮಾನ್ಯ ನ್ಯಾಯಾಲಯದ ಉಲ್ಲೇಖಿತ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.69/2020 ಕಲಂ. ಕಲಂ.143, 147, 323, 324, 447, 504, 506 ಸಂ.34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 219/2020. ಕಲಂ. 279.338 ಐ.ಪಿ.ಸಿ. & 187 ಐಎಂವಿ ಯಾಕ್ಟ : ಇಂದು ದಿನಾಂಕ: 13/08/2020 ರಂದು 15-00 ಗಂಟೆಗೆ ಪಿಯರ್ಾದಿ ಶ್ರೀ ಸಾಯಬಣ್ಣ ತಂದೆ ಅಂಬ್ರ್ರಪ್ಪ ಪುಲರ್ೆ ವ|| 38 ಜಾ|| ಗೋಲ್ಲ ಉ|| ವ್ಯಾಪಾರ ಸಾ|| ದೇವಿನಗರ ಶಹಾಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 07/08/2020 ರಂದು ಸಾಯಂಕಾಲ 6-40 ಗಂಟೆಯ ಸುಮಾರಿಗೆ ನನ್ನ ಮೋಟರ್ ಸೈಕಲ್ಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ನಮ್ಮ ಮನೆಯಿಂದ ನನ್ನ ಮೋಟರ್ ಸೈಕಲ್ ನಂ ಕೆಎ-33ಕ್ಯೂ-1698 ನೇದ್ದನ್ನು ತೆಗೆದುಕೊಂಡು ಹೀರೆಮಠ ಪೇಟ್ರೋಲ್ ಪಂಪಗೆ ಬಂದು ಪೆಟ್ರೋಲ್ ಹಾಕಿಸಿಕೊಂಡು ಮರಳಿ ನಮ್ಮ ಮನೆಗೆ ಹೋಗುತ್ತಿರುವಾಗ ಕರಬುರಗಿ-ಸುರಪೂರ ಮುಖ್ಯರಸ್ತೆಯ ಮೇಲೆ ಶಹಾಪುರ ಬಸವೇಶ್ವರ ಚೌಕದಾಟಿ ನಗರ ಸಭೇಯ ಮುಂದೆ 7-00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ನನ್ನ ಹಿಂದಿನಿಂದ ಅಂದರೆ ಬಸವೇಶ್ವರ ಚೌಕ ಕಡೆಯಿಂದ ಒಂದು ಆಟೋ ಚಾಲಕನು ತನ್ನ ಆಟೋವನ್ನು ಅತಿವೇಗ 

ಮೇಲೆ ಬಿದ್ದೆನು. ಸದರಿ ಅಪಘಾತದಲ್ಲಿ ನನಗೆ ಎಡಗೈ ರಟ್ಟೆ ಮುರಿದು ಭಾರಿ ರಕ್ತಗಾಯ, ಎಡಗಾಲು ಪಾದದ ಕಿಲಿಗೆ ಗುಪ್ತಗಾಯವಾಗಿರುತ್ತದೆ. ಅಲ್ಲೆ ಹೋರಟಿದ್ದ ನನ್ನ ಅಣ್ಣನಮಗ ಸಂದೀಪ ತಂದೆ ತಿಮ್ಮಯ್ಯ ಪುಲರ್ೆ ಸಾ|| ಲಕ್ಮೀನಗರ ಶಹಾಪುರ ಈತನು ಸದರಿ ಅಪಘಾತವನ್ನು ನೋಡಿ ಬಂದು ವಿಚಾರಿಸಿದ್ದು ಇರುತ್ತದೆ. ನನಗೆ ಅಪಘಾತ ಮಾಡಿದ ಆಟೋ ನೋಡಲಾಗಿ ಬಜಾಜ್ ಕಂಪನಿಯ ಆಟೋ ನಂ ಕೆಎ-33ಬಿ-1591 ನೇದ್ದು ಇದ್ದು ಅದರ ಪಕ್ಕದಲ್ಲಿ ನಿಂತಿದ್ದ ನನಗೆ ಅಪಘಾತ ಮಾಡಿದ ಆಟೋಚಾಲಕನಿಗೆ ನೋಡಿ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ರಮೇಶ ತಂದೆ ನಾಗಪ್ಪ ಹಡಪದ ಸಾ|| ಬಳಬಟ್ಟಿ ಅಂತ ತಿಳಿಸಿ ಸ್ವಲ್ಪ ನಿಂತಹಾಗೆ ಮಾಡಿ ಹೋದನು. ನನ್ನ ಮೋಟರ್ ಸೈಕಲ್ ನಂ ಕೆಎ-33ಕ್ಯೂ-1698 ನೇದ್ದು ಮತ್ತು ಆಟೋ ಜಕಂ ಗೊಂಡಿರುತ್ತದೆ. ಆಗ ಸಂಧಿಪನು ನನಗೆ ಉಪಚಾರ ಕುರಿತು ಒಂದು ಆಟೋದಲ್ಲಿ ಹಾಕಿಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ತಂದು ಸೆರಿಕೆಮಾಡಿದನು ನಾನು ನನ್ನ ಹೆಂಡತಿ ಸಾಬಮ್ಮಳಿಗೆ ಪೋನ ಮಾಡಿ ಅಪಘಾತದ ಸುದ್ದಿ ತಿಳಿಸಿದ್ದರಿಂದ ಆಸ್ಪತ್ರೆಗೆ ಬಂದು ನನಗೆ ನೋಡಿ ವಿಚಾರಿಸಿದ್ದು ಇರುತ್ತದೆ. ನನಗೆ ಉಪಚಾರಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಹೋಗಲು ತಿಳಿಸಿದ್ದರಿಂದ ಸಂದಿಪ ಮತ್ತು ನನ್ನ ಹೆಂಡತಿ ಸಾಬಮ್ಮ ಗಂಡ ಸಾಯಬಣ್ಣ ಪುಲರ್ೇ ಇಬ್ಬರು ಕೂಡಿಕೊಂಡು ಒಂದು ಕಾರಿನಲ್ಲಿ ಕಲಬುರಗಿಯ ಕುರಾಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದರಿಂದ ಉಪಚಾರ ಪಡೆದು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 219/2020 ಕಲಂ: 279, 338, ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.    



ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 97/2020 ಕಲಂ 279,337,338 ಐ.ಪಿ.ಸಿ ಸಂ. 187 ಐಎಮ್ವಿ ಯಾಕ್ಟ : ಇಂದು ದಿನಾಂಕ 13/08/2020 ರಂದು 7ಪಿಎಮ್ ಕ್ಕೆ 07.00 ಗಂಟೆ ಸುಮಾರಿಗೆ ಶಿವಲಿಂಗಪ್ಪ ಇತನು ತನ್ನ ಮೋಟಾರ ಸೈಕಲ ನಂಬರ ಕೆ.ಎ33ವೈ:6031 ನೆದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮೇಲೆ ಸ್ಕೀಡ್ ಮಾಡಿ ಅಪಘಾತ ಮಾಡಿದ್ದು ಸೋಪಣ್ಣ ತಂದೆ ಚಂದಪ್ಪ ರಜೆದ ಇವನಿಗೆ ಭಾರಿ ರಕ್ತ ಗಾಯಾವಾಗಿದ್ದು ಇರುತ್ತದೆ. ಅಪಘಾತ ಮಾಡಿದ ಮೋಟರ್ ಸೈಕಲ್ ನೋಡಲಾಗಿ ಹಿರೋ ಸ್ಪ್ಲೆಂಡರ್ ಪ್ಲಸ್ ಅಂತ ಇದ್ದು ಅದರ ನಂಬರ ಕೆಎ:33, ವೈ:6031 ನೇದ್ದು ಇರುತ್ತದೆ.  ಆದ ಕಾರಣ ಅತಿ ವೇಗ ಮತ್ತು ಅಲಕ್ಷತನದಿಂದ ಮೋಟಾರ ಸೈಕಲ ಅಪಘಾತ ಪಡಿಸಿದ ಶಿವಲಿಂಗಪ್ಪ ತಂದೆ ಮರೆಪ್ಪ ಒಂಟೂರ ಸಾ: ಮದ್ರಿಕಿ ತಾ: ಶಹಾಪೂರ ಈತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ಪಿಯರ್ಾದಿ ನೀಡಿದ ಬಗ್ಗೆ.



ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 08/2020 174 ಸಿ.ಆರ್.ಪಿ.ಸಿ   : ದಿ:13/08/2020 ರಂದು 09.00ಗಂಟೆಗೆ  ಸುಮಾರಿಗೆ  ಶ್ರೀ ಮತಿ. ಲಕ್ಷ್ಮೀಬಾಯಿ ಗಂಡ ರುಕ್ಮೋಜಿ ಜಾಧವ ಸಾ: ವಜ್ಜಲ್ ಇವಳ ಹೇಳಿಕೆಯನ್ನು ವಜ್ಜಲ್ ಗ್ರಾಮದಲ್ಲಿ ಹೇಳಿಕೆ ಪಡೆದುಕೊಂಡಿದ್ದು, ಸಾರಾಂಶವೆನೆಂದರೆ ಮೃತ ಶ್ರೀಮತಿ. ಭಾರತಿ ಗಂಡ ವೆಂಕಟೇಶ ಜಾಧವ ವಯ:33ವರ್ಷ ಉ:ಕೂಲಿ ಇವಳಿಗೆ 15 ವರ್ಷಗಳ ಹಿಂದೆ ಲಿಂಗಸೂಗುರು ತಾಲ್ಲೂಕಿನ ಪೈದೊಡ್ಡಿ ಗ್ರಾಮಕ್ಕೆ ಕೊಟ್ಟಿದ್ದು ಅವಳಿಗೆ ಎರಡು ಮಕ್ಕಳಾಗಿದ್ದು, ಒಂದು ಮಗು ಸತ್ತಿದ್ದು, ಒಂದು ಮಗಳು ಅಶ್ವನಿ  11ವರ್ಷದವಳಿದ್ದು  ಮೃತ ಭಾರತಿ ಇವಳು ಸುಮಾರು 10ವರ್ಷಗಳಿಂದ ಮಾನಸಿಕವಾಗಿ ಅಶ್ವಸ್ಥಳಾಗಿದ್ದು, ಅವಳು ಸುಮಾರು 10ವರ್ಷಗಳಿಂದ  ತನ್ನ ಗಂಡನ ಮನೆಯಿಂದ ತವರು ಮನೆಗೆ  ಬಂದವಳು ವಜ್ಜಲ್ದಲ್ಲಿ ಇದ್ದು, ಅವಳಿಗೆ ದಾರವಾಡದ ಡಾ;ಅಭಯ ಮಟ್ಕರ್ ಮಾನಸಿಕ ಅಶ್ವಸ್ಥ ವೈದ್ಯಾಧಿಕಾರಿಗಳ ಹತ್ತಿರ ತೋರಿಸುತ್ತಿದ್ದು,ಈಗ ಸುಮಾರು ಒಂದು ವರ್ಷದಿಂದ ಸಂಪೂರ್ಣವಾಗಿ ಮಾನಸಿಕವಾಗಿದ್ದು ಎಲ್ಲ ಕಡೆಗೂ ತೋರಿಸಿದ್ದರು ಸಹ ಕಡಿಮೆಯಾಗದರಿಂದ ಇಂದು ದಿನಾಂಕ:13/08/2020 ರಂದು ಬೆಳಗ್ಗೆ 08ಗಂಟೆಯ ಸುಮಾರಿಗೆ ನಾನು ಹೊರಕಡೆಗೆ ಹೋಗಿದ್ದು ನನ್ನಮೊಮ್ಮಗಳುಬಾಂಡೆಸಾಮಾನು ಅಂಗಳದಲ್ಲಿ ಕುಳಿತು ತೊಳೆಯುತ್ತಿದ್ದುನಾನು ಹೊರಕಡೆಗೆ ಹೋಗಿ ಬರುವಷ್ಟರಲ್ಲಿ ನನ್ನ ಮಗಳಾದ ಮೃತ ಭಾರತಿ ಇವಳು ಮನೆಯಲ್ಲಿ ಒಂದು ಸೀರೆಯಿಂದ ಪಡಸಾಲೆಯಲ್ಲಿ ಮೇಲ ಚಾವಣಿಗೆ ಇರುವ ಕಬ್ಬಿಣದ ಪೈಪಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಸದರಿಯವಳ ಮರಣದಲ್ಲಿ ಯಾರ ಮೇಲೆ ಸಂಶಯವಗೈರೆ ಇರುವುದಿಲ್ಲ ಕಾಯ್ದೆ ಶಿರ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!