ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/08/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 67/2020 ಕಲಂ 379 ಐಪಿಸಿ. : ಇಂದು ದಿನಾಂಕ.12/08/2018 ರಂದು 6-00 ಎಎಂಕ್ಕೆ ಶ್ರೀ ವೆಂಕಟೇಶ ಪೊಲೀಸ ಉಪ-ಅಧಿಕ್ಷಕರು ಶೋರಾಪುರ, ಪ್ರಭಾರ ಯಾದಗಿರಿ ಉಪ-ವಿಭಾಗ ರವರು ಠಾಣೆಗೆ ಹಾಜರಾಗಿ ಮರಳು ತುಂಬಿದ ಟ್ರಾಕ್ಟರಗಳನ್ನು ಹಾಜರುಪಡಿಸಿ ವರದಿ ಸಲ್ಲಿಸಿದ್ದೆನೆಂದರೆ, ಇಂದು ದಿನಾಂಕ: 12/08/2020 ರಂದು ಬೆಳಗಿನ ಜಾವ 4-00 ಎಎಮ್ ಸಮಯದಲ್ಲಿ ಯಾದಗಿರಿ ನಗರದಲ್ಲಿ ಗಸ್ತು ಮೇಲುಸ್ತುವಾರಿ ಕರ್ತವ್ಯದಲ್ಲಿ ನಾನು ಮತ್ತು ನನ್ನ ಸಂಗಡ ಸಿಬ್ಬಂದಿಯವರಾದ ಮಂಜುನಾಥ ಪಿಸಿ-73, ಸುಭಾಷಚಂದ್ರ ಪಿಸಿ-174, ರಾಘವೇಂದ್ರ ಪಿಸಿ-339 ಹಾಗೂ ಜೀಪ ಚಾಲಕ ಚಂದಪ್ಪಗೌಡ ಎಪಿಸಿ-143 ರವರೊಂದಿಗೆ ಸರಕಾರಿ ಜೀಪ ನಂ. ಕೆಎ.33.ಜಿ.0253 ನೇದ್ದರಲ್ಲಿ ಕರ್ತವ್ಯದಲ್ಲಿರುವಾಗ 4-30 ಎಎಮ್ ಸುಮಾರಿಗೆ ಖಚಿತ ಮಾಹಿತಿ ಬಂದಿದ್ದೆನೆಂದರೆ, ಯಾದಗಿರಿ ನಗರದ ಗಂಗಾನಗರ ಮತ್ತು ಹತ್ತಿಕುಣಿ ಕ್ರಾಸ ಮಧ್ಯದಲ್ಲಿರುವ ಒಂದು ದೊಡ್ಡ ಹಳ್ಳದಲ್ಲಿ ಯಾರೋ ಕೆಲವರು ಟ್ರಾಕ್ಟರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು ಕೂಡಿಕೊಂಡು ದಾಳಿ ಕುರಿತು ಹೋಗಿ 5-00 ಎಎಮ್ ಕ್ಕೆ ಹಳ್ಳದಲ್ಲಿ ಟಾರ್ಚ ಮತ್ತು ನಮ್ಮ ಜೀಪ ಲೈಟಿನ ಬೆಳಕಿನಲ್ಲಿ ನೋಡಲಾಗಿ ಎರಡು ಟ್ರಾಕ್ಟರಗಳು ಹಳ್ಳದಲ್ಲಿ ನಿಂತಿದ್ದು ಒಂದು ಟ್ರಾಕ್ಟರದಲ್ಲಿ ಮರಳನ್ನು ತುಂಬಿದ್ದು ಇನ್ನೊಂದು ಟ್ರಾಕ್ಟರದಲ್ಲಿ ಮರಳನ್ನು ತುಂಬುತ್ತಿದ್ದು ಅರ್ಧದಷ್ಟು ತುಂಬಿದ್ದು ನಾನು ಮತ್ತು ಸಿಬ್ಬಂದಿಯವರು ದಾಳಿ ಮಾಡುವಷ್ಠರಲ್ಲಿ ಮರಳು ತುಂಬುತ್ತಿರುವವರು ಮತ್ತು ಟ್ರಾಕ್ಟರ ಚಾಲಕರು ನಮ್ಮನ್ನು ನೋಡಿ ಓಡಿ ಹೋಗಿದ್ದು ನಾವು ಟ್ರಾಕ್ಟರಗಳನ್ನು ಬೆಳಕಿನಲ್ಲಿ ಪರಿಶೀಲಿಸಿ ನೋಡಲಾಗಿ 1) ಮಹೇಂದ್ರ 475 ಆ ಕಂಪನಿಯ ಟ್ರಾಕ್ಟರ ಇಂಜೀನ ನಂ.ಕೆಎ.33.ಟಿಬಿ.2252 (ಇಂಜೀನ ಚೆಸ್ಸಿ ನಂ. ಒಃಓಂಂಂಎಂಐಏಚಇ08586, ಇಂಜೀನ ಎಸ್.ಎಲ್.ನಂ. ಚಏಇ2ಏಂಂ6139) ಟ್ರಾಲಿ ನಂಬರ ಇರುವುದಿಲ್ಲ ಅ.ಕಿ.3,00,000/- ರೂ. ಇದರಲ್ಲಿ ಮರಳು ತುಂಬಿದ್ದು ಅ.ಕಿ.1,000/-ರೂ. 2) ಮೆಸ್ಸೆ ಫಗರ್ುಷನ 241 ಆ ಕಂಪನಿಯ ಟ್ರಾಕ್ಟರ ನೊಂದಣಿ ಸಂಖ್ಯೆ ಇರುವುದಿಲ್ಲ ಇಂಜೀನ ಚೆಸ್ಸಿ ನಂ. ಒಇಂಅಅಂ1ಈಇ2005638 ಇಂಜೀನ ಎಸ್.ಎಲ್.ನಂ. ಖ325.1ಈ75336 ಟ್ರಾಲಿ ನಂಬರ ಇರುವುದಿಲ್ಲ. ಅ.ಕಿ.3,00,000/- ರೂ. ಇದರಲ್ಲಿ ಅರ್ಧ ಮರಳು ತುಂಬಿದ್ದು ಅ.ಕಿ.500/-ರೂ. ಟ್ರ್ಯಾಕ್ಟರ ಚಾಲಕರುಗಳು ಟ್ರ್ಯಾಕ್ಟರಗಳನ್ನು ಬಿಟ್ಟು ಓಡಿ ಹೋಗಿದ್ದರಿಂದ ಯಾವುದೇ ಸರಕಾರದ ಪರವಾನಿಗೆ ಇಲ್ಲದೆ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳನ್ನು ಕದ್ದು ಕಳ್ಳತನಿಂದ ಸಾಗಿಸುತ್ತಿರುವ ಬಗ್ಗೆ ಕಂಡು ಬಂದಿರುತ್ತದೆ. ಸದರಿ ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಕೂಡಿಕೊಂಡು ಅಕ್ರಮವಾಗಿ ಮರಳನ್ನು ಕದ್ದು ಕಳ್ಳತನದಿಂದ ಸಾಗಿಸುತ್ತಿದ್ದು ನಂತರ ಸಿಬ್ಬಂದಿಯವರ ಸಹಾಯದಿಂದ ಮರಳು ತುಂಬಿದ ಎರಡು ಟ್ರ್ಯಾಕ್ಟರಗಳನ್ನು ತೆಗದುಕೊಂಡು ಯಾದಗಿರಿ ನಗರ ಠಾಣೆಗೆ 5-45 ಎಎಂಕ್ಕೆ ತಂದು ಟ್ರ್ಯಾಕ್ಟರಗಳನ್ನು ಠಾಣೆ ಮುಂದೆ ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಎಸ್.ಎಚ್.ಓ ರವರಿಗೆ ಆಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಒಪ್ಪಿಸಿ, ವರದಿಯನ್ನು ಗಣಕಯಂತ್ರದಲ್ಲಿ ತಯ್ಯಾರಿಸಿ ಠಾಣೆಯಲ್ಲಿ ಪ್ರಿಂಟ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 6-00 ಎಎಂಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿ ಯಾದಗಿರಿ ನಗರ ಠಾಣೆ ರವರಿಗೆ ವರದಿ ನೀಡಿದ್ದು ಸದರಿ ಟ್ರ್ಯಾಕ್ಟರಗಳ ಚಾಲಕರ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲು ಸೂಚಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 67/2020 ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಯಾದಗಿರ ಪೊಲೀಸ ಠಾಣೆ ಗುನ್ನೆ ನಂ:- 68/2020 ಕಲಂ 32, 34 ಕೆ ಇ ಆಕ್ಟ : ಇಂದು ದಿನಾಂಕ.12/08/2020 ರಂದು 6-30 ಪಿಎಂಕ್ಕೆ ಶ್ರೀ ಕೃಷ್ಣ ಸುಬೇದಾರ ಪಿ.ಎಸ್ಐ (ಅ.ವಿ) ಸಾಹೇಬರು ರವರು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.12/08/2020 ರಂದು 3-45 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಮಾನ್ಯ ಡಿ.ಎಸ್.ಪಿ ಸಾಹೇಬರು ಶೋರಾಪುರ, ಪ್ರಭಾರ ಯಾದಗಿರಿ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಮಾಹಿತಿ ಬಂದಿದ್ದೆನೆಂದರೆ, ಯಾದಗಿರಿ ನಗರದ ಚಿತ್ತಾಪೂರ ರಸ್ತೆಗೆ ಇರುವ ಶ್ರೀ ಸಾಯಿ ಸಮರ್ಥ ದಾಬಾ/ರೆಸ್ಟೋರೆಂಟದಲ್ಲಿ ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯಿಂದ 4-30 ಪಿಎಂಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೋರಟು 4-45 ಪಿಎಂಕ್ಕೆ ವಿಕಾಸ ಪೆಟ್ರೋಲಬಂಕದ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಸಾಯಿ ಸಮರ್ಥ ದಾಬಾ/ರೆಸ್ಟೋರೆಂಟದಲ್ಲಿ 5-00 ಪಿಎಮ್ ಕ್ಕೆ ದಾಬಾದಲ್ಲಿ ಹೋಗಿ ದಾಳಿ ಮಾಡಬೇಕೆನುವಷ್ಠರಲ್ಲಿ ಅಲ್ಲಿದ್ದವರು ನಮ್ಮನ್ನು ನೋಡಿ ಓಡಿ ಹೋಗಿದ್ದು ಕೌಂಟರ ಹತ್ತಿರ ನೋಡಲಾಗಿ ಕಾಟನ ಬಾಕ್ಸಗಳಲ್ಲಿ ಮಧ್ಯದ ಬಾಟಲಿಗಳು ಇದ್ದು ದಾಬಾದಲ್ಲಿ ಅನಧಿಕೃತವಾಗಿ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು ಇರುತ್ತದೆ. ಸ್ಥಳದಲ್ಲಿ ಕಾಟನ ಬಾಕ್ಸನಲ್ಲಿ 1) 15 ಮೆಕಡೊವೆಲ್ ವಿಸ್ಕಿ 180 ಎಂ.ಎಲ್ ಒಂದಕ್ಕೆ 198.00 ರೂ.ದಂತೆ ಒಟ್ಟು 2970=00 ರೂ. 2) 14 ಇಂಪಿರಿಯಲ್ ಬ್ಲೂ ವಿಸ್ಕಿ 180 ಎಮ.ಎಲ್ ಒಂದಕ್ಕೆ 198/-ರೂ. ದಂತೆ ಒಟ್ಟು 2772=00 ರೂ. 3) 3 ರಾಯಲ ಸ್ಟಾಗ ವಿಸ್ಕಿ 180 ಎಮ.ಎಲ್ 320=00 ರೂ. ದಂತೆ ಒಟ್ಟು 960=00 ರೂ 4) 3 ಡಿ.ಎಸ್.ಪಿ ಬ್ಲಾಕ ವಿಸ್ಕಿ 180 ಎಮ.ಎಲ್ ಒಂದಕ್ಕೆ 175/-ರೂ. ದಂತೆ ಒಟ್ಟು 525=00 ರೂ. 5) 3 ಬ್ಲೆಂಡರ ಸ್ಪ್ರೈಡ್ ವಿಸ್ಕಿ 180 ಎಮ.ಎಲ್ ಒಂದಕ್ಕೆ 451/-ರೂ. ದಂತೆ ಒಟ್ಟು 1353=00 ರೂ. 6) 5 ಬ್ಯಾಗಪೈಪರ ವಿಸ್ಕಿ 180 ಎಮ.ಎಲ್ ಒಂದಕ್ಕೆ 106/-ರೂ. ದಂತೆ ಒಟ್ಟು 530=00 ರೂ. 7) 6 ಮೆಕಡೊವೆಲ ರಮ್ 180 ಎಮ.ಎಲ್ ಒಂದಕ್ಕೆ 106/-ರೂ. ದಂತೆ ಒಟ್ಟು 636=00 ರೂ. 8) 9 ಕಿಂಗಫಿಶರ ಪ್ರಿಮಿಯಮ್ ಬಿಯರ 650 ಎಮ.ಎಲ್ ಒಂದಕ್ಕೆ 150/-ರೂ. ದಂತೆ ಒಟ್ಟು 1350=00 ರೂ. 9) 24 ಕಿಂಗಫಿಶರ ಸ್ಟ್ರಾಂಗ ಬಿಯರ 650 ಎಮ.ಎಲ್ ಒಂದಕ್ಕೆ 150/-ರೂ. ದಂತೆ ಒಟ್ಟು 3600=00 ರೂ. ಹೀಗೆ ಒಟ್ಟು 14,696/- ರೂ. ಕಿಮತ್ತಿನವುಗಳಿದ್ದು ಆರೋಪಿತರು ಓಡಿ ಹೋಗಿದ್ದರಿಂದ ಮದ್ಯವನ್ನು ಮಾರಾಟ ಮಾಡುವುದಕ್ಕೆ ಯಾವುದೇ ಸಕರ್ಾರದ ಪರವಾನಿಗೆ ಇರುವುದಿಲ್ಲ ಅಂತಾ ಗೊತ್ತಾಗಿದ್ದು ಇರುತ್ತದೆ. ನಂತರ ಜಪ್ತಿಪಡಿಸಿಕೊಂಡ ಮಧ್ಯದ ಬಾಟಲಿಗಳಲ್ಲಿ ತಲಾ ಒಂದೊಂದನ್ನು ಎಫ್.ಎಸ್.ಎಲ್. ಪರೀಕ್ಷೆ ಕುರಿತು ಶ್ಯಾಂಪಲ್ಗಾಗಿ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ಉಳಿದ ಎಲ್ಲಾ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಕಾಟನ ಬಾಕ್ಸನಲ್ಲಿ ಹಾಕಿ ತಾಬೆಗೆ ತೆಗೆದುಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 12/08/2020 ರಂದು 5-00 ಪಿಎಂ ದಿಂದ 6-00 ಪಿಎಂ ದವರೆಗೆ ಲ್ಯಾಪಟ್ಯಾಪನಲ್ಲಿ ಗಣಕೀಕರಣ ಮಾಡಿ ನಂತರ 6-30 ಪಿಎಂಕ್ಕೆ ಯಾದಗಿರಿ ನಗರ ಠಾಣೆಗೆ ಬಂದು ಠಾಣೆಯಲ್ಲಿ ಜಪ್ತಿಪಂಚನಾಮೆಯನ್ನು ಪ್ರಿಂಟ್ ತೆಗೆದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಒಪ್ಪಿಸಿದ್ದು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 68/2020 ಕಲಂ.32, 34, ಕೆ.ಇ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 96/2020 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 12/08/2020 ರಂದು 5.30 ಪಿಎಮ್ ಕ್ಕೆ ಶಿರವಾಳ ಗ್ರಾಮದ ವಾಲ್ಮಿಕಿ ವೃತ್ತದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 8.15 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 9 ಪಿಎಮ್ ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1150=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.